ಕುಂಕುಮ ರಕ್ಷೇ ಚಿತ್ರದ ಹಾಡುಗಳು
- ನೀನು ಬಲ್ಲೇ ನಾನು ಬಲ್ಲೇ
- ಬಾಡದ ಹೂವಾಗು
- ತಾನೊಂದು ಬಗೆದರೇ ಮಾನವ
- ಹೇಗೆ ನುಡಿದೇ
- ಯಾವ ಬಯಕೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ ಗಾಯನ : ಎಸ್ಪಿ.ಬಿ.
ನೀನು ಬಲ್ಲೆ ನಾನು ಬಲ್ಲೆ ನಮ್ಮ ಅಂತರಂಗ
ನೀನು ಬಲ್ಲೆ ನಾನು ಬಲ್ಲೆ ನಮ್ಮ ಅಂತರಂಗ
ತುಟಿಗೆ ಬರದೆ ಇಂಗಿತೇಕೆ ನಮ್ಮ ಪ್ರಣಯ ಗಂಗಾ
ನೀನು ಬಲ್ಲೆ ನಾನು ಬಲ್ಲೆ ನಮ್ಮ ಅಂತರಂಗ...ಆಆಆ...
ಹೂವಿನಿಂದ ಹೃದಯದಲ್ಲಿ ನೂರು ಕತೆಯ ರಚಿಸಿದೆ
ಮುಳ್ಳಿನಿಂದ ಗೀರಿ ಗೀರಿ ಏಕೆ ಎಲ್ಲ ಅಳಿಸಿದೆ
ನೀನು ಬಲ್ಲೆ ನಾನು ಬಲ್ಲೆ ನಮ್ಮ ಅಂತರಂಗ...
ಚಿಂತೆಯೆಂಬ ಚಿತೆಯಲೆನ್ನ ಎದೆಯು ಉರಿದು ಹೋಗಲಿ
ಅದರ ಬೆಳಕು ನಿನ್ನ ಬಾಳ ಮನೆಗೆ ಜ್ಯೋತಿ ಆಗಲಿ
ನೀನು ಬಲ್ಲೆ ನಾನು ಬಲ್ಲೆ ನಮ್ಮ ಅಂತರಂಗ
ತುಟಿಗೆ ಬರದೆ ಇಂಗಿತೇಕೆ ನಮ್ಮ ಪ್ರಣಯ ಗಂಗಾ.. ಆಆಆ..
ನೀನು ಬಲ್ಲೆ ನಾನು ಬಲ್ಲೆ ನಮ್ಮ ಅಂತರಂಗ
--------------------------------------------------------------------------------------------------------------------------
ಕುಂಕುಮರಕ್ಷೆ (೧೯೭೭) - ಬಾಡದ ಹೂವಾಗೂ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ ಗಾಯನ : ವಾಣಿಜಯರಾಂ
ಹೆಣ್ಣು : ಬಾಡದ ಹೂವಾಗೂ ನಗೆಯ ಹೊನಲಾಗೂ
ಹರುಷದ ಕಡಲಲ್ಲಿ ನೀ ಎಂದೂ ಕರಗದ ನಿಧಿಯಾಗಿರೂ ಎಂದೂ
ಕರಗದ ನಿಧಿಯಾಗಿರೂ
ಬಾಡದ ಹೂವಾಗೂ ನಗೆಯ ಹೊನಲಾಗೂ
ಕೋರಸ್ : ಲಾಲಾ ಲಲಲಲ್ಲಾಲ್ಲಾ ಲಾಲಾ ಲಲಲಲ್ಲಾಲ್ಲಾ
ಹರುಷದ ಕಡಲಲ್ಲಿ ನೀ ಎಂದೂ ಕರಗದ ನಿಧಿಯಾಗಿರೂ ಎಂದೂ
ಕೋರಸ್ : ಕರಗದ ನಿಧಿಯಾಗಿರೂ
