813. ಜೋಡಿ ಹಕ್ಕಿ(1997)

ಜೋಡಿ ಹಕ್ಕಿ ಚಿತ್ರದ ಹಾಡುಗಳು 
  1. ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು 
  2. ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ ನನ್ನ ಚೆಲುವಿಗೆ ಸೊಗಸಾದ ಲಾಲಿ
  3. ಕುದುರೆ ಏರಿ ಸೂರ್ಯ ಬಂದಾನೋ 
  4. ನೀಲ ನೀಲ ನೀಲಾಂಬರಿ 
  5. ಜಾಲಿ ಜಾಲಿ ಹಾಲಿಡೇ 
  6. ಓ ಚಂದಮಾಮ 
  7. ಹಾಡು ಕೇಳಿ ಹಾಡು 
  8. ನಮನ ನಮನ ಸಿರಿದೇವಿಗೇ 
ಜೋಡಿ ಹಕ್ಕಿ(1997) - ಹರ ಹರ ಗಂಗೆ
ಸಂಗೀತ: ವಿ ಮನೋಹರ್,  ಚಿತ್ರಗೀತೆ: ವಿ ಮನೋಹರ. ಗಾಯನ: ಡಾ ರಾಜಕುಮಾರ

ಹೇ ಹೇ ಹೇ ಹೇ ಆಆಆಆಆಆ
ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ ...
ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ ...

ಹೇ...  ಕಂಗಳ ಕೊಟ್ಟೆ  ದೃಷ್ಟಿಯ ಕಿತ್ತೆ ಕನಸುಗಳೆಲ್ಲ ಕಪ್ಪಾಯ್ತು
ಗುಂಡಿಗೆ ಇಟ್ಟೆ ಪ್ರೀತಿಯ ಕಿತ್ತೆ ಆಸೆಯ ಬಳ್ಳಿ ಸುಟ್ಟೊಯ್ತು
ಚಿನ್ನದ ಸೂಜಿ ಆದ್ರು ಹ್ಯಾಂಗೆ ಕಣ್ಣಿಗೆ ಚುಚ್ಚೊಕಾಗುತ್ತ
ಒಡಲಿನ ಬೆಂಕಿ ಆದ್ರು ಕೂಡ ಮಡಿಲಲ್ಲ್ ಮಡುಗೋಕ ಆಗುತ್ತ
ಏನೇನು ಕೊಟ್ಟೆ ಶಿವನೇ ಮಾಯ ಬಂಢಾರದವನೆ
ಯಾವ್ದೊ ಜನ್ಮದ ಕೋಪವ ಮರ್ತಿಲ್ಲ ಶಿವ ಈ ಜನ್ಮಕ್ಕಿಂಗೆ ತೋರ್ಸವ್ನೇ
ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ ...

ಹೇ..  ರೂಪವ ಕೊಟ್ಟೆ ರೂಪದ ಕೂಡ ಶಾಪವ ಕೊಟ್ಟೆ ಯಾಕ್ ಹೇಳು
ಚಂದದ ಹೂವು ಸಂಜೆಗೆ ಬಾಡಿ ಹೋಗೊದ್ ಯಾಕೆ ನೀ ಹೇಳು
ಮುತ್ತಿನ ಮುತ್ತು ಎದೆಯೊಳ್ಗಿಟ್ಟು ಮಾಡಿದೆ ನಾನು ಜೋಪಾನ
ಅಯ್ಯೊ ವಿಧಿಯೆ ಮುತ್ತೊಡೆದೊಯ್ತು ಯಾರಿಗೆ ದುಖಃ ಹೇಳೋಣ
ನನ್ನಾಸೆ ಬಳ್ಳಿ ಕುಸುಮಾ ಬೆಂದೋಗಿ ಬೂದಿ ಆಯಿತೆ
ಮನಸಾರೆ ಆತ್ತು ಬಿಡಲೆ ಹ್ಯಾಗ ಅಳಲಿ ಶಿವನೆ ಕಣ್ಣೀರೆ ಬತ್ತಿ ಹೋಗೈತೆ
ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ ...
ಹರ ಹರ ಗಂಗೆ ಹರ ಹರ ಗಂಗೆ ಕೇಳು ಕೇಳು ಕೇಳು ಕೇಳು
ವಿಧಿ ಬರೆದಂಗೆ ನಡೆದರೆ ಹೆಂಗೆ ಹೇಳು ಹೇಳು ಹೇಳು
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ
ಹೂವು ಹಾವಾಗೋಯ್ತೊ  ಹಾಲು ನಂಜಾಯ್ತೊ ...
-------------------------------------------------------------------------------------------------------------------------

