767. ಕಿರಾತಕ (೨೦೧೧)




ಕಿರಾತಕ ಚಲನಚಿತ್ರದ ಹಾಡುಗಳು 
  1. ಡಣಕು ಧನ ಡನಕು ಧನ 
  2. ಢಮ್ ಢಮ್ ಢಮ್ ಡಮರುಗ 
  3. ಊರೇ ನಿದಿರೆ ಕವಿದ ವೇಳೆ 
  4. ದುಬೈ ತೋರ್ಸು ತೋರ್ಸು ನಂಗೇ 
  5. ಕೆಂದಾವರೇ ಹೂವೇ ಕೆಂದಾವರೆ 
  6. ಯಾರವ್ವೀ ಈ ಚೆಲುವೀ 
  7. ಕಿರಾತಕ 
ಕಿರಾತಕ (೨೦೧೧) - ಡಣಕು ಧನ ಡನಕು ಧನ 
ಸಂಗೀತ : ವಿ.ಮನೋಹರ, ಸಾಹಿತ್ಯ : ಪ್ರದೀಪ ರಾಜ, ಗಾಯನ : ಹೇಮಂತ, ಪ್ರದೀಪ ರಾಜ 

ಹೇಯ್ ಮಾತಗಾರ ಮಲ್ಲಯ್ಯಾ ಮೆರೆದಾನೂ .. ಆಹಾ 
ಬುದ್ಧಿಗಾರ ಸಿದ್ದಯ್ಯ ಗೆದ್ದಾನು ಹೌದಪ್ಪಾ 
ಮೋಜುಗಾರ ಮಾತುಗಾರ ನಮ ಛತ್ರಿ ಚೋರ 
ಹೋದ ಹೋದ ಕಡೆ ಎಲ್ಲಾ ಮೋಡಿ ಮಾಡ್ಯಾನೂ 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 

ಶ್ರೀರಂಗಪಟ್ಟಣ ರಂಗನತಿಟ್ಟು ಪಾಂಡವಪುರ  ಕುಂತಿ ಬೆಟ್ಟ 
ಎಲ್ಲಾ ಕಡೆ ನಂದೇ ದರ್ಬಾರು ದರ್ಬಾರು 
ಕೆಆರಎಸ್ಸೂ ಕನ್ನಂಬಾಡಿ ಚಿಕ್ಕ ಬ್ಯಾಡರಹಳ್ಳಿ ದೊಡ್ಡ ಬ್ಯಾಡರಹಳ್ಳಿ 
ಹೋದಲ್ಲೆಲ್ಲಾ ನಂದೇ ಕಾರುಬಾರೂ   ಕಾರುಬಾರೂ ಹುಷಾರೂ 

ಮಳವಳ್ಳಿ ಮದ್ದೂರಲ್ಲೂ ಹವಾ ಮಡ್ಗಿವಿ ನೀ 
ಬಲಮುರಿ ಮೇಲಕೋಟೆಲು ಲೆವೆಲ್ ಮಡ್ಗಿವಿ ನೀ  
ದೊಡ್ಡರಸಿನ ಕೆರೆಯವರಿಗೋ ಇಷ್ಟ ಆಗೋದ್ವಿ 
ಚಿಕ್ಕಾಡೇ ಅಕ್ಕ ಪಕ್ಕ ಫೇಮಸ್ ಅಗೋದ್ವಿ 
ಕಂಗನ್ ಮರಡಿ ಕೆಆರ್ ಪೇಟೆ ಸಿದ್ಧಲಿಂಗಪುರ ಹರಿಹರಪುರ 
ಕ್ಯಾತರಹಳ್ಳಿಲೂ ನಮ್ದೇ ಖದರು ಸೂಪೆರೂ 
ತೇಂಡಗೇರಿ ಹೇಮಗಿರಿ ಮಂದಗೆರೆ ಅಗ್ರಹಾರ ಹುಲಿಕೆರೆ ಬೆಳಗೊಳ 
ಮಲ್ಲೇನಹಳ್ಳಿ ವಡ್ಡರಹಳ್ಳಿಗೂ ನಾವ್ ಒಡೆಯರು 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
 