ಹೆಣ್ಣು : ನಗುವ ಮೊಗವ ದುಂಡು ಮಲ್ಲಿಗೇ ಹೊಳೆವ ತುಟಿಯ ಕೆಂಡ ಸಂಪಿಗೇ
ತಾಳೆಯ ಹೂವಂತೇ ಸೆಳೆವೆ ಸನಿಹಕೇ
ತಾಳೆಯ ಹೂವಂತೇ ಸೆಳೆವೆ ಸನಿಹಕೇ
ತಾಳೆಯ ಹೂವಂತೇ ಸೆಳೆವೆ ಸನಿಹಕೇ
ಮುದ್ದಾದ ಮಾತಿಂದ ಮನವ ಗೆಲುವೇ
ಬಾಡದ ಹೂವಾಗೂ ನಗೆಯ ಹೊನಲಾಗೂ
ಹರುಷದ ಕಡಲಲ್ಲಿ ನೀ ಎಂದೂ ಕರಗದ ನಿಧಿಯಾಗಿರೂ ಎಂದೂ
ಕೋರಸ್ : ಕರಗದ ನಿಧಿಯಾಗಿರೂ
ಹೆಣ್ಣು : ಜೇನ ಹೋಳೆಯ ಹರಿಸಿ ನೀನೂ ಜೊನ್ನ ಮಳೆಯ ತಂದೇ ಏನೋ
ಬಾಳುವ ಆಸೆಯ ಎದೆಯಲಿ ತುಂಬುತಾ
ಬಾಳುವ ಆಸೆಯ ಎದೆಯಲಿ ತುಂಬುತಾ
ಆನಂದ ನೀ ತಂದೂ ಚೇತನ ಕೋಡುವೇ.. ಹೂಂ
ಬಾಡದ ಹೂವಾಗೂ ನಗೆಯ ಹೊನಲಾಗೂ
ಹರುಷದ ಕಡಲಲ್ಲಿ ನೀ ಎಂದೂ ಕರಗದ ನಿಧಿಯಾಗಿರೂ ಎಂದೂ
ಕೋರಸ್ : ಕರಗದ ನಿಧಿಯಾಗಿರೂ
ಕೋರಸ್ : ಲಾಲಾ ಲಲಲಲ್ಲಾಲ್ಲಾ ಲಾಲಾ ಲಲಲಲ್ಲಾಲ್ಲಾ
ಹೆಣ್ಣು : ರವಿಯ ತಳ್ಳಿ ಬಾನಿನ ಆಚೆಗೇ ಶಶಿಯು ಬಂದು ನೋಡುವ ಆಸೆಗೇ
ಸಂಧ್ಯಾ ದೇವಿಯ ಹವಳದ ಆರತೀ
ಸಂಧ್ಯಾ ದೇವಿಯ ಹವಳದ ಆರತೀ
ಚಿನ್ನಾರೀ.. ಬಂಗಾರೀ... ಮೀಸಲೂ ನಿನಗೇ
ಬಾಡದ ಹೂವಾಗೂ ನಗೆಯ ಹೊನಲಾಗೂ
ಹರುಷದ ಕಡಲಲ್ಲಿ ನೀ ಎಂದೂ ಕರಗದ ನಿಧಿಯಾಗಿರೂ ಎಂದೂ
ಕೋರಸ್ : ಕರಗದ ನಿಧಿಯಾಗಿರೂ (ಎಂದೂ) ಬಾಡದ ಹೂವಾಗಿರೂ
(ಎಂದೂ) ಬಾಡದ ಹೂವಾಗಿರೂ
ಹೆಣ್ಣು : ಎಂದೂ ಬಾಡದ ಹೂವಾಗಿರೂ ಕಂದಾ ಬಾಡದ ಹೂವಾಗಿರೂ ಕಂದ
ಬಾಡದ ಹೂವಾಗಿರೂ ಕಂದಾ
--------------------------------------------------------------------------------------------------------------------------
ಕುಂಕುಮರಕ್ಷೆ (೧೯೭೭) - ತಾನೊಂದು ನೆನೆದರೇ ಮಾನವ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ , ಗಾಯನ : ಎಸ್.ಪಿ.ಬಿ.
