765. ಮೃತ್ಯುಂಜಯ (೧೯೯೦)

ಮೃತ್ಯುಂಜಯ ಚಿತ್ರದ ಹಾಡುಗಳು 
  1. ಈ ಹರೆಯದ ಉಲ್ಲಾಸವು 
  2. ನೀ ಕನಸಲಿ ಬರುತಿರುವೆ 
  3. ಕಂಡೋರ ಜೇಬಿಗೆ ಕತ್ತರಿ 
  4. ಯಾರು ಏನು ಮಾಡುವರು 
  5. ಮುತ್ತು ಮುತ್ತು ಮಾತು ಮುತ್ತು 
ಮೃತ್ಯುಂಜಯ (೧೯೯೦) - ಈ ಹರೆಯದ ಉಲ್ಲಾಸವೂ,
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್ಪಿ.ಬಿ.

ಈ ಹರೆಯದ ಉಲ್ಲಾಸವೂ,  ಮೈ ಮರೆಯುವ ಸಂತೋಷವೂ
ಈ ಹರೆಯದ ಉಲ್ಲಾಸವೂ   ಮೈ ಮರೆಯುವ ಸಂತೋಷವೂ
ಈ ಸಂಗಾತಿಯು ಸೇರಿದಾಗ ಜೊತೆ ಸಂಗೀತ ರಂಗೇರಿದಾಗ 
ಈ ಸಂಗಾತಿಯು ಸೇರಿದಾಗ ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ... 
ಈ ಹರೆಯದ ಉಲ್ಲಾಸವೂ,  ಮೈ ಮರೆಯುವ ಸಂತೋಷವೂ
ಈ ಹರೆಯದ ಉಲ್ಲಾಸವೂ   ಮೈ ಮರೆಯುವ ಸಂತೋಷವೂ
ಈ ಸಂಗಾತಿಯು ಸೇರಿದಾಗ ಜೊತೆ ಸಂಗೀತ ರಂಗೇರಿದಾಗ 
ಈ ಸಂಗಾತಿಯು ಸೇರಿದಾಗ ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ... 

ಒಲವಿನ ಗೆಳೆಯರ ನಡುವೆ ಪ್ರೀತಿಯು ಅರಳಿರುವಾಗ
ಚೆಲುವೆಯ ನಡುವನು ಬಳಸಿ ಮೋಹವು ಕೆರಳಿರುವಾಗ
ಈ  ಖುಷಿಯಲಿ ಮೈ ಎಲ್ಲಾ ಬಿಸಿಯಾಗಿ
ಈ ಆನಂದ ಎಂದೆಂದೂ ಹಸಿರಾಗಿ ಈ ಇರುಳೆಲ್ಲಾ ಸೊಗಸಾಗಿದೆ..
ಈ ಹರೆಯದ ಉಲ್ಲಾಸವೂ   ಮೈ ಮರೆಯುವ ಸಂತೋಷವೂ
ಈ ಸಂಗಾತಿಯು ಸೇರಿದಾಗ ಜೊತೆ ಸಂಗೀತ ರಂಗೇರಿದಾಗ 
ಈ ಸಂಗಾತಿಯು ಸೇರಿದಾಗ ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ... 

ಕಾಮನು ಮನವನು ಕೆಣಕಿ ಸಂಗವು ಬಯಸಿರುವಾಗ
ಸ್ನೇಹದಿ ಎಲ್ಲರೂ ಸೇರಿ ಸಂಭ್ರಮ ತುಂಬಿರುವಾಗ
ಸವಿ ನೆನಪೊಂದು ಎದೆಯಲ್ಲಿ ಸುಳಿದಾಗ
ತುಟಿ ಸಿಹಿಯಾದ ಮುತ್ತೊಂದು ಪಡೆದಾಗ ಆಹಾ ಮೈ ಎಲ್ಲಾ ಝಂಮ್ ಎಂದಿದೆ...
ಈ ಹರೆಯದ ಉಲ್ಲಾಸವೂ   ಮೈ ಮರೆಯುವ ಸಂತೋಷವೂ
ಈ ಸಂಗಾತಿಯು ಸೇರಿದಾಗ ಜೊತೆ ಸಂಗೀತ ರಂಗೇರಿದಾಗ 
ಈ ಸಂಗಾತಿಯು ಸೇರಿದಾಗ ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ... 
--------------------------------------------------------------------------------------------------------------------------

