762. ನೆನಪಿನ ದೋಣಿ (೧೯೮೬)

ನೆನಪಿನ ದೋಣಿ ಚಲನಚಿತ್ರದ ಹಾಡುಗಳು 
  1. ಈಜಿದೇ ಬದುಕಿನ ಕಡಲಿನಲಿ 
  2. ಕಾಡಲ್ಲಿದ್ದ ಹಕ್ಕಿಯೊಂದು ಊರಿಗೇ ಬಂದಿತ್ತು 
  3. ಪ್ರೀತಿ ನೆನಪ ಮೀಟುವ ಹೃದಯ (ಎಸ್.ಪಿ.ಬಿ.)
  4. ನಾ ನಿನ್ನ ಬಯಸಿದೇ ನಿನ್ನೋಲವೂ ಸೆಳೆದಿದೇ 
  5. ಪ್ರೀತಿ ನೆನಪ ಮೀಟುವ ಹೃದಯ (ಬಿ.ಆರ್.ಛಾಯ) 
ನೆನಪಿನ ದೋಣಿ (೧೯೮೬) - ಈಜಿದೇ ಬದುಕಿನಂ ಕಡಲಿನಲಿ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ,

ಈಜಿದೇ ಬದುಕಿನ ಕಡಲಿನಲಿ ತೇಲಿದೆ ನೆನಪಿನ ದೋಣಿಯಲೀ

ಕಾಣದೂ ಆಸೆಯೂ ತೀರ ಆಗಿದೇ ಮನಸು ಭಾರ

ಹೂ ಮಳೆಯ ದಿನ ಮೊದಲಾಗಿ ಸ್ನೇಹ ಸೆಲೆ ಸವಿ ಸುಧೆಯಾಗಿ

ತನು ಮನ ಅರಳಿತು ಹೊನಲಾಗಿ ಮೊರೆದಿದೇ ತೊರೆದಿದೇ ಒಲವಾಗಿ
ಈಜಿದೇ ಬದುಕಿನ ಕಡಲಿನಲಿ ತೇಲಿದೆ ನೆನಪಿನ ದೋಣಿಯಲೀ

ನೀ ನಗಲು ನಾ ಸಿರಿ ಕಂಡೇ ನೀ ಬರಲೂ ನಾ ಶೃತಿಯಾದೇ

ಕ್ಷಣ ಕ್ಷಣ ತುಡಿದಿಹೇ ನಿನಗೆಂದೇ ದಿನ ದಿನ ಕಾದಿಹೇ ಒಲವೆಂದೇ
ಈಜಿದೇ ಬದುಕಿನ ಕಡಲಿನಲಿ ತೇಲಿದೆ ನೆನಪಿನ ದೋಣಿಯಲೀ

ನೀರದೇ ಗುರಿ ಇರದೆಂದು ಪ್ರೀತಿಸದೇ ಮುದ ಸಿಗದೆಂದೂ

ಕಣ ಕಣ ಮೀಸಲೂ ನಿನಗಾಗಿ ನಡೆ ಮುಡಿ ಹಾಸುವೇ ಗೆಲುವಾಗಿ
ಈಜಿದೇ ಬದುಕಿನ ಕಡಲಿನಲಿ ತೇಲಿದೆ ನೆನಪಿನ ದೋಣಿಯಲೀ
ಕಾಣದೂ ಆಸೆಯೂ ತೀರ ಆಗಿದೇ ಮನಸು ಭಾರ
ಈಜಿದೇ ಬದುಕಿನ ಕಡಲಿನಲಿ ತೇಲಿದೆ ನೆನಪಿನ ದೋಣಿಯಲೀ
------------------------------------------------------------------------------------------------------------------------

ನೆನಪಿನ ದೋಣಿ (೧೯೮೬) - ಕಾಡಲ್ಲಿದ್ದ ಹಕ್ಕಿಯೊಂದು ಊರಿಗೇ ಬಂದಿತ್ತು 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ,

ಕಾಡಲ್ಲಿದ್ದ ಹಕ್ಕಿಯೊಂದು ಊರಿಗೇ ಬಂದಿತ್ತು
ಕಾಡಲ್ಲಿದ್ದ ಹಕ್ಕಿಯೊಂದು ಊರಿಗೇ ಬಂದಿತ್ತು
ಊರಲ್ಲಿದ್ದ ಹಕ್ಕಿ ಜೋತೆಗೆ ಸ್ನೇಹ ಬೆಳಸಿತ್ತೂ .. ಸ್ನೇಹ ಬೆಳಸಿತ್ತೂ 

ಪ್ರೇಮದಿಂದ ರೆಕ್ಕೆ ಬಿಚ್ಚಿ ಮುಗಿಲಲಿ ತೇಲಿದವು
ಎಂದು ಬಿಡದ ಬಂಧನದಲ್ಲಿ ಜೋಡಿಯೂ ನಲಿದಿತ್ತು...

