ಕಲ್ಯಾಣ ರೇಖೆ ಚಲನಚಿತ್ರದ ಹಾಡುಗಳು
- ಓಹ್ ಮೈನಾ ಓಹ್ ಸಖೀ
- ದಯಮಾಡಿ ಮನ್ನಿಸು ನನ್ನನ್ನೂ
- ನಗು ಅಂದರೇ ನಗುತಾಳೇ
- ಓಹ್ ಚೈತ್ರನೇ ಸಂಮಿತ್ರನೆ
- ಕಲ್ಯಾಣ ರೇಖೆ ಈ ಬಾಳಿನ
- ಮಾರ್ಕೆಟನಲ್ಲಿ ಎಲ್ಲಾ ರೇಟ್
ಕಲ್ಯಾಣ ರೇಖೆ (೧೯೯೩) - ಓಹ್ ಮೈನಾ ಓಹ್ ಸಖೀ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ,ಗಾಯನ : ಎಸ್.ಪಿ.ಬಿ. ಮಂಜುಳಗುರುರಾಜ
ಓ ಮೈನಾ ಒಹ್ ಸಖಿ ವ್ಹಾ ವ್ಹಾ ವ್ಹಾ ವ್ಹಾ ವ್ಹಾ
ಓ ಸತಿ ಸುಂದರ ಸತಿ ಏನಿಂದು ನಿನ್ನಯ ಗತಿ
ಓ ಸತಿ ಸುಂದರ ಸತಿ ಏನಿಂದು ನಿನ್ನಯ ಗತಿ
ಮಡಿ ಉಟ್ಟರೆ ಆಗೋಲ್ಲ ಮುಡಿ ಕೊಟ್ಟರೂ ಸಾಲೋಲ್ಲ
ಹಣ್ಣು ಕಾಯಿ ಹೂವ ಕೊಟ್ಟರೂ ಗಂಡ ಸಿಕ್ಕೊಲ್ಲ
ಓ ಪತಿ ಸುಂದರ ಪತಿ ದೇವರೇ ನನಗೆ ಗತಿ
ಓ ಪತಿ ಸುಂದರ ಪತಿ ದೇವರೇ ನನಗೆ ಗತಿ
ಭಕ್ತಿ ಇಟ್ಟರೂ ನೋಡಲ್ಲ ಪ್ರೀತಿ ಕೊಟ್ಟರೂ ಕೇಳೋಲ್ಲ
ಜೀವ ಇರೋ ಪತಿಗಿಂತ ಕಲ್ಲೇ ಮೇಲಲ್ಲಾ
ಓ ಸತಿ ಸುಂದರ ಸತಿ ಏನಿಂದು ನಿನ್ನಯ ಗತಿ ಮಂದಗತಿ
ಕಲ್ಲ ನಾಗರಾಜನನ್ನು ಕಂಡರೇ
ಹೂ ಹಾಕೋದಂತೇ ಹಾಲ ಹಾಕೋದಂತೇ
ನಿಜದ ನಾಗರಾಜನನ್ನು ಕಂಡರೇ
ಹೌಹಾರೋದಂತೆ ಕಲ್ಲ ಹಾಕೋದಂತೆ
ಭಯವೇ ಭಕ್ತಿಗೆ ಆಧಾರ ವೃತವೇ ಒಲಿಸುವ ಆಚಾರ
ಓ ಸತಿ ಸುಂದರ ಸತಿ ಏನಿಂದು ನಿನ್ನಯ ಗತಿ
ಓ ಸತಿ ಸುಂದರ ಸತಿ ಏನಿಂದು ನಿನ್ನಯ ಗತಿ
ಮಡಿ ಉಟ್ಟರೆ ಆಗೋಲ್ಲ ಮುಡಿ ಕೊಟ್ಟರೂ ಸಾಲೋಲ್ಲ
ಹಣ್ಣು ಕಾಯಿ ಹೂವ ಕೊಟ್ಟರೂ ಗಂಡ ಸಿಕ್ಕೊಲ್ಲ
ಓ ಪತಿ ಸುಂದರ ಪತಿ ದೇವರೇ ನನಗೆ ಗತಿ ನಾ ಸುಮತಿ
ನಟನೆಗಾಗಿ ಪ್ರೀತಿ ತೋರಿ ಕರೆದರೂ
ಹೆಣ್ಣು ನಗ್ತಾಳಯ್ಯ ಕೈಗೇ ಸಿಕ್ತಾಳಯ್ಯಾ
ಪಠಣೆಗಾಗಿ ಭಕ್ತಿ ಧಾರೆ ಎರೆದರೇ
