ಪೋಲಿ ಹುಡುಗ ಚಿತ್ರದ ಹಾಡುಗಳು
- ಆ ಸೂರ್ಯನ ಸುತ್ತೋದು ಈ ಭೂಮಿ ಕಣೊ
- ಯಾರು ಪೋಲಿ ಪೋಲಿ ಊರಲ್ಲಿ ನಾನೇನ
- ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ
- ಜನನಾ ಮರಣಗಳೆರಡೂ ಕುರುಡೂ ಮುಂದೆ ಹೋಗದು
- ಜೋಕುಮಾರನೇ ಸೋಕುದಾರನೇ ಸೋಕಿಗೆ ಬಾರೋ
- ಮುಗಿಯಿತೋ ಆ ಕಾಲವು ಉದಯಿಸಿತೋ ಹೊಸ ಯುಗವೂ
ಪೋಲಿ ಹುಡುಗ (1990) - ಆ ಸೂರ್ಯನ ಸುತ್ತೋದು ಈ ಭೂಮಿ ಕಣೊ
ಸಾಹಿತ್ಯ ಹಾಗು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂಆ ಸೂರ್ಯನ ಸುತ್ತೋದು ಈ ಭೂಮಿ ಕಣೊ
ಈ ಭೂಮಿಯ ಸುತ್ತೋದು ಈ ಪ್ರೀತಿ ಕಣೊ
ಈ ಪ್ರೀತಿಯ ಎಂದೆಂದು ಸುತ್ತೋದು ಓ.. ನಾವು ಕಣೊ
ಪ್ರೀತಿ ಸುತ್ತ ನಾವು ಪ್ರೀತಿಸುತ್ತ ನಾವು ಬದುಕೋಣ
ಈ ಕಣ್ಣಿನ ಆವೇದನೆ ಹೇಮಂತದ ಆಲಾಪನೆ
ಕೆಣಕಿದೆ ಕಲಕಿದೆ ನನ್ನ ಭಾವನೆ
ಈ ರೂಪದ ಆಸ್ವಾದನೆ ಋತುಮಾನದ ಆರಾಧನೆ
ತುಂಬಿದೆ ನನ್ನೆದೆ ನೂರು ಕಲ್ಪನೆ
ಅಗೋಚರ ಪ್ರೇಮವು ಈ ದಿನ ನಿಂತಿದೆ ನನ್ನೆದುರು ||ಆ ಸೂರ್ಯನ ||
ನೀನಿಲ್ಲದ ಈ ಜೀವನ ಗೋವಿಲ್ಲದ ಬೃಂದಾವನ
ನಡೆಸು ಬಾ ನುಡಿಸು ಬಾ ಜೀವವಾಗಿ ನೀ
ಹೀಗಿದ್ದರೆ ಹೀಗೆನ್ನುವ ಹಾಗಿದ್ದರೆ ಹೀಗೆನ್ನುವ
ಲೋಕದಿ ಮಾತಿಗೆ ಶೂಲವಾಗು ನೀ
ಅಗೋಚರ ಪ್ರೇಮವು ಈ ದಿನ ಬಂದಿದೆ ನಮ್ಮೆದುರು ||ಆ ಸೂರ್ಯನ ||
----------------------------------------------------------------------------------------------------------------------
ಪೋಲಿ ಹುಡುಗ - ಯಾರು ಪೋಲಿ ಪೋಲಿ ಊರಲ್ಲಿ ನಾನೇನ
ಸಾಹಿತ್ಯ-ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗು ಸಂಗಡಿಗರು
ಯಾರು ಪೋಲಿ ಪೋಲಿ ಊರಲ್ಲಿ ನಾನೇನ
ಬೇರೆ ಎಲ್ಲ ಎಲ್ಲ ತುಂಬಾನೆ ಸಾಚನಾ
ಬೂತಗಾಜು ಗಾಜು ತನ್ನಿರಿ ಹಾಕೋಣ
ಸಾಚ ಯಾರು ಯಾರು ಪತ್ತೇಯ ಮಾಡೋಣ
ಹುಡುಕಾಡಿ ಅವನನ್ನೆ ಕೇಳೋಣ
ಯಾರು ಪೋಲಿ ಪೋಲಿ ಊರಲ್ಲಿ ನಾನೇನ
ಬೇರೆ ಎಲ್ಲ ಎಲ್ಲ ತುಂಬಾನೆ ಸಾಚನಾ....
