749. ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮)



ಕನ್ನಡಕ್ಕಾಗಿ ಒಂದನ್ನೂ ಒತ್ತಿ ಚಲನಚಿತ್ರದ ಹಾಡುಗಳು 
  1. ಎಲ್ಲ ಹಳ್ಳಿ ಲವ್ ಸ್ಟೋರಿ 
  2. ಕನ್ನಡಕ್ಕಾಗಿ ಒಂದನ್ನೂ ಒತ್ತಿ 
  3. ನನ ಮೇಲೆ ನನಗೀಗ 
  4. ಒಮ್ಮೆಮ್ಮೆ ನನ್ನನ್ನೂ 
  5. ರಸ್ತೆ ಪಕ್ಕ ಬಡ್ಡಿ ಹೈದ 
  6. ನೀನೇ ಗೀಚಿದ ಸಾಲಿನ 
ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮) - ಎಲ್ಲಾ ಹಳ್ಳಿ ಲವ್ ಸ್ಟೋರಿಲು
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್ ಗಾಯನ : ವಿಜಯ ಪ್ರಕಾಶ

ಎಲ್ಲಾ ಹಳ್ಳಿ ಲವ್ ಸ್ಟೋರಿಲು ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ ಪಟ್ಟಣಾನೇ ಜೇನು ಗೂಡ
ನಂ ಪ್ರೀತಿ ಯಾಕೆ ಬ್ಯಾಡ ನನ್ನ ಬುಟ್ಟು ಹೋದ್ಯಲ್ಲೇ ಪಾರಿವಾಳವೇ
ಯಾಕಮ್ಮಿ ಹೊಂಟಬುಟ್ಟೆ ಕಣ್ಣೀರು ತಂದ್ಬುಟ್ಟೇ
ಯಾಕಮ್ಮಿ ಕೊಂದಬುಟ್ಟೆ ನಾನಂತೂ ನೋಂಡ್ಬುಟ್ಟೆ
ಎಲ್ಲಾ ಹಳ್ಳಿ ಲವ್ ಸ್ಟೋರಿಲು ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ
ಯಾಕಮ್ಮಿ ಹೊಂಟಬುಟ್ಟೆ ನನ್ನನ್ನು ಕೊಂದಬುಟ್ಟೆ
ಯಾಕಮ್ಮಿ ಯಾಕಮ್ಮಿ ... ಕೊಂದುಬುಟ್ಟೆ.. ಹೇ.. ಹೇ...

ಕೇರಿ ಏರಿ ಮ್ಯಾಲೇರಿ ನೀ ಹೋಗುವಾಗ
ಹಿಂದೆ ನಡೆದೇ ನಿನ್ನ ಬೆನ್ನ ಬಿಡದೇ
ಇಸ್ಕೂಲು ದಾರೀಲಿ ನೀ ನಿಲ್ಲುವಾಗ
ಕಣ್ಣು ಹೊಡೆದೆ ನೀ ಕಂಡು ಹಿಡಿದೇ
ಈಗ ನೀನೇ ಎಲ್ಲಾ ನೀನೆ ಎಲ್ಲಾ
ನನಗೆ ನಾನೇ ಬೇಕಾಗಿಲ್ಲ ಬೇಕಾಗಿಲ್ಲಾ ಬಡ ಹುಡುಗನ ಎದೆಯೊಳಗಡೆ ಬರೆ ಎಳೆದವಳೇ
ಯಾಕಮ್ಮಿ... ಯಾಕಮ್ಮಿ... ಹೊಂಟಬುಟ್ಟೆ ಹೊಂಟಬುಟ್ಟೆ
ಕಣ್ಣೀರು... ಕಣ್ಣೀರು ... ತಂದ್ಬುಟ್ಟೇ... ತಂದ್ಬುಟ್ಟೇ
ಯಾಕಮ್ಮಿ.. ಯಾಕಮ್ಮಿ... ಕೊಂದಬುಟ್ಟೆ.. ಕೊಂದಬುಟ್ಟೆ
ನಾನಂತೂ.. ನಾನಂತೂ ನೋಡ್ಬುಟ್ಟೆ
ಎಲ್ಲಾ ಹಳ್ಳಿ ಲವ್ ಸ್ಟೋರಿಲು ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ... ತುಡುತ್ತುದು... ತುಡುತ್ತುದು...

