793. ಗಜಪತಿ ಗರ್ವಭಂಗ (೧೯೮೯)


ಗಜಪತಿ ಗರ್ವಭಂಗ ಚಲನಚಿತ್ರದ ಹಾಡುಗಳು 
  1. ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
  2. ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ 
  3. ಮದುವೆಯ ವಯಸು ಎಲ್ಲೆಲ್ಲೂ ಸೊಗಸು ಕಣ್ತುಂಬ ನೂರಾರು ಕನಸು 
  4. ಹೊಸ ರಾಗವಿದು ಹೊಸ ತಾಳವಿದೂ 
  5. ತರಕಾರಿ ತಾಯಮ್ಮಾ ಮನೆಹಾಳ ಮಾಚಮ್ಮಾ 
ಗಜಪತಿ ಗರ್ವಭಂಗ (೧೯೮೯) - ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಸಂಗೀತ: ಉಪೇಂದ್ರ ಕುಮಾರ, ಸಾಹಿತ್ಯ: ಶ್ರೀರಂಗ,  ಗಾಯನ: ಮಂಜುಳಾ ಗುರುರಾಜ್

ಹ್ಹಹ್ಹಹ್ಹ.. ಯಾ..    ಹೆ..ಹೆ..ಹೇಯ್ಯಾ...
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ
ಹೇ! ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಹೇ  ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು
ಹೇ  ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು ಅರೇ ಜಲ್ದಿ ಜಲ್ದಿ ನಡಿ ನಡಿ ಹೆ ಎಯ್ ಹೆ ಎಯ್ ಆಹ..
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ ಐ ಐ..
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ

ಆಹಾ ಗಂಡ, ಜಗಮೊಂಡ, ನಿನ್ನ ಪಿಂಡ ಬಲು ದಂಡ ಹೇಯ್ಯಾ...
ಹಣೆ ಮ್ಯಾಲೆ ಬಾಸಿಂಗ ಕುಂಕುಮ...
ಹಣೆ ಮ್ಯಾಲೆ ಬಾಸಿಂಗ ಕುಂಕುಮ ಹಸೆ ಮಣೆ ಮ್ಯಾಲೆ, ಚೆಂಡಾಟ ಆಡುಮಾ
ನಡಿ ಗಾಂಧಿಬಜಾರು ಕಡೆ ಹೋಗುಮಾ ಒಸಿ ಸೇಂದಿ ಸಾರಾಯಿ ರುಚಿ ನೋಡುಮ್ಮಾ
ವಾರೆ ಮೇರಾ ಭೇಟಾ, ತಲೆ ಮ್ಯಾಲೆ ಕಂಬಿ ಪೇಟ ಇಡಿ ರಾಗಿ ಕಲ್ಲು ಗೂಟ, ಅಹಾ ಎಂಥ ಮೋಜಿನಾಟ
ಬಡೇ ಮಿಯಾ ಹಿಡಿ ಕೈಯಾ, ಬಾ ಬಾ ಬಾ
ಹೇ.. ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
[ಗಂಡು ಧ್ವನಿ]ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ ಹುಹುಹಾ....

