693. ಪಕ್ಕಾ ಕಳ್ಳ (1979)

ಪಕ್ಕಾ ಕಳ್ಳ ಚಿತ್ರದ ಹಾಡುಗಳು
  1. ನಿನ್ನಯ ಅಂದ ನನ್ನೆದೆ ಮೀಟಿ
  2. ಶ್ರೀ ಕೃಷ್ಣ ಪರಮಾತ್ಮನೇ
  3. ಯಾರೋ ನೀನೂ ಯಾರೋ ನಾನೂ
  4. ಯೌವ್ವನ ಹೂವಾಗಿ
ಪಕ್ಕಾ ಕಳ್ಳ (1979) - ನಿನ್ನಯ ಅಂದ ನನ್ನೆದೆ ಮೀಟಿ
ಸಂಗೀತ: ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ :  ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ನಿನ್ನಯ ಅಂದ ನನ್ನೆದೆ ಮೀಟಿ ಮನಸನು ಇಂದು ಮಾಡಿದೆ ಲೂಟಿ
            ನಾನು ನಿನ್ನಲ್ಲಿ ನೀನು ನನ್ನಲ್ಲಿ
ಹೆಣ್ಣು : ನಿನ್ನಯ ಅಂದ ನನ್ನೆದೆ ಮೀಟಿ ಮನಸನು ಇಂದು ಮಾಡಿದೆ ಲೂಟಿ
         ನಾನು ನಿನ್ನಲ್ಲಿ ನೀನು ನನ್ನಲ್ಲಿ

ಹೆಣ್ಣು : ಪ್ರೇಮ ಪ್ರೀತಿ ಅಂದರೇನು ಹಿಂದೆ ಎಂದೂ ಕಾಣೆ ನಾನು
          ಎಲ್ಲೋ ಹೇಗೋ ಬಂದ ನೀನು ಒಲವ ತೋರಿದೆ
ಗಂಡು : ಮುಗುಳು ನಗೆಯ ಮೋಡಿಯಲ್ಲಿ ಮುಗ್ಧ ಮನದ ಮಾತಿನಲ್ಲಿ
            ಸರಳ ಸ್ನೇಹ ಧಾರೆಯಲ್ಲಿ ನಾನು ತೇಲಿದೆ
ಹೆಣ್ಣು : ಹೊಸ ಹೊಸ ಪರಿಚಯ
ಗಂಡು : ಸವಿ ಸವಿ ಈ ಅನುಭವ ನಾನು ನಿನ್ನಲ್ಲಿ ನೀನು ನನ್ನಲ್ಲಿ
ಹೆಣ್ಣು : ನಿನ್ನಯ ಅಂದ ನನ್ನೆದೆ ಮೀಟಿ
ಗಂಡು : ಮನಸನು ಇಂದು ಮಾಡಿದೆ ಲೂಟಿ..ಆಆಆ...
ಹೆಣ್ಣು : ನಾನು ನಿನ್ನಲ್ಲಿ ಆಹಾ.. ನೀನು ನನ್ನಲ್ಲಿ

ಗಂಡು : ನಾನು ನೀನು ಒಂದು ಸೇರಿ ಹಕ್ಕಿಯಂತೆ ಮೇಲೆ ಹಾರಿ
           ಮಳೆಯಬಿಲ್ಲ ಮೇಲೆ ಜಾರಿ ಕೂಡಿ ಆಡುವಾ...ಆಆಆ...
ಹೆಣ್ಣು : ಗಾಳಿ ಗಂಧ ಸೇರಿದಂತೆ ದೇಹ ಪ್ರಾಣ ಕೂಡಿದಂತೆ
           ಶೃತಿಯು ಕಲೆತ ಹಾಡಿನಂತೆ ಸೇರಿ ಬಾಳುವ
ಗಂಡು : ಅನುದಿನ ರಸಮಯ
ಹೆಣ್ಣು : ಒಲವಿನ ಈ ಕವಿತೆಯು ನಾನು ನಿನ್ನಲ್ಲಿ ನೀನು ನನ್ನಲ್ಲಿ
ಗಂಡು : ನಿನ್ನಯ ಅಂದ, (ನಿನ್ನಯ ಅಂದ) ನನ್ನೆದೆ ಮೀಟಿ, (ನನ್ನೆದೆ ಮೀಟಿ)
           ಮನಸನು ಇಂದು, (ಮನಸನು ಇಂದು) ಮಾಡಿದೆ ಲೂಟಿ, (ಮಾಡಿದೆ ಲೂಟಿ)
          ನಾನು ನಿನ್ನಲ್ಲಿ ಆಆಆ. ನೀನು ನನ್ನಲ್ಲಿ...
ಹೆಣ್ಣು : ನಾನು ನಿನ್ನಲ್ಲಿ ಆಆಆ. ನೀನು ನನ್ನಲ್ಲಿ
--------------------------------------------------------------------------------------------------------------------------

ಪಕ್ಕಾ ಕಳ್ಳ (1979) - ಶ್ರೀ ಕೃಷ್ಣ ಪರಮಾತ್ಮನೇ
ಸಂಗೀತ: ಸತ್ಯಂ ಸಾಹಿತ್ಯ : ವಿಜಯನಾರಸಿಂಹ  ಗಾಯನ : ಎಸ್.ಪಿ.ಬಿ., ಪಿ.ಬಿ.ಎಸ್.

