27. ಕರುಳಿನ ಕರೆ (1970)

ಕರುಳಿನ ಕರೆ ಚಿತ್ರದ ಹಾಡುಗಳು 
  1. ಅ ಆ ಇ ಈ ಕನ್ನಡದ ಅಕ್ಷರ ಮಾಲೆ 
  2. ಮೈಸೂರ ದಸರಾ ಇಷ್ಟೊಂದು 
  3. ಕಂಡೇ ನಾ ಕಂಡೇ 
  4. ಹೊಡೆಯುವ ಕೈ ಒಂದು 
  5. ನನ್ನವರಿಗೆ ಯಾರು ಸತಿಯೇ 
  6. ಅಸತೋಮ ಸದ್ಗಮಯ 
  7. ತಾಜಾ ತಾಜಾ ಕಡ್ಲೇ ಕಾಯಿ 
ಕರುಳಿನ ಕರೆ (1970) - ಅ ಆ ಇ ಈ
ಸಂಗೀತ : ರಚನೆ: ಎಂ. ರಂಗರಾವ್ ಗಾಯನ: ಬಿ.ಕೆ.ಸುಮಿತ್ರ ಮತ್ತು ಸಂಗಡಿಗರು

ಅ ಆ..ಅ ಆ.. ಇ ಈ..ಇ ಈ..ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ

ಆ ಆ (ಆಟ ಊಟ ಓಟ ಕನ್ನಡ ಒಂದನೆ ಪಾಠ)೨
ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ |
ಅ ಆ..ಅ ಆ.. ಇ ಈ..ಇ ಈ..ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ
 
ಇ ಇ (ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು)
ಈ ಈ (ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು) 
ಅ ಆ..ಅ ಆ.. ಇ ಈ..ಇ ಈ..ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ
 
ಉ ಉ (ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ)
ಊ ಊ (ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ) 
ಅ ಆ..ಅ ಆ.. ಇ ಈ..ಇ ಈ..ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ

ಋ ೠ ಎ ಏ ಐ.. ಭಾರತ ಮಾತೆಗೆ ಜೈ !
ಒ ಒ (ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು)
ಓ ಓ (ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು) 
ಅ ಆ..ಅ ಆ.. ಇ ಈ..ಇ ಈ..ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ
 ಔ ಅಂ ಅಃ..ಔ ಅಂ ಅಃ..
ಅಃ.. ಆಹಾ.. ಆಹ ಹ ಹ ಹ
-------------------------------------------------------------------------------------------------------------------------

ಕರುಳಿನ ಕರೆ (1970) -ಕಂಡೆ ನಾ ಕಂಡೆ ಕಾಣದ ತಾಯಿಯ ನಾ ಕಂಡೆ
ಸಂಗೀತ: ಎಂ.ರಂಗರಾವ, ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಪಿ.ಬಿ.ಶ್ರೀನಿವಾಸ್

ಕಂಡೆ ನಾ ಕಂಡೆ ಕಂಡೆ ನಾ ಕಂಡೆ 
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ ಸವಿಯ ನಾ ಉಂಡೆ
ತಾಯಿ ನಗೆಯೆ ಜೋಗುಳ ಅವಳ ನೋಟವೆ ಹೂಮಳೆ
ತಾಯಿ ನಗೆಯೆ ಜೋಗುಳ

ಅವಳ ನೋಟವೆ ಹೂಮಳೆ ತಾಯಿ ಮಾತೆ ವೇದವು
ಅವಳೆ ಪ್ರೇಮ ಸ್ವರೂಪವು 
ಕಂಡೆ ನಾ ಕಂಡೆ ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ ಸವಿಯ ನಾ ಉಂಡೆ