ಊರೆಲ್ಲ ಪೋಲಿ ಬಿದ್ದಿದೆ ನೀಲಿಯ ಚಿತ್ರಕ್ಕೆ ಕಳ್ಳ ಸಾಲು ನಿಂತಿದೆ
ಬೀದಿಲಿ ಬೆತ್ತಲೆ ಗ್ರಂಥ ಒರಗಿ ನಿಂತಿದೆ ನಾಡೆಲ್ಲ ಕೆಟ್ಟುಹೋಗಿದೆ
ಕ್ಯಾಬರೆ ನೃತ್ಯಕ್ಕೆ ಇಲ್ಲಿ ಲೈಸನ್ಸ್ ಸಿಕ್ಕಿದೆ ಪತ್ರಿಕೆ ಮದ್ಯದ ಪೇಜೆ ಬೆತ್ತಲಾಗಿದೆ
ಅಯ್ಯಯ್ಯೊ ಇವರಿಗೆ ಇಲ್ಲಯ್ಯ ಸೆನ್ಸಾರು
ಆಳೋರೆ ಕೆಟ್ಟರೆ ಕೇಳೋರು ಇನ್ಯಾರು
ಹುಡುಗಾಡಿ ಅವರನ್ನೆ ಕೇಳೋಣ
ಯಾರು ಪೋಲಿ ಪೋಲಿ ಊರಲ್ಲಿ ನಾನೇನ
ಬೇರೆ ಎಲ್ಲ ಎಲ್ಲ ತುಂಬಾನೆ ಸಾಚನಾ...
ದಿಕ್ಕಾರ ದಿಕ್ಕಾರ ಬಿ.ಪಿ. ಕ್ಲಾಸಿಗೆ ದಿಕ್ಕಾರ
ದಿಕ್ಕಾರ ದಿಕ್ಕಾರ ಬಿ.ಪಿ. ಕ್ಲಾಸಿಗೆ ದಿಕ್ಕಾರ
ಹೋರಾಟ ನಿಲ್ಲಬಾರದು ಕಾರಣ ನ್ಯಾಯವು ನಮಗೆ ಬೇಗ ಬೇಕಿದೆ
ಮುಂದಕ್ಕೆ ನಾವಿನ್ನು ತುಂಬ ಓದ ಬೇಕಿದೆ
ಕಾಲೇಜು ಮುಚ್ಚಬಾರದು
ಕಾರಣ ಪಾಯದ ಕೆಳಗೆ ನಮ್ಮ ದುಡ್ಡಿದೆ
ಅದರಲ್ಲಿ ನನ್ನದು ತುಂಬ ದೊಡ್ಡ ಶೇರಿದೆ
ಕೇಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಕೇಳಲಿ ಕೇಳಲಿ ನಮ್ಮ ಕ್ಷಮೆಯ ಕೇಳಲಿ
ಸೋಲೆಂಬ ಮಾತಂತು ಗೊತ್ತಿಲ್ಲ
ನೀನೆ ಪೋಲಿ ಇನ್ನು ಅನುಮಾನಾನ
ನೀನೆ ಪೋಲಿ ಇನ್ನು ಅನುಮಾನಾನ
ಯಾವುದೊ ಯಾವುದೊ ಈ ರಾಗ ಮಾಲಿಕೆ ಯಾವುದೊ ಯಾವುದೊ ಬೇಲೂರ ಬಾಲಿಕೆ

ಆಚಾರ್ಯ ದೇವರೆಂಬುವ ಸತ್ಯಕ್ಕೆ ಗೌರವನೀಡಿ ಮೂಡರಾಗದೆ
ಗುರುವಿನ ಪೂಜೆಯ ಮಾಡಿ ಅಂದರಾಗದೆ ಓಂಕಾರ್ ಹೇಳಿಕೊಡುವಾ
ಗುರುವೆ ತಾನೆ ನಮ್ಮ ಕಣ್ಣುಗಳು ಅವು ಕಂಬನಿ ಸುರಿಸಿದರೆ ಶಾಪಗಳು
