784. ಆ ದಿನಗಳು (೨೦೦೭)



ಆ ದಿನಗಳು ಚಲನಚಿತ್ರದ ಹಾಡುಗಳು 
  1. ಸಿಹಿ ಗಾಳಿ.. ಸಿಹಿ ಗಾಳಿ
  2. ಆ ದಿನಗಳು.. ಪ್ರತಿ ಕ್ಷಣ ಹೃದಯದೊಳಗೆ (ಯುಗಳ ಗೀತೆ)
  3. ಆ ದಿನಗಳು.. ಪ್ರತಿ ಕ್ಷಣ ಹೃದಯದೊಳಗೆ

ಆ ದಿನಗಳು (೨೦೦೭) - ಸಿಹಿ ಗಾಳಿ.. ಸಿಹಿ ಗಾಳಿ
ಸಂಗೀತ: ಇಳಯರಾಜ  ಸಾಹಿತ್ಯ: ಕೆ. ಕಲ್ಯಾಣ್  ಗಾಯನ: ಇಳಯರಾಜ, ನಂದಿತ

ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು.. ಬರಿ ಮಾತು
ಇನ್ಯಾಕೆ ಪ್ರೀತಿಯಲಿ |೨|

ನೋಟ ಒಂದೆ ಸಾಕು
ದಿನವು ಬೆರೆಯಲೆ ಬೇಕು
ಪ್ರೇಮ ಅಮೃತದ ಗೀತೆ ಬರೆಯೋಣ ಬಾ!
ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು.. ಬರಿ ಮಾತು
ಇನ್ಯಾಕೆ ಪ್ರೀತಿಯಲಿ

ಬಾನಾಡಿಗೊಂದು ಸವಿ ಮಾತು ಕಲೆಸುವ
ಆ ವೀಣೆಗೊಂದು ಎದೆರಾಗ ತಿಳಿಸುವ

ನದಿಗಳಿಗೆ ಅಲೆಗಳಿಗೆ ಕುಣಿವ ಮನಸು ಕೊಡುವ
ಅರಳುತಿರೊ ಹೂಗಳಿಗೆ ಒಲವ ಸುಧೆಯ ಕೊಡುವ

ಬಾಳಿನ ಅರ್ಥವೆ ಪ್ರೇಮವೆಂಬುದಲ್ಲವೆ
ಪ್ರೇಮವೆ ಇಲ್ಲದೆ ನಾನು, ನೀನು ಯಾಕೆ?
ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು.. ಬರಿ ಮಾತು
ಇನ್ಯಾಕೆ ಪ್ರೀತಿಯಲಿ

ನೋಟ ಒಂದೆ ಸಾಕು
ದಿನವು ಬೆರೆಯಲೆ ಬೇಕು
ಪ್ರೇಮ ಅಮೃತದ ಗೀತೆ ಬರೆಯೋಣ ಬಾ!
ಸಿಹಿ ಗಾಳಿ.. ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
-------------------------------------------------------------------------------------------------------------------------

ಆ ದಿನಗಳು (೨೦೦೭) - ಆ ದಿನಗಳು.. ಪ್ರತಿ ಕ್ಷಣ ಹೃದಯದೊಳಗೆ
ಸಂಗೀತ: ಇಳಯರಾಜ  ಸಾಹಿತ್ಯ: ಡಿ. ಸುಮನ ಕಿತ್ತೂರ  ಗಾಯನ: ವಿಜಯ್ ಜೇಸುದಾಸ್, ನಂದಿತ 

ಆ ದಿನಗಳು.. ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ
ಗಾಳಿಯಲ್ಲಿ ಪ್ರೇಮ ಗೀತೆ ಬರೆದ ಸಂದೇಶವು
ಬಳಸಿ ಬಂದು ಹೇಳಲಿಲ್ಲವೆ ನನ್ನ ಈ ಸ್ನೇಹವು
ಪ್ರೀತಿಯ ಈ ಹಾದಿಯ ಏಕೆ ಬಿಟ್ಟು ಹೋದೆ!
ಆ ದಿನಗಳು.. ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ..

ದಿನ ದಿನ ಮುಖವನು ನೋಡಿ..
ಹೊಗಳುವ ಮಾತೆಲ್ಲಿ?
ಮುನಿಯುತ ಜಗಳವ ಆಡಿ..
ನಟಿಸಿದ ನಗುವೆಲ್ಲಿ?
ನನ್ನ ಕಲ್ಪನೆ ಎಲ್ಲೊ ನಿನ್ನ ಹುಡುಕಿ ಹೊಯ್ತು
ಆ ಶಿಲ್ಪದಲಿ ಕಂಡು ಮನಸು ಶಾಂತವಾಯ್ತು
ನೀನೆಲ್ಲೊ.. ನಾನೆಲ್ಲೊ ಇನ್ನು ತಾಳೆ ವಿರಹ ನೋವ
ಆ ದಿನಗಳು.. ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ!
-----------------------------------------------------------------------------------------------------------------------

ಆ ದಿನಗಳು (೨೦೦೭)
ಸಂಗೀತ: ಇಳಯರಾಜ  ಸಾಹಿತ್ಯ: ಡಿ. ಸುಮನ ಕಿತ್ತೂರ  ಗಾಯನ: ವಿಜಯ್ ಜೇಸುದಾಸ್


ಆ ದಿನಗಳು.. ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ
ಗಾಳಿಯಲ್ಲಿ ಪ್ರೇಮ ಗೀತೆ ಬರೆದ ಸಂದೇಶವು
ಬಳಸಿ ಬಂದು ಹೇಳಲಿಲ್ಲವೆ ನನ್ನ ಈ ಸ್ನೇಹವು
ಪ್ರೀತಿಯ ಈ ಹಾದಿಯ ಏಕೆ ಬಿಟ್ಟು ಹೋದೆ!
ಆ ದಿನಗಳು.. ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ..

ದಿನ ದಿನ ಮುಖವನು ನೋಡಿ..
ಹೊಗಳುವ ಮಾತೆಲ್ಲಿ?
ಮುನಿಯುತ ಜಗಳವ ಆಡಿ..
ನಟಿಸಿದ ನಗುವೆಲ್ಲಿ?
ನನ್ನ ಕಲ್ಪನೆ ಎಲ್ಲೊ ನಿನ್ನ ಹುಡುಕಿ ಹೊಯ್ತು
ಆ ಶಿಲ್ಪದಲಿ ಕಂಡು ಮನಸು ಶಾಂತವಾಯ್ತು
ನೀನೆಲ್ಲೊ.. ನಾನೆಲ್ಲೊ ಇನ್ನು ತಾಳೆ ವಿರಹ ನೋವ
ಆ ದಿನಗಳು..  ಪ್ರತಿ ಕ್ಷಣ ಹೃದಯದೊಳಗೆ
ಹಸಿರಾಗಿದೆ ಅದೆ, ಇದೆ ನನ್ನ ಬಿಡದೆ!
------------------------------------------------------------------------------------------------------------

No comments:

Post a Comment