733. ಈ ಬಂಧನ (೨೦೦೭)

ಈ ಬಂಧನ ಚಲನಚಿತ್ರದ ಹಾಡುಗಳು
  • ಅದೇ ಭೂಮಿ ಅದೇ ಬಾನು
  • ಚಂದ ನನ್ನ ಚಂದ್ರಮುಖಿ
  • ಬಣ್ಣ ಬಣ್ಣ
  • ಉಗಾದಿ ಉಗಾದಿ
  • ಅದೇ ಭೂಮಿ ಅದೇ ಬಾನು
  • ಲೆಟ್ಸ್ ಡಾನ್ಸ್
ಈ ಬಂಧನ (೨೦೦೭) - ಅದೇ ಭೂಮಿ ಅದೇ ಬಾನು
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸೋನು ನಿಗಮ್, ಶ್ರೇಯ ಘೋಷಾಲ್

ಅದೇ ಭೂಮಿ ಅದೇ ಬಾನು ಈ ನಯನ ನೂತನ
ಅದೇ ದಾರಿ ಅದೇ ತಿರುವು ಈ ಪಯಣ ನೂತನ
ನನ್ನ ಮೋದ ನನ್ನ ಹಾಡು ನನ್ನ ಕನಸೇ ಒಮ್ಮೆ ನೋಡು
ನನ್ನ ಚೆಲುವಿನ ನಂದನ ಓ ಏನು ಮಧುರ ಈ ಬಂಧನ
ಅದೇ ಭೂಮಿ ಅದೇ ಬಾನು ಈ ನಯನ ನೂತನ

ಉದಯ ಕಿರಣ ಸೆಳೆದಾಗ ಹೂವ ಹನಿಯು ಹೊಳೆದಾಗ
ತರ್ತುವಿನ ಬಂಧನ ಹೃದಯ ಕಣ್ಣಲ್ಲಿ ಉಳಿವಾಗ
ಬೆರೆತು ಈ ಜೀವ ನಲಿವಾಗ ಒಲವಿನ ಬಂಧನ
ಕನಸಿನ ನೂರು ಎಳೆಯಿಂದ ನಿಯುವ ಗೂಡು ಸಂಭಂಧ
ಯಾರೋ ಕರೆದಂತೆ ದೂರಿಂದ ಗರಿಯ ತೆರೆದಂತ ಮರಿ ಚೆಂದ
ಗೆಲುವಿನ ಬಂಧನ
ಅದೇ ಭೂಮಿ ಅದೇ ಬಾನು ಈ ನಯನ ನೂತನ
ಅದೇ ದಾರಿ ಅದೇ ತಿರುವು ಈ ಪಯಣ ನೂತನ
ನನ್ನ ಮೋದ ನನ್ನ ಹಾಡು ನನ್ನ ಕನಸೇ ಒಮ್ಮೆ ನೋಡು

ನನ್ನ ಚೆಲುವಿನ ನಂದನ ಓ ಏನು ಮಧುರ ಈ ಬಂಧನ
ಅದೇ ಭೂಮಿ ಅದೇ ಬಾನು ಈ ನಯನ ನೂತನ
-------------------------------------------------------------------------

ಈ ಬಂಧನ (೨೦೦೭) - ಚಂದ ನನ್ನ ಚಂದ್ರಮುಖಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸೋನು ನಿಗಮ್, ಶ್ರೇಯ ಘೋಷಾಲ್

-------------------------------------------------------------------------

ಈ ಬಂಧನ (೨೦೦೭) - ಬಣ್ಣ ಬಣ್ಣ
ಸಂಗೀತ : ಮನೋಮೂರ್ತಿ ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ಕುನಾಲ್ ಗುಂಜವಾಲ್, ಸುನಿಧಿ ಚವ್ವಾಣ

-------------------------------------------------------------------------

ಈ ಬಂಧನ (೨೦೦೭) - ಉಗಾದಿ ಉಗಾದಿ
ಸಂಗೀತ : ಮನೋಮೂರ್ತಿ ಸಾಹಿತ್ಯ : ಕಲ್ಯಾಣ, ಗಾಯನ : ಎಸ್.ಪಿ.ಬಿ, ನಂದಿತಾ

M)ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ
Both ) (ಈ ಮನದ ತುಂಬ)

F) ಈ ಬೇವು ಈ ಬೆಲ್ಲ ಸವಿದಾಗ ಹಬ್ಬಬ್ಬ
ನಗೆಯ ಹೊನಲು ಈ ಮನೆಯ ತುಂಬ

Both) (ಈ ಮನೆಯ ತುಂಬ)

