28. ಬಾ ನಲ್ಲೆ ಮಧುಚಂದ್ರಕೆ (1993)


ಬಾ ನಲ್ಲೇ ಮಧುಚಂದ್ರಕೇ ಚಲನ ಚಿತ್ರದ ಹಾಡುಗಳು 
  1. ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
  2. ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
  3. ಒಹೋ ಹಿಮಾಲಯ ಒಹೋ ಹಿಮಾಲಯ
  4. ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ
ಬಾ ನಲ್ಲೆ ಮಧುಚಂದ್ರಕೆ (1993) - ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ
ಸಾಹಿತ್ಯ : ಪ್ರೊ. ಸಿದ್ದಲಿಂಗಯ್ಯ    ಸಂಗೀತ : ಹಂಸಲೇಖ  ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ


ಕೋರಸ್ : ಹೂಂಹೂಂಹೂಂಹೂಂ ಹೂಂಹೂಂಹೂಂ ಹೂಂಹೂಂಹೂಂ
ಗಂಡು : ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ... ಸುಳಿದಾಡಬೇಡ ಗೆಳತಿ
            ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ.. ಸುಟ್ಟಾವು ಬೆಳ್ಳಿ ಕಿರಣ.
ಕೋರಸ್ : ಓಓಓಓಓಓಓಓಓ  ಓಓಓಓಓಓಓಓಓ ಓಓಓಓಓಓಓಓಓ

ಗಂಡು : ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ
            ಇಳಿಜಾರಿನಲ್ಲಿ ಆ ಕಣಿವೆಯಲ್ಲಿ ನೀ ಇಳಿಯಬೇಡ ಗೆಳತಿ..  ನೀ ಇಳಿಯಬೇಡ ಗೆಳತಿ ಆ ಕಣಿವೆಯಲ್ಲಿ
            ತತ್ತರಿಸುವಂತೆ ಕಾಲಲ್ಲಿ ಕಮಲ ಮುತ್ತುವುವು ಮೊಲದ ಹಿಂಡು... ಮುತ್ತುವುವು ಮೊಲದ ಹಿಂಡು.
ಕೋರಸ್ : ಓಓಓಓಓಓಓಓಓ  ಓಓಓಓಓಓಓಓಓ ಓಓಓಓಓಓಓಓಓ

ಗಂಡು : ಈ ನನ್ನ ಎದೆಯ ಹೂದೋಟದಲ್ಲಿ ನೀನೆತ್ತ ಪ್ರೀತಿ ಬಳ್ಳಿ!
            ಈ ನನ್ನ ಎದೆಯ ಹೂದೋಟದಲ್ಲಿ ನೀನೆತ್ತ ಪ್ರೀತಿ ಬಳ್ಳಿ.. ನೀನೆತ್ತ ಪ್ರೀತಿ ಬಳ್ಳಿ ಹೂದೋಟದಲ್ಲಿ
            ಫಲ ಕೊಟ್ಟಿತೇನೆ ಹೂ ಬಿಟ್ಟಿತೇನೆ ಉಲ್ಲಾಸವನ್ನು ಚೆಲ್ಲಿ.... ಉಲ್ಲಾಸವನ್ನು ಚೆಲ್ಲಿ.
ಕೋರಸ್ : ಓಓಓಓಓಓಓಓಓ  ಓಓಓಓಓಓಓಓಓ ಓಓಓಓಓಓಓಓಓ

