730. ಪರಮಾತ್ಮ (೨೦೧೧)



ಪರಮಾತ್ಮ ಚಲನಚಿತ್ರದ ಹಾಡುಗಳು
  1. ಪರವಶನಾದೆನು, ಅರಿಯುವ ಮುನ್ನವೇ
  2. ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ
  3. ತನ್ಮಯಳಾದೆನು ತಿಳಿಯುವ ಮುನ್ನವೇ
  4. ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ....
  5. ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
  6. ಹೆಸರು ಪೂರ್ತಿ ಹೇಳದೆ ತುಟಿಯ ಕಚ್ಚಿಕೊಳ್ಳಲೇ
ಪರಮಾತ್ಮ (2011) - ಪರವಶನಾದೆನು ಅರಿಯುವ ಮುನ್ನವೇ
ಸಂಗೀತ:ವಿ.ಹರಿಕೃಷ್ಣ, ಸಾಹಿತ್ಯ:ಜಯಂತ್ ಕಾಯ್ಕಿಣಿ, ಗಾಯಕ:ಸೋನು ನಿಗಮ್, 

ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ,
ಇದಕಿಂತ ಬೇಗ ಇನ್ನೂ, ಸಿಗಬಾರದಿತ್ತೆ ನೀನು,
ಇನ್ನಾದರೂ ಕೂಡಿಟ್ಟುಕೊ ನೀ ನನ್ನನೂ....  ಕಳೆಯುವ ಮುನ್ನವೇ,
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ

ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ,
ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲು,
ಹೂ ಅರಳುವ ಸದ್ದನು, ನಿನ್ನ ನಗೆಯಲಿ ಕೇಳಬಲ್ಲೆ,
ನನ್ನ ಏಕಾಂತವನ್ನು,ತಿದ್ದಿಕೊಡು ನೀನೀಗ ನಿಂತಲ್ಲೆ,
ನಾನೇನೇ ಅಂದರೂನೂ,ನನಗಿಂತ ಚೂಟಿ ನೀನು,
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ...  ಕದಿಯುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ...

ಹ್ಹಾ.. ನನನ .. ನಾನನನ 
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ,
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ,
ನನ್ನಾ ಕೌತುಕ ಒಂದೊಂದೇ ಹೇಳಬೇಕು,
ಆಲಿಸುವಾಗ ನಂಬು ನನ್ನನ್ನೇ ಸಾಕು,
ಸಹವಾಸ ದೋಷದಿಂದ, ಸರಿಹೋಗಬಹುದೆ ನಾನು,
ನನಗಾಗಿಯೇ ಕಾದಿಟ್ಟುಕೊ ಹಟವೊಂದನೂ..  ಕೆಣಕುವ ಮುನ್ನವೇ;
ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೇ ಪ್ರಣಯಕು ಮುನ್ನವೇ.
-----------------------------------------------------------------------------------------------------------

ಪರಮಾತ್ಮ (೨೦೧೧) - ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ
ಸಂಗೀತ : ವಿ.ಹರಿಕೃಷ್ಣ  ಸಾಹಿತ್ಯ ಮತ್ತು ಗಾಯನ : ಯೋಗರಾಜಭಟ್ಟ 

ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್‌ದೂ ರೀ.. (ಆಆ ಆಆ)
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ ಯಾವತ್ತೂ ಇರಬಾರ್ದು ರೀ.. (ಆಆ ಆಆ)
ಹೊಸ ಹುಡುಗಿ ಕೈಯಲ್ಲಿ ಕೆಂಪಾದ ಗೊರಂಟಿ, 
ಹಳೆ ಗೆಳತಿ ಕೆಮ್ಮಿದರೆ ಪ್ರಳಯಾನೇ ಗ್ಯಾರೆಂಟೀ,
ಒಬ್ಳನ್ನೇ ಲವ್ ಮಾಡಿ ಚೆನ್ನಾಗಿರಿ... , ಇನ್ನೊಬ್ಳ ಫೋನ್ ನಂಬರ್ ಇಟ್ಕೊಂಡಿರಿ..(ಆಆ ಆಆ)
ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್‌ದೂ ರೀ.. (ಆಆ ಆಆ)
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ ಯಾವತ್ತೂ ಇರಬಾರ್ದು ರೀ.. (ಆಆ ಆಆ)
ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್‌ದೂ ರೀ.. (ಆಆ ಆಆ)

