686. ಪ್ರತಿಜ್ಞೆ (1964)

ಪ್ರತಿಜ್ಞೆ ಚಿತ್ರದ ಹಾಡುಗಳು 
  1. ಬಡವರ ಸೇವೆಯೇ ಭಗವಂತನ ಸೇವೆ 
  2. ದೀಪಾವಳಿಯು ಕುಣಿಯುತ ಬಂತು 
  3. ತಂಗಾಳಿ ಅಲೆಯು ಕೋಗಿಲೆ ಉಳಿಯು 
  4. ಕಾಯೇ ದಿನಶರಣೆಯೇ 
  5. ಮನದ ಆನಂದನು 
  6. ನಾನು ನಿನ್ನ ಮೊಹಿಸೆ ಬಂದಿಹೆನು 
  7. ಓಹ್ ಎಂಥ ಚೆಲುವಾ 
  8. ಕನಸಿನ ದೇವಿಯಾಗಿ 
  9. ಚಂದಮಾಮ ಬಂದಾನಮ್ಮ 
  10. ಬಾರೋ ಬಾರೋ ಕಂದಯ್ಯ 
ಪ್ರತಿಜ್ಞೆ (1964)
ಸಾಹಿತ್ಯ: ಚಿ.ಸದಾಶಿವಯ್ಯ  ಸಂಗೀತ: ಎಸ್.ಹನುಮಂತ ರಾವ್  ಹಾಡಿದವರು: ಪಿ.ಬಿ.ಶ್ರೀನಿವಾಸ್

ಕನಸಿನ ದೇವಿಯಾಗಿ, ಮನಸಿನ ನಲ್ಲೆಯಾಗಿ
ಕನಸಿನ ದೇವಿಯಾಗಿ, ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ, ತರುಣಿ ಯಾರಿದು ತರುಣಿ ಯಾರಿದು
ಕನಸಿನ ದೇವಿಯಾಗಿ, ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ, ತರುಣಿ ಯಾರಿದು ತರುಣಿ ಯಾರಿದು

ಮುಗುಳು ನಗೆಯ ಬೆಳಕ ಬೀರಿ ಕಂಗಳಲ್ಲೇ ಒಲವ ತೋರಿ
ಕುರುಳ ಕುಣಿಸಿ ಮನವ ಕದ್ದ ಚೆಲುವೆ ಯಾರಿದು, ಚೆಲುವೆ ಯಾರಿದು
ಕನಸಿನ ದೇವಿಯಾಗಿ, ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ, ತರುಣಿ ಯಾರಿದು
ತರುಣಿ ಯಾರಿದು

ಆಆಆ...
ಕಣ್ಣು ತುಂಬಿ ನಲಿಯಿತಿಂದು ಹೃದಯ ಗಾನ ಹಾಡಿತಿಂದು
ತನುವು ತನ್ನ ಮರೆತು ನಿಂತು ಪುಳಕ ಗೊಂಡಿತು
ಕಂಡೆ ರೂಪ ರಾಶಿಯ ಮನಸಿನಾಳದ ಅರಸಿಯ
ಇವಳೆ ನನ್ನ ಬಾಳ ಗೆಳತಿ ಲಲನೆ ಯಾರಿದು,
ಲಲನೆ ಯಾರಿದು... ಕನಸಿನ ದೇವಿಯಾಗಿ....

ನೀನೆ ನನ್ನ ಭಾವ ದೇವಿ ನೀನೆ ನನ್ನ ಭಾಗ್ಯ ದೇವಿ
ನೀನೆ ನನ್ನ ಭಾವ ದೇವಿ ನೀನೆ ನನ್ನ ಭಾಗ್ಯ ದೇವಿ
ನೀನೆ ನನ್ನ ಹೃದಯ ರಾಣಿ ಕಾವ್ಯ ವಾಣಿ ಕಾಮಿನಿ
ಗಂಗ ಯಮುನೆಯಂತೆ ಕೂಡಿ ತುಂಗಭದ್ರೆಯಂತೆ ಹಾಡಿ
ಮುಂದೆ ಎಂದೂ ಒಂದೆಯಾಗಿ ಸಾಗಿ ತೇಲುವ, ಬೆರೆತು ಬಾಳುವ
ಕನಸಿನ ದೇವಿಯಾಗಿ, ಮನಸಿನ ನಲ್ಲೆಯಾಗಿ
ಅಂದವೇ ರೂಪುಗೊಂಡ, ತರುಣಿ ಯಾರಿದು
ತರುಣಿ ಯಾರಿದು.
--------------------------------------------------------------------------------------------------------------------------

ಪ್ರತಿಜ್ಞೆ (1964)
ಸಾಹಿತ್ಯ: ಚಿ.ಸದಾಶಿವಯ್ಯ  ಸಂಗೀತ: ಎಸ್.ಹನುಮಂತ ರಾವ್  ಹಾಡಿದವರು: ಪಿ.ಲೀಲಾ 

ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ
ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ

ಚಿಕ್ಕ ಗಿಳಿಯು ಗೂಡಲಿ ತಾಯಿ ತಕ್ಕೆ ಹಾಸಲಿ  
ಕಣ್ಣ ಮುಚ್ಚಿ ಚಿನ್ನದ ಕನಸ ಕಾಣುತಿಹುದು ತಾನೇ 
ಚಿಕ್ಕ ಗಿಳಿಯು ಗೂಡಲಿ ತಾಯಿ ತಕ್ಕೆ ಹಾಸಲಿ  
ಕಣ್ಣ ಮುಚ್ಚಿ ಚಿನ್ನದ ಕನಸ ಕಾಣುತಿಹುದು ತಾನೇ 
ದುಂಬಿ ಕೂಡಾ ಹೂ ಮಡಿಲಲ್ಲಿ ಕನಸ ಕಂಡಿವೆ 
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ 
ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ 

ಆನೆ ಒಂಟಿ ಮರಿಗಳ ಹಾರುವಂತ ಜಿಂಕೆಗಳ 
ಹಾಡುವಂತ ಕೋಗಿಲೆ ಕೂಡಿ ಹಾಡು ನೀನು ಕಂದ 
ಆನೆ ಒಂಟಿ ಮರಿಗಳ ಹಾರುವಂತ ಜಿಂಕೆಗಳ 
ಹಾಡುವಂತ ಕೋಗಿಲೆ ಕೂಡಿ ಹಾಡು ನೀನು ಕಂದ 
ಹೊತ್ತು ಹುಟ್ಟಿ ಚಿನ್ನದ ಬೆಳಕು ಕರೆಯುವಾ ತನಕ 
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ 
ಚಂದಮಾಮ ಬಂದನಮ್ಮಾ ತಂದ ನಿದ್ದೆಯಾ 
ಪುಟ್ಟ ಕಣ್ಣ ಮುಚ್ಚಿ ನೀನು ಕಂದಾ ಮಲಗಯ್ಯಾ
ಓ... ಪಾಪ ಮಲಗಯ್ಯಾ ಜೋ..ಜೋ..ಜೋ.. 
-------------------------------------------------------------------------------------------------------------------------

ಪ್ರತಿಜ್ಞೆ (1964)
ಸಾಹಿತ್ಯ: ಚಿ.ಸದಾಶಿವಯ್ಯ  ಸಂಗೀತ: ಎಸ್.ಹನುಮಂತ ರಾವ್  ಹಾಡಿದವರು: ಎಲ್.ಆರ್.ಈಶ್ವರಿ, ಬೆಂ.ಲತಾ  

ಆಹ್ಹಹ್ಹಾ... ಆಹ್ಹಹ್ಹಾ ಆಹ್ಹಹ್ಹಾ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಆಗಸ ಭೂಮಿಯ ಆನಂದ ಸೀಮೆಯ
ಕರೆಯುತಲಿದೆ ತಾ ಹರುಷದಲಿ
ಹೊಯ್ ಹೊಯ್ ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ 

ಕನ್ನಡನಾಡಿನ ಗಂಧದ ಮರದಾ ಪರಿಮಳ ಹರಡಿದೆ ಸುತ್ತಿ
ಕನ್ನಡನಾಡಿನ ಗಂಧದ ಮರದಾ ಪರಿಮಳ ಹರಡಿದೆ ಸುತ್ತಿ
ತುಂಗಭದ್ರೆಯು ಕಾವೇರಿ ತಾಯಿ ನಿದಿಹರೆಮಗಿ ಶಕ್ತಿ
ನಾವೇ ನಾಡಿನ ಸುಂದರ ಸುಮಗಳು
ಸಾಟಿ ನಮಗ್ಯಾರಿ ವಿಶಾಲ ಜಗದೀ
ಹೊಯ್ ಹೊಯ್ ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ ಓಹೋಹೊಹೋ... 

ಕಡಲಲೆಯಂತೆ ಸ್ವತಂತ್ರರು ನಾವು ನಮಗಿಲ್ಲಾ ಬಂಧನವು
ಕಡಲಲೆಯಂತೆ ಸ್ವತಂತ್ರರು ನಾವು ನಮಗಿಲ್ಲಾ ಬಂಧನವು
ಅಬಲೆಯರಾದರು ವಿದ್ಯೆಯ ಕಲಿತು ಸಬಲೆಯರೇ ಆಗುವೆವು
ನಮ್ಮಿಂದಲೆಯೇ ನಾಡಹಿರಿಮೆಯು  ನಮಗೇನೇ ಯಾರೀ ವಿಶಾಲ ಜಗದೀ
ಹೊಯ್ ಹೊಯ್ ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ 