ದಿಕ್ಕಾರ ದಿಕ್ಕಾರ ಬಿ.ಪಿ. ಕ್ಲಾಸಿಗೆ ದಿಕ್ಕಾರ ದಿಕ್ಕಾರ ದಿಕ್ಕಾರ ದಿಕ್ಕಾರಕ್ಕೆ ದಿಕ್ಕಾರ
ದುಡುಕದರಿ ಎಡವದಿರಿ ಕ್ಷಮೆಕೇಳಿ
ಯಾರು ಪೋಲಿ ಪೋಲಿ ಊರಲ್ಲಿ ನಾನೇನ
ಬೇರೆ ಎಲ್ಲ ಎಲ್ಲ ತುಂಬಾನೆ ಸಾಚನಾ
ಬೂತಗಾಜು ಗಾಜು ತನ್ನಿರಿ ಹಾಕೋಣ
ಸಾಚ ಯಾರು ಯಾರು ಪತ್ತೇಯ ಮಾಡೋಣ
ಹುಡುಕಾಡಿ ಅವನನ್ನೆ ಕೇಳೋಣ
--------------------------------------------------------------------------------------------------------------------------
ಪೋಲಿ ಹುಡುಗ (1990) - ಕುಹೂ ಕುಹೂ ಕೋಗಿಲೆ ಹಾಡೋ ವೇಳೆ ಈಗಲೇ
ಸಾಹಿತ್ಯ ಹಾಗು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಲತಾಹಂಸಲೇಖ
ಗಂಡು : ಕುಹೂ ಕುಹೂ ಕೋಗಿಲೇ ಹಾಡೋ ವೇಳೆ ಈಗಲೇ
ಹೆಣ್ಣು : ಕುಹೂ ಕುಹೂ ಕೋಗಿಲೇ ಹಾಡೋ ವೇಳೆ ಈಗಲೇ
ಗಂಡು : ಸೂರ್ಯನಾ ಊರಿನಾ ಬಾಗಿಲು ತೆರೆಯುತಿದೆ
ಹೆಣ್ಣು : ಮಂಜಿನಾ ಮುತ್ತಿನಾ ಮಣಿಗಳು ಮಿರುಗುತಿದೇ
ಗಂಡು : ಕುಹೂ ಕುಹೂ ಕೋಗಿಲೇ ಹಾಡೋ ವೇಳೆ ಈಗಲೇ
ಹೆಣ್ಣು : ಕುಹೂ ಕುಹೂ ಕೋಗಿಲೇ ಹಾಡೋ ವೇಳೆ ಈಗಲೇ
ಗಂಡು : ಮಾಗಿ ಚಳಿಗಾಲ ಸುಂಯ್ ಸುಂಯ್ ಹಾಡಿ ಭೋಗಿ ಒಡಲಾಳ ಗುಂಯ್ ಗುಂಯ್ ಮಾಡಿ
ಹೆಣ್ಣು : ಸ್ವಾತಿ ಮಳೆಗಾಲ ಜಿನುಗೋ ಸ್ವರಕೇಳಿ ನೆನೆದ ಮನ ತಾಳ ರಂಗೀನ ಮೋಡಿ
ಗಂಡು : ಪ್ರೇಮದಾ ಊರಿನಾ ಬಾಗಿಲು ತೆರೆಯುತಿದೆ
ಹೆಣ್ಣು : ಪ್ರಣಯದ ತೌರಿನ ಓಲೆಯು ಕರೆಯುತಿದೆ