ಗಂಡು : ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು
           ಈ ಊರ ಬನಕೆ ಚೆಲುವಾದ ಒಂಟಿ ಹೂವಾಗಿ ಅರಳಿ ನೀನು... ಹೂವಾಗಿ ಅರಳಿ ನೀನು ಈ ಊರ ಬನಕೆ
          ಮರೆಯಾಗಬೆಡ ಮಕರಂದವೆಂದ ದುಂಬಿಗಳ ದಾಳಿಯಲ್ಲಿ... ದುಂಬಿಗಳ ದಾಳಿಯಲ್ಲಿ.
         ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ... ಸುಳಿದಾಡಬೇಡ ಗೆಳತಿ
         ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ.. ಸುಟ್ಟಾವು ಬೆಳ್ಳಿ ಕಿರಣ.
ಕೋರಸ್ : ಓಓಓಓಓಓಓಓಓ  ಓಓಓಓಓಓಓಓಓ ಓಓಓಓಓಓಓಓಓ
-------------------------------------------------------------------------------------------------------------------------

ಬಾ ನಲ್ಲೆ ಮಧುಚಂದ್ರಕೆ (1993) - ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ
ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ್   ಸಂಗೀತ : ಹಂಸಲೇಖ   ಗಾಯನ : ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಚಿತ್ರ

ಗಂಡು : ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ.. ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೆಣ್ಣು : ಹೋ ಹೋ ಹೋ..ಹೋ ಹೋ ಹೋ.. ಹೋ ಹೋ ಹೋ..ಹೋ ಹೋ ಹೋ..
ಗಂಡು : ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೆಣ್ಣು : ಹೋ ಹೋ ಹೋ..ಹೋ ಹೋ ಹೋ.. ಹೋ ಹೋ ಹೋ..ಹೋ ಹೋ ಹೋ..

ಗಂಡು : ಗಿರಿ ಶಿಖರ ಜಲಪಾತ ಎಲ್ಲಾ ಬೆತ್ತಲೆ ಇಲ್ಲಿ ಎಲ್ಲಾ ಬೆತ್ತಲೆ ಇಲ್ಲಿ ಅಲ್ಲವೇನೆ ಅಲ್ಲವೇನೆ ಬಲ್ಲೇಏನೆ ಬಲ್ಲೇಏನೆ
ಹೆಣ್ಣು : ಕನಸುಗಳ ಗುರಿಕಾರ ಸ್ವಪ್ನಮಂದಿರದಾಚೆ ಸ್ವಪ್ನಮಂದಿರದಾಚೆ
          ಮೂಡಿಬಾರೊ ಮೂಡಿಬಾರೊ! ಹಾಡುಬಾರೊ ಕೂಡುಬಾರೊ!
ಗಂಡು : ಹೋ ಹೋ ಹೋ..ಹೋ ಹೋ ಹೋ..ಹೋ ಹೋ ಹೋ..ಹೋ ಹೋ ಹೋ..
ಹೆಣ್ಣು : ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಗಂಡು : ಹೋ ಹೋ ಹೋ..ಹೋ ಹೋ ಹೋ.. ಹೋ ಹೋ ಹೋ..ಹೋ ಹೋ ಹೋ..

ಗಂಡು : ರತಿ ಸುಖಕೆ ಜೊತೆಯಾಗು ನಗ್ನಕೊಟೆಯನೇರಿ ನಗ್ನಕೊಟೆಯನೇರಿ
            ನಿಲ್ಲು ಬಾರೆ ನಿಲ್ಲು ಬಾರೆ ಗೆಲ್ಲು ಬಾರೆ ಗೆಲ್ಲು ಬಾರೆ!
ಹೆಣ್ಣು : ಪ್ರಿಯ ಸಖನೆ ವಿರಹಾಗ್ನೆ ಬೆಂಕಿ ಬಂಧನವಿಲಿ ಬೆಂಕಿ ಬಂಧನವಿಲಿ
          ನೀಗು ಬಾರೊ ನೀಗು ಬಾರೊ ಬಾಳತುಂಬ ಸಾಗು ಬಾರೊ
ಗಂಡು : ಹೋ ಹೋ ಹೋ..ಹೋ ಹೋ ಹೋ..ಹೋ ಹೋ ಹೋ..ಹೋ ಹೋ ಹೋ..
ಹೆಣ್ಣು : ಬಾ ನಲ್ಲ ಬಾ ನಲ್ಲ ಮಧುಚಂದ್ರಕೆ ಬಾ ನಲ್ಲ ಬಾ ನಲ್ಲ ಮಧುಮಂಚಕೆ
ಗಂಡು : ಹೋ ಹೋ ಹೋ..ಹೋ ಹೋ ಹೋ..
ಹೆಣ್ಣು : ಹೋ ಹೋ ಹೋ..ಹೋ ಹೋ ಹೋ..
ಗಂಡು : ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ ಬಾ ನಲ್ಲೆ ಬಾ ನಲ್ಲೆ ಮಧುಮಂಚಕೆ
ಹೆಣ್ಣು : ಹೋ ಹೋ ಹೋ..ಹೋ ಹೋ ಹೋ..
ಗಂಡು : ಹೋ ಹೋ ಹೋ..ಹೋ ಹೋ ಹೋ..
--------------------------------------------------------------------------------------------------------------------------

