ಲಕ್ಷ್ಮಿ ಮಹಾಲಕ್ಷ್ಮಿ ಚಲನಚಿತ್ರದ ಹಾಡುಗಳು
- ಬಾರಮ್ಮಾ ಬಡವರ ಮನೆಗೆ
- ಮುತ್ತಿನ ಉಂಗುರ
- ಮಾಗಿ ಕಾಲದ ಹೆಣ್ಣು
- ಹಾಯ್ ಬೆಂಗಳೂರು
- ಕಾಸಿನ ಮೇಲೆ ಲೋಕ
ಲಕ್ಷ್ಮಿ ಮಹಾಲಕ್ಷ್ಮಿ(೧೯೯೭) - ಬಾರಮ್ಮಾ ಬಡವರ ಮನೆಗೆ
ಸಂಗೀತ: ಸಾಹಿತ್ಯ : ಹಂಸಲೇಖ, ಗಾಯನ: ಚಿತ್ರಾ
ನಿನ್ನ ಗಂಡ ಲೋಕನಾಯಕ ನೀನು ಅವನ ಹೃದಯ ತಾರಕ-------------------------------------------------------------------------------------------------------------------------
ಲಕ್ಷ್ಮಿ ಮಹಾಲಕ್ಷ್ಮಿ(೧೯೯೭) - ಮುತ್ತಿನ ಉಂಗುರ ನೀಡಲೂ
ಸಂಗೀತ: ಸಾಹಿತ್ಯ : ಹಂಸಲೇಖ, ಗಾಯನ: ಚಿತ್ರಾ, ಮನು
ಮುತ್ತಿನ ಉಂಗುರ.. ಮುತ್ತಿನ ಉಂಗುರ ನೀಡಲೂ ಆಯಿತೂ ಆಸೆಯಾ ಅಂಕುರ
ಅಂಗಗಳೆಲ್ಲಾ ಆಧಾರಗಳಾಗಿ ಹಸಿದೇವೆಯಮ್ಮಾ
ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ
ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ
ಬದುಕುವ ಬುದ್ದಿ ಇದ್ದರೇ ಸಿದ್ದಿ...
ಲಿಂಕಿಂಗೂ ಲಾಭ ಇಂಕಿಗೂ ಲಾಭ ನೀಡುವ ಊರು
ಹೋಯ್ ನಂಬಿಕೆ ಎಂಬ ಇಡುಗಂಟನ್ನೂ ಪಡೆಯುವ ಜ್ಞಾನವೇ ವ್ಯಾಪಾರ
ಈ ಹೃದಯ ಸಿರಿ ಮುಂದೆ ಆ ಹಣವು ತೃಣವೆಂದೇ
ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮಾ
ಅಮ್ಮಾ ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮಾ
ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮಾ
ಅಮ್ಮಾ ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮಾ
ಲಕ್ಷ್ಮೀ ಮಹಾಲಕ್ಷ್ಮಿ.. ಆಆಆಅ...ಲಕ್ಷ್ಮೀ ಮಹಾಲಕ್ಷ್ಮಿ
