780. ಜನ್ಮ ರಹಸ್ಯ (೧೯೭೨)



ಜನ್ಮರಹಸ್ಯ ಚಿತ್ರದ ಹಾಡುಗಳು 
  1. ಕಾವೇರಿ ತೀರದಲ್ಲಿ ಕಾಡು 
  2. ಸಾಹಸಗಾರ ಶಾಮಣ್ಣಾ 
  3. ಕಣ್ಣಂಚಲಿ ತುಟಿಮಿಂಚಲಿ 
  4. ಬೀಸೋ ಗಾಳಿ ಅಲೇ 
  5. ಧುಮ್ಮಾನ ಈಕೆ 
 ಜನ್ಮ ರಹಸ್ಯ  (೧೯೭೨) - ಕಾವೇರಿ ತೀರದಲ್ಲಿ ಒಂದು ಕಾಡು
ಸಾಹಿತ್ಯ: ಎಂ. ನರೇಂದ್ರ ಬಾಬು  ಸಂಗೀತ: ಎಂ. ರಂಗರಾವ್ ಗಾಯಕರು: ಎಸ್. ಜಾನಕಿ

ಲಾಲಾಲ  ಲಾಲಾಲ  ಲಾಲಾಲ
ಕಾವೇರಿ ತೀರದಲ್ಲಿ ಒಂದು ಕಾಡು ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ ಅದು ಎಲ್ಲ ಪ್ರಾಣಿಗಳು ನಲಿವ ದಿನ
ಕಾವೇರಿ ತೀರದಲ್ಲಿ ಒಂದು ಕಾಡು ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ ಅದು ಎಲ್ಲ ಪ್ರಾಣಿಗಳು ನಲಿವ ದಿನ

ಗಂಭೀರ ನಡೆ ಹಾಕಿ ಆನೆ ಬಂತು ಸೊಂಡಿಲಲ್ಲಿ ಬಾಳೆ ಗೊನೆಯನು ತಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು...
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು ಹಲಸು ಜೇನು ಕಲೆಸುತ ತಾನು
ಹಲಸು ಜೇನು ಕಲೆಸುತ ತಾನು ಕಾಣಿಕೆಯಾಗಿ ತಂತು ಅಹ್ಹಹ...
ಕಾವೇರಿ ತೀರದಲ್ಲಿ ಒಂದು ಕಾಡು ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ ಅದು ಎಲ್ಲ ಪ್ರಾಣಿಗಳು ನಲಿವ ದಿನ

ಬಣ್ಣ ಬಣ್ಣದ ಗರಿಗಳ ತೆರೆದು ನವಿಲು ಕುಣಿಯಿತು ಆಡಿ
ಬಣ್ಣ ಬಣ್ಣದ ಗರಿಗಳ ತೆರೆದು ನವಿಲು ಕುಣಿಯಿತು ಆಡಿ
ರಾಜನ ನೋಡಿ ಹರುಷದಿ ಕೂಡಿ...
ರಾಜನ ನೋಡಿ ಹರುಷದಿ ಕೂಡಿ ಕೋಗಿಲೆ ಮೆರೆಯಿತು ಹಾಡಿ
ಹಾಡನು ಕೇಳಿ ಸ್ಫೂರ್ತಿಯ ತಾಳಿ...
ಹಾಡನು ಕೇಳಿ ಸ್ಫೂರ್ತಿಯ ತಾಳಿ ಕತ್ತೆಯು ಹಾಡಿತು ಜೊತೆಗೂಡಿ.. ಅಹ್ಹಹ
ಕಾವೇರಿ ತೀರದಲ್ಲಿ ಒಂದು ಕಾಡು ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ ಅದು ಎಲ್ಲ ಪ್ರಾಣಿಗಳು ನಲಿವ ದಿನ
ಆಡೋಣ ಬನ್ನಿ ಆಡೋಣ ಬನ್ನಿ ಅಪ್ಪಾಲೆ ತಿಪ್ಪಾಲೆ
ಹಾಕೋಣ ಬನ್ನಿ ಹಾಕೋಣ ಬನ್ನಿ ರಾಜಾಗೆ ಹೂಮಾಲೆ
ಕೋರುವೆವಿಂದು ದೇವರು ನಿನ್ನ ಸುಖವಾಗಿಡಲೆನುತ
ನ್ಯಾಯವ ನುಡಿದು ಕೀರುತಿ ಪಡೆದು ಬಾಳಲಿ ಎಂದೆನುತ
ನಗುನಗುತ ನಲಿನಲಿತ ಗೆಳೆಯರಿಗೆ ಸೈಎನುತ
ಸಾವಿರ ವರುಷ ಗೆಲ್ಲುತ ಹರುಷ ನೀನಿರು ಅನವರತ
ಲಲಲಲಲಲಲಲ...
------------------------------------------------------------------------------------------------------------------------