ಬಾ ನಲ್ಲೆ ಮಧುಚಂದ್ರಕೆ (1993) - ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ

ಸಂಗೀತ/ಸಾಹಿತ್ಯ: ಹಂಸಲೇಖ   ಗಾಯಕರು : ಎಸ್. ಪಿ. ಬಾಲಸುಬ್ರಮಣ್ಯಂ


ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ! ತಂದಾಳೊ ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ ಬಂದಾಳೊ ಬಂದಾಳೊ ಚಂದಿರ ಚಕೋರಿ

ಮಳೆ ಬಿಲ್ಲಮೇಲೆ ಇಳಿಜಾರೊ ಬಾಲೆ ರತಿದೇವಿ ಸೌಂದರ್ಯ ಸವತಿ ನೀ..  ಕವಿತೆ ನೀ ಕಾವ್ಯ ಸ್ಪೂರ್ತಿ ನೀ..
ಎದೆಯಾಳದೊಲವು ಹೆಣ್ಣಾಗಿ ಬಂದ ಭೂಲೊಕ ಸೌಂದರ್ಯ ರಾಣಿ ನೀ.. ಪ್ರಾಣ ನೀ ನೀಲ ವೇಣಿ ನೀ
ನಕ್ಕಾಳೊ ನಕ್ಕಾಳೊ ಹುಣ್ಣಿಮೆ ಹಾಲಂತೆ ಉಕ್ಯಾಳೊ ಉಕ್ಯಾಳೊ ತುಂಗೆಯ ನೀರಂತೆ
ಜೀವನದ ಚಂದ್ರೊದಯಕೆ ಮೈಮನದ ಪ್ರಣಯಾಲಯಕೆ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ! ತಂದಾಳೊ ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ ಬಂದಾಳೊ ಬಂದಾಳೊ ಚಂದಿರ ಚಕೋರಿ

ಮಲೆನಾಡ ಸಿರಿಗೆ ಮನಸೊತು ನಿಂತ ಹಸಿರೂರ ಗಿರಿಬಾಲೆ ಹೆಣ್ಣು ನೀ.. ಕಣ್ಣು ನೀ ಬಾಳ ಬಣ್ಣ ನೀ
ನಡು ರಾತ್ರಿಯಲ್ಲಿ ಜಲ ರಾಶಿ ಮೇಲೆ ಗುರಿ ತೊರೊ ಎಕಾಂತ ತಾರೆ ನೀ.. ನೀರೆ ನೀ ಕಾವ್ಯ ಧಾರೆ ನೀ
ಮೂಡ್ಯಾಳೊ ಮೂಡ್ಯಾಳೊ ಮಾಗಿಯ ಕನಸಂತೆ ಮುತ್ಯಾಳೊ ಮುತ್ಯಾಳೊ ಬೆಚ್ಚನೆ ಮುತಂತೆ
ಜೀವನದ ಚಂದ್ರೊದಯಕೆ ಮೈಮನದ ಪ್ರಣಯಾಲಯಕೆ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ ಬಂದಾಳೊ ಬಂದಾಳೊ ಚಂದಿರ ಚಕೋರಿ
ತಂದಾಳೊ ತಂದಾಳೊ ತಂದಾಳೊ ಪ್ರೇಮದ ಸಿರಿ
ಬಂದಾಳೊ ಬಂದಾಳೊ ಬಿಂಕದ ಸಿಂಗಾರಿ ಬಂದಾಳೊ ಬಂದಾಳೊ ಚಂದಿರ ಚಕೋರಿ
----------------------------------------------------------------------------------------------------------------------