ಲಕ್ಷ್ಮೀ ಜಯಲಕ್ಷ್ಮಿ ಲಕ್ಷ್ಮೀ ಶುಭಲಕ್ಷ್ಮಿ ನೀ ಧನವಾಗಿ ಧಾನ್ಯವಾಗಿ
ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮಾ
ಅಮ್ಮಾ ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮಾ
ಶ್ರೀ ಹರಿ ಮನೋ ವಿಲಾಸಿನಿ ಶ್ರೀ ನಿಧಿ ಮಹಾ ಪ್ರಚೋದಿನಿ
ಶ್ರೀ ಸುಖಿ ಸುಮಂಗಲಂಗಿನಿ ಸರ್ವ ಇಷ್ಟ ಸುಪ್ರದಾಯಿನಿ
ನಮ್ಮ ಮನೆಯಲ್ಲಿ ಬಂದು ನೆಲೆಸಮ್ಮಾ
ಶಾರದೆ ಜೊತೆಯಲ್ಲಿ ಹಾಡಿ ನಲಿಯಮ್ಮಾ
ಲಕ್ಷ್ಮೀ ಮಹಾಲಕ್ಷ್ಮಿ.. ಆಆಆಅ...ಲಕ್ಷ್ಮೀ ಮಹಾಲಕ್ಷ್ಮಿ
ಲಕ್ಷ್ಮೀ ಜಯಲಕ್ಷ್ಮಿ ಲಕ್ಷ್ಮೀ ಶುಭಲಕ್ಷ್ಮಿ ನೀ ಮಗುವಾಗಿ ನಗುವಾಗಿ
ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮಾ
ಅಮ್ಮಾ ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮಾ
ನಿನ್ನ ಗಂಡ ಲೋಕನಾಯಕ ನೀನು ಅವನ ಹೃದಯ ತಾರಕ
ನಿನ್ನ ಮಗನು ಲೋಕ ಕಾರಕ ನೀನು ಅವನ ಸೃಷ್ಟಿ ಪೇರಕ
ನಿನ್ನ ದಯದಲ್ಲಿ ಎಲ್ಲಾ ಬಂಗಾರ ಮಣ್ಣಿನ ಮಡಿಲ್ಲಲ್ಲಾ ಚಿನ್ನ
ರತ್ನದ ಭಂಡಾರ
ಲಕ್ಷ್ಮೀ ಮಹಾಲಕ್ಷ್ಮಿ.. ಆಆಆಅ...ಲಕ್ಷ್ಮೀ ಮಹಾಲಕ್ಷ್ಮಿ
ಲಕ್ಷ್ಮೀ ಜಯಲಕ್ಷ್ಮಿ ಲಕ್ಷ್ಮೀ ಶುಭಲಕ್ಷ್ಮಿ ನೀ ಸಿರಿಯಾಗಿ ಹರಿಯಾಗಿ
ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮಾ
ಅಮ್ಮಾ ಬಾರಮ್ಮಾ ಬಡವರ ಮನೆಗೆ ದಯಮಾಡಮ್ಮಾ
ಲಕ್ಷ್ಮಿ ಮಹಾಲಕ್ಷ್ಮಿ(೧೯೯೭) - ಮುತ್ತಿನ ಉಂಗುರ ನೀಡಲೂ
ಸಂಗೀತ: ಸಾಹಿತ್ಯ : ಹಂಸಲೇಖ, ಗಾಯನ: ಚಿತ್ರಾ, ಮನು
ತನುವೆಲ್ಲೋ ಮನವೆಲ್ಲೋ ಈ ಜೀವ ಎಲ್ಲೆಲ್ಲೋ ತೇಲಾಡಿದೆ
ಮುತ್ತಿನ ಉಂಗುರ.. ಮುತ್ತಿನ ಉಂಗುರ ನೀಡಲೂ ಆಯಿತೂ ಆಸೆಯಾ ಅಂಕುರ
ತನುವೆಲ್ಲೋ ಮನವೆಲ್ಲೋ ಈ ಜೀವ ಎಲ್ಲೆಲ್ಲೋ ತೇಲಾಡಿದೆ
