691. ಕಾಲೇಜು ರಂಗ (1976)

ಕಾಲೇಜು ರಂಗ ಚಿತ್ರದ ಹಾಡುಗಳು 
  1. ಉಪ್ಪಾ ತಿಂದ ಮ್ಯಾಲೇ ನೀರ ಕುಡಿಯಲೇ ಬೇಕು 
  2. ಕಾಲೇಜು ರಂಗದಲ್ಲಿ ಕಾಳಿಂಗ ಸರ್ಪ ಬಂದೈತೆ 
  3. ಭವ್ಯ ಭಾರತದ ಪರಂಪರೆಯಲ್ಲಿ 
ಕಾಲೇಜು ರಂಗ (1976) - ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೆ ಬೇಕು
ಸಂಗೀತ: ಟಿ.ಜಿ.ಲಿಂಗಪ್ಪ  ಸಾಹಿತ್ಯ: ವಿಜಯನಾರಸಿಂಹ   ಹಾಡಿದವರು: ಪಿ.ಬಿ.ಶ್ರೀನಿವಾಸ್, ರವಿ

ರವಿ : ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೇ ಬೇಕು
        ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೇ ಬೇಕು
ಪಿಬಿಎಸ್ :  ತಪ್ಪ ಮಾಡಿದ ಮ್ಯಾಲೆ, ಶಿವನೇ, ಹೌದಪ್ಪ,
               ತಪ್ಪ ಮಾಡಿದ ಮ್ಯಾಲೆ ಶಿಕ್ಷೆ ಅನುಭವಿಸಲೇ ಬೇಕು
ರವಿ : ಚೆಲುವಯ್ಯ ಚೆಲುವೊ ತಾನಿ ತಂದಾನ
ಪಿಬಿಎಸ್ : ರಂಗಯ್ಯ ರಂಗಸ್ವಾಮಿ ತಾನಿ ತಂದಾನ
ರವಿ : ಚೆಲುವಯ್ಯ ಚೆಲುವೊ ತಾನಿ ತಂದಾನ
ಪಿಬಿಎಸ್ : ರಂಗಯ್ಯ ರಂಗಸ್ವಾಮಿ ತಾನಿ ತಂದಾನ
ಇಬ್ಬರು : ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೇ ಬೇಕು

ರವಿ : ಉಂಡ ಮೆನೆಗೆ ಎಂದೂ ಎರಡ ಭಗೆಯಲೇ ಬಾರದು
ಪಿಬಿಎಸ್ : ಗುಂಡ ಕಲ್ಲಿಗೆ ಎಣ್ಣೆ ಒತ್ತಿ ಎರೆಯಲೇ  ಬಾರದು
ರವಿ : ಇದು ನಿಮಗೂ ಗೊತ್ತು,
ಪಿಬಿಎಸ್ :  ಅದು ನಮಗೂ ಗೊತ್ತು
ರವಿ : ನಿಮಗೂ ಗೊತ್ತು,   
ಪಿಬಿಎಸ್ :  ನಮಗೂ ಗೊತ್ತು
ಇಬ್ಬರು : ಗೊತ್ತಿದ್ದೂ ಮಡ್ತೀವಿ ತಪ್ಪು
            ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೇ ಬೇಕು

ರವಿ : ತೋಳ ಕುರಿಯ ಕಾಯಿ ಅಂತ ಹೇಳಲೇ  ಬಾರದು
ಪಿಬಿಎಸ್ : ಗುಳ್ಳೆ ನರಿಯ ನಂಬಿ ನೆಂಟ ಬೆಳಸಲೇ  ಬಾರದು
ರವಿ : ಇದು ನಿಮಗೂ  ಗೊತ್ತು,
ಪಿಬಿಎಸ್ : ಹೌದು ನಮಗೆ ಗೊತ್ತು
ರವಿ : ನಿಮಗೂ ಗೊತ್ತು,
ಪಿಬಿಎಸ್ : ನಮಗೂ ಗೊತ್ತು
ಇಬ್ಬರು : ಗೊತ್ತಿದ್ದೂ ಮಡ್ತೀವಿ ತಪ್ಪು
            ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೇ ಬೇಕು

