806. ಚಿರು (೨೦೧೦)



ಚಿರು ಚಲನಚಿತ್ರದ ಹಾಡುಗಳು 
  1. ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ 
  2. ಇಲ್ಲೇ  ಎಲ್ಲೊ ನನ್ನ ಮನಸು ಕಾಣೆಯಾಗಿದೆ
  3. ಶಂಬೋ ಶಿವ ಶಂಕರ ಅವನಾಟ ಥರಥರ 
  4. ಓಲಾಲಾಲ 
  5. ಒಲವನು ಹೇಳೂ 
ಚಿರು (೨೦೧೦) - ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ 
ಸಂಗೀತ: ಗಿರಿಧರ್ ದಿವಾನ್  ಸಾಹಿತ್ಯ: ಜಯಂತ್ ಕಾಯ್ಕಿಣಿ  ಗಾಯಕ: ಸೋನು ನಿಗಮ್

ಹೇ..ಹೆ ಹೇ... ಲ ಲಾ ಲ... ಲ ಲಾ ಲಾ...
ಲಾ ಲ ಲಾ... ಲಾ ಲ ಲಾ...ಲಾ... ಲ ಲಾ...
ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ
ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ
ಹೃದಯದ ಹಾದಿ ಹಿಡಿಯಲೇ ಬೇಕು ನೀ ಸುಮ್ಮನೇ...
ಹೇ..ಹೆ ಹೇ... ಯಾರಿಗೂ ತೀರದ ಖಾಸಗೀ ಸಂಭ್ರಮ ಪ್ರೀತಿಗೇ...
ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ
ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ
ಹೃದಯದ ಹಾದಿ ಹಿಡಿಯಲೇ ಬೇಕು ನೀ ಸುಮ್ಮನೇ...

ಕಣ್ಣನು ಮುಚ್ಚಿ ನೋಡಿದರೂನೂ... ಕಾಣುವ ಲೋಕ ಉನ್ಮಾದಕಾ...
ಸಂದಣಿಯಲ್ಲೂ ಕೇಳಿಸುವಂತ ದೂರದ ರಾಗ ಸಂಮೋಹಕಾ...
ಇನ್ನೆಲ್ಲಿದೇ ಈ ರೀತಿಯಾ ಸದ್ದಿಲ್ಲದಾ ಆಮಂತ್ರಣಾ
ಹೋದಲ್ಲಿ ಬಂದಲ್ಲಿ ನಿಂತಲ್ಲಿ ರೋಮಾಂಚನಾ...
ಹೇ..ಹೆ ಹೇ... ಯಾರಿಗೂ ತೀರದ ಖಾಸಗೀ ಸಂಭ್ರಮ ಪ್ರೀತಿಗೇ...
ಕನಸಿನ ಮಾಯ ಕನ್ನಡಿಯಲ್ಲೀ ಮೂಡಿದೆ ರೂಪ ಸಂತೋಷಕೇ...
ನೆನಪಿನ ನೂರು ಬಣ್ಣಗಳಲ್ಲೀ.. ಬಂದಿದೆ ಜೀವ ಸಂದೇಶಕೇ...
ಈ ಯಾನವೂ ಇನ್ನೂ ಖುಷೀ ಇದ್ದಾಗಲೇ ಈ ಭಾವನೇ
ಬೇಕಿಲ್ಲ ಬಾಳಲ್ಲೀ ಬೇರೇನು ಸಂಪಾದನೇ...
ಹೇ..ಹೆ ಹೇ... ಯಾರಿಗೂ ತೀರದ ಖಾಸಗೀ ಸಂಭ್ರಮ ಪ್ರೀತಿಗೇ...
ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ
ಹೃದಯದ ಹಾದಿ ಹಿಡಿಯಲೇ ಬೇಕು ನೀ ಸುಮ್ಮನೇ...
-------------------------------------------------------------------------------------------------------------------------