(ಓಓಓಓಓ ಓಓಓಓಓ ಓಓಓಓಓ )
ಹುಡುಗೀರ ಮನಸಲ್ಲಿ ಏನೇನಿದೆ ತಿಳ್ಕೊಳ್ಳೋ ತಾಕತ್ತು ನಮಗೆಲ್ಲಿದೇ
ಪ್ರೊಬ್ಲೇಮೇ ಇರದ ಫೀಮೇಲೂ ಇಲ್ಲಾ..
ದಿಂತಕಿತ ಟಕ ತಾಕಿತ ದಿನ ತಾಕಿತ ದಿಮಿ ತಾಕಿತ
ಸಿಕ್ಸ್ರ್ರು ಹೊಡೆಯೋದು ಬ್ಯಾಟ್ ಇಲ್ಲದೇ, ಪ್ರೀತ್ಸೋಕೆ ಆಗಲ್ಲ ಡೌಟ್ ಇಲ್ಲದೇ..
ಅನುಮಾನ ಇರದ ಅನುರಾಗ ಇಲ್ಲಾ..
ದಿಂತಕಿತ ತರ್‌ಗಿದತಿಕಿಟ ತರ್‌ಗಿದತಿಕಿಟ ತರ್‌ಗಿದತಿಕಿಟ
ಮಾ... ಡ್ರನ್ನು ಪ್ರೇಮಕ್ಕೆ ಮೈಲೆಜು ಕಮ್ಮಿ, 
ಸೆಲ್ಫೋನು ಬಂದ್ಮೇಲೆ ಹಿಂಗಾಯ್ತು ಸ್ವಾಮಿ,
ಲವ್ವಲ್ಲಿ ಕಣ್ಣೀರು ಕಂಪಲ್ಸರೀ...  (ತರ್‌ಗಿಟತಿಕಿಟ ತರ್‌ಗಿಟತಿಕಿಟ ತರ್‌ಗಿಟತಿಕಿಟ)
ಯಾವ್ದುಕ್ಕೂ ಕರ್ಚೀಫು ಇಟ್ಕೊಂಡಿರಿ..(ಆಆಆಆ )
ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್‌ದೂ ರೀ.. (ಆಆಆಆ )
ಅತ್ಲಾಗೆ ಆ ಹುಡುಗಿ, ಇತ್ಲಾಗಿ ಈ ಹುಡುಗಿ ಯಾವತ್ತೂ ಇರಬಾರ್ದು ರೀ.. (ಆಆಆಆ )

