768. ವಾಲಿ (೨೦೦೧)


ವಾಲಿ ಚಲನಚಿತ್ರದ ಹಾಡುಗಳು 
  1. ಓ ಸೋನಾ ಓ ಸೋನಾ 
  2. ವಸಂತ ಮಾಸದಲಿ 
  3. ಚಂದಿರನ ಹಿಡಿದು 
  4. ಮೇಲೆ ಚಂದ್ರಮ 
  5. ದಿಲ್ ಮೇರಾ ದಿಲ್ 
ವಾಲಿ (೨೦೦೧) - ಓ ಸೋನಾ ಓ ಸೋನಾ
ಸಂಗೀತ : ರಾಜೇಶರಾಮನಾಥ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಹರಿಹರನ್ ಸುದೀಪ್

ಗಂಡು : ಓ ಸೋನಾ.. ಓ ಸೋನಾ ಓ ಸೋನಾ ಆಯ್ ಲವ್ ಯೂ  ಲವ್ ಯೂ ಡಿಯರ್
           ಓ ಸೋನಾ.. ಓ ಸೋನಾ ಓ ಸೋನಾ ಆಯ್ ಲವ್ ಯೂ  ಲವ್ ಯೂ ಡಿಯರ್
           ಹುಣ್ಣಿಮೆಯ ಬಾಚಿಕೊಂಡ ಪ್ಲವರ್ ಅವಳು ಮಿಂಚುಗಳ ಬಚ್ಚಿಕೊಂಡ ಪವರ್ 
            ಮಳೆಬಿಲ್ಲ ತೊಟ್ಟುಕೊಂಡ ಕಲರೂ ನಾನವಳ ಪ್ರೀತಿ ಮಾಡಿದಂತ ಕಥೆ ಸುಂದರ
           ಓ ಸೋನಾ.. ಓ ಸೋನಾ ಓ ಸೋನಾ ಆಯ್ ಲವ್ ಯೂ  ಲವ್ ಯೂ ಡಿಯರ್
  
ಗಂಡು : (ಮಾತು ) : ಒಂದು ದಿವಸ ಅವಳು ಮೌತ ಆರ್ಗನ್ ಪ್ಲೇ ಮಾಡ್ತಾ ಇದ್ದಳು
             ನಾನು ಕೂತಕೊಂಡ ಕೇಳ್ತಾ ಇದ್ದೆ ನಿಂಗೆ ಪ್ಲೇ ಮಾಡಕ್ ಬರತ್ತಾ ಅಂದಳು
             ನಾ ಬರತ್ತೇ ಅಂದೇ..
ಹೆಣ್ಣು : ನಿಲ್ಲಸೂ ನಿಲ್ಸು ಯಾಕ್ ಗೊತ್ತು ಅಂದೇ ಗೊತ್ತಿಲ್ಲಾ ಅಂತಾ ಹೇಳಬೇಕಿತ್ತೂ               
ಗಂಡು : ಯಾಕೆ ಗೊತ್ತಿರೋದನ್ನ ಗೊತ್ತು ಅಂತ ತಾನೇ ಹೇಳಬೇಕು ನಗೆ ಸುಳ್ಳ ಹೇಳಕ ಇಷ್ಟ ಇಲ್ಲ
ಹೆಣ್ಣು : ಅಯ್ಯೋ ಪೆದ್ದು.. ಹೆಂಗಸಿರಿಗೇ ಗೊತ್ತಿದೆ ಅನ್ನೋ ಗಂಡಸರಿಗಿಂತ
          ಗೊತ್ತಿಲ್ಲ ಅನ್ನೋ ಗಂಡಸರನ್ನ ಕಂಡ್ರೇನೇ ತುಂಬಾ ಇಷ್ಟ
          ನೀನು ಆವತ್ತೂ ಗೊತ್ತಿಲ್ಲ ಅಂದಿದ್ರೆ ಅವಳೇ ನಿಂಗೆ ಹೇಳ್ಕೋಡಳು
          ಹಾಗೋ ಹೀಗೋ ದೊಡ್ಡ ರೋಮ್ಯಾನ್ಸ್ ನಡೆದಿರೋದೇ ಛೇ .. ನೀ ಮಿಸ್ ಮಾಡಕೊಂಡ್ ಬಿಟ್ಟೇ  ..
ಗಂಡು : ಅವತ್ತು ರೋಮ್ಯಾನ್ಸ್ ನಡೀತೇ..
ಹೆಣ್ಣು : ಹಾಂ.. ನಿಂಗ್ ಗೊತ್ತು ಅಂತ ಹೇಳಿದಮೇಲೂ  ರೋಮ್ಯಾನ್ಸ್ ನಡೀತಾ ಹೇಗೇ ..
ಗಂಡು : ಅವಳು ಮೌತ್ ಆರ್ಗನ್ ಕೊಟ್ಲು ನಾ ಹತ್ತರ ಹೋಗ್ ತಗೊಂಡೇ
            ಮೌತ್ ಆರ್ಗನ್ ನೋಡಿದೇ ಅವಳ್ನ ನೋಡದೇ
            ಮೌತ್ ಆರ್ಗನ್ ಕೆಳಗಿತ್ತು ನಿನ್ ಮೌತ್ ಆರ್ಗನ್ ತರ ಇದೇ
            ಮತ್ಯಾಕ ಮೌತ್ ಆರ್ಗನ್ ಅಂತ ಹೇಳಿ ಕಿಸ್ ಮಾಡಬಿಟ್ಟೆ
           ಓ ಸೋನಾ.. ಓ ಸೋನಾ ಓ ಸೋನಾ ಆಯ್ ಲವ್ ಯೂ ಲವ್ ಯೂ ಡಿಯರ್

