706. ಕಂಠಿ (೨೦೦೪)


ಕಂಠಿ ಚಲನಚಿತ್ರದ ಹಾಡುಗಳು 
  1. ಜಿನು ಜಿನುಗೋ ಜೇನ ಹನಿ
  2. ಬಾನಿಂದ ಬಾ ಚಂದಿರ,
  3. ಗಣಪತಿ ಬಪ್ಪ ಮೋರಯಾ 
  4. ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಹೋ
  5. ಉಸ್ಸಾರು ಉಸ್ಸಾರು, ಎಲ್ಲರೂ ಉಸ್ಸಾರು ಓಯ್...
ಕಂಠಿ (೨೦೦೪) - ಜಿನು ಜಿನುಗೋ ಜೇನ ಹನಿ
ಸಂಗೀತ : ಗುರುಕಿರಣ    ಸಾಹಿತ್ಯ : ಕವಿರಾಜ ಗಾಯನ : ಎಸ್ಪಿ. ಬಾಲು, ಚಿತ್ರಾ

ಗಂ:  ಜಿನು ಜಿನುಗೋ ಜೇನ ಹನಿ,ಮಿನು ಮಿನುಗೋ ತುಟಿಗೇ ಇಬ್ಬನಿ
ಹೆಂ:  ಜಿನು ಜಿನುಗೋ ಜೇನ ಹನಿ,ಮಿನು ಮಿನುಗೋ ತುಟಿಗೇ ಇಬ್ಬನಿ
ಗಂ:  ಈ ನಯನದಲ್ಲಿ ಸಂಗಾತಿ ಸಂಪ್ರೀತಿ ನಲಿನಲಿ ನಲಿಯುತಿದೆ
ಹೆಂ:  ಜಿನು ಜಿನುಗೋ ಜೇನ ಹನಿ,ಮಿನು ಮಿನುಗೋ ತುಟಿಗೇ ಇಬ್ಬನಿ ಈ ಈ ಈ ಈ

ಹೆಂ:  ಒಮ್ಮೊಮ್ಮೆ ನಾನೇ ಕೇಳೋದು ನನ್ನೇ ,ನೀ ಸೂರ್ಯನ ಬಂದುವೇ
ಗಂ:  ನಿನ್ನನ್ನು ಕಂಡೆ ನಾನಂದು ಕೊಂಡೆ ನೀ ಚಂದ್ರನಾ ತಂಗಿಯೇ
ಹೆಂ:  ಆ ಮಿಂಚು ಕೊಂಚ ನಿಲ್ಲದು,ಬರಿ ಮಿಂಚಿ ಹೋಗುತಿಹುದು
        ನಿನ್ನ ಕವುತು ಕೊಂಡು ನಸು ನಾಚಿಕೊಂಡು ಬರಿ ಮುಗಿಲಲಿ ಇಣುಕುತಿಹುದು
ಗಂ:  ಜಿನು ಜಿನುಗೋ ಜೇನ ಹನಿ,ಮಿನು ಮಿನುಗೋ ತುಟಿಗೇ ಇಬ್ಬನಿ
ಹೆಂ:  ಈ ನಯನದಲ್ಲಿ ಸಂಗಾತಿ ಸಂಪ್ರೀತಿ ನಲಿನಲಿ ನಲಿಯುತಿದೆ

ಗಂ: ನೀ ನಕ್ಕ ಮೂಡಿ ಆ ಚುಕ್ಕಿ ಓಡಿ ಬಾನಿಂದಲೇ ಜಾರಿದೆ
ಹೆಂ: ಆ ಬೆಳ್ಳಿಮೋಡ ಬೆಳ್ಳಕ್ಕಿ ಕೂಡ ನಿನ್ನ ನೋಡುತ ನಿಂತಿದೆ
ಗಂ: ಆ ಚೈತ್ರ ಚಿತ್ರ ಬರೆದು ಆ ಚಿತ್ರ ಜೀವ ತಳೆದು
      ಎದೆ ಭೂಮಿಯಲ್ಲಿ ಹಸಿರನ್ನು ಚೆಲ್ಲಿ ಹರುಷವ ಹರಡಿಹುದು
ಹೆಂ:  ಜಿನು ಜಿನುಗೋ ಜೇನ ಹನಿ,ಮಿನು ಮಿನುಗೋ ತುಟಿಗೇ ಇಬ್ಬನಿ ಈ ಈ ಈ
ಗಂ:  ಈ ನಯನದಲ್ಲಿ ಸಂಗಾತಿ ಸಂಪ್ರೀತಿ ನಲಿನಲಿ ನಲಿಯುತಿದೆ
---------------------------------------------------------------------------------------------------------------------