ತುಂಬಿದ ಆಸೆಯ ಕಾಡಿನ ಹಕ್ಕಿ ಗೂಡನು ಕಟ್ಟಿತ್ತು
ಮೆತ್ತನೆ ಹತ್ತಿ ಮಿಂಚಿನ ಹುಳವನೂ ಗೂಡಲಿ ಹಾಕಿತ್ತು...

ಕೊಕ್ಕಿನ ತುದಿಯಲಿ ಹಣ್ಣನ್ನು ತಂದು ರಾಶಿಯ ತುಂಬಿತ್ತು
ನಲ್ಲೆಗೆ ಕಾದ ಕಾಡಿನ ಹಕ್ಕಿಗೆ ದುಗುಡವ ತಂದಿತ್ತು..
(ಮಾತು ) ಹೀಗೆ ಪಾಪ ಅದು ಕಾಯುತಿದ್ದಾಗ ಅಲ್ಲಿ

ಊರಿನ ಹಕ್ಕಿಯೂ ಹದ್ದಿನ ಸೆರೆಯಲಿ ಸಿಕ್ಕುತಾ ನರಳಿತ್ತು
ಇದನ್ನರಿಯದ ಕಾಡಿನ ಹಕ್ಕಿಯು ನಲ್ಲೆಗೆ ಕಾದಿತ್ತು
ಬಾರದ ನಲ್ಲೆಗೆ ಹುಡುಕುತಾ ಹಾರಿತು ಗುಡ್ಡದ ತೋಪಿನಲಿ
ಗರಿ ಗರಿ ಸಿಕ್ಕಿ ಮುಳ್ಳಿಗೇ ಚುಚ್ಚಿ ಬಳಲಿತು ನೋವಿನಲಿ

ವಿರಹಿಗಳಾದವೂ ಹಕ್ಕಿಗಳೆರಡೂ ಸೋಲಿನ ಹಾದಿಯಲಿ
ಮುರಿಯುತ ಬಿದ್ದವು ಪ್ರೇಮದ ರೆಕ್ಕೆಯು ದುಃಖದ ಮಡುವಿನಲಿ

ಕಾಡಿನ ಹಕ್ಕಿಯು ನಡೆಯುತ ಸಾಗಿತು ದೂರದ ಗಿರಿ ಕಡೆಗೇ
ಹದ್ದಿನ ಸೆರೆಮನೆ ಪಕ್ಕವೇ ಮಾಡಿತು ಗೂಡನು ದಿನದೊಳಗೇ

ಬೆರೆಗನು ತಂದಿತು ನಲ್ಲೆಯೂ ಕಂಡಳು ಪಕ್ಕದ ಮಾಡಿನಲಿ
ಎದುರಿಎದುರಿದ್ದರೂ ಹಕ್ಕಿಗಳೆರಡೂ ನರಳಿವೇ ಮೂಕದಲಿ
(ಮಾತು ) ಹ್ಹೂ...  ಎದುರಿಎದುರಿದ್ದರೂ ಹಕ್ಕಿಗಳೆರಡೂ ನರಳಿವೇ ಮೂಕದಲಿ

ವಿರಹದ ಸುಳಿಯಲಿ ಸಿಲುಕಿದ ಹಕ್ಕಿಯ ಬಾಳಿಗೇ ಕೊನೇ ಎಲ್ಲೀ
ಎಂದೂ ಮುಗಿಯದ ಈ ಕಥೆಯಲ್ಲಿ ಪ್ರೇಮದ ನೆಲೆ ಎಲ್ಲಿ
ಪ್ರೇಮದ ನೆಲೆ ಎಲ್ಲಿ...  ಪ್ರೇಮದ ನೆಲೆ ಎಲ್ಲಿ ... ಪ್ರೇಮದ ನೆಲೆ ಎಲ್ಲಿ ...
-------------------------------------------------------------------------------------------------------------------------

ನೆನಪಿನ ದೋಣಿ (೧೯೮೬) - ಪ್ರೀತಿ ನೆನಪ ಮೀಟುವಾ ಹೃದಯಾ ಕಲಿಯೋ ಒಲವ ಮರೆಯುವ ಕಲೆಯಾ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ,