ಗಂಡು : ಮುಸ್ಸಂಜೆ ಹೊತ್ತಲ್ಲಿ ಮಂಜಿನ ಮಳೇಲಿ ನನ್ನವಳು ನೆನೆಯೋದನ್ನ ಕಂಡು ನಾನು ಕರಗಿದೆ
           ಅವಳಂದವ ಚಂದವ  ಒಂದಾಗಿ ಸೇರಿಸಿ ನನ್ನೆದೆಯ ಗೂಡಲ್ಲಿ ಗುಬ್ಬಿ ಹಾಗೆ ಬಚ್ಚಿಟ್ಟುಕೊಂಡೇ
           ಮಳೆ ನಿಂತಹೋದ ಪರಿವೆ ಇಲ್ಲಾ ಅಲ್ಲಿ ಏನಾಯ್ತು ಅರಿವೇ ಇಲ್ಲಾ
           ಎಷ್ಟೋ ಮಾತುಗಳು ಎದೆಯಲ್ಲಿ ಉಕ್ಕಿ ಬಂತು ಬಾಯಿ ತೆರೆದೇ ತುಟಿ ಮೇಲೆ ಒತ್ತಿ ಹಾರಿ ಹೋದವು...
           ಓ ಸೋನಾ.. ಆಯ್ ಲವ್ ಯೂ  ಒಹ್ ಮೈ ಡಿಯರ್ ಸೋನಾ ಆಯ್ ಲವ್ ಯೂ
           ಓ ಸೋನಾ.. ಓ ಸೋನಾ ಓ ಸೋನಾ ಆಯ್ ಲವ್ ಯೂ  ಲವ್ ಯೂ ಮೈ ಡಿಯರ್
------------------------------------------------------------------------------------------------------------------------

ವಾಲಿ (೨೦೦೧) - ಸೇ .. ಲವ್ ಸೇ .. 
ಸಂಗೀತ : ರಾಜೇಶರಾಮನಾಥ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಅನುರಾಧ ಶ್ರೀರಾಮ್,  ಸುದೀಪ್, ಉನ್ನಿಕೃಷ್ಣನ್ 