ಎಸ್ಪಿ : ಓಓಓಓಓ ... ಆಆಆಅ (ಓಓಓಓಓ ... )
         ಶ್ರೀ ಕೃಷ್ಣ ಪರಮಾತ್ಮನೇ...  ಕಳ್ಳರ ಕಳ್ಳ ಇವನೇ .. ಓಓಓ
         ಎಲ್ಲರ ಬಣ್ಣ ಬಲ್ಲವ...ಆಆಆ... ಬಗೆ ಬಗೆ ವೇಷ ಹಾಕುವ ಹೊಯ್
ಪಿಬಿಎಸ್ :  ಶ್ರೀ ಕೃಷ್ಣ ಪರಮಾತ್ಮನೇ...  ಕಳ್ಳರ ಕಳ್ಳ ಇವನೇ .. ಓಓಓ
                ಎಲ್ಲರ ಬಣ್ಣ ಬಲ್ಲವ...ಆಆಆ... ಬಗೆ ಬಗೆ ವೇಷ ಹಾಕುವ ಹೊಯ್

ಎಸ್ಪಿ : ಅರೇ ಚೋರ ಗುರು ಇವನೇ ಎಲ್ಲೆಲ್ಲೂ ಇವನ ಮಾಯೇ
          ಅರೇ ಚೋರ ಗುರು ಇವನೇ ಎಲ್ಲೆಲ್ಲೂ ಇವನ ಮಾಯೇ
ಪಿಬಿಎಸ್ :  ಎಲ್ಲಾ ಬಲ್ಲ ಇವನ..ಆಆಆ
                ಎಲ್ಲಾ ಬಲ್ಲ ಇವನ..ಆಆಆ ಒಳಗುಟ್ಟು ಏನೋ ಅರಿಯೇ 
ಎಸ್ಪಿ : ಗೊಂಬೆ ಆಟವೆಲ್ಲ ಆಡೋ ಕೃಷ್ಣ ಪಕ್ಕಾ ಕಳ್ಳ 
ಪಿಬಿಎಸ್ :  ಶ್ರೀ ಕೃಷ್ಣ ಪರಮಾತ್ಮನೇ...  ಕಳ್ಳರ ಕಳ್ಳ ಇವನೇ .. ಓಓಓ
ಎಸ್ಪಿ : ಎಲ್ಲರ ಬಣ್ಣ ಬಲ್ಲವ...ಆಆಆ... ಬಗೆ ಬಗೆ ವೇಷ ಹಾಕುವ ಹೊಯ್

ಪಿಬಿಎಸ್ :  ಆಹಾ,,, ಇವನ ಭಕ್ತಿ ಮಾರ್ಗ ಅದರಿಂದ ನಮಗೇ ಸ್ವರ್ಗ 
                ಆಹಾ,,, ಇವನ ಭಕ್ತಿ ಮಾರ್ಗ ಅದರಿಂದ ನಮಗೇ ಸ್ವರ್ಗ
ಎಸ್ಪಿಬಿ : ಸೂತ್ರಧಾರಿ ಕೃಷ್ಣ .... ಆಆಆ..
            ಸೂತ್ರಧಾರಿ ಕೃಷ್ಣ ಅವನಾಟವೇನೋ ಕಾಣೇ 
ಇಬ್ಬರು : ಕಂಡು ಕಾಣದಂತೆ ಕಾಯೋ ಕೃಷ್ಣ ಪಕ್ಕಾ ಕಳ್ಳ
ಎಸ್ಪಿ : ಶ್ರೀ ಕೃಷ್ಣ ಪರಮಾತ್ಮನೇ...  ಕಳ್ಳರ ಕಳ್ಳ ಇವನೇ ..
ಪಿಬಿಎಸ್ : ಎಲ್ಲರ ಬಣ್ಣ ಬಲ್ಲವ...ಆಆಆ... ಬಗೆ ಬಗೆ ವೇಷ ಹಾಕುವ
ಕೋರಸ್ : ರಾಧೇ ಶ್ಯಾಮ ರಾಧೇ ಶ್ಯಾಮ ರಾಧೇ ಕೃಷ್ಣ ಗೋಪಾಲ ಕೃಷ್ಣ
                ಹೇಹೇಹೇ .... ಆಆಆ...
ಎಸ್ಪಿ : ಶ್ರೀ ಕೃಷ್ಣ ಪರಮಾತ್ಮನೇ...  ಕಳ್ಳರ ಕಳ್ಳ ಇವನೇ ..
ಪಿಬಿಎಸ್ : ಎಲ್ಲರ ಬಣ್ಣ ಬಲ್ಲವ...ಆಆಆ... ಬಗೆ ಬಗೆ ವೇಷ ಹಾಕುವ

