716. ಸಂತು ಸ್ಟ್ರೇಟ್ ಫಾರಾವ್ಡ್ (೨೦೧೬)



ಸಂತು ಸ್ಟ್ರೇಟ್ ಫಾರ್ವರ್ಡ್ ಚಲನಚಿತ್ರದ ಹಾಡುಗಳು 
  1. ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
  2. ಕೂಡಿ ಇಟ್ಟ ಕನಸಿನೊಡೆಯ ಕಣ್ಣ ಮುಂದೆ ಬಂದ ಸಮಯ
  3. ಅಂತೂ ಇಂತೂ ಹೃದಯಕೆ
  4. ಅವಲಕ್ಕಿ ಗಿವ್ ಗಿವ್ ಒಂದ್ ಒಳ್ಳೆ ಸಂದೇಶ 
  5. ಹೇಳೋರ ಮಾತು ಕೇಳು ಗುರು
ಸಂತು ಸ್ಟ್ರೇಟ್ ಫಾರ್ವರ್ಡ್  (೨೦೧೬) - ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಸಂಗೀತ : ವಿ.ಹರಿಕೃಷ್ಣ  ಸಾಹಿತ್ಯ : ಯೋಗರಾಜ್ ಭಟ್ ಗಾಯನ : ಸೋನು ನಿಗಮ್

ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು
ಭಾವನೆಗಳ ಹಿಂಡು ಬಾರಿಸುತಿದೆ ಬ್ಯಾಂಡು
ಹೇಳಿಕೊಂಡೆ ನನಗೆ ಸುವ್ವಾಲಿಯನು
ಹೃದಯದ ಮನೆಯ ಅಂಗಳದಲ್ಲಿ
ನಿಂತಿದೆ ನಲುಮೆ ನಾಚಿಕೆಯಲ್ಲಿ
ಎದೆ ಬಾಗಿಲ ಬೆಲ್ಲೋತ್ತಿದೆ ಮೃದು ಮಲ್ಲಿಗೆ ಹೂವೊಂದು
ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು.

ಮನಸಲಿ ಮಂಡಿಗೆಯ ಕದ್ದು ತಿಂದಿರುವೆ ಕಂಡುಹಿಡುಯುವಳೇ ಹುಡುಗಿ ಸಿಕ್ಕರೆ ಎದುರಲ್ಲಿ
ಕಚಗುಳಿ ಇಟ್ಟಂತೆ ಕಿಲ ಕಿಲ ಎನ್ನುವುದು ಏತಕೆ ಬದಮಾಶು ಹೃದಯ ಉತ್ತರ ಸಿಗದಿಲ್ಲಿ
ನಸುನಗುವುದು ನನಗಂತೂ ಅತಿಯೆಂದರೆ ಅತಿ ಹೊಸತು ನಾನೀತರ ಯಾಕಾಗಿರುವೆ
ಕಲಿತಿದೆ ಮೈಯಿ ಅದರುವುದನ್ನು ಹುಡುಗಿಯ ಮುಂದೆ ಹೆದರುವುದನ್ನು
ಕೊಬ್ಬೆಲ್ಲವು ಮಬ್ಬಾಗಿದೆ ಏನಾಗಿದೆ ನನಗಿಂದು
ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು.

ಅನಿಸಿಕೆಗಳನೆಲ್ಲಾ ಎಣಿಸಿ ಹೇಳಿದರು ಹೇಳಲೇ ಬೇಕಾದ ವಿಷಯ ಮರೆತೇ ಹೋಗುವುದು
ನನ್ನದು ನೇರ ನುಡಿ ಒಂತರ ಖಾರಪುಡಿ ಆದರೂ ನನ್ನ ಮಾತೆ ನನಗೆ ಕವಿತೆ ಎನಿಸುವುದು
ನೆನಪೆಂಬುವ ನವಿಲುಗರಿ ಕಸ ಗುಡಿಸಿದೆ ಮನಸಿನಲಿ ಎದೆ ಬೀದಿಯು ಕ್ಲೀನಾಗಿಹುದು
ಚೆಂದದ ಹೃದಯ ನನಗಿದೆ ಎಂದು ಖಂಡಿತವಾಗಿ ತಿಳಿಯಿತು ಇಂದು
ಕೈಯೆತ್ತುತ್ತ ನಾ ಹೇಳುವೆ ಒಲವಾಗಿದೆ ನನಗಿಂದು
ತಂಗಾಳಿಯಲಿಂದು ಬಂದಿದೆ ಹೊಸ ಸೌಂಡು
ಏರಿ ಕುಳಿತೆ ಒಲವ ಉಯ್ಯಾಲೆಯನು.
--------------------------------------------------------------------------------------------------------------------------