ಗಂಡು : ಸೇ ಲವ್ ಸೇ ಲವ್ ಸೇ ಲವ್ ಸೇ ಲವ್  ಸೇ ಲವ್ ಸೇ ಲವ್ ಸೇ ಲವ್ ಸೇ ಲವ್
           ತಾರಾ ರಾರೀ ರಾ ತಾ ರಾರಾ ರಾರಿ ರಾ  ತಾರಾ ರಾರೀ ರಾ  ತಾರಾ ರಾರೀ ರಾ
           ವಸಂತ ಮಾಸದಲಿ ಒಂದು ಮಧ್ಯ ರಾತ್ರೀಲಿ ಇಣುಕಿದಳು ಕಿಟಿಕಿಲಿ ಬೆಳದಿಂಗಳ ರೂಪದಲಿ
           ನಿದ್ದೆಗಣ್ಣಲ್ಲಿ ನಾ ಇದ್ದೇ ಕ್ಷಣದಲ್ಲಿ ಅವಳಂದಳು ಕಿವಿಯಲಿ ಹಲೋ .. ಹಲೋ
           ಹಲೋ   ಹಲೋ   ಅದು ಕನಸಾ.. ಲವ್ ಈ ಲವ್ ಇದು ನನಸಾ

ಹೆಣ್ಣು : ಹೃದಯ ಕದಿಯೋದು ಸರಿಯೇ ಆ ಕಳುವಿಗೆ ದಂಡನೆಯೂ ಇಲ್ಲವೇ ಇಲ್ಲವೇ
ಗಂಡು : ಮುತ್ತಲ್ಲೇ ಮೂನ್ನೂರು ಛೇಡಿ ಏಟು ಆ ತುಟಿಗೆ ಕೊಡಬೇಕಲ್ಲವೇ ಚೆಲುವೇ
ಗಂಡು : ವಾಟ್ಸ್ ದಿ ಚಾರ್ಜ್
ಹೆಣ್ಣು :  ಹೀ ಸ್ಟಾಲಿನ್ ಮೈ ಹಾರ್ಟ್   ಹೀ ಸ್ಟಾಲಿನ್ ಮೈ ಲಿಟಲ್ ಹಾರ್ಟ್   
ಗಂಡು : ಇಸ್ ಇಟ್ ಯಸ್ ಯುವರ್ ಆನರ್
ಹೆಣ್ಣು : ಎಸ್ ಯುವರ್ ಆನರ್, ಫಾರ್ ದಿ ಥೀಫ್ ಆಫ್ ಹಾರ್ಟ್ ಇಪ್ಚ್ ಸೇ
          ಥೌಸಂಡ್ ಕಿಸ್ಸಿಸ್ ವಿಥ್ ಹನಿ ಡಿಪ್ಪಡ್   ಲಿಪ್ಸ್
          ಈ ನಿನ್ನ ಪ್ರೀತಿಯು ನಿಜವೆಂದು ತಿಳಿಯೋಕೆ ಪ್ರಾಣ ಬಿಡು ಅಂದ್ರೂ ಬಿಡುತೀಯಾ
          ಸಾವಿಗೆ ಬರಿ ನನ್ನ ಮರೀತಿಯಾ ಹೃದಯ ಗಿರಿ ಏರಿ
          ಗುಂಡಿಗೆಯ ಗುಂಡಿಲಿ ಜಿಗಿದು ಸಾಯಲು ಬಲ್ಲೆ ನಾ ಅಲ್ಲೂನಾ ಕಾಯಬಲ್ಲೆ ನಾ
          ತಾರಾ ರಾರೀ ರಾ ತಾ ರಾರಾ ರಾರಿ ರಾ  ತಾರಾ ರಾರೀ ರಾ  ತಾರಾ ರಾರೀ ರಾ
          ಹಲೋ   ಹಲೋ   ಅದು ಕನಸಾ.. ಲವ್ ಈ ಲವ್ ಇದು ನನಸಾ

