785. ಇದು ಎಂಥ ಪ್ರೇಮವಯ್ಯ! (೧೯೯೯)


ಇದು ಎಂಥ ಪ್ರೇಮವಯ್ಯ ಚಿತ್ರದ ಹಾಡುಗಳು
  1. ನಿನ್ನ ಆಸೆಗಳೆ .. 
  2. ಏನೆನೊ ಕನಸು ಕಂಡಳು 
  3. ಬಂದಾಳೊ ಬಂದಾಳೊ 
  4. ಸೋನಿಯಾ ಓ ಸೋನಿಯಾ
  5. ಅಂದದ ಚಂದ್ರಮಂಚ 
  6. ಡಾಕ್ಟರು ಆದರೂನು ..
ಇದು ಎಂಥ ಪ್ರೇಮವಯ್ಯ! (೧೯೯೯) - ನಿನ್ನ ಆಸೆಗಳೆ ..
ಸಂಗೀತ: ಗುರುಕಿರಣ   ಸಾಹಿತ್ಯ: ಭರತ್ ಡಿ.  ಗಾಯನ: ಚಿತ್ರ ಕೆ.ಎಸ್, ಉನ್ನಿ ಕೃಷ್ಣನ್
 

ನಿನ್ನ ಆಸೆಗಳೆ .. 
ನನ್ನ ಕುಸುಮಗಳೇನು ಪ್ರೇಮದ ತೋಟದಲಿ.. 
ನಿನ್ನ ಕನಸುಗಳೆ ..
ನನ್ನ ಸೊಗಸುಗಳೇನೊ  ಭಾವದ ಲೋಕದಲಿ

ನಿನ್ನ ಕಣ್ಣಿನ ಕಾಂತಿಯ ತಾರೆಯ ಮೀರಿ
ಮಿಂಚಿದೆ ಚೆಲುವಲಿ!
ಓ ಓ ಓ.. ನಿನ್ನ ಆಸೆಗಳೆ ನನ್ನ ಕುಸುಮಗಳೇನೊ
ಪ್ರೇಮದ ತೋಟದಲಿ
ನಿನ್ನ ಕನಸುಗಳೆ .. ನನ್ನ ಸೊಗಸುಗಳೇನು
ಭಾವದ ಲೋಕದಲಿ!

ಸಾವಿರ ಜನರು ಸಾವಿರ ಹೇಳಲಿ ..
ಪ್ರೀತಿಯ ರಾಜನು ನೀನೇನೆ
ಯಾವುದೆ ನೋವು ಮನಸನು ಕಾಡಲಿ ..
ಮಾನಸ ರಾಣಿಯು ನೀನೇನೆ
ಈ ಸೆರೆ ಸುಖವು ತೋರದು ಎಲ್ಲು
ಬಾಳಿನ ಪಯಣದಿ!
ಓ ಓ ಓ.. ನಿನ್ನ ಆಸೆಗಳೆ
ನನ್ನ ಕುಸುಮಗಳೇನು
ಪ್ರೇಮದ ತೋಟದಲಿ!

ಜೀವಕೆ ಜೀವ ಮೀಸಲು ಮಾಡುವೆ..
ನಲ್ಮೆಯ ಬದುಕಲಿ ಒಂದಾಗಿ
ತೋಳಿನ ಹಾರ ಕೊರಳಿಗೆ ಹಾಕುವೆ ..
ನಿನ್ನಯ ಪ್ರೀತಿಯ ಹೂವಾಗಿ
ಪ್ರಾಯದ ಸವಿಗೆ ಚುಂಬನ ಚಂದ
ಹೃದಯದಿ ಬೆಸೆದಿರೆ!
ಓ ಓ ಓ.. ನಿನ್ನ ಆಸೆಗಳೆ ನನ್ನ ಕುಸುಮಗಳೇನೊ
ಪ್ರೇಮದ ತೋಟದಲಿ
ನಿನ್ನ ಕನಸುಗಳೆ .. ನನ್ನ ಸೊಗಸುಗಳೇನು
ಭಾವದ ಲೋಕದಲಿ!

