ಗೆದ್ದ ಮಗ ಚಿತ್ರದ ಹಾಡುಗಳು
- ಮಿಂಚಂತೇ ಮಿಂಚಿ ಮಿಂಚಿ ಕಣ್ ಹೊಡೆದೇ
- ಒಂದು ಗಂಡು ಹೆಣ್ಣು ಆ ಸೃಷ್ಟಿಯ ಕಣ್ಣು
- ರವಿಗಿಂತ ಶಶಿಯೇ ಚೆಲುವೂ
- ಲವ್ ಮೀ ಅಲೌವ್ ಮೀ ಟು ಲವ್ ಯೂ
- ಬೆಂಕಿಯನು ಮುಟ್ಟುವೆಯಾ
ಸಾಹಿತ್ಯ: ದೊಡ್ಡರಂಗೇ ಗೌಡ ಸಂಗೀತ: ಚಕ್ರವರ್ತಿ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಹೆಣ್ಣು : ಓಓಓಓಓ... . ಓಓಓಓಓ...
ಕೋರಸ್ : ಆಆಆ...ಆಆಆ ಹೈ ಆಆಆ...ಆಆಆ ಹೈ
ಗಂಡು : ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚ ಹಾಕಿ ಸಂಚು ಮಾಡಿ ನನ್ನ ಕರೆದೆ
ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
ಹೆಣ್ಣು : ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚ ಹಾಕಿ ಸಂಚು ಮಾಡಿ ನನ್ನ ಕರೆದೆ
ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
ಗಂಡು :ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೆಣ್ಣು : ಹೊಂಚ ಹಾಕಿ ಸಂಚು ಮಾಡಿ ನನ್ನ ಕರೆದೆ
ಕೋರಸ್ : ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯಲ್ಲಾ
ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯಲ್ಲಾ
ಹೆಣ್ಣು : ಹೊತ್ತೇರಿದೆ, ಮೋಹಕ್ಕೆ ಮತ್ತೇರಿದೆ
ಗಂಡು : ಗೊತ್ತಾಗದೆ, ಸ್ನೇಹಕ್ಕೆ ಸುತ್ತಾಡಿದೆ
ಹೆಣ್ಣು : ಮನ್ಸಾರೆ ನೋಡಿ, ಬಾಯ್ತುಂಬ ಹಾಡಿ
ಗಂಡು : ಉಲ್ಲಾಸ ಮೂಡಿ, ಉತ್ಸಾಹ ಕೂಡಿ
ಹೆಣ್ಣು : ರೋಮಾಂಚ ಭಾವ ಬೇಡಿ, ಹೂಮಂಚ ಜೀವ ಕಾಡಿ
ಗಂಡು : ನಾನಂತು ನಿನ್ನೆ ಒಪ್ಪಿ ನಿನ್ನೆ ಅಪ್ಪಿ ಪೂರ ಒಪ್ಪಾದೆ
ಹೆಣ್ಣು : ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚ ಹಾಕಿ ಸಂಚು ಮಾಡಿ ನನ್ನ ಕರೆದೆ
ಗಂಡು : ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ
ಹೆಣ್ಣು : ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಗಂಡು : ಹೊಂಚ ಹಾಕಿ ಸಂಚು ಮಾಡಿ ನನ್ನ ಕರೆದೆ
ಕೋರಸ್ : ಲಾ.. ಲಲ್ಲಲ್ಲಲ್ಲಾ ಲಾ.. ಲಲ್ಲಲ್ಲಲ್ಲಾ
ಲಾ.. ಲಲ್ಲಲ್ಲಲ್ಲಾ ಲಾ.. ಲಲ್ಲಲ್ಲಲ್ಲಾ
ಗಂಡು : ಉಕ್ಕೇರಿದೆ, ಪ್ರಾಯಕ್ಕೆ ಸೊಕ್ಕೇರಿದೆ