ರವಿ : ಹುಲಿಯ ಸಂಗವ ಮಾಡಿ ಉರುಗೇ ಕರೆಯಲೆ ಬಾರದು
ಪಿಬಿಎಸ್ : ಇಲಿಯ ಉಗ್ರಾಣದೊಳಗೆ ಎಂದೂ ಸೇರಿಸ ಬಾರಾದು
ರವಿ : ಇದು ನಿಮಗೂ ಗೊತ್ತು,
ಪಿಬಿಎಸ್ : ಅದು ನಮಗೂ ಗೊತ್ತು
ರವಿ : ನಿಮಗೂ ಗೊತ್ತು,
ಪಿಬಿಎಸ್ : ನಮಗೂ ಗೊತ್ತು
ಇಬ್ಬರು : ಗೊತ್ತಿದ್ದೂ ಮಡ್ತೀವಿ ತಪ್ಪೇ ತಪ್ಪು
             ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೇ ಬೇಕು
ಪಿಬಿಎಸ್ : ತಪ್ಪ ಮಾಡಿದ ಮ್ಯಾಲೆ... ಹ್ಹೂಂಹ್ಹೂಂಹ್ಹೂಂ ರಂಗಸ್ವಾಮೀ.. (ಏನಪ್ಪಾ )
               ತಪ್ಪ ಮಾಡಿದ ಮ್ಯಾಲೆ.ಶಿಕ್ಷೆ ಅನುಭವಿಸಲು ಬೇಕು
ರವಿ : ಚೆಲುವಯ್ಯ ಚೆಲುವೊ ತಾನಿ ತಂದಾನ
ಪಿಬಿಎಸ್ : ರಂಗಯ್ಯ ರಂಗಸ್ವಾಮಿ ತಾನಿ ತಂದಾನ
ರವಿ : ಚೆಲುವಯ್ಯ ಚೆಲುವೊ ತಾನಿ ತಂದಾನ
ಪಿಬಿಎಸ್ : ರಂಗಯ್ಯ ರಂಗಸ್ವಾಮಿ ತಾನಿ ತಂದಾನ
ಇಬ್ಬರು : ಉಪ್ಪ ತಿಂದಾ ಮ್ಯಾಲೆ ನೀರ ಕುಡಿಯಲೆ ಬೇಕು
             ನೀರ ಕುಡಿಯಲೆ ಬೇಕು ನೀರ ಕುಡಿಯಲೆ ಬೇಕು
--------------------------------------------------------------------------------------------------------------------------

ಕಾಲೇಜು ರಂಗ (1976) - ಕಾಲೇಜು ರಂಗದಲ್ಲಿ
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಪಿ.ಬಿ.

ಕಾಲೇಜು ರಂಗದಲ್ಲಿ ಕಾಳಿಂಗ ಸರ್ಪ ಬಂದೈತೇ.......
ಕಾಲೇಜು ರಂಗದಲ್ಲಿ ಕಾಳಿಂಗ ಸರ್ಪ ಬಂದೈತೇ.......
ಕಾಪಾಡು ಕೃಷ್ಣಾ ಕಾಪಾಡು ಈ ಕಾಂಪೌಡಿಗೇ ಇಂದೇ ದಯಮಾಡು
ಕಾಂಪೌಡಿಗೇ ಇಂದೇ ದಯಮಾಡು
(ಹರೇ ಕೃಷ್ಣಾ ಹರೇ ಕೃಷ್ಣಾ)

ಒಬ್ಬ ಶಕುನಿಗೇ ಕೋಟಿ ಜನಗಳು ನಾಶವಾಗಲೂ ಮಹಾಭಾರತದ ಕಥೆಯಲ್ಲಿ
(ಹರೇ ರಾಮಾ.. ಹರೇ ಕೃಷ್ಣಾ )
ನೂರು ಶಕುನಿಗಳೂ ತುಂಬಿ ಹೋದರೇ ಗತಿಯೇನೂ ಈ ಕಾಲೇಜು ರಂಗದಲ್ಲಿ
(ಹರೇ ಕೃಷ್ಣಾ )
ಕಾಲೇಜು ರಂಗದಲ್ಲಿ ಕಾಳಿಂಗ ಸರ್ಪ ಬಂದೈತೇ....... 

ಜ್ಞಾನ ಜ್ಯೋತಿಯ ಬೆಳಗುವ ಗುಡಿಯಲಿ ಅಂಧಕಾರವ ತುಂಬುವರೂ... 
(ಹರೇ ರಾಮಾ.. ಹರೇ ಕೃಷ್ಣಾ )
ವಿದ್ಯೆಯ ನಂದನ ವನವನು ದಹಿಸಿ ಅವಿವೇಕದಾ...  ಅರಣ್ಯವ ಬೆಳೆಸುವರೂ 
(ಹರೇ ಕೃಷ್ಣಾ )
ಕಾಲೇಜು ರಂಗದಲ್ಲಿ ಕಾಳಿಂಗ ಸರ್ಪ ಬಂದೈತೇ....... 