ಚಿರು (೨೦೧೦) - ಇಲ್ಲೇ  ಎಲ್ಲೊ ನನ್ನ ಮನಸು ಕಾಣೆಯಾಗಿದೆ
ಸಂಗೀತ: ಗಿರಿಧರ್ ದಿವಾನ್  ಸಾಹಿತ್ಯ: ಗೌಸ್ ಪೀರ್ ಗಾಯಕ: ಸೋನು ನಿಗಮ್, ಶ್ರೇಯಾ ಘೋಷಾಲ್ 
 
ಇಲ್ಲೇ  ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲೇ  ಎಲ್ಲೊ ನನ್ನ ಮನಸು ಕಾಣೆಯಾಗಿದೆ.......

ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾಡಿದೆ
ಏನು ಸ್ಪಷ್ಟ ವಾಗದಂತ ಭಾವ ಇಷ್ಟ ವಾಗಿದೆ
ಇಂತ ಆಸೆ ಏಕಿದೆ ನನಗೇ ಅರ್ಥ ವಾಗದೆ
ಸಾಕು ಮಾಡು ನಿನ್ನ ಕನಸು ತುಂಬಾ ದೂರಹೋಗಿದೆ
ನೋಡು ನೋಡು ಲೋಕವೆಲ್ಲ ಪ್ರೇಮಲೋಕದಂತಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ಇಲ್ಲೇ ಇಲ್ಲಿ ಎಲ್ಲೊ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ

ಓ... ಉಸಿರು ಉಸಿರಿನಲ್ಲಿಯು ಯಾರು ಬೆರೆತ ಸೂಚನೆ
ಎಂದು ಹೀಗೆ ಇರಲಿ ಇಂತ ಮಧುರವಾದ ಯಾತನೆ
ಏಕೆ ಇಂತ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆನೆ
ಸವಿಯೋ ಸವಿಯೋ ನನ್ನ ಒಳನೆ ಕುಶಿಯ ಸ್ಪರ್ಷವಾಗಿದೆ
ಹೇಳದೇನೆ ಕೇಳದೇನೇ ನನಗೇ ಏನೋ ಆಗಿದೆ
ಇಲ್ಲ್ಲೇಇಲ್ಲಿ ಇಲ್ಲೋ ನನ್ನ ಮನಸು ಕಾಣೆಯಾಗಿದೆ
ನಿನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೇ ನನಗೆ ಏನೋ ಆಗಿದೆ
ನಿಲ್ಲೇ ನಿಲ್ಲೇ ನಿಲ್ಲೇ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೇ ನಿನಗೆ ಏನೋ ಆಗಿದೆ
ಇಲ್ಲೇ  ಎಲ್ಲೊ ನನ್ನ  ಕಾಣೆಯಾಗಿದೆ.......
--------------------------------------------------------------------------------------------------------------------------

ಚಿರು (೨೦೧೦) - ಶಂಬೋ ಶಿವ ಶಂಕರ ಅವನಾಟ ಥರಥರ 
ಸಂಗೀತ: ಗಿರಿಧರ್ ದಿವಾನ್  ಸಾಹಿತ್ಯ: ರಾಮನಾರಾಯಾಣ ಗಾಯಕ: ಉದಿತ ನಾರಾಯಣ 

ಶಂಬೋ ಶಿವ ಶಂಕರ ಅವನಾಟ ಥರಥರ
ಶಂಬೋ ಶಿವ ಶಂಕರ ಅವನಾಟ ಥರಥರ
ಅಗೊಂತರ ಈಗೊಂತರ ಮುಂದೊಂತರ....
ಆಗೋದೆಲ್ಲ ಆಗಲಿ ಹಾಯಾಗಿರು
ಏನೇ ಎದುರಾಗಲಿ ಖುಶಿ ಆಗಿರು
ಶಂಬೋ ಶಿವ ಶಂಕರ ಅವನಾಟ ಥರಥರ  ಶಂಬೋ ಶಿವ ಶಂಕರ ......