ನಿನ್ನ ಕಣ್ಣಿನ ಕಾಂತಿಯ ತಾರೆಯ ಮೀರಿ
ಮಿಂಚಿದೆ ಚೆಲುವಲಿ!
ಓ ಓ ಓ.. ನಿನ್ನ ಆಸೆಗಳೆ ನನ್ನ ಕುಸುಮಗಳೇನು
ಪ್ರೇಮದ ತೋಟದಲಿ
ನಿನ್ನ ಕನಸುಗಳೆ .. ನನ್ನ ಸೊಗಸುಗಳೇನೊ
ಭಾವದ ಲೋಕದಲಿ
-----------------------------------------------------

ಇದು ಎಂಥ ಪ್ರೇಮವಯ್ಯ! (೧೯೯೯) - ಏನೇನೋ ಕನಸು
ಸಂಗೀತ: ಗುರುಕಿರಣ ಸಾಹಿತ್ಯ: ದೊಡ್ಡ ರಂಗೆಗೌಡ  ಗಾಯನ: ಡಾ!!ರಾಜಕುಮಾರ,

ಎನೇನೋ ಕಂಡ ಕನಸು ಕಂಡಳು
ಎನೇನೋ ಬಯಸಿ ಬಂದನೋ..
ಏನು ಮಾಯವೋ ಇದು‌ ಎಂಥ ಪ್ರೇಮವಯ್ಯಾ

ಹಾಡಿತು ಕೋಗಿಲೆ ಕುಹು ಕುಹು ರಾಗದಿ
ಚೈತ್ರಕೆ ಕಾಯದೆ ಕೋಗಿಲೆಯು
ಹುಣ್ಣಿಮೆ ಚಂದ್ರನ ಬಿಂಬಕೆ ಕಾಯದೆ
ಘಮ್ಮನೆ ಅರಳಿತು ನೈದಿಲೆಯು
ಪ್ರೀತಿಯ ಭಾವಕೆ ರೀತಿಯು ಎಲ್ಲಿದೆ ಸಮಯವು ಕಾಯುವುದೇ.
ಎನೇನೋ ಕಂಡ ಕನಸು ಕಂಡಳು
ಎನೇನೋ ಬಯಸಿ ಬಂದನೋ..
ಏನು ಮಾಯವೋ ಇದು‌ ಎಂಥ ಪ್ರೇಮವಯ್ಯಾ

ಭೃಂಗವ ಹಿಡಿಯುವ ಭ್ರಮೆಯಲಿ ಜೇಡವು
ಸಿಲುಕಿತು ತನ್ನದೇ ಜಾಲದಲಿ
ಸುಳ್ಳಿನ ಸುಳಿಯಲಿ ಸುಳಿ ಸುಳಿದಾಡುತ
ನಲುಗಿತು ಪ್ರೀತಿಯ ನೋವಿನಲಿ
ಪ್ರೀತಿಯ ಕಡಲಿನ ಆಳದ ಅಂತರ
ಸುಲಭದಿ ತಿಳಿಯುವುದೇ...
ಎನೇನೋ ಕಂಡ ಕನಸು ಕಂಡಳು
ಎನೇನೋ ಬಯಸಿ ಬಂದನೋ..
ಏನು ಮಾಯವೋ ಇದು‌ ಎಂಥ ಪ್ರೇಮವಯ್ಯಾ
-------------------------------------------------------

ಇದು ಎಂಥ ಪ್ರೇಮವಯ್ಯ (೧೯೯೯) - ಬಂದಾಳೋ ಬಂದಾಳೋ
ಸಂಗೀತ: ಗುರುಕಿರಣ ಸಾಹಿತ್ಯ: ದೊಡ್ಡರಂಗೆಗೌಡ. ಗಾಯನ: ನಂದಿತಾ, ಮಹಮ್ಮದ್ ನಂದಿನಿ

ಗಂಡು: ಬಂದಾಳೋ ಬಂದಾಳೋ ಆ ಜಿಂಕೆ ಕಣ್ಣೋಳು
            ತಂದಾಳೋ ತಂದಾಳೋ ಕಾಮನಬಿಲ್ಲು
         ಇವಳ್ ಕೆನ್ನೆಯೋ ಹಸಿ ಬೆಣ್ಣೆಯೋ
         ಇವಳ್ ಗಲ್ಲವೋ.. ಜೇನ್ ಬೆಲ್ಲವೋ.. ಹಾಯ್ ಹಾಯ್
ಹೆಣ್ಣು: ಬಂದಾನೋ ಬಂದಾನೋ ನೂರಾಸೇ ಕಣ್ಣೋನು

