713. ಟಗರು (೨೦೧೮)

ಟಗರು ಚಿತ್ರದ ಹಾಡುಗಳು 
  1. ಟಗರು ಬಂತು ಟಗರು 
  2. ಬದುಕಿನ ಬಣ್ಣವೇ 
  3. ಬಲ್ಮ ಬಲ್ಮ 
  4. ಹೋಲ್ಡ್ ಆನ್ ಹೋಲ್ಡ್ ಆನ್ 
  5. ಮೆಂಟಲ್ ಹೊ ಜಾವಾ 
  6. ಜೀವ ಸಖೀ 
  7. ಗುಮ್ಮಾ ಬಂದ ಗುಮ್ಮಾ 
  8. ಯಾರೇ ನೀ ಚತುರೇ 
ಟಗರು (೨೦೧೮) - ಟಗರು ಬಂತು ಟಗರು  ವಾರೆ ನೋಟ ನೋಡೈತೆ
ಸಂಗೀತ : ಚರಣರಾಜ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ಅಂತೋನಿ ದಾಸನ್ 

ವಾರೆ ನೋಟ ನೋಡೈತೆ.. ಕಾಲು ಕೆರೆದು ನಿಂತೈತೆ
ಗುಟುರು ಹಾಕಿ ಬಂದೈತೆ ಎದುರು ಹೋದ್ರೆ ಗುಮ್ ತೈತೆ
ಹ್ಹಾಂ..  ಹ್ಹಾಂ.. ಹ್ಹಾಂ.. ಹ್ಹಾಂ.. ಹ್ಹಾಂ.. ಹ್ಹಾಂ.. ಹ್ಹಾಂ..
ನೋಡೋಕೇನೋ ಬಲು ಸಿಂಪಲ್ಲು ಇವನ ಗುಂಡ್ಗೆ ಡಬ್ಬಲ್ಲು
ಆಡೋ ಆಟ ಬಹಳ ಚಾಲು ಬೇಕಾ ಬೇಕಾ ಸ್ಯಾಂಪಲ್ಲು
ಹೆಸರು… ಖದರು…. ತಿಮಿರು….ನೋಡೋನಿಗೆ  ಬೆವರು…. ಬ್ರದರು….
ಟಗರು ಟಗರು ಶಿವನ ಪೊಗರು

ಟಗರು ಬಂತು ಟಗರು  ಇದು ಈ ಊರ ಟಗರು
ಜೋರಾಗಿ ಇವನ ಹೆಸರು ಹೇಳ್ಬೇಡ ಕಣೋ ಬ್ರದರು
ಯಾವೊತ್ತು ಇವನ ಎದುರು ಹೋಗ್ಬೇಡ ಕಣೋ ಬ್ರದರು
ಇದು ತಿಮಿರು ಇರೋ ಟಗರು  ಧೈರ್ಯ ಇದರ ಉಸಿರು

ಒಂದು ಬಾರಿ ಇಡುವ ಗುನ್ನ ಆಮೇಲೆ ಯಾರೋ ಕಾಯೋರು ನಿನ್ನ
ಒಂದು ಬಾರಿ ಕೆಣಕೋ ಮುನ್ನ ನೂರಾರು ಸಾರಿ ನೀ ಯೋಚ್ಸೋದು ಚೆನ್ನ
ಪ್ರೀತಿ ಮಾಡಿ ಮೈಯ ಸವರು ಪ್ರಾಣಾನೇ ನೀಡೋ ಗೆಳೆಯನೇ ಇವನು
ತೋರಿ ನೋಡು ನಿನ್ನ ಪೊಗರು ಸದ್ದೇನೆ ಇರದಂತೆ ಗುದ್ದೇ ಬಿಡೋನು
ಲೋ ಮಗನೆ ಇವನು ಮದವೇರಿ ನಿಂತ...
ಆ ಶಿವನೆ ಇವನ ಮೈಯಲ್ಲಿ ಕುಂತ....
ನೋಡೋಕೇನೋ ಬಲು ಸಿಂಪಲ್ಲು ಇವನ ಗುಂಡ್ಗೆ ಡಬ್ಬಲ್ಲು
ಆಡೋ ಆಟ ಬಹಳ ಚಾಲು ಬೇಕಾ ಬೇಕಾ ಸ್ಯಾಂಪಲ್ಲು
ಹೆಸರು… ಖದರು…. ತಿಮಿರು….ನೋಡೋನಿಗೆ  ಬೆವರು…. ಬ್ರದರು….
ಟಗರು ಟಗರು ಇವನ ಪೊಗರು