--------------------------------------------------------------------------------------------------------------------------

ಪಕ್ಕಾ ಕಳ್ಳ (1979) - ಯೌವ್ವನ ಹೂವಾಗಿ
ಸಂಗೀತ: ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ, ಕೋರಸ್ 

(ಯ್ಯಾ..ಯ್ಯಾ... ಉಹ್ಹೂ ಉಹ್ಹೂ ಉಹ್ಹೂ )
ಯೌವ್ವನ ಹೂವಾಗಿ ಆಸೆಯೂ ಹಣ್ಣಾಗಿ
ಕೆಂಪಗೆ ಮಾಗಿದೆ ಬಳಕುತ ಬಾಗಿದೆ ಕಾದಿದೆ ನಿನಗಾಗಿ
ಯೌವ್ವನ ಹೂವಾಗಿ ಆಸೆಯೂ ಹಣ್ಣಾಗಿ
ಕೆಂಪಗೆ ಮಾಗಿದೆ ಬಳಕುತ ಬಾಗಿದೆ ಕಾದಿದೆ ನಿನಗಾಗಿ
ಯೌವ್ವನ ಹೂವಾಗಿ

ಬೇಲಿಯೇ ಇಲ್ಲದ ತೋಟವು ಇಲ್ಲಿದೇ ಧೈರ್ಯದೇ ಬಾ ಮುಂದಕ್ಕೆ
ಬಾಗಿಲೇ ಇಲ್ಲದ ಸುಖದ ಅರಮನೆ ಕರೆದಿದೆ ರಸಮಂಚಕೆ.. ಆಅಅಅಅ
ಬೇಲಿಯೇ ಇಲ್ಲದ ತೋಟವು ಇಲ್ಲಿದೇ ಧೈರ್ಯದೇ ಬಾ ಮುಂದಕ್ಕೆ
ಬಾಗಿಲೇ ಇಲ್ಲದ ಸುಖದ ಅರಮನೆ ಕರೆದಿದೆ ರಸಮಂಚಕೆ
ಕೋರಿಕೆ ಎಲ್ಲಾ ತೀರಿಸಬಲ್ಲ ಮಂತ್ರವೂ ನೋಡಿಲ್ಲಿದೆ
ಯೌವ್ವನ ಹೂವಾಗಿ ಆಸೆಯೂ ಹಣ್ಣಾಗಿ
ಕೆಂಪಗೆ ಮಾಗಿದೆ ಬಳಕುತ ಬಾಗಿದೆ ಕಾದಿದೆ ನಿನಗಾಗಿ
ಯೌವ್ವನ ಹೂವಾಗಿ

ರಾತ್ರಿಯ ರಂಗು ಬೆರೆಯುವ ಗುಂಗು ನೋಡುವ ಕಣ್ಣಲ್ಲಿದೇ
ದಾಹದ ಹೊತ್ತು ಮಧುವಿನ ಮತ್ತು ಹೀರುವ ಬಾಯಲ್ಲಿದೇ... ಹೇಹೇಹೇ..
ರಾತ್ರಿಯ ರಂಗು ಬೆರೆಯುವ ಗುಂಗು ನೋಡುವ ಕಣ್ಣಲ್ಲಿದೇ
ದಾಹದ ಹೊತ್ತು ಮಧುವಿನ ಮತ್ತು ಹೀರುವ ಬಾಯಲ್ಲಿದೇ
ಬಯಕೆಯ ವೇಗ ತೀರಿಸು ಬೇಗ ವಿರಹವು ಮುಳ್ಳಾಗಿದೆ
ಯೌವ್ವನ ಹೂವಾಗಿ ಆಸೆಯೂ ಹಣ್ಣಾಗಿ
ಕೆಂಪಗೆ ಮಾಗಿದೆ ಬಳಕುತ ಬಾಗಿದೆ ಕಾದಿದೆ ನಿನಗಾಗಿ
ಯೌವ್ವನ ಹೂವಾಗಿ
--------------------------------------------------------------------------------------------------------------------------