ಜನ್ಮ ರಹಸ್ಯ  (೧೯೭೨)
ಸಾಹಿತ್ಯ: ಆರ್.ಏನ್.ಜಯಗೋಪಾಲ್  ಸಂಗೀತ: ಎಂ. ರಂಗರಾವ್ ಗಾಯಕರು: ಪಿ.ಬಿ.ಶ್ರೀನಿವಾಸ ಎಸ್. ಜಾನಕಿ


ಹೆಣ್ಣು : ಬೀಸೋ ಗಾಳಿ ಅಲೆ ಹರಿವ ನೀರ ಅಲೆ
         ಹೇಳು ಏನೆಂದಿದೆ .. ಓ..ಇನಿಯಾ
ಗಂಡು : ಸುಖ ಸುಖ ಸುಖ ಸುಖ, ಪ್ರೇಮ ಕೈಗೂಡಲೂ... (ಓಯ್ ಓಯ್ ಓಯ್ ಓಯ್ )
            ಭೂಮಿಯೇ ಸ್ವರ್ಗವು ನೋಡೆಂದಿದೆ....
            ಬೀಸೋ ಗಾಳಿ ಅಲೆ ಹರಿವ ನೀರ ಅಲೆ
             ಹೇಳು ಏನೆಂದಿದೆ .. ಓ..ಗೆಳತೀ (ಸುಖ ಸುಖ ಸುಖ ಸುಖ,)

ಹೆಣ್ಣು : ನೋಡಲ್ಲಿ ಆ ಬಾನು ಬಾಚಿ ತಬ್ಬಿದೆ ಧರೆಯನ್ನೂ...
ಗಂಡು : ಮುಗಿಲಿಂದ ರವಿಕಿರಣ ಚುಂಬಿಸುತ್ತಿದೆ ಹೂವನ್ನು
ಹೆಣ್ಣು : ನೋಡಲ್ಲಿ ಆ ಬಾನು ಬಾಚಿ ತಬ್ಬಿದೆ ಧರೆಯನ್ನೂ...
ಗಂಡು : ಮುಗಿಲಿಂದ ರವಿಕಿರಣ ಚುಂಬಿಸುತ್ತಿದೆ ಹೂವನ್ನು
ಹೆಣ್ಣು : ಆಆಆ...      ಗಂಡು :   ಆಆಆ..
ಹೆಣ್ಣು : ಮನವು ನಗುತಿರಲು ಹೊಸ ಆಸೆ ಮೂಡಿರಲು
ಗಂಡು : ಜಗವೇ ಮರೆತಿರಲು ಬಳಿಯಲಿ ನೀನಿರಲು..
ಹೆಣ್ಣು : ಮನವು ನಗುತಿರಲು ಹೊಸ ಆಸೆ ಮೂಡಿರಲು
ಗಂಡು : ಜಗವೇ ಮರೆತಿರಲು ಬಳಿಯಲಿ ನೀನಿರಲು..
ಹೆಣ್ಣು : ಸುಖ ಸುಖ ಸುಖ ಸುಖ,