ಜೋಡಿ ಹಕ್ಕಿ(1997) - ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ
ಸಂಗೀತ: ವಿ ಮನೋಹರ್,  ಚಿತ್ರಗೀತೆ: ವಿ ಮನೋಹರ. ಗಾಯನ: ಎಲ್ ಎನ್ ಶಾಸ್ತ್ರಿ

ಓಓಓಓಓ... ಓಓಓಓಓ... ಓಓಓಓಓ ಹೇಹೇಹೇಹೇ ರೇ ರೇ ರೇ ರೇ ರಾ ರೇ ರೇ ರೇ ರೇ ರಾ
ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ ನನ್ನ ಚೆಲುವಿಗೆ ಸೊಗಸಾದ ಲಾಲಿ
ಮನಕೆ ಮುಗಿಲಿನ ರಾಜಕುಮಾರಿ ಕನಸಾಗೆ ಬರುವೇ ನಾ ಕೇಳೆ ಚಿಂಗಾರಿ
ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ ನನ್ನ ಚೆಲುವಿಗೆ ಸೊಗಸಾದ ಲಾಲಿ

ಒಂದು ಮಾತಾಡೊ ಹೂವ ಕಂಡೆ ನಾನು ಬಾಡದಂಥ ಪ್ರೀತಿಯ ಹೂವು ನೀನು
ನಿನ್ನ ಮನಸಾಗೆ ಎಲ್ಲ ಬರಿ ಜೇನು ಇನ್ನು ಇದಕಿನ್ನ ದೊಡ್ಡದಲ್ಲ ಏನು
ನನ್ನ ಬಾಳ ಸಂತೋಷವೆಲ್ಲ ನೀನೆ ನನ್ನ ಹಾಡು ಸಂಗೀತವೆಲ್ಲ ನೀನೆ
ನನ್ನುಸಿರು ಪ್ರಾಣ ಬದುಕು ಎಲ್ಲ ನೀನಮ್ಮ ನನ್ನಾಸೆ ಕನಸ ಉಳಿಸೊ ಜೀವ ನೀನಮ್ಮ
ನಿದಿರೆಯ ದೇವಿ ಹಾಡ್ಯಾಳೆ ಲಾಲಿ ಹಾಯಾಗಿ ಮಲಗೆ ಜೋಗುಳ ಕೇಳಿ

ಯಾವ ಜನುಮಾದ ಬಂಧ ನಮ್ಮ ಜೋಡಿ ನಾನು ನಿನ್ನ ನೀ ನನ್ನ ಜೀವ ನಾಡಿ
ಹೋ..  ಮೇಲೆ ಮುಕ್ಕೋಟಿ ದೈವವೊಮ್ಮೆ ನೋಡಿ ತುಂಬು ಹಾರೈಸುವರು ಶುಭ ಹಾಡಿ
ಕಣ್ಣ ಮುಂದೆ ಸೌಭಾಗ್ಯ ಅಂದ್ರೆ ನೀನೆ ಪ್ರೀತಿ ಧಾರೆ ದೇವತೆ ನಂಗೆ ನೀನೆ
ಕೊನೆವರೆಗೂ ಉಳಿಯೊ ಆಸ್ತಿ ಪ್ರೀತಿ ಒಂದೇನೆ ಅದನೆಂದು ಕಾಯಬೇಕು ನಿತ್ಯ ಹಿಂಗೆನೆ
ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ ನನ್ನ ಚೆಲುವಿಗೆ ಸೊಗಸಾದ ಲಾಲಿ
ಮನಕೆ ಮುಗಿಲಿನ ರಾಜಕುಮಾರಿ ಕನಸಾಗೆ ಬರುವೇ ನಾ  ಕೇಳೆ ಚಿಂಗಾರಿ
ಲಾಲಿ ಸುವ್ವಾಲಿ ಹಾಡೆಲ್ಲ ಲಾಲಿ ನನ್ನ ಚೆಲುವಿಗೆ ಸೊಗಸಾದ ಲಾಲಿ
--------------------------------------------------------------------------------------------------------------------------

