751. ಎಡಕಲ್ಲ ಗುಡ್ಡದ ಮೇಲೆ (೨೦೧೮)



ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಹಾಡುಗಳು
  1. ಮುಗುಳನಗೆ ಯಾ ಮುಗುಳುನಗೆ 
  2. ಧರಣಿ ಮೂಲ ನೀ ಜನೈ ಅಮ್ಮ 
  3. ನಮದೇ ಲೈಫು 
  4. ನೀ ಕರೆದ 
  5. ಬೆಳಕಾಗಿದೆ ಜಗಕೆ 
ಎಡಕಲ್ಲು ಗುಡ್ಡದ ಮೇಲೆ (೨೦೧೮)
ಸಂಗೀತ : ಆಶಿಕ್ ಅರುಣ, ಸಾಹಿತ್ಯ : ಕಿರಣ ಕಾವೇರಪ್ಪ ಗಾಯನ : ಶ್ರೇಯಾ ಘೋಷಾಲ್, ಕಾರ್ತಿಕ 

ಹೆಣ್ಣು : ಈ ಮೌನ ಒಂದು ಸಂಭಾಷಣೆ ನಸು ನಗುವೇ ಯಾಕೋ ಸುಮ್ಮನೇ
          ಓ.. ಮನದಾಳದಲ್ಲಿ ಆಲಾಪನೆ ಏನೆಂದು ಇದರ ಸೂಚನೆ
ಗಂಡು : ಅರೆಅರೇ ನಾ ತಿಳಿಸಲೇ ಪಿಸುಮಾತಲಿ ಅನುವಾದಿಸಿ
           ಮರೆತು ನಾ ಮೈಮರೆತರೇ ಹುಸಿ ಮುನಿಸನು ನೀ ತೋರಿಸಿ
          ರಾಯಭಾರಿ ನೀ ರೂವಾರಿ ನೀ ಗೀಚಿರುವ ಶಾಯರಿಯ ಸಾಲಿಗೆ
ಗಂಡು : ಹಾಜರಾತಿಯು ಸರಾಸರಿ ಬೇಕಿದೆಯೇ ಪ್ರೇಮದೂರ ಶಾಲೆಗೆ
ಹೆಣ್ಣು : ಜಾದು ಏನೋ ಆಗಿದಂತೆ ನೀ ಜೊತೆಯಲ್ಲಿದ್ದರೇ
ಗಂಡು : ಹೇಳಲೆಂದು ಮಾತನೊಂದು ಹೇಳೆದೇನೆ ಹೋದೆನೇ
ಹೆಣ್ಣು : ಸಂತೆಯಲ್ಲೂ ನಿನ್ನ ಧ್ಯಾನ ಅಲ್ಲೂ ನಿನ್ನ ಗುಂಗಿದೇ
ಗಂಡು : ಹೂ ನಗೆಯ ಚೆಲ್ಲುವಾಗ ನಿನ್ನ ನೋಡೋ ರಂಗಿದೇ

ಹೆಣ್ಣು : ಹಕ್ಕಿಯಂತಾರುವಾಸೆ ಈ ಮನಸಿಗೆ
          ಬಾನಿನೂರಲಿ ಚುಕ್ಕಿ ಎಣಿಸೋಣ
ಗಂಡು : ಹಾರುವ ಗೂಡು ಸೇರುವ ಬೆಳ್ಳಿ ಮುಗಿಲೇರಿ
ಹೆಣ್ಣು :  ರಂಗಿನ ರಂಗು ರಂಗಿನ ಈ ದಿನ ಸವಿ ಸಂಭ್ರಮ
ಗಂಡು : ಹೀಗೆಯೇ ಇರಲಿ ಎಂದು ನಾ ಕೇಳಿಕೊಳ್ಳುವೇ ಆತನ
ಹೆಣ್ಣು : ಈ ಶಾಯರಿ ಸಾಲಲಿ ನಿನ್ನ ಇಂಚರ ಇಂಚರ
ಗಂಡು : ಅದಕೊಂದು ಮುನ್ನುಡಿಯನು ಬರಿಬೇಕಿದೆ ಚಂದಿರ
ಹೆಣ್ಣು : ನೀಲಿ ಬಾನಿನಲಿ ನವಿಲಾಗುವ ತಾರೆಯ ಊರಲಿ ಮರಿ ಹಾಕುವ
ಗಂಡು : ಕಣ್ಣಂಚಲಿ ನೀನು ಕರೆದಂತಿದೆ ನಿನ್ನರಸಿ ಬಂದು ಜೊತೆಯಾಗುವೆ
ಇಬ್ಬರು : ಬೆಳದಿಂಗಳಾ ಹಾಗೆ ನೀ ಬೆಳಕಾಗಿ ಬಾರೆ ನೀ
             ಮುಗುಳುನಗೆಯಾ ಮುಗುಳನಗೆ ಈ ಮನವ ಸೆಳೆದಿರುವ ಬಗೆ
             ಒಲವಿನ ಒಲೆಯ ಬರವಣಿಗೆ ಬರೆಯಲು ಪದಗಳ ಮೆರವಣಿಗೆ
            ಮುಗುಳುನಗೆಯಾ ಮುಗುಳನಗೆ ಸೆಳೆದಿರಲು ಈ ಅರೆಗಳಿಗೆ
           ಒಲವಿನ ಓಲೆಯ ಬರವಣಿಗೆ ಬರೆಯಲು ಪದಗಳ ಮೆರವಣಿಗೆ
           ಮುಗುಳುನಗೆಯಾ ಮುಗುಳನಗೆ ಈ ಮನವ ಸೆಳೆದಿರುವ ಬಗೆ
           ಒಲವಿನ ಓಲೆಯ ಬರವಣಿಗೆ ಬರೆಯಲು ಪದಗಳ ಮೆರವಣಿಗೆ 
          ಒಹೋ.. ನಿಂದಿಯಾ..  ಆಆಆ.. ಒಹೋ.. ನಿಂದಿಯಾ..  ಆಆಆ.. ಈ ಮೌನ... 
--------------------------------------------------------------------------------------------------------------------------