ಧೀಮ್ ಧೀಮ್ ಧೀಮ್ ತನು ತಕಿಟ ಧೀಮಿ ತಕಿಟ ಧನು ತಕಿಟ ಧೀಮಿ 
ಯಾರಾನಾ ಕೈ ಕೊಟ್ರೆ ಪಾರ್ಟೀ ಕೊಡಿ ನೆನೆಪೆಲ್ಲ ಸೋಪ್ ಹಾಕಿ ತೋಳ್ಕೊಂಡ್ಬಿಡಿ,
ಕಣ್ಣಲ್ಲಿ ಸೋಪು ಹೋಗ್ಬಾರ್‌ದು ಕಣ್ರೀ,,..
ದಿಂತಕಿತ ಟಕ ತಾಕಿತ ದಿನ ತಾಕಿತ ಡಿಮಿ ತಾಕಿತ
ಟೈಮ್ ಇದ್ರೆ ಒಂಚೂರು ದುಕ್ಕ ಪಡಿ ಮೆಸ್ಸೆಜು ಬರಬಹುದು ಕಾಯ್ತಾ ಇರಿ,
ಹೃದಯಕ್ಕೆ ಗ್ಯಾಪು ಕೊಡಬಾರ್ದು ಕಣ್ರೀ..
ದಿಂತಕಿತ ತರ್‌ಗಿದತಿಕಿಟ ತರ್‌ಗಿದತಿಕಿಟ ತರ್‌ಗಿದತಿಕಿಟ
ಬೆನ್ನಲ್ಲಿ ಹುಣ್ನಂತೆ ಆ ಫರ್ಸ್ಟ್ ಲವ್ವು   ಯಾಮಾರಿ ಅಂಗಾತಾ ಮಲ್ಕೊಂಡ್ರೆ ನೋವು,
ಎಲ್ಲಾನೂ ಮರೆಯೋಕೆ ಹೋಗ್ಬಾರ್‌ದು ರೀ,
(ತರ್‌ಗಿಟತಿಕಿಟ ತರ್‌ಗಿಟತಿಕಿಟ ತರ್‌ಗಿಟತಿಕಿಟ)
ಕೆರೆಯೋಕೆ ಹುಣ್ಣ್ಒಂದು ಇರಬೇಕು ರೀ..(ಆಆಆಆ )
ಕತ್ಲಲ್ಲಿ ಕರಡಿಗೆ ಜ್ಯಾಮೂನು ತಿನಿಸೋಕೆ ಯಾವತ್ತೂ ಹೋಗ್ಬಾರ್‌ದೂ ರೀ.. (ಆಆಆಆ )
ಬಾಕಿ ಸಮಾಚಾರು ಬ್ರೇಕ್ ಕೆ ಬಾದ್ ಅಂತೀನಿ ನನ್ನನ್ನು ನಂಬ್ಕೊಂಡಿರಿ..
--------------------------------------------------------------------------------------------------------------------------

ಪರಮಾತ್ಮ (೨೦೧೧) - ತನ್ಮಯಳಾದೆನು ತಿಳಿಯುವ ಮುನ್ನವೇ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಶ್ರೇಯ ಘೋಷಾಲ್ 


ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನಿನ್ನಲ್ಲೇ ಜೀವವನ್ನೂ ಅಡವಿಟ್ಟು ಬಂದೆ ನಾನು
ಕಣ್ಣುಮುಚ್ಚಿಯೇ ನಾ ನೋಡಲೇ ಪುಟವೊಂದನು ... ಹರಿಯುವ ಮುನ್ನವೇ..
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನೋ ಹೇಳುವಾಗ ಕಣ್ಣು ತುಂಬಿ ಬಂದರೆ
ಈ ಮನಸಿಗೆ ಭಾಸವು ಇಲ್ಲೇ ನೀನು ನನ್ನ ಕೂಗಿದಂತೇ
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ ನಾ ನಿಂತೇ...
ಮನಸಲೆ ಅಂದ ಮಾತು.. ತಡವಾಗಿ ಕೇಳಿತೇನು
ಗೊತ್ತಿಲ್ಲದೇ ನಾ ಗೀಚಲೇ ಹೆಸರೊಂದನು... ಅಳಿಸುವ ಮುನ್ನವೇ..
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ಆಆಆ.. ನಾನಾನಾಆಅ ನಾನಾನಾಆಅ ನಾನಾನಾಆಅ
ಪ್ರತಿ ಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ..
ತೆರೆದರೆ ಬೀಸುವ ಗಾಳಿಯು ಹೇಳಿದೆ ಸಾಂತ್ವನ..
ಓ ನನ್ನ ವಿರಹವು... ನಿನ್ನಿಂದ ಇನ್ನು ಚಂದ..
ವಿವರಿಸಲಾರೆ ಎಲ್ಲ ನಾ ದೂರದಿಂದ..
ನೆನಪನ್ನೋ ರಾಶಿ ಹಾಕಿ... ಎಣಿಸುತ್ತ ಕೂರಲೇನು...
ಕನ್ನಡಿಯಲಿ ನಾ ಹುಡುಕಲೇ ನಗುವೊಂದನು.. ಒರಿಸುವ ಮುನ್ನವೇ..
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
-----------------------------------------------------------------------------------------------------------------------