ಅಂಗಗಳೆಲ್ಲಾ ಆಧಾರಗಳಾಗಿ ಹಸಿದೇವೆಯಮ್ಮಾ
ಮುತ್ತಿನ ಮಳೆಯ ಹನಿ ಹನಿಗಾಗಿ ಕಾದಿದೆಯಮ್ಮಾ
ನಾನೂ ಕರ್ಪುರ ನಿನ್ನ ನೋಟ ಅಂಗಾರ ಮೈ ಬಿಸಿ ಆಗೋ
ಖುಷಿ ಖುಷಿ ಆಗೋ ಈ ಸುಖ ರೋಮಾಂಚನ
ಹೋಯ್ ಪ್ರೇಮ ಮಂದಾರ ನಿನ್ನ ಮಾತೆ ಬಂಗಾರ
ನನ್ನ ಕರೆದಿರುವ ಈ ಬಿರಿದಿರುವ ಅಂದದ ಆರಾಧಕ
ಆತುರದಲ್ಲೂ ಅವಸರದಲ್ಲೂ ಸ್ವರಗಳ ಮೇಳ
ಮುತ್ತಿನ ಉಂಗುರ.. ಮುತ್ತಿನ ಉಂಗುರ ನೀಡಲೂ ಆಯಿತೂ ಆಸೆಯಾ ಅಂಕುರ
ತನುವೆಲ್ಲೋ ಮನವೆಲ್ಲೋ ಈ ಜೀವ ಎಲ್ಲೆಲ್ಲೋ ತೇಲಾಡಿದೆ
ಸಂಭ್ರಮದಲ್ಲಿ ಘೋಚರವಾಯ್ತು ಪ್ರೀತಿಯ ಆಳ
ಜೇನುಗೂಡಿನಲ್ಲಿ ರಾಣಿಗೆ ಜಾಗರಣೆ ಸವಿಗನಸಲ್ಲಿ ಸವಿ ನೆನಪಲ್ಲಿ ಸ್ವರದ ಆಲಾಪನೆ
ಪ್ರೇಮ ರಾಜನಿಂಗೇ ರತಿ ರಾತ್ರಿ ಸ್ವೀಕರಣೆ
ಓ.. ಮಕರಂದ ನನ್ನ ಒಲವಿಂದ ಪ್ರೇಮದ ಸಂತರ್ಪಣೆ
ಮುತ್ತಿನ ಉಂಗುರ.. ಮುತ್ತಿನ ಉಂಗುರ ನೀಡಲೂ ಆಯಿತೂ ಆಸೆಯಾ ಅಂಕುರ
ತನುವೆಲ್ಲೋ ಮನವೆಲ್ಲೋ ಈ ಜೀವ ಎಲ್ಲೆಲ್ಲೋ ತೇಲಾಡಿದೆ
ಮುತ್ತಿನ ಉಂಗುರ.. ಮುತ್ತಿನ ಉಂಗುರ ನೀಡಲೂ ಆಯಿತೂ ಆಸೆಯಾ ಅಂಕುರ
ತನುವೆಲ್ಲೋ ಮನವೆಲ್ಲೋ ಈ ಜೀವ ಎಲ್ಲೆಲ್ಲೋ ತೇಲಾಡಿದೆ
------------------------------------------------------------------------------------------------------------------------
ಲಕ್ಷ್ಮಿ ಮಹಾಲಕ್ಷ್ಮಿ(೧೯೯೭) - ಮಾಗಿ ಕಾಲದ ಹಣ್ಣು ನೀನೂ
ಸಂಗೀತ: ಸಾಹಿತ್ಯ : ಹಂಸಲೇಖ, ಗಾಯನ: ಚಿತ್ರಾ, ಮನು
ಮಾಗಿ ಕಾಲದ ಹಣ್ಣು ನೀನೂ ನೀನೂ ನಿನ್ನ ಮುದ್ದಿಸಿದಾಗ ಜೇನೂ ಜೇನೂ
ನಿಜ ನಿಜ ನಿನ್ನ ಮಾತು ಚಿನ್ನ ತುಟಿಗಳಿಗೇಕೆ ಬಿಡುವು ಇನ್ನೂ
ನಿಜ ನಿಜ ನಿನ್ನ ಮಾತು ಚಿನ್ನ ಪ್ರಣಯಕೇ ಪರದೇ ಏಕೇ ಇನ್ನ..