ಬಾ ನಲ್ಲೆ ಮಧುಚಂದ್ರಕೆ (1993) - ಒಹೋ ಹಿಮಾಲಯ ಒಹೋ ಹಿಮಾಲಯ
ಸಾಹಿತ್ಯ : ಹಂಸಲೇಖ  ಸಂಗೀತ : ಹಂಸಲೇಖ  ಗಾಯಕರು : ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಮಂಜುಳ ಗುರುರಾಜ್


ಹೆಣ್ಣು : ಒಹೋ ಹಿಮಾಲಯ    ಗಂಡು : ಒಹೋ ಹಿಮಾಲಯ
ಹೆಣ್ಣು : ಒಹೋ ಹಿಮಾಲಯ    ಗಂಡು : ಒಹೋ ಹಿಮಾಲಯ
ಹೆಣ್ಣು : ಶಿವನಿಗು ಗಿರಿಜೆಗು ದೇವಾಲಯ ನವ ವಧುವರರಿಗೆ ಪ್ರೇಮಾಲಯ
ಗಂಡು : ಒಹೋ ಹಿಮಾಲಯ         ಹೆಣ್ಣು : ಒಹೋ ಹಿಮಾಲಯ
ಗಂಡು : ಒಹೋ ಹಿಮಾಲಯ         ಹೆಣ್ಣು : ಒಹೋ ಹಿಮಾಲಯ
ಗಂಡು :   ಶಿವನಿಗು ಗಿರಿಜೆಗು ದೇವಾಲಯ  ನವ ವಧುವರರಿಗೆ ಪ್ರೇಮಾಲಯ

ಗಂಡು : ಅಂಬರವೊ ಇಲ್ಲಾ ಬೆಳ್ಳಿ ಚಪ್ಪರವೊ! ಗುಡ್ಡಗಳೊ ಇಲ್ಲಾ ಬೆಣ್ಣೆ ಮುದ್ದೆಗಳೊ
            ಚಿಲಿಪಿಲಿಯೊ ಇಲ್ಲಾ ಕಾವ್ಯ ವಾಚನವೊ! ಕಲಕಲವೊ ಇಲ್ಲಾ ಗಂಗೆ ಗಾಯನವೊ
ಹೆಣ್ಣು : ಅಪ್ಪುಗೆಯೊ ಇಲ್ಲಾ ಇದು ಒಪ್ಪಿಗೆಯೊ! ಚುಂಬನವೊ ಇಲ್ಲಾ ಇದು ಬಂಧನವೊ
          ಆತುರವೊ ಇಲ್ಲಾ ಇದು ಕಾತುರವೊ! ಆಸೆಗಳೊ ನಲ್ಲ ನಲ್ಲೆ ಲೀಲೆಗಳೊ
ಗಂಡು : ಜಿಗಿಜಿಗಿವಾ ಜೊಡಿ ಪ್ರೇಮ ಹೃದಯಗಳು ಚುಕುಚುಕುಚು ರೈಲನ್ನೇರಿದವು
ಹೆಣ್ಣು : ಗರಿಗರಿಯ ಹಿಮಗಿರಿಯ ಬೆನ್ನಿನಲಿ ಚಳಿ ಚಳಿಯೊ ಎನ್ನುತಾ ಜಾರಿದವೊ
ಗಂಡು : ಮೈಸೂರ ಚೆಲುವೆ ನೀನು           ಹೆಣ್ಣು : ಮೈಸೂರ ಚೆಲುವ ನೀನು
ಗಂಡು : ಎನ್ನುತ ಕನ್ನಡ ಕಂಪನು ಬೀರಿದೆವು ಹಿಮದಲಿ
ಹೆಣ್ಣು : ಒಹೋ ಹಿಮಾಲಯ    ಗಂಡು : ಒಹೋ ಹಿಮಾಲಯ
ಹೆಣ್ಣು : ಒಹೋ ಹಿಮಾಲಯ    ಗಂಡು : ಒಹೋ ಹಿಮಾಲಯ
ಹೆಣ್ಣು : ಶಿವನಿಗು ಗಿರಿಜೆಗು ದೇವಾಲಯ ನವ ವಧುವರರಿಗೆ ಪ್ರೇಮಾಲಯ