ಟಗರು ಬಂತು ಟಗರು  ಇದು ಈ ಊರ ಟಗರು
ಜೋರಾಗಿ ಇವನ ಹೆಸರು ಹೇಳ್ಬೇಡ ಕಣೋ ಬ್ರದರು
ಯಾವೊತ್ತು ಇವನ ಎದುರು ಹೋಗ್ಬೇಡ ಕಣೋ ಬ್ರದರು
ಇದು ತಿಮಿರು ಇರೋ ಟಗರು  ಧೈರ್ಯ ಇದರ ಉಸಿರು
ಲೋ ಮಗನೆ ಇವನು ಮದವೇರಿ ನಿಂತ...
ಆ ಶಿವನೆ ಇವನ ಮೈಯಲ್ಲಿ ಕುಂತ...
-------------------------------------------------------------------------------------------------------------------

ಟಗರು (೨೦೧೮) - ಬದುಕಿನ ಬಣ್ಣವೇ ಬದಲಾದರೆ 
ಸಂಗೀತ : ಚರಣರಾಜ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸಿದ್ದಾರ್ಥ ಬೆಲ್ಮಣ್ಣು 

ಆಆಆ... ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ 
ಬಡವನ ಕಣ್ಣಲು ಬೆಳಕಾದರೆ ಅದು ಪ್ರೇಮವೇ 
ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ 
ತೀರುವಳಿ ದೇವರೇ ಎದುರಾದರೆ ಅದು ಪ್ರೇಮವೇ

ಗಾ... ಳಿಯಲಿ ಬೆಚ್ಚನೆ ಅಲೆಯಿದೆ ಹೃದಯಕೆ ಹೇಗೋ ದಾರಿ ಗೊತ್ತಾಗಿದೆ
ನಕ್ಷೆಯಾ ನೀಡದೆ ಒಹ್.. ಹೊ... ಆಆಆ .. 
ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ 
ಬಡವನ ಕಣ್ಣಲು ಬೆಳಕಾದರೆ ಅದು ಪ್ರೇಮವೇ 

ತಲುಪದ ಕರೆ ನೂರಾರಿವೆ ಬೆರಳಲೇ ಇದೇ ಸಂಭಾಷಣೆ 
ಕನಸಿಗೂ ಸಹ ಕಂದಾಯವೇ ವಿರಹವೇ ಕಿರು ಸಂಭಾವನೆ 
ಕಳೆದರೆ ನೀನು ಉಳಿವೇನೆ ನಾನು ನೆಪವಿರದೆ ನಿನ್ನ ಅಪಹರಿಸಿ ತಂದೆ 
ಉಪಕರಿಸು ಶಿಕ್ಷೆಯಾ ನೀಡದೆ... ಒಹ್..ಹೊ.. ಆಆಆಆ
ಬದುಕಿನ ಬಣ್ಣವೇ ಬದಲಾದರೆ ಅದು ಪ್ರೇಮವೇ 
ಬಡವನ ಕಣ್ಣಲು ಬೆಳಕಾದರೆ ಅದು ಪ್ರೇಮವೇ 
ಕೊರಳಿದು ಕಂಪಿಸಿ ಬಿಗಿಯಾದರೆ ಅದು ಪ್ರೇಮವೇ 
ತೀರುವಳಿ ದೇವರೇ ಎದುರಾದರೆ ಅದು ಪ್ರೇಮವೇ 
ಸಸಸ ಸಗರಿಪ ಸಗಮಪನಿ ಆಆಆ .. ರರೀ...
--------------------------------------------------------------------------------------------------------------------------