ಪಾಲಹಳ್ಳಿ ಪಂಪಹೌಸು ನಮ ಗದ್ದೆ ಗೆಸ್ಟಹೌಸು 
ಅಲ್ಲ ನಡೆಯೋ ಎಲ್ಲ ಇತ್ಯರ್ಥನು ಭಾರಿ ಫೇಮಸ್ಸೂ 
ಮಂಡ್ಯಗೆ ಫೇಮಸ್ಸೂ ಹುಡುಗೀರ ಕಾಲೇಜೂ .. ಕಣ್ಣಲ್ಲೇ ಮ್ಯಾಸೇಜೂ 
ಸೈಟ್ ಹೊಡೀತಿದ್ರೇ ಸಾಕು ನಂಗೆ ಬ್ಯಾಡ ಮ್ಯಾರೇಜೂ ಸಂಸಾರ ಲಗ್ಗೆಜ್ಜೂ 
ಬಳ್ಳೇಕೆರೆ ಸೀಳಿನ್ ಕೆರೆ ಗೆಜ್ಜೆಲಗೆರೆ ತೂಗನ್ ಕೆರೆ ಸೌಕಾರ ಮನೆ 
ಕೋಳಿ ಕದಿಯೂಮ್ ಬಾ ಅಣ್ಣತಮ್ಮಾ ಲಕ್ಷ್ಮಿ ಸಾಗರ ಗೋಸಾಯ್ ಘಟ್ಟು 
ಕರಿಘಟ್ಟ ಎಲಚ್ಛಾತನಹಳ್ಳಿ ನಾಲೇ ದಂಡೇ ಮೇಲೆ ವೇವ್ ಪಾರ್ಟಿ ಮಾಡುಮಾ 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
 
ಕುಣಿಯೋದು ತಾಕತ್ತು ಕುಣಿಸೋದು ನಂಗೊತ್ತು 
ನಮ್ ತಾಳಕ್ಕೆ ತಕ್ಕಂಗ ಕುಣಿಯೋರಿದ್ದರೆ ನಮ್ದೇ ದೌಲತ್ತೂ... ಆ ದರಿಯ ದೌಲತ್ತೂ 
ನಮ್ ಐಡಿಯಾ ಸಕತ್ತು ನಂಗೇ ಅದೇ ಸಂಪತ್ತು 
ಬೋಗೋಳರನ್ನ ಕಂಡ್ರೆ ತಿನ್ನಿಸ್ತೀವಿ ನಾಯಿ ಬಿಸ್ಕಿಟ್ಟೂ 
ಹ್ಹಾ... ಎಂಥ ಗಮತ್ತೂ ... 

ಬಾಬಯ್ಯನ ಕೊತ್ಲು ಕೃಷ್ಣಾಪುರ ಸಂತೆ ಬಾಚಹಳ್ಳಿ   
ಲಿಂಗಾಪುರ ನಾಗಮಂಗಲ ಚಿಕ್ಕ ಮಂಡ್ಯ ನಂದೇನೇ ಜಾಗಿರೂ 
ಜೀಗುಂಡಿ ಪಟ್ಟಣ ಹುಲಿವಾನ ಹೊಸ್ಸೂರು ಆರತಿ ಉಕ್ಕಡ್ ಚುಂಚನಕಟ್ಟೆ 
ಅಂಗರ ಲಿಂಗನ ದೊಡ್ಡಿಲೀ ನಾವೇನೇ ಸುಲ್ತಾನ್ರೂ 

ಸರಗೂರು ತರಣಿಗೆರೆ ಕರಗ ನಂದೇವ 
ವಡೆಘಟ್ಟ ಶಾನಭೋಗನಹಳ್ಳಿ ನ್ಯಾಯ ನಂದೇವ 
ಗುಂಡಾಪುರ ಗೋವಿಂದನ ಹಳ್ಳಿ ಗೌಡಕೇ ನಮ್ದೇವ 
ಯರಹಳ್ಳಿ ಉಜ್ಜಯಿನಿ ಪಂಚಾಯತಿ ನಂದೇವ
ಹೊಸಹಳ್ಳಿ ದೊಡ್ಡಿ ಹೊಸಕೆರೆ ಬಿಂಕ ಬಿಂದಿಗಿನವಳೇ .. 
ಸಾತನೂರ ಚೀಣ್ಯ ಚಿಂಕೂರು ಲೀಲು ನಂಗೇ ಸಲಾಮು ಸಲಾಮು 
ದೊಡ್ಡಮಳ್ಳಿ ಚಿಕ್ಕಮಳ್ಳಿ ದೊಡ್ಡಪಾಳ್ಯ ಚಿಕ್ಕಪಾಳ್ಯ 
ಹೊಳಲು ತೆನ್ನಾಡು ದೇವರಾಯ ಪಟ್ಟಣ ಎಲ್ಲ ಜನಗೋಳ ಕೊಟ್ರು ಇನಾಮು ಇನಾಮು 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
ಡಣಕು ಡಣ ಡಣಕು ಡಣಡಣಕು ಡಣ ನಾ... 
-------------------------------------------------------------------------------------------------------------------------