ಹೆಣ್ಣು : ಮೈತುಂಬಿದೆ, ಪ್ರೇಮಕ್ಕೆ ಸೈ ಎಂದಿದೆ
ಗಂಡು : ಚೆಲ್ಲಾಟ ಮೀರಿ, ತುಂಟಾಟ ತೋರಿ
ಹೆಣ್ಣು : ರಂಪಾಟ ದೂರಿ, ಮುನ್ನೋಟ ಬೀರಿ
ಗಂಡು : ಸಂಗಾತಿ ಸಂಗ ಕೋರಿ, ಸಂತೋಷ ತೀರ ಸೇರಿ
ಹೆಣ್ಣು : ನೀನಂತು ನನ್ನೆ ಮೆಚ್ಚಿ ನನ್ನೆ ಮೆಚ್ಚಿ ಪ್ರೀತಿ ಹುಚ್ಚಾದೆ
ಗಂಡು : ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೊಂಚ ಹಾಕಿ ಸಂಚು ಮಾಡಿ ನನ್ನ ಕರೆದೆ
ಹೆಣ್ಣು : ಮಾತಲ್ಲಿ ಇಂಪು ಕಂಡೆ, ರೂಪಲ್ಲಿ ರಂಗು ಕಂಡೆ
ಬಾಳಲ್ಲಿ ಆಸೆ ಕಂಡೆ, ಮತ್ತೆ ಮತ್ತೆ ಮತ್ತೆ ಮತ್ತೆ
ಗಂಡು : ಮಿಂಚಂತೆ ಮಿಂಚಿ ಮಿಂಚಿ ಕಣ್ ಹೊಡೆದೆ
ಹೆಣ್ಣು : ಹೊಂಚ ಹಾಕಿ ಸಂಚು ಮಾಡಿ ನನ್ನ ಕರೆದೆ
-----------------------------------------------------------------------------------------------------------------------
ಗೆದ್ದ ಮಗ (1983) - ಒಂದು ಗಂಡು ಹೆಣ್ಣು, ಈ ಸೃಷ್ಟಿಯ ಕಣ್ಣು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಚಕ್ರವರ್ತಿ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ
ಕೋರಸ್ : ಹ್ಹಾಹ್ಹಾ (ಡಿಸ್ಕೋ ಡಿಸ್ಕೋ) ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ) ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಹ್ಹಾಹ್ಹಾ (ಡಿಸ್ಕೋ ಡಿಸ್ಕೋ) ಹ್ಹಾಹ್ಹಾ (ಡಿಸ್ಕೋ ಡಿಸ್ಕೋ)
ಗಂಡು : ಒಂದು ಗಂಡು ಹೆಣ್ಣು, ಈ ಸೃಷ್ಟಿಯ ಕಣ್ಣು
ಆಗಿಂದ ಈವರೆಗೆ, ಈ ಜೋಡಿ ಸುಖದ ಹಣ್ಣು
ಹೆಣ್ಣು : ರಾಜ… ರಾಜ… ರಾಜ
ಒಂದು ಗಂಡು ಹೆಣ್ಣು, ಈ ಸೃಷ್ಟಿಯ ಕಣ್ಣು
ಒಲವೆಂಬ ಕಡಲಲ್ಲಿ, ಈ ಜೋಡಿ ನಲಿವ ಮೀನು
ಗಂಡು : ರಾಣಿ… ರಾಣಿ… ರಾಣಿ
ಕೋರಸ್ : ಆಆಆ...ಆಆಆ...ಆಆಆ...
ಗಂಡು : ಆಆಆಅ...ಆಆಆಅ...
ಹೆಣ್ಣು : ಪಮಪಮಗಮ ಸಗಸನಿಸಪ ಪಮಪಮಗಮ ಸಗಸನಿಸಪ ಪಸ
ಗಂಡು : ಪಮಗಮಪ (ಆಆಆಅ) ಪಮಗಮಪ (ಆಆಆಅ) ದನಿಸರಿಗಮಪ (ಆಆಆಅ)
ಸಾ (ಸಸಸಸ್ಸಾ ) ನಿಸಗ (ಗಗಾಗಾ ) ಸಗಮಾ (ಮಮಮಮಾ) ಗಮಪ (ಪದನಿ ಗಮಪ ಪದನಿ)
ಹೆಣ್ಣು : ಅಂದದ ರತಿಯು ಮಾರನ ಸತಿಯು ಕುಣಿಯಲು ಹರನೆ ಸೋತಂತೆ
ಪ್ರೀತಿಗೆ ಸಂಕೇತ, ಈ ನೂತನ ಸಂಗೀತ