ಜಾತಿ ಮತಗಳ ಬೇಧ ಭಾವದ ಕಾಳ್ಗಿಚ್ಚನ್ನೇ ಹಚ್ಚುವರೂ 
(ಹರೇ ರಾಮಾ.. ಹರೇ ಕೃಷ್ಣಾ  ಹರೇ ರಾಮಾ.. ಹರೇ ಕೃಷ್ಣಾ )
ಭ್ರಷ್ಟಾಚಾರವೇ ಬಾಯತೆರೆದಿರಲೂ ಬೃಹ್ಮನ ಮಡದಿಗೆ ಬೆಲೆ ಎಲ್ಲೀ... 
ಈ ಕಾಲೇಜು ರಂಗದಲ್ಲಿ 
(ಹರೇ ಕೃಷ್ಣಾ )
ಕಾಲೇಜು ರಂಗದಲ್ಲಿ ಕಾಳಿಂಗ ಸರ್ಪ ಬಂದೈತೇ....... 
ಕಾಪಾಡು ಕೃಷ್ಣಾ ಕಾಪಾಡು ಈ ಕಾಂಪೌಡಿಗೇ ಇಂದೇ ದಯಮಾಡು
ಕಾಂಪೌಡಿಗೇ ಇಂದೇ ದಯಮಾಡು
(ಹರೇ ಕೃಷ್ಣಾ ಹರೇ ಕೃಷ್ಣಾ)
--------------------------------------------------------------------------------------------------------------------------

ಕಾಲೇಜು ರಂಗ (1976) - ಭವ್ಯ ಭಾರತದ ಪರಂಪರೆಯಲ್ಲಿ ಗುರುಕುಲವೆಂಬುದು
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಆರ್.ಎಸ್.ಜಯಗೋಪಾಲ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ 

ಗಂಡು : ಭವ್ಯ ಭಾರತದ ಪರಂಪರೆಯಲ್ಲಿ ಗುರುಕುಲವೆಂಬುದು ಒಂದಿತ್ತು
            ಗುರು ಶಿಷ್ಯರುಗಳ ಸಂಬಂಧದಲಿ ಭಕ್ತಿ ಗೌರವ ತುಂಬಿತ್ತು 
           ಅದು ಅಂದಿನ ಕಾಲ ಋಷಿಮುನಿಗಳ ಕಾಲ 
ಇಬ್ಬರು : ಅದು ಅಂದಿನ ಕಾಲ ಋಷಿಮುನಿಗಳ ಕಾಲ            
            ಭವ್ಯ ಭಾರತದ ಪರಂಪರೆಯಲ್ಲಿ ಗುರುಕುಲವೆಂಬುದು ಒಂದಿತ್ತು
            ಗುರುಕುಲವೆಂಬುದು ಒಂದಿತ್ತು 

ಹೆಣ್ಣು : ಗುರು ಶಿಷ್ಯರಿಗೇ ಬೇಧವೇ ಇಲ್ಲಾ...  ಭಕ್ತಿ ಗೌರವ ಪತ್ತೇ ಇಲ್ಲಾ 
          ಗುರು ಶಿಷ್ಯರಿಗೇ ಬೇಧವೇ ಇಲ್ಲಾ...  ಭಕ್ತಿ ಗೌರವ ಪತ್ತೇ ಇಲ್ಲಾ 
ಗಂಡು : ಶಕ್ತಿ ಪ್ರದರ್ಶಕ ಶಿಷ್ಯರೇ ಎಲ್ಲಾ ಯುಯುಕ್ತಿ ಮಾತಿನ ಗುರುಗುಳೇ ಎಲ್ಲಾ 
ಇಬ್ಬರು : ಇದು ಟ್ವೆಂಟಿಯತ್ತ ಸೆಂಚುರೀ ಇದು ಇದು ಟ್ವೆಂಟಿಯತ್ತ ಸೆಂಚುರೀ
            ಭವ್ಯ ಭಾರತದ ಪರಂಪರೆಯಲ್ಲಿ ಗುರುಕುಲವೆಂಬುದು ಒಂದಿತ್ತು
            ಗುರುಕುಲವೆಂಬುದು ಒಂದಿತ್ತು             

