18. ಪ್ರೀತ್ಸೆ (2000)


ಪ್ರೀತ್ಸೇ ಚಲನಚಿತ್ರದ ಹಾಡುಗಳು 
  1. ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ಬೆಳ್ಳಿ ಹೋಳಿ
  2. ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
  3. ಸೈ ಸೈ ಸೈ ಸೈ ಸೈ ಸೈ ಈ ನಯನವು ಸೈ
  4. ಸೂರ್ಯ ಒಬ್ಬ.. ಯಾ ಯಾ   ಚಂದ್ರ ಒಬ್ಬ.. ಯಾ ಯಾ
  5. ಯಾರಿಟ್ಟರೀ ಚುಕ್ಕಿ  ಯಾಕಿಟ್ಟರೀ ಚುಕ್ಕಿ ಚುಕ್ಕಿ ಗಲ್ಲದ ಚುಕ್ಕಿ ಚುಕ್ಕಿ
  6. ಪ್ರೀತ್ಸೆ ... ಪ್ರೀತ್ಸೆ ... ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಪ್ರೀತ್ಸೆ (2000) - ಹೋಳಿ ಹೋಳಿ 
ಸಾಹಿತ್ಯ, ಸಂಗೀತ: ಹಂಸಲೇಖ, ಗಾಯನ : ರಾಜೇಶ್ ಕೃಷ್ಣನ್, ಎಸ್.ಪಿ.ಬಿ, ಅನುರಾಧ ಪೌಡ್ವಾಲ್, ಚಿತ್ರ 

ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ ರಾಗ ರಂಗಿನ ರಂಗು ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ ಓಹೋ ಓಕುಳಿ ಆಡೋಣ
ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ ರಾಗ ರಂಗಿನ ರಂಗು ರಂಗೋಲಿ
ಅರಿಷಿಣ ಕುಂಕುಮವ ಒಂದು ಕ್ಷಣ ಬೆರೆಸೋಣ ಹಸಿರಿನ ಜೊತೆಯಲ್ಲಿ ಒಂದು ಕ್ಷಣ ಇರಿಸೋಣ
ರವಿವರ್ಮ ನಕ್ಕರೆ ಕ್ಷಮಿಸು ಬಣ್ಣದ ಹಬ್ಬ ಅನ್ನೋಣ   ಓಹೋ ಓಕುಳಿ ಆಡೋಣ
ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ

ಬಣ್ಣ ಕಂಡ್ರೆ ಕುಣಿಯೋಣ, ಕುಣಿಯೋಣ         ಬಳಿಯಲು ಬಂದ್ರೆ ಓಡೋಣ, ಓಡೋಣ
ಬೇಡ ಅನ್ನೋ ಈ ಭಯವೇ, ಈ ಭಯವೇ     ಬೇಕು ಅನ್ನೋ ಬಿನ್ನಾಣ, ಆಹಾ ಬಿನ್ನಾಣ
ತನುವೆಲ್ಲ ನವರಂಗು                                ಮನಸೆಲ್ಲ ಬೆಳದಿಂಗಳು   
ಈ ಹಬ್ಬ ಧರೆಗಿತ್ತ                                      ಕೃಷ್ಣನಿಗೆ ನಮನಗಳು
ಮನೆ ಮನೆಗೊಬ್ಬ                                    ರಂಗಿನ ರಂಗ ರಂಗಿನ ರಂಗ
ಹುಟ್ಟುವನೆಂದು, ಗೋಕುಲ ರಂಗ             ಹಿಡಿಯೋ ಹಚ್ಚೋ,  ಹಿಡಿಯೋ ಹಚ್ಚೋ,  ಹಿಡಿಯೋ ಹಚ್ಚೋ
ಹೋಳಿ ಹೋಳಿ ಹೋಳಿ ಹೋಳಿ               ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ

ಕಣ್ಣಲ್ಲೆ ಬಾಲಿಂಗ್ ಮಾಡೊ   ಕಣ್ಣಲ್ಲೆ ಬ್ಯಾಟಿಂಗ್ ಮಾಡೊ
ಗೋಪಿಕಾ ಸ್ತ್ರೀ ನೋಡು      ಸೆಂಚುರಿ ಶ್ರೀ ಕೃಷ್ಣನ ನೋಡು
ಒಂದೆ ದಿನ ಒಂದೇ ಬಾಲ್ ಒಂದೇ ರನ್ ಒಂದೇ ವಿಕೇಟ್ ಹೊಡಿದ್ರೆ ವಿನ್ ಬಿಟ್ರೆ ಡ್ರಾ
ಬಂತು ಬಾಲ್ ಬಿತ್ತು ಬೆಲ್ಸ್ ಬೌಲ್ಡ್ ಕ್ಲೀನ್ ಬೌಲ್ಡ್ ಬೌಲ್ಡ್

