798. ಜರಾಸಂಧ (2011)

ಜರಾಸಂಧ ಚಲನಚಿತ್ರದ ಹಾಡುಗಳು 
  1. ಅವರಿವರ ಜೊತೆ ಸೇರದೆ 
  2. ಹಳೆ ಹುಬ್ಬಳ್ಳಿ 
  3. ಪದೇ ಪದೇ ಫೋನಿನಲ್ಲಿ 
  4. ನೀರಿಗೆ ಬಾರೇ ಚೆನ್ನೀ 
  5. ಎರಡು ಹೋಳಾಗಲಿ 
ಜರಾಸಂಧ (2011) - ಅವರಿವರ ಜೊತೆ ಸೇರದೆ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಶಶಾಂಕ, ಗಾಯನ : ಸೋನುನಿಗಂ ಅನುರಾಧ ಭಟ್ಟ

ಅವರಿವರ ಜೊತೆ ಸೇರದೆ ಅವರಿವರ ನುಡಿ ಕೇಳದೆ
ಗೆಳತಿಯರ ಜೊತೆ ಹೋಗದೆ ಪರಿಚಿತರ ಬಳಿ ಕೂರದೆ
ನನ್ನನಷ್ಟೇ ಸಾಯೂ ಹಾಗೆ ನೀನು ಪ್ರೀತಿಸು
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು
ಅವರಿವರ ಜೊತೆ ಸೇರದೆ ಅವರಿವರ ನುಡಿ ಕೇಳದೆ

ನೀ ಹೇಳುವ ನಾ ಕೇಳುವ ಮಾತು ಒಂದೇ ಆಗಲಿ
ನೀನಾಡುವ ಸುಳ್ಳಲ್ಲಿಯು ನಾನೇ ಇರಲಿ
ನೀ ಸೋತರು ನಾ ಸೋತರು ಪ್ರೀತಿ ಎಂದೂ ಗೆಲ್ಲಲಿ
ನೀನೆನ್ನುವ ನಾನೆನ್ನುವ ಮಾತಿನೆಲ್ಲಿ
ನಗುವೆಲ್ಲ ನನಗಾಗೇ ಕೂಡಿ ಹಾಕು
ಮುನಿಸನ್ನು ಬರದಂತೆ ದೂರ ನೂಕು
ಮನಸಲ್ಲಿ ಮರೆಮಾಚಿ ಇಟ್ಟ ಎಲ್ಲಾ
ಗುಟ್ಟುಗಳ ನನ್ನೆದುರೇ ತೆರೆಯಬೇಕು

ಏನನ್ನೋ ಹುಡುಕುವ ಗಳಿಗೆ ನನ್ನ ನಗುವೇ ನಿನಗೆ ಸಿಗಲಿ
ಯಾರನ್ನೋ ಕರೆಯುವ ಕ್ಷಣದಿ ನನ್ನ ಹೆಸರೇ ಮೊದಲು ಬರಲಿ
ಬೇರೆ ಏನೂ ಯೋಚಿಸದೆ ನನ್ನ ಪ್ರೀತಿಸು
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು
ನೀ ಹೇಳುವ ನಾ ಕೇಳುವ ಮಾತು ಒಂದೇ ಆಗಲಿ
ನೀನಾಡುವ ಸುಳ್ಳಲ್ಲಿಯು ನಾನೇ ಇರಲಿ
ನೀ ಸೋತರು ನಾ ಸೋತರು ಪ್ರೀತಿ ಎಂದೂ ಗೆಲ್ಲಲಿ
ನೀನೆನ್ನುವ ನಾನೆನ್ನುವ ಮಾತಿನೆಲ್ಲಿ

ನೆರಳಾಗಿ ಹಗಲೆಲ್ಲಾ ನೀನು ಬೇಕು
ಕನಸಾಗಿ ಇರುಳೆಲ್ಲ ಕಾಡಬೇಕು
ಬದುಕಲ್ಲಿ ಗುರಿಯಂತೆ ನನ್ನ ಸೇರಿ
ಅನುರಾಗ ಅನುಗಾಲ ನೀಡು ಸಾಕು

ಮುಂಜಾನೆ ಬೆಳಕಲಿ ಸ್ಮರಿಸು ಸರಿ ರಾತ್ರಿ ಕನಸಲಿ ವರಿಸು
ಜಗವೆಲ್ಲಾ ಹೊಗಳುವ ವೇಳೆ ಮನಸಲ್ಲಿ ನನ್ನನೆ ನೆನೆಸು
ದೇವರನ್ನೂ ಬೇಡುವಾಗ ನನ್ನ ಜಪಿಸು
ನಿನ್ನ ಎಲ್ಲಾ ಆಸೆಗಳ ಸಾಲಿನಲ್ಲಿ ಎಂದೂ ನನ್ನ ಮುಂದೆ ಇರಿಸು
ಅವರಿವರ ಜೊತೆ ಸೇರದೆ  ಅವರಿವರ ನುಡಿ ಕೇಳದೆ
--------------------------------------------------------------------------------------------

ಜರಾಸಂಧ (2011) - ಹಳೆ ಹುಬ್ಬಳ್ಳಿ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಅರ್ಜುನ ಜನ್ಯ 

--------------------------------------------------------------------------------------------

ಜರಾಸಂಧ (2011) - ಪದೇ ಪದೇ ಫೋನಿನಲ್ಲಿ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಶಶಾಂಕ, ಪ್ರಲ್ಹಾದರಾಜ ಗಾಯನ : ಉಪೇಂದ್ರ, ಹಿಮೇಶ  

--------------------------------------------------------------------------------------------

ಜರಾಸಂಧ (2011) - ನೀರಿಗೆ ಬಾರೇ ಚೆನ್ನೀ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಶಶಾಂಕ, ಗಾಯನ : ಅರ್ಜುನ ಜನ್ಯ, ಶಮಿತಾ ಮಲ್ನಾಡ್  

--------------------------------------------------------------------------------------------

ಜರಾಸಂಧ (2011) - ಎರಡು ಹೋಳಾಗಲಿ 
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಶಶಾಂಕ, ಗಾಯನ : ಕೈಲಾಶ ಖೈರ, ಹರ್ಷ ಸದಾನಂದ, ಶಶಾಂಕ 

--------------------------------------------------------------------------------------------

No comments:

Post a Comment