ಟಗರು (೨೦೧೮) - ಬಲ್ಮ ಬಲ್ಮ ಬಲ್ಮ ಬಲ್ಮ
ಸಂಗೀತ : ಚರಣರಾಜ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಚರಣರಾಜ,  ಸಿದ್ದಾರ್ಥ ಬೆಲ್ಮಣ್ಣು 

ನಿನ್ನ ಭಯವೇ ನಿನ್ನ ಮದವು ಸಿಗಲಿ ಬೇಗ ಕಳೆದ ನಗುವು
ಕೂಗು ಕಡಲು ಮೌನ ತೀರ ಮನುಜ ನೀನು ಯಾಕೆ ಕ್ರೂರ

ನಿನ್ನ ಭಯವೇ ನಿನ್ನ ಮದವು
ನೀನೆ ನಾಶ ನಿನ್ನ ದ್ವೇಷದಿಂದ ಎಲ್ಲ ಮೋಸ ದೃಷ್ಟಿ ದೋಷದಿಂದ
ಈ ಹುಂಬ ಜಂಬವನ್ನು ಬಿಡು ನೀನೀಗಾ
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ ನಾ ಮೊರ್ ಲಾಗೇ ನಾ ಮೊರ್
ಕತ್ತಲಲ್ಲಿ ಮಿಂಚು ಝಳಪಿಸುತಾ ಊರ ಕೇರಿಯಲ್ಲವಾ ಬೆಳಗಿಸುತಾ
ನೆಲದ ಗಾಯ ಹೊಳೆಯುವಂತೆ ಸುರಿಯೇ ಮಳೆಯೇ
ಮನವ ತೊಳೆಯೆ ಸುರಿಯೆ ಮಳೆಯೇ
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ ನಾ ಮೊರ್ ಲಾಗೇ ನಾ ಮೊರ್
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ ನಾ ಮೊರ್ ಲಾಗೇ ನಾ ಮೊರ್ 
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ ನಾ ಮೊರ್ ಲಾಗೇ ನಾ ಮೊರ್ 
ಬಲ್ಮ ಬಲ್ಮ ಬಲ್ಮ ಬಲ್ಮ ಲಾಗೇ ನಾ ಮೊರ್ ಲಾಗೇ ನಾ ಮೊರ್
-----------------------------------------------------------------------------------------------------------------------

ಟಗರು (೨೦೧೮) - ಹೋಲ್ಡ್ ಆನ್ ಹೋಲ್ಡ್ ಆನ್ 
ಸಂಗೀತ : ಚರಣರಾಜ ಸಾಹಿತ್ಯ : ಯೋಗರಾಜ ಭಟ್ ಗಾಯನ : ಅನನ್ಯ ಭಟ್ 