ಕುದುರೇ ಕೃಷ್ಣಾ...ಹುಹಾಹ...ಹಹ ಹ ಹ..
ಮದ್ವೆ ಆಗೋಕೆ ಮುಂಚೇನೆ ಸೋಬನ
ಮದ್ವೆ ಆಗೋಕೆ ಮುಂಚೇನೆ ಸೋಬನ ನಿನ್ನ ಮೈಗೆಲ್ಲಾ ಹಚ್ಚಬೇಕು ಅರಿಸಿನಾ ..ಹಿ ಹಿ. ಹಿ..ಹಿ ಹಿ..
ಅಯ್ಯೋ ಯಾರ ಪಕ್ಕ ನೋಡಿ ಬಂದೆ ಈ ದಿನ ಇದು ಚಂಡಿ ಚಾಮುಂಡಿಯ  ದರ್ಶನ
ಒರೆ ದೊಂಗನಾ ಕೊಡಕಾ  ನಿಂಗೆ ಯಾಕೆ ಬಂತ ನಡುಕ ನಿನ್ನ ಆಸೆ ಸಲ್ಪ ತಡ್ಕಾ  ನಿನ್ನ ಕಚ್ಚೆ ಸರಿ ಮಾಡ್ಕ
ಅಹಾ ಭಲೆ ಭಲೆ ಮಜಾ ಮಜಾ ಬಾ ಬಾ ಬಾ ಬಾ
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಹೆ ತಾಳಿ ಕಟ್ಟೊ ಗಂಡು ಬಿಸಿ ರಾಗಿ ಮುದ್ದೆ ಉಂಡು...
ಹೇ  ತಾಳಿ ಕಟ್ಟೋ ಗಂಡು, ಬಿಸಿ ರಾಗಿ ಮುದ್ದೆ ಉಂಡು ಅರೇ ಜಲ್ದಿ ಜಲ್ದಿ ನಡಿ ನಡಿ ಹೆ ಎಯ್ ಹೆ ಎಯ್ ಆಹ..
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮಾ ಜರದಾ ಬೀಡಾ ತಿಂತಾ ಕರಗಾ ನೋಡುಮ್ಮಾ
ಅಹ್ಹಹ್ಹ ಅಹ್ಹಹ್ಹ ..ಹೇ ಚಂಡಾಳ ನಿಂತ್ಕೊಳೋ! ಲೇ ಅಹ್ಹಹ್ಹ ಹೇ ಮುಂಡೇ ಗಂಡ ನಿಂತ್ಕಳಲೋ ಲೋ!!
ಅಹ್ಹಹ್ಹಹ್ಹ ಅಹ್ಹಹ್ಹಹ್ಹ
-------------------------------------------------------------------------------------------------------------------------

ಗಜಪತಿ ಗರ್ವಭಂಗ (೧೯೮೯) - ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ 
ಸಂಗೀತ: ಉಪೇಂದ್ರ ಕುಮಾರ, ಸಾಹಿತ್ಯ: ಶ್ರೀರಂಗ,  ಗಾಯನ:ಕುಸುಮ, ಮಧುಸೂದನ, ರಾಘವೇಂದ್ರ ರಾಜ್

ಕೋರಸ್  : ಲಾಲಲಲ ಲಲ  ಲಲ ಲಾಲಲ ಲಲ ಲಾಲಾ  ಲಲಲಲ ಲಾಲಲ ಲಲ ಲಾಲಾ 
ಗಂಡು : ಲಾ ಲಲಲ ಲ್ಲಲ್ಲಲ  ಲಲ ಲಾಲಲ ಲಲ ಲಾಲಾ  ಲಲಲಲ ಲಾಲಲ ಲಲ ಲಾಲಾ
            ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ... ಹೂಂ... ಹಾಡು ಸೌಮ್ಯ ... 
ಹೆಣ್ಣು : ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ
ಗಂಡು : ಶೃತಿ.... ಶೃತಿ   ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ  
            ಬೇಗ ಹಾಡು ಸೌಮ್ಯಾ... 
ಹೆಣ್ಣು : ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ 
ಗಂಡು : ಅಯ್ಯೋ... ಶೃತಿ  ಸರಿ ಇಲ್ಲಾ... 
           ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ಮನಸು ಮನಸು ಸೇರಲು ಈ ಬಾಳೆ ನವನೀತ 
ಇಬ್ಬರು:  ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ 
ಗಂಡು : ಹಾಗೇ .... 

ಗಂಡು : ಪ್ರೇಮ ಅನುರಾಗ ಬರೀ ಆಡುವ ಮಾತಲ್ಲಾ... ಆಆಆ... 
ಹೆಣ್ಣು : ಅದು ಹಾಲು ಸಿಹಿ ಜೇನು ಬೆರೆತಂತೆ ಬಾಳೆಲ್ಲಾ 
ಗಂಡು : ಸ್ನೇಹ ಹೀತವಾಗಿ ಹೂವಾಗದೇ ಸುಖವಿಲ್ಲಾ...ಆ..ಆ.. 
ಇಬ್ಬರು : ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ    