ಹೆಣ್ಣು : ಪ್ರಕೃತಿ ನಸುನಾಚಿ ಮಂಜು ತೆರೆ ಧರಿಸಿರಲು 
ಗಂಡು :  ಪುರುಷ ಬಳಿ ಬಂದು ಆ ತೆರೆಯ ಸರಿಸಿರಲು 
ಹೆಣ್ಣು : ಪ್ರಕೃತಿ ನಸುನಾಚಿ ಮಂಜು ತೆರೆ ಧರಿಸಿರಲು 
ಗಂಡು :  ಪುರುಷ ಬಳಿ ಬಂದು ಆ ತೆರೆಯ ಸರಿಸಿರಲು 
ಹೆಣ್ಣು : ಕಂಪನಾ ತಲ್ಲಣಾ ಕಂಪನಾ ತನುವಲೀ.. 
ಗಂಡು : ಅದೇ ಅದೇ ನನ್ನ ನಿನ್ನ ಬಳಿಗೆ ಸೆಳೆದು 
            ಮನವ ಬೆಸೆದು ಜೊತೆಮಾಡಿದೆ 
ಹೆಣ್ಣು : ಬೀಸೋ ಗಾಳಿ ಅಲೆ ಹರಿವ ನೀರ ಅಲೆ
         ಹೇಳು ಏನೆಂದಿದೆ .. ಓ..ಇನಿಯಾ (ಸುಖ ಸುಖ ಸುಖ ಸುಖ, )

ಗಂಡು : ಈಗೇನೋ ಹೊಸ ಕಾಂತಿ ತುಂಬಿ ಬಂದಿದೆ ಮೊಗದಲ್ಲಿ 
ಹೆಣ್ಣು : ಈ ನಿಮ್ಮ ಪ್ರತಿರೂಪ ಮೂಡಿನಿಂತಿದೆ ಮನದಲ್ಲಿ
ಗಂಡು : ಆಆಆ...      ಹೆಣ್ಣು :   ಆಆಆ..
ಗಂಡು :  ಜನುಮ ಜನುಮಗಳ  ಸಂಬಂಧ ನಡುವಿರಲು 
ಹೆಣ್ಣು : ಈ ನಿಮ್ಮ ಕಾಲ ಬಳಿ ಎಂದೆಂದೂ ನಾನಿರಲು ... 
ಗಂಡು :  ಜನುಮ ಜನುಮಗಳ  ಸಂಬಂಧ ನಡುವಿರಲು 
ಹೆಣ್ಣು : ಈ ನಿಮ್ಮ ಕಾಲ ಬಳಿ ಎಂದೆಂದೂ ನಾನಿರಲು ... 
ಹೆಣ್ಣು : ಸುಖ ಸುಖ    ಗಂಡು : ಸುಖ ಸುಖ
ಹೆಣ್ಣು : ಬೀಸೋ ಗಾಳಿ ಅಲೆ ಹರಿವ ನೀರ ಅಲೆ
ಗಂಡು : ಹೇಳು ಏನೆಂದಿದೆ .. ಓ..ಗೆಳತೀ
ಹೆಣ್ಣು : ಸುಖ ಸುಖ ಸುಖ ಸುಖ,
-------------------------------------------------------------------------------------------------------------------

ಜನ್ಮ ರಹಸ್ಯ  (೧೯೭೨)
ಸಾಹಿತ್ಯ:ಎಂ.ನರೇಂದ್ರ ಬಾಬು ಸಂಗೀತ:ಎಂ.ರಂಗರಾವ್ ಗಾಯನ: ಎಸ್. ಜಾನಕಿ, ಪಿ.ಬಿ.ಎಸ್, ಎಲ್.ಆರ್.ಈಶ್ವರಿ 

ಹೆಣ್ಣು : ಸಾಹಸಗಾರ ಶಾಮಣ್ಣ ಸೊಗಸುಗಾರ ಸೋಮಣ್ಣಾ
          ರಾಜ ಠೀವಿ ರಾಜಣ್ಣಾ ಯಾರಣ್ಣಾ ಹೆಸರ ಏನಣ್ಣಾ
          ಸಾಹಸಗಾರ ಶಾಮಣ್ಣ ಸೊಗಸುಗಾರ ಸೋಮಣ್ಣಾ
          ರಾಜ ಠೀವಿ ರಾಜಣ್ಣಾ ಯಾರಣ್ಣಾ ಹೆಸರ ಏನಣ್ಣಾ
          ಆಆಆಆ...

