803. ರಾಜಕುಮಾರ (2017)


ರಾಜಕುಮಾರ ಚಲನಚಿತ್ರದ ಹಾಡುಗಳು 
  1. ಸಾಗರದ... ಅಲೆಗೂ ದಣಿವು...
  2. ಗೊಂಬೆ ಹೇಳುತೈತೆ.
  3. ಯಾಕಿಂಗಾಗಿದೆ
  4. ಯಾರಿವನೂ ಕನ್ನಡದವನೂ 
  5. ಅಪ್ಪು ಡಾನ್ಸ್ 
ರಾಜಕುಮಾರ (೨೦೧೭) - ಸಾಗರದ... ಅಲೆಗೂ ದಣಿವು...
ಸಂಗೀತ : ವಿ.ಹರಿಕೃಷ್ಣ  ಸಾಹಿತ್ಯ : ಗೌಸಪೀರ್  ಗಾಯಕರು : ಸೋನು ನಿಗಮ

ಸಾಗರದ... ಅಲೆಗೂ ದಣಿವೂ... ಪರ್ವತಕೂ ... ಬಿಳೋ ಭಯವೂ...
ಮಳೆಯ ಹನಿಗು ಬಂತು ನೋಡು ದಾಹ...
ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ...
ಹಾರಾಡೋ ಮೋಡವಿಂದು, ರೆಕ್ಕೆಗಳ ಮುರಿದುಕೊಂಡು...ನಿಂತಿದೆ ಮಂಕಾಗಿ ಸುಮ್ಮನೇ...
ತಂಗಾಳಿ ಅಂಗಳವು ದಂಗಾಗಿ.. ಬೆವರಿರಿರೋ ಸೂಚನೆ.. ಸಾಗರದ... ಅಲೆಗೂ ದಣಿವು..
ಬೆಂಕಿ ಮಳೆಗೆ ಬೆಂದಾ ಮೇಲೆ ಹೂವು...ಹೇಗೆ ತಾನೆ ಕಾಣಬೇಕು ನಗುವು.. ಆಆಆ...

ಬೇಸರದ ರಾಟೆಯು, ಎದೆಯಲಿ ತಿರುಗಿ... ತಿರುಗುವ ಈ ಭೂಮಿಯೇ, ನಿಂತಿದೆ ಕೊರಗಿ...
ಬದುಕಿನ ಹೊಸ ರೂಪದ, ಪರಿಚಯವಾಗಿ... ಬೆಳಕೆ ಕಳೆದ್ಹೋಗಿದೆ, ಸೂರ್ಯನು ಮುಳುಗಿ...
ಎಲ್ಲೇ ನೋಡು, ಹಳೆ ಗುರುತು... ಬಾಳೋದ್ಹೇಗೆ, ಎಲ್ಲಾ ಮರೆತು...
ಬಯಸದೆ ನಾ ಎಲ್ಲ ಅಂದು, ಬಯಸಿದರೂ ಇಲ್ಲ ಇಂದು...ಈಜುವುದ್ಹೇಗೆ ಕುದಿಯೊ ನದಿಯನ್ನ..
ಚೂಪಾದ ಕಲ್ಲಿಂದ ಚೂರಾಯ್ತು, ಕನಸಿನ ದರ್ಪಣ...ಸಾಗರದ...ಅಲೆಗೂ ದಣಿವು...

ಕಾಲಾ ನೀನು ಮಾಯ, ಮಾಯ... ಇಲ್ಲ ನಿನಗೇ ನ್ಯಾಯ...
ವಾಸಿ ಮಾಡೋರ್ಯಾರು, ಯಾರು... ಒಳಗೇ ಆದ ಗಾಯ...
ನಂಜು ಒಂದು, ಹೃದಯ ಸವರಿ... ಮಂಜು ಕವಿದು, ಮುಪ್ಪುದಾರಿ...
ಗೆದ್ದಾಗ ಬೆನ್ನುತಟ್ಟಿ, ಬಿದ್ದಾಗ ಮೇಲೆ ಎತ್ತಿ... ಜೊತೆಯಲಿ ನಿಲ್ಲೋರಿಲ್ಲಾ ಒಂಟಿ ನಾ...
ಆಸೆಗಳ ಆಕಾಶ ಪಾತಾಳ...ಮುಟ್ಟಿದೆ ಈ ದಿನ...ಸಾಗರದ... ಅಲೆಗೂ ದಣಿವು...
ಬೆಂಕಿ ಮಳೆಗೆ ಬೆಂದಾ ಮೇಲೆ ಹೂವು...ಹೇಗೆ ತಾನೆ ಕಾಣಬೇಕು ನಗುವು..
-----------------------------------------------------------------------------------------------------------------------