ಯಾಕಾರ ಕನ್ನೇರು ಅನ್ನೋದು ಆಯಿತೋ ಒಳಗು ಇರದು ಆಚೆ ಬಾರದು
ಸಾವಲ್ಲೂ ಸಂತೋಷ ಪಡತಿನಿ ಕೇಳೇ ಗುಡಿಯೇ ನಿಂಗೆ ಈ ಗುಂಡಗೆ ಒಳಗೆ
ಪ್ರೇಮ ಪ್ರೀತಿ ಎಲ್ಲ ಪ್ರೀತಿ ಎಲ್ಲಾ ಮರೆತು ಹೋಗೋ ಪಾಠ ಅಲ್ಲಾ ಪಾಠ ಅಲ್ಲಾ
ಉರಿ ಚೀತೆಯಲ್ಲೂ ಸುಟ್ಟಹೋಗದು ನಮ್ಮ ಪ್ರೀತಿ
ಯಾಕಮ್ಮಿ... ಯಾಕಮ್ಮಿ... ಹೊಂಟಬುಟ್ಟೆ ಹೊಂಟಬುಟ್ಟೆ
ಕಣ್ಣೀರು... ಕಣ್ಣೀರು ... ತಂದ್ಬುಟ್ಟೇ... ತಂದ್ಬುಟ್ಟೇ
ಯಾಕಮ್ಮಿ.. ಯಾಕಮ್ಮಿ... ಕೊಂದಬುಟ್ಟೆ.. ಕೊಂದಬುಟ್ಟೆ
ನಾನಂತೂ.. ನಾನಂತೂ ನೋಡ್ಬುಟ್ಟೆ
ಎಲ್ಲಾ ಹಳ್ಳಿ ಲವ್ ಸ್ಟೋರಿಲು ಹಿಂಗೇ ಯಾಕಮ್ಮಿ ನೀನೇ ಹೇಳಮ್ಮಿ
ಹುಡುಗ ಒಂಟಿ ಆಗೋಯಿತಾನೆ...
----------------------------------------------------------------------------------------------------

ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮) - ಕನ್ನಡಕ್ಕಾಗಿ ಒಂದನ್ನು ಒತ್ತಿ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಯೋಗರಾಜಭಟ್ಟ ಗಾಯನ : ವಿಜಯ ಪ್ರಕಾಶ

ಕನ್ನಡತಾಯಿ ಮಕ್ಕಳಾಗಿ ಹುಟ್ಟಿ ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ ಕನ್ನಡಕ್ಕಾಗಿ ಒಂದನ್ನು ಒತ್ತಿ
ಉಳಿಯದು ಭಾಷೆ ಅನ್ನುವರೆಲ್ಲ ಉಳಿಸುವ ಆಸೆ ನಿಮಗ್ಯಾಕ ಇಲ್ಲ
ಆಗಿದ್ದು ಆಗ್ಲಿ ನೋಡೇ ಬಿಡೋಣಾ ಒತ್ತರೆಪ್ಪೋ ಒತ್ತಿ ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ 

ಆದಿಕವಿ ಪಂಪ ಆಂತ ಕುರಿತೋದದೆ ಇವತ್ತಿನ ಮಂದಿಗಿದು ಮರೆತೋಗಿದೆ
ಹಳೆದಿದ್ದರೇನೇ ಹೊಸಾದು ಉಳಿಯೊದು
ಒಂದನ್ನು ಒತ್ತಿದ್ರೆ ನಿಮಗೇನೇ ತಿಳಿಯೋದು
ಹೊಟ್ಟೇಲಿದ್ದಾಗಲೇ ಕನ್ನಡ ಕಲಿತವರು
ಮಾತು ಮಾತಿಗೆ ಠುಸ್ಸ್ ಪುಸ್ ಅನ್ನಬಾರದು 
ನಮ್ಮ ಇಂಗ್ಲಿಷು ನಿಮಗಿಂತ ಸ್ಟ್ರಾಂಗೇ 
ಬಾರು ಬಾಗಿಲಲ್ಲಿ ಸಿಕ್ಕಬೇಡಿ ನಮಗೆ
ಆಗಿದ್ದು ಆಗ್ಲಿ ನೋಡೇ ಬಿಡೋಣಾ
ಒತ್ತರೆಪ್ಪೋ ಒತ್ತಿ ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ

ಆ ಆ ಈ ಈ ಐರಾವತಾ ಮೊದಲು ಬರ್ಲಿ
ಏ ಬ್ಯಾರೆ ಬಾಷೆ ಲಗೇಜ್ ಆಟೋ ಆಮೇಲಿರ್ಲಿ
ಬಾಯಿ ಬಿಟ್ಟರೆ ಕನ್ನಡ ಉಳಿಯೋಲ್ಲಾ
ಅಂತ ಅನ್ನವರು ದಯಮಾಡಿ ಬಾಯಿ ಮುಚ್ಚಿ
ಅಮ್ಮ ಕಲಿಸಿದ್ದು ಎಂದೆಂದೂ ಉಳಿಯುತ್ತೆ
ಸಾಯೋ ಮಾತಾಡಬಾರದಪ್ಪ ಛೀ ಛೀ ಛೀ
ನಮ್ಮ ನಮ್ಮ ಪೀ ಪೀ ಊದಿದರೆ ನಾವು
ಬರುವುದೇಇಲ್ಲ ಕನ್ನಡಕ್ಕೆ ಸಾವು
ಆಗಿದ್ದು ಆಗ್ಲಿ ನೋಡೇ ಬಿಡೋಣಾ
ಒತ್ತರೆಪ್ಪೋ ಒತ್ತಿ ಕನ್ನಡಕ್ಕಾಗಿ ಒಂದನ್ನು ಒತ್ತಿ
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ ಎಎ.......
ಕನ್ನಡತಾಯಿ ಮಕ್ಕಳಾಗಿ ಹುಟ್ಟಿ... ಕನ್ನಡಕ್ಕಾಗಿ ಒಂದನ್ನು ಒತ್ತಿ...
----------------------------------------------------------------------------------------------------

ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮) - ನನ ಮೇಲೆ ನನಗೀಗ 
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕುಶಾಲ್ ಗಾಯನ : ಸೋನು ನಿಗಮ್

ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ
ಬಡಪಾಯಿ ಎದೆಯಲ್ಲಿ ಒಲವೀಗ ಮನೆ ಮಾಡಿದೆ
ಸನ್ನೆಯಲ್ಲಿ ಏನೋ ಹೇಳುವಾಗ ಎಲ್ಲಾ ಮಾತು ನಲ್ಲೆ ಬಾಕಿ ಈಗ
ಸರಿ ಹೋಗುವ ಮುನ್ಸೂಚನೆ ಇತ್ತೀಚಿಗೆ ಸುಳಿದಾಡಿದೆ
ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ ಓಓಓಓಓ ...

ಭೇಟಿಯಾದ ಜಾಗ ನನ್ನನ್ನೇ ಕಾಯುವಾಗ
ಎಂಕಾಂತವೀಗ ನನ್ನ ಕಾಡಿದೆ
ಒಂದೇ ಒಂದು ಮಾತು ನೀ ಚಂದವಾಗಿ ಆಡಿ
ನನ್ನತನವೆಲ್ಲಾ ಲೂಟಿ ಮಾಡಿ
ಉಸಿರಿನ ಬಿಸಿಯು ತಗುಲಿದ ಮೇಲೆ
ಹುಡುಗನ ಪಾಡು ಹೀಗಾಗಿದೆ
ಪದ ಗೀಚುವ ಬೆರಳೆರಡೂ
ಪದವಿಲ್ಲದೇ ಪರದಾಡಿದೆ...
ಓ... ಹೇ...ಹೇ...ಹೇ.. ಓ...

ಇನ್ನೇಕೆ ಕಾಲ ಹರಣ ದೂರಾನೇ ತುಂಬ ಕಠಿಣ
ಕಣ್ಣಲ್ಲೇ ನೀಡು ಎಲ್ಲಾ ಸೂಚನೆ
ಎಲ್ಲೇ ಹೋದರೂನು ನೀ ಎಲ್ಲೇ ಬಂದರೂನು
ನಂಗೀಗ ನಿಂದೊಂದೇ ಪ್ರಾರ್ಥನೆ
ಜೀವದ ಬಾಷೆ ಹೇಳಲು ನನಗೆ ಜೀವವೇ ಹೋದ ಹಾಗಾಗಿದೇ
ಅನುರಾಗದ ಅನುವಾದಕೆ ಸರಿ ಹೋಗುವ ಪದವೆಲ್ಲಿದೆ..
ನನ ಮೇಲೆ ನನಗೀಗ ಅನುಮಾನ ಶುರುವಾಗಿದೆ .....   ಹಮ್ ಹಮ್
------------------------------------------------------------------------------------------------------

ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮) - ಒಮ್ಮೊಮ್ಮೆ ನನ್ನನ್ನು
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಯೋಗರಾಜ ಭಟ್ಟ ಗಾಯನ : ಶ್ರೇಯಾ ಘೋಷಾಲ್ 

ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗೊಯ್ಯುವೆ
ಇನ್ನೊಮ್ಮೆ ನಿನ ಕಂಡು ನಾ ಚೂರು ಸರಿಹೋಗುವೆ.
ನನ್ನ ನೀನು ಎಂದೆಂದು ಕ್ಷಮಿಸಬೇಡ
ಒಂದು ಕನಸು ಜೀವಂತ ಉಳಿಸಬೇಡ
ಅನುರಾಗದ ಅಪರಾಧಕೆ ನಿನ ಕೋಪವೇ ಕಿರುಕಾಣಿಕೆ
ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗೊಯ್ಯುವೆ…

ಮಾತು ಆಡಲಾರೆ ಕಣ್ಣಲ್ಲಿ ನೋಡಲಾರೆ
ನಿನ್ನೆದುರು ಹೇಗೆ ನಿಂತುಕೊಳ್ಳಲಿ
ಹೋಗು ನೀನು ಸಾಕು ನಾನಿನ್ನು ಬೇಯಬೇಕು
ಈ ಏಕಾಂತದ ಬೆಂಕಿ ಊರಲಿ
ತಿಳಿಸಿದರೂನು ಮುಗಿಯದ ಕಥೆಯ
ಕೇಳುವ ಸಹನೆ ನಿನಗೇತಕೆ
ಅನುರಾಗದ ಅಪರಾಧಕೆ ಕಡು ವಿರಹವೆ ಕಿರುಕಾಣಿಕೆ.

ಓ..ಒಂದೇ ಒಂದು ಬಾರಿ ತೊಳಲ್ಲಿ ಅಳುವ ಆಸೆ
ಬೇರೇನು ಬೇಡ ನನ್ನ ಜೀವಕೆ
ಎಲ್ಲೋ ಇರುವೆ ನಾನು ಇನ್ನೆಲ್ಲೋ ಸಿಗುವೆ ನೀನು
ಆ ಮೌನ ಸಾಕು ಪೂರ್ತಿ ಜನ್ಮಕೆ
ನೆನಪಿನ ಕವಿತೆ ನೆನಪಲೆ ಇರಲಿ
ಮುಂದಕೆ ಹಾಡು ಇನ್ನೇತಕೆ
ಅನುರಾಗದ ಅಪರಾಧಕೆ ಸಿಗಲಾರದು ಸ್ವರಮಾಲಿಕೆ.
ಒಮ್ಮೊಮ್ಮೆ ನನ್ನನ್ನು ನಾನೇನೆ ಕೊಲೆಗಯ್ಯುವೆ
-----------------------------------------------------------------------------------------------------------

ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮) - ರಸ್ತೆ ಪಕ್ಕ ಬಡ್ಡಿ ಹೈದ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕುಶಾಲ್ ಗಾಯನ : ಸಂಜಿತಾ ಹೆಗಡೆ

ರಸ್ತೆ ಪಕ್ಕ ಬಡ್ಡಿ ಹೈದ ದ್ಯಾವ್ರು ಕುಂತವ್ನೆ
ಹಕ್ಕಿ ಪುಕ್ಕಾ ಜೆಬ್ನಾಗಿಟ್ಟು ಕ್ಯಾಮೆ ಕೊಟ್ಟವ್ನೆ
ಸಂತೆ ಒಳಗೆ ಪ್ರಾಣಾ ಹೊದ್ರು ನಾವೆನ್ ಮಾಡೊಣ
ಲೈಫ಼ು ಶ್ಯಾನೆ ಸೂಪರ್‌ ಅಂತೆ ಬನ್ರಿ ನೊಡೊಣ.. ||ಪ||

ಸರಿಯಾ..ಗೈತೆ ಬಾಳೆ ಕಪ್ಪಾಗುಟ್ಟೈತೆ
ಬಿಳಿ ಪರ್ದೆ ಹಿಂದೆ ಭಗವಂತ ಕೂತು ಅಂಗೈನ ಚಾಚವ್ನೆ…
ಜೀವ್ನಾ ಅನ್ನೊ ಹೈವೆನಾಗೆ ಕರಿ ಟಾರು ಹೊಯ್ದು 
ಮೈಲಿಗಲ್ಲು ನೆಟ್ಟು ಊರ್ ಹೆಸರು ಬರ್ದವ್ನೆ 
ಈ ಬಾಳೊಂದು ಕಿತ್ತೊದ ಚಪ್ಪಲಿ ಅಂಗಡಿ ಹಂಗೆ
ನಾವು ಹಾಕ್ಕೊಂಡು ಹೊಗ್ತಾ ಇರೊದೆ…
ರಸ್ತೆ ಪಕ್ಕ ಬಡ್ಡಿ ಹೈದ ದ್ಯಾವ್ರು ಕುಂತವ್ನೆ
ಹಕ್ಕಿ ಪುಕ್ಕಾ ಜೆಬ್ನಾಗಿಟ್ಟು ಕ್ಯಾಮೆ ಕೊಟ್ಟವ್ನೆ
ಸಂತೆ ಒಳಗೆ ಪ್ರಾಣಾ ಹೊದ್ರು ನಾವೆನ್ ಮಾಡೊಣ
ಲೈಫ಼ು ಶ್ಯಾನೆ ಸೂಪರ್‌ ಅಂತೆ ಬನ್ರಿ ನೊಡೊಣ.. 