ಸಂತು ಸ್ಟ್ರೇಟ್ ಫಾರ್ವರ್ಡ್   (೨೦೧೬) - ಕೂಡಿ ಇಟ್ಟ ಕನಸಿನೊಡೆಯ ಕಣ್ಣ ಮುಂದೆ ಬಂದ ಸಮಯ
ಸಂಗೀತ : ವಿ.ಹರಿಕೃಷ್ಣ  ಸಾಹಿತ್ಯ :ಗೌಸ್ ಪೀರ್  ಗಾಯನ : ಸೋನು ನಿಗಮ್, ಸುನೀತಾ ಗೋಪುರಾಜ್ 

ಹೆಣ್ಣು : ಕೂಡಿ ಇಟ್ಟ ಕನಸಿನೊಡೆಯ ಕಣ್ಣ ಮುಂದೆ ಬಂದ ಸಮಯ
          ನೋಡೋ ಮಿಂಚೋ ಕಂಗಳ ಏನೋ ಹೇಳೋ ಹಂಬಲ
          ನನ್ನ ಲೋಕ ತುಂಬಿ ಪುಳಕ ನಿಂದೆ ಸಪ್ಪಳ
ಗಂಡು : ಮೋಹ ಮೂಡಿದಾಗ ಮೋಡಕೆ ಹೊತ್ತು ಗೊತ್ತು ಹೋಗಿ ಪಕ್ಕಕೆ ಮಳೆಯ ಚುಂಬನ ಸಾಗರಕೆ
           ಇಷ್ಟ ಆದ ಮೇಲೆ ಹೃದಯಕೆ ಅಸ್ತು ಅನ್ನು ಅಷ್ಟೇ ಪ್ರೇಮಕೆ ಬೇಡ ಯಾವುದೇ ಹಿಂಜರಿಕೆ.

ಗಂಡು : ಬೀಳುವಾಗ ನೀನು ಹೀಗೆ ಕಣ್ಣಿಗೆ ಕೆಂಡಕಾರೋ ಸೂರ್ಯ ಕೂಡ ತಣ್ಣಗೆ
ಹೆಣ್ಣು : ಹೃದಯದ ಸಿಹಿ ಪರಿಚಯ ಕಿರು ಬೆರಳಲಿ ಮಾಡುತ ಕಂಡಲಿ ಕಚಗುಳಿ ಇಡು ನಿನ್ನ ಶೈಲಿ ಅಧ್ಭುತ
ಗಂಡು : ಜೇನಿನ ಜಾತ್ರೆಗೆ ಬಂದಾಗ ಆಸೆಗೆ ಏತಕೆ ಬೀಗ
ಹೆಣ್ಣು : ಎಲ್ಲೋ ಒಮ್ಮೆ ಕೋಟಿ ವರುಷಕೆ ಇಂತ ಮೈತ್ರಿ ಸಾಧ್ಯ ಹರುಷಕೆ ಬಂತು ಜೀವಕೆ ಲವಲವಿಕೆ
          ಈಗಲೂನು ಬರದ ನಂಬಿಕೆ ಸಿದ್ದ ಮಾಡಿ ಮುತ್ತು ವೇದಿಕೆ ಹೀಗೆ ಬಂದ ನೀ ಹತ್ತಿರಕೆ.
ಹೆಣ್ಣು : ಸಂಧಿಸೋಕೆ ಕೊಟ್ಟರೆ ನಾ ಸಮ್ಮತಿ ಬಂಧಿಸೋದು ಯಾವ ಸೀಮೆ ಪದ್ಧತಿ
ಗಂಡು : ಬಯಕೆಯ ಬರಸಿಡಿಲನು ತಡೆಹಿಡಿಯಲು ಸಾಧ್ಯವೇ ಮಿಲನದ ಹೊಸ ಲೋಕಕೆ ನಯನಗಳೆ ಸೇತುವೆ
ಹೆಣ್ಣು : ಜೀವನ ಲಕ್ಷಣ ನೀ ಬಂದು ಪ್ರೀತಿಸು ಹೀಗೆ ನೀ ಎಂದೂ
ಗಂಡು : ಮೀನಮೇಷ ಏಕೇ ಸುಮ್ಮನೆ ನನ್ನ ತೋಳೇ ನಿನ್ನ ಅರಮನೆ ಬಾಳು ಬೆಚ್ಚಗೆ ನನ್ನೊಡನೆ
           ಹೇಳಬಲ್ಲೆ ಮಾಡಿ ಘರ್ಜನೆ ನಿನ್ನ ಪ್ರೀತಿ ನನ್ನ ಸಾಧನೆ ನೀನೆ ಮೊದಲು ನೀ ನನ್ನ ಕೊನೆ.
-------------------------------------------------------------------------------------------------------------------------