ಹೋಲ್ಡ್ ಆನ್ ಹೋಲ್ಡ್ ಆನ್ ಹೋಲ್ಡ್ ಆನ್ ಹೋಲ್ಡ್ ಆನ್
ಹೋಲ್ಡ್ ಆನ್ ಹೋಲ್ಡ್ ಆನ್ ಹೋಲ್ಡ್ ಆನ್ ಹೋಲ್ಡ್ ಆನ್
ಗ್ರೀನ್ ಸಿಗ್ನಲ್ಲು ಬಿದ್ದಿಲ್ಲ ಏನು ಮಾಡ್ಲಿ ಹೋಲ್ಡ್ ಆನ್ ಹೋಲ್ಡ್ ಆನ್
ಈ ಟೈಮಲ್ಲಿ ಲವ್ ಆಯ್ತು ಹೇಂಗೆ ಹೇಳಲಿ ಹೋಲ್ಡ್ ಆನ್ ಹೋಲ್ಡ್ ಆನ್
ಗಂಡು ಹುಡುಗ ನಾನು ಹುಡುಗಿ ನೀನು ಸಾರೀ ಹುಡುಗಿ ನಾನು ಹುಡುಗ ನೀನು
ನಾನ್ ನಿನಗೆ ಹೇಳುವುದೊಂದೇ ಲವ್ವಿನಲ್ಲಿ ಬೀಳಲು ನಿನಗೆ ಏನು ರೋಗಾ
ತೋಳಲ್ಲಿ ಬೀಳೋ ಬಾರೋ ಬೇಗಾ
ನನ್ನ ವಾರೆ ವಾರೆ ನೋಟವೇ ಹೀಟೂ ಇಂತಹ ಚಳಿಗಾಲದಲ್ಲಿ ಯಾತಕ್ಕೆ ಲೇಟೂ
ನನ್ನ ವಾರೆ ವಾರೆ ನೋಟವೇ ಹೀಟೂ ಇಂತಹ ಚಳಿಗಾಲದಲ್ಲಿ ಯಾತಕ್ಕೆ ಲೇಟೂ
ಈ ಪೇಶಿಯೆನ್ಸ್ ಎಲ್ಲ ಬಿಟ್ಟು ಮಾತಾಡು ಪಪ್ಪಿ ಕೊಟ್ಟು
ಹೋಲ್ಡ್ ಆನ ಹೋಲ್ಡ್ ಆನ್  ಹೋಲ್ಡ್ ಆನ್ ಹೋಲ್ಡ್ ಆನ್

ಪೆದ್ದಿ ನಾನು ಮುದ್ದಿನಿಂದಾ ತಬ್ಬೋ ನನ್ನ ಆಸೆ ಪಟ್ಟು
ಸದ್ದೇ ಬರದೆ ಕಚ್ಚಿ ಬಿಡುವೆ ಒಮ್ಮೆ ನೋಡು ಗಲ್ಲಾ ಕೊಟ್ಟು
ಹೇ ಹೋಲ್ಡ್ ಆನ್ ಹೋಲ್ಡ್ ಆನ್ ಸ್ಲೋ ಡೌನ್ ಸ್ಲೋ ಡೌನ್
ಅಪಘಾತಕ್ಕೆ ಅವಸರವೇ ರೀಸನ್
ನೀ ತಡ್ಕೋ ಸ್ವಲ್ಪ ಏತ್ ಹುಡುಗಿ ನೀ ನಿಂತ್ಕೋ ದೂರ ಓ ಬೆಡಗಿ
ನೀನಿನ್ನೂ ತುಂಬಾ ಸಣ್ಣ ಹುಡುಗಿ ಹೋಗ್ ಬಾರ್ದು ಮುನ್ನುಗ್ಗಿ

ನಾನ್ ನಿನಗೆ ಕೇಳುವುದೊಂದೇ ಹೃದಯದಲ್ಲಿ ಇಲ್ಲವೇ ನನಗೊಂದ್ ಚೂರು ಜಾಗ
ಫೈನಲ್ ಏನು ಹೇಳು ಬೇಗ... ಬೇಗ
ನಾನು ಸಾರಿ ಸಾರಿ ಹೇಳುವೆ ನಿಂತು ನನಗೆ ಪೂರ ಪೂರ ಹಿಡಿದಿದೆ ಬ್ರಾಂತು
ನಾನು ಸಾರಿ ಸಾರಿ ಹೇಳುವೆ ನಿಂತು ನನಗೆ ಪೂರ ಪೂರ ಹಿಡಿದಿದೆ ಬ್ರಾಂತು
ನಾ ಹಾಕೊಂಡಿದ್ದರೇ ಸುಮ್ನೆ ಮನ್ಸಲ್ಲಿ ಮೂರು ಗಂಟು.. (ಹೋಯ್ )ಸಿಗ್ನಲೂ ಬಿಡ್ತು ಅಂತೂ ಇಂತೂ
----------------------------------------------------------------------------------------------------------------------