ತಾನೊಂದು ನೆನೆದರೇ ಮಾನವ ಬೇರೊಂದು ಬಗೆವುದೂ ದೈವ
ಆ ದೇವನ ಎದುರಿಸಿ ಜೀವಾ ಪಡೆವುದೂ ನೂರೆಂಟೂ ನೋವಾ
ಹೂವಾದ ಮೇಲೆ ಹಿಗ್ಗಿ ಮೊಗ್ಗಾಗಿ ಬಂದಿದೆ ಕುಗ್ಗಿ
ಹೂವಾದ ಮೇಲೆ ಹಿಗ್ಗಿ ಮೊಗ್ಗಾಗಿ ಬಂದಿದೆ ಕುಗ್ಗಿ
ಓರ್ವನೇ ನೆಲೆಸಿರುವಾಗ ಚಿಂತೆಯ ಇರುಳೇ ಇಲ್ಲಾ
ಓರ್ವನೇ ನೆಲೆಸಿರುವಾಗ ಚಿಂತೆಯ ಇರುಳೇ ಇಲ್ಲಾ
--------------------------------------------------------------------------------------------------------------------------
ಸಂಗೀತ : ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ , ಗಾಯನ : ಎಸ್.ಪಿ.ಬಿ.
ತಾನೊಂದು ನೆನೆದರೇ ಮಾನವ ಬೇರೊಂದು ಬಗೆವುದೂ ದೈವ
ಆ ದೇವನ ಎದುರಿಸಿ ಜೀವಾ ಪಡೆವುದೂ ನೂರೆಂಟೂ ನೋವಾ
ಹೂವಾದ ಮೇಲೆ ಹಿಗ್ಗಿ ಮೊಗ್ಗಾಗಿ ಬಂದಿದೆ ಕುಗ್ಗಿ
ಹೂವಾದ ಮೇಲೆ ಹಿಗ್ಗಿ ಮೊಗ್ಗಾಗಿ ಬಂದಿದೆ ಕುಗ್ಗಿ
ನೀ ನೆನದಂತೆ ನಡೆದರೇ ಎಲ್ಲಾ ಆ ವಿಧಿಗೆಲ್ಲಿದೆ ಸುಗ್ಗಿ
ತಾನೊಂದು ನೆನೆದರೇ ಮಾನವ ಬೇರೊಂದು ಬಗೆವುದೂ ದೈವ
ಆ ದೇವನ ಎದುರಿಸಿ ಜೀವಾ ಪಡೆವುದೂ ನೂರೆಂಟೂ ನೋವಾ
ಆ ದೇವನ ಎದುರಿಸಿ ಜೀವಾ ಪಡೆವುದೂ ನೂರೆಂಟೂ ನೋವಾ
ಸಾಕಿದ ಬಾಗಿಲ ಹೃದಯ ಸಾಕಿದ ಭಾವಗಳ ಉದಯ ಆಆಆ...
ಸಾಕಿದ ಬಾಗಿಲ ಹೃದಯ ಸಾಕಿದ ಭಾವಗಳ ಉದಯ
ಹೊರುವರೂ ಹೋಗುವರಾರೋ ತೆರೆಯವರಾರೋ ಎದೆಯ.. ಅಹ್ಹಹ್ಹಹ್ಹ..