ಸಂತು ಸ್ಟ್ರೇಟ್ ಫಾರ್ವರ್ಡ್ (೨೦೧೬)  - ಅಂತೂ ಇಂತೂ ಹೃದಯಕೆ
ಸಂಗೀತ : ವಿ.ಹರಿಕೃಷ್ಣ  ಸಾಹಿತ್ಯ :ಗೌಸ್ ಪೀರ್  ಗಾಯನ :ಟಿಪ್ಪು


ಅಂತೂ ಇಂತೂ ಹೃದಯಕೆ ಒಂದು ಒಳ್ಳೆ ಕೆಲಸ ಸಿಕ್ಕಿದೆ 
ಇಂದು ಅಪರೂಪದ ಅಧ್ಬುತ ಒಂದು ಅಪ್ಸರೆ ರೂಪದಿ ಎದುರು ಬಂದು
ಅಂತೂ ಇಂತೂ ಹೃದಯಕೆ ಒಂದು ಒಳ್ಳೆ ಕೆಲಸ ಸಿಕ್ಕಿದೆ 
ಇಂದು ಅಪರೂಪದ ಅಧ್ಬುತ ಒಂದು ಅಪ್ಸರೆ ರೂಪದಿ ಎದುರು ಬಂದು
ಅಲ್ಲಿಂದ ಇಲ್ಲಿತನಕ ಆಗಿಹುದು ಪ್ರೀತಿ ಹಿಂಗೇ 
ಗೊತ್ತಿಲ್ಲ ನಂಗೂ ಕೂಡ ಇಲ್ಲಿಂದ ಮುಂದೆ ಹೆಂಗೆ
ಬಾರೆ ಪ್ರೀತಿ ಮಾಡುವ ಕಮ್ ಕಮ್ ಕಮ್ ಬಲಗಾಲಿಟ್ಟು
ಚೂ ಚೂರೇ ಮುಂದುವರೆಯುವ ಕ್ಲಿಯರ್ ಆಯ್ತು ಎಲ್ಲ ರೂಟು
ಅಂತೂ ಇಂತೂ ಹೃದಯಕೆ ಒಂದು ಒಳ್ಳೆ ಕೆಲಸ ಸಿಕ್ಕಿದೆ 
ಇಂದು ಅಪರೂಪದ ಅಧ್ಬುತ ಒಂದು ಅಪ್ಸರೆ ರೂಪದಿ ಎದುರು ಬಂದು.