M) ಮನದ ಮಾಮರದಲ್ಲಿ ನಾವೆಲ್ಲ ಕೋಗಿಲೆಯಾಗಿ
ಈ ವರ್ಷ ಎಂಥ ಹರ್ಷ ಅಂತ ಹಾಡಿಕೊಳ್ಳೋಣ

F) ಬಾಳ ಬಾಗಿಲಿನಲ್ಲಿ ಏಳು ರಂಗನ್ನು ಚೆಲ್ಲಿ
ಈ ವರ್ಷ ಎಂಥ ಹರ್ಷ ಅಂತ ಕೂಡಿಕೊಳ್ಳೋಣ

M)ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ

Both ) (ಈ ಮನದ ತುಂಬ)

M) ಕೋಟಿ ಕನಸ ಕಣ್ಣಿನಲ್ಲಿ ತುಂಬಿಕೊಳ್ಳೋಣ
ಬಚ್ಚಿಕೊಂಡ ಆಸೆಯೆಲ್ಲ ಹಂಚಿಕೊಳ್ಳೋಣ

F) ಒಂದಾಗಿ ಮುಂದಾಗಿ ನಾವ್ ಹಾಡಿಕೊಳ್ಳೋಣ
ಹಾಡಿಕೊಳ್ಳೋಣ ಹಾಡಿ ಕೂಡಿಬಾಳೋಣ

M) ಏನೆ ಬರಲಿ ಏನೆ ಇರಲಿ ಒಂದುಗೂಡೋಣ
ನಾಳೆ ಬರುವ ನಾಳೆಯನ್ನು ನಮ್ಮದ್ದೆನ್ನೋಣ

F) ನಮ್ಮಲ್ಲೆ ನಮ್ಮನ್ನು ನಾವ್ ಕಂಡುಕೊಳ್ಳೋಣ
ಕಂಡುಕೊಳ್ಳೋಣ ಜಗವ ಕೊಂಡುಕೊಳ್ಳೋಣ

M) ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ

Both ) (ಈ ಮನದ ತುಂಬ)

M) ದೇವರೊಮ್ಮೆ ಬಂದರಿಲ್ಲಿ ಕೂಗಿಕರೆಯೋಣ
ನಮ್ಮ ಎದೆಯ ಪ್ರೇಮ ಸಿರಿಯ ಗುಟ್ಟು ತಿಳಿಸೋಣ

F) ನಮ್ ಸ್ವಂತ ವಸಂತ ಹಾಗಂತ ಹೇಳೋಣ
ಎಲ್ಲಾ ಮನಸ್ಸಿ..ಗು ಬೇವು ಬೆಲ್ಲ ಹಂಚೋಣ

M) ನಂಬಿಕೊಂಡ ಪ್ರೀತಿಯೊಂದೆ ಬಾಳ ತೋರಣ
ತುಂಬಿಕೊಂಡ ಆಸೆಯೊಂದೆ ಪ್ರೀತಿ ಕಾರಣ

F) ಈ ಚೆಂದ ಓ ಚೆಂದ ನಮ್ಮೀ ಬಂಧನ
ಈ ಬಂಧನ ಎಂದು ಅನುಬಂಧನ

M) ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನದ ತುಂಬ

Both ) (ಈ ಮನದ ತುಂಬ)

Both ) ಯುಗಾದಿ ಯುಗಾದಿ ಬಂದಾಗ ಅಬ್ಬಬ್ಬ
ಹಸಿರು ಚಿಗುರು ಈ ಮನೇಯ ತುಂಬ
(ಈ ಮನದ ತುಂಬ)
-------------------------------------------------------------------------

ಈ ಬಂಧನ (೨೦೦೭) - ಅದೇ ಭೂಮಿ ಅದೇ ಬಾನು
ಸಂಗೀತ : ಮನೋಮೂರ್ತಿ ಸಾಹಿತ್ಯ : ಜಯಂತ ಕಾಯ್ಕಿಣಿ ಗಾಯನ : ಸೋನು ನಿಗಮ್, ಶ್ರೇಯ ಘೋಷಾಲ್

-------------------------------------------------------------------------

ಈ ಬಂಧನ (೨೦೦೭) - ಲೆಟ್ಸ್ ಡಾನ್ಸ್
ಸಂಗೀತ : ಮನೋಮೂರ್ತಿ ಸಾಹಿತ್ಯ : ಕವಿರಾಜ ಗಾಯನ : ರಾಜೇಶ, ಚೈತ್ರಾ

-------------------------------------------------------------------------

No comments:

Post a Comment