ಗಂಡು : ಸಂಜೆಯ ರಂಗು ಹರೆಯದ ಗುಂಗು ಒಡಲಲಿ ತಂದಿದೆ ಆವೇಗ
ಸಂಭ್ರಮ ನೋಡಿಂದು, ಸಂಗಮ ಬೇಕೆಂದು
ಹೆಣ್ಣು : ಮೈಗೆ ಮೈ ಸೋಕುವಾಗ ಏನೋ ಆಸೆ ನನ್ನಲ್ಲಿ
ಗಂಡು : ಬ್ರಹ್ಮ ಅಂದೆ ಬರೆದು ಬಿಟ್ಟ ಹೀಗೆ ಎಂದು ಬಾಳಲ್ಲಿ
ಹೆಣ್ಣು : ಜೊತೆಗಾರ ಬಳಿಬಾರ, ನಿನಗಾಗಿ ಕಾದೆ ನಾನು
ಗಂಡು : ಒಂದು ಗಂಡು ಹೆಣ್ಣು, ಈ ಸೃಷ್ಟಿಯ ಕಣ್ಣು
ಹೆಣ್ಣು : ಒಲವೆಂಬ ಕಡಲಲ್ಲಿ, ಈ ಜೋಡಿ ನಲಿವ ಮೀನು
ಕೋರಸ್ : ಲಲ್ಲಲಲಾ ಲಲ್ಲಲಲಾ ಲಲ್ಲಲಲಾ ಲಲ್ಲಲಲಾ ಲಲ್ಲಲಲಾ
ಆಆಆಆಅ.. ಆಆಆಆಅ.. ಆಆಆಆಅ.. ಆಆಆಆಅ..
ಗಂಡು : ಅಂದವ ಸೂಸಿ ಗಾಳವ ಬೀಸೋ ಹೆಣ್ಣಿಗೆ ಯೋಗಿಯು ಮರುಳಾದ
ರೂಪವು ಗೆದ್ದಾಗ, ತಪವು ಸೋತಾಗ
ಹೆಣ್ಣು : ಯೌವನವೆಂಬ ಹೂಬನದಲ್ಲಿ ಗಾನಕೆ ಧ್ಯಾನವು ವಶವಾಗಿ
ಪ್ರೀತೀಯು ಹೂವಾಯ್ತು, ಹೆಣ್ಣು ತಾಯಾಯ್ತು
ಗಂಡು : ನನ್ನ ನಿನ್ನ ಮಧ್ಯ ಇಂತ ಹುಚ್ಚು ಆಟ ಬೇಕಿಲ್ಲ
ಹೆಣ್ಣು : ಮನಸು ಮನಸು ಕಲೆತ ಸಮಯ ಇಂತ ಮೋಜು ಬೇರಿಲ್ಲ
ಗಂಡು : ಸಂಗಾತಿ ಬಳಿ ಬಾರೆ, ನಿನಗಾಗಿ ಕಾದೆ ನಾನು
ಹೆಣ್ಣು : ಒಂದು ಗಂಡು ಹೆಣ್ಣು, ಈ ಸೃಷ್ಟಿಯ ಕಣ್ಣು
ಗಂಡು : ಆಗಿಂದ ಈವರೆಗೆ, ಈ ಜೋಡಿ ಸುಖದ ಹಣ್ಣು
ಇಬ್ಬರು : ರಾಜ… ರಾಣಿ… ರಾಜ
ಒಂದು ಗಂಡು ಹೆಣ್ಣು, ಈ ಸೃಷ್ಟಿಯ ಕಣ್ಣು.. ಆಆಆ
--------------------------------------------------------------------------------------------------------------------------
ಗೆದ್ದ ಮಗ (1983) - ಬೆಂಕಿಯನು ಮುಟ್ಟುವೆಯಾ ಕೆಂಡವನು ನುಂಗುವೆಯಾ
ಸಂಗೀತ: ಚಕ್ರವರ್ತಿ ಸಾಹಿತ್ಯ: ಚಿ.ಉದಯಶಂಕರ ಗಾಯನ: ರಮೇಶ್, ಎಸ್.ಜಾನಕಿ
ಶಲೋಮಿಯಾ.. ರಿಬ್ಬಬ್ಬಬ್ಬ ಬಿಬ್ಬಬ್ಬ ಬಿಬ್ಬಬಿಬ್ಬಬಾ
ಹೆಣ್ಣು : ಬೆಂಕಿಯನು ಹ್ಹಾ.. ಮುಟ್ಟುವೆಯಾ ಹ್ಹಾ.. ಕೆಂಡವನು ಹೊಯ್ ನುಂಗುವೆಯಾ ಹೇಯ್
ಬೆಂಕಿಯನು (ಹೂಹೂ).. ಮುಟ್ಟುವೆಯಾ (ಹೂಹೂ).. ಕೆಂಡವನು (ಹೂಹೂ) ನುಂಗುವೆಯಾ (ಹೂಹೂ)
ಈ ಹುಚ್ಚು ನಿನಗೇಕೆ ಬಂದಿತು (ಚಿನ್ಮಯಾ) ನಿನ್ನಾಸೆ ಇನ್ನೂ ಮುಗಿಯಿತು (ಚಿನ್ಮಯಾ)
ಈ ಹುಚ್ಚು ನಿನಗೇಕೆ ಬಂದಿತು (ಯಮಾಲುಕಿ) ನಿನ್ನಾಸೆ ಇನ್ನೂ ಮುಗಿಯಿತು (ಯಮಲೂದ್ಲಾ)
ಗಂಡು : ಹ್ಹಾ.. ಹ್ಹೂ.. ಹ್ಹಾ.. ಹ್ಹೂಹ್ಹೂ..