ರಾಜಕುಮಾರ (2017) - ಗೊಂಬೆ ಹೇಳುತೈತೆ.
ಸಂಗೀತ : ವಿ.ಹರಿಕೃಷ್ಣ  ಸಾಹಿತ್ಯ : ಸಂತೋಷ ಆನಂದರಾಮ  ಗಾಯಕರು : ವಿಜಯ ಪ್ರಕಾಶ 

ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ
ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ
ಹೊಸಬೆಳಕೊಂದು ಹೊಸಿಲಿಗೆ ಬಂದು ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೋ ರಾರಾಜಿಸೋ ರಾಜರತ್ನನು
ಆಡಿಸಿಯೇ ನೋಡು ಬೀಳಿಸಿಯೇ ನೋಡು ಎಂದೂ ಸೋಲದು ಸೋತು ತಲೆಯ ಬಾಗದು
ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ

ಗುಡಿಸಲೇ ಆಗಲಿ ಅರಮನೆಯಾಗಲಿ ಆಟವೇ ನಿಲ್ಲದು ಎಂದೂ ಆಟ ನಿಲ್ಲದು
ಹಿರಿಯರೇ ಇರಲಿ ಕಿರಿಯರೆ ಬರಲಿ ಭೇಧವೇ ತೋರದು ಎಂದೂ ಭೇದ ತೋರದು
ಎಲ್ಲ ಇದ್ದು ಏನೂ ಇಲ್ಲದ ಹಾಗೆ ಬದುಕಿರುವ ಆಕಾಶ ಮೋಡದ ಕೈಗೆ ನೆನೆದು ಪ್ರೀತಿ ಹಂಚಿರುವ
ಜೊತೆಗಿರು ನೀನು ಅಪ್ಪನ ಹಾಗೆ ಹಣ್ಣೆಲೆ ಕಾಯೋ ವಿನಯದಿ ಹೀಗೆ
ನಿನ್ನನ್ನು ಪಡೆದ ನಾವು ಪುನೀತ ಬಾಳು ನಗು ನಗುತ
ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ

ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪವಿದು ನಂದಾ ದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವೂ ಸಮಯದ ಸೂತ್ರ ಅವನದು
ಒಂದು ಮುತ್ತಿನ ಕಥೆಯ ಹೇಳಿತು ಈ ಬೋಂಬೆ ಆ ಕಥೆಯಲ್ಲಿದ್ದ ರಾಜನಂಗೆ ನೀನು ಬಂದೆ
ಯೋಗವು ಒಮ್ಮೆ ಬರುವುದು ನಮಗೆ ಯೋಗ್ಯತೆ ಒಂದೇ ಉಳಿವುದು ಕೊನೆಗೆ
ಸೂರ್ಯನೊಬ್ಬ ಚಂದ್ರನೊಬ್ಬ ರಾಜನು ಒಬ್ಬ ಈ ರಾಜನು ಒಬ್ಬ
ಆಡಿಸಿಯೇ ನೋಡು ಬೀಳಿಸಿಯೇ ನೋಡು ಎಂದೂ ಸೋಲದು ಸೋತು ತಲೆಯ ಬಾಗದು
ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ.
-------------------------------------------------------------------------------------------------------------------------

ರಾಜಕುಮಾರ (2017) - ಯಾಕಿಂಗಾಗಿದೆ
ಸಂಗೀತ : ವಿ.ಹರಿಕೃಷ್ಣ  ಸಾಹಿತ್ಯ : ಯೋಗರಾಜ ಭಟ್ಟ ಗಾಯಕರು : ಪುನೀತ ರಾಜಕುಮಾರ 