ಒಲವು ಚೆಲುವು ಒಂದಾಗಿ ನಲಿದಿದೆ ಇಲ್ಲಿ ಹೆಣ್ಣಾಗಿ
ಹೆಣ್ಣ ಕಂಡ ಬಣ್ಣಗಳೆಲ್ಲ ಶರಣು ಅಂದವೋ ಮಂಕಾಗಿ
ಕೃಷ್ಣಯ್ಯ ಬಾರಯ್ಯ ಒಲವಿನ ಹಬ್ಬಕ್ಕೆ   ಮುದ್ದಿನ ಜೇನಿನ ಚೆಲುವಿನ ಊಟಕ್ಕೆ
ಹಬ್ಬದ ಹಬ್ಬ  ಒಲವಿನ ಹಬ್ಬ   ಮನೆ ಮನೆ ಹಬ್ಬ  ತುಂಬಿದೆ ಬಾಳಿನ ಹಬ್ಬ ಹಬ್ಬ
ಚೆಲ್ಲೊ  ಚೆಲ್ಲೊ  ಬಣ್ಣ ಚೆಲ್ಲೊ ಬಣ್ಣ ಚೆಲ್ಲೊ
ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ ರಾಗ ರಂಗಿನ ರಂಗು ರಂಗೋಲಿ
ಕೋಗಿಲೆ ಕೊಳಲಲ್ಲಿ ಪಂಚಮವ ಹಿಡಿಸೋಣ
ಮಯೂರದ ಮೈಯ್ಯಿಂದ ಲಾಸ್ಯ ಲಯ ಬೆರೆಸೋಣ
ಹದ ಮೀರದಂತ ಹೂಗಳ ಬಣ್ಣದ ಅಡಿಗೆ ಕಲಿಯೋಣ
ಭಾವದ ಹೋಳಿಗೆ ಮಾಡೋಣ
ಹೋಳಿ ಹೋಳಿ ಹೋಳಿ ಹೋಳಿ ಏಳೇಳು ಬಣ್ಣದ ಬೆಳ್ಳಿ ಹೋಳಿ
ಹೋಳಿ ಹೋಳಿ ಹೋಳಿ ಹೋಳಿ
------------------------------------------------------------------------------------------------------------------------

ಪ್ರೀತ್ಸೆ (2000) - ಪ್ರೀತ್ಸೆ ಪ್ರೀತ್ಸೆ

ಸಾಹಿತ್ಯ, ಸಂಗೀತ: ಹಂಸಲೇಖ  ಹಾಡಿರುವವರು: ಹೇಮಂತ್ 


ಪ್ರೀತ್ಸೆ ಪ್ರೀತ್ಸೆ ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಮನಸು ಬಿಚ್ಚಿ ನನ್ನ ಪ್ರೀತ್ಸೆ
ಉಸಿರಾಗಿ ಪ್ರೀತ್ಸೆ ಬದುಕಾಗಿ ಪ್ರೀತ್ಸೆ
ನನಗಾಗಿ ಪ್ರೀತ್ಸೆ ನಿನಗಾಗಿ ಪ್ರೀತ್ಸೆ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ

ಸಾವಿರಾರು ದಿನಗಳ ಕೆಳಗೆ ನನ್ನೆದೆಯ ಗರ್ಭದ ಒಳಗೆ
ಉಸಿರಾಡಿತು ಆಸೆಯ ಭ್ರೂಣ ಪಡೆಯಿತು ಪ್ರಾಣ
ಬೆಳೆಯಿತು ಕಲಿಯಿತು ಮುದ್ದಿನ ಮಾತೊಂದ
ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ  ಪ್ರೀತ್ಸೆ ನನ್ನೆ ಪ್ರೀತ್ಸೆ
ಮಾತಾಡ್ತ ಪ್ರೀತ್ಸೆ ಮುದ್ದಾಡ್ತ ಪ್ರೀತ್ಸೆ
ಕಣ್ಣೊರಸಿ ಪ್ರೀತ್ಸೆ ಮಗು ಅಂತ ಪ್ರೀತ್ಸೆ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ

ನಿನ್ನಂದಕೆ ನಾ ಅಭಿಮಾನಿ ನನ್ನೆದೆಗೆ ನೀ ಯಜಮಾನಿ
ನೀನಿಲ್ಲದ ಲೋಕ ಶೂನ್ಯ ಬಾಳು ಬರಡು
ಜನುಮ ದಂಡ ಸೃಷ್ಟಿಯ ಅದ್ಭುತವೇ 
ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ  ಪ್ರೀತ್ಸೆ ನನ್ನೆ ಪ್ರೀತ್ಸೆ
ದಯಮಾಡಿ ಪ್ರೀತ್ಸೆ  ಕೃಪೆ ತೋರಿ ಪ್ರೀತ್ಸೆ
ಪ್ರೇಮಿಗಾಗಿ ಪ್ರೀತ್ಸೆ ಪ್ರೀತಿಗಾಗಿ ಪ್ರೀತ್ಸೆ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ
----------------------------------------------------------------------------------------------------------------------

ಪ್ರೀತ್ಸೆ (2000) - ಸೈ ಸೈ
ಸಾಹಿತ್ಯ, ಸಂಗೀತ: ಹಂಸಲೇಖ  ಹಾಡಿರುವವರು: ಹರಿಹರನ್, ಅನುರಾಧ ಪೌಡ್ವಾಲ್


ಸೈ ಸೈ ಸೈ ಸೈ ಸೈ ಸೈ ಈ ನಯನವು ಸೈ
ಈ ಅಧರವು ಸೈ  ಈ ದಂತದ ಮೈ ರತಿ ದೇವಿಗು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಈ ಸನ್ನೆಯು ಸೈ ಈ ಕಿರುನಗೆ ಸೈ 
ಈ ಪ್ರೀತಯ ಕೈ ಇರೆ ಜಗಕೆ ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ
ಮುಂಗುರುಳ ಕರೆಯು ಸೈ ಸೈ  ಕರಿ ಹುಬ್ಬ ಹಬ್ಬ ಸೈ ಸೈ  
ಎದೆಗಾರನೆದುಗು ಎದೆ ಸೈ  ಬಿಸಿಯುಸಿರ ಕದನಕೂ ಸೈ
ಬರಿ ರಾಗವಾದ್ರು ಸೈ  ತಾಳವಾದ್ರು ಸೈ
ಗಮಕವಾದ್ರು ಸೈ  ವಚನವಾದ್ರು ಸೈ
ಪ್ರೀತಿಸೆ ಸೈ  ನಾ ಸೋಲಲು ಸೈ, ನಾ ಗೆಲ್ಲಲು ಸೈ
ನಿನ್ನ ಪ್ರೀತಿ ಪರೀಕ್ಷೆಲಿ ಸಾಯಲು ಸೈ
ಸೈ ಸೈ ಸೈ ಪ್ರೀತ್ಸೈ ಸೈ ಸೈ

ಬಯಸಿ ಬಯಸಿ ಕಾದು ಪಡೆಯೊ ಸುಖವೆ ಸವಿ ಸುಖವೆ
ಬಂಧಿಸೈ ಚುಂಬಿಸೈ ಸುಖದ ನೆನಪಿರಲಿ
ಕರುಣಿಸೈ ನಿನ್ನ ಈ ???(ಉಟ್ಟ) ರೂಪ ನನಗಿರಲಿ
ಕನಸಿನ ಕಡಲ ತೀರದಲ್ಲಿ ಒಲವಿನ ದೀಪ
ನೀನೆ ಸೈ ಸ್ವೀಕರಿಸೈ ಗೆಲುವಿನ ಹೆಸರು
ನಿನ್ನ ಈ ಹೆಸರಲಿ ಈಜಾಡಿದೆ ನನ್ನುಸಿರು
ಹೊರನಾಡಲಿದ್ರು ಸೈ  ನಾಡಲಿದ್ರು ಸೈ
ವಿರಹವಿದ್ರು ಸೈ ಸನಿಹವಿದ್ರು ಸೈ
ಪ್ರೀತಿಸೆ ಸೈ
ಲೋಕದ ಪ್ರೀತಿಯ ಕಾವ್ಯಗಳಲ್ಲಿ ಕೊನೆಯ ಪುಟ ವಿರಹ
ಬದಲಿಸೈ ಬದಲಿಸೈ ಹಳೆಯ ಪರಿಹಾಸ್ಯ
ಸೃಷ್ಟಿಸೈ ಪ್ರೀತಿಗೆ ಸುಖದ ಇತಿಹಾಸ
ಋತುಗಳ ನಡುವೆ ಬೆಳೆದಿದೆ ಒಂದು ಸುಂದರ ಸ್ನೇಹ
ಆಲಿಸೈ ಪಾಲಿಸೈ ಸ್ನೇಹದ ನೇಮ
ಕಾಯುತ ಸಾಗುತ ಪಡೆವುದೆ ನಿಜ ಪ್ರೇಮ
ನಿಜ ಪ್ರೇಮವಾದ್ರು ಸೈ ಸ್ನೇಹವಾದ್ರು ಸೈ
ಸ್ನೇಹ ಪ್ರೇಮ ಪದ ಬದಲಿಯಾದ್ರು ಸೈ
ಪ್ರೀತಿಸೆ ಸೈ
------------------------------------------------------------------------------------------------------------------------

