783. ಮೂಗನ ಸೇಡು (೧೯೮೦)

ಮೂಗನ ಸೇಡು ಚಿತ್ರದ ಹಾಡುಗಳು 
  1. ಬಂಗಾರದ ಬೊಂಬೆಯೇ ಮಾತನಾಡೇ
  2. ಜಾಡಿಸಿ ಒದಿ ಅವನನೂ ಥೂ ಎಂದೂ ಊಗಿ 
  3. ಅಬ್ಬೊ ಎಂಥಾ ಮಾತು ಹೇಳಬುಟ್ಟಾ 
  4. ನಿಮಗಿರಲೀ ನಾಡು ನನಗಿರಲೀ ಕಾಡೂ 
ಮೂಗನ ಸೇಡು (೧೯೮೦) - ಬಂಗಾರದ ಬೊಂಬೆಯೇ ಮಾತನಾಡೇ
ಸಾಹಿತ್ಯ: ಚಿ. ಉದಯಶಂಕರ  ಸಂಗೀತ: ಸತ್ಯಂ  ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಹೆಣ್ಣು : ಬಂಗಾರದ ಬೊಂಬೆಯೇ ಮಾತನಾಡೇ
          ಬಂಗಾರದ ಬೊಂಬೆಯೇ ಮಾತನಾಡೇ ಸಿಂಗಾರಿಯ ಬಾಳು ಬೆಳದಿಂಗಳಾಯಿತು
ಗಂಡು : ಬಂಗಾರದ ಕೋಗಿಲೆ ನನ್ನ ಕಂಡು
           ಬಂಗಾರದ ಕೋಗಿಲೆ ನನ್ನ ಕಂಡು ಸಂಗಾತಿಯೆಂದಾಗ ಭೂವಿ ಸ್ವರ್ಗವಾಯಿತು
           ಬಂಗಾರದ ಕೋಗಿಲೆ...

ಹೆಣ್ಣು : ಕವಿಯಂತೆ ನೀನಂದ ಸವಿಯಾದ ಮಾತಿಂದ ಹೊಸದಾದ ಆನಂದ ನಾ ಕಂಡೆನು
           ಆಆಆ... ಕವಿಯಂತೆ ನೀನಂದ ಸವಿಯಾದ ಮಾತಿಂದ ಹೊಸದಾದ ಆನಂದ ನಾ ಕಂಡೆನು
ಗಂಡು : ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
            ಕಣ್ಣಲಿ ನಿನ್ನಂದ ತುಂಬಿ ನನ್ನಿಂದ ನುಡಿಸಲು ನಾನಿಂದು ಕವಿಯಾದೆನು
ಹೆಣ್ಣು :  ಬಂಗಾರದ ಬೊಂಬೆಯೇ ಮಾತನಾಡೇ ಸಿಂಗಾರಿಯ ಬಾಳು ಬೆಳದಿಂಗಳಾಯಿತು
          ಬಂಗಾರದ ಬೊಂಬೆಯೇ

ಗಂಡು : ಜೊತೆಯಾಗಿ ನಡೆದಾಗ ಹಿತವಾಗಿ ಸೆಳೆತಾಗ ಅನುರಾಗ ಹೊಸ ರಾಗ ಕೇಳೆಂದಿತು
ಹೆಣ್ಣು : ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
          ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ ಕಾಣೆನು ನಿನ್ನಲ್ಲಿ ಮನ ಸೋತಿತು
ಗಂಡು : ಬಂಗಾರದ (ಹುಂ ) ಕೋಗಿಲೆ ನನ್ನ ಕಂಡು (ಹ್ಹಹ್ಹಾ) ಸಂಗಾತಿಯೆಂದಾಗ ಭೂವಿ ಸ್ವರ್ಗವಾಯಿತು
ಇಬ್ಬರು : ಅಹ್ಹಹ್ಹಾ.. ಆಆಆ.. ಆಹ್ಹಾಹ್ಹಹ್ಹಾ ....
--------------------------------------------------------------------------------------------------------------------------

