791. ಕಲ್ಲರಳಿ ಹೂವಾಗಿ (೨೦೦೬)

ಕಲ್ಲರಳಿ ಹೂವಾಗಿ ಚಲನಚಿತ್ರದ ಹಾಡುಗಳು 
  1. ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ 
  2. ಬಾರೋ ತಿಂಗಳ ಮಾವ
  3. ಹಣತೆಯ ಅಡಿಯಲ್ಲೇ ಕತ್ತಲೆಯ ತವರು
  4. ನಿನ್ನ ನೆನಪಿನಲಿ ನನ್ನ ಉಸಿರಿರಲಿ
  5. ಈ ಭೂಮಿ ಮೇಲೆ  ನಾಡು ಈ ನಾಡಲೆಮ್ಮ 
  6. ವ್ಹಾಹ್ ವ್ಹಾಹ್ ಖಾನಾ 
  7. ನನ್ನ ನೆಚ್ಚಿನ ಕೋಟೆಯ 
  8. ದಯೆಯಿಲ್ಲದ ಧರ್ಮವು 
  9. ಅಕ್ಕ ಕೇಳವ್ವಾ 
  10. ಅಲೀಮೊಲ ಅಲೀಮೊಲ 
  11. ಮೈಸೂರು ದೇಶ 
  12. ಸಂಪಿಗೆ ಸಿದ್ದೇಶ 
ಕಲ್ಲರಳಿ ಹೂವಾಗಿ (೨೦೦೬) - ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ಹೇಮಂತ್ ಕುಮಾರ್ ಮತ್ತು ಸಂಗಡಿಗರು

ಕೊಟ್ರವ್ವ ಊಹುಂ   ಎಲ್ಲವ್ವ ಊಹುಂ   ಕನಕವ್ವ ಊಹುಂ
ಲಚ್ಮವ್ವ ಊಹುಂ     ಗಂಗವ್ವ ಊಹುಂ  ಗೌರವ್ವ ಊಹುಂ
ಯಾರಪ್ಪೋ ರತ್ನ..

ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ ಸೊಗಡಿನ ಮಣ್ಣಿನ ಮಗಳಾಗಿ
ಭಾಗ್ಯದ ಬಾಳಿನ ಬಳೆಗಾಗಿ ಘಲ್ಲೆಂದಳು ಎದೆಯಲಿ ಪದವಾಗಿ
ಕಲ್ಲರಳಿ ಹೂವಾಗಿ ಹೂವರಳಿ ಹೆಣ್ಣಾಗಿ ಸೊಗಡಿನ ಮಣ್ಣಿನ ಮಗಳಾಗಿ
ಅರಿಶಿನ ಕುಂಕುಮ ಸಿರಿಗಾಗಿ ಝುಮ್ಮೆಂದಳು ಎದೆಯಲಿ ಪದವಾಗಿ
ಕಲ್ಲರಳಿ ಹೂವಾಗಿ  ಹೂವರಳಿ ಹೆಣ್ಣಾಗೀ!

ಈ.. ಕಾಡಿಗೆ ಕಣ್ಣೊಳ ಕಿರುಗೆಜ್ಜೆ ದನಿಯ
ಬೆನ್ಹತ್ತಿದೆ ನನ್ನ ಪಂಚ್ಚೇರು ಜೀವ
ಪಂಚ್ಚೇರು ರಾಗಿ.. ಆಮೇಲೆ?  ಪಂಚ್ಚೇರು ಅಕ್ಕಿ... ಹಾ!
ಓ.. ಆ ದಿಬ್ಬ ಈ ದಿಬ್ಬ ಸುತ್ತೋಳ ಸಂಘ
ಜೀ ಕಾಡಿದೆ ನನ್ನ ಅರೆ ಪಾವು ಗುಂಡಿಗೆ
ನಿನಗೊಂದು ಕೋಟೆ.. ಕಟ್ಟುವೆನು ನಾನು
ರಾಣಿಯಾಗಿ ನನ್ನ.. ಪಾಲಿಸುವೆ ಏನು?
ನಿನಗೆ ನನ್ ಎದೆಗೆ ಅಂತಃಪುರ
ಕಲ್ಲರಳಿ.. ಹೂವಾಗಿ  ಹೂವರಳಿ.. ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಅಳಿಯದ ಹಚ್ಚೆಯ ಸುಖಕಾಗಿ
ಅಚ್ಚಾದಳು ಎದೆಯಲಿ ಪದವಾಗೀ!
ಕಲ್ಲರಳಿ ಹೂವಾಗಿ  ಹೂವರಳಿ ಹೆಣ್ಣಾಗೀ!