ಮಾಗಿ ಕಾಲದ ಕಿಚ್ಚೂ ನೀನೂ ನೀನೂ ನಿನ್ನ ಅಪ್ಪುಗೆಯಲ್ಲಿ ನಾನು ನಾನೂ
ನಾಳೇ ನೆನಪು ಸಿಹಿ ಆಗಬೇಕು ತಾನೇ ಅದಕೆ ಇಂದು ಮುದ್ದಾಡಬೇಕೂ ಜಾಣೇ
ಬಾಳು ಇಂದು ಹಗುರಾಗಬೇಕು ತಾನೇ ಅದಕೆ ಪ್ರೀತಿ ಚಿಗುರಾಗಬೇಕು ಜಾಣೆ
ಆಸೆಗೆ ಕೆನ್ನೆಗೆ ಸಂಜೆ ರಂಗು ಬಂತು ನಾಚಿಕೆ ನೋಡಿತು ಸೆರಗಿನೊಳಗೇ ನಿಂತೂ
ಮಾಗಿ ಕಾಲದ ಕಿಚ್ಚೂ ನೀನೂ ನೀನೂ ನಿನ್ನ ಅಪ್ಪುಗೆಯಲ್ಲಿ ನಾನು ನಾನೂ
ನಿಜ ನಿಜ ನಿನ್ನ ಮಾತು ಚಿನ್ನ ಪ್ರಣಯಕೇ ಪರದೆ ಏಕೆ ಇನ್ನ
ನಿಜ ನಿಜ ನಿನ್ನ ಮಾತು ಚಿನ್ನ ತುಟಿಗಳಿಗೇಕೆ ಬಿಡುವು ಇನ್ನೂ
ಮಾಗಿ ಕಾಲದ ಹಣ್ಣು ನೀನೂ ನೀನೂ ನಿನ್ನ ಮುದ್ದಿಸಿದಾಗ ಜೇನೂ ಜೇನೂ
ನೀನು ಅಂದ್ರೇ ಈ ಹರೆಯ ನಿಲ್ಲದಮ್ಮಾ ಹೂವ ಬಾಣ ಬಚ್ಚಿಟ್ಟೆ ಬದುಕಮ್ಮಾ
ಮನಸು ಪ್ರೀತಿ ಕಲೆತಾಗ ಬಂದವಮ್ಮಾ ಅಂದ ಚಂದ ಕಡೆದಾಗ ತಂದನಮ್ಮಾ
ಮನಸು ಪ್ರೀತಿ ಕಲೆತಾಗ ಬಂದವಮ್ಮಾ ಅಂದ ಚಂದ ಕಡೆದಾಗ ತಂದನಮ್ಮಾ
ಬಾಳಿನ ಚಂದಿರ ಪೂರ್ಣಾಗಬೇಕು ಅಂದ್ರೇ ಹೆಣ್ಣಿದು ತಾಯಿಯಾಗಬೇಕೂ
ಮಾಗಿ ಕಾಲದ ಹಣ್ಣು ನೀನೂ ನೀನೂ ನಿನ್ನ ಮುದ್ದಿಸಿದಾಗ ಜೇನೂ ಜೇನೂ
ನಿಜ ನಿಜ ನಿನ್ನ ಮಾತು ಚಿನ್ನ ತುಟಿಗಳಿಗೇಕೆ ಬಿಡುವು ಇನ್ನೂ
ನಿಜ ನಿಜ ನಿನ್ನ ಮಾತು ಚಿನ್ನ ಪ್ರಣಯಕೇ ಪರದೆ ಏಕೆ ಇನ್ನ
ಮಾಗಿ ಕಾಲದ ಕಿಚ್ಚು ನೀನೂ ನೀನೂ ನಿನ್ನ ಅಪ್ಪುಗೆಯಲ್ಲಿ ನಾನೂ ನಾನೂ
-------------------------------------------------------------------------------------------------------------------------
ಲಕ್ಷ್ಮಿ ಮಹಾಲಕ್ಷ್ಮಿ(೧೯೯೭) - ಹಾಯ್ ಬೆಂಗಳೂರು
ಸಂಗೀತ: ಸಾಹಿತ್ಯ : ಹಂಸಲೇಖ, ಗಾಯನ:ಮನು
ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ
ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ
ಬದುಕುವ ಬುದ್ದಿ ಇದ್ದರೇ ಸಿದ್ದಿ...