ಹೆಣ್ಣು ನಂಬ್ತಾಳಯ್ಯ ಹೊಟ್ಟೆ ತುಂಬುತ್ಳಾಯ್ಯಾ
ಪ್ರೀತಿ ಎಂದರೆ ನೈರ್ಮಲಯ್ಯ ಅದುವೇ ಹೆಣ್ಣಿನ ದೌರ್ಬಲ್ಯ
ಓ ಸತಿ ಸುಂದರ ಸತಿ ಏನಿಂದು ನಿನ್ನಯ ಗತಿ
ಓ ಸತಿ ಸುಂದರ ಸತಿ ಏನಿಂದು ನಿನ್ನಯ ಗತಿ
ಮಡಿ ಉಟ್ಟರೆ ಆಗೋಲ್ಲ ಮುಡಿ ಕೊಟ್ಟರೂ ಸಾಲೋಲ್ಲ
ಹಣ್ಣು ಕಾಯಿ ಹೂವ ಕೊಟ್ಟರೂ ಗಂಡ ಸಿಕ್ಕೊಲ್ಲ
ಓ ಪತಿ ಸುಂದರ ಪತಿ ದೇವರೇ ನನಗೆ ಗತಿ
ಓ ಪತಿ ಸುಂದರ ಪತಿ ದೇವರೇ ನನಗೆ ಗತಿ
ಭಕ್ತಿ ಇಟ್ಟರೂ ನೋಡಲ್ಲ ಪ್ರೀತಿ ಕೊಟ್ಟರೂ ಕೇಳೋಲ್ಲ
ಜೀವ ಇರೋ ಪತಿಗಿಂತ ಕಲ್ಲೇ ಮೇಲಲ್ಲಾ
ಓ ಸತಿ ಸುಂದರ ಸತಿ ಏನಿಂದು ನಿನ್ನಯ ಗತಿ ಮಂದಗತಿ
--------------------------------------------------------------------------------------------------------------------------
ಕಲ್ಯಾಣ ರೇಖೆ (೧೯೯೩) - ದಯಮಾಡಿ ಮನ್ನಿಸು ನನ್ನನ್ನು
ಸಂಗೀತ ಹಾಗು ಸಾಹಿತ್ಯ : ಹಂಸಲೇಖ,ಗಾಯನ : ಎಸ್.ಪಿ.ಬಿ.
ದಯಮಾಡಿ ಮನ್ನಿಸು ನನ್ನನ್ನೂ ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಮಾಡಿ ಮನ್ನಿಸು ನನ್ನನ್ನೂ ಕಾಯಿಸಿ ನೋಯಿಸಿ ಪ್ರೀತಿಸುವೆ
ಅಭಿಮಾನ ತುಂಬಿ ಶರಣಾದ ದುಂಬಿ ಎದೆ ಜೇನಿನಿಂದ ಬರೆದ ಓಲೆ...
ದಯಮಾಡಿ ಮನ್ನಿಸು ನನ್ನನ್ನೂ ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಮಾಡಿ ಮನ್ನಿಸು ನನ್ನನ್ನೂ ಕಾಯಿಸಿ ನೋಯಿಸಿ ಪ್ರೀತಿಸುವೆ
ನಿಜವಾದ ಗೆಳತೀ ಕೈ ಜಾರುವಾಗ
ಕಣ್ಣ ತೆರೆದ ಮನಕೆ ಅಭಿನಂದಿಸಿದೆನು
ಕಲ್ಯಾಣ ರೇಖೆಯಾ ಈ ಭಾವ ಲೀಲೆಯ
ಕಲ್ಯಾಣ ರೇಖೆಯಾ ಈ ಭಾವ ಲೀಲೆಯ
ತಪ್ಪೆಲ್ಲಾ ಮನ್ನಿಸಿ ಪ್ರಿತಿಸೂ ... ಪ್ರಿತಿಸೂ ... ಪ್ರಿತಿಸೂ ...