ಕಂಠಿ (೨೦೦೪) - ಬಾನಿಂದ ಬಾ ಚಂದಿರ,
ಸಂಗೀತ : ಗುರುಕಿರಣ    ಸಾಹಿತ್ಯ : ಕವಿರಾಜ ಗಾಯನ : ಸೋನು ನಿಗಮ 

ಗಂಡು : ಪ್ರೀತಿಯಲ್ಲೂ, ಯುದ್ಧದಲ್ಲೂ ಸರಿ-ತಪ್ಪು ಇಲ್ಲ ಎಲ್ಲೂ..
            ಏನಾದರೂ ತಪ್ಪಾದರೂ, ಕ್ಷಮಯಾ-ಧರಿತ್ರಿ ನಾರಿ ನಾ ಹೇಳಬೇಕೆ ಸಾರಿ...?

ಬಾನಿಂದ ಬಾ ಚಂದಿರ, ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ  ಬಾ ಇಲ್ಲಿ ಪ್ರೀತೀಲಿ ತೇಲೋ.. ||೨||

ಪ್ರೀತೀಲಿ ಎಲ್ಲರೂ, ಒಂಥರಾ ಮೂರ್ಖರು
ಮಾತು ನೂರಿದ್ದರೂ, ಆಡದ ಮೂಕರು
ಬರಿ ಕಣ್ಣಲ್ಲೇ ಬರೆದೂ ಓಲೆ
ನೋಡು ನೋಡುತ್ತಲೆ ಎಲ್ಲ ಹೇಳೋ ಕಲೆ
ಪ್ರೀತಿಗೆ ಕೊಟ್ಟೋರು ಯಾರೋ...
ಬಾನಿಂದ ಬಾ ಚಂದಿರ, ಈ ಭೂಮಿಯೇ ಸುಂದರಾ...

ಪ್ರೀತಿಯ ಅಂದವಾ, ಕಾಣದ ಅಂಧರು
ಮೋಹದ ಪ್ರೀತಿಯಾ.. ಕುರುಡು ಅಂತಂದರು
ಎರಡು ಕಣ್ಣು, ಕಡಿಮೆ ಏನು
ಒಂದು ನೂರಾದರು ಕೊಡಲಾ ದೇವರು
ಹೋಗೋಣ ತೇಲೋಣ ಬಾರೊ...
ಬಾನಿಂದ ಬಾ ಚಂದಿರ, ಈ ಭೂಮಿಯೆ ಸುಂದರ
ಈ ಪ್ರೀತಿ ಎಲ್ಲಾ ಮೇಲೆ ಇಲ್ಲ  ಬಾ ಇಲ್ಲಿ ಪ್ರೀತೀಲಿ ತೇಲೋ...
-------------------------------------------------------------------------------------------------------------------------