ಹೆಣ್ಣು : ನೋಡಲು ಮಾತ್ರ ಏನೂ ಅರಿಯದ ಎಮ್ಮೆ ತಮ್ಮಣ್ಣಾ .. ಓಓಓ...
          ಆಪತ್ತಿನಿಂದ ಕಾಪಾಡಬಲ್ಲಾ ಬೀದಿ ಬಸವಣ್ಣಾ ..ಆಆಆ...
          ನೋಡಲು ಮಾತ್ರ ಏನೂ ಅರಿಯದ ಎಮ್ಮೆ ತಮ್ಮಣ್ಣಾ
          ಆಪತ್ತಿನಿಂದ ಕಾಪಾಡಬಲ್ಲಾ ಬೀದಿ ಬಸವಣ್ಣಾ
          ಕೇಡಿಗಳಿಗೆ ದೊಡ್ಡ ಕೇಡಿಗಳಿಗೆ ಬುದ್ದಿ ಕಲಿಸೋ ರೌಡಿ ರಂಗಣ್ಣಾ 
          ಚೂರಿಯಲ್ಲಿ ಕಣ್ಣುಗಳಿಂದ ಕೊಲ್ಲುವ ಚೂರಿ ಚಿಕ್ಕಣ್ಣಾ... ಚೂರಿ ಚಿಕ್ಕಣ್ಣಾ
          ಸಾಹಸಗಾರ ಶಾಮಣ್ಣ ಸೊಗಸುಗಾರ ಸೋಮಣ್ಣಾ
          ರಾಜ ಠೀವಿ ರಾಜಣ್ಣಾ ಯಾರಣ್ಣಾ ಹೆಸರ ಏನಣ್ಣಾ
ಗಂಡು :ಓಓಓ.... ನವನಾಗರಿಕ ನವ ಬಾಲಿಕಾಮಣಿಗಳೇ
          ನೀವು ಚಿತ್ರ ವಿಚಿತ್ರ ಹೆಸರುಗಳ ಮಾತ್ರ ಬಲ್ಲಿರಾ
          ಬೀದಿ ಬಸವಣ್ಣನ ಅರಿತವರು ನೀವೂ
          ಜಗಜ್ಯೋತಿ ಬಸವಣ್ಣನ ಏನಾರ ಬಲ್ಲಿರಾ...
          ಅಪ್ ಟೂ ಡೇಟ್ ಅಮ್ಮಯ್ಯಾ ಕೋಪ ಬೇಡಾ ದಮ್ಮಯ್ಯಾ
         ಅಪ್ ಟೂ ಡೇಟ್ ಅಮ್ಮಯ್ಯಾ ಕೋಪ ಬೇಡಾ ದಮ್ಮಯ್ಯಾ
         ನಮ್ಮ ಹಿರಿಯರ ನೆನೆಬೇಕು ಕಲಿಬೇಕು ಅವರಲಿರಬೇಕು
         ಅಪ್ ಟೂ ಡೇಟ್ ಅಮ್ಮಯ್ಯಾ ಕೋಪ ಬೇಡಾ ದಮ್ಮಯ್ಯಾ
         ನಮ್ಮ ಹಿರಿಯರ ನೆನೆಬೇಕು ಕಲಿಬೇಕು ಅವರಲಿರಬೇಕು
         ಆಹಾಹ.... ಹುಹೂಂಹುಹೂಂಹುಹೂಂ..ಆಹಾಹ.... ಹುಹೂಂಹುಹೂಂಹುಹೂಂ.