ತಾನೊಂದು ನೆನೆದರೇ ಮಾನವ ಬೇರೊಂದು ಬಗೆವುದೂ ದೈವ
ಆ ದೇವನ ಎದುರಿಸಿ ಜೀವಾ ಪಡೆವುದೂ ನೂರೆಂಟೂ ನೋವಾ
ಆ ದೇವನ ಎದುರಿಸಿ ಜೀವಾ ಪಡೆವುದೂ ನೂರೆಂಟೂ ನೋವಾ
ಓರ್ವನೇ ನೆಲೆಸಿರುವಾಗ ಚಿಂತೆಯ ಇರುಳೇ ಇಲ್ಲಾ
ಇನೋರ್ವನಲ್ಲಿಗೇ ಬರಲೂ ಶಾಂತಿಯ ನೆರಳೂ ಇಲ್ಲಾ
ತಾನೊಂದು ನೆನೆದರೇ ಮಾನವ ಬೇರೊಂದು ಬಗೆವುದೂ ದೈವ
ಆ ದೇವನ ಎದುರಿಸಿ ಜೀವಾ ಪಡೆವುದೂ ನೂರೆಂಟೂ ನೋವಾ
ಆ ದೇವನ ಎದುರಿಸಿ ಜೀವಾ ಪಡೆವುದೂ ನೂರೆಂಟೂ ನೋವಾ
ಕುಂಕುಮರಕ್ಷೆ (೧೯೭೭) - ಹೇಗೇ ನುಡಿದೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ , ಗಾಯನ : ವಾಣಿಜಯರಾಂ
ಹೇಗೆ ನುಡಿದೇ ಹೇಗೆ ನುಡಿದೇ ಹೇಳು ಹೇಳು ಜೀವವೇ
ಹೇಗೆ ನುಡಿದೇ ಹೇಗೆ ನುಡಿದೇ ಹೇಳು ಹೇಳು ಜೀವವೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ , ಗಾಯನ : ವಾಣಿಜಯರಾಂ
ಹೇಗೆ ನುಡಿದೇ ಹೇಗೆ ನುಡಿದೇ ಹೇಳು ಹೇಳು ಜೀವವೇ
ಹೇಗೆ ನುಡಿದೇ ಹೇಗೆ ನುಡಿದೇ ಹೇಳು ಹೇಳು ಜೀವವೇ
ಹೇಗೆ ಬಗೆದೆ ದೂರ ಒಗೆದೇ ನನ್ನೋಲಿದ ಪ್ರಾಣವೇ
ಹೇಗೆ ನುಡಿದೇ ಹೇಗೆ ನುಡಿದೇ ಹೇಳು ಹೇಳು ಜೀವವೇ
ಎಲ್ಲ ನೀನೇ ಎಲ್ಲೂ ನೀನೇ ನೀನೇ ಎಲ್ಲ ಬಾಳಿಗೇ
ಎಲ್ಲ ನೀನೇ ಎಲ್ಲೂ ನೀನೇ ನೀನೇ ಎಲ್ಲ ಬಾಳಿಗೇ
ನೀನೇ ಉಸಿರೂ ನೀನೇ ಹಸಿರೂ ಇಂದೂ ನಾಳೇ ನಾಳೆಗೇ
ಹೇಗೆ ನುಡಿದೇ ಹೇಗೆ ನುಡಿದೇ ಹೇಳು ಹೇಳು ಜೀವವೇ
ಬಳ್ಳಿಯಿಂದ ಬಿಡಿಸಿ ಹೂವಾ ಬೇರೆ ಬಳ್ಳಿಗೇ ಇಡುವೇಯಾ
ಬಳ್ಳಿಯಿಂದ ಬಿಡಿಸಿ ಹೂವಾ ಬೇರೆ ಬಳ್ಳಿಗೇ ಇಡುವೇಯಾ
ಒಡೆದ ಮೇಲೆ ನನ್ನದೆಯನು ಬೆಸುಗೆ ಹಾಕಲೂ ಬಲ್ಲೆಯಾ
ಹೇಗೆ ನುಡಿದೇ ಹೇಗೆ ನುಡಿದೇ ಹೇಳು ಹೇಳು ಜೀವವೇ
ತಾಳಿ ಬೊಟ್ಟು ಹೂವೂ ಮೂರೂ ನೀನೂ ತಂದ ಉಡುಗೊರೆ
ತಾಳಿ ಬೊಟ್ಟು ಹೂವೂ ಮೂರೂ ನೀನೂ ತಂದ ಉಡುಗೊರೆ