ಪ್ರೀತ್ಸೆ (2000) - ಸೂರ್ಯ ಒಬ್ಬ

ಸಾಹಿತ್ಯ, ಸಂಗೀತ: ಹಂಸಲೇಖ   ಹಾಡಿರುವವರು: ಸುರೇಶ್ ಪೀಟರ್ಸ್, ಅನುರಾಧ ಶ್ರೀರಾಂ


ಸೇ ಎಸ್ ಆರ್ ನೋ... ಸೇ ಎಸ್ ಆರ್ ನೋ
ಸೂರ್ಯ ಒಬ್ಬ.. ಯಾ ಯಾ   ಚಂದ್ರ ಒಬ್ಬ.. ಯಾ ಯಾ
ಒಂದೆ ಹಗಲು.. ಯಾ ಯಾ   ಒಂದೆ ಇರುಳು.. ಯಾ ಯಾ
ಹಗಲಿಗೆ ಇಬ್ಬರು ಸೂರ್ಯ ನೊ ನೊ..
ಇರುಳಿಗೆ ಇಬ್ಬರು ಚಂದ್ರ ನೊ ನೊ..
ರಾಮ ಒಬ್ಬ.. ಯಾ ಯಾ   ಕೃಷ್ಣ ಒಬ್ಬ.. ಯಾ ಯಾ
ಸೀತೆ ಸಾಧ್ವಿ.. ಯಾ ಯಾ   ರಾಧೆ ವಿರಹಿ.. ಯಾ ಯಾ
ಸೀತೆಗೆ ಸವತಿಯರಿದ್ರು.. ನೊ ನೊ
ರಾಧೆಗೆ ಮದುವೆ ಆಯ್ತ.. ನೊ ನೊ
ಇಂಡಿಯ ಒಂದೆ.. ಯಾ ಯಾ   ಎವರೆಸ್ಟ್ ಒಂದೆ.. ಯಾ ಯಾ
ಗಾಂಧಿ ಒಬ್ನೆ.. ಯಾ ಯಾ      ಬುಧ್ಧ ಒಬ್ನೆ.. ಯಾ ಯಾ
ಇಂಡಿಯನ್ಸ್ ಗೆ ಯುಧ್ಧ ಬೇಕ.. ನೊ ನೊ
ಮೇಲ್ ಬಿದ್ರೆ ಸುಮ್ನಿರ್ಬೇಕ.. ನೊ ನೊ
ಪ್ರೀತಿ ಬೇಕ.. ಯಾ ಯಾ   ದೇಷ.. ನೋ ನೋ
ಅನುರಾಗಿಯಾಗಿ ನೋಡು  ಸೋಲೆ ಸೋತು ಓಡಲು