ಗಾನನಾಟ್ಯ ಸಾಹಿತ್ಯ ಕಲೆಗಳಾ ಮೂಲಾಧಾರರು ನಾವು
ಕಲಾದೇವಿಯಾ ಆರಾಧಾನೆಗೈವ ಮುದ್ದು ಕುವರಿಯರು ನಾವು
ನಮ್ಮಯ ನಾಡು ಕಲೆಗಳ ಬೀಡು
ನಮ್ಮ ಸಮ ಯಾರೇ ವಿಶಾಲ ಜಗದೀ
ಹೊಯ್ ಹೊಯ್ ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ತಂಗಾಳಿಯಲೆಯೂ ಕೋಗಿಲೆಯುಲಿಯೂ
ಹೃದಯದಿ ಸಂತೋಷ ತುಂಬುತಿದೇ
ಲಲ್ಲಲಲ್ಲಾ ಲಲ್ಲಲಲ್ಲಾ ಲಲ್ಲಲಲ್ಲಾ ಓಹೋಹೊಹೋ... 
--------------------------------------------------------------------------------------------------------------------------

ಪ್ರತಿಜ್ಞೆ (1964)
ಸಾಹಿತ್ಯ: ಚಿ.ಸದಾಶಿವಯ್ಯ  ಸಂಗೀತ: ಎಸ್.ಹನುಮಂತ ರಾವ್  ಹಾಡಿದವರು: ಪಿ.ಲೀಲಾ 

ಕಾಯೇ ದೀನ ಶರಣ್ಯೇ ಕಾಯೇ ದೀನ ಶರಣ್ಯೇ
ತ್ರಿಭುವನ ಮಾತೇ ಮಂಗಳಾಧಾತೇ
ಪ್ರಭುವನ ಮಾತೇ ಮಂಗಳಾಧಾತೇ
ಭಕುತಿಯ ಮಾಂಜಲಿ ಪ್ರೀತಿ ತಾಯೇ
ಕಾಯೇ ದೀನ ಶರಣ್ಯೇ ತಾಯೇ  ಕಾಯೇ ದೀನ ಶರಣ್ಯೇ

ನಿನ್ನಯ ನಾಮವ ಹಗಲು ಇರುಳು ಕಾಡುತಲಿರುವೇ ಮಹಾ ಪುಣ್ಯ
ನಿನ್ನಯ ನಾಮವ ಹಗಲು ಇರುಳು ಕಾಡುತಲಿರುವೇ ಮಹಾ ಪುಣ್ಯ
ನಿನ್ನಯ ಪಾದವ ಸಾಕುಪುಜೆಗೈಯವ ಜನುಮವವೇ  ನೆರೆ ಧನ್ಯ 
ಜನುಮವವೇ  ನೆರೆ ಧನ್ಯ
ಭಕುತರ ಬಂಧು ಕಾರುಣ್ಯ ಸಿಂಧೂ
ಭಕುತರ ಬಂಧು ಕಾರುಣ್ಯ ಸಿಂಧೂ ನೀನು ದಕ್ಕಿದೆಯೆಂದು
ಕಾಯೇ ದೀನ ಶರಣ್ಯೇ ತಾಯೇ  ಕಾಯೇ ದೀನ ಶರಣ್ಯೇ

ನಿನ್ನಡಿಗಳಲಿ ತನುವು ಮನವು ಮುಡಿಪಾಗಿರಲಯ್ಯ ಜಗದಂಬಾ
ನಿನ್ನಡಿಗಳಲಿ ತನುವು ಮನವು ಮುಡಿಪಾಗಿರಲಯ್ಯ ಜಗದಂಬಾ
ಕನಸಲಿ ಮನಸಲಿ ಈ ದಿವ್ಯ ಮೂರ್ತಿ ನೆಲೆಸಿರಲಿ  ಕಣ್ಣತುಂಬಾ...  
ನೆಲೆಸಿರಲಿ  ಕಣ್ಣತುಂಬಾ...  ನಿನ್ನನೇ ನಂಬಿದಾ ನನ್ನ ಕಂದನಾ
ನಿನ್ನನೇ ನಂಬಿದಾ ನನ್ನ ಕಂದನಾ ಕಾಪಾಡಮ್ಮಾ ಭವಾನೀ....
ತಾಯೇ ಕಾಯೇ ದೀನ ಶರಣ್ಯೇ ತಾಯೇ  ಕಾಯೇ ದೀನ ಶರಣ್ಯೇ
--------------------------------------------------------------------------------------------------------------------------

ಪ್ರತಿಜ್ಞೆ (1964)
ಸಾಹಿತ್ಯ:ಚಿ.ಸದಾಶಿವಯ್ಯ ಸಂಗೀತ:ಎಸ್.ಹನುಮಂತರಾವ್  ಹಾಡಿದವರು:ಪಿ.ನಾಗೇಶ್ವರರಾವ್, ಜಮುನಾ ರಾಣಿ  