ಯಾಕಿಂಗಾಗಿದೆ ಯಾಕಿಂಗಾಗಿದೆ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ
ಕುಳಿತುಕೊಂಡು ಕವಿತೆಯನ್ನು ಬರದೇ ಇದ್ರೂ ಬರೆದೆ ನಾನು
ಅದೇನೇ ಗ್ರಾಮರ್ ಮಿಸ್ಟೇಕ್ ಇದ್ರೂ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ

ಇಷ್ಟುದ್ದದ ಮಾತೊಂದ ಪ್ರಾಕ್ಟಿಸು ಮಾಡಿದ್ದೆ ಇವಳ ಎದುರು ಏನೂ ನೆನೆಪೇ ಆಗಲ್ಲ
ವಾಟ್ಸಪ್ಪಲ್ಲಿ ಹೂವನ್ನ ಎಷ್ಟು ಅಂತ ಕಳಿಸೋದು ಫೀಲಿಂಗಿಗೆ ಟೆಕ್ನಾಲಜಿ ಸಾಲಲ್ಲ
ಸೆಲ್ಫಿ ತೆಗಿಯೋ ಟೈಮಲಿ ಹುಡುಗಿ ತುಂಬಾ ವಾಲುವಳು
ಎಷ್ಟೇ ಹತ್ರ ನಿಂತ್ರು ಇನ್ನು ಹತ್ರ ಎನ್ನುವಳು
ಹರೆಯ ಒಂದು ಟಚ್ಚಸ್ಕ್ರೀನು ಲವ್ ಮಾಡೋಕು ಬೇಕು ಫೋನು
ನಂದಂತೂ ಮೊಬೈಲ್ ಆಫಗಲ್ಲ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ

ಲಿಪ್ಸ್ಟಿಕ್ಕಿನ ಮಾರ್ಕೊಂದು ಬೇಕಾಗಿದೆ ನನಗಿಂದು ಸಾಕಾಗೋಯ್ತು ಹಾಳು ಕೆನ್ನೆಯ ಬರಗಾಲ
ಇಂತ ಆಸೆಗೆ ಹುಡುಗೀರು ಸೊಪ್ಪು ಗಿಪ್ಪು ಹಾಕಲ್ಲ ಇವರಿಂದಾನೇ ಕಮ್ಮಿ ಆಯಿತು ಮಳೆಗಾಲ
ಅಂತಾರಪ್ಪ ಹುಡುಗಿರೆಂದೂ ಅರ್ಥ ಆಗಲ್ಲ ಅರ್ಥ ಮಾಡ್ಕೊಳ್ಳೋದು ನಮಗೂ ಬೇಕಾಗೂ ಇಲ್ಲ
ಕನಸು ಕಾಣೋ ವಯಸಿಗೊಂದು ಕೆಲಸ ಕೊಟ್ಲು ಇವಳು ಬಂದು
ಇನ್ಮುಂದೆ ನಾನು ತುಂಬಾ ಬ್ಯುಸಿ ಆಶೀರ್ವದಿಸಿ
ಹೋಗಿ ಬಂದು ನಂಗೊಬ್ಬನಿಗೆ ಯಾಕಿಂಗಾಗಿದೆ ಯಾಕಿಂಗಾಗಿದೆ ಯಾಕಿಂಗಾಗಿದೆ
ಹುಡುಗಿ ಸುಮ್ನೆ ಇದ್ರೂ ಏನೋ ಅಂದಂತಾಗಿದೆ ಅಂದಂತಾಗಿದೆ ಅಪ್ಪಿಕೊಂಡಂತಾಗಿದೆ.
-----------------------------------------------------------------------------------------------------------------------

ರಾಜಕುಮಾರ (2017) - ಯಾರಿವನೂ ಕನ್ನಡದವನೂ
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಸಂತೋಷ ಆನಂದರಾಮ ಗಾಯಕರು : ಶಶಾಂಕ ಶೇಷಗಿರಿ


ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಯಾಚೋ
ಮ್ಯಾನ್ ಮ್ಯಾನ್ ಮ್ಯಾನ್ ಮ್ಯಾಚೋ  ಮ್ಯಾನ್ ಮ್ಯಾನ್ ಮ್ಯಾನ್ ಮ್ಯಾಚೋ
ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಮ ಮ್ಯಾಚೋ
ಮ್ಯಾನ್ ಮ್ಯಾನ್ ಮ್ಯಾನ್ ಮ್ಯಾಚೋ  ಮ್ಯಾನ್ ಮ್ಯಾನ್ ಮ್ಯಾನ್ ಮ್ಯಾಚೋ
ಮ್ಯಾಚೋ ಚೊ ಚೊ ಚೊ ಹೇ ಚೊ ಚೊ
ಮ್ಯಾಚೋ ಚೊ ಚೊ ಚೊ ಹೇ ಚೊ ಚೊ
ಯಾರಿವನು ಕನ್ನಡದವನು ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು
ಯಾರಿವನು ಜೆಂಟಲ್ ಮ್ಯಾನೂ ಯಾರಿವನು ಲೋಡೆಡ್ ಗನ್ನೂ
ಯಾರಿವನು ಕೊಹಿನೂರ್ ಜೇಮ್ಮೂ ಅಣ್ಣಾವ್ರ ಫ್ಯಾನೂ
ದಿ ಸೌಲ್ ಇಸ್ ಪೂರೆಸ್ಟ್ ಹಾರ್ಟ್ ಇಸ್ ಎವರೆಸ್ಟ್ ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್
ಹೀ ಇಸ್ ಕೂಲೆಸ್ಟ್ ತುಂಬಾ ಡಿಯರೆಸ್ಟ್ ಒನ್ ಏಂಡ್ ಓನ್ಲಿ ಪವರ್ ಸ್ಟಾರ್
ಬೆಲೆ ಕಟ್ಟಲಾಗದ ಬೆಟ್ಟದ ಹೂವು
ಹೀ ಇಸ್ ಮಿಸ್ಟರ್ ಪರ್ಫೆಕ್ಟ್  ರಾಜರ ರಾಜ ರೆಸ್ಪೆಕ್ಟ್ 
ಹೀ ಇಸ್ ಮಿಸ್ಟರ್ ಪರ್ಫೆಕ್ಟ್  ರಾಜರ ರಾಜ ರೆಸ್ಪೆಕ್ಟ್
ಯಾರಿವನು ಕನ್ನಡದವನು ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು..  ಹೋಯ್ ..