ಹೆಣ್ಣು : ಮಲಗಿದ್ದ ಸಿಂಹವ ಕೆಣಕುವೆಯಾ ಬುಸುಗುಟ್ಟೋ ಸರ್ಪವ ತುಳಿಯುವೆಯಾ
ಮಲಗಿದ್ದ ಸಿಂಹವ ಕೆಣಕುವೆಯಾ ಬುಸುಗುಟ್ಟೋ ಸರ್ಪವ ತುಳಿಯುವೆಯಾ
ಗಿಳಿಯಂತೆ ಪಂಜರದಲ್ಲಿ ಮದ್ದಾನೆಯ ಕೂಡುವೆಯಾ
ಬಾಯ್ಬಿಟ್ಟ ಮೊಸಳೆಯ ಹಲ್ಲ ಮುಟ್ಟಿ ನೀನು ಎಣಿಸುವೆಯಾ (ಶಬರಿಬರಿಬರಿಬರಿಬರಬಬ್ಬಬಾ )
ಈ ಹುಚ್ಚು ನಿನಗೇಕೆ ಬಂದಿತು (ಬಂದಿತು) ನಿನ್ನಾಸೆ ಇನ್ನೂ ಮುಗಿಯಿತು (ಮುಗಿಯಿತು)
ಬೆಂಕಿಯನು (ಓಓಓ) ಮುಟ್ಟುವೆಯಾ (ಓಓಓ) ಕೆಂಡವನು (ಓಓಓ) ನುಂಗುವೆಯಾ (ಓಓಓ)
ಗಂಡು : ಹ್ಹಾ.. ಹ್ಹೂ.. ಹ್ಹಾ.. ಹ್ಹೂಹ್ಹೂ.. ಹ್ಹಾ
ಹೆಣ್ಣು : ಈ ಕುಳ್ಳ ನನ್ನನ್ನು ಕೊಳ್ಳುವನು ನಿಮ್ಮನ್ನು ಯಮನಿಗೇ ಮಾರುವನು
ಹೆಣ್ಣು : ಈ ಕುಳ್ಳ ನನ್ನನ್ನು ಕೊಳ್ಳುವನು ನಿಮ್ಮನ್ನು ಯಮನಿಗೇ ಮಾರುವನು
ಈ ಕುಳ್ಳ ನನ್ನನ್ನು ಕೊಳ್ಳುವನು ನಿಮ್ಮನ್ನು ಯಮನಿಗೇ ಮಾರುವನು
ಆಕಾಶ ಭೂಮಿಯನ್ನು ಒಂದಾಗಿ ಮಾಡುವನೇನು
ಆಕಾಶ ಭೂಮಿಯನ್ನು ಒಂದಾಗಿ ಮಾಡುವನೇನು
ಶಿವನಂತೇ ನಿಮ್ಮ ಮೇಲೆ ತಾಂಡವ ನೃತ್ಯ ಮಾಡುವನು (ಲುಗೂಚಿಕಜಿಕಜಕಜಮಲೆಕುಚುಕು ಜುಗೂಜಿಗಜಿಗ)
ಈ ಹುಚ್ಚು ನಿನಗೇಕೆ ಬಂದಿತು (ಬಂದಿತು)ನಿನ್ನಾಸೆ ಇನ್ನೂ ಮುಗಿಯಿತು (ಮುಗಿಯಿತು)ಬೆಂಕಿಯನು (ಆಅಅ) ಮುಟ್ಟುವೆಯಾ (ಆಅಅ) ಕೆಂಡವನು (ಆಅಅ) ನುಂಗುವೆಯಾ (ಆಅ)
ಈ ಹುಚ್ಚು ನಿನಗೇಕೆ ಬಂದಿತು (ಬಂದಿತು)ನಿನ್ನಾಸೆ ಇನ್ನೂ ಮುಗಿಯಿತು (ಮುಗಿಯಿತು)
-------------------------------------------------------------------------------------------------------------------------
ಗೆದ್ದ ಮಗ (1983) - ರವಿಗಿಂತ ಶಶಿಯ ಚೆಲುವು ಶಶಿಗಿಂತ ನೀನೇ ಚೆಲುವು