ಗಂಡು : ನಾ ನಿನ್ನ ಮೋಹಿಸಿ ಬಂದಿಹೆನು
            ನಾ ನಿನ್ನ ಮೋಹಿಸಿ ಬಂದಿಹೆನು ಮನೆ ಬಾಗಿಲ ಕಾಯುತ ನಿಂದಿಹೆನು
            ಮನೆ ಬಾಗಿಲ ಕಾಯುತ ನಿಂದಿಹೆನು
ಹೆಣ್ಣು : ನಾ ನಿನ್ನ ಮೋಹಿಸಿ ಬಂದಿಹೆನು
          ನಾ ನಿನ್ನ ಮೋಹಿಸಿ ಬಂದಿಹೆನು ಮನೆ ಬಾಗಿಲ ಕಾಯುತ ನಿಂದಿಹೆನು
          ಮನೆ ಬಾಗಿಲ ಕಾಯುತ ನಿಂದಿಹೆನು
ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು  ನಾ ನಿನ್ನ ಮೋಹಿಸಿ ಬಂದಿಹೆನು

ಗಂಡು : ದಿನ ರಾತ್ರಿ ನಿನ್ನನೇ ನೆನೆಸುತಿಹೆ ತನ್ನ ಕಲ್ಲು ನಿನ್ನನೇ ಕಾಣುತಿಹೇ
            ದಿನ ರಾತ್ರಿ ನಿನ್ನನೇ ನೆನೆಸುತಿಹೆ ತನ್ನ ಕಲ್ಲು ನಿನ್ನನೇ ಕಾಣುತಿಹೇ
ಹೆಣ್ಣು : ನಿನ್ನ ಪ್ರಣಯದ ರಾಣಿಯು ನಾನಾಗುವೇ ನಿನ್ನ ಬಾಳಿನ ಕಷ್ಟವ ನಾ ನೀಗುವೆ 
ಗಂಡು : ನಿನ್ನ ಪ್ರಣಯದ ರಾಜನು ನಾನಾಗುವೇ ನಿನ್ನ ಬಾಳಿಗೆ ಬೆಳಕನು ನಾ ನೀಡುವೆ 
ಇಬ್ಬರು : ಸುಖಭೋಗ ಸಂತಸವ ನಾ ತುಂಬುವೇ  ನಾ ತುಂಬುವೇ...       
            ನಾ ನಿನ್ನ ಮೋಹಿಸಿ ಬಂದಿಹೆನು ನಾ ನಿನ್ನ ಮೋಹಿಸಿ ಬಂದಿಹೆನು
            ಮನೆ ಬಾಗಿಲ ಕಾಯುತ ನಿಂದಿಹೆನು  ಮನೆ ಬಾಗಿಲ ಕಾಯುತ ನಿಂದಿಹೆನು
ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು  ನಾ ನಿನ್ನ ಮೋಹಿಸಿ ಬಂದಿಹೆನು 

ಹೆಣ್ಣು : ಈ ಹೃದಯದದಿ  ನಿನ್ನನ  ಬಚ್ಚಿಡುವೇ
ಗಂಡು : ಈ ಕಂಗಳೊಳಗೇ ನಿನ್ನ  ಮುಚ್ಚಿಡುವೇ
ಹೆಣ್ಣು : ಈ ಹೃದಯದದಿ  ನಿನ್ನನ  ಬಚ್ಚಿಡುವೇ
ಗಂಡು : ಈ ಕಂಗಳೊಳಗೇ ನಿನ್ನ ಮುಚ್ಚಿಡುವೇ
ಹೆಣ್ಣು : ಅನುರಾಗದ ಮಳೆಯಲಿ ನೀಯುತವೇ  
ಗಂಡು : ನವ ಪ್ರೇಮದ ಅಲೆಯಲಿ ತೇಲಿಸುವೇ
ಹೆಣ್ಣು : ಅನುರಾಗದ ಮಳೆಯಲಿ ನೀಯುತವೇ  
ಗಂಡು : ನವ ಪ್ರೇಮದ ಅಲೆಯಲಿ ತೇಲಿಸುವೇ
ಇಬ್ಬರು : ಸವಿಯೋಣ ಪ್ರಣಯ ಸುಖದಾನಂದವಾ  ಆನಂದವಾ
            ನಾ ನಿನ್ನ ಮೋಹಿಸಿ ಬಂದಿಹೆನು ನಾ ನಿನ್ನ ಮೋಹಿಸಿ ಬಂದಿಹೆನು
ಗಂಡು : ಮನೆ ಬಾಗಿಲ ಕಾಯುತ ನಿಂದಿಹೆನು  ಮನೆ ಬಾಗಿಲ ಕಾಯುತ ನಿಂದಿಹೆನು
ಇಬ್ಬರು : ನಾ ನಿನ್ನ ಮೋಹಿಸಿ ಬಂದಿಹೆನು  ನಾ ನಿನ್ನ ಮೋಹಿಸಿ ಬಂದಿಹೆನು 
--------------------------------------------------------------------------------------------------------------------------