ಟಗರು (೨೦೧೮) - ಮೈ ಮೆಂಟಲ್ ಹೋ ಜಾವ್
ಸಂಗೀತ : ಚರಣರಾಜ ಸಾಹಿತ್ಯ : ಯೋಗರಾಜ ಭಟ್ ಗಾಯನ : ಅನನ್ಯ ಭಟ್

ಮೈ ಮೆಂಟಲ್ ಹೋ ಜಾವ್ ಮೈ ಮೆಂಟಲ್ ಹೋ ಜಾವ್ ಮೈ ಮೆಂಟಲ್ ಹೋ ಜಾವ್
ವ್ಹಾಟ್ಸಪ್ ಬೇಬಿ ಲೆಟ್ಸ್ ಗೋ ಕ್ರೇಜೀ ಡೋಂಟ್ ಬಿ ಲೇಜಿ ಕಮ್ ಆನ್ ಲೆಟ್ಸ್ ಗೆಟ್ ಆನ್ ದಿ ಫ್ಲೋರ್ 
ಆಹ್ಹಾ ಲೈಕ್ ಆ ಲೇಡಿಗಾಗ ಸ್ಟೈಲಲ್ ನಾನು ಹಾಡಲಾ
ಶೇಕ್ ಇಟ್ ಅಪ್ ಬೇಬಿ ನಾನು ಚೂರು ಮೆಂಟಲ್ ಆಗಲ್  
ಮೈ ಮೆಂಟಲ್ ಹೋ ಜಾವ್ ಮೈ ಮೆಂಟಲ್ ಹೋ ಜಾವ್
ಮೈ ಮೆಂಟಲ್ ಹೋ ಜಾವ್ ಹೋ ಜಾವ್ ಮೈ ಮೆಂಟಲ್ ಹೋ ಜಾವ್ ಹೋ ಜಾವ್
ಪಾಪಪಾ ಪ್ಪಪಾಪಫಪಾಪ್ ಪ್ಪಪಾಪಫಪಾಪ್ ಪ್ಪಪಾಪಫಪಾಪ್ 
ಪಾಪಪಾ ಪ್ಪಪಾಪಫಪಾಪ್ ಪ್ಪಪಾಪಫಪಾಪ್ ಪ್ಪಪಾಪಫಪಾಪ್ 