ಸಂಗೀತ: ಚಕ್ರವರ್ತಿ ಸಾಹಿತ್ಯ: ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ. ಎಸ್.ಜಾನಕಿ, ಕೋರಸ್
ಗಂಡು : ರವಿಗಿಂತ ಶಶಿಯ ಚೆಲುವು ಶಶಿಗಿಂತ ನೀನೇ ಚೆಲುವು
ನಿನಗಿಂತ ಯಾರು ಚೆಲುವೂ
ಹೆಣ್ಣು : ಗಾಗಗನಿ ನಿದನಿಸ ರೀಸರೀಗ ಗರಿಗಮ ಮಗಮಪಾ ಪ ಪಾಪ (ಅಹ್ಹಹ್ಹ )
ಹೆಣ್ಣು : ರವಿಗಿಂತ ಶಶಿಯ ಚೆಲುವು ಶಶಿಗಿಂತ ನೀವೇ ಚೆಲುವು
ನಿಮಗಿಂತ ಇಲ್ಲ ಚೆಲುವೂ
ಗಂಡು : ಗಾಗಗನಿ ನಿದನಿಸ ರೀಸರೀಗ ಗರಿಗಮ ಮಗಮಪಾ ಪ ಪಾಪ (ಅಹ್ಹಹ್ಹ )
ಹೆಣ್ಣು : ರವಿಗಿಂತ ಶಶಿಯ ಚೆಲುವು ಶಶಿಗಿಂತ ನೀವೇ ಚೆಲುವು
ನಿಮಗಿಂತ ಇಲ್ಲ ಚೆಲುವೂ
ಗಂಡು : ಗಾಗಗನಿ ನಿದನಿಸ ರೀಸರೀಗ ಗರಿಗಮ ಮಗಮಪಾ ಪ ಪಾಪ (ಅಹ್ಹಹ್ಹ )
ಗಂಡು : ತಂಗಾಳಿ ಬೀಸಿ ಬಂದಂತೆ ಮನೆಗೊಬ್ಬ ಅತಿಥಿ ಬರುತಾನೇ
ಹೆಣ್ಣು : ಅಂಗಳದೇ ಹೂವು ನಲಿವಂತೆ ಸಂತಸದ ಗಂಧ ತರುತಾನೇ
ಗಂಡು : ತೊದಲನುಡಿಯು ಸವಿಯ ಜೇನಂತೇ
ಹೆಣ್ಣು : ತಿಳಿ ನಗುವು ಕೆನೆಯ ಹಾಲಂತೆ
ಗಂಡು : ಮಡಿಲ ಮಂದಾರ ಮನೆಯ ಸಿಂಗಾರ
ಬಾಳೇ ಬಂಗಾರ ತುಂಟ ಹುಡುಗ ಆವ್ ಆಡುವಾಗ
ಹೆಣ್ಣು : ರವಿಗಿಂತ ಶಶಿಯ ಚೆಲುವು
ಗಂಡು : ಶಶಿಗಿಂತ ನೀನೇ ಚೆಲುವು
ಗಂಡು : ಕೆಮಣ್ಣು ಈಗ ರುಚಿಯಂತೆ ಹುಳಿಮಾವು ತುಂಬಾ ಸಿಹಿಯಂತೇ.. ಆಹ್ಹಾಂ
ಹೆಣ್ಣು : ತುಂಟಾಟ ತಂದೆ ಹಾಗಂತೇ ಒದೆವಾಗ ಏನೋ ಹಿತವಂತೇ
ಗಂಡು : ನಡೆವಾಗ ಪಾದ ನಂದಿತು ಹೂ ಹೊತ್ತ ಬಳ್ಳಿ ನಲುಗಿತೂ
ಹೆಣ್ಣು : ಇಂಥ ಆರೈಕೆ ಪ್ರೀತಿ ಹಾರೈಕೆ ತರುವ ಸಂಗಾತಿ ಪಡೆದು ಗೆದ್ದೇ ನಾ ನೀ ಬಾಳಲ್ಲಿ
ಗಂಡು : ರವಿಗಿಂತ ಶಶಿಯ ಚೆಲುವು
ಹೆಣ್ಣು : ಶಶಿಗಿಂತ ನೀವೇ ಚೆಲುವು
ಹೆಣ್ಣು : ಮಡಿಲಲ್ಲಿ ಕಂದ ನಗುವಾಗ ಆನಂದದಿಂದ ಮೈ ಮರೆವೇ
ಗಂಡು : ಹಾಲನ್ನು ಉಣಿಸಿ ನೀ ಮರೆವೇ ಜೋಗುಳ ಹಾಡಿ ತಣಿವೆ