ಜೋಡಿ ಹಕ್ಕಿ(1997) - ಕುದುರೇ ಏರಿ ಸೂರ್ಯ ಬಂದವನೇ ..
ಸಂಗೀತ: ವಿ ಮನೋಹರ್, ಚಿತ್ರಗೀತೆ: ವಿ ಮನೋಹರ. ಗಾಯನ:  ರಾಜೇಶ ಕೃಷ್ಣನ

ಗಂಡು : ಹೇಹೇ ಹೇಹೇ ಹೇಹೇ  ... ಹೇಹೇಹೇ ಓಹೋ ಒಹೋ ಹೋಹೊಹೋ
            ಕುದುರೇ ಏರಿ ಸೂರ್ಯ ಬಂದವನೇ ... ನಿದಿರೆ ಆರೋ ಮದ್ದು ತಂದವನೇ
           ಮುಂಜಾನೆ ಬಳಗ ಬೆಳಕ್ಕಿ ಬಳಗ...  ರಂಗೋಲಿ ಬಿಡಿಸಿ ಹಾಸೈತೆ ಸೆರಗ 
          ಹೊತ್ತಾರೇ ಒಳಗು ಹುಣ್ಣಿಮೆ ಬೆಳಕ ಮುದ್ದಾದ ಹೂಗಳ ರೇಶಿಮೆ ಜಳಕ
          ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಓಓಓಓಓ 
         ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ  ಓಓಓಓಓ 
         ಕುದುರೇ ಏರಿ ಸೂರ್ಯ ಬಂದವನೇ ... ನಿದಿರೆ ಆರೋ ಮದ್ದು ತಂದವನೇ 
ಕೋರಸ್ :  ಓ ದಿನ ಸುದ್ದಿ ಬರ ಮುಂದ ಹಾಡ್ ಐತಿ  ಓ ದಿನ ಸುದ್ದಿ ಬರ ಮುಂದ ಹಾಡ್ ಐತಿ

ಕೋರಸ್ : ಲೇಲೇಲೇಲೇ ಲೇಲೇಲೇಲೇ ಲೇಲೇ  ಲೇಲೇ
ಗಂಡು : ಆಹಾ ಮುದ್ದು ಬಾಲೆಯು ಹಸಿರ ಸೀರೆ ಉಟ್ಟಳು ಹೊನ್ನ ಜಾರಿಯ ಕುಪ್ಪಸ ಕಿರಣ ಸೆರಗ ಹೊದ್ದಾಳು 
            ಇನ್ನೂ ಎಲ್ಲ ಚಿಂತೆಯು ನಿನ್ನ ಲೆಕ್ಕಕ್ಕೆ ಎಂದಳು ಇಂದು ಎಲ್ಲ ಹಳೆಯು ಹೊಸತೆಂದಳು 
           ದಿನವೂ ನಗುತ ಬರುವ ಬೆಳಕು ಕಾಣಾವತನ ಪುಣ್ಯ ಕಂಡ ಮೇಲೆಯೇ ಧನ್ಯ 
           ಹ್ಹಾಂ .. ಕುದುರೇ ಏರಿ ಸೂರ್ಯ ಬಂದವನೇ ... ನಿದಿರೆ ಆರೋ ಮದ್ದು ತಂದವನೇ 