ಎಡಕಲ್ಲು ಗುಡ್ಡದ ಮೇಲೆ (೨೦೧೮)
ಸಂಗೀತ : ಆಶಿಕ್ ಅರುಣ, ಸಾಹಿತ್ಯ : ಕಿರಣ ಕಾವೇರಪ್ಪ ಗಾಯನ : ಕೆ.ಎಸ್.ಚಿತ್ರ 

ಧರಣಿ ಮೂಲ ನೀ ಜಾನೈ ಧಮನಿ ಗೂಡಲಿ ದ್ವನಿ ನೀ..
ಜೀವಧಾರೆಯ ನಾ ಚಿರಋಣಿ ಜೀವವೇ ನೀ.. ಅಮ್ಮಾ..
ಮೊದಲ ಕಣ್ ಹನಿ ಮಿನುಗಿ ಅಮ್ಮ ಎನ್ನಲು ಜೀನುಗೀ
ನಿನ್ನ ಮಡಿಲಲಿ ಸ್ವಾತಿ ಮುತ್ತಾಗಿ ನಾನಿರುವೇ.. ಅಮ್ಮಾ

ಚಂದ ಮಾಮ ಜೋಡಿ ಕಾಡಿಗುಡಿ ಆಡೋ ಭೂರಮೆ ಹಾಗೇ ನೀ
ನನ್ನ ಕೂಡೆ ಆಡಿ ಜೋಲಾಲಿ ಜೋಕಾಲಿ ತೂಗಿ ನೀ ಜೋಗಿನಿ
ಮನದ ಜೋಳಿಗೆಯಲ್ಲಿ ಇದೇ ನೂರು ಸಾಲು
ನಿನಗೆ ಹೇಳದೇ ಉಳಿದಿದೆ ಕೇಳಮ್ಮಾ ಕೇಳಮ್ಮಾ
ನನ್ನಲಿರಲಿ ಆ ಆರೀರೋ ಅರಾರಿರೋ

ಧರಣಿ ಮೂಲ ನೀ ಜನೈ... ಧಮನಿ ಗೂಡಲಿ ಧ್ವನಿ ನೀ...
ಜೀವಧಾರೆಯ ನಾ ಚಿರಋಣಿ ಅಮ್ಮಾ ಜೀವವೇ ನೀ.. ಆ..
ಜೀವವೇ ನೀ.. ಆ..
------------------------------------------------------------------------------------------------------------------------

ಎಡಕಲ್ಲು ಗುಡ್ಡದ ಮೇಲೆ (೨೦೧೮)
ಸಂಗೀತ : ಆಶಿಕ್ ಅರುಣ, ಸಾಹಿತ್ಯ : ಲೇಖಕ್ ಎಂ. ಸಿಧಾರ್ಥ ಗಾಯನ : ಸಂಗೀತ ರಾಜೀವ 