ಪ್ರೀತಿ ನೆನಪ ಮೀಟುವಾ ಹೃದಯಾ ಕಲಿಯೋ ಒಲವ ಮರೆಯುವ ಕಲೆಯಾ

ಅಂದು ಮಿಲನ ಬಯಸಿದ ಮನವೇ ಇಂದೂ ವಿರಹ ಸಹಿಸಿಕೋ ಏನುವೇ

ಅಪ್ಪುಗೇ ಕಂಡಿಹ ಕೋಮಲ ಕೈಗಳೇ ಪ್ರೇಮ ಪಾಶದ ತಿಳಿವೇ ಇಲ್ಲವೇ

ಮೋಹ ಮರೆಯಲೂ ಅರಿಯದೇ ಸ್ನೇಹ ಆಸೇ ಹಂಬಲ ನೀಗದೇ ದಾಹ

ಕನಸನು ಕಾಣುವ ಮಿನುಗುವ ಕಂಗಳೇ ನಲ್ಮೆ ನೋವಿನ ನೆನಪೇ ಇಲ್ಲವೇ

ಬಾಳ ಕಹಿಯನು ಕಾಣದೇ ನೋಟ ಪ್ರೇಮ ಘಾತವೂ ನೀಡದೇ ಪಾಠ

--------------------------------------------------------------------------------------------------------------------------

ನೆನಪಿನ ದೋಣಿ (೧೯೮೬) - ನಾ ನಿನ್ನ ಬಯಸಿದೇ ನಿನ್ನೋಲವೂ ಸೆಳೆದಿದೆ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಬಿ.ಆರ್.ಛಾಯ   

ಹೆಣ್ಣು : ನಾ ನಿನ್ನ ಬಯಸಿದೇ ನಿನ್ನೋಲವೂ ಸೆಳೆದಿದೆ
          ನೂರು ಕನಸು ತೇಲಿದೆ ಬಾಳ ದೋಣಿ ಕಾದಿದೇ
ಗಂಡು : ನಾ ನಿನ್ನ ಬಯಸಿದೇ ನಿನ್ನೋಲವೂ ಸೆಳೆದಿದೆ
           ನೂರು ಕನಸು ತೇಲಿದೆ ಬಾಳ ದೋಣಿ ಕಾದಿದೇ
ಹೆಣ್ಣು : ನಾ ನಿನ್ನ ಬಯಸಿದೇ     ಗಂಡು : ನಿನ್ನೋಲವೂ ಸೆಳೆದಿದೆ

ಹೆಣ್ಣು : ಮೇಘ ತಂದ ಮಂಜಿನ ಮುತ್ತು ನಿನ್ನನ್ನೇ ಬಿಂಬಿಸಿದೇ
          ಬಣ್ಣ ತುಂಬಿ ವಸಂತನಿತ್ತ ಹೂ ನಗೆ  ಮೂಡಿಸಿದೆ
         ಮೇಘ ತಂದ ಮಂಜಿನ ಮುತ್ತು ನಿನ್ನನ್ನೇ ಬಿಂಬಿಸಿದೇ
         ಬಣ್ಣ ತುಂಬಿ ವಸಂತನಿತ್ತ ಹೂ ನಗೆ  ಮೂಡಿಸಿದೆ
ಗಂಡು : ಕೂಡಿದೆ ಮನ ಜಾರಿದೇ ಕ್ಷಣ
            ಕೂಡಿದೆ ಮನ ಜಾರಿದೇ ಕ್ಷಣ ತೋಳಲಿ ನೀ ಸೆರೆಯಾಗುತ ಮರೇ
ಹೆಣ್ಣು : ನಾ ನಿನ್ನ (ಲಲಲಾಲಲಾ)  ಬಯಸಿದೇ
ಗಂಡು : ಲಲಲಾ .. ನಿನ್ನೋಲವೂ (ಆಆಆ ) ಸೆಳೆದಿದೆ (ಆಆ )