ಕಿರಾತಕ (೨೦೧೧) - ಊರೇ ನಿದಿರೆ ಕವಿದ ವೇಳೆ 
ಸಂಗೀತ : ಸಾಹಿತ್ಯ : ವಿ.ಮನೋಹರ,  ಗಾಯನ : ಟಿ.ವಿ.ಕೃಷ್ಣ 

ಊರೇ ನಿದಿರೆ ಕವಿದ ವೇಳೆ ಕನಸು ಎದ್ದು ಕುಣೀದೈತೆ 
ತಾರೆ ಕೊಂಚ ಮಸುಕಾದಾಗ ಹಣತೆ ಕೂಡ ನಗುತೈತೆ 
ಬಾನೆಲ್ಲ ಅಲೆದು ಸುಸ್ತಾದ ಮುಗಿಲು ತಂಗಾಳಿ ಮ್ಯಾಲೆ ಮಲಗಾಯ್ತು 
ಚಂದ್ರಂಗೂ ಹಂಗೇ ಜೊಂಪಾಯ್ತು 
ಬಾನೆಲ್ಲ ಅಲೆದು ಸುಸ್ತಾದ ಮುಗಿಲು ತಂಗಾಳಿ ಮ್ಯಾಲೆ ಮಲಗಾಯ್ತು 
ಚಂದ್ರಂಗೂ ಹಂಗೇ ಜೊಂಪಾಯ್ತು 
ಚಂದ್ರಂಗೂ ಹಂಗೇ ಜೊಂಪಾಯ್ತು 

ಮರಳ ಮ್ಯಾಲೇ ಗೀಚಿದ ಸಾಲೆಲ್ಲಾ ಕಡಲ ತೆರೆ ದೋಚಿದ ಹಾಗಾಯ್ತು 
ಮರಳಿ ಮರಳಿ ಇರುಳೇ ಬಂತೇ ನಾಳೇ ಬರದಾಯಿತೇ 
ಜೀವ ಒಯ್ದು ಹೋದ ದೇವಿ ಸುಳಿದೆ ಇಲ್ಲಾ 
ಸುಳಿವೇ ಇಲ್ಲಾ ಸುಳಿಯ ಒಳಗೆ ಕಳೆದೋದಲ್ಲ 
  
ಊರೇ ನಿದಿರೆ ಕವಿದ ವೇಳೆ ಕನಸು ಎದ್ದು ಕುಣಿದೈತೆ 
ತಾರೆ ಕೊಂಚ ಮಸುಕಾದಾಗ ಹಣತೆ ಕೂಡ ನಗುತೈತೆ 
ಬಾನೆಲ್ಲ ಅಲೆದು ಸುಸ್ತಾದ ಮುಗಿಲು ತಂಗಾಳಿ ಮ್ಯಾಲೆ ಮಲಗಾಯ್ತು 
ಚಂದ್ರಂಗೂ ಹಂಗೆ ಜೊಂಪಾಯ್ತು 
ಚಂದ್ರಂಗೂ ಹಂಗೆ ಜೊಂಪಾಯ್ತು 
ಗಿಣಿಯ ಜೊತೆ ಹಾಡುವೇ ಎಂದಾಗ ಗಿಡುಗನಂಗೆ ಒಯ್ದರು ಯಾರೀಗ 
ಹಾರಿ ಹಾರಿ ಹೋಗೋ ದಾರಿ ಬೇರೆ ಬೇರಾದಾವೂ  
ಪ್ರೀತಿ ಪೂಜೆ ನಿಂತೇ ಹೋಯ್ತು ದೇವರಿಗೂ ಗೃಹಚಾರವು 
ಇನ್ನೇಲ್ಲಿ ಆ ಪರಿಹಾರವೂ ... 
------------------------------------------------------------------------------------------------------------------------

ಕಿರಾತಕ (೨೦೧೧) - ದುಬೈ ತೋರಿಸು ತೋರಿಸು ನಂಗೆ 
ಸಂಗೀತ : ಸಾಹಿತ್ಯ : ವಿ.ಮನೋಹರ,  ಗಾಯನ : ಟಿಪ್ಪು, ಚೈತ್ರಾ 