ಗಂಡು : ಕುಹೂ ಕುಹೂ ಕೋಗಿಲೇ ಹಾಡೋ ವೇಳೆ ಈಗಲೇ
ಹೆಣ್ಣು : ಕುಹೂ ಕುಹೂ ಕೋಗಿಲೇ ಹಾಡೋ ವೇಳೆ ಈಗಲೇ
ಗಂಡು : ರಾತ್ರಿ ಶಿವರಾತ್ರಿ ನಿನ್ನಾ ಕರಿಗುರುಳೂ ನಿನ್ನಾ ಮೊಗವಿಲ್ಲಿ ಶಶಿಯಾ ಬಿಂಬಗಳೂ
ಹೆಣ್ಣು: ರಾಗ ಈ ರಾಗ ಗುಡುಗಿನ ಆವೇಗಾ ನಿನ್ನಾ ಹಾಡೀಗ ಮಳೆಯೂ ಬಾ ಬೇಗ
ಗಂಡು : ಹೇ.. ಪ್ರೇಮದಾ ಊರಿನಾ ಬಾಗಿಲು ತೆರೆಯುತಿದೆ
ಹೆಣ್ಣು : ಪ್ರಣಯದ ತೌರಿನ ಓಲೆಯು ಕರೆಯುತಿದೆ
ಗಂಡು : ಕುಹೂ ಕುಹೂ ಕೋಗಿಲೇ ಹಾಡೋ ವೇಳೆ ಈಗಲೇ
ಹೆಣ್ಣು : ಕುಹೂ ಕುಹೂ ಕೋಗಿಲೇ ಹಾಡೋ ವೇಳೆ ಈಗಲೇ
--------------------------------------------------------------------------------------------------------------------------
ಪೋಲಿ ಹುಡುಗ (1990) - ಜನನಾ ಮರಣಗಳೆರಡೂ ಕುರುಡೂ
ಸಾಹಿತ್ಯ ಹಾಗು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೋರಸ್
ಜನನಾ ಮರಣಗಳೆರಡೂ ಕುರುಡೂ
ಮುಂದೆ ಹೋಗದೂ ಹಿಂದೇ ಬಾರದೂ ನಿಂತಲ್ಲಿ ನಿಲ್ಲದೂ
ಸ್ನೇಹ ಪ್ರೀತಿಗಳೆರಡೂ ದೂರ ಹೋಗದೂ ಬೇರೆ ಆಗದು ಕಣ್ಣಿಗೇ ಕಾಣದೂ
ನಾಳೆ ಗೊತ್ತಿಲ್ಲದಾ ಬಾಳಿಗೇ ಈ ದಿನಾ ಬರ್ತಡೇ... ಬರ್ತಡೇ ..

ಮುಂದೆ ಹೋಗದೂ ಹಿಂದೇ ಬಾರದೂ ನಿಂತಲ್ಲಿ ನಿಲ್ಲದೂನಲಿಸುವ ರಾಗ ಒಲಿಸುವ ವೇಗ ಆ ಹೆಣ್ಣಿನಲ್ಲಿದೇ ಆ ಕಣ್ಣಿನಲ್ಲಿದೆ
ಆ ನೋಟದಲ್ಲಿದೆ ಮೈಮಾಟದಲ್ಲಿದೇ
ನಾಳೇ ಗೊತ್ತಿಲ್ಲದಾ ಬಾಳಿಗೇ ಈ ದಿನಾ ಬರ್ತಡೇ... ಬರ್ತಡೇ ..