ಗಂಡು: ಕೊರಳಲಿ ಕೋಗಿಲೆ ಇನಿದನಿ ಕೂಗೈತೋ...
           ನಡೆಯಲಿ ಹಂಸದಾ ಪಲಕು ತೇಲೈತೋ...
ಹೆಣ್ಣು: ಇವನದೇ ಪ್ರೀತಿಗೆ ಬಯಕೆಯು ಕಾಡೈತೋ
           ಇವನಾ ತೆಕ್ಕೆಗೆ ಬೆಸುಗೆ ಹಾಕೈತೋ
ಗಂಡು: ಬಂದಾನೋ ಬಂದಾನೋ ನೂರಾಸೇ ಕಣ್ಣೋನು
ಹೆಣ್ಣು: ಕರೆದಾಯ್ತೋ ಹರೆಯಾ ಮಿಡಿದೈತೋ
           ಹೃದಯ ಹಗಲು ಇರುಳು
           ಬಂದಾನೋ ಬಂದಾನೋ ನೂರಾಸೇ ಕಣ್ಣನೋ

ಹೆಣ್ಣು: ಇವನಲಿ ಸ್ನೇಹದ ಚಿಲುಮೆಯ ಉಕೈತೋ
           ಇವನಾ ದಾಹದಾ ಕುಲುಮೆ ಕಾದೈತೋ
ಗಂಡು: ಇವಳಲಿ ಅಂದದಾ ಅಲೆಯದು ಕಲೆತೈತೋ
            ಇವಳಾ ಚೆಂದದಾ ನವಿಲು ಕುಣಿದೈತೋ
ಹೆಣ್ಣು: ಮೂಡೈತೋ ಕನಸು ಹಾಡೈತೋ ಮನಸು ದಿನವು ದಿನವು
ಗಂಡು: ಬಂದಾಳೋ ಬಂದಾಳೋ ಆ ಜಿಂಕೆ ಕಣ್ಣೋಳು   
ಹೆಣ್ಣು: ಬಂದಾನೋ ಬಂದಾನೋ ನೂರಾಸೇ ಕಣ್ಣನೋ
ಗಂಡು: ಇವಳ್ ಕೆನ್ನೆಯೋ ಹಸಿ ಬೆಣ್ಣೆಯೋ
-------------------------------------------------------

ಇದು ಎಂಥ ಪ್ರೇಮವಯ್ಯ! (೧೯೯೯) - ಸೋನಿಯಾ ಓ ಸೋನಿಯಾ
ಸಂಗೀತ: ಗುರುಕಿರಣ ಸಾಹಿತ್ಯ: ಭರತ್ ಡಿ. ಗಾಯನ: ಗುರುಕಿರಣ್, ಶಂಕರ ಶಾನಭಾಗ, ಅನುರಾಧ ಶ್ರೀರಾಮ್


ಹೆಣ್ಣು: ಸೋನಿಯಾ.. ಓ.. ಸೋನಿಯಾ ಚಲಿಸುವ ಐಸ್ ಕ್ರೀಂ
           ಹಾರ್ಟ್ ಕೊಡುವೆ ಪಾರ್ಟಿ ಕೊಡುವೆ ಎನ್ನುತ್ತಾಳೆ
           ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
           ಸೋನಿಯಾ...
           ನನ್ನ ಲೈಫಲ್ ಜೀನಿವಾ ಕುಲಕುವಾ ಸ್ವೀಟ್ ಡ್ರೀಮ್
           ಹಾರ್ಟ್ ಕೊಡುವೆ ಪಾರ್ಟಿ ಕೊಡುವೆ ಎನ್ನುತ್ತಾಳೆ
           ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
           ಸೋನಿಯಾ...
         
ಹೆಣ್ಣು: ಹಾರೋ ಹಕ್ಕಿ ನೋಡಿಯಾಯ್ತು ಈಗ ಏರೋಪ್ಲೇನ್
           ಟಾಂಗ್ ಹೋಯ್ತೂ.. ಗಾಡಿ ಹೋಯ್ತೂ
           ಈಗ ಇಲೆಕ್ಟ್ರಿಕಲ್ ಟ್ರೈನ
ಗಂಡು: ಪಾರಿವಾಳ ಕಾಲಾ ಹೋಗಿ ಫೋನಲೇ ಲವ್ ಗೇಮ್
            ಏನೇ ಆಗ್ಲೀ ಏನೇ ಹೋಗಲೀ ಪ್ರೀತಿ ಮಾತ್ರ ಸೇಮ್
ಹೆಣ್ಣು: ಭೂಮಿ ಕೂಡ ಪ್ರೇಮಿ ತಾನೇ ಎನ್ನುತ್ತಾಳೆ
           ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
           ಸೋನಿಯಾ...