ಪ್ರತಿಜ್ಞೆ (1964)
ಸಾಹಿತ್ಯ:ಚಿ.ಸದಾಶಿವಯ್ಯ ಸಂಗೀತ:ಎಸ್.ಹನುಮಂತರಾವ್  ಹಾಡಿದವರು:ಪಿ.ಸುಶೀಲಾ 

ಮನದಾ ಆನಂದನು ಮನೆಗೆ ತಾ ಬಂದನು 
ಬೆಳಗಾಯಿತು ಬಾನಿನಲಿ ಹರುಷ ನಲಿದಾಡಿ ತಾ ಹಾಡಿತು .... ಆಆಆ... 
ಮನದಾ ಆನಂದನು ಮನೆಗೆ ತಾ ಬಂದನು 
ಬೆಳಗಾಯಿತು ಬಾನಿನಲಿ ಹರುಷ ನಲಿದಾಡಿ ತಾ ಹಾಡಿತು .... ಆಆಆ... 

ನಾ ಕೋಗಿಲೆ ನೀ ಚೈತ್ರ ನಾ ಗಾನವು ನೀ ತಾಣವೂ 
ನಿನ್ನ ಸೌಂದರ್ಯಕೆ ಅಡಿ ಆಳಾದೆನು ಪ್ರಿಯ ಬಾ ಬಾ ಬಾ 
ಮನದಾ ಆನಂದನು ಮನೆಗೆ ತಾ ಬಂದನು 
ಬೆಳಗಾಯಿತು ಬಾನಿನಲಿ ಹರುಷ ನಲಿದಾಡಿ ತಾ ಹಾಡಿತು .... ಆಆಆ... 

ಗಿಡ ಹೂ ಬಳ್ಳಿಯ ಎಲ್ಲಾ  ಚಿಗುರಿ ಅರಳಿ ತಲೆ ತೂಗುತಿಹೇ ... 
ಗಿಡ ಹೂ ಬಳ್ಳಿಯ ಎಲ್ಲಾ  ಚಿಗುರಿ ಅರಳಿ ತಲೆ ತೂಗುತಿಹೇ ... 
ಚಿರ ಚೇತನ ಸಂಭ್ರಮ ವಸಂತನು ನವಜೀವನ ತಾರಾ ಬಾ... ಬಾ.. 
ಮನದಾ ಆನಂದನು ಮನೆಗೆ ತಾ ಬಂದನು 
ಬೆಳಗಾಯಿತು ಬಾನಿನಲಿ ಹರುಷ ನಲಿದಾಡಿ ತಾ ಹಾಡಿತು .... ಆಆಆ... 
  
ನಾ ತಾವರೆ ನೀ ಸೂರ್ಯ ನಾ ಸಾಗರ ನೀ ಚಂದಿರಾ 
ನಾ ತಾವರೆ ನೀ ಸೂರ್ಯ ನಾ ಸಾಗರ ನೀ ಚಂದಿರಾ 
ನಿನ್ನ ಗಾಂಭೀರ್ಯತೆ ಮನ ಸಾಕೋಟಿತೆ ಬಾ... ಬಾ..  
ಮನದಾ ಆನಂದನು ಮನೆಗೆ ತಾ ಬಂದನು 
ಬೆಳಗಾಯಿತು ಬಾನಿನಲಿ ಹರುಷ ನಲಿದಾಡಿ ತಾ ಹಾಡಿತು .... ಆಆಆ... 
--------------------------------------------------------------------------------------------------------------------------

ಪ್ರತಿಜ್ಞೆ (1964)
ಸಾಹಿತ್ಯ:ಚಿ.ಸದಾಶಿವಯ್ಯ ಸಂಗೀತ:ಎಸ್.ಹನುಮಂತರಾವ್  ಹಾಡಿದವರು:

ಬಡವರ ಸೇವೆಯೇ ಭಗವಂತನ ಸೇವೇ ಆಆಆ...
ದೀನರ ಸೇವೆಯೇ ದೇವರ ಸೇವೇ...
ಬಡವರ ಸೇವೆಯೇ ಭಗವಂತನ ಸೇವೇ ..
ದೀನರ ಸೇವೆಯೇ ದೇವರ ಸೇವೇ...
ಮಾನವ ಜೀವನ ಸಾಧನ
ಇದು ಮಾನವ ಜೀವನ ಸಾಧನ
ಬಡವರ ಸೇವೆಯೇ ಭಗವಂತನ ಸೇವೇ .
ದೀನರ ಸೇವೆಯೇ ದೇವರ ಸೇವೇ...
ಮಾನವ ಜೀವನ ಸಾಧನ
ಇದು ಮಾನವ ಜೀವನ ಸಾಧನ  
ಮಾನವ ಜೀವನ ಸಾಧನ
ಇದು ಮಾನವ ಜೀವನ ಸಾಧನ  
ಇದು ಮಾನವ ಜೀವನ ಸಾಧನ  