ಅರಿಯದ ಯಾವುದೊ ಸಂಬಂಧ    ಮೈಮರೆಸುವ ಮಮತೆಯ ಈ ಬಂಧ
ಅರಿಯದ ಯಾವುದೊ ಸಂಬಂಧ   ಮೈಮರೆಸುವ ಮಮತೆಯ ಈ ಬಂಧ
ಇದಾವ ಜನ್ಮದ ಋಣಾನುಬಂಧ    ಇದಾವ ಜನ್ಮದ ಋಣಾನುಬಂಧ
ಒಲವಿನ ಈ ಅನುಬಂಧ
ಕಂಡೆ ನಾ ಕಂಡೆ  ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ ಸವಿಯ ನಾ ಉಂಡೆ
--------------------------------------------------------------------------------------------------------------------------

ಕರುಳಿನ ಕರೆ (1970) - ಮೈಸೂರು ದಸರಾ ಎಷ್ಟೊಂದು ಸುಂದರ
ಸಂಗೀತ: ಎಂ.ರಂಗರಾವ ಸಾಹಿತ್ಯ: ಆರ್.ಎನ್.ಜಯಗೋಪಾಲ್  ಹಾಡಿದವರು: ಪಿ.ಬಿ.ಶ್ರೀನಿವಾಸ್

ಮೈಸೂರು ದಸರಾ ಎಷ್ಟೊಂದು ಸುಂದರ
ಚೆಲ್ಲಿದೆ ನಗೆಯ ಪನ್ನೀರ, ಎಲ್ಲೆಲ್ಲೂ ನಗೆಯ ಪನ್ನೀರ...
ಮೈಸೂರು ದಸರಾ ಎಷ್ಟೊಂದು ಸುಂದರ
ಚೆಲ್ಲಿದೆ ನಗೆಯ ಪನ್ನೀರ, ಎಲ್ಲೆಲ್ಲೂ ನಗೆಯ ಪನ್ನೀರ...

ಹೇ..ಹೇ.. ಹೇಯ್
ಚಾಮುಂಡಿ ಮಹಿಷನ ಕೊಂದ ಮಹಾರಾತ್ರಿ ....
ಧರ್ಮ  ಅಧರ್ಮವ ಸೋಲಿಸಿದ ರಾತ್ರಿ
ಚಾಮುಂಡಿ ಮಹಿಷನ ಕೊಂದ ಮಹಾರಾತ್ರಿ
ಧರ್ಮ  ಅಧರ್ಮವ ಸೋಲಿಸಿದ ರಾತ್ರಿ
ಕನ್ನಡ ಜನತೆಗೆ ಮಂಗಳ ರಾತ್ರಿ 
ಕನ್ನಡ ಜನತೆಗೆ ಮಂಗಳ ರಾತ್ರಿ 
ಮನೆ ಮನ ನಲಿಸುವ ಶುಭ ನವರಾತ್ರಿ 
ಮೈಸೂರು ದಸರಾ ಎಷ್ಟೊಂದು ಸುಂದರ
ಚೆಲ್ಲಿದೆ ನಗೆಯ ಪನ್ನೀರ, ಎಲ್ಲೆಲ್ಲೂ ನಗೆಯ ಪನ್ನೀರ... 

ಮಾರನೊಮಿ  ಆಯುಧ ಪೂಜೆಯ ಮಾಡಿ 
ಮಾತಾಯ ಚರಣದಿ ವರವನು ಬೇಡಿ 
ಮಾರನೊಮಿ  ಆಯುಧ ಪೂಜೆಯ ಮಾಡಿ 
ಮಾತಾಯ ಚರಣದಿ ವರವನು ಬೇಡಿ 
ಮಕ್ಕಳು ನಾವೆಲ್ಲಾ ಒಂದಾಗಿ ಕೂಡಿ
ಮಕ್ಕಳು ನಾವೆಲ್ಲಾ ಒಂದಾಗಿ ಕೂಡಿ
ಕೊಂಡಾಡುವ ಬನ್ನಿ ಶುಭ ನವರಾತ್ರಿ 
ಮೈಸೂರು ದಸರಾ ಎಷ್ಟೊಂದು ಸುಂದರ
ಚೆಲ್ಲಿದೆ ನಗೆಯ ಪನ್ನೀರ, ಎಲ್ಲೆಲ್ಲೂ ನಗೆಯ ಪನ್ನೀರ... 