ಕೋರಸ್ : ಕಡಗ ಬಾಗಿಲ ತೆರೆಯಿರೇ ..ಗೌರಿಗೇ  ಕಡಗ ಮೇವಾಲು ತೊಡಿಸಿರಿ ಗೌರಿಗೇ
                ಉಡುಗರೇ ಬಾಗಿನ ಕಳಿಸಿರಿ ತೌರಿಗೇ  
ಗಂಡು : ಸುರ ಸುಂದರಾಂಗನೂ ನಕ್ಕು ಬಂಗಾರ ಬಣ್ಣ ಎಲ್ಲ ಜೀವ ಜೀವನ ಈಗ ಶುರೂ ನೋಡಣ್ಣಾ 
           ಹುಟ್ಟೋ ರಂಗು ಅಲೈತೇ ಹೋಗೋ ರಂಗು ಅಲೈತೆ ಎಲ್ಲಾ ರಂಗು ರಂಗು ಬಾಳಿನ ಬಣ್ಣವೇ  
          ನಿದಿರೇ ಕಳೆದು ಕಣ್ಣತೆರೆದಾಗ ಕೋಟಿ ಜೀವನ ರಾಶಿ ಆಸೆ ಎದುರಿಗೆ ಹಾಸಿ 
          ಕುದುರೇ ಏರಿ ಸೂರ್ಯ ಬಂದವನೇ ... ನಿದಿರೆ ಆರೋ ಮದ್ದು ತಂದವನೇ
          ಮುಂಜಾನೆ ಬಳಗ ಬೆಳಕ್ಕಿ ಬಳಗ ರಂಗೋಲಿ ಬಿಡಿಸಿ ಹಾಸೈತೆ ಸೆರಗ 
         ಹೊತ್ತಾರೇ ಒಳಗು ಹುಣ್ಣಿಮೆ ಬೆಳಕ ಮುದ್ದಾದ ಹೂಗಳ ರೇಶಿಮೆ ಜಳಕ
          ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಓಓಓಓಓ 
         ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ ಲಾಲಿ  ಓಓಓಓಓ 
--------------------------------------------------------------------------------------------------------------------------

ಜೋಡಿ ಹಕ್ಕಿ(1997) - ನೀಲಾ ನೀಲಾ ನೀಲಾಂಬರಿ
ಸಂಗೀತ: ವಿ ಮನೋಹರ್, ಚಿತ್ರಗೀತೆ: ವಿ ಮನೋಹರ. ಗಾಯನ:  ರಾಜೇಶ ಕೃಷ್ಣನ, ಚಿತ್ರಾ 

ಗಂಡು : ನೀಲಾ ನೀಲಾ ನೀಲಾಂಬರಿ ನನ್ನ ಬಾಳಾ ಭಾಗ್ಯ ಸಿರಿ ನನಗೇ ಚೇತನ ನಿನ್ನಾ ಧ್ಯಾನ
            ನೀಲಾ ನೀಲಾ ನೀಲಾಂಬರಿ ನನ್ನ ಬಾಳಾ ಭಾಗ್ಯ ಸಿರಿ

ಹೆಣ್ಣು : ನೂರು ಪದ ಮಣಿಯು ಸೇರಿ ಲಾವಣಿಯು
ಗಂಡು : ನನ್ನಾ ಲಾವಣಿ ನೀನೇ ಮಣಿ ನನ್ನ ಕಣ್ಮಣಿ ನೀನೇ ಗಿಣಿ
ಹೆಣ್ಣು : ಬದುಕಲಿ ನಗುವನು ಬರೆದವ ಪರಶಿವ ಸುಖವನು ಹರಿಸಿದನು
ಗಂಡು : ಹೃದಯವನಾರಸಿ ತಿಳಿಸದೇ ಸೇರಸಿ ಅರಳಿಸಿ ನೋಡುವನು
            ನೀಲಾ ನೀಲಾ ನೀಲಾಂಬರಿ ನನ್ನ ಬಾಳಾ ಭಾಗ್ಯ ಸಿರಿ ನನಗೇ ಚೇತನ ನಿನ್ನಾ ಧ್ಯಾನ
            ನೀಲಾ ನೀಲಾ ನೀಲಾಂಬರಿ ನನ್ನ ಬಾಳಾ ಭಾಗ್ಯ ಸಿರಿ 

ಗಂಡು : ಏಳು ಜನುಮಗಳು ಕೇಳಿ ಪಡೆದವರು 
ಹೆಣ್ಣು : ಮುಂದೆ ಜನುಮ ಇದೆ ಎಂದಾದರೆ ಹೀಗೆ ಸೇರಿಸಯ್ಯ ಓ ದೇವರೇ 
ಗಂಡು : ತಪಸ್ಸಿನ ಫಲವಿದು ಒಲವಿನ ಛಲವಿದು ಬದುಕಿಗೆ ಹೊಂಗಿರಣ 
ಹೆಣ್ಣು : ಕುಣಿಯುವ ಮನ್ಮಥ ಹರುಷವ ತಂದನು ನಗುವಿನ ಸಂಕ್ರಮಣ 
ಗಂಡು : ನೀಲಾ ನೀಲಾ ನೀಲಾಂಬರಿ ನನ್ನ ಬಾಳಾ ಭಾಗ್ಯ ಸಿರಿ ನನಗೇ ಚೇತನ ನಿನ್ನಾ ಧ್ಯಾನ
           ನೀಲಾ ನೀಲಾ ನೀಲಾಂಬರಿ ನನ್ನ ಬಾಳಾ ಭಾಗ್ಯ ಸಿರಿ 
--------------------------------------------------------------------------------------------------------------------------