ಮೂಗನ ಸೇಡು (೧೯೮೦) - ನಿಮಗಿರಲೀ ನಾಡು ನನಗಿರಲೀ ಕಾಡೂ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಸತ್ಯಂ ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, 

ನಿಮಗಿರಲೀ ನಾಡು ನನಗಿರಲೀ ಈ ಕಾಡೂ
ಕಾಡಿನ ಮಹಿಮೆ ಬಲ್ಲೆ ಏನೂ ಕಾಡಿನ ಹಿರಿಮೆ ಬಲ್ಲೇ ನಾನೂ 
ಕಾಡಿನ ನಡುವೇ ಶಾಂತಿ ಕಾಣುವೇನೂ... 

ಊರಿನ ನಡುವೇ ಇರಲಾರದೇ ನೆಮ್ಮದಿಯನ್ನು ನಾ ಕಾಣದೇ 
ಮೃಗಗಳಿಗಿಂತ ಕಡೆಯಾಗದೇ ಬಾಳಲು ಬಯಸಿ ನಾ ಓಡಿದೆ 
ಕಾನನದಲಿ ಸ್ವಾರ್ಥವಿಲ್ಲ ಕಾನನದಲಿ ಮೋಸವಿಲ್ಲ 
ಕಾನನದಲಿ ಸ್ವಾರ್ಥವಿಲ್ಲ ಕಾನನದಲಿ ಮೋಸವಿಲ್ಲ 
ಊರಲ್ಲಿ ಕಾಣುವ ವಂಚನೆ ಇಲ್ಲಿಲ್ಲಾ... ಅದಕ್ಕೇ 
ನಿಮಗಿರಲೀ ನಾಡು ನನಗಿರಲೀ ಈ ಕಾಡೂ
ಕಾಡಿನ ಮಹಿಮೆ ಬಲ್ಲೆ ಏನೂ ಕಾಡಿನ ಹಿರಿಮೆ ಬಲ್ಲೇ ನಾನೂ
ಕಾಡಿನ ನಡುವೇ ಶಾಂತಿ ಕಾಣುವೇನೂ...

ಸರ್ಪವ ಕಂಡರೇ ದೂರವಾಗುವೇ ವ್ಯಾಘ್ರವ ಕಾಣಲೂ ಹೋರಾಡುವೇ
ನರಿಗಳು ಬಂದರೇ ಮರೆಯಾಗುವೇ ಮೊಸಳೆಯ ಕಂಡರೇ ನಾ ಓಡುವೇ 
ಹುಲಿಗಳೂ ಯಾರೋ ಊರಿನಲ್ಲಿ ನರಿಗಳು ಯಾರೋ ಮನುಜರಲ್ಲಿ 
ಹುಲಿಗಳೂ ಯಾರೋ ಊರಿನಲ್ಲಿ ನರಿಗಳು ಯಾರೋ ಮನುಜರಲ್ಲಿ 
ಅನುಭವ ಬಾರದೇ ಅರಿವುದು ಹೇಗಿಲ್ಲಿ...  ಅದಕ್ಕೇ .. 
ನಿಮಗಿರಲೀ ನಾಡು ನನಗಿರಲೀ ಈ ಕಾಡೂ
--------------------------------------------------------------------------------------------------------------------------

ಮೂಗನ ಸೇಡು (೧೯೮೦) - ಜಾಡಿಸಿ ಒದಿ ಅವರೇನೂ ಥೂ ಎಂದೂ ಊಗಿ 
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಸತ್ಯಂ ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, 