ದುಬೈ ತೋರ್ಸು ತೋರ್ಸು ನಂಗೆ ಒಂದ್ ಸಲ 
ಕಣ್ಣ್ ಬಾಯಿ ಬಿಟ್ಟ ನಮ್ಮ ಜೋಡಿ ನೋಡ್ಲಿ ಅಲ್ಲಿ ಎಲ್ಲ 
ರೋಲ್ಸ್ ರಾಯ್ಸ್ ಕಾರಲ್ಲಿ ರಾಯಲ್ ಆಗಿ ಸುತ್ತುಮಾ 
ಮೋಡವಿಲ್ದೇ ಮಳೆಯ ಸುರಿಸು ಬಾ ನಲ್ಲ 
ಲಯ್ಯೋ ಲಯ್ಯೋ ಲಯ್ಯ ಲಯ್ಯಲಾ 
ಲಯ್ಯೋ ಲಯ್ಯೋ ಲಯ್ಯ ಲಯ್ಯಲಾ 

ದುಬೈ ಶೇಕ್ ಶೇಕ್ ಮಾಡುಮಾ ಬಾ ಲೈಲಾ 
ಪೆಟ್ರೋಲ ಬಾವೀಲಿ ಜೇನ್ ಬರೊಂಗ್ ಮಾಡಲಾ 
ಒಂಟೆ ಮೇಲೆ ಕೂರುಮ್ಮ ಟೆಂಟೊಳಕೆ ಕೂರುಮಾ 
ಸೆಂಟೂ ಹಚ್ಚಿ ಅಂಟಿಕೊಂಡ ಬಿಡುಮಾ ಇರುಳೆಲ್ಲಾ 
ಲಯ್ಯೋ ಲಯ್ಯೋ ಲಯ್ಯ ಲಯ್ಯಲಾ 
ಲಯ್ಯೋ ಲಯ್ಯೋ ಲಯ್ಯ ಲಯ್ಯಲಾ 
  
ಕೆನ್ನೇ ಆಪಲ್ ಮೈ ಹಣ್ಣ ಹಂಪಲ ತುಟಿಯ ಸ್ವಾದ ಖರ್ಜುರುನ 
ಬೆಂಕಿ ಇಲ್ದೇ ಮೈ ಉರಿಸೋನೆ ಪ್ರೇಮಿ ದುನಿಯಾಗೆ ನೀ ಸುಲ್ತಾನಾ....ಆಆಆ 
ಮಿಂಚು ಕಣ್ಣು ಸೂಪರ್ ನನಗೆ ಸಿಕ್ಕ ಲವ್ ಫ್ಲವರ್ 
ನೀನೇ ಕಣೆ ತಾಜಾ ಗುಲ್ ಮೊಹರ್ 
ಮರಳು ಹಿಂದಿ ನೀರ ಸುರಿಸಬಲ್ಲ ನಿನ್ನ ಪವರ್ 
ನನ್ನನೀಗ ಹಾಗೇ ಹಿಂಡಬೇಕು 
ಲಯ್ಯೋ ಲಯ್ಯೋ ಲಯ್ಯ ಲಯ್ಯಲಾ 
ಲಯ್ಯೋ ಲಯ್ಯೋ ಲಯ್ಯ ಲಯ್ಯಲಾ 

ಮದಿರೆ ಜಾಡಿ ಎದುರೇ ನೋಡಿ ಸುಂಮ್ನಿರೋ ಅಲ್ಲ ಅಲ್ಲ
ಚದುರೆ ನೋಡಿ ಕುದುರೆ ಆದೆ ಕಡಿವಾಣನೇ ಕಿತ್ತ ಹೋಯ್ತಲ್ಲಾ  
ನೀನು ಮುಟ್ಟಿದ್ದೆಲ್ಲ ಚಿನ್ನವಾಗೋ ಭಯವಿದೇ ದೂರವಿರು ಮುಟ್ಟದೆ ನನ್ನನ್ನೂ 
ನೀನೇ ಒಂದು ಚಿನ್ನ ನಿಂಗು ಏಕೆ ಹೆದರಿಕೆ ನಿನ್ನನೀಗ ಹಣ್ಣು ಮಾಡಲಾ... 
ಲಯ್ಯೋ ಲಯ್ಯೋ ಲಯ್ಯ ಲಯ್ಯಲಾ 
ಲಯ್ಯೋ ಲಯ್ಯೋ ಲಯ್ಯ ಲಯ್ಯಲಾ 
ದುಬೈ ತೋರ್ಸು ತೋರ್ಸು ನಂಗೆ ಒಂದ್ ಸಲ 
ಕಣ್ಣ್ ಬಾಯಿ ಬಿಟ್ಟ ನಮ್ಮ ಜೋಡಿ ನೋಡ್ಲಿ ಅಲ್ಲಿ ಎಲ್ಲ 
ಒಂಟೆ ಮೇಲೆ ಕೂರುಮ್ಮ ಟೆಂಟೊಳಕೆ ಕೂರುಮಾ 
ಸೆಂಟೂ ಹಚ್ಚಿ ಅಂಟಕೊಂಡ ಬಿಡುಮಾ ಇರುಳೆಲ್ಲಾ 
ಲಯ್ಯೋ ಲಯ್ಯೋ ಲಯ್ಯ ಲಯ್ಯಲಾ 
ಲಯ್ಯೋ ಲಯ್ಯೋ ಲಯ್ಯ ಲಯ್ಯಲಾ 
-----------------------------------------------------------------------------------------------------------------------