ಚಲೋ ಮಸ್ತಿ ಯಾರೋ ನಾಚೋ ನಾಚೋ ಮ್ಯಾಚೋ
ವಾಟ್ ಯೂ ವಾಂನ್ ಬೇಬಿ ದಿಲ್ ಸೆ ಮಸ್ತಿ ಎವ್ರಿಬಡಿ  ಸೇ ದಿಲ್ ಸೇ ಹಸ್ತಿ
ಬಿ ದಿ ಸೂಪರ್ ಕಮ್ ಆನ್ ಲೆಟ್ಸ್ ಡೂ ಕ್ರೇಜಿ ಒನ್ ಟೂ ಥ್ರೀ ಫೋರ್ ಆನ್ ಟೂ ಥ್ರೀ
ಐಮ್ ದಿ ನಾಟಿ ಕಮ್ ಆನ್ ವೀ ಟೂ ಕ್ರೆಜಿ ಫೀಲ್ ದಿ ಪವರ್ ಲೆಟ್ಸ್ ಡೂ ಸೊ ಫ್ರೀಕಿನ್
ಐಮ್ ದಿ ಮ್ಯಾಚೋ ಗೊನ್ನಾ ಬ್ರೇಕ್ ದಿ ಪಾರ್ಟಿ ಒನ್ ಟೂ ಥ್ರೀ ಫೋರ್  ಟೂ ಟೂ ಥ್ರೀ ಫೋರ್
ನೌ ಚೆಕ್ ದಿಸ್ ಔಟ್
ತುಂಬಾ ಡೌನ್ ಟು ಅರ್ಥ್ ಪ್ರೀತ್ಸೋರ ಸ್ವತ್ತು ಸ್ಟಾರು ಬೈ ಬರ್ತ್ ಸಿಂಪಲ್ ಈ ಮುತ್ತು
ಅಪ್ಪು ಸ್ವೀಟ್ ಹಾರ್ಟ್ ಫ್ಯಾನ್ ಸೇ ಹಾರ್ಟ್ ಬೀಟೂ
ಅಭಿಮಾನ ನಿನ್ನ ರೂಟು ಅಭಿಮಾನಿಗೇ ಸೆಲ್ಯೂಟ್
ಯಾರೇ ಇರಲಿ ಯಾರೇ ಬರಲಿ ನಿನ್ನ ರೇಂಜೀಗೆ ಯಾರಿಲ್ಲ
ಗೆಲುವೇ ಬರಲಿ ಸೋಲೇ ಬರಲಿ ಆ ಸ್ಟೈಲಲ್ಲಿ  ಚೇಂಜೇ ಇಲ್ಲ
ಬೆಲೆ ಕಟ್ಟಲಾಗದ ಬೆಟ್ಟದ ಹೂವು
ಹೀ ಇಸ್ ಮಿಸ್ಟರ್ ಪರ್ಫೆಕ್ಟ್  ರಾಜರ ರಾಜ ರೆಸ್ಪೆಕ್ಟ್
ಹೀ ಇಸ್ ಮಿಸ್ಟರ್ ಪರ್ಫೆಕ್ಟ್  ರಾಜರ ರಾಜ ರೆಸ್ಪೆಕ್ಟ್
ಓ ಯೂ ವಾನ್ನ ಬ್ಯಾಂಗ್ ಬ್ಯಾಂಗ್ ವೀ ಆರ್ ದಿ ಗ್ಯಾಂಗ್ ಗ್ಯಾಂಗ್ ಗೋ ಹೊಹೊಹೊ
ಯೂ ವಾನ್ನ ಬ್ಯಾಂಗ್ ಬ್ಯಾಂಗ್.. ಮ್ಯಾಚೋ ವೀ ಆರ್ ದಿ ಗ್ಯಾಂಗ್ ಗ್ಯಾಂಗ್ ಗೋ....
ನೌ ಚೆಕ್ ದಿಸ್ ಔಟ್

ಆಲ್ವೇಸ್ ಬ್ರೇಕಿಂಗ್ ನ್ಯೂಸೂ ಹೀ ಇಸ್ ಬಿಂದಾಸ್
ಬಾಲ್ಕನಿ ಟೂ ಗಾಂಧೀ ಕ್ಲಾಸೂ ಹೀ ಇಸ್ ಪಬ್ಲಿಕೂ ಚಾಯ್ಸ್
ಪೋರ್ಸಲಿ ಪವರ್ ಹೌಸು ಟೆನ್ ಥೌಸಂಡ್  ವ್ಯಾಟ್ಸೂ
ಎದೆಯಲ್ಲಿ ತುಂಬಿದೆ ಘಟಸೂ  ಎದುರಾಳಿಗೆ ನರ್ವಸ್ಸೂ
ಎಲ್ಲೇ ಇರಲಿ ಹೇಗೆ ಇರಲಿ ಮುಖದಲಿ ರಾಜನ ವರ್ಚಸ್ಸು
ನಗುನಗುತಾ ನಲಿ ಏನೇ ಆಗಲಿ ಕರುನಾಡಿಗೆ ನೀನೆ ಅರಸು
ಬೆಲೆ ಕಟ್ಟಲಾಗದ ಬೆಟ್ಟದ ಹೂವು
ಹೀ ಇಸ್ ಮಿಸ್ಟರ್ ಪರ್ಫೆಕ್ಟ್  ರಾಜರ ರಾಜ ರೆಸ್ಪೆಕ್ಟ್
ಹೀ ಇಸ್ ಮಿಸ್ಟರ್ ಪರ್ಫೆಕ್ಟ್  ರಾಜರ ರಾಜ ರೆಸ್ಪೆಕ್ಟ್
ಯಾರಿವನು ಕನ್ನಡದವನು ಯಾರಿವನು ನಮ್ಮೂರವನು
ಯಾರಿವನು ನಮ್ಮನೆ ಮಗನು ಬಂದ್ರೆ ತೂಫಾನು
-----------------------------------------------------------------------------------------------------------------------