ಮೃತ್ಯುಂಜಯ (೧೯೯೦) - ನೀ ಕನಸಲಿ ಬರುತಿರುವೆ ನನ್ನ ಮನಸನು ಸೆಳೆದಿರುವೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್ಪಿ.ಬಿ. ಮಂಜುಳ ಗುರುರಾಜ

ನೀ ಕನಸಲಿ ಬರುತಿರುವೆ ನನ್ನ ಮನಸನು ಸೆಳೆದಿರುವೆ
ನೀ ಅನುದಿನ ಇರುಳಲಿ ಕೆಣಕುವೆ ನನ್ನ ಏಕೆ...
ನನ್ನ ತೊಳಲಿ ಬಳುಸುತಲಿ ಮೈ ಚಳಿಯನು ನುಂಗುತಲಿ
ನೀ ತುಂಟಾಟ ಆಡೋದು ಏಕೆ ...
ನೀ ಕನಸಲಿ ಬರುತಿರುವೆ ನನ್ನ ಮನಸನು ಸೆಳೆದಿರುವೆ
ನೀ ಅನುದಿನ ಇರುಳಲಿ ಕೆಣಕುವೆ ನನ್ನ ಏಕೆ...

ಎದೆಯಲಿ ಡವ ಡವ ಎನುತಿದೆ ಕೇಳದೆ
ತಾಳೆನು ತಳ ಮಳ ಔಷಧಿ ಎಲ್ಲಿದೆ
ಪ್ರೇಮದ ರೋಗಕೆ ನನ್ನಲಿ ಏನಿದೆ
ಕೈ ಗಾಳ ಮುಗಿಯುವೆ ಹೋಗು ನೀ ಕಾಡದೆ
ಈ ನಾಚಿಕೆ ಇನ್ನೇತಕೆ ಒಂದಾಗುವ ಬಾರೆ...
ನೀ ಕನಸಲಿ ಬರುತಿರುವೆ ನನ್ನ ಮನಸನು ಸೆಳೆದಿರುವೆ
ನೀ ಅನುದಿನ ಇರುಳಲಿ ಕೆಣಕುವೆ ನನ್ನ ಏಕೆ...
ಲಾಲಾಲ .. ಲಾಲಾಲ ಲಾಲಾ ಲಾಲಾ
ಲಾಲಾಲ .. ಲಾಲಾಲ ಲಾಲಾ ಲಾಲಾ

ಹೀಗೆಯೇ ಸುಮ್ಮನೆ ಕಾಲವ ಕಳೆವೆಯಾ
ಈಗಲೇ ಬರುವೆಯಾ ಆಗುವ ಮದುವೆಯಾ
ತಂದೆಯ ತಾಯಿಯ ಇನಿಯನೇ ಮರೆತೆಯಾ
ಆತುರ ತೋರದೆ ನನ್ನನು ಬಿಡುವೆಯಾ
ನನ್ನಾಸೆಗೆ ಬೇಡೆನ್ನರು ಅವರೆಂದಿಗೂ ನಲ್ಲೆ
ನೀ ಕನಸಲಿ ಬರುತಿರುವೆ ನನ್ನ ಮನಸನು ಸೆಳೆದಿರುವೆ
ನೀ ಅನುದಿನ ಇರುಳಲಿ ಕೆಣಕುವೆ ನನ್ನ ಏಕೆ...
--------------------------------------------------------------------------------------------------------------------------

ಮೃತ್ಯುಂಜಯ (೧೯೯೦) - ಯಾರು ಏನು ಮಾಡುವರು ನನಗೇನು ಕೇಡು ಮಾಡುವರು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್ಪಿ.ಬಿ.

ಯಾರು ಏನು ಮಾಡುವರು ನನಗೇನು ಕೇಡು ಮಾಡುವರು
ಯಾರು ಏನು ಮಾಡುವರು ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ ನನಗೆ ಎಂದಿಗೂ ಜಯ ಜಯ ಜಯ 
ಯಾರು ಏನು ಮಾಡುವರು ನನಗೇನು ಕೇಡು ಮಾಡುವರು
ಯಾರು ಏನು ಮಾಡುವರು ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ ನನಗೆ ಎಂದಿಗೂ ಜಯ ಜಯ ಜಯ 