ಸ್ನೇಹ ಬೇಕ.. ಯಾ ಯಾ  ದ್ರೋಹ.. ನೊ ನೊ
ಅಭಿನಂದನೀಯನಾಗು  ನೋವೆ ನಾಚಿ ಓಡಲು
ಆಟ ಬೇಕ.. ಯಾ ಯಾ   ಜೂಜಾಟ.. ನೊ ನೊ
ಭಾವೈಕ್ಯನಾಗಿ ಆಡು  ದೇಶ ದೇಶ ಕೂಡಲು  
ದೇವರು ಫಸ್ಟ್ .. ಯಾ ಯಾ   ದೇಶ ನೆಕ್ಸಟು .. ಯಾ ಯಾ
ತಾಯಿ ಫಸ್ಟ್.. ಯಾ ಯಾ   ಪ್ರೀತಿ ನೆಕ್ಸಟು.. ಯಾ ಯಾ
ದೇಶಕಿಂತ ಪ್ರೀತಿ ದೊಡ್ಡದ.. ನೊ ನೊ
ತಾಯಿಗಿಂತ ದೇವರು ದೊಡ್ಡದ.. ನೊ ನೊ

ಜಗವೆ ನಮ್ಮನೆ.. ಯಾ ಯಾ   ಸ್ವಂತನ.. ನೊ ನೊ
ಕೈಲಾದ ಸೇವೆ ಮಾಡು  ಬಾಳಿಗೆ ಋಣ ತೀರಲು
ಜ್ಞಾನ ಬೇಕ.. ಯಾ ಯಾ  ಅಜ್ಞಾನ.. ನೊ ನೊ
ವಿಜ್ಞಾನ ಸೂರ್ಯನಾಗು ಲೋಕ ದೀಪವಾಗಲು
ಸಿನಿಮ ಬೇಕ.. ಯಾ ಯಾ  ಅಶ್ಲೀಲ.. ನೊ ನೊ
ಸ್ವಾಭಿಮಾನಿಯಾಗು  ದಿವ್ಯ ಸಂಸ್ಕೃತಿಯಾಗಲು
ಪಾಲ್ಟಿಕ್ಸ್  ಬೇಕು.. ಯಾ ಯಾ  ವೋಟಿಂಗ್  ಬೇಕು.. ಯಾ ಯಾ
ಆರ್ಮಿ ಬೇಕು.. ಯಾ ಯಾ  ಫ್ರೀಡಂ ಬೇಕು.. ಯಾ ಯಾ
ಕರಪ್ಟ್ ಪೊಲಿಟಿಷಿಯನ್ಸ್ . ನೊ ನೊ  ಗ್ರೋಯಿಂಗ್ ಪಾಪುಲೇಷನ್ .. ನೊ ನೊ
-----------------------------------------------------------------------------------------------------------------------

ಪ್ರೀತ್ಸೆ (2000) - ಯಾರಿಟ್ಟರೀ ಚುಕ್ಕಿ
ಸಾಹಿತ್ಯ, ಸಂಗೀತ: ಹಂಸಲೇಖ  ಹಾಡಿರುವವರು: ಹರಿಹರನ್, ಅನುರಾಧ ಪೌಡ್ವಾಲ್

ಯಾರಿಟ್ಟರೀ ಚುಕ್ಕಿ  ಯಾಕಿಟ್ಟರೀ ಚುಕ್ಕಿ ಚುಕ್ಕಿ ಗಲ್ಲದ ಚುಕ್ಕಿ ಚುಕ್ಕಿ
ಚುಕ್ಕಿ ಗಲ್ಲದ ಅಂದದಾ ಚುಕ್ಕಿ ಚುಕ್ಕಿ ಚುಕ್ಕಿ

ಹೊಸಿಲಿನ ಅಕ್ಕಿ ಚೆಲ್ಲುವ ಚುಕ್ಕಿ 
ಅಸ್ತು ದೇವತೆ ಪ್ರಥಮ ಪದಿಯಲಿ
ಈ ಮನೆಗುಡಿಯಲ್ಲಿ ಚುಕ್ಕಿಯ ತ್ರಿಪದಿ ದೀಪ ಬೆಳಗುವ ಉದಯ ದೇವತೆ
ಚುಕ್ಕಿಯ ತ್ರಿಪದಿ ರಸಮನೆಯಲ್ಲಿ 
ಚುಕ್ಕಿಯ ಚೌಪದಿ ತುಳಸಿವನದಲಿ
ಪಂಚಪದಿ ಪ್ರಿಯನೋಲಗದಲ್ಲಿ
ಯಾರಿಟ್ಟರೀ ಚುಕ್ಕಿ  ಯಾಕಿಟ್ಟರೀ ಚುಕ್ಕಿ    ಹೆಣ್ಣು :  ಯಾರಿಟ್ಟರೀ ಚುಕ್ಕಿ  ಯಾಕಿಟ್ಟರೀ ಚುಕ್ಕಿ
ಗಂಡು : ಚುಕ್ಕಿ ಗಲ್ಲದ ಚುಕ್ಕಿ ಚುಕ್ಕಿ