ಶತ್ರುವ ಅಳಿಸಲು ಶಸ್ತ್ರವ ಹೂಡಿ....  
ಬಡತನ ಹರಿಸಲು ಪಂಥವ ಮಾಡಿ 
ಶತ್ರುವ ಅಳಿಸಲು ಶಸ್ತ್ರವ ಹೂಡಿ....  
ಬಡತನ ಹರಿಸಲು ಪಂಥವ ಮಾಡಿ 
ಹೆಗಲಿಗೆ ಹೆಗಲು ನಾವ ಜೊತೆ ನೀಡಿ 
ಹೆಗಲಿಗೆ ಹೆಗಲು ನಾವ ಜೊತೆ ನೀಡಿ
ದುಡಿಯೋಣ ತಾಯಿಯ ಹೆಸರನು ಹಾಡಿ
ಮೈಸೂರು ದಸರಾ ಎಷ್ಟೊಂದು ಸುಂದರ
ಚೆಲ್ಲಿದೆ ನಗೆಯ ಪನ್ನೀರ, ಎಲ್ಲೆಲ್ಲೂ ನಗೆಯ ಪನ್ನೀರ... 
-------------------------------------------------------------------------------------------------------------------------

ಕರುಳಿನ ಕರೆ (1970) - ಹೊಡೆಯುವ ಕೈ ಒಂದು ಕಣ್ಣೊರೆಸುವ ಕೈ ಒಂದು
ಸಂಗೀತ: ಎಂ.ರಂಗರಾವ, ಸಾಹಿತ್ಯ: ಆರ್.ಎನ್.ಜಯಗೋಪಾಲ, ಹಾಡಿದವರು: ಪಿ.ಬಿ.ಶ್ರೀನಿವಾಸ್

ಹೊಡೆಯುವ ಕೈ ಒಂದು ಕಣ್ಣೊರೆಸುವ ಕೈ ಒಂದು
ಕರಗದ ಕಲ್ಲೊಂದು ಕರುಣೆಯ ಕಡಲೊಂದು
ಹೊಡೆಯುವ ಕೈ ಒಂದು ಕಣ್ಣೊರೆಸುವ ಕೈ ಒಂದು
ಕರಗದ ಕಲ್ಲೊಂದು ಕರುಣೆಯ ಕಡಲೊಂದು

ಹೋಗು ಹೋಗೆನ್ನುತ ಕೊರಳೊಂದು 
ನಿಲ್ಲು ನಿಲ್ಲೆನುತ ತಡೆವ ಕರುಳೊಂದು 
ಒಲುಮೆಯ ಅಮೃತವಿಲ್ಲಿ ದ್ವೇಷದ ವಿಷವೋ ಅಲ್ಲಿ 
ಹೊಡೆಯುವ ಕೈ ಒಂದು ಕಣ್ಣೊರೆಸುವ ಕೈ ಒಂದು
ಕರಗದ ಕಲ್ಲೊಂದು ಕರುಣೆಯ ಕಡಲೊಂದು 

ಒಂದೆಡೆ ದೈವದ ಪ್ರತಿರೂಪ 
ಇನ್ನೊಂದೆಡೆ ದಾನದ ನಿಜರೂಪ 
ಏನಿದು ವಿಧಿಯಾ ಶಾಪ ಈ ತಾಯಿಗೆ ಏತಕೀ ಶಾಪ 
ಹೊಡೆಯುವ ಕೈ ಒಂದು ಕಣ್ಣೊರೆಸುವ ಕೈ ಒಂದು
ಕರಗದ ಕಲ್ಲೊಂದು ಕರುಣೆಯ ಕಡಲೊಂದು 
--------------------------------------------------------------------------------------------------------------------------