ಓ.. ಹೊಂದೇರ ಮೇಲೇರಿ ದುರ್ಗಾದ ಸೂರ್ಯ
ಮುಚ್ಚಿಟ್ಟ ರತ್ನನ ತೋರಿತ್ತ ನನಗೆ
ಈ.. ರತ್ನಕ್ಕೆ ಚಿನ್ನದ ಕುಂದಣವಾಗೆ
ತರಾಸು ತಟ್ಟೇಲಿ ನನ್ನಿಟ್ಟ ಕೊನೆಗೆ
ನಿನ್ನ ನೆನೆದೆನಗೆ.. ಬಿಸಿಲಲು ಕನಸೆ
ನೀನು ಬಳುಕಾಡಿ.. ತೂಗುತಿದೆ ಪರಿಸೆ
ನಿನ್ನ ಅಂದಕ್ಕೆ ಅರಸಾದೆ ನಾ!
ಕಲ್ಲರಳಿ.. ಹೂವಾಗಿ  ಹೂವರಳಿ.. ಹೆಣ್ಣಾಗಿ
ಸೊಗಡಿನ ಮಣ್ಣಿನ ಮಗಳಾಗಿ
ಮಾನಸದೇಸಿ ವಧುವಾಗಿ
ಒಂದಾದಳು ಎದೆಯಲಿ ಪದವಾಗೀ!
ಕಲ್ಲರಳಿ ಹೂವಾಗಿ  ಹೂವರಳಿ ಹೆಣ್ಣಾಗೀ!
------------------------------------------------------------------------------------------------------------------------

ಕಲ್ಲರಳಿ ಹೂವಾಗಿ (೨೦೦೬) - ಬಾರೋ ತಿಂಗಳ ಮಾವ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ಕುನಾಲ್ ಗಾಂಜಾವಾಲ

ಬಾರಪ್ಪ ಓ ಬೆಳ್ಳಿ ದೀಪ  ತೇಲಪ್ಪ ನಮ್ಮೂರಲಿ ಸ್ವಲ್ಪ
ತೋರಪ್ಪ ನಿನ್ನ ತಂಪಿನ ರೂಪ  ತಣಿಸಪ್ಪ ನಮ್ ಧರಣಿ ತಾಪ
ಓಡ್ ಬಾ ಓಡ್ ಬಾರೋ ತಿಂಗಳ ಮಾವ
ಓಡ್ ಬಾ ಓಡ್ ಬಾರೋ  ನಮ್ಮೂರಂದಾವ ನೋಡ್ ಬಾ ನೋಡ್ ಬಾರೋ