ಹೆಣ್ಣು : ಕಾವೇರಿ ಹರಿಯುವ ನಾಡಿನ ಸಂಸ್ಕೃತಿ ನಾವೆಲ್ಲ ಮರೆತಿಲ್ಲಾ... ಓಓಓ
          ಕನ್ನಡ ಮಗನ.. ಈ ಕನ್ನಡ ಮಗನ ಸಾಹಸ ಕಂಡು ಹೆಮ್ಮೆ ನಮಗೆಲ್ಲಾ... ಓಓಓ
          ಕಾವೇರಿ ಹರಿಯುವ ನಾಡಿನ ಸಂಸ್ಕೃತಿ ನಾವೆಲ್ಲ ಮರೆತಿಲ್ಲಾ... ಓಓಓ
         ಕನ್ನಡ ಮಗನ.. ಈ ಕನ್ನಡ ಮಗನ ಸಾಹಸ ಕಂಡು ಹೆಮ್ಮೆ ನಮಗೆಲ್ಲಾ... ಓಓಓ
ಗಂಡು : ಮಾನ್ಯ ಮಾನ್ಯರು ಬಲು ಮಾನ್ಯ ಮಾನ್ಯರು ಹುಟ್ಟಿಹರಿಲ್ಲಿ ತಿಳಿಯದೇ ನಿಮಗೆಲ್ಲಾ
           ಸಾಮಾನ್ಯ ನಾನು ಅಂಥ ಹಿರಿತನ ನನ್ನಲ್ಲಿ ಏನಿಲ್ಲಾ ... ಈ ಹೊಗಳಿಕೆ ಬೇಕಿಲ್ಲಾ
ಎಲ್ಲರೂ : ಮಾತು ಇಲ್ಲಿಗೆ ಮುಗಿಸೋಣ ಕೋಪ ತಾಪ ನಿಲ್ಲಿಸೋಣ
             ಜಗಳವೆಲ್ಲಾ ಮರೆಯೋಣ ತಿಳಿಯೋಣ ಸ್ನೇಹ ಬೆಳೆಸೋಣ
ಗಂಡು : ಆಹಾಹ.... ಹೆಣ್ಣು :  ಹುಹೂಂಹುಹೂಂಹುಹೂಂ.
ಗಂಡು : ಆಹಾಹ.... ಹೆಣ್ಣು :  ಹುಹೂಂಹುಹೂಂಹುಹೂಂ.
-------------------------------------------------------------------------------------------------------------------------       
 ಜನ್ಮ ರಹಸ್ಯ  (೧೯೭೨) 
ಸಾಹಿತ್ಯ: ಎಂ. ನರೇಂದ್ರ ಬಾಬು  ಸಂಗೀತ: ಎಂ. ರಂಗರಾವ್ ಗಾಯಕರು: ಎಸ್. ಜಾನಕಿ

ಆಹಾಂ...  ಕಣ್ಣಂಚಲಿ ತುಟಿಮಿಂಚಲಿ ಕರೆಯೋಲೆ ನಾ ನೀಡುವೇ
ಮಧುಮಂಚದೇ ಓಲಾಡಿಸಿ ಹೊಸ ಲೋಕಕೆ ಒಯ್ಯುವೇ
ಕಣ್ಣಂಚಲಿ

ಸುಂದರ ಸಂಜೆಯಲ್ಲಿ  ಏಕಾಂತ ಕಾಣದಲ್ಲಿ
ಸುಂದರ ಸಂಜೆಯಲ್ಲಿ  ಏಕಾಂತ ಕಾಣದಲ್ಲಿ
ಏಕಾಂಗಿ ಬಾ ... ಬಾ...
ನೀ ನನ್ನ ಸಂಗದಲ್ಲಿ ಈ ತೋಳ ಬಾಳೆಯಲ್ಲಿ
ಜಗವ ಮರೆಯೇ ಬಾ....
ಎಂದೆಂದೂ ಮರೆಯದಾ ಹೊಸದೊಂದು ಅನುಭವ
ಕಾದಿದೆ ನಿಂಗಾಗಿ ಬಾ...
ಆಹಾಂ...  ಕಣ್ಣಂಚಲಿ ತುಟಿಮಿಂಚಲಿ ಕರೆಯೋಲೆ ನಾ ನೀಡುವೇ
ಮಧುಮಂಚದೇ ಓಲಾಡಿಸಿ ಹೊಸ ಲೋಕಕೆ ಒಯ್ಯುವೇ
ಕಣ್ಣಂಚಲಿ ಆಂ... ಆಂ

ಈ ನನ್ನ ಮೈಯ ಮಾಟ ಸೊಂಟದ ಬಳುಕಾಟ
ಈ ನನ್ನ ಮೈಯ ಮಾಟ ಸೊಂಟದ ಬಳುಕಾಟ
ಕಣ್ಣಿಗೆ ರಸದೂಟ....
ಮುದುಕರನ್ನೂ ಕೂಡಾ ಯುವಕರಾಗಿ ಮಾಡೋ
ಹರೆಯವೆಂಬ ಹೂದೋಟ...
ದಾಹವ ತೀರಿಸೇ ಸ್ನೇಹವ ಬೆಳೆಯಿಸೇ
ರಸಿಕ ನೀನೀಲ್ಲಿ ಬಾ...
ಕಣ್ಣಂಚಲಿ ತುಟಿಮಿಂಚಲಿ ಕರೆಯೋಲೆ ನಾ ನೀಡುವೇ
ಮಧುಮಂಚದೇ ಓಲಾಡಿಸಿ ಹೊಸ ಲೋಕಕೆ ಒಯ್ಯುವೇ
ಕಣ್ಣಂಚಲಿ...
-------------------------------------------------------------------------------------------------------------------------