ಪರಮಾತ್ಮ (2011), - ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ....
ಸಂಗೀತ: ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ್ಟ, ಗಾಯನ: ಹರಿಕೃಷ್ಣ

ಕಾಲೇಜ್ ಗೇಟ್-ಅಲ್ಲಿ ಫೇಲ್-ಆಗಿ ಬಂದವರ ಕಾಪಾಡೋ.. ಚೊಂಬೆಶ್ವರ... 
(ಆಆ...) ಮಾರ್ಕ್ಸ್ ಕಾರ್ಡಿನಲಿ ಸೊನ್ನೆ.. ರೌಂಡ್-ಆಗಿ ಕಾಣುವುದು..  ಎನ್ ಮಾಡ್ಲಿ.. ಮಾಡ್ಲಿ... ಚೊಂಬೆಶ್ವರ...
ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ.... ಉಸಿರಾಡು ಆಡು ಆಡು ಆಡು ಆಡು ಅಂತಾನೆ.... 
ನಮ್ಮಪ್ಪ ಅಪ್ಪ ಅಪ್ಪ ಅಪ್ಪಅಪ್ಪ  ಪುಣ್ಯಾತ್ಮ.. ಪಾಸ್ಸ್ ಆಗು ಆಗು ಆಗು ಆಗು ಅಂತಾನೆ..
ಫೇಲ್ ಆಗಾದವರುಂಟೆ ಚೊಂಬೆಶ್ವರ..  ಪಾಸ್-ಆಗಿ ಎನ್ ಮಾಡ್ಲಿ ಒಂದೇ ಸಲ..
ತನ ಡೂನ ಡೂನನ ದೂನ ದೂನ ಡೂ ದೂನ...  ತನ ದೂನ ದೂನ ದೂನ ದೂನ ಡೂ ದೂನ...

ಒಂದ್ ಒಂದ್ಲಾ ಒಂದು.. ಯೆರ್ಡ್ ಯೆರ್ಡ್ಲಾ ಯೆರ್ಡು.... ಮೂರ್ ಮೂರ್ಲಾ ಮೂರು.. ಬೈ-ಹಾರ್‍ಟು ಮಾಡು.. 
ಓ ಮೈ ಗೊಡ್ಜೀಲ್ಲಾ.. ವಾಟ್ ಎ ಕ್ಯಾಲ್ಕ್ಯುಲೇಶನ್... 
ಹೈಯಷ್ಟು ಮಾರ್ಕ್ಸು ಕೊಟ್ಟೊನೆ ಲೂಸೂ, ಅರ್ಧಕ್ಕೆ ಕೋರ್ಸು ಬಿಟ್ಟೋವ್ನೇ ಬಾಸ್ಸು.. 
ಮ್ಯೂಸಿಕ್-ಕ್ಕೆ ಸರಿಇಲ್ಲ ಏಳೇ ಸ್ವರ.. ಇನ್ನೆಷ್ತ್ಟು ಕೂಗೋದು ಎಮ್ಮೆ ತರ.. ತರ.. ತರ.. ತರ... 
ಟ್ರೈ ಮಾಡು ಏನಾದ್ರೂ ಬ್ಯಾರೆ ತರ..  ಸೈಕಲ್ಲಿನಲೀ ಏರು ತೆಂಗಿನ್-ಮರ.. ಮರ...ಮರ....ಮರ... 
ಕೆ ರಾಮ.. ಪೀಯುಸಿಯಲ್ಲ್ ಒಮ್ಮೆ ಡುಮ್ಕಿ.....  ಆಮೇಲೆ ಡಿಗ್ರೀಲೀ  ಮೂರ್ ಮೂರೂ ಬಾಕಿ... 
ಎಗ್ಸ್ಯಾಮ್ ಹಾಲಿನಲ್ಲಿ ನನ್ನ ಪರಮಾತ್ಮ..  ಮಾರ್ನಿಂಗೂ ಷೋಗೆ ಹೋಗು ಕಂದ ಅಂತಾನೆ.. 
ಕ್ಲಾಸ್-ಅಲ್ಲಿ ನಾನು ಓಬ್‌ನೇ ಒಳ್ಳೇ ಪುಣ್ಯಾತ್ಮ.. 
ಆನ್ಸಾರ್ರು ಶೀಟಿನಲ್ಲೆ ಬರೆದೆ ಕೊಸ್ಚನ್ನೇ 
ಸಬ್ಜೆಕ್ಟ್-ಎ ಸರಿ ಇಲ್ಲ ಚೊಂಬೆಶ್ವರ..  ಸಿಲಬಸ್ಸು ಇರ್ಬಾರ್‍ದ ಸಿನಿಮಾ ತರ..
ತನ ದೂನ ದೂನ ದೂನ ದೂನ ಡೂ ದೂನ... 
ತನ ದೂನ ದೂನ ದೂನ ದೂನ ಡೂ ದೂನ...
ಸೈ ಜಗಲ ದಗಲ ವೇ ಸೈ ಜಗಲ ದಗಲ ವೇ ಜಗಲ ದಗಲ ವೇ ಜಗಲ ದಗಲ ವೇ 
ಬ್ರೇಕ್ ಫ್ರೀ ಪರಮಾತ್ಮ ಲವ್ ಏಂಡ್ ಕರ್ಮಾ ಆರ್ ಜಸ್ಟ ದಿ ಸೇಮ್ 
ಜೈ ಹೋ ಪರಮಾತ್ಮ ರೋಕ್ ದಿ ವರ್ಲ್ಡ್ ವಿಥ್ ಯುವರ್ ಹೋಲಿ ನೇಮ್ 