ನಿಜವನು ನುಡಿವೆನು ಸೋದರನೆ ಭಯವನು ನಾ ಅರಿಯೆ
ನರಕಕೆ ತಳ್ಳಲಿ ಈ ದಿನವೇ ಸುಳ್ಳನು ನಾ ನುಡಿವೆ
ನಿಜವನು ನುಡಿವೆನು ಸೋದರನೆ ಭಯವನು ನಾ ಅರಿಯೆ
ನರಕಕೆ ತಳ್ಳಲಿ ಈ ದಿನವೇ ಸುಳ್ಳನು ನಾ ನುಡಿವೆ
ಸತ್ಯವೇ ನನ್ನ ಉಸಿರಾಗಿರಲು ಏಕೆ ನನಗೆ ಭಯ ಭಯ ಭಯ 
ಯಾರು ಏನು ಮಾಡುವರು ನನಗೇನು ಕೇಡು ಮಾಡುವರು
ಯಾರು ಏನು ಮಾಡುವರು ನನಗೇನು ಕೇಡು ಮಾಡುವರು 

ಏತಕೆ ನಿನಗೆ ಆಕ್ರೋಶ ಗೆಲುವುದನು ಬಲ್ಲೆ
ಆಸ್ತಿಯಾ ಆಸೆಯೂ ಅತಿಯಾಗಿ ಸಾಯದಿರು ಇಲ್ಲೇ
ಏತಕೆ ನಿನಗೆ ಆಕ್ರೋಶ ಗೆಲುವುದನು ಬಲ್ಲೆ
ಆಸ್ತಿಯಾ ಆಸೆಯೂ ಅತಿಯಾಗಿ ಸಾಯದಿರು ಇಲ್ಲೇ
ನ್ಯಾಯಕೆ ನೀನು ಗೌರವ ನೀಡು ಆಗ ನಿನದೆ ಜಯ ಜಯ ಜಯ 
ಯಾರು ಏನು ಮಾಡುವರು ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ ನನಗೆ ಎಂದಿಗೂ ಜಯ ಜಯ ಜಯ 
ಯಾರು ಏನು ಮಾಡುವರು ನನಗೇನು ಕೇಡು ಮಾಡುವರು 
--------------------------------------------------------------------------------------------------------------------------

ಮೃತ್ಯುಂಜಯ (೧೯೯೦) - ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್ಪಿ.ಬಿ ಮಂಜುಳಾ ಗುರುರಾಜ 

ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು
ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು
ಹೀತವಾಗಿ ಸುಖವಾಗಿ ಸವಿಯಾದ ಕನಸಾಗಿ ಮನ ಉಯ್ಯಾಲೆಯ ಆಡಿದೆ... 
ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು 
ಹೀತವಾಗಿ ಸುಖವಾಗಿ ಸವಿಯಾದ ಕನಸಾಗಿ ಮನ ಉಯ್ಯಾಲೆಯ ಆಡಿದೆ...
ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು 

ನಲ್ಲೆ ನಡೆವಾಗ ನಡುವೆನು ಅಂದ ಗಿರಿ ನವಿಲೊಂದು ಕುಣಿದಂತೆ ಚಂದ
ನಲ್ಲೆ ನಡೆವಾಗ ನಡುವೆನು ಅಂದ ಗಿರಿ ನವಿಲೊಂದು ಕುಣಿದಂತೆ ಚಂದ
ನಲ್ಲ ನುಡಿವಾಗ ಧ್ವನಿ ಏನು ಚಂದ ಅರಗಿಣಿಯಂತೆ ಮಾತೆಲ್ಲ ಅಂದ 
ಜೊತೆಯಾಗಿ ನಡೆವಾಗ ಒಲವಿಂದ ನುಡಿವಾಗ
ಮತ್ತೆ ಮಧು ಮಾಸವು ಬಂದಿದೆ
ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು 
ಹೀತವಾಗಿ ಸುಖವಾಗಿ ಸವಿಯಾದ ಕನಸಾಗಿ ಮನ ಉಯ್ಯಾಲೆಯ ಆಡಿದೆ...
ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು 