ಕರುಳಿನ ಕರೆ (1970) - ನನ್ನವರಿಗೆ ಯಾರು ಸತಿಯೇ
ಸಂಗೀತ: ಎಂ.ರಂಗರಾವ, ಸಾಹಿತ್ಯ: ಆರ್.ಎನ್.ಜಯಗೋಪಾಲ, ಹಾಡಿದವರು: ಎಲ್.ಆರ್.ಈಶ್ವರಿ, ಎಸ್.ಜಾನಕೀ  

ಆಆಆ.. ಆಹಾಹಾಹಾ... ಆಆಆ ಆಆಆ.. ಆಹಾಹಾಹಾ... ಆಆಆ 
ಆಆಆ.. ಆಹಾಹಾಹಾ... ಆಆಆ ಆಆಆ.. ಆಹಾಹಾಹಾ... ಆಆಆ 
ನನ್ನವರಿಗೇ ಯಾರು ಸಾಟಿಯೇ 
ಅಂದದಲಿ ಚೆಂದದಲಿ ಇಂದ್ರನ ಹೋಲುವಂತ 
ನನ್ನವರಿಗೇ ಯಾರು ಸಾಟಿಯೇ 
ಅಂದದಲಿ ಚೆಂದದಲಿ ಇಂದ್ರನ ಹೋಲುವಂತ 
ನನ್ನವರಿಗೇ ಯಾರು ಸಾಟಿಯೇ 

ಆಆಆಅ... ಆಆಆಅ... ಆಆಆಅ... 
ನಗುತಿರಲು ಮುತ್ತು ಮಳೆ ಮಾತಾಡೇ... ಜೇನ ಹೋಳೆ... 
ಆಆಆಅ.... ಮೊಗದಲ್ಲಿ ರಾಜಕಳೆ   
ಮೊಗದಲ್ಲಿ ರಾಜಕಳೆ ನೋಟವದೋ ...  ಮಿಂಚು ಬಳೆ 
ನನ್ನವರು ಬರುವಾಗ ಹೂ ಅರಳಿ ನಗುವುದು 
ನನ್ನವರ ನಡೆಯ ನೋಡಿ ರಾಜ ಹಂಸ ನಾಚುವುದು 
ನನ್ನವರಿಗೇ ಯಾರು ಸಾಟಿಯೇ 
ಅಂದದಲಿ ಚೆಂದದಲಿ ಇಂದ್ರನ ಹೋಲುವಂತ 
ನನ್ನವರಿಗೇ ಯಾರು ಸಾಟಿಯೇ 

ಆಆಆ.. ಧೈರ್ಯದಲೀ ಭೀಮನೂ ಸೋಬಗಿನಲಿ ಸೋಮನೂ 
ಗೌಡತಿಗೆ ರಾಮನಲು ರಾಧಿಕೆಗೆ ಶ್ಯಾಮನಲು 
ಧೈರ್ಯದಲೀ ಭೀಮನೂ ಸೋಬಗಿನಲಿ ಸೋಮನೂ 
ಗೌಡತಿಗೆ ರಾಮನಲು ರಾಧಿಕೆಗೆ ಶ್ಯಾಮನಲು 
ಕೊಟ್ಟ ಮಾತ ತಪ್ಪದೆ ನಡೆಸುವಂತ ಹಮ್ಮಿರ 
ಕೊಟ್ಟ ಕಾರ್ಯ ಪಟ್ಟು ಬಿಡದೆ ನಡೆಸುವಂತ ಛಲಗಾರ 
ನನ್ನವರಿಗೆ ಗೆಳತೀ ನನ್ನವರಿಗೆ ಹೇಳೇ 
ನನ್ನವರಿಗೇ ಯಾರು ಸಾಟಿಯೇ 
ಅಂದದಲಿ ಚೆಂದದಲಿ ಇಂದ್ರನ ಹೋಲುವಂತ 
ನನ್ನವರಿಗೇ ಯಾರು ಸಾಟಿಯೇ 