ಹ್ಹಹ್ಹಹ್ಹಹ್ಹಹ್ಹಾ.. ಹ್ಹಹ್ಹಹ್ಹಹ್ಹಹ್ಹಾ.. ಹೈಯ್ಯಾ...
ಹ್ಹಾ..  ಜಾಡಿಸಿ ಒದಿ..  ಆಹ್ಹಹ್ಹ್  ಅವರನು ಥೂ ಎಂದೂ ಉಗಿ..
ಆಹ್ಹಾ ನಿನ್ನ ಮೂಗನೆಂದರೇ ಮೂಢನೆಂದರೇ ಹೇ  ಥೂ ..
ಹ್ಹಾ..  ಜಾಡಿಸಿ ಒದಿ..  ಆಹ್ಹಹ್ಹ್  ಅವರನು ಥೂ ಎಂದೂ ಉಗಿ..
ಆಹ್ಹಾ ನಿನ್ನ ಮೂಗನೆಂದರೇ ಮೂಢನೆಂದರೇ ಹೇ  ಥೂ ..
ಹ್ಹಾ..  ಜಾಡಿಸಿ ಒದಿ..  ಆಹ್ಹಹ್ಹ್  ಅವರನು ಥೂ ಎಂದೂ ಉಗಿ.. ಯ್ಯಾ...

ಮಾತನಾಡುವರು ಏನೂ ಮಾಡಿದರು ಜಗಳ ಕದನ ಚಾಡಿ ಮೋಸ ದ್ರೋಹ ವಂಚನೇ ತಾನೇ
ಮಾತನಾಡುವರು ಏನೂ ಮಾಡಿದರು ಜಗಳ ಕದನ ಚಾಡಿ ಮೋಸ ದ್ರೋಹ ವಂಚನೇ ತಾನೇ
ಮಾತನಾಡದೇ ಎದುರಿಸೀ ನಿಂತೇ ಗಂಡು ನೀನೇ ... ನೀನೇ ..ಆಹ್ಹಹಾ ..
ಗಂಡು ನೀನೇ ... ನೀನೇ ..ಹೊಯ್
ಜಾಡಿಸಿ ಒದಿ ಒದಿ ಅವರನು ಥೂ ಎಂದೂ ಉಗಿ..  ಥೂ... ಥೂ

ಪೈರು ಬೆಳೆವುದು ಅನ್ನ ಕೊಡುವುದೂ ಮಾತು ಇಲ್ಲ ಕತೆಯು ಇಲ್ಲ ಮೌನವಾಗಿ ನಿಂತೇ 
ಪೈರು ಬೆಳೆವುದು ಅನ್ನ ಕೊಡುವುದೂ ಮಾತು ಇಲ್ಲ ಕತೆಯು ಇಲ್ಲ ಮೌನವಾಗಿ ನಿಂತೇ 
ಅರಳಿ ನಲಿಯುವ ಹೂವು ನುಡಿವುದೇ ಏಕೇ ಹೇಗೆ ಚಿಂತೆ..  ಆಹ್ಹಹಾ... 
ನಿನಗೇಕೆ ಹೀಗೆ ಚಿಂತೇ ಆಹಾ... 
ಜಾಡಿಸಿ ಒದಿ ಹ್ಹಹ್ಹಾ .. ಅವರನು ಥೂ ಎಂದೂ ಉಗಿ ಅಹ್ಹಹ್ಹಹ್ಹಾ ...

ಗಿರಿಯೂ ಮೌನವೂ ನದಿಯು ಮೌನವು ಸೂರ್ಯ ಚಂದ್ರ ತಾರೆ ಮೋಡ ಗ್ರಹಗಳೆಲ್ಲಾ ಮೌನ 
ಗಿರಿಯೂ ಮೌನವೂ ನದಿಯು ಮೌನವು ಸೂರ್ಯ ಚಂದ್ರ ತಾರೆ ಮೋಡ ಗ್ರಹಗಳೆಲ್ಲಾ ಮೌನ 
ಗುಡಿಯ ದೇವರೇ ಮಾತನಾಡನು  ಅಳದೇ  ನಡೆಯೋ ಮುಂದೇ 
ಹ್ಹಾ..  ನೀನಳದೇ ನಡೆಯೋ ಮುಂದೆ ಅಹ್ಹಹ್ಹ...  
ಜಾಡಿಸಿ ಒದಿ ಅಷ್ಟೇ ಅವರನು ಥೂ ಎಂದೂ ಉಗಿ .. ಅಹ್ಹಹ್ಹ
ನಿನ್ನ ಮೂಗನೆಂದರೇ ಮೂಢನೆಂದರೇ ಹೇ  ಥೂ ..
ಜಾಡಿಸಿ ಒದಿ ಹ್ಹಾ ಅವರನು ಥೂ ಎಂದೂ ಉಗಿ.. ಹೇ.. ಯ್ಯಾ ..
--------------------------------------------------------------------------------------------------------------------------