ಹೆಣ್ಣು : ಮುಗಿಲೊಳಗೆ ನಾನಾವಿತುಕೊಂಡರೇ ನೀ ಹೇಗೆ ನನ್ನ ಕಂಡು ಹಿಡಿವೆ ಹಿಡಿವೇ
ಗಂಡು : ಕಣ್ಣಲ್ಲೇ ಮಿಂಚುಗಳ ಬಾಣವ ಎಸೆದು ನಿಂತಲ್ಲೇ ನಿನ್ನ ಕಂಡು ಹಿಡಿವೆ ಚೆಲುವೆ
ಹೆಣ್ಣು : ಈ ಆಸೆಗೇ ... ಈ.. ಬಾಷೆಗೇ .. 
ಗಂಡು : ಸೂರ್ಯ ಚಂದ್ರ ಚುಕ್ಕಿಗಳೇ ಸಾಕ್ಷಿ
ಹೆಣ್ಣು : ನಾಳೆಯು ನಮ್ಮದೆಂದು ಬದುಕುವ ಪ್ರೀತಿಗೆ ಏನು ಗುರುತನ್ನು ಕೊಡುತೀಯಾ
          ಮರಳಿ ಏನು ಪಡೀತೀಯಾ
ಗಂಡು : ಈ ನಿನ್ನ ಹೃದಯಕ್ಕೆ ನನ್ನೆರಡು ಕಣ್ಣಿಟ್ಟು ಅದರ ಬೆಳಕಲ್ಲೇ ಇರುತೀನಿ ಅಂತ ಬದುಕಿಗೆ ಕಾಯುತೀನಿ
ಹೆಣ್ಣು : ವಸಂತ ಮಾಸದಲಿ ಒಂದು ಮಧ್ಯ ರಾತ್ರೀಲಿ ಇಣುಕಿದಳು ಕಿಟಿಕಿಲಿ ಬೆಳದಿಂಗಳ ರೂಪದಲಿ
          ನಿದ್ದೆಗಣ್ಣಲ್ಲಿ ನಾ ಇದ್ದೇ ಕ್ಷಣದಲ್ಲಿ ಅವಳಂದಳು ಕಿವಿಯಲಿ ಹಲೋ .. ಹಲೋ
          ಹಲೋ   ಹಲೋ   ಅದು ಕನಸಾ.. ಲವ್ ಈ ಲವ್ ಇದು ನನಸಾ
--------------------------------------------------------------------------------------------------------------------------

ವಾಲಿ (೨೦೦೧) - ಚಂದಿರನ ಹಿಡಿದು 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಅನುರಾಧ ಶ್ರೀರಾಮ್,  ಉನ್ನಿಕೃಷ್ಣನ್ 

ಹೆಣ್ಣು : ಹೊನ್ನ ಕಿರಣ ಹಿಡಿದು ಮಂಚದಲಿ ಕಟ್ಟಿಡು ಮುಗಿಲನು ತಂದು ಮೆತ್ತೆಯ ಮಾಡಿಡು  
ಗಂಡು : ಚಂದಿರನ ಹಿಡಿದೇ ಮಂಚದಲಿ ಕಟ್ಟಿದೆ ಮುಗಿಲನು ಎಳೆದೆ ಮೆತ್ತೆಯ ಮಾಡಿದೆ 
ಹೆಣ್ಣು : ಉರಿಯೋ ಸೂರ್ಯನು ಕಡಲಲಿ ಬಚ್ಚಿಡು ಇರುಳ ನೀ ಉಳಿಸಲು ಧರಣಿಗೆ ಹೇಳಿದೆ 