ಕಿರಾತಕ (೨೦೧೧) - ಢಮ್ ಢಮ್ ಢಮ್ ಡಮರುಗ ಸದ್ದು  
ಸಂಗೀತ : ಸಾಹಿತ್ಯ : ವಿ.ಮನೋಹರ,  ಗಾಯನ : ಸಂತೋಷ 

ಯಾರ್ ಯಾರ್ ಯಾರ್ ಯಾರ್ ಆ ಹಾ ಹಾ ಆ 
ಯಾರ್ ಯಾರ್ ಯಾರ್ ಯಾರ್ ಆ ಹಾ ಹಾ ಆ 
ಡಮ ಡಮ ಡಮ ಡಮರುಗ ಸದ್ದು ಎದೆಯೊಳಗಡೆ ಮುತ್ತನು ಹೊತ್ತು 
ನಗುತ್ವಾಳೇ ಹೃದಯವ ಕದ್ದು ಯಾರವ್ವೀ ಈ ಚೆಲುವಿ ಯಾರವ್ವೀ  
ಯಾರವ್ವೀ ಈ ಚೆಲುವಿ ಯಾರವ್ವೀ  
ಡಮ ಡಮ ಡಮ ಡಮರುಗ ಸದ್ದು ಎದೆಯೊಳಗಡೆ ಮುತ್ತನು ಹೊತ್ತು 
ನಗುತ್ವಾಳೇ ಹೃದಯವ ಕದ್ದು ಯಾರವ್ವೀ ಈ ಚೆಲುವಿ ಯಾರವ್ವೀ  
ಯಾರವ್ವೀ ಚೆಂದುಳ್ಳಿ ಯಾರವ್ವೀ  

(ಇಷ್ಟ ದಿನ ತಮಾಷೆಗೆ ಕಟ್ಕೊಂತೀನಿ ಅಂತಾ ಕಟ್ಟೋಕೋತೀನಿ ಅಂತಿದ್ದೇ  
ಈಗ ನಿಜವಾಗಲು ಕಟ್ಟಕೊಂಡ್ರೇ ನಿನ್ನೇ ಕಟ್ಕೋಬೇಕು 
ಅನಸೈತೇ ಕಣೆ ಓಹೋಹೋ ಅಣ್ಣತಮ್ಮಾ ಆಗೋದಲ್ಲೋ ) 

ಅಮರ ಕಣ್ಣ ಚಳಕ ನಾನದಕ್ಕೆ ಬಿದ್ದ ಮಿಕ್ಕ 
ಹೃದಯಕೆ ಸಿಹಿ ಜಳಕ ಸೋತರೂ ಕೂಡ ಸುಖ 
ಯಾರ್ ಯಾರ್ ಯಾರ್ ಯಾರ್ ಆ ಹಾ ಹಾ ಆ 
ಯಾರ್ ಯಾರ್ ಯಾರ್ ಯಾರ್ ಆ ಹಾ ಹಾ ಆ 
-------------------------------------------------------------------------------------------------------------------

ಕಿರಾತಕ (೨೦೧೧) - ಚುಕ್ಕಿ ಚುಕ್ಕಿ ಬೆಳ್ಳಿ ಚುಕ್ಕಿ 
ಸಂಗೀತ : ಸಾಹಿತ್ಯ : ವಿ.ಮನೋಹರ,  ಗಾಯನ : ಸಂತೋಷ, ಅನುರಾಧ ಭಟ್ಟ  