ಸಲ್ಯೂಟು ಚಿನ್ನ ನಿನ್ನ ಬ್ಯುಟಿಗೆ ಕ್ರೆಡಿಟ್ಟು ನಿನ್ನ ತಂದೆ ತಾಯಿಗೆ
ನಿಂಗೆ ಜನ್ಮ ಕೊಟ್ಟರು ನನ್ನ ಕಣ್ಣ ಮುಂದೆ ಬಿಟ್ಟರು
ಸೆಲೆಕ್ಟು ಆದೆ ನನ್ನ ಲವ್ವಿಗೆ ಮ್ಯಾಜಿಕ್ಕು ನಿಂಗೆ ಈ ಗುಂಡಿಗೆ
ಈಗ ಎಲ್ಲೇ ಹೋದರು ನಿಂದೆ ಹ್ಯಾಂಗೂ ಓವರು
ಆದ ಮೇಲೆ ನಿಂಜೊತೆ ಕನೆಕ್ಟು ಇಂಥ ಸ್ಪೆಷಲ್ ಎಫ್ಫೆಕ್ಟು
ಕೀಲಿ ಹಾಕಿ ಇಟ್ಟ ಖಾಲಿ ಹಾರ್ಟಿನಲ್ಲಿ ದಾಳಿ ಮಾಡಿರುವೆ ಗೋಲಿ ಆಡಿರುವೆ
ಬಾರೆ ಪ್ರೀತಿ ಮಾಡುವ ಲವ್ ಡಬ್ ಲವ್ ಅನ್ನೋ ಹಾರ್ಟು
ಚೂ ಚೂರೇ ಮುಂದುವರೆಯುವ ಲವ್ವ ಲವ್ವ ಲವ್ವ ಅಂದಗಾಯ್ತು
ಅಂತೂ ಇಂತೂ ಹೃದಯಕೆ ಒಂದು ಒಳ್ಳೆ ಕೆಲಸ ಸಿಕ್ಕಿದೆ 
ಇಂದು ಅಪರೂಪದ ಅಧ್ಬುತ ಒಂದು ಅಪ್ಸರೆ ರೂಪದಿ ಎದುರು…..

ಕಮಿಟ್ಟು ಆದ್ರೆ ಒಮ್ಮೆ ಲವ್ವಿಗೆ ಜಗತ್ತೇ ಬ್ಯೂಟಿಫುಲ್ಲು ಕಣ್ಣಿಗೆ 
ಪ್ರೇಮಿ ಮುಂದೆ ದೇವರೇ ಸ್ವರ್ಗ ಕೂಡ ಚಿಲ್ಲರೆ
ಲಗಾಮು ಇಲ್ಲವಲ್ಲ ಮನಸಿಗೆ ಗುಲಾಮ ಆಗೇ ಬಿಟ್ಟೆ ಕನಸಿಗೆ 
ಹೆಚ್ಚಿ ಹೋಗಿ ಅಕ್ಕರೆ ಊಟ ನಿದ್ದೆ ಕಣ್ಮರೆ
ಹಾಡುತಾ ಸಾಗುವ ಮೆಲ್ಲಗೆ ಕೇಳಲೇ ಬೇಡ ನೀ ಎಲ್ಲಿಗೆ 
ಪ್ರೇಮಲೋಕದಲ್ಲಿ ರಾಜರೋಷವಾಗಿ ಬೀಟು ಹಾಕುವ ಡೇಟು ಮಾಡುವ
ಬಾ ರೇ ಪ್ರೀ ತಿ ಮಾಡುವ ಡುಂ ಡುಂ ಡುಂ ಮದುವೆ ಡೇಟು
ಚೂ ಚೂರೇ ಮುಂದುವರೆಯುವ ಫಿಕ್ಸ್ ಮಾಡಿ ಯಾಕೆ ಲೇಟು
ಅಂತೂ ಇಂತೂ ಹೃದಯಕೆ ಒಂದು ಒಳ್ಳೆ ಕೆಲಸ ಸಿಕ್ಕಿದೆ 
ಇಂದು ಅಪರೂಪದ ಅಧ್ಬುತ ಒಂದು ಅಪ್ಸರೆ ರೂಪದಿ ಎದುರು ಬಂದು.
--------------------------------------------------------------------------------------------------------------------------

ಸಂತು ಸ್ಟ್ರೇಟ್ ಫಾರ್ವರ್ಡ್  (೨೦೧೬) - ಅವಲಕ್ಕಿ ಗಿವ್ ಗಿವ್ ಒಂದ್ ಒಳ್ಳೆ ಸಂದೇಶ 
ಸಂಗೀತ : ವಿ.ಹರಿಕೃಷ್ಣ  ಸಾಹಿತ್ಯ : ಯೋಗರಾಜ ಭಟ್ಟ  ಗಾಯನ : ಟಿಪ್ಪು 