ಗಂಡು: ಪ್ರೇಮ ವಿದ್ಯುತ ಸ್ಟಾರ್ಟು ಮಾಡೋ ಹಾರ್ಟೀ
           ಜನರೇಟರ್ ಕಣ್ಣಿನಲ್ಲಿ ಮ್ಯಾಚ ಮಾಡೋ ಬ್ರೈನೇ
           ಕಂಪ್ಯೂಟರ್ ಮೈ ಹಾರ್ಟ್ ಈಜ್ ಫಾರ್ ಯೂ...
ಹೆಣ್ಣು: ಎಲ್ಲ ಸ್ಟೋರಿಯಲ್ಲೂ ಉಂಟು ಪ್ರೇಮದಾ ಚಾಪ್ಟರ್
           ಹ್ಯಾಪಿ ಎಂಡಿಂಗ್ ಮಾಡಬೇಕು ಲವ್ ಸ್ಟೋರಿ ರೈಟರ್
ಗಂಡು: ಜ್ಯೂಲಿ ಅಲ್ಲ ಲಾಲಿ ಅಲ್ಲ ಲಾಲಿ ಪಾಪ ಪಾಪ್
           ಈ.. ಹುಡುಗಿ.. ಹುಡುಗಿ.. ಹುಡುಗಿ... ಹುಡುಗಿ
           ಸೋನಿಯಾ... 
-------------------------------------------------------

ಇದು ಎಂಥ ಪ್ರೇಮವಯ್ಯ! (೧೯೯೯) - ಅಂದದ ಚಂದ್ರ
ಸಂಗೀತ: ಗುರುಕಿರಣ ಸಾಹಿತ್ಯ: ಗೀತಪ್ರಿಯ. ಗಾಯನ: ರಾಜೇಶ,ಮಂಜುಳಾ ಗುರುರಾಜ್

ಹೆಣ್ಣು: ಅಂದದ ಚಂದ್ರ ಮಂಚ ಪ್ರೇಮಿಗೇ ಈ ಪ್ರಪಂಚ
          ಎಲ್ಲಾ ಮರೆತು ಸೇರುವಾ ..

ಹೆಣ್ಣು: ಕಣ್ಣು ಅಂಚು ತೆರೆದರೆ ಮಿಂಚು ಬೆರೆತರೆ ಸುಖಮಿಲನ
           ನೀಲಾಕಾಶ ತೇಲಾಡೋಣ ಶೃಂಗಾರ ಪಯಣ
ಗಂಡು: ಆಹಾ ತಾರೆ ತನುವಿಡಿ ತಾರೆ ಮಿನುಗುತ ಜಗವ ಮರೆ
           ಅಂಗಾಂಗ ಅನು ಪ್ರೇಮಾಲಾಪ ಉನ್ಮಾದ ಉಸಿರೇ...
ಹೆಣ್ಣು: ಬೆಸೆದು ಒಂದಾದ ಕೂಡಲೇ ಹೊಸದೇ ಲೋಕ ನಮಗೆ
           ವಿರಹವ ಸರಿಸುವ ಮಧುರ ಸಮಯವಿದೆ
           ಅಂದದ ಚಂದ್ರ ಮಂಚ ಪ್ರೇಮಿಗೇ ಈ ಪ್ರಪಂಚ
            ಎಲ್ಲಾ ಮರೆತು ಸೇರುವಾ ..

ಗಂಡು: ಮೆಲ್ಲಾ ಮೆಲ್ಲ ಕನಸಲಿ ಬಂದೆ ನೆನಪಿನ ಅಲೆಯೋಳಗೆ
            ನಲ್ಲಾ ನಲ್ಲೆ ಬೆರೆಯಲು ಇಲ್ಲಿ ಮರೆಯದು ಸವಿ ಘಳಿಗೆ
ಹೆಣ್ಣು: ಹೊಂಚಿ ಹೊಂಚಿ ಸೆಳೆಯುವೆ ನೀನು ಸರಸದ
         ವರಸೆಯಲಿ ಎಲ್ಲಾ ಮೇರೆ ದಾಟಿ ಸೂರೆ ಜೇನೋಟವಿರಲಿ
ಗಂಡು: ಜೊತೆಗೆ ನಾವಿಂದು ಸಾಗುವಾ ಸುಖದ ತೀರದೆಡಗೆ
           ಕನಸಲು ಮನಸಲು ಮನದ ಬಯಕೆ ಇದೆ
ಹೆಣ್ಣು: ಅಂದದ ಚಂದ್ರ ಮಂಚ ಪ್ರೇಮಿಗೇ ಈ ಪ್ರಪಂಚ
          ಎಲ್ಲಾ ಮರೆತು ಸೇರುವಾ ..
ಗಂಡು: ಅಂದದ ಚಂದ್ರ ಮಂಚ ಪ್ರೇಮಿಗೇ ಈ ಪ್ರಪಂಚ
          ಎಲ್ಲಾ ಮರೆತು ಸೇರುವಾ ..
-------------------------------------------------------