ಜೋಡಿ ಹಕ್ಕಿ(1997) - ಜಾಲಿ ಜಾಲಿ ಹಾಲಿಡೆ ಹೋಲಿ ಹೋಲಿ ಹಾಲಿಡೇ
ಸಂಗೀತ: ವಿ ಮನೋಹರ್, ಚಿತ್ರಗೀತೆ: ವಿ ಮನೋಹರ. ಗಾಯನ: ರಾಜೇಶ ಕೃಷ್ಣನ

ಕೋರಸ್ : ಹೋ ಹೋಹೋ ಹೋ ಹೋಹೋ ಹೋ ಹೋಹೋ ಹೋ ಹೋಹೋ
ಗಂಡು : ಜಾಲಿ ಜಾಲಿ ಹಾಲಿಡೆ ಹೋಲಿ ಹೋಲಿ ಹಾಲಿಡೇ ನೀವೂ ಹರಿಸಿದರೇ ನಿಮ್ಮಾ ಸೇವೆ ಎವೆರಿಡೇ
           ಜಾಲಿ ಜಾಲಿ ಹಾಲಿಡೆ ಹೋಲಿ ಹೋಲಿ ಹಾಲಿಡೇ..  ಹೇಹೇಹೇಹೇಹೇ .. ಹೇಹೇಹೇಹೇಹೇ
           ಜಾಲಿ ಜಾಲಿ ಹಾಲಿಡೆ.. ಹೇಹೇಹೇಹೇ  ಹೋಲಿ ಹೋಲಿ ಹಾಲಿಡೇ ..
ಕೋರಸ್ : ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ.....
               ದ ಪ್ರೇಯರ್ ಮ್ಯೂಸಿಕ್ ದ್ ಪವರ್ ಆಫ್ ದ ಮ್ಯೂಸಿಕ್ ನೇವರ್ ಎಂಡಿಂಗ್
               ಇಸ್ ಮೈ ರಿಂಗ್ ಹ್ರಾಂ ಹ್ರೀಂ ರಪ್ಪಪ್ಪ ರೀಂಬ ರೀಂಬ ರಾಪಾಪ ರೀಂಬ ರೀಂಬ ರಾಪಾಪ
               ಹ್ರಾಂ ಹ್ರೀಂ ರಪ್ಪಪ್ಪ ರೀಂಬ ರೀಂಬ ರಾಪಾಪ ರೀಂಬ ರೀಂಬ ರಾಪಾಪ ರೀಂಬ ರಾಪಾಪ
              ಆಆಆ... ಆಆಆ
ಗಂಡು : ನಿಮ್ಮ ಪ್ರೀತಿಯ ದಾಸನು ನಾನು
            ನಿಮ್ಮ ಪ್ರೀತಿಯ ದಾಸನು ನಾನು ಅಭಿಮಾನಕೆ ಮನ ಸೆಳೆದಿರೀ ಇಂದು
            ನಿಮ್ಮ ಪ್ರೀತಿಯ ದಾಸನು ನಾನು ತನು ನಿಮ್ಮದು ಮನ ನಿಮ್ಮದು ಋಣ ನಿಮ್ಮದು