ಆಆಆ--- 
ಬುದ್ಧ ಏಸು ಗಾಂಧೀಯು ಬಡವರ ಬಂಧುಗಳೇ 
ದೀನರ ಸೇವೆಗೆ ಬಾಳನು ತೇದು ದೇವತೆಯಾದರು 
ದೀನರ ದೇವರ ಸೇವೆಯ ಒರೆದು ತಾಯಿಯೇ ಎನ್ನುವರು 
ಮಾನವ ಜೀವನ ಸಾಧನ
ಇದು ಮಾನವ ಜೀವನ ಸಾಧನ  
ಬಡವರ ಸೇವೆಯೇ ಭಗವಂತನ ಸೇವೇ .
ದೀನರ ಸೇವೆಯೇ ದೇವರ ಸೇವೇ...
ಮಾನವ ಜೀವನ ಸಾಧನ
ಇದು ಮಾನವ ಜೀವನ ಸಾಧನ  
-------------------------------------------------------------------------------------------------------------------------

ಪ್ರತಿಜ್ಞೆ (1964)
ಸಾಹಿತ್ಯ:ಚಿ.ಸದಾಶಿವಯ್ಯ ಸಂಗೀತ:ಎಸ್.ಹನುಮಂತರಾವ್ ಹಾಡಿದವರು:ಪಿ.ಲೀಲಾ 

ಲಲ್ಲಲ ಲಲ್ಲಲ ಲಲಲಲ್ಲ ಲಲ್ಲಲ ಲಲ್ಲಲ ಲಲಲಲ್ಲ
ಲಲ್ಲಲ ಲಲ್ಲಲ ಲಲಲಲ್ಲ ಲಲ್ಲಲ ಲಲ್ಲಲ ಲಲಲಲ್ಲ
ದೀಪಾವಳಿಯು ಕುಣಿಯುತ ಬಂತು
ಹೊಸ ಹೊಸ ಬಟ್ಟೆ ಪಟಾಕೀ ತಂತು
ಮನೆ ಮನೆಯಲ್ಲೂ ಬೆಳಕಿನ ತೋರಣ
ನಮ್ಮಾನಂದಕೆ ಹಬ್ಬಳ ಕಾರಣ
ದೀಪಾವಳಿಯು ಕುಣಿಯುತ ಬಂತು

ಲಲ್ಲಲ ಲಲ್ಲಲ ಲಲಲಲ್ಲ ಲಲ್ಲಲ ಲಲ್ಲಲ ಲಲಲಲ್ಲ
ಲಲ್ಲಲ ಲಲ್ಲಲ ಲಲಲಲ್ಲ ಲಲ್ಲಲ ಲಲ್ಲಲ ಲಲಲಲ್ಲ 
ಬೆಳಗಿನ ಜಾವದ ಎಣ್ಣೆ ನೀರು 
ನೀರ ಜಡೆಯಲಿ ಹೂವಿನ ತೇರು 
ಹೊಸ ಹೊಸ ಲಂಗ ಸೀರೆ ಬಳೆಗಳು 
ಎಲ್ಲಾರ ಕೈಯಲ್ಲೂ ಪಟಾಕಿ ಸರಗಳು 
ದೀಪಾವಳಿಯು ಕುಣಿಯುತ ಬಂತು 
ಹಗಲು ಬತ್ತಿ ಬೆಳಗಿತು 
ಪಟಾಕಿ ಸಿಡಿಯಿತು ಚಟಾ ಚಟ್ ಚಟ್  
ಪಟಾಕಿ ಹೊಡೆದರೇ ಫಟಾ ಫಟ್ ಫಟ್ 
ಸೂರು ಸೂರು ಬತ್ತಿ ಸುರುವಿಂದು ಓಡಿತು 
ಫಟಾ ಫಟ್ ಫಟ್ ಫಟಾ ಫಟ್ ಫಟ್ ಎನ್ನುತ ನಕ್ಕಿತು 
ದೀಪಾವಳಿಯು ಕುಣಿಯುತ ಬಂತು 

ಹಾವುಬಾಣ ಚೇಳು ಬಾಣ ಹೂವು ಬಾಣ ಹರಿಯಿತು 
ಫಾಟ್ ಫಟ್ ಢಮಾರ್ ಎಂದು ಅಬ್ಬರಿಸಿತು ಕರೆಯಿತು
ಇಷ್ಟದತ್ತ ಸುತ್ತಿತು ಹಗಲು ಬತ್ತಿ ಬೆಳಗಿತು
ಉತ್ತಮಯಕು ಢಮಾರ್ ಫಟಾರ ಎಂಬ ಸದ್ದು ಮೊಳಗಿತು
ಟೊಂಯ್  ಓಯ್ ಹೊಯ್ ಓಯ್