ಕುಸುಮಾ : ನಿಜವ ಅರಿಯದೆ ದೂರಾಗುತಾ ಉರಿ ಬಿಸಲಲ್ಲಿ ಹೂವಾದೆ 
                 ವಿರಸ ಬೆರೆಸಿ ಸ್ನೇಹಕೆ ನಾ ಇಂದು ಮುಳ್ಳಾದೆ 
ಗಂಡು : ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ   
       

ಎಲ್ಲರು :  ಲಲಲ ಲಲ ಲಾಲಲ ಲಲ ಲಾಲಾ 
ಗಂಡು :  ಸೇರಿ ನಲಿವಾಗ ಅನುರಾಗವು ಉಲ್ಲಾಸ...ಆ...ಆ 
ಹೆಣ್ಣು : ಎಲ್ಲಾ ಕೂಡಿ ಕುಣಿವಾಗ ಬದುಕೆಲ್ಲಾ ಸಂತೋಷ... ಆ..ಆ.. 
         ನೀಡು ಆನಂದ ಇದೆ ಪ್ರೇಮದ ಸಂದೇಶಾ.. ಆ..ಆ.. 
ಎಲ್ಲರು : ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ಮನಸು ಮನಸು ಸೇರಲು ಈ ಬಾಳೆ ನವನೀತ 
             ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ಮನಸು ಮನಸು ಸೇರಲು ಈ ಬಾಳೆ ನವನೀತ 
             ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ ಮನಸು ಮನಸು ಸೇರಲು ಈ ಬಾಳೆ ನವನೀತ
             ಒಲಿದ ಸ್ವರಗಳು ಒಂದಾದರೇ ಬಲು ಇಂಪಾದ ಸಂಗೀತ
-------------------------------------------------------------------------------------------------------------------------

ಗಜಪತಿ ಗರ್ವಭಂಗ (೧೯೮೯) - ಮದುವೆಯ ವಯಸು ಎಲ್ಲೆಲ್ಲೂ ಸೊಗಸು ಕಣ್ತುಂಬ ನೂರಾರು ಕನಸು
ಸಂಗೀತ: ಉಪೇಂದ್ರ ಕುಮಾರ, ಸಾಹಿತ್ಯ: ಶ್ರೀರಂಗ,  ಗಾಯನ: ಮಂಜುಳಾ ಗುರುರಾಜ್

ಗಂಡು : ಮದುವೆಯ ವಯಸು ಎಲ್ಲೆಲ್ಲೂ ಸೊಗಸು ಕಣ್ತುಂಬ ನೂರಾರು ಕನಸು 
            ಬೆರಸುತ್ತ ಮನಸು ನನ್ನನ್ನು ಕುಣಿಸು ಎದೆಯಾಸೆ ಹೂವಾಗಿಸು 
ಹೆಣ್ಣು :  ಮದುವೆಯ ವಯಸು ಎಲ್ಲೆಲ್ಲೂ ಸೊಗಸು ಕಣ್ತುಂಬ ನೂರಾರು ಕನಸು 
           ಬೆರಸುತ್ತ ಮನಸು ನನ್ನನ್ನು ಕುಣಿಸು ಎದೆಯಾಸೆ ಹೂವಾಗಿಸು 

ಗಂಡು : ಲಲ್ಲಲಾ  ಲಲ್ಲಲಾ ಲಲ್ಲಲಲಾ ಲಲಾ  ಹೆಣ್ಣು : ಲಲ್ಲಲಾ  ಲಲ್ಲಲಾ ಲಲ್ಲಲಲಾ ಲಲಾ 
ಗಂಡು : ನನ್ನ ಕೈ ಸೋಕಲು ಏತಕೆ ಹೀಗೆ ಬಿಗಿಯಾಯ್ತು ಹೆಣ್ಣೇ ನಿನ್ನೀ ಉಡುಗೆ 
ಹೆಣ್ಣು : ಮೈ ತುಂಬಾ ಮಿಂಚೀನ ಬಳ್ಳಿಯು ಓಡಿ ಹೂವಾಯ್ತು ತನವು ಹಿಗ್ಗುತ ಅರಳಿ 
ಗಂಡು : ಒಹೋ.. ಹೂಂ ..ಹೂಂ               ಹೆಣ್ಣು : ಆಹಾ.. . ಹೂಂ ..ಹೂಂ  
ಗಂಡು : ಸೊಗಸಾದ ಮಾತಾಡಿದೇ.... ಹೋ...
ಹೆಣ್ಣು : ಓ...ಮದುವೆಯ ವಯಸು ಎಲ್ಲೆಲ್ಲೂ ಸೊಗಸು ಕಣ್ತುಂಬ ನೂರಾರು ಕನಸು 
ಗಂಡು : ಬೆರಸುತ್ತ ಮನಸು ನನ್ನನ್ನು ಕುಣಿಸು ಎದೆಯಾಸೆ ಹೂವಾಗಿಸು 