ಬದುಕುವ ಬುದ್ದಿ ಇದ್ದರೇ ಸಿದ್ದಿ ದೊರಕೋ ಊರು
ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ
ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ
ಹೋಯ್ ಕೋಟಿ ಬಾಳೋ ಸೈಟನ್ನೂ ಲಕ್ಷಕ್ಕೇ ಮಾರೋ ಮೂಢರು ಇಲ್ಲುಂಟು
ಚಾಟಿ ಇರದೇ ಬುಗುರಿ ತಿರುವೂ ಕೋಟ್ಯಧೀಶರೂ ಇಲ್ಲುಂಟು
ಗಂಡ ದುಡಿದರೇ ಸಾಲಲ್ಲಾ.. ಹೆಂಡತಿ ದುಡಿದರೂ ಸುಖವಿಲ್ಲಾ
ಗಂಡ ಹೆಂಡಿರೂ ದುಡಿಯೋದು ಬೇಬಿ ಸಿಟ್ಟಿಂಗ್ ಗೂಡಿಗೆ
ಟೀಚರ್ ಕಾನ್ವೆಂಟ್ ಫೀಸಗೇ ಅಟೋರಿಕ್ಷಾ ಚಾರ್ಜಗೇ
ಸರ್ವರ್ ಕ್ಲೀನರ್ ಹೆಲ್ಪರ್ ಬೋರ್ಕರ್ ಕೆಲಸ ಹೈಕ್ಲಾಸ್ಸು
ದುಡಿಯೋ ರೀತಿ ಕಂಡ್ರೇ ಪ್ರೀತೀ
ದುಡಿಯೋ ರೀತಿ ಕಂಡ್ರೇ ಪ್ರೀತೀ ಮಾಡೋ ಊರು
ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ
ಗಾಳಿಗೋಪುರ ಕಟ್ಟಲೇಬೇಡ ಅನ್ನುತಲಿದ್ದರೂ ಹಿಂದೆಲ್ಲಾ
ಗಾಳೀಲಿ ಮಹಡಿ ಕಟ್ಟದೆ ಇದ್ದರೇ ವಾಸಕ್ಕೆ ಜಾಗ ಸಿಗದಲ್ಲಾ
ಕೀಳು ಎಂಬುವ ಕಾಂಪ್ಲೆಕ್ಸೂ ಬಿಟ್ಟು ಕಟ್ಟು ದೊಡ್ಡ ಕಾಂಪ್ಲೆಕ್ಸೂ
ಬಾಂಬೆ ದಿಲ್ಲಿ ನೋಡದ ಜನರಿಗೆ ಇದುವೇ ಅದ್ಬುತ
ದೂರಾಲೋಚನೆ ಮಾಡದ ಜನರಿಗೆ ಎಲ್ಲೂ ಸ್ವಾಗತ
ಕೈ ಬದಲು ಮಾಡುವ ಕಸುಬು ಕಲಿತರೇ ಸಾಕಯ್ಯಾ
ಲಿಂಕಿಂಗೂ ಲಾಭ ಇಂಕಿಗೂ ಲಾಭ ಲಿಂಕಿಂಗೂ ಲಾಭ ಇಂಕಿಗೂ ಲಾಭ ನೀಡುವ ಊರು
ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ
ಪೈಸೆಯಿಂದ ರೂಪಾಯಿಗೆ ಮಾಡೋ ಸಹನೆಯ ಶಾಸ್ತ್ರವೇ ವ್ಯಾಪಾರ
ಹೂವಿನ ಜೊತೆಗೆ ನಾರು ಗಂಧದ ಜೊತೆಗೆ ತೇರು ಕೆಲಸಕೆ ಬರವೇ ಇಲ್ಲಾ
ಹುಡುಕಲು ಕಷ್ಟವೇ ಇಲ್ಲಾ ಕುಳಿತು ಕೊಳೆವುದು ಸಾಲ
ದುಡಿದು ಸವಿವುದು ಬೆಲ್ಲ ಎದ್ದರೆ ಮೇಲೆ ಕಾಯಕ ಮಾಲೆ ಕರೆವುದು ನಿನಗಿಲ್ಲಿ
ಬೆವರಿಗೂ ಲಾಭ ಬುದ್ದಿಗೂ ಲಾಭ
ಬೆವರಿಗೂ ಲಾಭ ಬುದ್ದಿಗೂ ಲಾಭ ನೀಡುವ ಊರು
ಬೆವರಿಗೂ ಲಾಭ ಬುದ್ದಿಗೂ ಲಾಭ