ಚುಕ್ಕಿ ಚುಕ್ಕಿ ಬೆಳ್ಳಿ ಚುಕ್ಕಿ ಮುದ್ದು ಚುಕ್ಕಿ ನಾನು ನಿನ್ನ 
ಧ್ಯಾನ ಮಾಡಿ ಮಾಡಿ ಪ್ರೇಮ ಋಷಿಯಾದೇ 
ಮತ್ತೇ ಮತ್ತೇ ಕಾಡಿ ಕಾಡಿ ಬೇಡಿಕೊಂಡ ನಂತರವೇ ಆಹಾ ಕೊನೆಗೂ ನೀ ಒಲಿದೆ 
ಡಮ್ಮ ಡಮ್ಮ ಡಮ್ಮ ಡಮ್ಮ ಡಮ್ಮ 
ಡಮ್ಮ ಡಮ್ಮ ಡಮ್ಮ ಡಮ್ಮ ಡಮ್ಮ 
ಡಮ್ಮ ಡಮ್ಮ ಡಮ್ಮ ಡಮ್ಮ ಡಮ್ಮ 

ಸಣ್ಣ ಪುಟ್ಟ ಕನಸಿಗೆಲ್ಲಾ ಕಣ್ಣಿನಾಗೆ ಜಾಗವಿಲ್ಲ 
ನಿನ್ನ ಬಿಂಬ ಜಂಬದಿಂದ ತುಂಬಿಕೊಂಡೈತೆ 
ಮೇಷ್ಟ್ರು ಹಲೋ ಪಾಠವೆಲ್ಲಾ... 
ಕಿವಿಯ ಮ್ಯಾಲೇ ಬೀಳದಲ್ಲ 
ನಿನ್ನ ಮಾತೆ ತುಂಬಿ ಮುತ್ತು ಸದ್ದು ಮಾಡೈತೆ 

ನಿಂಗು ಹಂಗ ಇಲ್ಲಿ ನಂಗೂ ಹಂಗೇ 
ನೀನೇ ನಂಗೆ ದಣಿವಾರಿಸೋ ಗಂಗೆ 
ತಲೆಯ ತುಂಬಾ ಮತ್ತೇರು ಗುಂಗೇ 
ಮನಸು ನಿಂಗೆ ಶರಣಾಯ್ತು ಹೆಂಗೆ 
ಬೃಹ್ಮ ಬರೆದಿಟ್ಟ ನನ್ನ ಜಾತಕನೇ ತಿದ್ದಿದೋಳೆ 
ನಿನ್ನನ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ 
ನಿನ್ನ ಸಿಹಿ ನೆನಪಲೀ ನರ ನರ ಸಡಗರ 
ನನ್ನ ಪಾಲಿಗೀಗ ನೀನೇ ಜೀವ ಚಿಲುಮೆ 
ಡಮ್ಮ ಡಮ್ಮ ಡಮ್ಮ ಡಮ್ಮ ಡಮ್ಮ 
ಡಮ್ಮ ಡಮ್ಮ ಡಮ್ಮ ಡಮ್ಮ ಡಮ್ಮ 

ಹೆಜ್ಜೆಯಡಿ ಮೆತ್ತೆಯಗಲ ಗೆಜ್ಜೆಗಳ ಸದ್ದು ಅಗಲ 
ಸೊಂಪಾದ ಪಾದ ಜೋಪಾನ ಒಲವೇ 
ನೀನು ನಿಂತಿರೋ ಈ ನೆಲ ನನ್ನ ಪ್ರೇಮ ದೇಗುಲ 
ನಿನ್ನ ಖಾಸಾ ದಾಸ ಆದೆ ನಾ ಚೆಲುವೆ 
ಉಂಡಾಡಿ ಆದೋನು ಕೊಂಡಾಡು ಗಂಡಾದೆ 
ದೂರಾಗ ಬೇಡ ಎಂದೆಂದೂ ಜಗದಲ್ಲೇ ನೀ ಜಾಣ 
ಕಾಪಾಡೋ ನನ್ನನ್ನ ಕದ್ದಯ್ಯೋ ಬೇಗ ಬಾ ಬಾ ಬಾ.... 
ಚಿನ್ನ ನಿನ್ನ ಕಣ್ಣಿನಲ್ಲೇ ಕಟ್ಟುಬಿಟ್ಟೆಯಲ್ಲೇ ನನ್ನ 
ಏನು ಮಂತ್ರ ಮಾಡಿ ಬಿಟ್ಟೆ ಮುದ್ದು ಚಿಟ್ಟೆಯೇ 
ರಂಗು ರಂಗು ಮಾತಿನಲ್ಲಿ ರಂಗವಲ್ಲಿ ಇಟ್ಟವನೇ 
ನೋಟದಲ್ಲೇ ಮಾಟಾ ಮಾಡಿ ನಾಟಿ ಬಿಟ್ಟೆಯಾ 
ನೀನೇ ಹೆಣೆದ ಬಲೆಯೊಳಗೆ ಬಿದ್ದೇ 
ಪ್ರೀತಿ ಮಳೆಗೆ ಸೂರ್ಯನೇ ಒದ್ದೇ 
ಗಾಳಿ ಬಂದು ಉರಿಸೈತೆ ಹಣತೆ 
ಖಾಲಿ ಪುಟಕೆ ನೀನಾದೆ ಕವಿತೆ 
ಬೃಹ್ಮ ಬರೆದಿಟ್ಟ ನನ್ನ ಜಾತಕನೇ ತಿದ್ದಿದೋಳೆ 
ನಿನ್ನನ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ 
ನಿನ್ನ ಸಿಹಿ ನೆನಪಲೀ ನರ ನರ ಸಡಗರ 
ನನ್ನ ಪಾಲಿಗೀಗ ನೀನೇ ಜೀವ ಚಿಲುಮೆ 
ಡಮ್ಮ ಡಮ್ಮ ಡಮ್ಮ ಡಮ್ಮ ಡಮ್ಮ 
ಡಮ್ಮ ಡಮ್ಮ ಡಮ್ಮ ಡಮ್ಮ ಡಮ್ಮ
------------------------------------------------------------------------------------------------------------------------