ರಾಜಕುಮಾರ (2017) - ಅಪ್ಪು ಡಾನ್ಸ್
ಸಂಗೀತ : ವಿ.ಹರಿಕೃಷ್ಣ ಸಾಹಿತ್ಯ : ಸಂತೋಷ ಆನಂದರಾಮ ಗಾಯಕರು : ಸಂತೋಷ ವೆಂಕಿ, ಪ್ರೀಯ ಹೇಮೇಶ


ಹೇ ಕಮ್ ಆನ್ ಕಮ್ ಆನ್ ಬಾಯ್ಸೂ ಶುರುವಾಯಿತು ತಮಟೆ ಏಟು
ಪಕ್ಕಾ ಲೋಕಲ್ ಬೀಟೂ  ಈಗ ಟಪ್ಪಂಗಾ ಗುಚ್ಚಿ ಸ್ಟಾರ್ಟು
ಹೇ ಕಮ್ ಆನ್ ಕಮ್ ಆನ್ ಬಾಯ್ಸೂ ಲೆಟ್ಸ್ ಸ್ಟಾರ್ಟ್ ದಿ ಲೋಕಲ್ ಡಾನ್ಸೂ
ಆಲ್ ದ್ ಅಪ್ಪೂ ಫ್ಯಾನ್ಸೂ ಶೂರೂ ಮಾಡಿ ಲೋಕಲ್ ಡ್ಯಾನ್ಸೂ
ಶಕ್ತಿಮಾನ್ ಚೋಟ್ಟಾ ಭೀಮೂ ನಿನ್ನ ಹಾಗೇ ಸೇಮ್ ಟು ಸೇಮೂ
ಸೂಪರ್ ಮ್ಯಾನೂ ಬ್ಯಾಟ್ ಮ್ಯಾನೂ  ನೀನೇ ನಮಗೇ ಮ್ಯಾಚ್ ಮ್ಯಾನೂ
ಅಪ್ಪಾ ಜೇಮ್ಸ್ ಬಾಂಡೂ ಮಗಾ ಅಣ್ಣಾಬಾಂಡೂ
ಜಾಸ್ತೀ ಮಾಡೂ ಸೌಂಡೂ ಬಂದ ಗಾಜನೂರು ಗಂಡೂ
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್  ವೀ ಆಲ್ ಲವ್ ಯೂ ಪವರ್ ಸ್ಟಾರ್
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು 
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ 
ಒನ್ ಟೂ ಥ್ರೀ ಫೋರ್ ಫೈವ್ ಸ್ಟಾರ್ ವೀ ಆಲ್ ಲವ್ ಯೂ ಪವರ್ ಸ್ಟಾರ್ 
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು 
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ 