ಹೆಣ್ಣು : ಇಂದು ಮೊದಲಿರುಳು 
ಗಂಡು : ಇಂದು ಮೊದಲಿರುಳು ನಮ್ಮ ಮೌನವು ನಗಲು 
            ಪ್ರೇಮವೋ ಕಾಮವೋ ಮಾಯವೋ ಕಾಯುವೇ 
            ಅಂದ ಮೈ ಅಂದ ಇದು ಕಾಡುವ ಕಾಮನಬಿಲ್ಲು 
ಹೆಣ್ಣು :  ಬಾಣನ ಹೂಡೋಕೆ ಬಂದಾನೊ ಇವನು ನಾ ಚೋರ ನನ್ನ ಚೋರ ತುಂಟಾಟಕೆ ನೀನೇ ಮೊದಲು 
ಗಂಡು : ರತಿ ಮನ್ಮಥರು ಕಂಡಿಲ್ಲ ಈ ಮಿಲನ 
ಹೆಣ್ಣು : ನನ್ನ ನಡುವನು ನೇವರಿಸು ನನ್ನ ಒಳಗೆ ಅವರಿಸು 
           ಎದೆ ಕಂಪಿಸಿ ಕಂಪಿಸಿ ಚುಂಬಿಸಿ ಸ್ವೀಕರಿಸು 
ಗಂಡು : ಸ್ಪರ್ಶವೋ ಹರ್ಷವೋ ಏನು ಹರ್ಷವೋ 
ಹೆಣ್ಣು : ಕಾಣೇ .. 
ಗಂಡು : ಸಗಮಪ ಪನಿದಪ ಸಾನಿಸಸ ನಿಸಗರಿ ಸನಿದಪ 
            ಪಮಪ ಪನಿದಮ ಮಗಗರಿ ರಿಸನಿ ಸಗಮಪ ರಿಸಾಸ ಗರಿಸ ಸನಿದಪ ಸ..  

ಹೆಣ್ಣು : ಸಹಿಸು ನನ್ನ ದಹಿಸು ನಿನ್ನ ಬೆಚ್ಚನೇ ಬಾಹುಗಳಲಿ 
ಗಂಡು : ಪ್ರಣಯದ ಪಂದ್ಯದಲ್ಲಿ ದೇವರೇ ಪನ್ನೀರು 
ಹೆಣ್ಣು : ಹೇ... ಕಳಿಸು ಬೇಗ ತಿಳಿಸು ಹೇಗೆ ನನ್ನಲಿ ನಿನ ಬಂಧಿಸಲಿ 
ಗಂಡು : ಒಂದೊಂದು ಅಂಗ ಒಂದೊಂದು ಹೂ ತೇರು 
ಹೆಣ್ಣು  : ಕಂಪನಕೆ ಕೊನೆ ಇಲ್ಲ ಕೊಸರಾಟಕೆ ದಣಿವಿಲ್ಲ 
ಗಂಡು : ಇದು ಇಂದ್ರನು ಕಾಣದ ರೋಮಾಂಚನವಮ್ಮಾ  ಧರ್ಮವೋ ಮರ್ಮವೋ ಕಾಣೇ .... 
ಹೆಣ್ಣು : ಚಂದಿರನ ಹಿಡಿದು ಮಂಚದಲಿ ಕಟ್ಟಿಡು ಮುಗಿಲನು ತಂದು ಮೆತ್ತೆಯ ಮಾಡಿಡು  
ಗಂಡು : ಉರಿಯೋ ಸೂರ್ಯನು ಕಡಲಲಿ ಬಚ್ಚಿಡು ಇರುಳ ನೀ ಉಳಿಸಲು ಧರಣಿಗೆ ಹೇಳಿದೆ 
ಹೆಣ್ಣು : ಚಂದಿರನ ಹಿಡಿದೇ ಮಂಚದಲಿ ಕಟ್ಟಿದೆ ಮುಗಿಲನು ಎಳೆದೆ ಮೆತ್ತೆಯ ಮಾಡಿದೆ 
--------------------------------------------------------------------------------------------------------------------

ವಾಲಿ (೨೦೦೧) - ಮೈ ಸೋಕಿದೆ ಬಿಸಿ ಏರಿದೆ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಅನುರಾಧ ಶ್ರೀರಾಮ್,  ರಾಜೇಶ ಕೃಷ್ಣನ್ 