ಬೆವರಿಗೂ ಲಾಭ ಬುದ್ದಿಗೂ ಲಾಭ ನೀಡುವ ಊರು
ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ
ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ ಹಾಯ್ ಬೆಂಗಳೂರ
-------------------------------------------------------------------------------------------------------------------------
ಲಕ್ಷ್ಮಿ ಮಹಾಲಕ್ಷ್ಮಿ(೧೯೯೭) - ಕಾಸಿನ ಮೇಲೆ ಲೋಕ
ಸಂಗೀತ: ಸಾಹಿತ್ಯ : ಹಂಸಲೇಖ, ಗಾಯನ: ಎಸ್.ಪಿ.ಬಿ, ಚಾಮಲಾರಾವ್
ಕಾಸಿನ ಮೇಲೆ ಲೋಕ ಕಾಸಿನ ಶೋಕ
ಕಾಸಿನ ಮೇಲೆ ಲೋಕ ಕಾಸಿನ ಶೋಕ
ಭೂಮಿಯ ಮೇಲೆ ಸ್ವರ್ಗ ನರಕ ಎಲ್ಲಾ ಕಾಸಿಂದ
ಕಲಿಗಾಲ ಚಿಂತಿಸುವ ಕಾಲ ಬುದ್ದಿ ಕಲಿವ ಕಾಲ
ಕಲಿಯದವರಿಗೆಲ್ಲಾ ಶೂಲ
ಕಾಸಿನ ಮೇಲೆ ಲೋಕ ಕಾಸಿನ ಶೋಕ
ಕಾಸಿನ ಮೇಲೆ ಲೋಕ ಕಾಸಿನ ಶೋಕ
ಪ್ರೀತಿಯ ಮರೆಮಾಡಲೂ ನಿಂತಿದೆ ಈ ಹೊನ್ನೂ
ನಂಬಿಕೆ ಅಲುಗಾಡದೂ ಕಾರಣ ಈ ಹೊನ್ನೂ
ಆ ದುರಾಸೇ ಈ ನಿರಾಸೇ ಜನಿಸಿರುವುದೇ ಈ ಕಾಸಲಿ
ಕಾಸಿನ ಮೇಲೆ ಲೋಕ ಕಾಸಿನ ಶೋಕ
ಕಾಸಿನ ಮೇಲೆ ಲೋಕ ಕಾಸಿನ ಶೋಕ
ಈ ಕಾಂಚಾಣವೇ ಅಮೃತ ಈ ಕಾಂಚಾಣವೇ ಅನೃತ
ಕಾಸಿಗೇ ಮನಸೋಲದ ಜ್ಞಾನಿಗೇ ಸುಖ ನಿತ್ಯ
ಕಾಸಿಗೇ ಸೆರೆಯಾದರೇ ಸಂಕಟ ನಿತ್ಯ ಸತ್ಯ
ಕಾಸೂ ಬಂದಾಗ ಬಂದು ಹೋದಾಗ ನಿರ್ಲಕ್ಷಿಸು ಸುಖಿಯಾಗುವೇ ..
ಕಾಸಿನ ಮೇಲೆ ಲೋಕ ಕಾಸಿನ ಶೋಕ
ಕಾಸಿನ ಮೇಲೆ ಲೋಕ ಕಾಸಿನ ಶೋಕ
ಭೂಮಿಯ ಮೇಲೆ ಸ್ವರ್ಗ ನರಕ ಎಲ್ಲಾ ಕಾಸಿಂದ
ಕಲಿಗಾಲ ಚಿಂತಿಸುವ ಕಾಲ ಬುದ್ದಿ ಕಲಿವ ಕಾಲ
ಕಲಿಯದವರಿಗೆಲ್ಲಾ ಶೂಲ
ಕಾಸಿನ ಮೇಲೆ ಲೋಕ ಕಾಸಿನ ಶೋಕ
ಕಾಸಿನ ಮೇಲೆ ಲೋಕ ಕಾಸಿನ ಶೋಕ
-----------------------------------------------------------------------------------------------------------------------
No comments:
Post a Comment