 ಭಾವದ ಹಕ್ಕಿ ಈ ಪ್ರೀತಿ ಚುಕ್ಕಿ
ಹೃದಯ ನಡೆಸುವಳು ಪ್ರೇಮ ಸಪ್ತಪದಿ
ಕನಸನು ಹಡೆದು ತರುವಾ  ಚುಕ್ಕಿ
ಸೃಷ್ಟಿ ಬರೆದ ಭಾಮಿನಿ ಷಟ್ಪದಿ
ಏಳು ಬೀಳಿನ ಬಾಳಿನ ಸರಿಗಮ
ಶೃತಿ ಲಯ ಮೀರದೆ ಆಡುವ ಸಂಯಮ
ಸಾಧಿಸಿ ನಡೆವಳು ಶುಭ ಸಪ್ತಪದಿ
------------------------------------------------------------------------------------------------------------------------

ಪ್ರೀತ್ಸೆ (2000) - ಪ್ರೀತ್ಸೆ ಪ್ರೀತ್ಸೆ

ಸಾಹಿತ್ಯ, ಸಂಗೀತ: ಹಂಸಲೇಖ ಹಾಡಿರುವವರು: ಹೇಮಂತ್

ಪ್ರೀತ್ಸೆ ... ಪ್ರೀತ್ಸೆ ... ಕಣ್ಣು ಮುಚ್ಚಿ ನನ್ನ ಪ್ರೀತ್ಸೆ
ಮನಸು ಬಿಚ್ಚಿ ನನ್ನ ಪ್ರೀತ್ಸೆ
ಉಸಿರಾಗಿ ಪ್ರೀತ್ಸೆ...  ಬದುಕಾಗಿ ಪ್ರೀತ್ಸೆ
ನನಗಾಗಿ ಪ್ರೀತ್ಸೆ ನಿನಗಾಗಿ ಪ್ರೀತ್ಸೆ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ

ಸಾವಿರಾರು ದಿನಗಳ ಕೆಳಗೆ ನನ್ನೆದೆಯ ಗರ್ಭದ ಒಳಗೆ
ಉಸಿರಾಡಿತು ಆಸೆಯ ಭ್ರೂಣ ಪಡೆಯಿತು ಪ್ರಾಣ
ಬೆಳೆಯಿತು ಕಲಿಯಿತು ಮುದ್ದಿನ ಮಾತೊಂದ
ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ  ಪ್ರೀತ್ಸೆ ನನ್ನೆ ಪ್ರೀತ್ಸೆ
ಮಾತಾಡ್ತ ಪ್ರೀತ್ಸೆ ಮುದ್ದಾಡ್ತ ಪ್ರೀತ್ಸೆ
ಕಣ್ಣೊರಸಿ ಪ್ರೀತ್ಸೆ ಮಗು ಅಂತ ಪ್ರೀತ್ಸೆ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ

ನಾನೊಬ್ಬ ಪ್ರೀತಿಯ ಹುಚ್ಚ ಅದರಲ್ಲೇ ನನ್ನ ಬದುಕು
ನೀನೇನೋ ಯೋಚಿಸಬೇಡ ಭಯಪಡಬೇಡ
ನಿನ್ನನ್ನು ಪಡೆಯದೇ ನಾನು ಸಾಯೋಲ್ಲ
ಪ್ರೀತ್ಸೆ ಪ್ರೀತ್ಸೆ ಪ್ರೀತ್ಸೆ  ಪ್ರೀತ್ಸೆ ನನ್ನೆ ಉಳಿಸೇ 
ಆಕಾಶ ಭೂಮಿ ಡಿಕ್ಕಿಯಾದರು ಪ್ರೀತ್ಸೆ
ನೀ ಬರೆದಾ ಹಾಡಿಗೆ ಚುಕ್ಕಿ ಇಟ್ಟು ಪ್ರೀತ್ಸೇ
ಓ ಕಿರಣ ಓ ಕಿರಣ ನೀ ನನ್ನ ಪ್ರೀತಿ ಕಿರಣ ಕಿರಣ ಕಿರಣ

No comments:

Post a Comment