ಕಲರಫುಲ್ ಬಟರಫ್ಲೈ ಮನದಲಿ ಗೆಲುವಿನ ಸ್ಮೈಲು ಮೊಗದಲಿ
ಫ್ರೀಡಂ ಇರುವ ಯುಗದಲಿ  ಸ್ನೇಹದ ಸಲುಗೆ ಜೊತೆಯಲಿ
ಟೀನೇಜು ಲೈಫಲಿ ನಮದೇ ಸುಂದರ ಸ್ಟೋರಿಯ  ಬರೆವ ನಾವು
ಈ ನಮ್ಮ ಸ್ಟೋರಿಯ ಒಳಗೆ ನೋಡಿಲ್ಲಿ ಕಾರುಬಾರು ಭಾರಿ ಜೋರು ನಮ್ಮದೇನೆ
ನಮ್ನದೇ ಲೈಫು ನಮ್ದೇ ರೂಲ್ಸು ನಮ್ಮನ್ನ ಇಲ್ಲಿ ಕೇಳೋರು ಯಾರು
ನಮ್ನದೇ ಲೈಫು ನಮ್ದೇ ರೂಲ್ಸು ನಮ್ಮನ್ನ ಇಲ್ಲಿ ಕೇಳೋರು ಯಾರು

ಓದು ಚೂರು ಬೇಜಾರು ಮಾಡು ಮಸ್ತಿ ಶೂರು 
ನಮಗೆ ನಾವೇನೇ ಟೀಚರು ಟೆನ್ಷನ್ ನೀ ಬಿಟ್ಟು ನಗ್ಗುತಿರು 
ಸಣ್ಣ ಕ್ಷಣ ಈ ಜಿಂದಗಿ ಎಂಜಾಯ್ ಎವೆರಿ ಡೇ 
ಕಾಲ ಎಳೆದು ಕೂಗಿ ಒಮ್ಮೆ ಫ್ರೆಂಡಿಶಿಪ್ನಲ್ಲಿ ಓ ಓ ಸೆನೋರಿಟ 
ಕಲರಫುಲ್ ಬಟರಫ್ಲೈ ಮನದಲಿ ಗೆಲುವಿನ ಸ್ಮೈಲು ಮೊಗದಲಿ
ಫ್ರೀಡಂ ಇರುವ ಯುಗದಲಿ  ಸ್ನೇಹದ ಸಲುಗೆ ಜೊತೆಯಲಿ
ಟೀನೇಜು ಲೈಫಲಿ ನಮದೇ ಸುಂದರ ಸ್ಟೋರಿಯ  ಬರೆವ ನಾವು
ಈ ನಮ್ಮ ಸ್ಟೋರಿಯ ಒಳಗೆ ನೋಡಿಲ್ಲಿ ಕಾರುಬಾರು ಭಾರಿ ಜೋರು ನಮ್ಮದೇನೆ
ನಮ್ಮದೇ ಲೈಫು ನಮ್ಮದೇ ರೂಲ್ಸು ನಮ್ಮನ್ನ ಇಲ್ಲಿ ಕೇಳೋರು ಯಾರು 
ನಮ್ಮದೇ ಲೈಫು ನಮ್ಮದೇ ರೂಲ್ಸು ನಮ್ಮನ್ನ ಇಲ್ಲಿ ಕೇಳೋರು ಯಾರು 
ನಮ್ಮದೇ ಲೈಫು ನಮ್ಮದೇ ರೂಲ್ಸು ನಮ್ಮನ್ನ ಇಲ್ಲಿ ಕೇಳೋರು ಯಾರು 
--------------------------------------------------------------------------------------------------------------------------

ಎಡಕಲ್ಲು ಗುಡ್ಡದ ಮೇಲೆ (೨೦೧೮)
ಸಂಗೀತ : ಆಶಿಕ್ ಅರುಣ, ಸಾಹಿತ್ಯ : ದೊ ರಹ್ ಗಾಯನ : ಕೆ.ಎಸ್.ಚಿತ್ರ 