ಹೆಣ್ಣು : ಈ ನಿಮ್ಮ ರೂಪ ಅವನಂತೇ
ಗಂಡು : ನಾ ನಿನಗೇ ತಂದ ವರವಂತೆ
ಹೆಣ್ಣು : ಅವನ ಕೂಗಾಡಿ ಅಪ್ಪಿ ಮುದ್ದಾಡಿ ಸುಖದೇ ಹಾಯಾಗಿ
ಮಲಗಿ ನಲಿವೇ ನಾ ನೀ ತೋಳಲ್ಲಿ
ಗಂಡು : ರವಿಗಿಂತ ಶಶಿಯ ಚೆಲುವು
ಹೆಣ್ಣು : ಶಶಿಗಿಂತ ನೀವೇ ಚೆಲುವು
ಗಂಡು : ನಿನಗಿಂತ ಯಾರು ಚೆಲುವೂ
ಹೆಣ್ಣು : ಗಾಗಗನಿ ಗಂಡು : ನಿದನಿಸ
ಹೆಣ್ಣು : ರೀಸರೀಗ ಗಂಡು : ಗರಿಗಮ
ಹೆಣ್ಣು : ಮಗಮಪಾ ಪ
ಗಂಡು : ವ್ವಾ.. ಪಾಪ
ಇಬ್ಬರು : ಅಹ್ಹಹ್ಹ ಅಹ್ಹಹ್ಹ..
-------------------------------------------------------------------------------------------------------------------------
ಗೆದ್ದ ಮಗ (1983) - ಲವ್ ಮೀ ಅಲೌವ್ ಮೀ ಟು ಲವ್ ಯೂ
ಸಂಗೀತ: ಚಕ್ರವರ್ತಿ ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಗಾಯನ: ಎಸ್.ಪಿ.ಬಿ. ಎಸ್.ಜಾನಕಿ, ಕೋರಸ್
ಸಂಗೀತ: ಚಕ್ರವರ್ತಿ ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಗಾಯನ: ಎಸ್.ಪಿ.ಬಿ. ಎಸ್.ಜಾನಕಿ, ಕೋರಸ್
ಹೆಣ್ಣು : ಲವ್ ಮೀ ಅಲೌವ್ ಮೀ ಟು ಲವ್ ಯೂ ಜೋಡಿ ನೀನಾಗು ಹೇ ಹುಡುಗಾ
ನಿನಗಾಗಿ ಕಾದೇ ಕರೇದಾಗ ಬಂದೇ ಯೌವ್ವನದ ಜೀವನದ ಜೊತೆಯಾಗೋ ಬಾರೋ
ಗಂಡು : ಲವ್ ಮೀ ಅಲೌವ್ ಮೀ ಟು ಲವ್ ಯೂ ಜೋಡಿ ನಾನಾದೇ ಹೇ ಹುಡುಗೀ
ನಿನ್ನಂದ ಕಂಡೇ ಕರೆದಲ್ಲಿ ಬಂದೇ ನನ್ನ ಒಲವ ಸ್ವೀಕರಿಸೀ ಜೊತೆಯಾಗೋ ಬಾರೇ
ಹೆಣ್ಣು : ಹೇಗಿದೇ ನನ್ನ ಈ ಅಂದ ಗಂಡು : ಸವಿದರೇ ನಿನ್ನಾ ಬಲು ಚಂದ
ಹೆಣ್ಣು : ಹೇಗಿದೇ ನನ್ನ ಅಹ್ಹಹ್ಹಹ್ಹ.. ಈ ಅಂದ ಗಂಡು : ಸವಿದರೇ ನಿನ್ನಾ ಬಲು ಚಂದ
ಹೆಣ್ಣು : ಒಲಿದಿಹ ಮನಕೇ ಸಿಹಿ ಉಣಿಸುವ ಬಯಕೇ.. ಹೇಹೇ...