ದಯಮಾಡಿ ಮನ್ನಿಸು ನನ್ನನ್ನೂ ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಮಾಡಿ ಮನ್ನಿಸು ನನ್ನನ್ನೂ ಕಾಯಿಸಿ ನೋಯಿಸಿ ಪ್ರೀತಿಸುವೆ
ಜೂಜೂಜು ಜೂಜೂಜು ಜೂಜೂಜು ಜೂಜೂಜು ಜೂಜೂಜು
ಕೆಂಪಾದ ಪದದ ಈ ಪ್ರೇಮದೋಲೆ
ನೀ ಓದುವಾಗ ಹಸಿರಾಗಲಮ್ಮ
ಇಂಪಾದ ಸ್ವರದ ಓ ಪ್ರೇಮ ಬಾಲೇ
ನಿನ್ನ ನೂರು ನೋವು ನನ್ನ ಸೇರಲಮ್ಮ
ಕಲ್ಯಾಣ ರೇಖೆಯ ಈ ಭಾವ ಲೀಲೆಯ ಕಲ್ಯಾಣ ರೇಖೆಯ ಈ ಭಾವ ಲೀಲೆಯ
ತುಂಟಾಟ ಮನ್ನಿಸಿ ಪ್ರಿತಿಸೂ .. ಪ್ರಿತಿಸೂ .. ಪ್ರಿತಿಸೂ ..
ದಯಮಾಡಿ ಮನ್ನಿಸು ನನ್ನನ್ನೂ ಕಾಯಿಸಿ ನೋಯಿಸಿ ಪ್ರೀತಿಸುವೆ
ದಯಮಾಡಿ ಮನ್ನಿಸು ನನ್ನನ್ನೂ ಕಾಯಿಸಿ ನೋಯಿಸಿ ಪ್ರೀತಿಸುವೆ
ಅಭಿಮಾನ ತುಂಬಿ ಶರಣಾದ ದುಂಬಿ ಎದೆ ಜೇನಿನಿಂದ ಬರೆದ ಓಲೆ...
------------------------------------------------------------------------------------------------------------------------
ಕಲ್ಯಾಣ ರೇಖೆ (೧೯೯೩) - ನಗು ಅಂದ್ರೆ ನಗುತ್ತಾಳೆ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ,ಗಾಯನ : ಮಂಜುಳಾಗುರುರಾಜ
ನಗು ಅಂದರೆ ನಗುತ್ತಾಳೆ ಅಳು ಎಂದರೆ ಅಳುತಾಳೆ
ಇರು ಎಂದರೆ ಇರುತ್ತಾಳೆ ಹೆರು ಎಂದರೆ ಹೆರುತ್ತಾಳೆ
ಹೆಣ್ಣು ತಾನು ಏನು ತಾನೇ ಮಾಡುತ್ತಾಳೆ
ಹೆಣ್ಣು ತಾನು ಏನು ತಾನೇ ಮಾಡುತ್ತಾಳೆ
ನಗು ಅಂದರೆ ನಗುತ್ತಾಳೆ ಅಳು ಎಂದರೆ ಅಳುತಾಳೆ
ಇರು ಎಂದರೆ ಇರುತ್ತಾಳೆ ಹೆರು ಎಂದರೆ ಹೆರುತ್ತಾಳೆ
ಹೆಣ್ಣು ತಾನು ಏನು ತಾನೇ ಮಾಡುತ್ತಾಳೆ
ಹೆಣ್ಣು ತಾನು ಏನು ತಾನೇ ಮಾಡುತ್ತಾಳೆ
ಮಡಿ ಉಟ್ಟು ತುಳಸಿ ಸುತ್ತಿ ಗಂಡನ ಕ್ಷೇಮ ಕೋರುತ್ತಾಳೆ