ಕಂಠಿ (೨೦೦೪) - ಗಣಪತಿ ಬಪ್ಪ ಮೋರಯಾ 
ಸಂಗೀತ : ಗುರುಕಿರಣ    ಸಾಹಿತ್ಯ : ಭಂಗಿರಂಗ ಗಾಯನ :ಮನು 

ಸಂಗಡಿಗರು : ಗಣಪತಿ ಬಪ್ಪ - ಬಪ್ಪ - ಗಣಪತಿ ಬಪ್ಪ ||
ಗಂಡು : ಎದ್ದೇಳು ಹೇರಂಬ, ಈ ಹಬ್ಬ ಪ್ರಾರಂಭ  ಸಿದ್ಧಿಯ ನೀಡೋ ವಿನಾಯಕ
ಸಂಗಡಿಗರು : ಗಣಪತಿ ಬಪ್ಪ ಮೋರಯಾ   ಅಗ್ಲೆ ಬರಸ್ ತು ಜಲ್ದಿ ಆ...
ಗಂಡು : ಯುದ್ಧದಲ್ಲಿ ಗೆಲುವ ನೀಡೋ  ಬುದ್ಧಿಯಲ್ಲಿ ಬಲವ ನೀಡೋ
            ಚಿತ್ತದಲ್ಲಿ ಛಲವ ನೀಡೋ ಯಜ್ಞದಲ್ಲಿ ಫಲವ ನೀಡೋ
            ಅನ್ಯಾಯ ಅಧ್ಯಾಯ ನೀ ಮಾಡೋ ಮುಕ್ತಾಯ
            ಈ ರೋಷ, ಈ ದ್ವೇಷ ಮಾಡು ನೀ ವಿನಾಶ
            ಆವೇಶ ಆಕ್ರೋಶಕ್ಕೆ ಹಾಕು ಅಂಕುಶ
           ಗಣಪತಿ ಬಪ್ಪ ಮೋರಯಾ  ಅಗ್ಲೆ ಬರಸ್ ತು ಜಲ್ದಿ ಆ... ||೨||
ಸಂಗಡಿಗರು : ಗಣೇಶ ಶರಣೋ - ಶರಣು ಗಣೇಶ... ||

ಗಂಡು : ಧರ್ಮ ಎಂದೂ ಗೆಲ್ಲಬೇಕು  ಪ್ರೇಮ ಎದ್ದು ನಿಲ್ಲಬೇಕು
           ವಿಘ್ನವನ್ನು ಭಗ್ನ ಮಾಡು  ಹಿಂಸೆಯನ್ನು ಧ್ವಂಸ ಮಾಡು
           ಈ ಘೋರ ಈ ವೈರನ್ನ ಮಾಡು ಸಂಹಾರ
          ಈ ಪ್ರೀತೀಲಿ ಯಾರು ನಿಲ್ಲೋರು... ||ಎದ್ದೇಳು||
          ಗಣಪತಿ ಬಪ್ಪ ಮೋರಯಾ ಅಗ್ಲೆ ಬರಸ್ ತು ಜಲ್ದಿ ಆ... ||ಎದ್ದೇಳು||
          ಗಣಪತಿ ಬಪ್ಪ ಮೋರಯಾ ಅಗ್ಲೆ ಬರಸ್ ತು ಜಲ್ದಿ ಆ...
          ಗಣಪತಿ ಬಪ್ಪ ಮೋರಯಾ ಅಗ್ಲೆ ಬರಸ್ ತು ಜಲ್ದಿ ಆ...
--------------------------------------------------------------------------------------------------------------------------

ಕಂಠಿ (೨೦೦೪) - ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಹೋ
ಸಂಗೀತ : ಗುರುಕಿರಣ    ಸಾಹಿತ್ಯ : ಭಂಗಿರಂಗ ಗಾಯನ :ಹೇಮಂತ 

ಗಂಡು : ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಹೋ
            ಡೋಲೋ ಪೋರಿ ಪ್ರೀತಿಯಲ್ಲಿ ನಾನೇನೆ ರೋಮಿಯೋ
            ನಮ್ಮ ಲವ್ ಗೇಮ್ ಅಲ್ಲಿ, ಆಗೋದೆ ಬೇರೆ ಉಂಡಾಡಿ ಗಂಡ್ಯಾವನೋ..
            ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ... ||೨||  ||ಬ್ರಹ್ಮಚಾರಿ||