ಅವಲಕ್ಕಿ ಗಿವ್ ಗಿವ್ ಒಂದ್ ಒಳ್ಳೆ ಸಂದೇಶ 
ಲವ್ವಿನಲ್ಲಿ ಮಾಡ್ಕೊಬಾರದು ಎಂದೂ ಆಯಾಸ
ಪ್ರೀತಿಸದವರನೇ ಕಟ್ಕೊಳ್ಳೋದು ಒಳ್ಳೆ ಅಭ್ಯಾಸ ಸಿಂಪಲ್ ವಿಷಯ ಸರ್
ಕೇಳೋರ್ ಕೇಳಿ ಬಿಡೋರ್ ಬಿಡಿ ತುಂಬಾ ಸಂತೋಷ
ಕನಸಲ್ಲೊಂದು ಮನಸಲ್ಲೊಂದು ಮಾಡ್ಕೊಬಾರದು ವ್ಯತ್ಯಾಸ
ಕನ್ಫ್ಯೂಸ್ ಆಗಿ ನಿಂತುಕೊಂಡು ನೋಡಬಾರ್ದು ಆಕಾಶ ಸಿಂಪಲ್ ವಿಷಯ ಸರ್
ಓಳ್ಳೆ ಹುಡುಗ ಸಿಕ್ಕವನೆ ಅವನ ವಿಷಯ ಬೇರೇನೆ 
ಸಪ್ತಪದಿಯನ್ನು ನಡೆಸೋದಿಲ್ಲ ಹೊತ್ಕೊಂಡ್ ಹೋಗ್ತಾನೆ
ಓಳ್ಳೆ ಹುಡುಗ ಸಿಕ್ಕವನೆ ಅವನ ವಿಷಯ ಬೇರೇನೆ 
ಸಪ್ತಪದಿಯನ್ನು ನಡೆಸೋದಿಲ್ಲ ಹೊತ್ಕೊಂಡ್ ಹೋಗ್ತಾನೆ

ಯಾರಿಗಿಲ್ಲ ಯಾರಿಗುಂಟು ಶಾದಿಭಾಗ್ಯ 
ಬಾಳನಂಟು ಮೂರುಗಂಟೆ ಪೆರ್ಮನೆಂಟು ಹಲೋ …….
ಚಿಕೂ ಸೋ ಸೋ ಲಡಕಿ ಜೊತೆಗೆ ಸ್ಟ್ರೈಟು ಫಾರ್ವರ್ಡ್ ಲಡಕ 
ಸೆಲೆಕ್ಷನ್ ನಿಂದೇ ತಾನೇ ಸಂತೋಷನಾ ಪಡಕ
ಎತ್ಕಂಡವನೇ ಹುಡುಗ ನಿನ್ನ ಟೋಟಲ್ ಮೂರೂ ಲೋಕ 
ಸೀದಾ ಅವನ ಹೆಗಲ ಏರಿ ರಾಣಿಯಂಗೆ ಕುಂತಗಾ
ಕೋಟಿಯಲ್ಲಿ ಇದೆ ಒಳ್ಳೆ ಕಾಂಬಿನೇಷನ್ನು 
ಇರದೆಇಲ್ಲ ಇಬ್ಬರಲ್ಲೂ ಕಾಂಪ್ಲಿಕಷನ್ನು 
ಡೈರಿಯಲ್ಲಿ ಬರೆದಿಡು ನೀನು ಇದುನ್ನು
ಓಳ್ಳೆ ಗಂಡು ಸಿಕ್ಕವನೆ ಅವನ ಗತ್ತು ಬೇರೇನೆ 
ನಿನ್ನ ಲೈಫು ಪೂರ್ತಿ ಚೇಂಜ್ ಆಗುತ್ತೆ ನಾಳೆ ಮುಂಜಾನೆ
ಓಳ್ಳೆ ಗಂಡು ಸಿಕ್ಕವನೆ ಅವನ ಗತ್ತು ಬೇರೇನೆ 
ನಿನ್ನ ಲೈಫು ಪೂರ್ತಿ ಚೇಂಜ್ ಆಗುತ್ತೆ ನಾಳೆ ಮುಂಜಾನೆ