ಹೆಣ್ಣು : ವಿದ್ಯಾ ದಾನವೇ ದೇಶ ಸೇವೆಯೇ ಅಂದಿನ ಗುರುಗಳ ಲಕ್ಷ್ಯ 
ಗಂಡು : ತಿಂಗಳ ಸಂಬಳ ಅಹ್ಹಹ್ಹ ಜೊತೆಗೇ ಗಿಂಬಳ          
            ತಿಂಗಳ ಸಂಬಳ ಜೊತೆಗೇ ಗಿಂಬಳ  ಇಂದಿನ ಗುರುವಿನ ಪಕ್ಷ 
ಇಬ್ಬರು : ಇದು ಟ್ವೆಂಟಿಯತ್ತ ಸೆಂಚುರೀ ಇದು ಇದು ಟ್ವೆಂಟಿಯತ್ತ ಸೆಂಚುರೀ
            ಭವ್ಯ ಭಾರತದ ಪರಂಪರೆಯಲ್ಲಿ ಗುರುಕುಲವೆಂಬುದು ಒಂದಿತ್ತು
            ಗುರುಕುಲವೆಂಬುದು ಒಂದಿತ್ತು             

ಹೆಣ್ಣು : ಗುರುವೇ ದೈವ ಎಂಬ ನಂಬಿಕೇ ಅಂದಿನ ಶಿಷ್ಯರ ಗುಟ್ಟೂ 
          ಗುರುವೇ ದೈವ ಎಂಬ ನಂಬಿಕೇ ಅಂದಿನ ಶಿಷ್ಯರ ಗುಟ್ಟೂ 
ಗಂಡು : ಫೀಸೂ ಚೆಲ್ಲುವಾ ಶಿಷ್ಯರ ಕೈಲಿದೇ ಇಂದಿನ ಗುರುಗಳ ಜುಟ್ಟೂ 
ಇಬ್ಬರು : ಇದು ಟ್ವೆಂಟಿಯತ್ತ ಸೆಂಚುರೀ ಇದು ಇದು ಟ್ವೆಂಟಿಯತ್ತ ಸೆಂಚುರೀ
            ಭವ್ಯ ಭಾರತದ ಪರಂಪರೆಯಲ್ಲಿ ಗುರುಕುಲವೆಂಬುದು ಒಂದಿತ್ತು
            ಗುರುಕುಲವೆಂಬುದು ಒಂದಿತ್ತು             
.
ಹೆಣ್ಣು : ನೀತಿ ನಿಯಮ ಶಿಸ್ತು ಸಂಯಮ ಅಂದಿನ ಗುರುಗಳ ನೀತಿ 
ಗಂಡು : ಗುಂಡಿನ ಏಟು..  ಚಾಕುವಿನ ಏಟು...   
            ಗುಂಡಿನ ಏಟು..  ಚಾಕುವಿನ ಏಟು...  ಇಂದಿನ ಶಿಷ್ಯರ ನೀತಿ 
ಇಬ್ಬರು : ಇದು ಟ್ವೆಂಟಿಯತ್ತ ಸೆಂಚುರೀ ಇದು ಇದು ಟ್ವೆಂಟಿಯತ್ತ ಸೆಂಚುರೀ
            ಭವ್ಯ ಭಾರತದ ಪರಂಪರೆಯಲ್ಲಿ ಗುರುಕುಲವೆಂಬುದು ಒಂದಿತ್ತು
            ಗುರುಕುಲವೆಂಬುದು ಒಂದಿತ್ತು             

ಗಂಡು : ಕೊಟ್ಟರೇ ಡೊನೇಷನ್ ಕೋಡುವೇವು ಪ್ರಮೋಷನ್ ಈ ವಿದ್ಯಾಸಂಸ್ಥೆಯ ಮಂತ್ರ.. ಅಹ್ಹಹ್ಹಹ್ಹಹ್ಹಾ 
ಹೆಣ್ಣು : ಆಗಿದೇ ಇಂದೂ ಈ ಕಾಲೇಜೂ ಡಿಗ್ರೀ ನೀಡುವ ಯಂತ್ರ ಬರೀ ಡಿಗ್ರೀ ನೀಡುವ ಯಂತ್ರ  
ಇಬ್ಬರು : ಇದು ಟ್ವೆಂಟಿಯತ್ತ ಸೆಂಚುರೀ ಇದು ಇದು ಟ್ವೆಂಟಿಯತ್ತ ಸೆಂಚುರೀ
            ಭವ್ಯ ಭಾರತದ ಪರಂಪರೆಯಲ್ಲಿ ಗುರುಕುಲವೆಂಬುದು ಒಂದಿತ್ತು
            ಗುರು ಶಿಷ್ಯರುಗಳ ಸಂಬಂಧದಲಿ ಭಕ್ತಿ ಗೌರವ ತುಂಬಿತ್ತು 
            ಅದು ಅಂದಿನ ಕಾಲ ಋಷಿಮುನಿಗಳ ಕಾಲ 
            ಅದು ಅಂದಿನ ಕಾಲ ಋಷಿಮುನಿಗಳ ಕಾಲ            
--------------------------------------------------------------------------------------------------------------------------

No comments:

Post a Comment