763. ಅವನೇ ನನ್ನ ಗಂಡ (೧೯೮೯)

ಅವನೇ  ನನ್ನ ಗಂಡ ಚಿತ್ರದ ಹಾಡುಗಳು 
  1. ಹಸಿರು ಗಾಜಿನ ಬಳೆಗಳೇ 
  2. ವಿಚಾರ ಹುಡುಗಿಯದಾದರೆ 
  3. ಕಲಿಯುಗ ಮನ್ಮಥದಾಸ 
ಅವನೇ ನನ್ನ ಗಂಡ (೧೯೮೯) - ಹಸಿರು ಗಾಜಿನ ಬಳೆಗಳೇ...
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಲತಾ ಹಂಸಲೇಖ 

ನಿಸಗಮಪ  ಗಮಪಗರಿನಿ.. ನಿಸಗಮಪ  ಗಮಪಗರಿನಿ
ನಿಸಗಮಪನಿಪ ಸ.... ಆ..ಆ...ಆ...
ಹಸಿರು ಗಾಜಿನ ಬಳೆಗಳೇ...  ಸ್ತ್ರೀ ಕುಲದ ಶುಭ ಸ್ವರಗಳೇ..
ಈ ಕೈಗಳಿಗೆ ಶೃಂಗಾರವೇ,  ನೀವೂ ಘಲ್ಲಂದರೇ  ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ...  
ಹಸಿರು ಗಾಜಿನ ಬಳೆಗಳೇ...  ಸ್ತ್ರೀ ಕುಲದ ಶುಭ ಸ್ವರಗಳೇ..
ಈ ಕೈಗಳಿಗೆ ಶೃಂಗಾರವೇ,  ನೀವೂ ಘಲ್ಲಂದರೇ  ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ...  ಹಸಿರು ಗಾಜಿನ ಬಳೆಗಳೇ...

ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೇ
ಮದುವೆಯ ವಯಸ್ಸಿಗೆ ಒಡವೆ ಇದು ತಾನೇ
ಕಾಮನ ಬಿಲ್ಲಿದು ಇದರ ಸಾಟಿ ನಿಲ್ಲದು
ಋಷಿಗಳ ಸಂಯಮ ಇದರ ಮುಂದೆ ನಿಲ್ಲದು
ಸ್ತ್ರೀ ಕುಲದ ಸೌಭಾಗ್ಯವೇ ನಿನ್ನ ರೂಪವೂ
ಒಹ್.. ಒಹ್.. ಒಹ್.. ಲ..ಲ..ಲ.. ಲ..
ಹಸಿರು ಗಾಜಿನ ಬಳೆಗಳೇ...

ಋತುಗಳ ಜೊತೆಯಲಿ ಬದುಕು ನಡೆವಾಗ
ಬದುಕಿನ ನೆರಳಲಿ ಹೆಣ್ಣು ನಡೆವಾಗ
ಪ್ರೇಮದ ಪ್ರಣಯದ ನಡುವೆ ನಿನ್ನ ನಗುವಿದೆ
ಸಾವಿನ ನೋವಿನ ನಡುವೆ ನಿನ್ನ ಅಳುವಿದೆ
ಸ್ತ್ರೀ ಕುಲದ ಸೌಭಾಗ್ಯವೇ ನಿನ್ನ ರೂಪವೂ
ಒಹ್.. ಒಹ್.. ಒಹ್.. ಲ..ಲ..ಲ.. ಲ..
ಹಸಿರು ಗಾಜಿನ ಬಳೆಗಳೇ... ಸ್ತ್ರೀ ಕುಲದ ಶುಭ ಸ್ವರಗಳೇ..
ಈ ಕೈಗಳಿಗೆ ಶೃಂಗಾರವೇ, ನೀವೂ ಘಲ್ಲಂದರೇ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ...
ಹಸಿರು ಗಾಜಿನ ಬಳೆಗಳೇ... ಸ್ತ್ರೀ ಕುಲದ ಶುಭ ಸ್ವರಗಳೇ..
ಈ ಕೈಗಳಿಗೆ ಶೃಂಗಾರವೇ, ನೀವೂ ಘಲ್ಲಂದರೇ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ...
ಹಸಿರು ಗಾಜಿನ ಬಳೆಗಳೇ...ಏ.. ಏ.. ಏ..
-------------------------------------------------------------------------------------------------------------------------

ಅವನೇ ನನ್ನ ಗಂಡ (೧೯೮೯) - ವಿಚಾರ ಹುಡುಗಿಯಾದರೇ... ಗುಲ್ಲೋ ಗುಲ್ಲು 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ. 