ಓದ್ಕೊಂಡು.. ಓದ್ಕೊಂಡು.. ಓದ್ಕೊಂಡಿರು ಡೌಟ್-ಇದ್ರೆ ಹುಡ್ಗಿರ್ರ್‌ನ ಕೇಳು ಗುರು...ಗುರು...ಗುರು...ಗುರು... 
ಇಲ್ಲಿಂದ ಹೋಗ್ತಾರ ಯಾರಾದರೂ... ಕಾಲೇಜು ಟೆಂಪಲ್ಲು ಇಲ್ಲೇ ಇರು...ಇರು...ಇರು...ಇರು...ಇರು... 
ಕಾಲೊಂದು ಭಗವಂತ ಹಾಕಿರುವ ಟೋಪಿ..  ಇಲ್ಲಿಂದ ಪಾಸಾಗಿ ಹೋದವರೇ ಪಾಪಿ.. 
ದನ ಕಾಯುತಿದ್ದ ಹರಿಕೃಷ್ಣ ಪರಮಾತ್ಮ.. ಕುರುಕ್ಷೇತ್ರ-ದಲ್ಲಿ ಡ್ರೈವರ್-ಆಗಿ ಇರ್ಲಿಲ್ವೆ.. 
ಅನಿಸಿದ್ದು ಮಾಡುವವನು ಮಾತ್ರ ಪುಣ್ಯಾತ್ಮ.. ಮಾಡೋದು ಏನು ಅಂತ ನಮಗೆ ಗೊತ್ತಿಲ್ವೇ.. 
ಸಿಸ್ಟೆಮ್ಮೆ.. ಸರಿ ಇಲ್ಲ ಚೊಂಬೆಶ್ವರ.. ಪ್ರೈಮ್ ಮಿನಿಸ್ಟರ್ ಅಗ್ಬಿಡ್ಲ ಒಂದೇ ಸಲ..
ತನ ದೂನ ದೂನ ದೂನ ದೂನ ಡೂ ದೂನ... 
ತನ ದೂನ ದೂನ ದೂನ ದೂನ ಡೂ ದೂನ... ಕಾಲೇಜು.. ಶಾಶ್ವತ...
-------------------------------------------------------------------------------