ಗಂಡು : ಆ... ಆಆ... ಆಅ ಆ... ಹೆಣ್ಣು : ಆ... ಆಆ... ಆಅ ಆ... 
ಹೆಣ್ಣು : ಎದೆಯಲ್ಲಿ ಸಾವಿರ ವೀಣೆಯ ನಾದ ಇಂಪಾಗಿ ಹಾಡಿದೆ ಪ್ರೇಮದ ವೇದ 
ಗಂಡು : ಆ.. ವೀಣೆ ರಾಗಕೆ ನನ್ನೆದೆಯಲ್ಲಿ ನುಡಿದಿದೆ ಈಗ ಪ್ರೇಮ ಮೃದಂಗ 
ಹೆಣ್ಣು : ಆಹಾ..  . ಗಂಡು : ಹೂಂ .. ಹೂಂ 
ಹೆಣ್ಣು : ಆಹಾ  . ಗಂಡು : ಹೂಂ .. ಹೂಂ 
ಹೆಣ್ಣು : ಇದು ತಾನೇ ಅನುರಾಗವು....
ಗಂಡು : ಓ... ಮದುವೆಯ ವಯಸು ಎಲ್ಲೆಲ್ಲೂ ಸೊಗಸು ಕಣ್ತುಂಬ ನೂರಾರು ಕನಸು 
ಹೆಣ್ಣು :  ಬೆರಸುತ್ತ ಮನಸು ನನ್ನನ್ನು ಕುಣಿಸು ಎದೆಯಾಸೆ ಹೂವಾಗಿಸು 
ಇಬ್ಬರು : ಮದುವೆಯ ವಯಸು ಎಲ್ಲೆಲ್ಲೂ ಸೊಗಸು ಕಣ್ತುಂಬ ನೂರಾರು ಕನಸು 
            ಬೆರಸುತ್ತ ಮನಸು ನನ್ನನ್ನು ಕುಣಿಸು ಎದೆಯಾಸೆ ಹೂವಾಗಿಸು
--------------------------------------------------------------------------------------------------------------------------

ಗಜಪತಿ ಗರ್ವಭಂಗ (೧೯೮೯) - ಹೊಸ ರಾಗವಿದು ಹೊಸ ತಾಳವಿದೂ
ಸಂಗೀತ: ಉಪೇಂದ್ರ ಕುಮಾರ, ಸಾಹಿತ್ಯ: ಶ್ರೀರಂಗ, ಗಾಯನ: ಮಂಜುಳಾ ಗುರುರಾಜ್, ರಾಘವೇಂದ್ರ ರಾಜಕುಮಾರ