ಸಮಯ ಸರಿದ ಮೇಲೆ ಮರಳಿ ಬರದೋ ನಾಳೆ
ಅನುಭವಿಸು ಉಲ್ಲಾಸ ಇದುವೇ ಕೊನೆ ಅವಕಾಶ
ಕಣ್ಣಮುಂದೆ ಕಾಣೋ ಸಿರಿಯಾ ಸವಿಯೋಣ ಬಾ
ಮುಂಗಾರಿನಂತ ಕನಸ ಕುಣಿಯೋಣ ಬಾ
ಒಂದೊಂದು ನಿಮಿಷಾನು ನಗು ನಗುತ ನಾವು ಬಾಳುವ
ಆಗೋದೆಲ್ಲ ಅಗಲಿ ಹಾಯಾಗಿರು  ಏನೇ ಎದುರಾಗಲಿ ಖುಶಿಯಾಗಿರು.....
ಹೇ..ಹೆ ಹೇ... ಲ ಲಾ ಲ... ಲ ಲಾ ಲಾ...

ಮನಸು ಬಯಸೋದೆಲ್ಲ ಸುಲಭವಾಗಿ ಸಿಗೋದಿಲ್ಲ
ಕನಸು ನನಸಾದಾಗ ಸಿಗುವ ಖುಶಿ ಎಲ್ಲೆಲ್ಲಾ
ಬರುವಾಗ ಖಾಲಿ ಹೊರಟಾಗಲೂ ಖಾಲಿ
ನೋವಿಸ್ಟು ನಲಿವಿಸ್ಟು ಸರಿ ಸಮವು ಬಾಳಲ್ಲಿ...
ಹಿಂದೇನು ಮುಂದೇನು ನಲಿ ನಲಿದು ಬಾಳು ಬಾಳಲಿ
ಆಗೋದೆಲ್ಲ ಅಗಲಿ ಹಾಯಾಗಿರು ಏನೇ ಎದುರಾಗಲಿ ಖುಶಿಯಾಗಿರು
ಶಂಬೋ ಶಿವ ಶಂಕರ ಅವನಾಟ ಥರಥರ
ಶಂಬೋ ಶಿವ ಶಂಕರ ಅವನಾಟ ಥರಥರ
ಅಗೊಂತರ ಈಗೊಂತರ ಮುಂದೊಂತರ....
ಆಗೋದೆಲ್ಲ ಆಗಲಿ ಹಾಯಾಗಿರು ಏನೇ ಎದುರಾಗಲಿ ಖುಶಿ ಆಗಿರು
--------------------------------------------------------------------------------------------------------------------------

ಚಿರು (೨೦೧೦) - ಓಲಾಲಾಲ 
ಸಂಗೀತ: ಗಿರಿಧರ್ ದಿವಾನ್  ಸಾಹಿತ್ಯ: ರಾಮನಾರಾಯಾಣ ಗಾಯಕ: ಕುನಾಲ್ ಗುಂಜಾವಾಲ


--------------------------------------------------------------------------------------------------------------------------

ಚಿರು (೨೦೧೦) - ಒಲವನು ಹೇಳೂ
ಸಂಗೀತ: ಗಿರಿಧರ್ ದಿವಾನ್ ಸಾಹಿತ್ಯ: ಮಹೇಶ ಬಾಬು ಗಾಯಕ: ಉದಿತನಾರಾಯಣ, ಅನುರಾಧ ಭಟ್ಟ