ಪರಮಾತ್ಮ (2011), - ಯಾವನಿಗ್ ಗೊತ್ತು, ಯಾವನಿಗ್ ಗೊತ್ತು 
ಸಂಗೀತ: ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ್ಟ, ಗಾಯನ: ಟಿಪ್ಪು

ನೇನೇ ಜೀನಿಯಸೇ .. ವಿದೇಶೀ ಸಿರಿ ಸೇಲಯಾಗ್ತಿದೆ ಬಾಬಾ.. ಹೂಂ .. 
ಏ ಬಿ ಸಿ ಡಿ ನಾ ಆಲೂಗಡ್ದೆನಾ ಗೋಡೇ ಹಲ್ಲಿನಾ...   
ಯಾವನಿಗ್ ಗೊತ್ತೂ .. ಏನು ಮಾಡೋದು ಒಂಟಿ ಹೂವೊಂದು ರೋಡಲ್ಲಿ ಸಿಕ್ತು, ರೋಡಲ್ಲಿ ಸಿಕ್ತು
ಏನು ಹೇಳೋದು ಇಂತ ಟೈಮಲ್ಲಿ ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಎದೆಯಂಬ ಕಾಲಿ ಡಬಕ್ಕೆ ಒಂದು ಸಣ್ಣ ಕಲ್ಲು ಬಿದ್ದಂಗಾಯ್ತು 
ಡಬ್ಬ ಯಾತಕ್ಕೆ ಸೌಂಡು ಮಾಡುತ್ತೊ ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಇವ್ಳು ಸಿಕ್ತಾಳ, ಕೈ ಕೊಡ್ತಾಳ ಯಾವನಿಗ್ ಗೊತ್ತು, ಯಾವನಿಗ್ ಗೊತ್ತು

ಆಯ್ ವಾಂಟ್ ಸ್ಟ್ರೇಂಜರ್ ರಾಕ್ ನೇ ಸ್ಟೈಲ್ ಇಸ್ ನೇಮ್ ಚೇಂಜ್ 
ಅದು ಯಾವ್ದೊ ಒಂಟಿ ಹಕ್ಕಿ ಸದನ್ನ ಕೇಳುತ್ತಾ ಮಲ್ಕೊಂಡಿದ್ದೆ ಮಧ್ಯಾನ
ಕಾಲ್ ಕೇಜಿ ಪ್ರೀತಿಗೊಂದು ಪದ್ಯಾನ ಬರೆದಿಟ್ಟೂ ಕೆರೆದುಕೊಂಡೆ ಗಡ್ಡಾನ
ಕಾಳಿದಾಸ ಕಾವ್ಯ ನಮಪ್ಪನ್ನ ಕೇಳ್ರಿ ಕಾಲಿ ಹಾಳೆಗಿಂತ ಒಳ್ಳೆ ಕಾವ್ಯ ಇಲ್ರಿ
ಹೃದಯದ ಮೇಲೆ, ಹೈ ಹೀಲ್ಡು ಹಾಕಿ ರಾಜಕುಮಾರಿ ನಿಂತಂಗಾಯ್ತು
ಇಂತ ಟೈಮಲ್ಲಿ ಹಾಡು ಬೇಕಿತ್ತಾ ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ದೇವ ದಾಸಾನು ಎಣ್ಣೆ ಬಿಟ್ಟಿದ್ನಾ ಯಾವನಿಗ್ ಗೊತ್ತು, ಯಾವನಿಗ್ ಗೊತ್ತು, 