ಟಾಂವ್ ಟಕ್ಕರ್ ಟಕ್ಕರ್ ಟಾಂವ್  ಟಕ್ಕರ್ ಟಕ್ಕರ್ ಟಾಂವ್ ಟಾಂವ್ ಟಕ್ಕರ್ ಟಕ್ಕರ್
ಟಾಂವ್ ಟಕ್ಕರ್ ಟಕ್ಕರ್ ಟಾಂವ್  ಟಕ್ಕರ್ ಟಕ್ಕರ್ ಟಾಂವ್ ಟಾಂವ್ ಟಕ್ಕರ್ ಟಕ್ಕರ್
ಹೇ ಒನ್ಸ್ ಅಪಾನ ಎ ಟೈಮನಲ್ಲಿ ಟ್ಯೂರಿಂಗ್ ಟಾಕೀಸನಲ್ಲಿ ಸೀಟಿ ಹೊಡೆದೂ ಕಂಡ ಚಿತ್ರ ಬಬ್ರುವಾಹನ
ಹೇ.. ಆಕಾಶವಾಣಿಯಲ್ಲಿ ಆನಂದ ಸಾಂಗ್ ಕೇಳಿ ಟುವ್ವಿ ಟುವ್ವಿ ಅಂತಾ ಶೂರು ಮಾಡದೇ ಡಾನ್ಸ್ ನಾ
ನಗ ನಗುತಾ ಲೈಫು ಸಿಲ್ವರ್ ಜ್ಯೂಬಿಲಿ...  ಅಪ್ಪು ರೈಟ್
ಹೇ ಹ್ಯಾಪಿ ಎಂಡಿಂಗ್ ಇರಲೀ ಬಾಳಲೀ .. ಅಪ್ಪು ರೈಟ್
ಬ್ಲಾಕಬಸ್ಟರ್ ಹುಡುಗನಿಗೇ ಜೋಡಿ ನಾ ಕೊನೆವರೆಗೇ
ಫಸ್ಟು ಡೇ ಫಸ್ಟ್ ಶೋ ಕನ್ನಡ ಸಿನೆಮಾ ನೋಡಿ ಸ್ಟಾರ್ಟು ವಾರು ಯಾಕೇ ನಾವೂ ಒಂದೇ ಇಲ್ಲಿ
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್  ವೀ ಆಲ್ ಲವ್ ಯೂ ಪವರ್ ಸ್ಟಾರ್
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು 
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ 
ಒನ್ ಟೂ ಥ್ರೀ ಫೋರ್ ಫೈವ್ ಸ್ಟಾರ್ ವೀ ಆಲ್ ಲವ್ ಯೂ ಪವರ್ ಸ್ಟಾರ್ 
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು 
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ 
ಯೂ ಮೇ ಅಪ್ಪು ಬಡೀ ಕಮ್ ಆನ್ ವೀ ರೀಯಲಿ ವಾಂಟ್ ದಿ ಪವರ್
ವೀ ಆರ್ ರೆಡಿ ಫಾರ್ ದಿ ಪಾರ್ಟಿ ಜಸ್ಟ್ ಶೋ ಮೀ ಯು ಆಲ್ ದಿ ಪವರ್

ಹೇ ಟೆಂಪಲ್ ರನ್ನೂ ಥರ್ ಓಡಿ ಓಡಿ ಬಂದಿರುವೇ ನಿನ್ನಾ ಮೇಲೆ ಆಗಿರುವಾ ಕ್ಯಾಂಡಿ ಕ್ರಷಗೇ
ಟಾಕಿಂಗೂ ಟೋಮಿನಲೀ ನಿನ್ನ ಹೆಸರೂ ಹೇಳಿದರೇ ಕಿಂಗ್ ಇಸ್ ಬ್ಯಾಕ್ ಅಂತಾ ಮಂತ್ರ ಹೇಳ್ತಿದೇ
ಹುಟ್ಟಿದರೇ ಕನ್ನಡ ನಾಡಲ್ಲೇ... ಅಪ್ಪು ರೈಟ್  ಮತ್ತೇ ಹುಟ್ಟಬೇಕೂ ನಾನಿಲ್ಲೇ.. ಅಪ್ಪು ರೈಟ್
ನಾನೆಂದೂ ನಿಮ್ಮವನೂ ನಿಮಗಾಗೇ ಕುಣಿಯುವೆನೂ
ಅಪ್ಪಾ ಜೇಮ್ಸ್ ಬಾಂಡೂ ಮಗಾ ಅಣ್ಣಾಬಾಂಡೂ
ಜಾಸ್ತೀ ಮಾಡೂ ಸೌಂಡೂ ಬಂದ ಗಾಜನೂರು ಗಂಡೂ
ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್  ವೀ ಆಲ್ ಲವ್ ಯೂ ಪವರ್ ಸ್ಟಾರ್
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು 
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ 
ಒನ್ ಟೂ ಥ್ರೀ ಫೋರ್ ಫೈವ್ ಸ್ಟಾರ್ ವೀ ಆಲ್ ಲವ್ ಯೂ ಪವರ್ ಸ್ಟಾರ್ 
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು 
ಡಾನ್ಸ್ ಡಾನ್ಸ್ ಡಾನ್ಸ್ ಅಪ್ಪು  ಡಾನ್ಸ್ ಡಾನ್ಸ್ ಡಾನ್ಸ್ 
-----------------------------------------------------------------------------------------------------------------------

No comments:

Post a Comment