ಗಣಪನ ನೆತ್ತಿಗೆ ತಂಪನೆರೆದು ಹೋಗಪ್ಪ
ಬಸವನ ಹೊಟ್ಟೆಯ ತಣ್ಣಗಿಟ್ಟು ಹೋಗಪ್ಪ
ಜನಪದರ ಸ್ವಪ್ನಕ್ಕೆ ಶಿವನ ಕರುಣೆ ತುಂಬಪ್ಪ
ಧರೆಯಾಳೋ ದೊರೆಗಳ ಧರ್ಮವ ಕಾಯಪ್ಪ
ನೋಡಪ್ಪ ಓ ಬೆಳ್ಳಿ ದೀಪ  ತೇಲಪ್ಪ ನಮ್ಮೂರಲಿ ಸ್ವಲ್ಪ
ತೋರಪ್ಪ ನಿನ್ನ ತಂಪಿನ ರೂಪ ತಣಿಸಪ್ಪ ನಮ್ ಧರಣಿ ತಾಪ
ಓಡ್ ಬಾ ಓಡ್ ಬಾರೋ ತಿಂಗಳ ಮಾವ
ಓಡ್ ಬಾ ಓಡ್ ಬಾರೋ  ನಮ್ಮೂರಂದಾವ ನೋಡ್ ಬಾ ನೋಡ್ ಬಾರೋ

ನೋಡಪ್ಪ ಓ ಬೆಳ್ಳಿ ದೀಪ  ಮಕ್ಕಳು ಹಾಡಿ ದಣಿದರು ಸ್ವಲ್ಪ
ಇನ್ನು ಮುಂದೆ ನೀನು ಹಾಡು  ಅವರ ಹಾಡಲ್ಲೈತೀ ನಾಡು
ಸೂರ್ಯ ಇರೋವರೆಗೂ ತಿಂಗಳ ಮಾವ ನೀನೆ ಹಾಡಬೇಕು
ನಿನ್ನ ಬೆಳಕಲ್ಲಿ ಈ ಮಕ್ಕಳ ಪ್ರೀತಿ ಚೆಲ್ಲಬೇಕು
-------------------------------------------------------------------------------------------------------------------------

ಕಲ್ಲರಳಿ ಹೂವಾಗಿ (2006) - ಹಣತೆಯ ಅಡಿಯಲ್ಲೇ ಕತ್ತಲೆಯ ತವರು
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ಶಂಕರ ಮಹಾದೇವನ 

ಹಣತೆಯ ಅಡಿಯಲ್ಲೇ ಕತ್ತಲೆಯ ತವರು
ಇರುಳಿನ ಬೇರಲ್ಲೇ ಹೊಂಬೆಳಕಿನ ಚಿಗುರು
ಬೇಕು ಬೇಡ ನಡುವೆ ನೋಡ
ಕಲ್ಲರಳಿ ಹೂವಾಗಿ.. ಹೇ.. ಬಿಸ್ಮಿಲ್ಲಾಹಿ ರಹ್ಮಾನಿ ರಹೀಂ
ಹಣತೆಯ ಅಡಿಯಲ್ಲೇ ಕತ್ತಲೆಯ ತವರು
ಇರುಳಿನ ಬೇರಲ್ಲೇ ಹೊಂಬೆಳಕಿನ ಚಿಗುರು
ಬೇಕು ಬೇಡ ನಡುವೆ ನೋಡ
ಕಲ್ಲರಳಿ ಹೂವಾಗಿ.. ಹೇ..

ಹಾರಿ ಹಾರಿ ಕೇಳುತಿರುವುದೀ ಮನವು
ಮನಸಿನಂತೆ ಹಾರಲುಂಟೇ ದೇಹವು
ಬೇಡ ಎಂಬ ಕಡೆಗೇ ಬಾಳ ತವಕ
ಈ.. ಒಲವು ನಿಯಮ ಮುರಿಯೋದೇ ಅಣಕ
ನಿಯಮ ಬದುಕಿಗೋ, ಬದುಕೇ ನಿಯಮಕೋ ?
ಹಣತೆಯ ಅಡಿಯಲಿ ಕತ್ತಲೆಯ ತವರು
ಇರುಳಿನ ಬೇರಲಿ ಹೊಂಬೆಳಕಿನ ಚಿಗುರು
ಹಣತೆಯ ಅಡಿಯಲ್ಲೇ ಕತ್ತಲೆಯ ತವರು
ಇರುಳಿನ ಬೇರಲ್ಲೇ ಹೊಂಬೆಳಕಿನ ಚಿಗುರು
ಬೇಕು ಬೇಡ ನಡುವೆ ನೋಡ
ಕಲ್ಲರಳಿ ಹೂವಾಗಿ.. ಹೇ..ಬಿಸ್ಮಿಲ್ಲಾಹಿ ರಹ್ಮಾನಿ ರಹೀಂ