ಉಳಿಯಲಾರೆ ಸಪ್ತಪದಿಯ ಸತ್ಯಾ ನೀನೂ ಮರೆತರೇ
ಹೇಗೆ ನುಡಿದೇ ಹೇಗೆ ನುಡಿದೇ ಹೇಳು ಹೇಳು ಜೀವವೇ
ಹೇಗೆ ಬಗೆದೆ ದೂರ ಒಗೆದೇ ನನ್ನೋಲಿದ ಪ್ರಾಣವೇ
ಹೇಗೆ ನುಡಿದೇ ಹೇಗೆ ನುಡಿದೇ ಹೇಳು ಹೇಳು ಜೀವವೇ
--------------------------------------------------------------------------------------------------------------------------
ಕುಂಕುಮರಕ್ಷೆ (೧೯೭೭) - ಯಾವ ಬಯಕೇ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ , ಗಾಯನ : ವಾಣಿಜಯರಾಂ
ಯಾವ ಬಯಕೆ ಮುಡಿತೋ ಯಾವ ನೆನಪೂ ಕಾಡಿತೋ
ಯಾವ ಬಯಕೆ ಮುಡಿತೋ ಯಾವ ನೆನಪೂ ಕಾಡಿತೋ
ಸಂಗೀತ : ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ , ಗಾಯನ : ವಾಣಿಜಯರಾಂ
ಯಾವ ಬಯಕೆ ಮುಡಿತೋ ಯಾವ ನೆನಪೂ ಕಾಡಿತೋ
ಯಾವ ಬಯಕೆ ಮುಡಿತೋ ಯಾವ ನೆನಪೂ ಕಾಡಿತೋ
ಯಾವ ಕನಸ ಕಾಣುವಾಸೇ ನಿನ್ನ ಮನವ ತುಂಬಿಕೋ
ಯಾವ ಬಯಕೆ ಮುಡಿತೋ ಯಾವ ನೆನಪೂ ಕಾಡಿತೋ
ಮುಗಿದ ಕನಸ ಕದಡಿ ಕೆದಕಿ ಕಂಡು ನಲಿವ ಭ್ರಾಂತಿಯೂ
ರಂಗದಲ್ಲಿ ಮುಗಿವ ದೃಶ್ಯ ಮರಳಿ ನೋಡುವ ಆಸೆಯೋ
ಯಾವ ಬಯಕೆ ಮುಡಿತೋ ಯಾವ ನೆನಪೂ ಕಾಡಿತೋ
ಎದೆಯ ಹಕ್ಕಿ ಗೂಡ ತೊರೆದೂ ಹಾರಿಹೋಗಿ ನೋಡಿತೇ
ನನ್ನ ಒಲವ ಬಲೆಯ ಹರಿವ ಬಲವ ಛಲವ ಹೊಂದಿತೇ
ಯಾವ ಬಯಕೆ ಮುಡಿತೋ ಯಾವ ನೆನಪೂ ಕಾಡಿತೋ
ನನ್ನ ಉಸಿರೂ ಇರುವ ತನಕ ಜೀವ ಉಳಿಸಿ ಸೆಣೆಸುವೇ
ನಿನ್ನ ಸೇರಿ ಚಿತೆಯ ನೇರಿ ಪತಿಯೇ ಆಗಿ ಗೆಲ್ಲುವೇ
ಯಾವ ಬಯಕೆ ಮುಡಿತೋ ಯಾವ ನೆನಪೂ ಕಾಡಿತೋ.. ಅಹ್ಹಹ್....
--------------------------------------------------------------------------------------------------------------------------
No comments:
Post a Comment