ಗಂಡು : ಮೈ ಸೋಕಿದೆ ಬಿಸಿಯು ಏರಿದೆ ನಿನ್ನ ನೋಟಕೆ ಮನಸು ಕದ್ದಿದೆ 
            ನೂರಾರು ಹೆಣ್ಗಳು ನನ್ನ ಸುತ್ತು ಬಂದರು ಈ ಹೊಕ್ಕು ಮಿಂಚಿದವಳು ನೀನೊಬ್ಬಳೇ ಕಣೇ 
ಹೆಣ್ಣು : ಮೇಲೆ ಚಂದ್ರನಾ ತಂಪಿದೆ ಒಳಗೆ ಸೂರ್ಯನ ಉರಿ ಇದೆ 
          ಮಾತಿಲ್ಲದೆ ಹೇಗೆ ಮಾತಾಡಿದೆ ನೀ ಅಂದ ಕೂಡಲೇ ಅಂದ ಕೈ ಸೇರದು.. ಆಹಾ ಆಹಾ ಆಹಾ 
ಗಂಡು : ಮೇಲೆ ಚಂದ್ರನಾ ತಂಪಿದೆ ಒಳಗೆ ಸೂರ್ಯನ ಉರಿ ಇದೆ ಮಾತಾಡಿಸೋ ಮಂತ್ರ ನಿನ್ನಲ್ಲಿದೆ 
            ನಾ ಅಂದುಕೊಂಡರೆ ಅರಳೋ ಪ್ರೀತಿ ಇದು .. ಆಹಾ ಆಹಾ ಆಹಾ 
ಹೆಣ್ಣು : ಮೆಚ್ಚೋ ನದಿ ಎಲ್ಲ ಹರಿಯೋ ನೀರಾಗದು .. ಆಹಾ ಆಹಾ ಆಹಾ 

ಹೆಣ್ಣು : ಉಕ್ಕೋ ಉಕ್ಕೋ ಕಡಲು ನನ್ನೊಡನೆ ಈಜಾಡು ಬಾ 
          ಕಣ್ಣು ಕುಕ್ಕೋ ಮುಗಿಲು ಮೈ ಮುಗಿಲು ತೇಲಾಡು ಬಾ ಬಾ.. 
ಗಂಡು : ಮಿನುಗುತಾರೆ ಒಲವಿಗೆ ನಾವು ಮಿಂಚಿದೆ ಕಾವ್ಯ ನೀನಾದೆ ನಾನು 
            ಮೋಡಕ್ಕೂ ಶುರುವಾಯ್ತು ಬಾಯಾರಿಕೆ 
ಹೆಣ್ಣು : ನಾನ್ಯಾರು ಅಂತ ನೀನ್ ಕೇಳಲಿಲ್ಲ ಮೋಡದು ಊರ ಬೇರು ಕೇಳೋಲ್ಲ 
          ಆ ಬೆಗೆ ಗುರುತುಗಳು ಬೇಕಾಗಿಲ್ಲ ಆಹಾ..ಆಹಾ..ಆಹಾ 
          ಕಣ್ಣು ಮಿಂಚು ಮಿಂಚಿನಂತೆ ನಿನ್ನ ಕಣ್ಣು ಕುಕ್ಕಿದೆ 
          ಬಂದು ಹೋಗೋ ದಾರೀಲಿ ಹೂವೊಂದು ಬೀಸಿದೆ 
 ಗಂಡು : ಒಂದು ಹೂವ ಸ್ಪರ್ಶಕೆ ನಾ ಮುದುಡಿ ಹೋಗುವೆ 
             ಇಲ್ಲಿ ನಿನ್ನ ಸ್ಪರ್ಶಕೆ ನಾ ನಲುಗಿ ಹೋಗುವೆ 
ಹೆಣ್ಣು : ಮೇಲೆ ಚಂದ್ರನ ತಂಪಿದೆ...ಒಳಗೆ ಸೂರ್ಯನ ಉರಿ ಇದೆ 
          ಮಾತಿಲ್ಲದೆ ಹೇಗೆ ಮಾತಾಡಿದೆ ನೀ ಅಂದ ಕೂಡಲೇ ಅಂದ ಕೈ ಸೇರದು.. ಆಹಾ ಆಹಾ ಆಹಾ 
ಗಂಡು : ಮೇಲೆ ಚಂದ್ರನಾ ತಂಪಿದೆ ಒಳಗೆ ಸೂರ್ಯನ ಉರಿ ಇದೆ ಮಾತಾಡಿಸೋ ಮಂತ್ರ ನಿನ್ನಲ್ಲಿದೆ 
            ನಾ ಅಂದುಕೊಂಡರೆ ಅರಳೋ ಪ್ರೀತಿ ಇದು .. ಆಹಾ ಆಹಾ ಆಹಾ 
ಹೆಣ್ಣು : ಮೆಚ್ಚೋ ನದಿ ಎಲ್ಲ ಹರಿಯೋ ನೀರಾಗದು .. ಆಹಾ ಆಹಾ ಆಹಾ 
--------------------------------------------------------------------------------------------------------------------------