ಈ..ಮಾತಿಗಾಗಿ ಹುಟ್ಟಲಿಲ್ಲ ಪ್ರೇಮ
ಮಾತಿಗಿಂತ ತೀಕ್ಷ್ಣ ಕಣ್ಣ ಮಾತು
ಹೃದಯ ಹೃದಯ ಸೇರೋ ಮೌನ ದನಿಯ
ಆ.. ದೈವ ಮೆಚ್ಚಿ ನಗುವುದಂತೆ
ಒಲವೇ ದೈವಕೋ, ದೈವವೇ ಒಲವಿಗೋ ?
ಹಣತೆಯ ಅಡಿಯಲಿ ಕತ್ತಲೆಯ ತವರು
ಇರುಳಿನ ಬೇರಲಿ ಹೊಂಬೆಳಕಿನ ಚಿಗುರು
--------------------------------------------------------------------------------------------------------------------------

ಕಲ್ಲರಳಿ ಹೂವಾಗಿ (2006) - ನಿನ್ನ ನೆನಪಿನಲಿ ನನ್ನ ಉಸಿರಿರಲಿ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ರಾಜೇಶ ಕೃಷ್ಣ , ಚಿತ್ರಾ 

ನಿನ್ನ ನೆನಪಿನಲಿ ನನ್ನ ಉಸಿರಿರಲಿ ನೆನೆಪೇ ಬದುಕು ನಮಗೆ
ನಿನ್ನ ನೆನಪಿನಲಿ ನನ್ನ ಬದುಕಿರಲಿ ನೆನೆಪೇ ಬದುಕು ಕೊನೆಗೆ
ಮೊದಲ ಸ್ಪರ್ಶಗಳ ನೆನೆಯೊಣ ಬೆಟ್ಟಗಳಿಗೆ ಎದೆ ಬಿರಿಯೋಣ
ಬರಲಿ ವಿದಿ ಬರಲಿ ವಿದಿ ಬರಲಿ ನಮ್ಮೀ ನೆನೆಪಿನ ಲೋಕಕೆ ಕಾಲಿಡಲಿ ನೋಡೋಣ

ಏಳೇಳು ಸಾವಿರ ಸುತ್ತಿನ ಕೋಟೆ ಕಟ್ಟಿಕೊಳ್ಳುವ ಮನದ ಸುಮದ ಹಾಲ್ಗಗಳಿಂದ
ಸಾವಿಲ್ಲದ ನೆನಪುಗಳನ್ನು ಕೊನೆಯ ತನಕ ಆಳುವ ಹೃದಯ ನೆಡೆಸೋ ಓಡ್ಡೋಲಗದಿಂದ
ಖುದಾಕಿ ಕಸಮ್ ಪ್ಯಾರ್ ಪ್ಯಾರ್ ಹೀ ರಹ ||ನಿನ್ನ ನೆನಪಿನಲಿ ||

ಜಗವನ್ನೆ ಅಕ್ಕರೆಯಿಂದ ಕಾಣುತೀವಿ ನಾವು ಒಲವಾ ಗೆಲುವ ಕಾಲನೇನು ಬಲ್ಲ
ಕರಗದ ಚಂದಿರನಿರುವ ನಮ್ಮೆದೆಯ ಬಾನಲಿ ಕರಗುವ ಕಾಲನು ಕನಸನೇನು ಬಲ್ಲ
ದೂರ ಇದ್ದರು ಇದ್ದರೂ ಮನಸಿಗುಂಟು ನಂಟು
ಹೂಗಳೊಡನೆ ಮಾತಾಡೋಣ ಜಗದ ಅಣಕುಗಳಿಗೆ ಕಿವುಡಾಗೋಣ
ಬರಲಿ ವಿದಿ ಬರಲಿ ವಿದಿ ಬರಲಿ ನಮ್ಮೀ ನೆನೆಪಿನ ಲೋಕಕೆ ಕಾಲಿಡಲಿ ನೋಡೋಣ
-----------------------------------------------------------------------------------------------------------------------