ಆಆಆ... ಹರೆಯದಲೂ ನಟಿಸುತಲಿ ಜಡೆ ಹಿಡಿದು ಎಳೆಯುವರು... ಆಆಆ 
ಸರಸಮಯ ಸಮಯದಲಿ... 
ಸರಸಮಯ ಸಮಯದಲಿ ಸೆರಗನ್ನು ಎಳೆಯುವರು 
ನನ್ನವರ ತುಂಟಾಟ ಹೇಳಲಾರೆ ಅಮ್ಮಯ್ಯಾ 
ನನ್ನವರ ಕೀಟಲೇಯ ಕೇಳಬೇಡ ದಮ್ಮಯ್ಯಾ 
ನನ್ನವರಿಗೇ ಯಾರು ಸಾಟಿಯೇ 
ಅಂದದಲಿ ಚೆಂದದಲಿ ಇಂದ್ರನ ಹೋಲುವಂತ 
ನನ್ನವರಿಗೇ ಗೆಳತಿ .. ನನ್ನವರಿಗೇ ಹೇಳೇ.. 
ನನ್ನವರಿಗೆ ಯಾರು ಸಾಟಿಯೇ 
ಅಂದದಲಿ ಚೆಂದದಲಿ ಇಂದ್ರನ ಹೋಲುವಂತ 
ನನ್ನವರಿಗೆ ಯಾರು ಸಾಟಿಯೇ 
-------------------------------------------------------------------------------------------------------------------------

ಕರುಳಿನ ಕರೆ (1970) - ಅಸತೋಮ ಸದ್ಗಮಯ
ಸಂಗೀತ: ಎಂ.ರಂಗರಾವ, ಸಾಹಿತ್ಯ: ಆರ್.ಎನ್.ಜಯಗೋಪಾಲ, ಹಾಡಿದವರು: ಪಿ.ಬಿ.ಶ್ರೀನಿವಾಸ್

--------------------------------------------------------------------------------------------------------------------------

ಕರುಳಿನ ಕರೆ (1970) - ತಾಜಾ ತಾಜಾ ಕಡ್ಲೇ ಕಾಯಿ
ಸಂಗೀತ: ಎಂ.ರಂಗರಾವ, ಸಾಹಿತ್ಯ: ಆರ್.ಎನ್.ಜಯಗೋಪಾಲ, ಹಾಡಿದವರು: ಎಸ್.ಜಾನಕೀ 

ಕಡ್ಲೆ ಕಾಯ್...  ಕಡ್ಲೆ ಕಾಯ್... ಗರಮ್ ಗರಮ್ ಕಡ್ಲೆ ಕಾಯ್ 
ತಾಜಾ ತಾಜಾ ಕಡ್ಲೆ ಕಾಯ್....ಗರಮ್ ಗರಮ್ ಕಡ್ಲೆ ಕಾಯ್ 
ಬೆಂಗಳೂರು ಕರಗದ ಬಸವನ ಪರಿಷೆಯ ಬಡವರ ಬಾದಾಮಿ ಕಡ್ಲೆ ಕಾಯ್  
ಕಡ್ಲೆ ಕಾಯ್....  ಕಡ್ಲೆ ಕಾಯ್... 

ಶಾಲೆಯಾಗೆ ಮಕ್ಕಳು ಕದ್ದು ತಿನ್ನೋ ಕಡ್ಲೆ ಕಾಯ್....     
ಪಾರ್ಕಿನಾಗೇ ಕಬ್ಬನ ಪಾರ್ಕಿನಾಗೆ ಲಾಲಭಾಗ ಪಾರ್ಕಿನಾಗೆ 
ಪಾರ್ಕಿನಾಗೆ ಜೋಡಿಗಳು ಕೊಳ್ಳುವಂತ ಕಡ್ಲೆ ಕಾಯ್....     