ಕಾಲಾ..ನ್ ತೊರ್ಸೊ ಗೊಡೆ ಗಡಿಯಾರಾನೆ
ಕಾಲ್‌ ಮುರಿದುಕೊಂಡು ಮೂಲೆಲಿ ಕುಂತ್ರೆ ಆ ದ್ಯಾವ್ರೆನ್ ಮಾಡ್ತಾನೆ
ಮಾ..ತ್ರೆ ನೀಡೊ‌ ಡಾಕ್ಟರ್ಗೆನೆ ಬಿಪಿ ಶುಗರು ಬಂದು ಮ್ಯಾಲಕ್ಕೆ ಹೊದ್ರೆ ಆ ಉಪ್ಪೆನ್ ಮಾಡ್ತದೆ
ಈ ಬಾಳೊಂದು‌ ಹಾಳದ ಸಂತೆಯ ಬೀದಿ ಹಂಗೆ ಸ್ಟಾರ್ಟು ಎಂಡು ಎರೆಡು ದ್ಯಾವ್ರದ್ದೆ..
ರಸ್ತೆ ಪಕ್ಕ ಬಡ್ಡಿ ಹೈದ ದ್ಯಾವ್ರು ಕುಂತವ್ನೆ
ಹಕ್ಕಿ ಪುಕ್ಕಾ ಜೆಬ್ನಾಗಿಟ್ಟು ಕ್ಯಾಮೆ ಕೊಟ್ಟವ್ನೆ
ಸಂತೆ ಒಳಗೆ ಪ್ರಾಣಾ ಹೊದ್ರು ನಾವೆನ್ ಮಾಡೊಣ
ಲೈಫ಼ು ಶ್ಯಾನೆ ಸೂಪರ್‌ ಅಂತೆ ಬನ್ರಿ ನೊಡೊಣ..
-----------------------------------------------------------------------------------------------------------------

ಕನ್ನಡಕ್ಕಾಗಿ ಒಂದನ್ನು ಒತ್ತಿ (೨೦೧೮) - ನೀನೇ ಗೀಚಿದ ಸಾಲಿನ ಮುನ್ನುಡಿ
ಸಂಗೀತ : ಅರ್ಜುನ ಜನ್ಯ ಸಾಹಿತ್ಯ : ಕುಶಾಲ್ ಗಾಯನ : ಸಂಜಿತಾ ಹೆಗಡೆ 

ನೀನೇ ಗೀಚಿದ ಸಾಲಿನ ಮುನ್ನುಡಿ ಸದಾ ನೋವನು ಮಾರುವ ಅಂಗಡಿ
ದಿನ ಬೇಯುವ ಜೀವದ ಗಾಯದಿ ನೀನೇ ತಾನೇ

ಎಲ್ಲಿಗೆ ಜಾರಿದೆ ಎದುರಿಗೆ ಸುಳಿಯದೆ ಮಾಯದ ಗಾಯದಿ ನಿನ್ನದೇ ವೇದನೆ
ನನ್ನನು ಕಾಡಿದೆ ಖಾಲಿ ಜೇಬಿನ ಪ್ರೇಮಿಯ ಮುನ್ನುಡಿ
ಸರಿ ಹೋಗಲು ಔಷಧಿ ಎಲ್ಲಿದೆ ನೀನೇ ಇಲ್ಲದ ಈ ಜಗ ಏಕಿದೆ
ನೀನೇ ಹೇಳೇ ನೋವಿನಾ (ನೋವಿನಾ) ಹಾಡಿಗೆ (ಹಾಡಿಗೆ)
ನೀಡು ಬಾ (ನೀಡು ಬಾ) ಉತ್ತರ  (ಉತ್ತರ) 
ಎಲ್ಲೇ ನೀ (ಎಲ್ಲೇ ನೀ) ಹೋದರು (ಹೋದರು) 
ಜೀವಕೆ (ಜೀವಕೆ) ಹತ್ತಿರ (ಹತ್ತಿರ) (ಸಾವಿಗೂ ಎತ್ತರ)
----------------------------------------------------------------------------------------------------------

No comments:

Post a Comment