ಕಿರಾತಕ (೨೦೧೧) - ಕೆಂದಾವರೆ ಹೂವೇ 
ಸಂಗೀತ : ಸಾಹಿತ್ಯ : ವಿ.ಮನೋಹರ,  ಗಾಯನ : ನಕುಲ ಅಭಯಂಕರ 

ಕೆಂದಾವರೆ ಹೂವೇ... ಕೆಂದಾವರೆ ಹೂವೇ 
ನನ್ನವಳ ಕಂಡೀಯ ನನ್ನವಳ ಕಂಡೀಯಾ 

ಅಂತರ ಗಂಗೆಯ ಮಂಜುಳ ಮಂಜುಳ ನಾದದ ಆಗಿರುವಳು 
ತೆಂಕಣ ಗಾಳಿಗೆ ತೂಗುವ ಕಬ್ಬಿನ ಜಲ್ಲೆಯ ಆಗಿವಳು 
ಮನ ಮಂದಿರ ಮೂರ್ತಿಯೇ ಇವಳು 
ವರ ನೀಡುವ ದೇವತೆ ಈಗಿವಳು 
ಕೆಂದಾವರೆ ಹೂವೇ... ಕೆಂದಾವರೆ ಹೂವೇ 
ನನ್ನವಳ ಕಂಡೀಯ ನನ್ನವಳ ಕಂಡೀಯಾ 

ಅವಳೋ ಜೇನ ಮಾಮರ ನಗುವಾಗ ಹೂವ ಚಾಮರ 
ನಡೆಯೋ ನೀಲ ನಾಗರ ಗಿಣಿ ಮಾತೆ ಗೀತೆ ಇಂಚರ 
ಮನ ಮಂದಿರ ಮೂರ್ತಿಯೇ ಇವಳು 
ವರ ನೀಡುವ ದೇವತೆ ಈಗಿವಳು 
ಕೆಂದಾವರೆ ಹೂವೇ... ಕೆಂದಾವರೆ ಹೂವೇ 
ನನ್ನವಳ ಕಂಡೀಯ ನನ್ನವಳ ಕಂಡೀಯಾ 
------------------------------------------------------------------------------------------------------------

ಕಿರಾತಕ (೨೦೧೧) - ಕಿರಾತಕ 
ಸಂಗೀತ : ಸಾಹಿತ್ಯ : ವಿ.ಮನೋಹರ,  ಗಾಯನ : ಭರತ ಚೈತ್ರ 

ಕಿರಿಕ್ ಕಿರಿಕ್ ಕಿರಿಕ್ ಕಿರಿಕ್ ಕಿರಾತಕ 
ಕಿರಿ ಕಿರಿ ಕಿರಿ ಕಿರಿ ಕಿರಾತಕ 
ಕಿರಿಕ್ ಕಿರಿಕ್ ಕಿರಿಕ್ ಕಿರಿಕ್ ಕಿರಾತಕ 
ಕಿರಿ ಕಿರಿ ಕಿರಿ ಕಿರಿ ಕಿರಾತಕ 
ಹೇ.. ಕಿಲಾಡಿ ಕಿಂಗ್ ಬಾಜಿಕಟ್ಟೋ ಸಿಂಗ 
ಗೆದ್ದೇಗೆಲ್ಲೋ  ರಂಗ ರಂಗ ರಂಗ ರಂಗ ರಂಗ ರಂಗ 
ರಂಗ ರಂಗ ರಂಗ ರಂಗ 