ಜನನಾ ಮರಣಗಳೆರಡೂ ಕುರುಡೂ
ಮುಂದೆ ಹೋಗದೂ ಹಿಂದೇ ಬಾರದೂ ನಿಂತಲ್ಲಿ ನಿಲ್ಲದೂ
ಹೂವಿಗೇ ಪ್ರತಿದಿನ ಜನುಮ ದಿನ ಹಾರುವ ದುಂಬಿಗೇ ಏನು ದಿನ
ಮದುವೆ ದಿನ ಅರಳುವ ಗುಟ್ಟು ಬಯಲಿಗೆ ಬಿಟ್ಟು ಬಾರೆ ನಾಳೆ ಎನ್ನದೇ ಬಾರೆ ವೇಳೆ ಮಾಡದೇ
ಬೇರೆ ರಾಗ ಹಾಡದೇ ಬಾರೆ ತಾಳ ತಪ್ಪದೇ
ನಾಳೆ ಗೊತ್ತಿಲ್ಲದಾ ಬಾಳಿಗೇ ಈ ದಿನಾ ಬರ್ತಡೇ... ಬರ್ತಡೇ ..
ಜನನಾ ಮರಣಗಳೆರಡೂ ಕುರುಡೂ
ಮುಂದೆ ಹೋಗದೂ ಹಿಂದೇ ಬಾರದೂ ನಿಂತಲ್ಲಿ ನಿಲ್ಲದೂ
ಸ್ನೇಹ ಪ್ರೀತಿಗಳೆರಡೂ ದೂರ ಹೋಗದೂ ಬೇರೆ ಆಗದು ಕಣ್ಣಿಗೇ ಕಾಣದೂ
ನಾಳೆ ಗೊತ್ತಿಲ್ಲದಾ ಬಾಳಿಗೇ ಈ ದಿನಾ ಬರ್ತಡೇ... ಬರ್ತಡೇ ..
ನಾಳೆ ಗೊತ್ತಿಲ್ಲದಾ ಬಾಳಿಗೇ ಈ ದಿನಾ ಬರ್ತಡೇ... ಬರ್ತಡೇ ..
ಪೋಲಿ ಹುಡುಗ (1990) - ಜೋಕುಮಾರನೇ ಸೋಕುದಾರನೇ ಶೋಕಿಗೆ ಬಾರೋ ನಿನ್ನ
ಸಾಹಿತ್ಯ ಹಾಗು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿಜಯರಾಂ
ಹೆಣ್ಣು : ಜೋಕುಮಾರನೇ ಸೋಕುದಾರನೇ ಸೋಕಿಗೇ ಬಾರೋ ನಿನ್ನ ಪ್ರೀತಿಯ ತೋರೋ
ಗಂಡು : ಅಂಜು ಮಲ್ಲಿಗೇ ಬಾರೆ ಮೆಲ್ಲಗೇ ರಾತ್ರಿಗೆ ದೀಪ ಈ ನಿನ್ನ ಕಿರುನಗೆ
ಹೆಣ್ಣು : ಹಮ್ಮಿರಾ ಮನಸು ಕೊಡು ಮನಸು ಕೊಡು ಮನಸಿಗೆ ಇನಿಸು ಕೊಡು
ಗಂಡು : ಹೊಂಬಾಳೆ ಸೊಗಸು ಕೊಡು ಸೊಗಸಿಗೇ ಖಡಸು ಕೊಡು

ಗಂಡು : ನೀನು ಹಚ್ಚಿದಾ ಈ ಆಸೆಯ ಬೆಂಕಿ ಉರಿಸುತ ನಾನು ಛಳಿ ಕಾಯಿಸುತ್ತಿದ್ದೇ
ಹೆಣ್ಣು : ಕಣ್ಣ ಮುಚ್ಚಿದೆ ನಾ ಕನಸಲ್ಲಿದ್ದೇ ನಿನ್ನ ಹೆಸರು ಕನವರಿಸುತ್ತ ಇದ್ದೇ
ಗಂಡು : ಒಂದು ಬಾರಿ ನಿನ್ನ ಕನಸು ನನಸು ಮಾಡಲೇ ಬಳುಕಿ ಗಿರಿ ಬಾಲೆ
ಹೆಣ್ಣು : ನನ್ನ ಎದೆಯ ಮಿಡಿತದಲ್ಲಿ ನಿನ್ನ ಮಿಲನವೋ ಸುಖದ ಸವಿಯಯ ಕೊನೆ ತೋರೋ
ಹಮ್ಮಿರಾ ಮನಸು ಕೊಡು ಮನಸು ಕೊಡು ಮನಸಿಗೆ ಇನಿಸು ಕೊಡು
ಗಂಡು : ಹೊಂಬಾಳೆ ಸೊಗಸು ಕೊಡು ಸೊಗಸಿಗೇ ಖಡಸು ಕೊಡು
ಹೆಣ್ಣು : ಜೋಕುಮಾರನೇ ಸೋಕುದಾರನೇ ಸೋಕಿಗೇ ಬಾರೋ ನಿನ್ನ ಪ್ರೀತಿಯ ತೋರೋ