ಗಂಡು :  ಲಾ ಲಲಲ ಲಲಾ ಲಲಲಾ
            ಹೊಸ ರಾಗವಿದು ಹೊಸ ತಾಳವಿದೂ ಹೊಸ ಭಾವಗಳ ಹೊಸ ಗೀತೆಯಿದು
            ಹೊಸ ರಾಗವಿದು (ಲಲ್ಲಲ್ಲಲಾ) ಹೊಸ ತಾಳವಿದೂ (ಲಲ್ಲಲ್ಲಲಾ)
           ಹೊಸ ಭಾವಗಳ (ಲಲ್ಲಲ್ಲಲಾ) ಹೊಸ ಗೀತೆಯಿದು (ಲಲ್ಲಲ್ಲಲಾ)
           ಮೇಲೂ ಕೀಳೂ ವಾದ ಮಾಡದೇ ಹೆಣ್ಣು ಗಂಡು ಬೇಧವಿಲ್ಲದೇ
          ಎಲ್ಲ ಸೇರಿ ಮೋಜೂ ಮಾಡುವಾ ಬನ್ನೀ ಎಲ್ಲಾ...
          ಇಲ್ಲಿ ಮುಚ್ಚು ಮರೆಯೂ ಸಲ್ಲದೂ ಇಲ್ಲಿ ಬರಿ ಬಿಚ್ಚು ಮನಸೂ ನಮ್ಮದೂ
          ನಗುವಾ ಕುಣಿವಾ ನಗಿಸೀ ನಲಿವಾ ಇದು ಪ್ರೀತಿಯ ಸಂಕೇತಾ ..
          ಹೊಸ ರಾಗವಿದು (ಹೊಸ ರಾಗವಿದು) ಹೊಸ ತಾಳವಿದೂ (ಹೊಸ ತಾಳವಿದೂ )
         ಹೊಸ ಭಾವಗಳ (ಹೊಸ ಭಾವಗಳ) ಹೊಸ ಗೀತೆಯಿದು (ಹೊಸ ಗೀತೆಯಿದು)

ಗಂಡು : ಲಾಲಾ ಲಾಲಾ (ಲಾಲಾ ಲಾಲಾ ) 
           ರಾಜ ಮಹಾರಾಜರೂ ಎಲ್ಲ ಮಣ್ಣಾದರೂ ಇಲ್ಲಿ ಸ್ಥಿರವಾಗಿ ನಿಲ್ಲೋರು ಯಾರೂ ... (ತರರರಾ )
          ಒಳ್ಳೇ ಹಣವಂತರೂ ಇಲ್ಲಿ ಹೆಣವಾದರೂ ಎಂದೂ ವಿಧಿಯನ್ನೂ ಗೆಲ್ಲೋರು ಯಾರೂ  
          ಹಾಡಿ ಸಂಗೀತವಾ ನೀಡಿ ಸಂತೋಷವಾ ಪ್ರೇಮ ಸಂದೇಶ ತಂದೆವು ನಾವೂ (ತರರರಾ )
          ನೀತಿ ಹಿಂಬಾಲಿಸಿ ಪ್ರೀತಿ ಸಂಪಾದಿಸಿ ಎಲ್ಲಾ ನೋವನ್ನೂ ಮರೆಯೋಣ ನಾವೂ 
ಹೆಣ್ಣು : ಮನದಾಸೆಯನೂ  (ಲಲ್ಲಲ್ಲಲಾ)  ನುಡಿವಾಸೆಯಿದೇ  (ಲಲ್ಲಲ್ಲಲಾ)           
          ನಸು ನಾಚಿಕೆಯೂ  (ಲಲ್ಲಲ್ಲಲಾ) ತಡೆಯಾಗುತಿದೇ  (ಲಲ್ಲಲ್ಲಲಾ) 

ಕೋರಸ್ : ಪಂಪಂ ಪಂಪಂಪಂ ಪಂಪಂ ಪಂಪಂಪಂ             
ಗಂಡು : ಸಂಜೆಯೂ ಜಾರುತಲಿರೇ ಗಾಳಿಯೂ ಬೀಸುತಲಿರೇ ಆಆಆ... 
            ನಲ್ಲೆಯು ಪ್ರೀತಿಸುತಿರೇ ಸ್ವರ್ಗವ ಕಾಣುತಲಿರೇ.. 
ಹೆಣ್ಣು : ಹಾಡುತಲಿರಲು ಪ್ರಣಯ ದುಂಬಿ ಬಾಳ ತುಂಬಾ ಹರುಷ ತುಂಬಿ ನಾನು ನಲಿದಿರುವೇ 
ಗಂಡು : ಆಆಆ... ನಿಜವ ನುಡಿಯಲೇ ನನ್ನಾಣೆ ನಲ್ಲೆ ಪ್ರೀತಿಯ ರಂಗೂ ಚೆಲ್ಲಿದೇ 
--------------------------------------------------------------------------------------------------------------------------