ಕಷ್ಟ ಸುಖದ ರುಚಿಯ ತಿಳಿದು ಅಡಿಗೆ ಮಾಡಿ ಇಡುತ್ತಾಳೆ
ಗಂಡ ಬಿಟ್ಟ ಅನ್ನದ ಅಗುಳ ಅಮೃತ ಎಂದು ಸವಿತ್ತಾಳೆ
ನೆರಳಾಗಿ ತಾನಿರುತ್ತಾಳೆ ತಂಗಾಳಿ ತಾನಾಗುತ್ತಾಳೆ
ಕೋಪ ಇಳಿಸಿ ತಾಪ ತಣಿಸಿ ಸಂತಸ ಕೊಡುತ್ತಾಳೆ
ಬಾ ಎಂದರೆ ಬರುತ್ತಾಳೆ ತಾ ಎಂದರೆ ತರುತ್ತಾಳೆ
ಇರು ಎಂದರೆ ಇರುತ್ತಾಳೆ ಹೆರು ಎಂದರೆ ಹೆರುತ್ತಾಳೇ
ಹೆಣ್ಣು ತಾನು ಏನು ತಾನೇ ಮಾಡುತ್ತಾಳೆ... ಪಾಪ
ಹೆಣ್ಣು ತಾನು ಏನು ತಾನೇ ಮಾಡುತ್ತಾಳೆ
ಮನೆಯೋ ಮಹಲೋ ಹಗಲೋ ಇರುಳೋ ಹೇಗೋ ಕಾಲ ಕಳಿತಾಳೆ
ಗಂಡ ದುಡುಕಿ ಹೊರ ಹಾಕಿದರೆ ಅಯ್ಯೋ ಪಾಪ ಎನ್ನುತ್ತಾಳೆ
ರಾಕೆಟ್ ಯುಗದ ಮಹಿಳೆ ಇಂದು ಗಂಡು ಮೆಟ್ಟಿ ನಿಲ್ಲುತ್ತಾಳೆ
ಜೀವ ಕೊಡೊ ತಾಯಿ ತಾನು ಎಂದು ಮೆತ್ತಗೆ ಇರುತ್ತಾಳೆ
ನಂಬುತ್ತಾಳೆ ತಾನ್ ಅಂಜುತ್ತಾಳೆ ಕಾಯುತ್ತಾಳೆ ಗೋಳಾಡುತ್ತಾಳೆ
ಬೇಡ ಎಂದ ಗಂಡನ ಮುಂದೆ ಪ್ರಾಣವ ಬಿಡುತ್ತಾಳೆ
ನಗು ಅಂದರೆ ನಗುತ್ತಾಳೆ ಅಳು ಎಂದರೆ ಅಳುತಾಳೆ
ಇರು ಎಂದರೆ ಇರುತ್ತಾಳೆ ಹೆರು ಎಂದರೆ ಹೆರುತ್ತಾಳೆ
ಹೆಣ್ಣು ತಾನು ಏನು ತಾನೇ ಮಾಡುತ್ತಾಳೆ
ಹೆಣ್ಣು ತಾನು ಏನು ತಾನೇ ಮಾಡುತ್ತಾಳೆ
ನಗು ಅಂದರೆ ನಗುತ್ತಾಳೆ ಅಳು ಎಂದರೆ ಅಳುತಾಳೆ
------------------------------------------------------------------------------------------------------------------------
ಕಲ್ಯಾಣ ರೇಖೆ (೧೯೯೩) - ಓಹ್ ಚೈತ್ರನೇ ಸಂಮಿತ್ರನೇ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ,ಗಾಯನ : ಮಂಜುಳಾಗುರುರಾಜ, ಎಸ್.ಪಿ.ಬಿ,
ಓ ಚೈತ್ರಾನೇ... ಓಹ್ ಚೈತ್ರಾನೇ...