ಹೀರೋ ಹೋಂಡ ಬೈಕು ಹತ್ತಿ ||೨|| ಈ ತೋಳಲ್ಲಿ ನನ್ ಸೊಂಟ ಸುತ್ತಿ
ಹೈವೇ ರೋಡು, ಈಡು ಜೋಡು, ನಮ್ಮ ಜಾಲಿ ರೈಡು
ಪ್ರೀತಿ ನಿಯತ್ತಿದೆ, ಕೈಲಿ ತಾಕತ್ತಿದೆ ಪ್ರೇಮಕ್ಕೆ ಸೋಲಿಲ್ಲವೋ...
ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ... ||೨||
ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಹೋ
ಡೋಲೋ ಪೋರಿ ಪ್ರೀತಿಯಲ್ಲಿ ನಾನೇನೆ ರೋಮಿಯೋ
ರಂಗು ರಂಗು ರೋಮ್ಯಾನ್ಸಿಂಗೂ, ||೨|| ಪ್ರೇಮಿಗಿಲ್ಲ ಯಾರ ಹಂಗು
ಬಾರೆ ಬಾಲೆ, ಹೂವ ಮಾಲೆ, ಹಾಕೋಣ ಈಗಲೇ
ನೋಡು ಎಂಥಾ ಕಮಾಲ್, ತಗೊ ನನ್ನ ಸವಾಲ್
ಗೆಲ್ಲೋನು ನಾನೇ ಕಣೋ...ಚಂಡ ಪ್ರಚಂಡ ಕಣೋ
ನಾ ಬಂಡೆದ್ರೆ ಪುಂಡ ಕಣೋ... ||೨||
ಬ್ರಹ್ಮಚಾರಿ, ಅಲ್ಲ ಸಾರಿ ನಾನೊಬ್ಬ ಪ್ರೇಮಿ ಹೋ
ಡೋಲೋ ಪೋರಿ ಪ್ರೀತಿಯಲ್ಲಿ ನಾನೇನೆ ರೋಮಿಯೋ
ನಮ್ಮ ಲವ್ ಗೇಮ್ ಅಲ್ಲಿ, ಆಗೋದೆ ಬೇರೆ
ಉಂಡಾಡಿ ಗಂಡ್ಯಾವನೋ..
ಚಂಡ ಪ್ರಚಂಡ ಕಣೋ ನಾ ಬಂಡೆದ್ರೆ ಪುಂಡ ಕಣೋ... ಹಾ..||೨||
--------------------------------------------------------------------------------------------------------------------------

ಕಂಠಿ (೨೦೦೪) - ಉಸ್ಸಾರು ಉಸ್ಸಾರು, ಎಲ್ಲರೂ ಉಸ್ಸಾರು ಓಯ್...
ಸಂಗೀತ : ಗುರುಕಿರಣ  ಸಾಹಿತ್ಯ : ವಿ.ಮನೋಹರ ಗಾಯನ :ಮಾಲ್ಗುಡಿ ಶುಭಾ 

ಹೆಣ್ಣು : ಉಸ್ಸಾರು ಉಸ್ಸಾರು, ಎಲ್ಲರೂ ಉಸ್ಸಾರು ಓಯ್...
         ಧಿಮಾಕು ಹಾಕ್ತಾರೆ ನಾವಿರ್‍ಬೇಕು ಉಸ್ಸಾರು
        ಈ ಸೊಂಟಕ್ಕೆಷ್ಟು - ಸಿಕ್‍ಷ್ಟಿ ಕಣೊ  ಈ ಕಂತೆಗೆಷ್ಟು - ಫಿಫ್ಟಿ
        ಈ ಮನಸಿಗೆಷ್ಟು - ನಾಟಿ   ಈ ವಯಸ್ಸಿಗೆಷ್ಟು - ಟ್ವೆಂಟಿ
       ಈ ಚೋಲಿ ಕೆ ಪೀಛೆ ಇರೋ ಈ ಹಾರ್ಟಿಗೆಷ್ಟಯ್ಯಾ...?
ಸಂಗಡಿಗರು : ಜಾಗ ಕೊಡ್ತೀಯ, ಒಂದಿಷ್ಟು ಜಾಗ ಕೊಡ್ತೀಯ?
                   ನಿನ್ನ ಹಾರ್ಟಲ್ಲಿ ಒಂದಿಷ್ಟು ಜಾಗ ಕೊಡ್ತೀಯಾ..?
ಹೆಣ್ಣು : ಉಸ್ಸಾರು ಉಸ್ಸಾರು ಎಲ್ಲರೂ ಉಸ್ಸಾರು...
          ನೂರಕ್ ನೂರು ಮಾತು ಬೇಕು
          ಆದ್ರೆ ವರಿ ಮಾಡ್ಕೊ ಬೇಡ ಅಂದರೆ ಎಂಗೋ ವಂಡರಗಣ್ಣು ಎಂಕಟ
          ಆಸೆನೆಲ್ಲ ಅದುಮಿಟ್ಕೊಂಡು ಒಳಗೆ ಎಲ್ಲಾ ಮುಚ್ಚಿಟ್ಕೊಂಡು
          ತಡಕೊಂಡು ಬಳಕೊಂಡ್ ಯಾಕೊ ಪಡ್ತಿ ಸಂಕಟ
         ನನ್ನನ್ ನೋಡಿ ಸನ್ಯಾಸಿನೂ ಧ್ಯಾನ ಮಾಡೋದ್ ಬಿಟ್ಟೇಬಿಟ್ಟ
         ಒಂದ್ ಸೆಕೆಂಡು ಆದನಲ್ಲ ಲಂಪಟ
         ರಷ್ ಇದ್ದಾಗ ಬಂದಿದ್ದೆಲ್ಲ ಛಾನ್ಸ್‍ನೆಲ್ಲ ಬಿಟ್ಕೊಂಡ್ ಬಿಟ್ಕೊಂಡ್
         ಬಾಯಿ ಬಾಯಿ ಬಿಡ್ತಿ ಯಾಕೆ ಮರ್ಕಟ ಇಂಥೋರು ಬರಿ ಮಾತ್ನೋರು ಹಮ್ಮಮ್ಮ....
ಹೆಣ್ಣು : ಉಸ್ಸಾರು ಉಸ್ಸಾರು ಎಲ್ಲರೂ ಉಸ್ಸಾರು...
          ದಿಲ್ ಮಾರ್ಕೋ ಅಂತಾರೆ ಉಸ್ಸಾರು...
          ಮೂರು ಹೊತ್ತು ಮನಿಯಾ ಊಟ ಅನ್ನ-ಸಾರು ಬೋರು ಬೋರು
          ಅದೇ ಮೂತಿ ಅದೇ ಮಾತು ಬರೀ ತಂಗಳು
         ನೂರ್ ವರೈಟಿ ತಿಂಡಿ ತೀರ್ಥ ಒಮ್ಮೆಯಾದ್ರೂ ಹೋಟಲ್ ಊಟ
         ತಪ್ಪೇನಿಲ್ಲ ಒಮ್ಮೆ ಟೇಸ್ಟ್ ನೋಡಲು  ಅಹಾ....