ಟ್ರೆಂಡಿಂಗ್ ಬ್ರೇವ್ ಪುಬ್ಬಲ್ಲಿ ಮನಾ ಫನಾ ಫನಾ
ವೆನಿಲ್ಲಾ ಸ್ಕೈ ಇದೇಯಾ ಆ ಹಾ ಹಾ ಕನಸು ಫ್ರೀ ಇದೆಯಾ
ಸನಲೈಟೂ ಸೋಕಲು ಬೀಚಗೇ ನಾ ಫಿಧಾ ಫಿಧಾ ಫಿಧಾ
ಟಾಕ್ಯುಲ್ ಶಾಟ್ಸ್ ಇದೇಯಾ ಆ ಹಾ ಹಾ ಅದಕೆ ಸಾಲ್ಟ್ ಇದೆಯಾ
ಹಗಲು ಇರುಳೂ ಹಗಲು ಇರುಳೂ ಅದದೇ ಅದದೇ ಅಮಲೂ ಮನದಾ ಕಡಲಾ ಅಲೆಯ ಸುಡಲೂ
ಕೇರಫ್ರೀ ಲೈಫಲ್ಲಿ
ನಾನು ಆದೇ ಸ್ವಲ್ಪ್ ಸೈಕೋ ಕ್ರೇಜಿ ಕ್ರೇಜಿ ಫುಲ್ ಆನ್ ಫ್ರ್ಯಾನ್ಕ್
ಲೈಫು ಫ್ರೀ ವೇ ಆಗಬೇಕು ಕಮ್ ಆನ್ ಕಮ್ ಆನ್ ಬ್ರೇಕ್ ದಿ ರೂಲ್ಸ್
ವ್ಹಾಟ್ಸಪ್ ಬೇಬಿ ಲೆಟ್ಸ್ ಗೋ ಕ್ರೇಜೀ ಡೋಂಟ್ ಬಿ ಲೇಜಿ ಕಮ್ ಆನ್ ಲೆಟ್ಸ್ ಗೆಟ್ ಆನ್ ದಿ ಫ್ಲೋರ್ 
ಆಹ್ಹಾ ಲೈಕ್ ಆ ಲೇಡಿಗಾಗ ಸ್ಟೈಲಲ್ ನಾನು ಹಾಡಲಾ
ಶೇಕ್ ಇಟ್ ಅಪ್ ಬೇಬಿ ನಾನು ಚೂರು ಮೆಂಟಲ್ ಆಗಲ್ ... ಆಆಆ  
ಮೈ ಮೆಂಟಲ್ ಹೋ ಜಾವ್  ಹೋ ಜಾವ್  ಹೋ ಜಾವ್ 
ಮೈ ಮೆಂಟಲ್ ಹೋ ಜಾವ್  ಹೋ ಜಾವ್  ಹೋ ಜಾವ್ 
ಮೈ ಮೆಂಟಲ್ ಹೋ ಜಾವ್  ಹೋ ಜಾವ್  ಹೋ ಜಾವ್ 
ಮೈ ಮೆಂಟಲ್ ಹೋ ಜಾವ್  ಹೋ ಜಾವ್  ಹೋ ಜಾವ್ 
ಮೈ ಮೆಂಟಲ್ ಹೋ ಜಾವ್ ಮೈ ಮೆಂಟಲ್ ಹೋ ಜಾವ್ ಮೈ ಮೆಂಟಲ್ ಹೋ ಜಾವ್ 
----------------------------------------------------------------------------------------------------------------------

ಟಗರು (೨೦೧೮) - ಜೀವ ಸಖೀ.. ಜೀವ ಸಖೀ 
ಸಂಗೀತ : ಚರಣರಾಜ ಸಾಹಿತ್ಯ : ಯೋಗರಾಜ ಭಟ್ ಗಾಯನ : ಚರಣರಾಜ್ 

ಜೀವ ಸಖೀ.. ಜೀವ ಸಖೀ....
ನೆರಳು ಬೆಳಕು ಬೆರೆತಾ ಹರಿಣದಂತ ಇರುಳೇ
ಬೆಳಕು ಹರಿವಾ ಮೊದಲೇ ಹೃದಯ ಹರಿದು ಕೊಡಲೇ
ನೆರಳು ಬೆಳಕು ಬೆರೆತಾ ಹರಿಣದಂತ ಇರುಳೇ
ಬೆಳಕು ಹರಿವಾ ಮೊದಲೇ ಹೃದಯ ಹರಿದು ಕೊಡಲೇ
ಜೀವ ಸಖೀ.. ಜೀವ ಸಖೀ...

ಹಾಯುವ ದೀಪಕ್ಕೂ ಗಾಯವೇ ಕಣ್ಣಲೇ ನಿಂತಿರೂ ಜೀವವೇ
ಬಾನಿನಲ್ಲಿ ಬೆಳ್ಳಿ ಚೂರಿ ದಾರಿ ತುಂಬಾ ಕಾಮಗಾರಿ
ನೆರಳು ಬೆಳಕು ಬೆರೆತಾ ಹರಿಣದಂತ ಇರುಳೇ
ಬೆಳಕು ಹರಿವಾ ಮೊದಲೇ ಹೃದಯ ಹರಿದು ಕೊಡಲೇ
ಹೃದಯ ಹರಿದು ಕೊಡಲೇ ಜೀವ ಸಖೀ..