ಸುಳಿ ಮಿಂಚೊನ್ದು ಬಾನಿಂದ ಜಾರಿ ನನ್ನ ಮೈ ಎಲ್ಲಾ ಹರಿದಾಡಿತೆಲ್ಲೊ
ಸುಳಿ ಮಿಂಚೊನ್ದು ಬಾನಿಂದ ಜಾರಿ ನನ್ನ ಮೈ ಎಲ್ಲಾ ಹರಿದಾಡಿತೆಲ್ಲೊ
ನನ್ನ ಉಸಿರಾಟ ಬಿಸಿಯಾಗಿ ಹೋಗಿ  ತನು ಅರಳುತ್ತಾ ಹೂವಾಯಿತೇನೋ 
ಇದು ತಾನೇ ಅನುರಾಗ ಇದು ತಾನೇ ಶುಭಯೋಗ 
ಮನ ಆನಂದವಾ ಕಂಡಿದೆ 
ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು 
ಹೀತವಾಗಿ ಸುಖವಾಗಿ ಸವಿಯಾದ ಕನಸಾಗಿ ಮನ ಉಯ್ಯಾಲೆಯ ಆಡಿದೆ...
ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು 
--------------------------------------------------------------------------------------------------------------------------

ಮೃತ್ಯುಂಜಯ (೧೯೯೦) - ಕಂಡೋರ ಜೇಬಿಗೆ ಕತ್ತರಿ ಹಾಕಿದರೇ ಕಾಸೆಲ್ಲಾ ಮಂಗಮಾಯ,
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಶ್ರೀರಂಗ, ಗಾಯನ : ಎಸ್ಪಿ.ಬಿ.

ಕಂಡೋರ ಜೇಬಿಗೆ ಕತ್ತರಿ ಹಾಕಿದರೇ ಕಾಸೆಲ್ಲಾ ಮಂಗಮಾಯ,
ಕಣ್ಣಿಟ್ಟರೇ , ಕಾಸೆಲ್ಲಾ ಮಂಗಮಾಯ,
ಪಣಿಯಂತ ನಾದಿರಾ ಫಲಮಂತ ನೀಡಿರಾ ಮೇಲಕೋಟೆ ಚೆಲುವರಾಯ
ಕಾಪಾಡೋ, ಮೇಲಕೋಟೆ ಕಲ್ಲುಕುಂಟೆ ಆಂಜನೇಯ
ಕಂಡೋರ ಜೇಬಿಗೆ ಕತ್ತರಿ ಹಾಕಿದರೇ ಕಾಸೆಲ್ಲಾ ಮಂಗಮಾಯ,
ಕಣ್ಣಿಟ್ಟರೇ , ಕಾಸೆಲ್ಲಾ ಮಂಗಮಾಯ,

ಥಕಿಟ ಥಕಿಟ ಥಕ ಜುಮ್  ಜುಮ್    ಥಕಿಟ ಥಕಿಟ ಥಕ ಜುಮ್  ಜುಮ್ 
ಥಕಿಟ ಥಕಿಟ ಥಕ ಜುಮ್  ಜುಮ್   ಥಕಿಟ ಥಕಿಟ ಥಕ ಜುಮ್  ಜುಮ್
ಜಿನಕಿಡಿ ಜಿನಕಿಡಿ ಜಿನಕಿಡಿ ಜಿನಕಿಡಿ
ಜಂಜ ನಾಕಿಡಿ ಜಿನಕಿಡಿ ಜಿನಕಿಡಿ ಉಮ್ಮಾ ಉಮ್ಮ  ಉಮ್ಮಾ ಉಮ್ಮ
ರಾಜಧಾನಿ ದೆಹಲಿಯಲ್ಲಿ ಕುತುಬ್ ಮೀನಾರೂ
ಹೈದಾರಾಬಾದಿನಲ್ಲಿ ಚಾರ್ ಮೀನಾರ್
ರಾಜಧಾನಿ ದೆಹಲಿಯಲ್ಲಿ ಕುತುಬ್ ಮೀನಾರೂ
ಹೈದಾರಾಬಾದಿನಲ್ಲಿ ಚಾರ್ ಮೀನಾರ್
ಬೊಂಬಾಯಿ ಬೀಚಿನಲ್ಲಿ ಮದರಾಸು ರೇಸಿನಲ್ಲಿ 
ದಸರಾ ನವರಾತ್ರಿಯಲ್ಲಿ ಶಿವನಗಂಗೆ ಜಾತ್ರೆಯಲಿ  ಹೊಯ್.. ಹೊಯ್.. ಹೊಯ್.. ಹೊಯ್.. 
ಬೊಂಬಾಯಿ ಬೀಚಿನಲ್ಲಿ ಮದರಾಸು ರೇಸಿನಲ್ಲಿ 
ದಸರಾ ನವರಾತ್ರಿಯಲ್ಲಿ ಶಿವನಗಂಗೆ ಜಾತ್ರೆಯಲಿ 
ಎಲ್ಲೆಲ್ಲೂ ನನ್ನದೇ ಕಾರುಬಾರು 
ಎಲ್ಲೆಲ್ಲೂ ನನ್ನದೇ ಕಾರುಬಾರು ಈ ಜೈಲಿನಲ್ಲಿ ನನ್ನದೇ ದರ್ಬಾರು
ಕಂಡೋರ ಜೇಬಿಗೆ ಕತ್ತರಿ ಹಾಕಿದರೇ ಕಾಸೆಲ್ಲಾ ಮಂಗಮಾಯ,
ಕಣ್ಣಿಟ್ಟರೇ , ಕಾಸೆಲ್ಲಾ ಮಂಗಮಾಯ,
ಆರೇರರೇ.. ಪಣಿಯಂತ ನಾದಿರಾ ಫಲಮಂತ ನೀಡಿರಾ ಮೇಲಕೋಟೆ ಚೆಲುವರಾಯ 
ಕಾಪಾಡೋ, ಮೇಲಕೋಟೆ ಕಲ್ಲುಕುಂಟೆ ಆಂಜನೇಯ  