ವಾಲಿ (೨೦೦೧) - ದಿಲ್ ಮೇರಾ ದಿಲ್ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ ಗಾಯನ : ಗುರುಕಿರಣ, ಗಂಗಾ 

ಗಂಡು : ದಿಲ್ ಮೇರಾ ದಿಲ್ ಮೇರಾ ದಿಲ್ ಮೇರಾ ದಿಲ್ ಪ್ರೀತಿಯ ಬೆಲ್ ಹೊಡಿತು ಮೇರಾ ದಿಲ್ 
             ದಿಲ್ ಮೇರಾ ದಿಲ್ ಮೇರಾ ದಿಲ್ ಮೇರಾ ದಿಲ್ ಸಾವಿರ ಡ್ರೀಮ್ಸಲೀ ಹತ್ತು ಹೌಸ್ ಫುಲ್ 
ಕೋರಸ್ : ಶಬಶಬ ರಪಪ್ಪ   ಶಬಶಬ ರಪಪ್ಪ 
ಗಂಡು : ಒಂದು ಕೊಹಿನೂರು ಒಂದು ಕಣ್ಣು ಶಾಲಿಮಾರ್ 
            ಕಂಪ್ಯೂಟರೇ ಕಣ್ಣು ಹೊಡೆಯೋ ಕಾಮನ..ಕಾಮನಬಿಲ್ಲು 
           ಬ್ಯೂಟಿಗೆ ಒಬ್ಬಳೇ ಮೊನಾಲಿಸಾ ಹಾರ್ಟಿಗೆ ಬಂದರೆ ರಾಣಿ ವಾಸಾ.. ವಾವ್ 
   
ಗಂಡು : ನಿನ್ನ ಲಿಪ್ಸು ನಿನ್ ಲಿಪ್ಸನ್ ಅಪ್ಪಲು ಲಿಪಸ್ಟಿಕಗಳು ಕಾಯುತಿವೆ ಸುತ್ತಲೂ 
            ನನ್ನ ಲಿಪ್ಸಗಳು ಕ್ಯೂನಲ್ಲಿದೆ ಗೊತ್ತಾ ಸುಂದರಿ 
           ನಿನ್ನ ಈ ಬಾಡಿಗೆ ಸೆಂಟು ಹಾಕಿ  ಸೆಂಟು ಸ್ಪ್ರೇ ನಗುತಿದೆ ಟೆಂಟು ಹಾಕಿ 
ಹೆಣ್ಣು : ನಿನ್ನ ಮುಖ ಕಂಡರೆ ಸ್ಟಾರ್ಸಿಗೂ ಸ್ಟಾರ್ ಕಣೆ 
           ನಿನ್ನ ಮೈ ಸೋಕಲು ಗಾಳಿಗೂ ಪ್ಯಾರ್ ಕಣೋ 
ಗಂಡು : ಪ್ರೀತಿಗೆ ನೀನು ಕೊಲಂಬಸ್ ಹೃದಯ ಒಂದು ಗೋಲ್ ಗುಂಬಜ್ 
            ಐಶ್ವರ್ಯನು ಲಾರದತ್ತನು ರಿಮಿಕ್ಸು ಮಾಡಿದ್ರೆ ನೀನು  
            ಬ್ಯೂಟಿಗೇ ಒಬ್ಬಳೇ ಮೊನೋಲಿಸಾ ಹಾರ್ಟಿಗೆ ಬಂದರೆ ರಾಣಿ ವಾಸ .. ವಾವ್ 