ಮೂಗನ ಸೇಡು (೧೯೮೦) - ಅಬ್ಬೊ.. ಎಂಥ ಮಾತು ಹೇಳಿ ಬಿಟ್ಟ
ಸಾಹಿತ್ಯ: ಚಿ. ಉದಯಶಂಕರ ಸಂಗೀತ: ಸತ್ಯಂ ಗಾಯಕರು: ಎಸ್. ಜಾನಕಿ

ಹೇ.. ಹ್ಹೂಂ... ಅಹ್ಹಹ್ಹ..ಅಬ್ಬೊ..
ಎಂಥ ಮಾತ ಹೇಳಿ ಬುಟ್ಟ ವೆಂಕಣ್ಣಸ್ವಾಮಿ ಬಂದು ಮಂಕಳಂತೇ ನಿಂತು ಬುಟ್ಟೆ ಬೆರಗಾಗಿ
ನಾ ಮಂಕಳಂತೇ ನಿಂತು ಬುಟ್ಟೆ ಬೆರಗಾಗಿ
ಓ.. ಎಂಥ ಮಾತ ಹೇಳಿ ಬುಟ್ಟ ವೆಂಕಣ್ಣಸ್ವಾಮಿ ಬಂದು ಮಂಕಳಂತೇ ನಿಂತುಬುಟ್ಟೆ ಬೆರಗಾಗಿ
ನಾ ಮಂಕಳಂತೇ ನಿಂತುಬುಟ್ಟೆ ಬೆರಗಾಗಿ 
ಹಿಗ್ಗಿನಿಂದ ನಾನು ಮೊಗ್ಗಿನಂತೆ ಆದೇ ಸುಗ್ಗಿ ಕಂಡ ಹಂಗೇ ನಾ ಹುಗ್ಗಿ ತಿಂದ ಹಂಗೇ 
ಹಿಗ್ಗಿ ಹಿಗ್ಗಿ ಹಿಗ್ಗ್ಗಿ ನಾನು ಹಿರೇಕಾಯಿ ಆಗೀ ಹೋದೇ... ಅಬ್ಬೊ..  
ಎಂಥ ಮಾತ ಹೇಳಿ ಬುಟ್ಟ ವೆಂಕಣ್ಣಸ್ವಾಮಿ ಬಂದು ಮಂಕಳಂತೇ ನಿಂತುಬುಟ್ಟೆ ಬೆರಗಾಗಿ
ನಾ ಮಂಕಳಂತೇ ನಿಂತುಬುಟ್ಟೆ ಬೆರಗಾಗಿ 