ಗಂಡು ಜನ್ಮ ಜಂಡೂ ಬಾಂಬು ಹಿಂದಕೂ ಮುಂದಕೂ ಜೈ ಜೈ ರಾಮು
ಪ್ರಿತಿಸೋದೇ ಪ್ರಾಬ್ಲೆಮ್ಮು ಹಲೋ ………
ಕಿವಿಯ ಓಲೆ ತೆಗೆದು ಸ್ವಲ್ಪ ನನ್ನ ಮಾತು ಕೇಳೇ
 ನಗತಾ ನಗತಾ ತಿಳ್ಕಬೇಕು ನೀನು ಹೂವಿನ ಮಾಲೆ
ಅಕ್ಕಿ ಕಾಳು ಹಾಕವರೆಲ್ಲಾ ಹೊಂಟೋಗ್ತಾರೆ ನಾಳೆ 
ಯಾರಿರ್ತಾರೆ ಕೊನೆಯ ತನಕ ಅವನ ಹೆಸರು ಹೇಳೆ
ಬಾಳುವೆಯು ಕನಸಿನ ಮೆರವಣಿಗೆ ಕಾಣುತಿರು ಕನಸನು 
ಕೊನೆವರೆಗೆ ಒಪ್ಪಿಬಿಡು ಒಲವನು ಒಳಗೊಳಗೇ
ಜೀವದ ಗೆಳೆಯ ಸಿಕ್ಕವನೆ ಅವನ ವಿಷಯ ಬೇರೇನೆ 
ಸ್ವರ್ಗದಲ್ಲಿ ಎಂದೂ ಅವನು ನಿನ್ನ ಕಟ್ಟಿಕೊಂಡವನೆ
ಜೀವದ ಗೆಳೆಯ ಸಿಕ್ಕವನೆ ಅವನ ವಿಷಯ ಬೇರೇನೆ 
ಸ್ವರ್ಗದಲ್ಲಿ ಎಂದೂ ಅವನು ನಿನ್ನ ಕಟ್ಟಿಕೊಂಡವನೆ.
--------------------------------------------------------------------------------------------------------------------------

ಸಂತು ಸ್ಟ್ರೇಟ್ ಫಾರ್ವರ್ಡ್  (೨೦೧೬) - ಹೇಳೋರ ಮಾತು ಕೇಳು ಗುರು
ಸಂಗೀತ : ವಿ.ಹರಿಕೃಷ್ಣ  ಸಾಹಿತ್ಯ :ಚೇತನ್ ಕುಮಾರ್ ಗಾಯನ : ರವಿಶಂಕರ್, ರಂಜಿತ್, ಶಶಾಂಕ್, ಸಂತೋಷ್ ವೆಂಕಿ 

ಹೇಳೋರ ಮಾತು ಕೇಳು ಗುರು ಸ್ವಲ್ಪ ತಗ್ಗಿ ಬಗ್ಗಿ ನಡಿಯುತಿರು
ಅದು ಆಗಲ್ಲ ಇದು ಹೋಗಲ್ಲ ಅಡ್ವಯಿಸೆಲ್ಲಾ ಇವರಿಗಂಟಲ್ಲ
ಕಿರಿಕ್ಕ ಎಲ್ಲಾ ಬೇಕಾ ಗುರು ಕೆಳಗಿಳಿಸು ನಿನ್ನ ಕಾಲರು
ಕೆಳಗಿಳಿಯಲ್ಲ ಅದು ನಡೆಯಲ್ಲ ಹುಲಿ ಎಂದೂ ವೆಜ್ಜು ತಿನ್ನಲ್ಲ
ಸುನಾಮಿಗೆ ಸೈನ್ಬೋರ್ಡ್ ಇಡಬೇಡ 
ಸ್ಟೆಥಾಸ್ಕೊಪ ಸಿಡಿಲಿಗೆ ಹಿಡಿಬೇಡ 
ಕತ್ತಿಗೆ ಕರುಣೆಯ ಪಾಠ ಬೇಡ
ಬೊಧನೆ ಕೇಳುವ ವಯಸು ಮುಂದಿದೆ
ಮಾಡೋದೇ ಬೇಡ ರೀ ವಾದ
ಇವ ಸೆಲ್ಫ್ ಮೇಡು ಶೇಹಝ್ಹಾದ
ಸುಂಸುಮ್ನೆ ಟಕ್ಕರು ಯಾಕೆ ಗುರು 
ಆಗಾಗ ಸ್ವಲ್ಪ ತೆಪ್ಪಗಿರು
ಬಾಸು ಬಗ್ಗಲ್ಲ ಅವರು ಬಗ್ಗಲ್ಲ 
ಇವರು ಸುಮ್ನಿದ್ರೆ ಸೂಟ್ ಆಗಲ್ಲ