ಗಂಡು : ಬಂದಿಹ ಅದಕೇ ಸಖಿ ತಂದಿಹೇ ಸುಖಕೆ
ಹೆಣ್ಣು : ಮಿಲನದ ಗುರಿ ಸೇರೋಣ ಬಾರೋ
ಗಂಡು : ಸೇರೋಣ ಬಾ.... ಆಹಾಹಾ...
ಹೆಣ್ಣು : ಅಮ್ಮಯ್ಯ ಅಮ್ಮಯ್ಯ ದಮ್ಮಯ್ಯ ಅಯ್ಯಯ್ಯಯ್ಯೋ .. ಹ್ಹಾ...
ಹೆಣ್ಣು : ಲವ್ ಮೀ ಅಲೌವ್ ಮೀ ಟು ಲವ್ ಯೂ
ಗಂಡು : ಜೋಡಿ ನಾನಾದೇ ಹೇ ಹುಡುಗೀ
ಹೆಣ್ಣು : ನಿನಗಾಗಿ ಕಾದೇ ಕರೇದಾಗ ಬಂದೇ
ಗಂಡು : ನನ್ನ ಒಲವ ಸ್ವೀಕರಿಸೀ ಜೊತೆಯಾಗೋ (ಹ್ಹಾ.. ) ಬಾರೇ
ಹೆಣ್ಣು : ತೊಳಲಿ ನಮ್ಮ ತೋಳಿರಲು ಗಂಡು : ಒಡಲನೇ ನಿನಗೇ ನೀಡಿರಲೂ
ಹೆಣ್ಣು : ತೊಳಲಿ ನಮ್ಮ ತೋಳಿರಲು ಗಂಡು : ಒಡಲನೇ ನಿನಗೇ ನೀಡಿರಲೂ
ಹೆಣ್ಣು : ಹರೆಯದ ಬಾಲೇ ತನು ಆಗಿದೆ ಜ್ವಾಲೇ
ಗಂಡು : ಅಹ್ಹಹ್ಹಹ್ಹಾ.. ನಡೆಯಲಿ ಲೀಲೆ ಹೂರಾಶಿಯ ಮೇಲೆ
ಹೆಣ್ಣು : ಜೊತೆಯಲಿ ಮಧು ಹೀರೋಣ ಬಾರೋ
ಗಂಡು : ಹೀರೋಣ ಬಾ ಅಹ್ಹಹ್ಹಹಹ್ಹಾ ಅಹ್ಹಹ್ಹಹ ಹಾ
ಹೆಣ್ಣು : ಅಮ್ಮಯ್ಯ ಅಮ್ಮಯ್ಯ ದಮ್ಮಯ್ಯ ಅಯ್ಯಯ್ಯಯ್ಯೋ .. ಹ್ಹಾ...
ಲವ್ ಮೀ ಅಲೌವ್ ಮೀ ಟು ಲವ್ ಯೂ ಜೋಡಿ ನೀನಾಗು ಹೇ ಹುಡುಗಾ
ನಿನಗಾಗಿ ಕಾದೇ ಕರೇದಾಗ ಬಂದೇ ಯೌವ್ವನದ ಜೀವನದ ಜೊತೆಯಾಗೋ ಬಾರೋ
ಗಂಡು : ಲವ್ ಮೀ ಅಲೌವ್ ಮೀ ಟು ಲವ್ ಯೂ (ಅಹಹ್ಹಾ ) ಜೋಡಿ ನಾನಾದೇ ಹೇ ಹುಡುಗೀ (ಅಹಹ್ಹಾ )
ನಿನ್ನಂದ ಕಂಡೇ ಕರೆದಲ್ಲಿ ಬಂದೇ ನನ್ನ ಒಲವ ಸ್ವೀಕರಿಸೀ ಜೊತೆಯಾಗೋ ಬಾರೇ
-------------------------------------------------------------------------------------------------------------------------
No comments:
Post a Comment