ದೀಪಾವಳಿ ಹಬ್ಬ ಮರೆಯದ ಹಬ್ಬ 
ಅಕ್ಕತಂಗಿಯರ ನೆಚ್ಚಿನ ಹಬ್ಬ 
ಅಪ್ಪ ಅಮ್ಮನು ಹಾಡುವ ಹಬ್ಬ ನರಕಾಸುರನು ಓಡುವ ಹಬ್ಬ 
ದೀಪಾವಳಿಯು ಕುಣಿಯುತ ಬಂತು
ಹೊಸ ಹೊಸ ಬಟ್ಟೆ ಪಟಾಕೀ ತಂತು
ಮನೆ ಮನೆಯಲ್ಲೂ ಬೆಳಕಿನ ತೋರಣ
ನಮ್ಮಾನಂದಕೆ ಹಬ್ಬಳ ಕಾರಣ
ದೀಪಾವಳಿಯು ಕುಣಿಯುತ ಬಂತು 
-------------------------------------------------------------------------------------------------------------------------

ಪ್ರತಿಜ್ಞೆ (1964)
ಸಾಹಿತ್ಯ: ಚಿ.ಸದಾಶಿವಯ್ಯ  ಸಂಗೀತ: ಎಸ್.ಹನುಮಂತ ರಾವ್  ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ  

ಗಂಡು : ಒಹ್ ಎಂಥ  ಚೆಲುವ ಈ ಮೊದಗೊಂಡ ಮುಖವು
           ಶೃಂಗಾರಕೆ ರಂಗೇರಿದೆ ಹೊಸ ಕಳೆ ತುಂಬಿದೆ
           ಬಳಿ ಕರೆಯುತಲಿದೆ ನನ್ನ
ಹೆಣ್ಣು : ಸಾಕಿನ್ನು ಅಣಕ ಬೇಕಿಂಥ ದೈವ  ಕುಹಕ (ಓಹೋಹೋ)
          ಬಿನ್ನಾಣದ ಮನಸನು ಗೆಲ್ಲದು ಬಿಡು ನುಡಿಗಳ ಪಡಿಭಾರ

ಗಂಡು : ನಸುಮುನಿಸಿದ ಮೋಹಕವೇ
            ಭಲೇ ನವ ಯುವನ ಸುಂದರಿಯೇ
            ನಸುಮುನಿಸಿದ ಮೋಹಕವೇ
            ಭಲೇ ನವ ಯುವನ ಸುಂದರಿಯೇ
            ನಿನ್ನ ನೋಡದೇ ಮಾತಾಡಾದೇ ನಾ ಬರುವೇನೇ ಅರಗಿಣಿಯೇ
           ಬಳಿ ಸಾರಲೇ ಎಲೆ ಚಪಲೇ
ಹೆಣ್ಣು : ನವ ತರುಣರ ನಂಬುವುದೇ ಸದಾ ಸವಿ ಮಾತಲೇ ಬಂಧಿಪರು
        ನವ ತರುಣರ ನಂಬುವುದೇ ಸದಾ ಸವಿ ಮಾತಲೇ ಬಂಧಿಪರು
        ಹಿಂಬಾಲಿಸಿ ಮರುಳಾಗಿಸಿ ಪ್ರಣಯೋತ್ಸವ ತೋರುವರೂ
        ಮನ ಮೋಹಿಸಿ ಹೋಗುವರೂ          
        ಆಹಾ ಎಂಥ ಚೆಲುವೂ ಈ ಮೋದಗೊಂಡ ಮುಖವು
ಗಂಡು : ಶೃಂಗಾರಕೆ ರಂಗೇರಿದೇ ಹೊಸ ಕಳೆ ತುಂಬಿದೆ
           ಬಳಿ ಕರೆಯುತಲಿದೆ ನನ್ನ

ಹೆಣ್ಣು : ಮನವ ಹರಿಸಿ ಗೋಳಾಡಿಸಿ ದಿನ ರಾತ್ರೀಲಿ ನೀ ನಿಂತು ಕಾಡುವೇ
ಗಂಡು : ಮಧುರ ಪ್ರಣಯದಾನಂದವಾ ಸವಿಯೋಣ ಬಾರೇ ಮನದನ್ನೇ
ಹೆಣ್ಣು : ಸುಖದಲೆಗಳ ಸವಿಗಡಲಲಿ ತಂಗಾಳಿ ಬೀಸಿ
ಗಂಡು : ನಸುನಗುತಲಿ ತಾ ಸಾಗಲಿ ಹೊಸ ಬಾಳ ನೌಕೆ
ಇಬ್ಬರು : ಅಲೆಅಲೆಯೊಡನೆ ಸವಿ ಕಲೆಯುವ ಶರಧಿ
             ಕಲೆಯೋಣ ನಲಿಯೋಣ ಜಗವನೇ ಮರೆತು  
             ಅಲೆಅಲೆಯೊಡನೆ ಸವಿ ಕಲೆಯುವ ಶರಧಿ 
            ಕಲೆಯೋಣ ನಲಿಯೋಣ ಜಗವನೇ ಮರೆತು
------------------------------------------------------------------------------------------------------------------------