ಓಹೊಹ್ ಚೈತ್ರಾನೇ... ಸಂಮಿತ್ರನೇ ಈ ಬಾಳಿಗೆ ಬಾ ಬಾ
ಓಹೊಹ್ ಚೈತ್ರಾನೇ... ಸಂಮಿತ್ರನೇ ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ್ತಾ ಕೂಕ್ಕೂಕೂ ಕೂಕ್ಕೂಕೂ
ಎದೆಯಲಿ ಹಾಡೋ
ಓಹ್ ಮುಗ್ದಲ್ಲೇ ಸಂಮಿತರಳೇ ಈ ಚೈತ್ರಕೆ ಬಾ ಬಾ
ಓಹ್ ಮುಗ್ದಲ್ಲೇ ಸಂಮಿತರಳೇ ಈ ಚೈತ್ರಕೆ ಬಾ ಬಾ
ಅನುರಾಗದ ಶೃತಿ ಮೀಟುತ್ತಾ ಕೂಕ್ಕೂಕೂ ಕೂಕ್ಕೂಕೂ
ಎದೆಯಲಿ ಹಾಡೋ
ಹಾಡು ಕೇಳುತ ಜೀವ ಜಾರಿತು ಮಾತನಾಡದೆ ನಿನ್ನ ಸೇರಿತು
ವರುಣ ಬಂದರೆ ಧರಣಿ ಒಲಿಯಳೇ ತರುಣ ಬಂದರೆ ತರುಣಿ ಒಲಿಯಳೇ
ಓಹ್ ಮುಗ್ದಲ್ಲೇ ಸಂಮಿತರಳೇ ಈ ಚೈತ್ರಕೆ ಬಾ ಬಾ
ಓಹೊಹ್ ಚೈತ್ರಾನೇ... ಸಂಮಿತ್ರನೇ ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ್ತಾ ಕೂಕ್ಕೂಕೂ ಕೂಕ್ಕೂಕೂ
ಎದೆಯಲಿ ಹಾಡೋ
ಮಾತು ಮಾಗಿತು ಭಾಷೆ ಒಲಿಯಿತು
ಮಳೆಯ ಬಿಲ್ಲಿನ ವರುಣ ತೋರಣ
ಹೃದಯ ಕಾಣಲು ನೀನೇ ತಾನೇ ಕಾರಣ
ಓಹೊಹ್ ಚೈತ್ರಾನೇ... ಸಂಮಿತ್ರನೇ ಈ ಬಾಳಿಗೆ ಬಾ ಬಾ
ಓಹೊಹ್ ಚೈತ್ರಾನೇ... ಸಂಮಿತ್ರನೇ ಈ ಬಾಳಿಗೆ ಬಾ ಬಾ
ಅನುರಾಗದ ಶೃತಿ ಮೀಟುತ್ತಾ ಕೂಕ್ಕೂಕೂ ಕೂಕ್ಕೂಕೂ
ಎದೆಯಲಿ ಹಾಡೋ
ಓಹ್ ಮುಗ್ದಲ್ಲೇ ಸಂಮಿತರಳೇ ಈ ಚೈತ್ರಕೆ ಬಾ ಬಾ
ಓಹ್ ಮುಗ್ದಲ್ಲೇ ಸಂಮಿತರಳೇ ಈ ಚೈತ್ರಕೆ ಬಾ ಬಾ
ಅನುರಾಗದ ಶೃತಿ ಮೀಟುತ್ತಾ ಕೂಕ್ಕೂಕೂ ಕೂಕ್ಕೂಕೂ
ಎದೆಯಲಿ ಹಾಡೋ
-------------------------------------------------------------------------------------------------------------------------
ಕಲ್ಯಾಣ ರೇಖೆ (೧೯೯೩) - ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು
ಸಂಗೀತ ಹಾಗು ಸಾಹಿತ್ಯ : ಹಂಸಲೇಖ,ಗಾಯನ : ಮಂಜುಳಾಗುರುರಾಜ, ಎಸ್.ಪಿ.ಬಿ,
ಓಹೋಹೋ ಬರಬೇಕು ಬರಬೇಕು ಗಂಡಿನ ಕಡೆಯವರು ಬರಬೇಕು
ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು ಸ್ವರ್ಗದ ಮೊದಲ ಮೆಟ್ಟಿಲು
ಆ.. ಸ್ವರ್ಗದ ಮೊದಲ ಮೆಟ್ಟಿಲು
ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು ಸ್ವರ್ಗದ ಮೊದಲ ಮೆಟ್ಟಿಲು
ಅರಗಿನ ಮನೆಯ ಮೆಟ್ಟಿಲು ಆ.. ಅರಗಿನ ಮನೆಯ ಮೆಟ್ಟಿಲು
ಅರಿಷಣ ಸ್ನಾನಕೆ ಮಂತ್ರಗಳಿಲ್ಲವೇ...