ಗಜಪತಿ ಗರ್ವಭಂಗ (೧೯೮೯) - ತರಕಾರಿ ತಾಯಮ್ಮಾ ಮನೆ ಹಾಳ ಮಾಚಮ್ಮಾ
ಸಂಗೀತ: ಉಪೇಂದ್ರ ಕುಮಾರ, ಸಾಹಿತ್ಯ: ಚಿ.ಉದಯಶಂಕರ, ಗಾಯನ: ರಾಘವೇಂದ್ರ ರಾಜಕುಮಾರ, ಕೋರಸ್ 

ಗಂಡು : ಜಂತರ ಮಂತರ ಕುಂತರ ನಿಂತರ ನಾ ನಿರಂತರ ನೀ ಅನಂತರ.. ಭೋ... ಶಂಖಾ... (ಹ್ಹಹ್ಹಹ್ಹ )
            ಹೇಹೇ.. ತರಕಾರಿ ತಾಯಮ್ಮಾ ಮನೆ ಹಾಳ ಮಾಚಮ್ಮಾ ಈ ಹೆಣ್ಣೇ ಏಕೇ ಹೀಡುಕೊಂಡೇ (ಸ್ವಾಮಿಜೀ)
            ತರಕಾರಿ ತಾಯಮ್ಮಾ ಮನೆ ಹಾಳ ಮಾಚಮ್ಮಾ ಈ ಹೆಣ್ಣೇ ಏಕೇ ಹೀಡುಕೊಂಡೇ ಹೋಗಾಚೇ
            ಹೀಗೇಕೇ ನನ್ನ ತಬ್ಬಕೊಂಡೇ...  ಓ.. ಮಾರಿ ಬಜಾರೀ.. ನಿನ್ನ ಆಟ ಇಲ್ಲಿ ಸಾಗೋದಿಲ್ಲಾ  ಹೋಗೂ ದೂರಕೇ
            ಓ.. ಮಾರಿ ಬಜಾರೀ.. ನಿನ್ನ ಆಟ ಇಲ್ಲಿ ಸಾಗೋದಿಲ್ಲಾ  ಹೋಗೂ ದೂರಕೇ.....

ಕೋರಸ್ :  ಓಂ.. ಓಂ.. ಓಂ.. ಓಂ.. ಸ್ಮಶಾನ ರುಧ್ರಸ್ವಾಮಿಜೀ  ಸ್ಮಶಾನ ರುಧ್ರಸ್ವಾಮಿಜೀ
                 ಸ್ಮಶಾನ ರುಧ್ರಸ್ವಾಮಿಜೀ  ಸ್ಮಶಾನ ರುಧ್ರಸ್ವಾಮಿಜೀ 
 ಗಂಡು : ಮಲೆಯಾಳದಿಂದ ಮಂತ್ರವ ಕಲಿತೂ ನಿನಗಾಗಿ ಬಂದೇ ಇಲ್ಲಿಗೇ ... ಹೇಹೇಹೇಹೇ
             ಹ್ಹಾ.. ಮಲೆಯಾಳದಿಂದ ಮಂತ್ರವ ಕಲಿತೂ ನಿನಗಾಗಿ ಬಂದೇ ಇಲ್ಲಿಗೇ
             ಮಲೆನಾಡ ಹೆಣ್ಣೇ ರಸಬಾಳೆ ಹಣ್ಣೇ ನಾ ಯಾರೂ ಎಂದೂ ನೀ ಬಲ್ಲೇ ಏನೇ
             ಕರುನಾಡು ಗಂಡು ಭೂಪ ನಾನೇ ಇಂದೇನೇ ನಿನ್ನ ಸೊಂಟಾ ಮುರಿವೆನೇ.. ಸೊಂಟಾ ಮುರಿವೆನೇ
ಕೋರಸ್ :  ಸ್ಮಶಾನ ರುಧ್ರಸ್ವಾಮಿಜೀ  (ಹೇ)  ಸ್ಮಶಾನ ರುಧ್ರಸ್ವಾಮಿಜೀ  (ಹೇ)
                 ಸ್ಮಶಾನ ರುಧ್ರಸ್ವಾಮಿಜೀ  (ಹ್ಹಾ )ಸ್ಮಶಾನ ರುಧ್ರಸ್ವಾಮಿಜೀ 
ಗಂಡು : ಹೇ... ತರಕಾರಿ ತಾಯಮ್ಮಾ ಮನೆ ಹಾಳ ಮಾಚಮ್ಮಾ ಈ ಹೆಣ್ಣೇ ಏಕೇ ಹೀಡುಕೊಂಡೇ ಹೋಗಾಚೇ
            ಹೀಗೇಕೇ ನನ್ನ ತಬ್ಬಕೊಂಡೇ...  ಓ.. ಮಾರಿ ಬಜಾರೀ.. ನಿನ್ನ ಆಟ ಇಲ್ಲಿ ಸಾಗೋದಿಲ್ಲಾ  ಹೋಗೂ ದೂರಕೇ