ಗಂಡು : ಅಂಜು ಮಲ್ಲಿಗೇ ಬಾರೆ ಮೆಲ್ಲಗೇ ರಾತ್ರಿಗೆ ದೀಪ ಈ ನಿನ್ನ ಕಿರುನಗೆ
ಹೆಣ್ಣು : ತಂಪು ಗಾಳಿಗೇ ನಾ ನಡುಗುತ ಇದ್ದೇ ನಿನ್ನಾ ದಾರಿ ನಾ ಕಾಯುತ ಇದ್ದೇ
ಗಂಡು : ನಿನ್ನ ನಡುಗುವ ಸದ್ದಿಗೇ ಎದ್ದೇ ಎದ್ದರೆ ನೀನು ಕಣ್ಣೆದುರಿಗೇ ಇದ್ದೆ
ಹೆಣ್ಣು : ನನ್ನ ಎದೆಯ ಮಿಡಿತದಲ್ಲಿ ನಿನ್ನ ಮಿಲನವೋ ಸುಖದಾ ಸವಿಯ ಕೊನೆ ತೋರೋ
ಗಂಡು : ಒಂದು ಬಾರಿ ನಿನ್ನ ಕನಸು ನನಸು ಮಾಡಲೇ
ಹೆಣ್ಣು : ಹಮ್ಮಿರಾ ಮನಸು ಕೊಡು ಮನಸು ಕೊಡು ಮನಸಿಗೆ ಇನಿಸು ಕೊಡು
ಗಂಡು : ಹೊಂಬಾಳೆ ಸೊಗಸು ಕೊಡು ಸೊಗಸಿಗೇ ಖಡಸು ಕೊಡು
ಹೆಣ್ಣು : ಜೋಕುಮಾರನೇ ಸೋಕುದಾರನೇ ಸೋಕಿಗೇ ಬಾರೋ ನಿನ್ನ ಪ್ರೀತಿಯ ತೋರೋ
ಗಂಡು : ಅಂಜು ಮಲ್ಲಿಗೇ ಬಾರೆ ಮೆಲ್ಲಗೇ ರಾತ್ರಿಗೆ ದೀಪ ಈ ನಿನ್ನ ಕಿರುನಗೆ
--------------------------------------------------------------------------------------------------------------------------
ಪೋಲಿ ಹುಡುಗ (1990) - ಮುಗಿಯಿತೋ ಆ ಕಾಲವೂ ಉದಯಿಸಿತೋ ಹೊಸ ಯುಗವು
ಸಾಹಿತ್ಯ ಹಾಗು ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೋರಸ್
ಗಂಡು : ಮುಗಿಯಿತೋ ಆ ಕಾಲವು ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ
ಗಂಡು : ಕರಗಿತೋ ಕಾರ್ಮೋಡವೂ ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ

ಗಂಡು : ಧನಿಕರ ದರ್ಪಕೆ ಮರಣ ಕೋರಸ್ : ತರಲಿದೆ ಯುವ ಸೈನ್ಯ ಯುವ ಸೈನ್ಯ
ಗಂಡು : ಬಡವರ ಬಾಳಿಗೆ ಕಿರಣ ಕೋರಸ್ : ತರಲಿದೆ ಯುವ ಸೈನ್ಯ ಯುವ ಸೈನ್ಯ

ಗಂಡು : ಮಹಿಷಾಸುರ ಪೀಳಿಗೆ ನೂರನೇ ಬಾರಿ ದಬ್ಬಾಳಿಕೆ ನಡೆಸಿದೆ ತಲೆಯನೇ ಏರಿ
ದುರ್ಯೋಧನ ದುಷ್ಟರ ಬಳಗವು ಪುನಃ ದೌರ್ಜನ್ಯವ ನಡೆಸಿದೆ ಹಿಂದಿನ ತರಹ
ಏಳೇಳಿ ಯುವಕರೇ ಹೋರಾಡುವ ಕಲಿಗಳೇ