ಗಂಡು : ಜಾಂಗಿಂಗ್ ನೀ ಪಾರ್ಕಿಗೆ ಬಂದರೆ ಹೂವಂಥ ಅಂಗಾಗ ಕಂಡರೆ 
            ಎಲ್ಲ ಹೂಗಳು ನಾಚಿ ಬಾಗುವವು ಸುಂದರೀ .. 
            ಸ್ವಿಮಿಂಗಿಗೆ ನೀ ನೀರಿಗೆ ಬಿದ್ದರೆ ಹನಿ ಹನಿ ನೀರು ಮೈಯ ಸೋಕಿದರೆ  
            ಮುತ್ತಿನ ಮಣಿಗಳಾಗುವವು ಓ ಸುಂದರೀ 
            ವಿಶ್ವದ ನಂಬರ್ ಒನ್ ಸುಂದರೀರು ನಿನ್ನ ಕಣ್ ಸನ್ನೆಗೆ ದೊಡ್ಡ ಜೀರೋ 
ಹೆಣ್ಣು : ಶೇಕ್ಷಪೀಯರ್ ಪೆನ್ನಿನಾ ಶಾಯಿಯು ನೀನ್ ಕಣೆ 
          ಕವಿ ಕಾಳಿದಾಸನಾ ಕಲ್ಪನೆಯು ನೀನ್ ಕಣೆ 
ಗಂಡು : ನಿನ್ನ ತಾಜ್ಜೆ ಮ್ಯೂಸಿಕ್ಕೂ ನೀನ್ ಸನ್ನೇ ಮ್ಯಾಜಿಕ್ಕೂ 
            ವಂಡರ್ಗೆ ಒಂದು ವರ್ಲ್ಡೂ ನೀನು ವರ್ಲ್ಡಿಗೊಂದು ವಂಡರ್ ನೀನು 
            ಬ್ಯೂಟಿಗೇ ಒಬ್ಬಳೇ ಮೊನೋಲಿಸಾ ಹಾರ್ಟಿಗೆ ಬಂದರೆ ರಾಣಿ ವಾಸ .. ವಾವ್ 
ಗಂಡು : ದಿಲ್ ಮೇರಾ ದಿಲ್ ಮೇರಾ ದಿಲ್ ಮೇರಾ ದಿಲ್ ಪ್ರೀತಿಯ ಬೆಲ್ ಹೊಡಿತು ಮೇರಾ ದಿಲ್ 
             ದಿಲ್ ಮೇರಾ ದಿಲ್ ಮೇರಾ ದಿಲ್ ಮೇರಾ ದಿಲ್ ಸಾವಿರ ಡ್ರೀಮ್ಸಲೀ ಹತ್ತು ಹೌಸ್ ಫುಲ್ 
ಕೋರಸ್ : ಶಬಶಬ ರಪಪ್ಪ   ಶಬಶಬ ರಪಪ್ಪ 
ಗಂಡು : ಒಂದು ಕೊಹಿನೂರು ಒಂದು ಕಣ್ಣು ಶಾಲಿಮಾರ್ 
            ಕಂಪ್ಯೂಟರೇ ಕಣ್ಣು ಹೊಡೆಯೋ ಕಾಮನ..ಕಾಮನಬಿಲ್ಲು 
           ಬ್ಯೂಟಿಗೆ ಒಬ್ಬಳೇ ಮೊನಾಲಿಸಾ ಹಾರ್ಟಿಗೆ ಬಂದರೆ ರಾಣಿ ವಾಸಾ.. ವಾವ್ 
----------------------------------------------------------------------------------------

No comments:

Post a Comment