ಕೋರಸ್: ಸ್ಮಶಾನ ರುಧ್ರಸ್ವಾಮಿಜೀ ಸ್ಮಶಾನ ರುಧ್ರಸ್ವಾಮಿಜೀ  ಸ್ಮಶಾನ ರುಧ್ರಸ್ವಾಮಿಜೀ  ಸ್ಮಶಾನ ರುಧ್ರಸ್ವಾಮಿಜೀ 
               ( ಶಿನು.. ೩ಸಲ)  ಹಹ್ಹಹ್ಹಹ್ಹಾ..  ಸ್ವಾಮಿಜೀ...
 ಗಂಡು : ಹತ್ತಿರ ಬಂದೂ ಒತ್ತಿಕೋ ಎಂದೂ ಮೆತ್ತಗೇ ಏಕೇ ಹೇಳುವೇ ಅಯ್ಯೋ.. ಅಯ್ಯೋ..
             ಹೇ.. ಹತ್ತಿರ ಬಂದೂ ಒತ್ತಿಕೋ ಎಂದೂ ಮೆತ್ತಗೇ ಏಕೇ ಹೇಳುವೇ
             ಕಾವಿಯ ಮೇಲೇ ಕಣ್ಣ ಹಾಕಬೇಡಾ ಸನ್ಯಾಸಿಯನ್ನೂ ಬಾ ಎನ್ನಬೇಡಾ...
             ನಾ ಬ್ರಹ್ಮಚಾರೀ ಬಲ್ಲೇ ಏನೇ... ಇನ್ನೇಕೇ ಆಸೇ ಹೋಗೂ ದೂರಕೇ.. 
ಕೋರಸ್ : ಹೋಗೂ ದೂರಕೇ..
            ತರಕಾರಿ ತಾಯಮ್ಮಾ ಮನೆ ಹಾಳ ಮಾಚಮ್ಮಾ ಈ ಹೆಣ್ಣೇ ಏಕೇ ಹೀಡುಕೊಂಡೇ (ಸ್ವಾಮಿಜೀ)
            ತರಕಾರಿ ತಾಯಮ್ಮಾ ಮನೆ ಹಾಳ ಮಾಚಮ್ಮಾ ಈ ಹೆಣ್ಣೇ ಏಕೇ ಹೀಡುಕೊಂಡೇ ಹೋಗಾಚೇ
            ಹೀಗೇಕೇ ನನ್ನ ತಬ್ಬಕೊಂಡೇ...  ಓ.. ಮಾರಿ ಬಜಾರೀ.. ನಿನ್ನ ಆಟ ಇಲ್ಲಿ ಸಾಗೋದಿಲ್ಲಾ  ಹೋಗೂ ದೂರಕೇ
            ಓ.. ಮಾರಿ ಬಜಾರೀ.. ನಿನ್ನ ಆಟ ಇಲ್ಲಿ ಸಾಗೋದಿಲ್ಲಾ  ಹೋಗೂ ದೂರಕೇ.....
--------------------------------------------------------------------------------------------------------------------------

No comments:

Post a Comment