ನೀ ಕಂಡಂತ ಕನಸು ಎದುರೇ ನಿಂತಿದೇ
ಬಂದಂಥ ಕೆಲಸ ಮರೆತೇ ಹೋಗಿದೆ ನಿಂತಂಥ ಶಹರ ಹೆಸರು ಕೇಳುತಿದೆ
ನೀನಿದ್ದಲೇ ಮಳೆಯೂ ಬರುವ ಹಾಗಿದೇ ಹೋದಲ್ಲೇ ನೆನಪೂ ಬಿಡದೇ ಕಾಡಿದೆ
ನಿಂತಲ್ಲಿ ಸಮಯ ನಿಲ್ಲದೇ ಓಡುತಿದೆ
ನೀ ಕಂಡಂಥ ಕನಸು ಎದುರೇ ನಿಂತಿದೆ
ಬಂದಂಥ ಕೆಲಸ ಮರೆತೂ ಹೋಗಿದೆ ನಿಂತಂಥ ಶಹರ ಹೆಸರು ಕೇಳುತಿದೆ
ನೀನಿದ್ದಲೇ ಮಳೆಯೂ ಬರುವ ಹಾಗಿದೇ ಹೋದಲ್ಲೇ ನೆನಪೂ ಬಿಡದೇ ಕಾಡಿದೆ
ನಿಂತಲ್ಲಿ ಸಮಯ ನಿಲ್ಲದೇ ಓಡುತಿದೆ
----------------------------------------------------------------------------------------------------------------------

ಟಗರು (೨೦೧೮) - ಹೇ ಗುಮ್ಮಾ ಬಂದ ಗುಮ್ಮಾ
ಸಂಗೀತ : ಚರಣರಾಜ ಸಾಹಿತ್ಯ : ಜಯಂತ್ ಕಾಯ್ಕಣಿ ಗಾಯನ : ಸಂಜಿತಾ ಹೆಗಡೆ

ಟಗರು ಮೈಯೆಲ್ಲಾ ಪೋಗರು ಟಟಟ ಟಗರು  ಮೈಯೆಲ್ಲಾ ಪೊಗರು
ಹೇ ಗುಮ್ಮಾ ಬಂದ ಗುಮ್ಮಾ ನೀ ಸುಮ್ನೆ ಮಲ್ಕೋ ತಮ್ಮಾ
ಹೇ ಗುಮ್ಮಾ ಬಂದ ಗುಮ್ಮಾ ಈ ಆಟ ನಿಲ್ಸೋ ತಮ್ಮಾ
ಹೇ ಗುಮ್ಮಾ ಬಂದ ಗುಮ್ಮಾ ಈ ಮುನಿಸು ಬೇಡ ತಮ್ಮಾ
ಹೇ ಗುಮ್ಮಾ ಬಂದ ಗುಮ್ಮಾ ನೀ ಮನುಷ್ಯನಾಗೂ ತಮ್ಮಾ
ನಿಮ್ಮಯ ರಾತ್ರಿಗಳಲ್ಲಿ ಕಾಯುವ ಎಚ್ಚರ ನಾವೂ
ಮುಚ್ಚಿದ ಬಾಗಿಲೂ ಮುಂದೇ ಖಾಕಿಯ ರೂಪ ತೋಟ್ಟೂ ನಿಂತಿರೋ ದೀಪ ನಾವೂ
ಹೇ ಗುಮ್ಮಾ ಗುಮ್ಮಾಗುಮ್ಮಾಗುಮ್ಮಾಗುಮ್ಮಾ ಬಂದಾನೋ
ಈ ನಮ್ಮ ನಿಮ್ಮ ಊರಿನಲ್ಲಿ ಶಾಂತಿ ತಂದಾನೋ
ಹೇ ಗುಮ್ಮಾ ಗುಮ್ಮಾಗುಮ್ಮಾಗುಮ್ಮಾಗುಮ್ಮಾ ಬಂದಾನೋ 
ಈ ಆತ್ಮಸಾಕ್ಷಿಗಿಂತಾ ಬೇರೆ ಇಲ್ಲಾ ಅಂದಾನೋ 
ಹೇ ಗುಮ್ಮಾ ಗುಮ್ಮಾಗುಮ್ಮಾಗುಮ್ಮಾಗುಮ್ಮಾ ಬಂದಾನೋ 
ಈ ನಮ್ಮ ನಿಮ್ಮ ಊರಿನಲ್ಲಿ   ಶಾಂತಿ ತಂದಾನೋ
ಹೇ ಗುಮ್ಮಾ ಗುಮ್ಮಾಗುಮ್ಮಾಗುಮ್ಮಾಗುಮ್ಮಾ ಬಂದಾ ಬಂದಾನೋ 
ಈ ಆತ್ಮಸಾಕ್ಷಿಗಿಂತಾ ಬೇರೆ ಇಲ್ಲಾ ಅಂದಾನೋ 
----------------------------------------------------------------------------------------------------------------------