ಜನ್ಮ ರಹಸ್ಯ  (೧೯೭೨) 
ಸಾಹಿತ್ಯ:ಆರ್.ಏನ್.ಜಯಗೋಪಾಲ್ ಸಂಗೀತ: ಎಂ. ರಂಗರಾವ್ ಗಾಯಕರು: ಎಲ್.ಆರ್.ಈಶ್ವರಿ 

ಓ..ಹ್ಹಹ ಹ್ಹಹ ಹ್ಹಹ
ದುಮ್ಮಾನ ಏಕೆ ಎಲ್ಲಾ ಬಲ್ಲೆ ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ ನಲ್ಲಾ ಹಹ್ಹಹ ಹ್ಹಹ ಹ್ಹಹ
ದುಮ್ಮಾನ ಏಕೆ ಎಲ್ಲಾ ಬಲ್ಲೆ ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ ನಲ್ಲಾ.. ಹ್ಹಹ ಹ್ಹಹ ಹ್ಹಹ

ಓ... ಓ.. ಓಓಓ... ಏಕಿಷ್ಟೂ ಬೆಂಕಿ ಮೈಯಲ್ಲಾ 
ಓ... ಓ... ಓಓಓ ಕೊಂದಲ್ಲಿ ನಿನ್ನ ತಪ್ಪಿಲ್ಲಾ 
ಹೊಂಚು ಎನಲ್ಲಿ ಮಂಕು ಹೆಣ್ಣಲ್ಲಿ 
ನಿನ್ನ ಕೈಯಲ್ಲೇ ಪ್ರಾಣ ಹೋಗಲಿ 
ಹೊಂಚು ಎನಲ್ಲಿ ಮಂಕು ಹೆಣ್ಣಲ್ಲಿ 
ನಿನ್ನ ಕೈಯಲ್ಲೇ ಪ್ರಾಣ ಹೋಗಲಿ..ಆಹ್  ಹ್ಹಹ ಹ್ಹಹ ಹ್ಹಹ  
ದುಮ್ಮಾನ ಏಕೆ ಎಲ್ಲಾ ಬಲ್ಲೆ ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ ನಲ್ಲಾ 

ಓ.. ಆಹ್ ಹ್ಹಹ ಹ್ಹಹ  ಅಂದದಾ ರೂಪಾ ಗಂಡಿಗೆ ತಾಪ
ನನ್ನದು ಮೋಹ ನಿನ್ನದು ದೇಹ
ನಂಬಿಕೆ ಬೇಡ ಕೊಲ್ಲು ಕೊಲ್ಲೀಗಾ
ನಿನ್ನದೇ ನ್ಯಾಯಾ ನಿನ್ನದೇ ನ್ಯಾಯಾ.. ಆಹ್  ಹ್ಹಹ ಹ್ಹಹ ಹ್ಹಹ
ದುಮ್ಮಾನ ಏಕೆ ಎಲ್ಲಾ ಬಲ್ಲೆ ಸಂದೇಹ ಬಂದ ಮೇಲೆ
ಇನ್ನೇಕೆ ಇಂದು ನಾಳೆ ನೀ ಕೊಲ್ಲು ನೀ ಕೊಲ್ಲು ನೀ ಕೊಲ್ಲು
ನಿನ್ನನ್ನು ಬಿಟ್ಟು ಜೀವ ನಿಲ್ಲದಲ್ಲಾ ನಲ್ಲಾ
ಆಹ್  ಹ್ಹಹ ಹ್ಹಹ ಹ್ಹಹ  ಆಹ್  ಹ್ಹಹ ಹ್ಹಹ ಹ್ಹಹ
--------------------------------------------------------------------------------------------------------------------------







No comments:

Post a Comment