ಗಂಡು : ನಿನ್ನ ಪ್ರೀತಿ ಪರ್ವತದಲ್ಲಿ ನೆಮ್ಮದಿ ತಾಣವಿದೆ
            ನಿನ್ನ ಸ್ನೇಹ ಸಾಗರದಲ್ಲಿ ಮೀನಿನ ಮೋಹವಿದೆ
            ನಿನ್ನ ಪ್ರೀತಿ ಪರ್ವತದಲ್ಲಿ ನೆಮ್ಮದಿ ತಾಣವಿದೆ
            ನಿನ್ನ ಸ್ನೇಹ ಸಾಗರದಲ್ಲಿ ಮೀನಿನ ಮೋಹವಿದೆ
ಹೆಣ್ಣು : ಬಳ್ಳಿಗೇ ಮರ ಹಕ್ಕಿಗೇ ಸ್ವರ ...
          ಬಳ್ಳಿಗೇ ಮರ ಹಕ್ಕಿಗೇ ಸ್ವರ ... ಬಾಳಿಗೇ ಆಸರೇ ನೀನಿರೇ ಜೋತೇ
ಗಂಡು : ನಾ ನಿನ್ನ ಬಯಸಿದೇ ನಿನ್ನೋಲವೂ ಸೆಳೆದಿದೆ
ಹೆಣ್ಣು : ನೂರು ಕನಸು ತೇಲಿದೆ ಬಾಳ ದೋಣಿ ಕಾದಿದೇ
ಗಂಡು : ನಾ ನಿನ್ನ (  ಆಆಆ ) ಬಯಸಿದೇ
ಹೆಣ್ಣು : ಆಆಆ ... ನಿನ್ನೋಲವೂ (ಹೇಹೇಹೇ)  ಸೆಳೆದಿದೆ (ಲಲಲಲಾ )
ಇಬ್ಬರು : ನಾ ನಿನ್ನ ಬಯಸಿದೇ ನಿನ್ನೋಲವೂ ಸೆಳೆದಿದೆ
-------------------------------------------------------------------------------------------------------------------------

ನೆನಪಿನ ದೋಣಿ (೧೯೮೬) - ಪ್ರೀತಿ ನೆನಪ ಮೀಟುವಾ ಹೃದಯಾ ಕಲಿಯೋ ಒಲವ ಮರೆಯುವ ಕಲೆಯಾ 
ಸಂಗೀತ : ವಿಜಯಭಾಸ್ಕರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಬಿ.ಆರ್.ಛಾಯ,

ಪ್ರೀತಿ ನೆನಪ ಮೀಟುವಾ ಹೃದಯಾ ಕಲಿಯೋ ಒಲವ ಮರೆಯುವ ಕಲೆಯಾ
ಪ್ರೀತಿ ನೆನಪ ಮೀಟುವಾ ಹೃದಯಾ ಕಲಿಯೋ ಒಲವ ಮರೆಯುವ ಕಲೆಯಾ
ಅಂದು ಮಿಲನ ಬಯಸಿದ ಮನವೇ ಇಂದೂ ವಿರಹ ಸಹಿಸಿಕೋ ಏನುವೇ
ಪ್ರೀತಿ ನೆನಪ ಮೀಟುವಾ ಹೃದಯಾ ಕಲಿಯೋ ಒಲವ ಮರೆಯುವ ಕಲೆಯಾ

ಅಪ್ಪುಗೇ ಕಂಡಿಹ ಕೋಮಲ ಕೈಗಳೇ ಪ್ರೇಮ ಪಾಶದ ತಿಳಿವೇ ಇಲ್ಲವೇ
ಅಪ್ಪುಗೇ ಕಂಡಿಹ ಕೋಮಲ ಕೈಗಳೇ ಪ್ರೇಮ ಪಾಶದ ತಿಳಿವೇ ಇಲ್ಲವೇ
ಮೋಹ ಮರೆಯಲೂ ಅರಿಯದೇ ಸ್ನೇಹ ಆಸೇ ಹಂಬಲ ನೀಗದೇ ದಾಹ
ಪ್ರೀತಿ ನೆನಪ ಮೀಟುವಾ ಹೃದಯಾ ಕಲಿಯೋ ಒಲವ ಮರೆಯುವ ಕಲೆಯಾ

ಕನಸನು ಕಾಣುವ ಮಿನುಗುವ ಕಂಗಳೇ ನಲ್ಮೆ ನೋವಿನ ನೆನಪೇ ಇಲ್ಲವೇ
ಕನಸನು ಕಾಣುವ ಮಿನುಗುವ ಕಂಗಳೇ ನಲ್ಮೆ ನೋವಿನ ನೆನಪೇ ಇಲ್ಲವೇ
ಬಾಳ ಕಹಿಯನು ಕಾಣದೇ ನೋಟ ಪ್ರೇಮ ಘಾತವೂ ನೀಡದೇ ಪಾಠ
ಪ್ರೀತಿ ನೆನಪ ಮೀಟುವಾ ಹೃದಯಾ ಕಲಿಯೋ ಒಲವ ಮರೆಯುವ ಕಲೆಯಾ 
ಅಂದು ಮಿಲನ ಬಯಸಿದ ಮನವೇ ಇಂದೂ ವಿರಹ ಸಹಿಸಿಕೋ ಏನುವೇ
ಪ್ರೀತಿ ನೆನಪ ಮೀಟುವಾ ಹೃದಯಾ ಕಲಿಯೋ ಒಲವ ಮರೆಯುವ ಕಲೆಯಾ
-------------------------------------------------------------------------------------------------------------------------

No comments:

Post a Comment