ಯಾಕಿಲ್ಲ.. ನಮ್ ಜೀವನ ಇರೋದೇ ಮಂತ್ರಗಳಲ್ಲಿ
ಹಸಿಯಾಗಿರಲೆಂದು ಮೈಯ್ಯ ಹಸಿಯಾಗಿರಲೆಂದು
ಹೊಸ ಜೋಡಿಗೆ ಅರಿಷಣ ಸ್ನಾನ
ಬಿಸಿಯಾಗಿರಲೆಂದು ಮನ ಬಿಸಿಯಾಗಿರಲೆಂದು
ಹೊಸ ಜೋಡಿಗೆ ಓಕುಳಿಯ ಬಣ್ಣ
ಕಲ್ಯಾಣದ ಗುಡಿಗೆ ನಡೆಯಿರಿ ನಿರ್ಮಲ ಮಡಿಯೊಳಗೆ
ಕಾರ್ಪಣ್ಯದ ಮನೆಗೆ ಹೊರಡಿರಿ ಇಬ್ಬರು ಜೊತೆಯೊಳಗೆ
ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು ಸ್ವರ್ಗದ ಮೊದಲ ಮೆಟ್ಟಿಲು
ಆ.. ಅರಗಿನ ಮನೆಯ ಮೆಟ್ಟಿಲು
ಬಾಳಲ್ಲಿ ಬದಿಗಿರಿಸಿ ಅನುಮಾನದ ಪರದೆಗಳ
ಅನುಮತಿಯೊಳಗಡೆ ನೋಡಿ ಗೃಹ ಬಂಧನದಲ್ಲಿ ಹಾಡಿ
ಮನದಿಂದ ಹೊರಹಾಕಿ ಸ್ವತಂತ್ರದ ಬಯಕೆಗಳ
ಲೋಕವೇ ಮತ ಹಾಕಿದೆ ನಮ್ ಕನ್ಯೆಯ ಈ ಧಾರೆಗೆ
ಅಕ್ಷತಾ ಅನುರೂಪದ ಮಳೆ ಕಾದಿದೆ ಈ ಮೋಜಿಗೆ
ಕಲ್ಯಾಣದ ಗುಡಿಗೆ ನಡೆಯಿರಿ ಅರಳುವ ಮನದೊಳಗೆ
ಕಾರ್ಪಣ್ಯದ ಮನೆಗೆ ಹೊರಡಿರಿ ಮಾರನದ ದಿಶೆಯೊಳಗೆ
ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು ಸ್ವರ್ಗದ ಮೊದಲ ಮೆಟ್ಟಿಲು
ಆ.. ಅರಗಿನ ಮನೆಯ ಮೆಟ್ಟಿಲು
ಯೋಚಿಸಿರಿ ದಯಮಾಡಿಸಿರಿ ನೋವು ಚಿಂತೆಗಳೇ ನಿಮ್ಮ ಬಂಧುಗಳು
ಚಿಂತೆ ಇದ್ದರೆ ಶಾಂತಿ ಸಿಗುವುದು ಶಾಂತಿ ಹೋದರೆ ಭ್ರಾಂತಿ ಬರುವುದು
ತ್ಯಾಗಮಯ ಸಂಸಾರವಿದು ದಾಸ್ಯಮಯ ಆಚಾರವಿದು
ಕಲ್ಯಾಣದ ಗುಡಿಗೆ ನಡೆಯಿರಿ ಪ್ರೀತಿಯ ಜೇನ ಉಣ್ಣಲೂ
ಕಾರ್ಪಣ್ಯದ ಮನೆಗೆ ಹೊರಡಿರಿ ಸೇವಕರಾಗಿರಿ ಸೈರಿಸಲೂ
ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು ಸ್ವರ್ಗದ ಮೊದಲ ಮೆಟ್ಟಿಲು