ಬಿದ್ದೋನು ಏಳಲೇ ಬೇಕು
ಎದ್ದನೋ ಬೀಳಲೇ ಬೇಕು
ಇದುವೇ ಜಗದ ನಿಯಮ
ಗೆದ್ದೋನು ಓಡಲೇ ಬೇಕು
ಬಿದ್ದೋನು ಓಡಲೇ ಬೇಕು
ತಿಳಿಯೋ ಜಗದ ಮರ್ಮ
ಯಾಕೆ ಬೇಕು ಸ್ಪೀಡು
ಸ್ಮುತಾಗಿರಲಿ ರೈಡು
ಇಂಥ ಆಟಿಟ್ಯೂಡು ಆರೋಗ್ಯಕ್ಕೆ ಬ್ಯಾಡು
ರಾಕೆಟ್ಟಿಗೆ ಸ್ಪೀಡ್ ಲಿಮಿಟ್ ಹಾಕಬೇಡ
ಆಕಾಶಕ್ಕೆ ಟೇಪನು ಹಿಡಿಬೇಡ
ಸೈರೆನ್ನಿಗೆ ಸೈಲೆನ್ಸ್ ಹೇಳಬೇಡ
ಬೊಧನೆ ಕೇಳುವ ವಯಸು ಮುಂದಿದೆ
ಮಾಡೋದೇ ಬೇಡ ರೀ ವಾದ
ಇವ ಸೆಲ್ಫ್ ಮೇಡು ಶೇಹಝ್ಹಾದ
ಚಿಕ್ಕೋರಿಗೆ ಚಿಕ್ಕೊನೆ ಆಗು
ದೊಡ್ಡವರಿಗೆ ದೊಡ್ಡೋನೆ ಆಗು
ಚಿಕ್ಕೋನು ದೊಡ್ಡೋನು ಒಮ್ಮೆ
ದೊಡ್ಡೋನು ಚಿಕ್ಕೋನು ಒಮ್ಮೆ ಬದುಕು ಚಕ್ರದಂಗೆ
ಯಪ್ಪಾ ಎಂಥ ಟಾರ್ಚರ್ ಯಾರೋ ನಿನ್ನ ಟೀಚರ್
ಉಲ್ಟಾ ಸೀದಾ ನೇಚರ್ ಹೆಂಗೋ ನಿನ್ನ ಫ್ಯೂಚರ್
ಸೂರ್ಯಂಗೆ ವ್ಯಾಲಿಡಿಟಿ ಚಿಂತೆ ಬೇಡ
ಹಾವಿಗೆ ಮುತ್ತಿಡೋ ಆಟ ಬೇಡ
ಓಡೋ ಟ್ರೈನಿಗೆ ಡಿಚ್ಚಿ ಹೊಡಿಬೇಡ
ಬೊಧನೆ ಕೇಳುವ ವಯಸು ಮುಂದಿದೆ
ಮಾಡೋದೇ ಬೇಡ ರೀ ವಾದ
ಇವ ಸೆಲ್ಫ್ ಮೇಡು ಶೇಹಝ್ಹಾದ
ಅಡವರ ಬಾಯಿಗೆ ಸಿಕ್ಕದಿರು ಹ್ಹೂ ಅನ್ಕೊಂಡು ಹೇಂಗೂ ಸೇಫ್ ಆಗಿರು
ಬಾಸ್ ಬಗ್ಗಲ್ಲ ಅವರು ಜಗ್ಗಲ್ಲ ಇವರು ಸುಮ್ನಿದ್ರೆ ಸೂಟಾಗಲ್ಲ
ಸೆಲ್ಫ್ ಮೇಡು ಶೇಹಝ್ಹಾದ
--------------------------------------------------------------------------------

No comments:

Post a Comment