ನಾನೊಬ್ಬ ಪಿಕ್ ಪಾಕೆಟ್ ಡಿಗ್ರೀ ಹೋಲ್ಡರು
ಚೋರೋಂಕಾ ಶೇರ್ ಹೂನ್ ದೇಖೊ ಮೇರಾ ಯಾರ್
ಅರೇ .. ನಾನೊಬ್ಬ ಪಿಕ್ ಪಾಕೆಟ್ ಡಿಗ್ರೀ ಹೋಲ್ಡರು
ಚೋರೋಂಕಾ ಶೇರ್ ಹೂನ್ ದೇಖೊ ಮೇರಾ ಯಾರ್
ನಿಂತಲ್ಲಿ ನಿಲ್ಲನು ಕಿಲಾಡಿ ಠಕ್ಕನು 
ಕೋಟಿಗೆ ಒಬ್ಬನು ಏಟಿಗೆ ಸಿಕ್ಕನು 
ನಿಂತಲ್ಲಿ ನಿಲ್ಲನು ಕಿಲಾಡಿ ಠಕ್ಕನು 
ಕೋಟಿಗೆ ಒಬ್ಬನು ಏಟಿಗೆ ಸಿಕ್ಕನು 
ನನ್ನಾಸ್ತಿ ತುಂಡು ಬೀಡಿ ಅಂಗಿ ಚೆಡ್ಡಿ 
ನನ್ನಾಸ್ತಿ ತುಂಡು ಬೀಡಿ ಅಂಗಿ ಚೆಡ್ಡಿ 
ಜೀನಿಯಸು ಜಾಬುಗಳ್ಳ ರಂಗಾ ರೆಡ್ಡಿ ಅರೇ... ರಂಗೂಡು 
ಕಂಡೋರ ಜೇಬಿಗೆ ಕತ್ತರಿ ಹಾಕಿದರೇ ಕಾಸೆಲ್ಲಾ ಮಂಗಮಾಯ,
ಕಣ್ಣಿಟ್ಟರೇ , ಕಾಸೆಲ್ಲಾ ಮಂಗಮಾಯ, ಅವ್ನು..
ಪಣಿಯಂತ ನಾದಿರಾ ಫಲಮಂತ ನೀಡಿರಾ ಮೇಲಕೋಟೆ ಚೆಲುವರಾಯ 
ಕಾಪಾಡೋ, ಮೇಲಕೋಟೆ ಕಲ್ಲುಕುಂಟೆ ಆಂಜನೇಯ  
ಆರರರೆ... ಕಂಡೋರ ಜೇಬಿಗೆ ಕತ್ತರಿ ಹಾಕಿದರೇ ಕಾಸೆಲ್ಲಾ ಮಂಗಮಾಯ, 
ಕಣ್ಣಿಟ್ಟರೇ , ಕಾಸೆಲ್ಲಾ ಮಂಗಮಾಯ, ಅವ್ನು..
ಪಣಿಯಂತ ನಾದಿರಾ ಫಲಮಂತ ನೀಡಿರಾ ಮೇಲಕೋಟೆ ಚೆಲುವರಾಯ 
ಕಾಪಾಡೋ, ಮೇಲಕೋಟೆ ಕಲ್ಲುಕುಂಟೆ ಆಂಜನೇಯ
--------------------------------------------------------------------------------------------------------------------------

No comments:

Post a Comment