ಆ.. ಸ್ವರ್ಗದ ಮೊದಲ ಮೆಟ್ಟಿಲು
ಕಲ್ಯಾಣ ರೇಖೆ ಈ ಬಾಳಿನ ಹೊಸ್ತಿಲು ಅರಗಿನ ಮನೆಯ ಮೆಟ್ಟಿಲು
ಆ ಅರಗಿನ ಮನೆಯ ಮೆಟ್ಟಿಲು
ಕಲ್ಯಾಣ ರೇಖೆ (೧೯೯೩) - ಮಾರ್ಕೆಟನಲ್ಲಿ ಎಲ್ಲಾ ರೇಟೂ ಗಗನಕೇರಿ ಹೋಯ್ತು
ಸಂಗೀತ ಹಾಗು ಸಾಹಿತ್ಯ : ಹಂಸಲೇಖ,ಗಾಯನ : ಮಂಜುಳಾಗುರುರಾಜ, ರಾಜೇಶ ಕೃಷ್ಣನ
ಮಾರ್ಕೆಟನಲ್ಲಿ ಎಲ್ಲಾ ರೇಟೂ.. ಗಗನಕ್ಕೇರ ಹೋಯ್ತು
ಹುಡುಗೀರ ಹಿಂದೆ ಸುತ್ತೋ ಹುಡುಗರ ರೇಟೇ.. ಇಳಿದ್ಹೋಯ್ತು
ಜಿಗಿ ಜಾಣ ಜಿಗಿ ಜಾಣ ಜಿಗಿ ಜಾಣ ಹೋಯ್
ಜಿಗಿ ಜಾಣ ಜಿಗಿ ಜಾಣ ಜಾಣ
ಬೆಂಗಳೂರನಲ್ಲಿ ಕನ್ನಡ ಹೈದರ ಸಂಖ್ಯೆಯೇ ಇಳಿದೋಯ್ತು
ಕಂಡೋರ ಹಿಂದೆ ಸುತ್ತೋ ಹುಡುಗೀರ್ ಮಂದೇ ಹೆಚ್ಚಾಯ್ತು
ಜಿಗಿ ಜಾಣ ಜಿಗಿ ಜಾಣ ಜಿಗಿ ಜಾಣ ಹೋಯ್
ಜಿಗಿ ಜಾಣ ಜಿಗಿ ಜಾಣ ಜಾಣ
ಗ್ರಹಚಾರ ಕೆಟ್ಟಹೋದ್ರೇ.. ಪಂಚರ್ ಆಗಹೋಯ್ತಾರೇ...
ಒನ್ ವೇ ಹುಡುಗರ ಯೋಚನೆಯೇ ಕೀಚಕರಾಗೋ ಸೂಚನೆಯೇ
ಹುಡುಗೀರಿಗೆ ಸೌಂದರ್ಯ ಅಡ್ವಾಂಟೇಜ್ ಅಂತಾರೇ
ಸೌಂದರ್ಯ ಕೈಯ್ಯ ಕೊಟ್ಟರೇ ಡ್ಯಾಮೇಜ್ ಆಗೋಗ್ತಾರೇ
ಹುಡುಗರ ಸರಿಸಮ ಹಾರಿದರೇ ಸರ್ಕಸ್ ಚೆಲುವೆಯರಾಗಿವಿರೇ
ಶೇವಿಂಗ್ ಬಾತಿಂಗ್ ಸ್ಲೀಪಿಂಗ್ ಇಲ್ಲ ಹುಡುಗಿ ಸಿಗದಿದ್ರೇ
ಲವಿಂಗ್ ಲಿಫ್ಟಿಂಗ್ ಲಿಂಕಿಂಗ್ ಇಲ್ಲ ಹುಡುಗ ಸಿಗದಿದ್ರೇ
ಕ್ರಿಕೆಟನಲ್ಲಿ ಇಂಡಿಯನ್ ಹುಡುಗರ ಸ್ಕೋರೇ.. ಇಳಿದೋಯ್ತು
ಹುಡುಗೀರಗಾಗಿ ಫೀಲ್ಡಿಂಗ್ ಮಾಡೋರ್ ಸಂಖ್ಯೆಯೇ ಏರ ಹೋಯ್ತು
ಜಿಗಿ ಜಾಣ ಜಿಗಿ ಜಾಣ ಜಿಗಿ ಜಾಣ ಹೋಯ್
ಜಿಗಿ ಜಾಣ ಜಿಗಿ ಜಾಣ ಜಾಣ
ಓಟದ ರಾಣಿ ಓಡಾಡ ಬಿಟ್ಟು ಮದುವೆ ಮಾಡಕೊಂಡ್ಲು