ಪ್ರತಿಜ್ಞೆ (1964)
ಸಾಹಿತ್ಯ: ಚಿ.ಸದಾಶಿವಯ್ಯ ಸಂಗೀತ: ಎಸ್.ಹನುಮಂತ ರಾವ್ ಹಾಡಿದವರು: ಪಿ.ಲೀಲಾ

ಬಾರೋ ಬಾರೋ ಕಂದಯ್ಯ ಬಾರೋ ಮುದ್ದಿನ ಕಂದಯ್ಯಾ
ಬಾರೋ ಬಾರೋ ಕಂದಯ್ಯ ಬಾರೋ ಮುದ್ದಿನ ಕಂದಯ್ಯಾ
ಬಂದು ನಿನ್ನ ಏಳನಗು ಬೀರೋ ಸುಂದರ ಮುಖವ ತೋರಯ್ಯಾ
ಬಾರೋ ಬಾರೋ ಕಂದಯ್ಯ ಬಾರೋ ಮುದ್ದಿನ ಕಂದಯ್ಯಾ

ಪುಟ್ಟ ಪುಟ್ಟ ಹೆಜ್ಜೆಯ ನೀಡುತಾ ಮೆತ್ತಗೆ ಇಲ್ಲಿಗೆ ಬಾರಯ್ಯಾ
ಪುಟ್ಟ ಪುಟ್ಟ ಹೆಜ್ಜೆಯ ನೀಡುತಾ ಮೆತ್ತಗೆ ಇಲ್ಲಿಗೆ ಬಾರಯ್ಯಾ
ನೀನು ಇಡುವ ದಕ್ಕಡಿ ನೋಡಿ ನಲಿವುದು ಮನವು ಕುಣಿದಾಡಿ
ಬಾರೋ ಬಾರೋ ಕಂದಯ್ಯ ಬಾರೋ ಮುದ್ದಿನ ಕಂದಯ್ಯಾ

ಬಕ್ಕ ಬಾಯ್ ಬಿಡುತಲಿ ನೀನು ಅಪ್ಪಾ ಅಜ್ಜಾ ಎನ್ನುತಾ ಬಾರೋ
ಬಕ್ಕ ಬಾಯ್ ಬಿಡುತಲಿ ನೀನು ಅಪ್ಪಾ ಅಜ್ಜಾ ಎನ್ನುತಾ ಬಾರೋ
ಅರಗಿಳಿ ನಿನ್ನಾ ತೊದಲು ಮಾತಲಿ ಹೇಳುತಾ ಹೃದಯ ಉಕ್ಕುವುದು
ಬಾರೋ ಬಾರೋ ಕಂದಯ್ಯ ಬಾರೋ ಮುದ್ದಿನ ಕಂದಯ್ಯಾ

ನಿನ್ನ ನಡೆಯು ನಿನ್ನ ನುಡಿಯು ನನ್ನೀ ಬಾಳಿನ ಬೆಳಕಯ್ಯಾ
ನಿನ್ನ ನಡೆಯು ನಿನ್ನ ನುಡಿಯು ನನ್ನೀ ಬಾಳಿನ ಬೆಳಕಯ್ಯಾ
ನೀನೇ ನನ್ನಾ ಮನಮಂದಿರದ ಪುಟಾಣಿ ಕೃಷ್ಣನು ಕಾಣಯ್ಯಾ
ಪುಟ್ಟ ಕೃಷ್ಣನು ಕಾಣಯ್ಯಾ
ಬಾರೋ ಬಾರೋ ಕಂದಯ್ಯ ಬಾರೋ ಮುದ್ದಿನ ಕಂದಯ್ಯಾ
ಬಾರೋ ಬಾರೋ ಕಂದಯ್ಯ ಬಾರೋ ಮುದ್ದಿನ ಕಂದಯ್ಯಾ
ಬಂದು ನಿನ್ನ ಏಳನಗು ಬೀರೋ ಸುಂದರ ಮುಖವ ತೋರಯ್ಯಾ
ಬಾರೋ ಬಾರೋ ಕಂದಯ್ಯ ಬಾರೋ ಮುದ್ದಿನ ಕಂದಯ್ಯಾ
-------------------------------------------------------------------------------------------------------------------------

No comments:

Post a Comment