ಹೆಣ್ಣು : ಒಲವನ್ನು ಹೇಳು ಬಾರೋ ಒಲವಿಂದ ನನ್ನ ಸೇರೊ
          ಒಲವನ್ನು ಹೇಳು ಬಾರೋ ಒಲವಿಂದ ನನ್ನ ಸೇರೊ
          ಅಸು ನಿಗೋ ಮುನ್ನ ಒಲವೇ ತುಸು ಪ್ರೀತಿ ನೀಡು ನಲಿವೆ
          ಅಸು ನಿಗೋ ಮುನ್ನ ಒಲವೇ ತುಸು ಪ್ರೀತಿ ನೀಡು ನಲಿವೆ
ಗಂಡು : ಒಲವನ್ನು ಹೇಳುವಾಸೆ ಒಲವಿಂದ ಸೇರುವಾಸೆ
           ನಿನ್ನ ದಾರಿ ಬೇರೆ ಮನಸೇ ನನ್ ಒಲವು ಎಂದು ಕನಸೇ
           ನಿನ್ನ ದಾರಿ ಬೇರೆ ಮನಸೇ ನನ್ ಒಲವು ಎಂದು ಕನಸೇ

ಹೆಣ್ಣು : ಆ  ಪರಿಚೆಯ ಆ ಅತಿಶೆಯ ಮರೆಯಲಾರೆ ಒಲವೆ
ಗಂಡು : ಆ ಗಳಿಗೆಯ ಆ ಅ ಸಲಿಗೆಯ ಬಯಕೆ ಏಕೆ ಅರಿಯೆ
ಹೆಣ್ಣು : ಕಹಿಯಾಗದೇ ಓ.. ಓ ..ಓ ಕಹಿಯಾಗದೇ ಉಸಿ ಆಗದೇ
          ಸವಿಯಾಗಿ ಬಳಿಗೆ ಬರೊ 
ಗಂಡು : ಎಂದು ಇರದ ಅಂಜಿಕೆ ಒಂದು ನನ್ನ ಕಾಡಿದೆ
ಹೆಣ್ಣು : ಅಸು ನಿಗೋ ಮುನ್ನ ಒಲವೆ
ಗಂಡು : ತುಸು ಪ್ರೀತಿ ನೀಡು ನಲಿವೆ
ಹೆಣ್ಣು : ಅಸು ನಿಗೋ ಮುನ್ನ ಒಲವೆ
ಗಂಡು : ತುಸು ಪ್ರೀತಿ ನೀಡು ನಲಿವೆ
ಹೆಣ್ಣು :  ಅ ಅ ಅ ಅ  ಅ ಅ ಅ ಅ
ಗಂಡು : ಏ ಏ ಹೇ ಎ ಎ ಹೇ ಅಹ ಅಹ ಲಾ ಲಾ ಲಾ ಹ ಹ

ಗಂಡು : ನಿನ್ ಇಲ್ಲದ ನಿನ್ ಅಲ್ಲದ ಬದುಕೇ ಇಲ್ಲ ನನಗೆ
            ನಿನ್ ಇದ್ದರೆ ನಿನ್ ಎಂದರೆ ನನಗೆ ಜೀವ ತಿಳಿಯೆ
            ನೆಪ ಮಾತ್ರಕೆ ಹೊ ಹೂ ನೆಪ ಮಾತ್ರಕೆ ದೇಹ ಇದೇ
            ಅದಕೀಗ ಪ್ರಾಣ ನೀನೇ ನೀನು ಸನಿಹ ವಿರದ ವಿನಹ
            ಬಾಳು ಶೊನ್ಯವೇ ಹೀಗೇಕೆ ನಿನು ಒಲವೆ ನವಿರಾಗಿ ಕಾಡು ತಿರುವೆ
            ಹೀಗೆಕೆ ನಿನು ಒಲವೆ ನನ್ನನ್ನು ಕಾಡುತಿರುವೆ 
            ಹೀಗೆಕೆ ನಿನು ಒಲವೆ ನನ್ನನ್ನು ಕಾಡುತಿರುವೆ  ನನ್ ಏಕೆ ಕೊಲ್ಲುತಿರುವೆ ......
--------------------------------------------------------------------------------------------------------------------------

No comments:

Post a Comment