ಕನಸಲ್ಲಿ ಯಾಕೊ ಯಾವ್ದು ಸಾಲಲ್ಲ ಮೋಡಾನ ಮುದ್ದು ಮಾಡೊಕಾಗಲ್ಲಾ
ಚಿಟ್ಟೆಗೆ ಚಡ್ಡಿ ಹಾಕೊಕಾಗ್ಲಿಲ್ಲ ನಿಮ್ಗೆ ಗೊತ್ತಲ್ವ ನಾನು ಮುಟ್ಠಾಳ
ಮತ್ತೆ ಮತ್ತೆ ಬಂತು ಎದೆಯಲ್ಲೊಂದು ಲಹರಿ
ತುಂಬ ಒಳ್ಳೆ ಕನ್ನಡ ಮಾತಾಡ್ಬಿಟ್ಟೆ ಕಣ್ರಿ
ಮೂಗು ಬೊಟ್ಟಾಗಿ ಹುಟ್ಟಿದ್ರೆ ನಾನು ಇವಳ ಮೊತೀಲೆ ಇರಬಹುದಿತ್ತು
ನನ್ನ ಆಸೆಗೆ ಮೀನಿಂಗ್ ಇರಬಹುದ ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
ಮುಂದೆ ಎಲ್ಲಾದ್ರು ತಿಂಡಿ ಸಿಗಬಹುದ ಯಾವನಿಗ್ ಗೊತ್ತು, ಯಾವನಿಗ್ ಗೊತ್ತು
---------------------------------------------------------------------------

ಪರಮಾತ್ಮ (2011), - ಹೆಸರು ಪೂರ್ತಿ ಹೇಳದೆ ತುಟಿಯ ಕಚ್ಚಿಕೊಳ್ಳಲೇ
ಸಂಗೀತ: ಹರಿಕೃಷ್ಣ, ಸಾಹಿತ್ಯ: ಯೋಗರಾಜ್ ಭಟ್ಟ, ಗಾಯನ: ವಾಣಿಹರಿಕೃಷ್ಣ

ಹೆಸರು ಪೂರ್ತಿ ಹೇಳದೆ ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೆ ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ ಕೊಟ್ಟುಬಿಡಲೇ
ನಗುತಿದೆ ನದಿ ಇದು ಯಾಕೆ ನೋಡುತ ನನ್ನನ್ನು
ಹೃದಯವು ಹೆದರಲೆ ಬೇಕೇ ಬಯಸಲು ನಿನ್ನನ್ನು
ಹೆಸರು ಪೂರ್ತಿ ಹೇಳದೆ ತುಟಿಯ ಕಚ್ಚಿಕೊಳ್ಳಲೇ 
ಹರೆಯ ಏನೋ ಹೇಳಿದೆ ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ ಕೊಟ್ಟುಬಿಡಲೇ

ಎಳೆ ಬಿಸಿಲ ಸಂಕೋಚವೋ ನೀ ನಗಲು ಮೈ ತಾಕಿದೆ 
ನನ್ನ ಬೆನ್ನು ನಾಚುತಿಹುದು ನೋಡುತಿರಲು ನೀ ನನ್ನ ಕಡೆಗೆ 
ಬಯಕೆ ಬಂದು ನಿಂತಿದೆ ಉಗುರು ಕಚ್ಚಿಕೊಳ್ಳಲೇ 
ಬೇರೆ ಏನು ಕೇಳದೇ ತುಂಬಾ ಹಚ್ಚಿಕೊಳ್ಳಲೇ 
ಹೇಳದಂಥ ಮಾತಿದೆ ಮುಚ್ಚಿಇಡಲೇ

ನಿನ್ನ ತುಂಟ ಕಣ್ಣಲ್ಲಿದೆ ಮಡಚಿಟ್ಟ ಆಕಾಶವು 
ಬಿಳಿ ಹೂವಿನ ಮೌನವೂ ನನ್ನೆದೆಯಲಿ ನಾ ಏನೆನ್ನಲೀ .. 
ತುಂಬಾ ಮುತ್ತು ಬಂದಿದೆ ಒಮ್ಮೆ ದೃಷ್ಟಿ ತಗೆಯಲೇ
ನನಗೆ ಬುದ್ಧಿ ಎಲ್ಲಿದೆ ಒಮ್ಮೆ ಕಚ್ಚಿ ನೋಡಲೇ
ನಿನ್ನ ತೋಳು ನನ್ನದೇ ಇದ್ದು ಬಿಡಲೇ... 
-------------------------------------------------------------------------------------------------

No comments:

Post a Comment