         ಹಾಲು ಬೆಣ್ಣೆ ತುಪ್ಪಾ ಮೊಸರು ಊರು ತುಂಬಾ ಸಿಕ್ಕುವಾಗ
        ಯಾಕೆ ರಾಜ ಬೇಕು ಗೊಡ್ಡು ಆಪಲ್ಲು  ಶೊಕಿ ಬೇಕು ಮದುವೆ ಒಲ್ಲ
        ಹೊರಗೆ ಮಲ್ಲ ಓಳಗೆ ಜೊಳ್ಳ ನನ್ಗೊತ್ತಿಲ್ವ ಎಲ್ಲಾ ಕಳ್ನನ್ ಮಕ್ಳು
       ಸಂಸಾರ ಬಲ್ ಬೇಜಾರ  ಹಾಇರೆ ದಯ್ಯ..ಅದಾ ಫಸ್ಲೀ....ಉಯ್ ಉಯ್ ಉಯ್...
       ಉಸ್ಸಾರು ಉಸ್ಸಾರು ಎಲ್ಲಾರೂ ಉಸ್ಸಾರು.....ಈ ಐಸುಗೆಷ್ಟು - ಫಿಫ್ಟಿ
       ಈ ನೋಸಿಗೆಷ್ಟು - ಸಿಕ್ಷ್ಟಿ  ಈ ಹೈಟಿಗೆಷ್ಟು - ಏಯ್ಟಿ
       ಈ ವೇಟಿಗೆಷ್ಟು - ಫುಲ್ ಹಂಡ್ರೆಡ್
       ಈ ಚೋಲಿ ಕೆ ಪೀಚೆ ಇರೋ ಈ ಹಾರ್ಟಿಗೆಷ್ಟಯ್ಯಾ...?
ಸಂಗಡಿಗರು : ಜಾಗ ಕೊಡ್ತೀಯ, ಒಂದಿಷ್ಟು ಜಾಗ ಕೊಡ್ತೀಯ ನೊ ನೊ ನೊ
                   ನಿನ್ನ ಹಾರ್ಟಲ್ಲಿ ಒಂದಿಷ್ಟು ಜಾಗ ಕೊಡ್ತಿಯಾ..? 
                   ನ ಬಾಬರೆ ನಾ..  ನಾ ಬಾಬ ನಾ..
------------------------------------------------------------------------------------------------------------------

No comments:

Post a Comment