ವಿಚಾರ ಹುಡುಗಿಯಾದರೇ... ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯಾದರೇ ... ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ
ನಮ್ಮ ನಾಡಲ್ಲಿ ನಾರಿಯ ದೇವತೆ ಅಂತಾರೆ
ಸೋಪು.. ಟೂಥ್ ಪೇಸ್ಟು ..  ಮಾರೋಕೆ ಬೆತ್ತಲೆ ಮಾಡತಾರೆ
ವಿಚಾರ ಹುಡುಗಿಯಾದರೇ... ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯಾದರೇ ... ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ

ವಾಷಿಂಗ್ ಪೌಡರ್ ನಿರ್ಮಾ ವಾಷಿಂಗ್ ಪೌಡರ್ ನಿರ್ಮಾ ನಿರ್ಮಾ
ಒಳಗೆ ತೋಡುತಿದ್ದ ಬಟ್ಟೆ ಬರೆಗಳೆಲ್ಲಾ ಎದ್ದು ಹೊರಗಡೆಗೆ  ಬಂದಿದೆ
ಕ್ರೀಮು..  ಸ್ನೋ... ಗಳಿಗೆ ಕಣ್ಣು ತೇಲಿಸುವಾ ಮದನ ನಾರಿಯರೆ ಬೇಕಿದೆ
 ಮೋಟಾರ್ ಬೈಕು ತೋರ್ಸಕು ಹಿಂದೆ ಚೆಲುವೆಯೇ
ಚಪ್ಲಿ ಡಿಸೈನ್ ತಿರ್ಗ್ಸೋಕು ಮುಂದೆ ಬೆಡಗಿಯೇ
ಮೂರೂ ಬ್ಲೇಡಿಗೂ ಲೇಡಿ ಕೈ ಬೇಕು
ಬ್ಯಾಟು ಬಾಲಗಳ ನಡುವಲು ಬಾಲೆಯರೇ ಬೇಕು
ವಿಚಾರ ಹುಡುಗಿಯಾದರೇ... ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯಾದರೇ ... ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ

ತಂಪು ಪಾನೀಯ ಜಾಹಿರಾತಿಗೆ ಬಿಸಿಯ ತರುಣಿಯರೇ ಬೇಕಿದೇ
ಕಾಮರಾಮ ಜಾಹೀರಾತಲ್ಲಿ ಹುಡುಗಿ ಅರೇ ಬೆತ್ತಲಾ..
ಕಲೆಯಾಗಿ ಬಂದವಳು ಶಿಲೆಯಾದಳು
ಶಿಲೆಯಿಂದ ಹೊರಬಂದು ಕೊಲೆಯಾದಳು
ನಮ್ಮ ನಾಡಲ್ಲಿ ನಾರಿಯ ದೇವತೆ ಅಂತಾರೆ
ಸೋಪು.. ಟೂಥ್ ಪೇಸ್ಟು ..  ಮಾರೋಕೆ ಬೆತ್ತಲೆ ಮಾಡತಾರೆ
ವಿಚಾರ ಹುಡುಗಿಯಾದರೇ... ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯಾದರೇ ... ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ
ನಮ್ಮ ನಾಡಲ್ಲಿ ನಾರಿಯ ದೇವತೆ ಅಂತಾರೆ
ಸೋಪು.. ಟೂಥ್ ಪೇಸ್ಟು ..  ಮಾರೋಕೆ ಬೆತ್ತಲೆ ಮಾಡತಾರೆ
ವಿಚಾರ ಹುಡುಗಿಯಾದರೇ... ಗುಲ್ಲೋ ಗುಲ್ಲು ಹೊಯ್  ಗುಲ್ಲೋ ಗುಲ್ಲು
ಪ್ರಚಾರ ಹುಡುಗಿಯಾದರೇ ... ಥ್ರಿಲ್ಲೋ ಥ್ರಿಲ್ಲೂ  ಹೊಯ್ ಥ್ರಿಲ್ಲೋ ಥ್ರಿಲ್ಲೂ
-------------------------------------------------------------------------------------------------------------------------

ಅವನೇ ನನ್ನ ಗಂಡ (೧೯೮೯) - ಕಲಿಯುಗ ಮನ್ಮಥ ದಾಸ ನಿನಗ್ಯಾಕೊ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ. ಶಿವರಾಜ 