ಪಕ್ಕಾ ಕಳ್ಳ (1979) - ಯಾರೋ ನೀನು ಯಾರೋ ನಾನೂ
ಸಂಗೀತ: ಸತ್ಯಂ ಸಾಹಿತ್ಯ : ವಿಜಯನಾರಸಿಂಹ  ಗಾಯನ : ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಆಆಹ್..  ಹೇಯ್... ಹಹಹಹಹಹ್ಹಹಹ
ಹೆಣ್ಣು : ಆಆಹ್ ಯಾರೋ ನೀನೂ ಯಾರೋ ನಾನೂ
          ಒಲವೂ ಮೂಡಿದೆ ಇದರಿಂದ ಕೂಡಿದೆ ಹೊಸ ಮತ್ತು ಏರಿದೆ
ಗಂಡು : ಆಆಹ್ ಯಾರೋ ನೀನೂ ಯಾರೋ ನಾನೂ
          ಒಲವೂ ಮೂಡಿದೆ ಇದರಿಂದ ಕೂಡಿದೆ ಹೊಸ ಮತ್ತು ಏರಿದೆ

ಹೆಣ್ಣು  : ಆಆಆ.. ಆಆಆ.. 
ಗಂಡು : ಹ್ಹಾ.. ಮನಸೆಲ್ಲ ಇಲ್ಲೇ ಗುರಿ ಎಲ್ಲ ಅಲ್ಲೇ ನೀನು ನನಗಾಗಿ ಬಲ್ಲೆ
ಹೆಣ್ಣು : ಮರೆ ಮೋಸದಿಂದ ಒಳಸಂಚು ಹೂಡಿ ನಿನ್ನ ಸೇರೆ ಹಾಕಬಲ್ಲೇ
ಗಂಡು : ಹ್ಹಾ.. ಮನಸೆಲ್ಲ ಇಲ್ಲೇ ಗುರಿ ಎಲ್ಲ ಅಲ್ಲೇ ನೀನು ನನಗಾಗಿ ಬಲ್ಲೆ
ಹೆಣ್ಣು : ಮರೆ ಮೋಸದಿಂದ ಒಳಸಂಚು ಹೂಡಿ ನಿನ್ನ ಸೇರೆ ಹಾಕಬಲ್ಲೇ
ಗಂಡು : ನಿನ್ನ ನನ್ನ ಮನ ಮನ ಒಂದೇ ಆಗಿದೇ
ಹೆಣ್ಣು : ಮತ್ತಿನಲ್ಲೂ ಮುತ್ತಿನಂಥ ಮಾತ ಹೇಳಿದೆ
ಗಂಡು : ಆಆಹ್ ಯಾರೋ ನೀನೂ ಯಾರೋ ನಾನೂ ಒಲವೂ ಮೂಡಿದೆ
ಹೆಣ್ಣು : ಇದರಿಂದ ಕೂಡಿದೆ
ಇಬ್ಬರು : ಹೊಸ ಮತ್ತು ಏರಿದೆ

ಗಂಡು : ಆಆಆ.. ಆಆಆ.. 
ಹೆಣ್ಣು : ನಗೆ ಮಿಂಚು ಚೆಲ್ಲಿ ಸಿಡಿಲಾಗಬಲ್ಲೆ ಪ್ರೀತಿ ಹುಡುಗಾಟವಲ್ಲ
ಗಂಡು : ಬಿರುಗಾಳಿಯಂಥ ಎದುರಾಳಿ ಬರಲಿ ನಿನ್ನ ಬಿಡಲಾರೆ ನಲ್ಲೆ
ಹೆಣ್ಣು : ನಗೆ ಮಿಂಚು ಚೆಲ್ಲಿ ಸಿಡಿಲಾಗಬಲ್ಲೆ ಪ್ರೀತಿ ಹುಡುಗಾಟವಲ್ಲ
ಗಂಡು : ಬಿರುಗಾಳಿಯಂಥ ಎದುರಾಳಿ ಬರಲಿ ನಿನ್ನ ಬಿಡಲಾರೆ ನಲ್ಲೆ
ಹೆಣ್ಣು : ಹಗೆ ನಗೆ ಬಗೆ ಬಗೆ ನೋಡು ಅಲ್ಲಿದೇ        
ಗಂಡು : ಜಗ ಎಲ್ಲ ಗೆಲ್ಲೋ ನಂಗೆ ಎಲ್ಲಾ ಗೊತ್ತಿದೆ
ಹೆಣ್ಣು : ಆಆಹ್ ಯಾರೋ ನೀನೂ ಯಾರೋ ನಾನೂ ಒಲವೂ ಮೂಡಿದೆ
ಗಂಡು : ಇದರಿಂದ ಕೂಡಿದೆ
ಇಬ್ಬರು : ಹೊಸ ಮತ್ತು ಏರಿದೆ
--------------------------------------------------------------------------------------------------------------------------

No comments:

Post a Comment