ರಾಕ್ಷಸರನೇ ಕಬಳಿಸಿ ದೇಶವನಾಳೋ ಪ್ರಭುಗಳೇ ಇದೇ ಯುವ ಶಕ್ತಿ ಇದೇ ನವ ಶಕ್ತಿ
ಗಂಡು : ಮುಗಿಯಿತೋ ಆ ಕಾಲವು ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ
ಗಂಡು : ಕರಗಿತೋ ಕಾರ್ಮೋಡವೂ ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ
ಗಂಡು : ಕರಗಿತೋ ಕಾರ್ಮೋಡವೂ ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ
ಗಂಡು : ದಾಹಕು ತಣ್ಣೀರಿಲ್ಲ ಈ ಜೀವ ಶವಗಳಿಗೇ ಕಂಬನಿ ಇಲ್ಲ
ಸಾವಿಗೂ ಕನಿಕರವಿಲ್ಲ ಈ ಆಸ್ತಿ ಪಂಜರಗಳ ಕಡೆ ನೋಡಿಲ್ಲ
ಹೋರಾಟ ನಿಲ್ಲದೂ ಈ ಅನ್ಯಾಯ ಸಾಗದು
ಆ ದೇವರೇ ಬಂದರೂ ಈ ಹೊಸ ಶಕ್ತಿ ಕುಗ್ಗದು ಇದೇ ಯುವ ಶಕ್ತಿ ಇದೇ ನವ ಶಕ್ತಿ
ಗಂಡು : ಮುಗಿಯಿತೋ ಆ ಕಾಲವು ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ
ಗಂಡು : ಕರಗಿತೋ ಕಾರ್ಮೋಡವೂ ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ
ಗಂಡು : ಕರಗಿತೋ ಕಾರ್ಮೋಡವೂ ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ
ಗಂಡು : ಧನಿಕರ ದರ್ಪಕೆ ಮರಣ ಕೋರಸ್ : ತರಲಿದೆ ಯುವ ಸೈನ್ಯ ಯುವ ಸೈನ್ಯ
ಗಂಡು : ಬಡವರ ಬಾಳಿಗೆ ಕಿರಣ ಕೋರಸ್ : ತರಲಿದೆ ಯುವ ಸೈನ್ಯ ಯುವ ಸೈನ್ಯ
ಗಂಡು : ಮುಗಿಯಿತೋ ಆ ಕಾಲವು ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ
ಗಂಡು : ಕರಗಿತೋ ಕಾರ್ಮೋಡವೂ ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ
ಗಂಡು : ಕರಗಿತೋ ಕಾರ್ಮೋಡವೂ ಕೋರಸ್ : ಉದಯಿಸಿತೋ ಹೊಸ ಯುಗವೂ ಹೊಸ ಯುಗವೂ
--------------------------------------------------------------------------------------------------------------------------
No comments:
Post a Comment