ಕಲ್ಲರಳಿ ಹೂವಾಗಿ (2006) - ಈ ಭೂಮಿ ಮೇಲೆ  ನಾಡು ಈ ನಾಡಲೆಮ್ಮ
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ಹೇಮಂತ  ಕುಮಾರ 

ಭೂಮಿ ಈ ಭೂಮಿ ಮೇಲೆ  ನಾಡು ಈ ನಾಡಲೆಮ್ಮ
ಕೋಟೆ ಈ ಕೋಟೆಗೆ ನೀನೆ ತಾಯಿ ನವ ನವ ನವರಾತ್ರಿ
ಅಕ್ಕರೆಯ ಹಾಡ ತಂದಳು ದುರ್ಗೆ ದಿಗ್ ದಿಗ್ ದಿಗ್ ಥೈ ದಿಗ್ ದಿಗ್ ದಿಗ್ ಥೈ
ಉಚ್ಚಂಗವ್ವ ದಿಗ್ ದಿಗ್ ಥೈ ಏಕನಾಥಿ ದಿಗ್ ದಿಗ್ ಥೈ
ಅಮ್ಮನಕ್ಕರೆಯಿಂದ ನಾಡು ಈ ನಾಡಿನಕ್ಕರೆಯಿಂದ ನುಡಿಯು
ಈ ನುಡಿಯಕ್ಕರೆಯಿಂದ ಅರಿವು ಈ ಅರಿವೆನಕ್ಕರೆಯಿಂದ ಶಿವನು
ಆ ಶಿವನು ತಂದ ಅಕ್ಕರೆಯ ವನವೇ ಕಂಡ್ಯ ಗೆಳೆತನ
ಆ ಗೆಳೆಯರಿತ್ತ ಅಕ್ಕರೆಯ ಒಲವೆ ಕಂಡ್ಯ ಜೀವನ
ಜೀವನಕ್ಕೆ ನಲ್ಮೆಯ ಸಂಗಾತಿ ದಿಗ್ ಥೈ ಥೈಥೈ
ಸಂಗಾತಿಗೆ ಸಂಪಿಗೆ ಹೂವಂತೆ ದೀಗ್ ದೀಗ್ ದೀಗ್ ದೀಗ್ ಥೈ
ಭೂಮಿ ಈ ಭೂಮಿ ಮೇಲೆ ನಾಡು ಈ ನಾಡಲೆಮ್ಮ
ಕೋಟೆ ಈ ಕೋಟೆಗೆ ನೀನೆ ತಾಯಿ ದಿಗ್ ದಿಗ್ ದಿಗ್ ಥೈ ದಿಗ್ ದಿಗ್ ದಿಗ್ ಥೈ
ಉಚ್ಚಂಗವ್ವ ದಿಗ್ ದಿಗ್ ಥೈ ಏಕನಾಥಿ ದಿಗ್ ದಿಗ್ ಥೈ