ಮಾರನಂತ ಮೋರೆ ಕಂಡ್ಯಾ ಅಹ್ಹ ಧೀರನಂಥ ನೋಟ ಕಂಡ್ಯಾ 
ಚಿಗುರು ಮೀಸೆ ಅಂದ ಕಂಡ್ಯಾ  ಈ ಮಾವ ನಿಂತ ಠೀವಿ ಕಂಡ್ಯಾ  
ಮಾರನಂತ ಮೋರೆ ಕಂಡ್ಯಾ...  ಅಹ್ಹ ಧೀರನಂಥ ನೋಟ ಕಂಡ್ಯಾ 
ಚಿಗುರು ಮೀಸೆ ಅಂದ ಕಂಡ್ಯಾ...   ಈ ಮಾವ ನಿಂತ ಠೀವಿ ಕಂಡ್ಯಾ  
ಕಂಡ್ಯಾ ಅನ್ನುತೇ ... ಭಲೇ ಭಲೇ .. ಅಹ್ಹಹ್ಹಹ್ಹ... 
ಬಣ್ಣ ಕೋಗಿಲೇ ಹಂಗೇ ಸಣ್ಣಾ ಎಮ್ಮೆ ಹಂಗೇ 
ಬಣ್ಣ ಕೋಗಿಲೇ ಹಂಗೇ ಸಣ್ಣಾ ಎಮ್ಮೆ ಹಂಗೇ 
ಗುಣದಲ್ಲಿ ಗೋಟಡಿಕೆ ಮಾತಲ್ಲಿ ಒಡಕ  ಮಡಿಕೇ.. ಅಬ್ಬೊ 
ಎಂಥ ಮಾತ ಹೇಳಿ ಬುಟ್ಟ ವೆಂಕಣ್ಣಸ್ವಾಮಿ ಬಂದು ಮಂಕಳಂತೇ ನಿಂತುಬುಟ್ಟೆ ಬೆರಗಾಗಿ
ನಾ ಮಂಕಳಂತೇ ನಿಂತುಬುಟ್ಟೆ ಬೆರಗಾಗಿ 

ಸೀತೆಗೆ ರಾಮ ಗಂಡ  ಸತ್ಯಭಾಮೆಗೇ ಕೃಷ್ಣ ಗಂಡ 
ಗಿರಿಜೆಗೇ ಶಿವನು ಗಂಡ ಈ ಎಮ್ಮೆಗೇ ಇವನಾ  ಗಂಡಾ.. 
ಅಲ್ಲಾ ಅನ್ನುತ್ತೇ .... ಭಲೇ ಭಲೇ ...  ಅಹ್ಹಹ್ಹಹ್ಹ.. 
ಬುಟ್ರೆ ಸಿಕ್ಕೋದಿಲ್ಲಾ ಕೆಟ್ರೆ ಯಾರೂ ಇಲ್ಲಾ 
ಬುಟ್ರೆ ಸಿಕ್ಕೋದಿಲ್ಲಾ ಕೆಟ್ರೆ ಯಾರೂ ಇಲ್ಲಾ 
ಈ ಮೂತಿ ನೋಡಯ್ಯಾ ಕೂತ್ಕೊಳ್ಳೇ ಏಳಯ್ಯಾ ಅಹ್ಹಹ್ಹಾ... 
ಎಂಥ ಗಂಡ ಸಿಕ್ಕಬಿಟ್ಟ ಮೂಗಯ್ಯ ಓಡಿ ಬಂದೂ ಮಂಕಳಂತೇ ನಿಂತುಬುಟ್ಟೆ ಬೆರಗಾಗಿ 
ನಾ ಮಂಕಳಂತೇ ನಿಂತುಬುಟ್ಟೆ ಬೆರಗಾಗಿ 
ಕಾಲಿನಿಂದ ಒದ್ದು ಕೈಗಳಿಂದ ಗುದ್ದೀ ಕಣ್ಣು ಕಣ್ಣು ಬಿಡಿಸಿ 
ಮಣ್ಣು ಮಣ್ಣು ಮುಕ್ಕಿಸಿ ಮುದ್ದೆ ಮುದ್ದೆ ಮುದ್ದೆ ಮಾಡಿ ಓಡಸೇ ಬಿಟ್ಟಾ ನಮ್ಮ ಭೂಪ ಅಬ್ಬೊ 
ಎಂಥ ಗಂಡ ಸಿಕ್ಕಬಿಟ್ಟ ಮೂಗಯ್ಯ ಓಡಿ ಬಂದೂ ಮಂಕಳಂತೇ ನಿಂತುಬುಟ್ಟೆ ಬೆರಗಾಗಿ 
ನಾ ಮಂಕಳಂತೇ ನಿಂತುಬುಟ್ಟೆ ಬೆರಗಾಗಿ 
--------------------------------------------------------------------------------------------------------------------------

No comments:

Post a Comment