ಕಿಲಾಡಿ ಕಿಂಗ್ ತಗೋಬೇಡ ಭಂಗ.. ಯೂ ಕೇ ನಾಟ್ ಕ್ಯಾಚ್ ಹಿಮ್ 
ಯೂ ಕೇ ನಾಟ್ ಕ್ಯಾಚ್ ಹಿಮ್  ಹೀ ಇಸ್ ಕಿರಾತಕ ಓ.. ಹೇ... 
ಹೀ ಇಸ್ ಏ ಕಿರಾತಕ

ತುಪ್ಪ ಕೈನಾಗ ಕೊಟ್ರೇ ಅದನ್ನ ಬೆಣ್ಣೆ ಮಾಡೋ ಚಾಲಾಕೀ 
ಎಂಥ ಪಾಕ್ಡನೇ ಇರಲೀ ಬೆಪ್ಪು ತಕ್ಕಡಿ ಮಾಡೋ ಕಿಲಾಡಿ 
ಚಾಪೆಯ ಕೆಳಗಡೆ ನಸುಳೋರ ಕಂಡರೇ 
ರಂಗೋಲಿ ಅಡಿಲಿ ನುಸುಳಬಲ್ಲವ 
ಕಣ್ಣಲೇ ಬೀಗವ ಮುರಿವ ಗಂಡಿವ 
ಪುಂಡರಿಗೆ ಪುಂಡ ಈ ಪಾಂಡವ 
ಬೆಂಕಿನೇ ಇಲ್ದೇ ಇವ ಒಲೆ ಉರಿಸಬಲ್ಲ ಮುರಾರೀ ... 
ಕಣ್ಣಿಟ್ಟ ಅಂದ್ರೇ ಇವ ಪಟ್ಟು ಬಿಡ್ದೆ ಮಾಡ್ಯಾನ್ ಶಿಕಾರಿ 
ಯಾರಿಗೂ ಬೀಳದೇ ಯಾರಿಗೂ ಸೋಲದೇ 
ಈ ಪೋರಿಗೆ ಸೋತು ಹೋದೆನೇ 
ಜೋಕೇ ಸದ್ದಿಲ್ಲದೇ ಬಂದ್ರೂ ಗೊತ್ತಾಗದೆ ಕಿವಿ ಮ್ಯಾಲೆ ಹೂವ್ ಇಟ್ತಾನೇ 
ಕಿಲಾಡಿ ಕಿಂಗ್ ತಗೋಬೇಡ ಭಂಗ.. ಯೂ ಕೇ ನಾಟ್ ಕ್ಯಾಚ್ ಹಿಮ್ 
ಯೂ ಕೇ ನಾಟ್ ಕ್ಯಾಚ್ ಹಿಮ್  ಹೀ ಇಸ್ ಕಿರಾತಕ ಓ.. ಹೇ... 
ಹೀ ಇಸ್ ಏ ಕಿರಾತಕ

ಕಿಲಾಡಿ ಕಿಂಗ್ ತಗೋಬೇಡ ಭಂಗ.. ಯೂ ಕೇ ನಾಟ್ ಕ್ಯಾಚ್ ಹಿಮ್ 
ಯೂ ಕೇ ನಾಟ್ ಕ್ಯಾಚ್ ಹಿಮ್  ಹೀ ಇಸ್ ಕಿರಾತಕ ಓ.. ಹೇ... 
ಹೀ ಇಸ್ ಏ ಕಿರಾತಕ

ಕಿಲಾಡಿ ಕಿಂಗ್ ತಗೋಬೇಡ ಭಂಗ.. ಯೂ ಕೇ ನಾಟ್ ಕ್ಯಾಚ್ ಹಿಮ್ 
ಯೂ ಕೇ ನಾಟ್ ಕ್ಯಾಚ್ ಹಿಮ್  ಹೀ ಇಸ್ ಕಿರಾತಕ ಓ.. ಹೇ... 
ಹೀ ಇಸ್ ಏ ಕಿರಾತಕ
-----------------------------------------------------------------------------------------------------------

No comments:

Post a Comment