ಆಆಆ.... ನೀ... ಕರೆದ ಹೆಸರಿಂದು ಕೇಳಿದೆ
ನೀ..  ಹಿಡಿದ ಬೆರಳೊಂದು ಕಾದಿದೆ
ಕಾದ ಮನ ಕಿಡಿಯಾಗಿದೆ ಕಿರು ನಗುವಿದು ಕಾದಾಡಿದೆ
ನನ್ನ ಮಾತಿಗೆ ನಿನ್ನ ಮೌನವೇ ತರವೇ
ಕಾಲನ ಕರೆಯೊಲೆಗೆ ಮರುಳಾದೆಯಾ ಮರುಳಾದೆಯಾ
ನೀ ಮಿಂಚಿ ಹೋದೆ ಮರುಕಕ್ಕೆ ಮರುಳೆ ಓ ಹೋದೆನೀ ದೂರ
ಕಾದೆ ನಾ ಪ್ರೀತಿ ಸ್ವರಕೆ ಸವಿ ನೆನಪಿಗಿಂತ ಸನಿಹ ನೀ ಕಳುವಾದೆಯಾ
ನನ್ನ ವ್ಯಥೆಯಲಿ ಕಥೆಯಾಗಿ ನೀ ಕುಳಿತೇ
ನಲುಗೊ ನೆನಪಿನ ಈ ನೋವ ಜೀಕುವೆನೋ
ರಾರಾರೋ ರಾರಾರೋ ರಾರಾರೋ
ರಾರಾರೋ ರಾರಾರೋ ರಾರಾರೋ
ರಾರಾರೋ ರಾರಾರೋ ರಾರಾರೋ
ರಾರಾರೋ ರಾರಾರೋ ರಾರಾರೋ

ಸಮಯದ ಶರಧಿಯಲಿ ಕದಡಿದ ಕನಸ ಮರಿಬಹುದೇ
ಬರೆಯದ ಬರಹದಲಿ ನಾ...  ಕಳಿದಿಹ ನನ್ನೀ  ಸಿಗಬಹುದೇ
ಮೌನದಾಸೆಗೆ ಮರೆತು ಹೋದ ಮಾತನರಸಿರುವೆ
ಮೌನದೂರಿನ ದಾರಿಯಲಿ ಕುಳಿತು ಬಿಸಿಯುಸಿರಿದು ಬರಿದಾಗಿದೆ
ಕಣ್ಣೀರಿಗಿಂದು ಕೊನೆಯಿದೆ ಬರಲಾರೆಯಾ ಬರದಾದೆಯಾ ಚಿಲುಮೆ
ಕೊರಳೊಳಗೆ ಧನಿಯು ಕರಗಿದೆ ಕರ ಮುಗಿದು ಕರುಣೆ ಬೇಡಿದೆ
ಮೆಲ್ಲ ತುಸು ಮೆಲ್ಲ ಸುಡು ಮನವೇ ಒಹೋ...ಒಹೋ...ಓ
------------------------------------------------------------------------------------------------------------------------

ಎಡಕಲ್ಲು ಗುಡ್ಡದ ಮೇಲೆ (೨೦೧೮)
ಸಂಗೀತ : ಆಶಿಕ್ ಅರುಣ, ಸಾಹಿತ್ಯ : ಗುರು, ಗಾಯನ : ಶ್ವೇತಾ ಮೋಹನ್ 

ಬೆಳಕಾಗಿದೆ ಜಗಕೆ ಹುಡುಕಾಡಿದೆ ಮನಸೆತಕೋ
ಅಪ್ಪ ನಿನ್ನ ತೋರು ಬೆರಳಿಡಿದು ನಡೆದಾಡೋಣ ಅನಿಸುತಿದೆ
ನನಸಾಗದ ಬಯಕೆ ಉಪವಾಸದ ಬದುಕೇತಕೋ
ಅಮ್ಮ ನಿನ್ನ ಕೈಯ ತುತ್ತಿನಲಿ ಹಸಿವೆಲ್ಲಾ ತೀರುವುದೇ

ಜಾರಿ ಬಿದ್ದ ಕಂದ ಅಪ್ಪ ಎತ್ತೋ ಚಂದ ಸುಂದರ ಸಂಬಂಧ
ಊದುಬತ್ತಿ ಗಂಧ ಅಮ್ಮ ಸೀರೆಯಿಂದ ಅಪ್ಪುಗೆ ಆನಂದ
ನನಗಾಗಿ ಪ್ರಕೃತಿ ಹಾಡು ಜೋ ಜೋ ಲಾಲಿ ಜೋ
ಜೋಕಾಲಿ ತಂಗಾಳಿ ನಿದ್ದೆ ಮರೆತು ಕೇಳುವೆ
ಮಮತೆಯ ಭಾಗ್ಯಕ್ಕೆ ನಾ ಕಾದಿದೆ ಬೇಗನೆ ಕರುಣಿಸು ಅಮ್ಮ
ಬೆಳಕಾಗಿದೆ ಜಗಕೆ ಹುಡುಕಾಡಿದೆ ಮನಸೆತಕೋ
ಅಪ್ಪ ನಿನ್ನ ತೋರು ಬೆರಳಿಡಿದು ನಡೆದಾಡೋಣ ಅನಿಸುತಿದೆ
--------------------------------------------------------------------------------------------------------------------

No comments:

Post a Comment