ತಾಯ ಪಾದಕೆ ಇದು ಬಲೆ ಇಷ್ಟ ಆ ಪಾದ ಥೈ ಥೈ ಅಂದರೆ ಸುರಗಣ
ಆ ಸುರಗಣದ ಕೈಗಳು ಕೋಟಿ  ಆ ಕೋಟಿ ಆಯುಧ ಕುಣಿವವೋ ಎದ್ದು
ಹಾಆ ಇನ್ನು ಎದ್ದು ಹೊರಟರೆ ತಾಯಿ ರಕ್ಕಸರಿಗೆ ಯಮಘಂಡ
ಈ.... ಧರ್ಮದೊಟ್ಟೆ ಉರಿಸಿದರೆ ಕೇಳುತಾಳೆ ತಲೆದಂಡ
ಧರಣಿಗೆಲ್ಲ ಸಿಂಹದ ನಾಲಿಗೆಯ ದಿಗ್ ಥೈ ಥೈಥೈ
ಹಾಸಿ ಕೊಳೆವಳು ರಕ್ತದ ಮೈಲಿಗೆಯ ದೀಗ್ ದೀಗ್ ದೀಗ್ ದೀಗ್ ಥೈ
ಭೂಮಿ ಈ ಭೂಮಿ ಮೇಲೆ ನಾಡು ಈ ನಾಡಲೆಮ್ಮ
ಕೋಟೆ ಈ ಕೋಟೆಗೆ ನೀನೆ ತಾಯಿ ನವ ನವ ನವರಾತ್ರಿ
ಅಕ್ಕರೆಯ ಹಾಡ ತಂದಳು ದುರ್ಗೆ ದಿಗ್ ದಿಗ್ ದಿಗ್ ಥೈ ದಿಗ್ ದಿಗ್ ದಿಗ್ ಥೈ
ಉಚ್ಚಂಗವ್ವ ದಿಗ್ ದಿಗ್ ಥೈ ಏಕನಾಥಿ ದಿಗ್ ದಿಗ್ ಥೈ
--------------------------------------------------------------------------------------------

ಕಲ್ಲರಳಿ ಹೂವಾಗಿ (೨೦೦೬) - ವ್ಹಾಹ್ ವ್ಹಾಹ್ ಖಾನಾ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ಉದಿತ ನಾರಾಯಣ  ಮತ್ತು ಸಂಗಡಿಗರು

--------------------------------------------------------------------------------------------

ಕಲ್ಲರಳಿ ಹೂವಾಗಿ (೨೦೦೬) - ನನ್ನ ನೆಚ್ಚಿನ ಕೋಟೆಯ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ಕುನಾಲ್ ಗುಂಜಾವಾಲಾ, ಚಿತ್ರಾ  

--------------------------------------------------------------------------------------------

ಕಲ್ಲರಳಿ ಹೂವಾಗಿ (೨೦೦೬) - ದಯೆಯಿಲ್ಲದ ಧರ್ಮವು 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ಕೀರವಾಣಿ 

--------------------------------------------------------------------------------------------

ಕಲ್ಲರಳಿ ಹೂವಾಗಿ (೨೦೦೬) - ಅಕ್ಕ ಕೇಳವ್ವಾ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ನಂದಿತಾ 

--------------------------------------------------------------------------------------------

ಕಲ್ಲರಳಿ ಹೂವಾಗಿ (೨೦೦೬) - ಅಲೀಮೊಲ ಅಲೀಮೊಲ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ರಾಜೇಶ ಕೃಷ್ಣನ ಮತ್ತು ಸಂಗಡಿಗರು

--------------------------------------------------------------------------------------------

ಕಲ್ಲರಳಿ ಹೂವಾಗಿ (೨೦೦೬) - ಮೈಸೂರು ದೇಶ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ಜಯತೀರ್ಥ ಮೇವುಂಡಿ 

--------------------------------------------------------------------------------------------

ಕಲ್ಲರಳಿ ಹೂವಾಗಿ (೨೦೦೬) - ಸಂಪಿಗೆ ಸಿದ್ದೇಶ 
ಸಂಗೀತ ಮತ್ತು ಸಾಹಿತ್ಯ: ಹಂಸಲೇಖ  ಗಾಯನ: ಹೇಮಂತ್ ಕುಮಾರ್ ಮತ್ತು ಸಂಗಡಿಗರು

--------------------------------------------------------------------------------------------

No comments:

Post a Comment