ಇದು ಎಂಥ ಪ್ರೇಮವಯ್ಯ! (೧೯೯೯)
ಸಂಗೀತ: ಸಾಹಿತ್ಯ: ಗುರುಕಿರಣ ಗಾಯನ: ಎಸ್.ಪಿ.ಬಿ

ಡಾಕ್ಟರ್ ಆದರೂನು...ವೇಸ್ಟೂ...
ಇಂಜಿನಿಯರ್ ಆದರೂನು ವೇಸ್ಟು
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು
ಲಕ್ಕಿದ್ರೇ ಮಾತ್ರ ಲಕ್ಷ ಸಿಗುವುದು ಆದಿಲ್ಲಾದಿದ್ರೇ ಭಿಕ್ಷೆ ಸಿಕ್ಕದು

ಎಸ್ ಎಸ್ ಎಲ್ ಸಿ ಫೈಲೇ ಆದರೂ
ಅಟೆಂಡರ್ ಆಗಿ ಬ್ಯಾಂಕಲ್ ಕೆಲಸ ಕೊಡುವರೂ...
ಹಗಲು ರಾತ್ರಿ ಓದಿದರೇನು ಪೋಸ್ಟ್‌ ಗ್ರ್ಯಾಜುಯೇಟ ಆದರೇನೂ
ಕೆಲಸವೆಲ್ಲೂ ಸಿಕ್ಕದೂ ದುಡ್ಡು ಕಾಸು ದಕ್ಕದು
ಡಾಕ್ಟರ್ ಆದರೂನು...ವೇಸ್ಟೂ...
ಇಂಜಿನಿಯರ್ ಆದರೂನು ವೇಸ್ಟು
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು
ಲಕ್ಕಿದ್ರೇ ಮಾತ್ರ ಲಕ್ಷ ಸಿಗುವುದು ಆದಿಲ್ಲಾದಿದ್ರೇ  ಭಿಕ್ಷೆ ಸಿಕ್ಕದು

ಕೈಲಿ ಕೆಸರು ಮಾಡಿದನಲ್ಲ ರೈತ ಡೈಲಿ ಮೊಸರ ನೋಡಲೇ ಇಲ್ಲ
ಅಯ್ಯೋ....
ಸುಖವು ಬೇಕೇ ಬೇಕು ಎನುತ ಮನುಷ್ಯ ಕಷ್ಟ ಪಡುವನಿಲ್ಲಿ
ಶಾಸ್ವತ ಲಕ್ಷ್ಮೀ ಒಲಿದು ಬಂದರೇ ಲವ್ ಮಿ ಲವ್ ಮಿ ಅಂದರೆ ಯಪ್ಪಾ...
ದುಡ್ಡು ಒಂದು ಇದ್ದರೆ ಇಲ್ಲಿ ಇಲ್ಲ ತೊಂದರೆ ಹಣದ ಬಳಿಗೆ ಬರುವುದು ಲಕ್ಕಿದ್ರೇ ಮಾತ್ರ ಲಕ್ಷ ಸಿಗುವುದು ಆದಿಲ್ಲಾದಿದ್ರೇ ಭಿಕ್ಷೆ ಸಿಕ್ಕದು
ಡಾಕ್ಟರ್ ಆದರೂನು...ವೇಸ್ಟೂ...
ಇಂಜಿನಿಯರ್ ಆದರೂನು ವೇಸ್ಟು
ಆಫೀಸರೇ ಆದರೂ ಆಫ್ರಿಕಾಕೆ ಹೋದರೂ
ವಿಧಿಯ ಬರಹ ತರಹ ನಡೆವುದು
ಲಕ್ಕಿದ್ರೇ ಮಾತ್ರ ಲಕ್ಷ ಸಿಗುವುದು ಆದಿಲ್ಲಾದಿದ್ರೇ ಬಿಕ್ಷೆ ಸಿಕ್ಕದು
------------------------------------------------------

No comments:

Post a Comment