ಮುನಿಸಿಕೊಂಡ ಹೆಂಡತಿಯ ಒಲಿಸುವಂತ ಕಡ್ಲೆ ಕಾಯ್....     
ಮುನಿಸಿಕೊಂಡ ಹೆಂಡತಿಯ ಒಲಿಸುವಂತ ಕಡ್ಲೆ ಕಾಯ್....     
ಅತ್ತೆಯ ಬಾಯಿಗೇ ... ಅತ್ತೆಯ ಬಾಯಿಗೇ ಬೀಗ ಹಾಕೋ ಕಳ್ಳೇಕಾಯ್... 
ತಾಜಾ ತಾಜಾ ಕಡ್ಲೆ ಕಾಯ್....ಗರಮ್ ಗರಮ್ ಕಡ್ಲೆ ಕಾಯ್ 
ಬೆಂಗಳೂರು ಕರಗದ ಬಸವನ ಪರಿಷೆಯ ಬಡವರ ಬಾದಾಮಿ ಕಡ್ಲೆ ಕಾಯ್  
ಕಡ್ಲೆ ಕಾಯ್....  ಕಡ್ಲೆ ಕಾಯ್... 

ಸಂಗೀತ ಕಚೇರಿ... ರಿರಿರಿರಿರಿರಿರಿಈಈಈ  ತರರೀನಾ... ಆಆಆ...ನಾ  
ಸಂಗೀತ ಕಚೇರಿ.... ಸಂಗೀತ ಕಚೇರಿ ನಡುವೆ ತಿನ್ನೋ ಕಡ್ಲೆ ಕಾಯ್... 
ಸಂಗೀತ ಕಚೇರಿ ನಡುವೆ ತಿನ್ನೋ ಕಡ್ಲೆ ಕಾಯ್... 
ಭಾಷಣವ ಕೇಳೋವಾಗ ಕುಕ್ಕಿ ತಿನ್ನೋ  ಕಡ್ಲೆ ಕಾಯ್... 
 
ಹೊಟ್ಟೆಗಿಲ್ಲ ದಾಸರಿಗೆ ಹಸಿವು ನೀಗೋ  ಕಡ್ಲೆ ಕಾಯ್... 
ಹೊಟ್ಟೆಗಿಲ್ಲ ದಾಸರಿಗೆ ಹಸಿವು ನೀಗೋ  ಕಡ್ಲೆ ಕಾಯ್... 
ಗಾಂಧೀ ತಾತ... ಆಆಆಅ 
ಗಾಂಧೀ ತಾತ ಮೆಚ್ಚಿಕೊಂಡ ಗರಮ್ ಗರಮ್ 
ಗಾಂಧೀ ತಾತ ಗಾಂಧೀ ತಾತ ಗಾಂಧೀ ತಾತ 
ಮೆಚ್ಚಿಕೊಂಡ ಗರಮ್ ಗರಮ್ ಗಾಂಧೀ ತಾತ 
ತಾಜಾ ತಾಜಾ ಕಡ್ಲೆ ಕಾಯ್....ಗರಮ್ ಗರಮ್ ಕಡ್ಲೆ ಕಾಯ್ 
ಬೆಂಗಳೂರು ಕರಗದ ಬಸವನ ಪರಿಷೆಯ ಬಡವರ ಬಾದಾಮಿ ಕಡ್ಲೆ ಕಾಯ್  
ಕಡ್ಲೆ ಕಾಯ್....  ಕಡ್ಲೆ ಕಾಯ್... 
ಕಡ್ಲೆ ಕಾಯ್....  ಕಡ್ಲೆ ಕಾಯ್... ಗರಮ್ ಗರಮ್ ಕಡ್ಲೆ ಕಾಯ್....  ಕಡ್ಲೆ ಕಾಯ್... 
ಕಡ್ಲೆ ಕಾಯ್....  ಕಡ್ಲೆ ಕಾಯ್... 
 -------------------------------------------------------------------------------------------------------------------------

No comments:

Post a Comment