ಭಂ.. ಭಂ.. ಶಂಭೂ ಶರಣಮ ಭಂ.. ಭಂ.. ಶಂಭೂ ಶರಣಮ
ಭಂ.. ಭಂ.. ಶಂಭೂ ಶರಣಮ
ಕಲಿಯುಗ ಮನ್ಮಥ ದಾಸ ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ ಹೆಬ್ಬಾವಿನ ಜೊತೆಯಲಿ ಸರಸ
ಮೀಸೆ ಇರದವನು ಹೆಂಡಿರ ತೊರೆವನು ಬ್ಯಾಡೋ ಈ ಬುಡುಬುಡಿಕೆ
ಆಸೆ ತೊರೆದವನು ಬುದ್ದನೇ ಆಗುವನು ಹೊರಟೆ ಶೇಷಾಚಲಕೇ
ಕಲಿಯುಗ ಮನ್ಮಥ ದಾಸ ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ ಹೆಬ್ಬಾವಿನ ಜೊತೆಯಲಿ ಸರಸ

ಹರನಿಗೂನು ಎರಡು ಶ್ರೀ ಹರಿಗೂ ಎರಡು ಸತಿಯರು ಇರುವಾಗ
ದೇವರುಗಳೇ ಸುಮ್ಮನೆ ಇರುವಾಗ
ಒಬ್ಬಳ ತಿಥಿಯಾಗಿ ಹೊಸಬಳು ಸತಿಯಾಗಿ
ಜೊತೆಯಳು ನಗುವಾಗ ಅಳಿಯಂದರೆ ಯಾಕೋ ಮುನಿರೋಗ
ಗಂಡನದಲ್ಲಾ ಈ ಗೊಡವೆ ಇಲ್ಲಿ ಹೆಂಡತಿಗಾಗಿದೆ ಮರು ಮದುವೆ
ಗಂಗೆ ಪಾರ್ವತಿಯರ  ನಡುವೆ ಇರಲಿಲಪ್ಪ ಈ ಗೊಡವೆ
ಪರರ ಹೆಂಡಿರನ್ನ ಭ್ರಮಿಸಿ ನೋಡೋ ಕಣ್ಣ ಪರದೆ ತೆಗೆಯೋ ಮಂಗಣ್ಣ
ಕಲಿಯುಗ ಮನ್ಮಥ ದಾಸ ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ ಹೆಬ್ಬಾವಿನ ಜೊತೆಯಲಿ ಸರಸ

ಓಂ ನಮಃ ಶಿವಾಯ   ಓಂ ನಮಃ ಶಿವಾಯ
ಐದು ದೊಡ್ಡ ಜನರು ಒಬ್ಬ ದೊಡ್ಡ ಸತಿಯ ವರಿಸಿದ ಕಥೆ ಇಲ್ಲವೇ
ಋಷಿಮುನಿಗಳು ಸಮ್ಮತಿ ಕೊಡಲಿಲ್ಲವೇ
ಮದುವೆಗಿಂತ ಮುಂಚೆ ಸೂರ್ಯನನ್ನು ಬೇಡಿ
ಕುಂತಿ ಹೇರಲಿಲ್ಲವೇ ಆ.. ವನಿತೆ ರಾಣಿ ಆಗಲಿಲ್ಲವೇ
ಕಥೆಯನು ಬರೆಯುವುದು ಸುಲಭ
ವ್ಯಥೆ ಅನುಭವಿಸುವುದು ಕಷ್ಟ ಪಾಪ
ಬಾಯಲಿ ಹೇಳುವುದು ಸುಲಭ ತಂಗಳು ತಿನ್ನುವುದು ಕಷ್ಟ
ಪರರ ಹೆಂಡಿರನ್ನ ಭ್ರಮಿಸಿ ನೋಡೋ ಕಣ್ಣ ಪರದೆ ತೆಗೆಯೋ ಮಂಗಣ್ಣ
ಕಲಿಯುಗ ಮನ್ಮಥ ದಾಸ ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ ಹೆಬ್ಬಾವಿನ ಜೊತೆಯಲಿ ಸರಸ
ಮೀಸೆ ಇರದವನು ಹೆಂಡಿರ ತೊರೆವನು ಬ್ಯಾಡೋ ಈ ಬುಡುಬುಡಿಕೆ
ಆಸೆ ತೊರೆದವನು ಬುದ್ದನೇ ಆಗುವನು ಹೊರಟೆ ಶೇಷಾಚಲಕೇ
ಕಲಿಯುಗ ಮನ್ಮಥ ದಾಸ ನಿನಗ್ಯಾಕೊ ಕಾವಿಯ ವೇಷ
ಎರಡನೇ ಮದುವೆಯ ಕೆಲಸ ಹೆಬ್ಬಾವಿನ ಜೊತೆಯಲಿ ಸರಸ
--------------------------------------------------------------------------------------------------------------------------

No comments:

Post a Comment