ಗಂಡು : ನನ್ನವಳೆ ನನ್ನವಳೆ ನನ್ನವಳೆ  ತಂಬೆಲರ ತಂಬೆಲರ ತಂದವಳೆ
            ತಂಬೆಲರೆ ಮುಂಗುರುಳ ಕಾಮಿಸಿದೆ ಮುಂಗುರುಳೆ ಮೊಗವನ್ನು ಮೊದಿಸಿದೆ
ಹೆಣ್ಣು : ನನ್ನವನೆ ನನ್ನವನೆ ನನ್ನವನೆ ನನ್ನೆದೆಗೆ ಹುಣ್ಣಿಮೆಯ ತಂದವನೆ
          ಹುಣ್ಣಿಮೆಯ ಗಿರಿಯೂರ ತೊರಿಸಿದೆ ಕಿನ್ನರರ ತವರೂರ ಸೇರಿಸಿದೆ
ಗಂಡು : ಮಾತಿನಲಿ ಮಾಯ ಮಾಡೊ ಮೊಹಿನಿಯು ಮಾರನಿಗೆ ಸೊತು ಬಿದ್ದಳು
ಹೆಣ್ಣು : ಹೂಗಳ ಬಾಣವನೆಸೆವ ಮನ್ಮಥನು ಹೂವಿನಲೆ ಜಾರಿ ಬಿದ್ದನು
ಗಂಡು : ಮೈಸೂರ ಚೆಲುವೆ ನೀನು
ಹೆಣ್ಣು : ಮೈಸೂರ ಚೆಲುವ ನೀನು
ಗಂಡು : ಎನ್ನುತ ಕನ್ನಡ ಕಂಪನು ಬೀರಿದೆವು ಹಿಮದಲಿ
ಹೆಣ್ಣು : ಒಹೋ ಹಿಮಾಲಯ    ಗಂಡು : ಒಹೋ ಹಿಮಾಲಯ
ಹೆಣ್ಣು : ಒಹೋ ಹಿಮಾಲಯ    ಗಂಡು : ಒಹೋ ಹಿಮಾಲಯ
ಹೆಣ್ಣು : ಶಿವನಿಗು ಗಿರಿಜೆಗು ದೇವಾಲಯ ನವ ವಧುವರರಿಗೆ ಪ್ರೇಮಾಲಯ
ಗಂಡು : ಒಹೋ ಹಿಮಾಲಯ         ಹೆಣ್ಣು : ಒಹೋ ಹಿಮಾಲಯ
ಗಂಡು : ಒಹೋ ಹಿಮಾಲಯ         ಹೆಣ್ಣು : ಒಹೋ ಹಿಮಾಲಯ
ಗಂಡು :   ಶಿವನಿಗು ಗಿರಿಜೆಗು ದೇವಾಲಯ  ನವ ವಧುವರರಿಗೆ ಪ್ರೇಮಾಲಯ
--------------------------------------------------------------------------------------------------------------------------

No comments:

Post a Comment