ಓಟದ ರಾಣಿ ಹುಡುಗರ ಹಿಂದೆ ಓಡಾಡ ಕಲ್ತಕೊಂಡ್ಲು
ಜಿಗಿ ಜಾಣ ಜಿಗಿ ಜಾಣ ಜಿಗಿ ಜಾಣ ಹೋಯ್
ಜಿಗಿ ಜಾಣ ಜಿಗಿ ಜಾಣ ಜಾಣ
ಅಯ್ಯಯ್ಯೋ ನೋಡ್ರಪ್ಪೋ ಅಣ್ಣಯ್ಯ ಕೇಳ್ರಪ್ಪೋ
ವರದಕ್ಷಿಣೆ ಕೊಟ್ಟಾಯ್ತು ಮಗುವನ್ನು ಹೆತ್ತಾಯ್ತು
ಸ್ಕೂಟರ್ ಆಸೆಗೆ ಯಜಮಾನ ಹೆಂಡತಿ ಬಿಡುವುದು ಸರಿಯೇನಾ ..
ಅಪ್ಪಪ್ಪಾ ತಡಿಯಪ್ಪಾ ನಾನಲ್ಲ ಇದರಪ್ಪಾ
ಶಿಶುನಾಳ ಇದರಪ್ಪಾ ಸಾಮಾನ್ಯ ಅಲ್ಲಪ್ಪಾ
ಮಕ್ಕಳ ಹೇರುವಳು ನಾಳದಲಿ ಹುಡುಗರ ಹಿಡಿವಳು ಮೋಸದಲಿ
ಬಾಡಿಗೆ ಪ್ಯಾಂಟೂ ... ಬಾಡಿಗೆ ಸೂಟು... ಖಾಲಿ ಒಳಗೆಲ್ಲಾ
ಕದ್ದಿದೆ ಸೀರೆ ಕದ್ದಿದೆ ಲಂಗ ಸ್ವಂತ ಒಂದಿಲ್ಲಾ...
ಓಹ್.. ಮೈ ಗುರುವೇ ಸೇವ್ ಮೀ... ಸೇವ್ ಮೀ...
ಆಯ್ ಹೋಲ್ಡ್ ಯುವರ್ ಫೀಟ್ ಫ್ರಮ್ ದಿಸ್ ಬ್ಯಾಡ ಬಾಯ್
ಇಂಡಿಯನ್ ಟ್ರೇಡಿಷನ್ ಗೋಯಿಂಗ್ ಟು ಡೀಫೀಟ್
ಗುರುವೇ... ಗುರುವೇ... ಗುರುವೇ... ಬೃಂದಾವನ ಗುರು ಗುರುವೇ...
ಗುರುವೇ... ಗುರುವೇ... ಗುರುವೇ... ಬೃಂದಾವನ ಗುರು ಗುರುವೇ...
ರಿಮೇಕ್ ಅಲ್ಲಿ ಕನ್ನಡ ಸಿನಿಮಾ ದಾಖಲೆ ಮಾಡ್ತತಂತೇ...
ಕನ್ನಡ ಹುಡುಗಿ ರಾಯರ ಗುಡಿಯಲಿ ಇಂಗ್ಲಿಷ್ ಹಾಡಿದಳಂತೇ..
ಗುರುವೇ... ಗುರುವೇ... ಗುರುವೇ... ಬೃಂದಾವನ ಗುರು ಗುರುವೇ...
ಗುರುವೇ... ಗುರುವೇ... ಗುರುವೇ... ಬೃಂದಾವನ ಗುರು ಗುರುವೇ...
-----------------------------------------------------------------------------------------------------------------------
No comments:
Post a Comment