ಟಗರು (೨೦೧೮) - ಯಾರೇ ನೀನು ಚತುರೇ..  ಚತುರೇ..  
ಸಂಗೀತ : ಚರಣರಾಜ ಸಾಹಿತ್ಯ : ಜಯಂತ್ ಕಾಯ್ಕಣಿ ಗಾಯನ : ವಾರಿಜಾಶ್ರೀವೇಣುಗೋಪಾಲ್ 

ಹಾರುವ ಗರಿಯೇ .. ನೀನೂ .. ಮೂಡುವಾ ಗೂಡನು
ನೀ ಕದ ಕುಣಿಯೇ ನೀನು ಹಠವಾ ಬೇಕೆಯಾ ತಿಳಿಯೇ
ಯಾರೇ ನೀನು ಚತುರೇ.. ಕುಣಿದರೇ ಮಾತೇಕೆ ಬೇರೆ
ಯಾರೇ ನೀನು ಚತುರೇ..  ಚತುರೇ..
ಗಾಳೀಯಲ್ಲಿ ಗಂಧವ ಧೂಪದಂತೇ ವ್ಯಾಪಿಸು
ಭೂಮಿ ಮೇಲೆ ಹೂವಿನಾ ಹೆಜ್ಜೆಯನ್ನೂ ಚಾಪಿಸು
ಯಾರೇ ನೀನು ಚತುರೇ.. ಕುಣಿದರೇ ಮಾತೇ ಬೇರೆ
ಯಾರೇ ನೀನು ಚತುರೇ..  ಚತುರೇ..

ಸಿಟ್ಟಾದರೇ ನೀನು ಮದರಂಗಿ ಅಲ್ಲಾ
ನಾ ರಮಿಸಲೂ ಕದ್ದು ತರಲೇನು ನಲ್ಲಾ
ಈ ಗೊಂಬೆಗೇ ನೀನೇ ಕೊಡಬೇಕು ಕೀಲಿ
ನಾ ಹಸಿವೆಯ ಮರೆವೇ ನಿನ್ನ ಹಾಡು ಕೇಳಿ
ಮಸೀಯಾಗಿರುವಾ ಬೆರಳಿನಿಂದಾ
ಕಾದಿತ್ತಿ ಒಟ್ಟು ಎಷ್ಟು ಚಂದಾ... ಆಆಆ...
ಯಾರೇ ನೀನು ಚತುರೇ.. ಕುಣಿದರೇ ಮಾತೇ ಬೇರೆ
ಯಾರೇ ನೀನು ಚತುರೇ..  ಚತುರೇ..
ಆಟದಲ್ಲೂ ಬೇಕು ನೀ ಅಮ್ಮನಂತೇ ಮನಸ್ಸಿಡೂ
ನಾಳೆ ನಮ್ಮ ಪಾಲಿಗೆ ಇಲ್ಲದಂತೆ ನರ್ತಿಸು... ಆಆಆ...
----------------------------------------------------------------------------------------------------------------------

No comments:

Post a Comment