ಕೋರಸ್ : ಝಂ ಛನನ ಝಂ ಛನನ ಝಂ ಛನನ ಝಂ ಝಂ ಝಂ ಝಂ ಝಂ
               ಝಂ ಛನನ ಝಂ ಛನನ ಝಂ ಛನನ ಝಂ ಝಂ ಝಂ ಝಂ ಝಂ
ಗಂಡು : ಓ ಬಲ್ಲೇ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆರೇ ಬಲ್ಲೇರೇ ಓ ಬಲ್ಲೆ ಬಲ್ಲೇ ಬಲ್ಲೆ ಬಲ್ಲೆ ಬಲ್ಲೆರೇ ಬಲ್ಲೇರೇ 
           ಜೋಡಿ  ಹಕ್ಕಿಯ ಹಾಡು ಎಲ್ಲೋ ಕೇಳೈತೆ ಹಾಡು ಹಾಡುತ ಕನಸಿನ ಜೀವ ತುಂಬೈತೆ 
           ಆಸೇ ಎಂಬ ಅರಳಿ ಮರದಲಿ ವಾಸವಗೈತೆ ಗಿಳಿ ಬಣ್ಣ ಬಣ್ಣದ ಕನಸು ಹೊತ್ತ  ಪಂಚರಂಗಿನ ಗಿಳಿ
           ಓಯ್ ಓಯ್ ಓಯ್ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆಬಲ್ಲೆಬಲ್ಲೆ ಬಲ್ಲೆ  ಬಲ್ಲೆರೆ...
          ಓ ಬಲ್ಲ ಬಲ್ಲ ಬಲ್ಲ ಬಲ್ಲ ಬಲ್ಲ ಬಲ್ಲ ಬಲ್ಲೆ ಬಲ್ಲೆಬಲ್ಲೆಬಲ್ಲೆ ಬಲ್ಲೆ  ಬಲ್ಲೆರೆ... 
ಗಂಡು : ಜಾಲಿ ಜಾಲಿ ಹಾಲಿಡೆ ಹೋಲಿ ಹೋಲಿ ಹಾಲಿಡೇ ನೀವೂ ಹರಿಸಿದರೇ ನಿಮ್ಮಾ ಸೇವೆ ಎವೆರಿಡೇ
           ಹೇಹೇಹೇಹೇಹೇ .. ಹೇಹೇಹೇಹೇಹೇ ನನನನ ಆಆಆ... ಆಆಆ.... ಆಆಆ....
--------------------------------------------------------------------------------------------------------------------------

ಜೋಡಿ ಹಕ್ಕಿ(1997) -  ಓ.. ಚಂದಮಾಮ ಓ.. ಚಂದಮಾಮ
ಸಂಗೀತ: ವಿ ಮನೋಹರ್, ಚಿತ್ರಗೀತೆ: ವಿ ಮನೋಹರ. ಗಾಯನ: ರಮೇಶಚಂದ್ರನ

ಓ.. ಚಂದಮಾಮ ಓ.. ಚಂದಮಾಮ ಬೆಳದಿಂಗಳ ಬೇಡಿದಾಗ
ಸುಡುವಂಥ ಬಿಸಿಲಾದೆಯಲ್ಲ ಒಡಲೆಲ್ಲಾ ಭುಗಿಲಾಯಿತಲ್ಲ
ಓ.. ಚಂದಮಾಮ ಓ.. ಚಂದಮಾಮ ಬೆಳದಿಂಗಳ ಬೇಡಿದಾಗ
ಸುಡುವಂಥ ಬಿಸಿಲಾದೆಯಲ್ಲ ಒಡಲೆಲ್ಲಾ ಭುಗಿಲಾಯಿತಲ್ಲ

ಎಲ್ಲಿಂದಲೋ ಒಂದೊಂದೇ ರಾಗ ಇಂಪಾಗಿ ಕೇಳುತಿತ್ತು 
ಎಲ್ಲಿಂದಲೋ ಬಂದಂಥ ರಾಗ ಒಂದೊಂದನೂ ಕೇಳುತ್ತ ಈಗ ನೆನಪಾಯ್ತು ಈ ಹಾಡು 
ಈ ಪ್ರೇಮಗೀತೆ ಅರಿವಿಲ್ಲದಂತೆ ಕಣ್ಣೀರ ಹಾಡಾಯಿತಲ್ಲ 
ಲಯವೀಗ ಲಯವಾಯಿತಲ್ಲ ಅನುರಾಗ ಶ್ರುತಿ ಸೇರಲಿಲ್ಲ
ಈ ಜೋಡಿ ಹಕ್ಕಿ ಎಂದೆಂದೂ ಒಂದೇ  ಎಂದಿದ್ದು ಸುಳ್ಳಾಯಿತು 
ಈ ಒಂಟಿ ಹಕ್ಕಿ ಕಣ್ಣೀರು ತುಂಬಿ ನರಳಾಡಿದಾಗ ಇನ್ನೊಂದು ಹಕ್ಕಿ ಭ್ರಮೆಯ ಹಿಂದೆಯೇ ಓಡಿತು 
ಪ್ರೀತಿಯ ಹೂವೇ ಮುಳ್ಳಾಗಿ ಚುಚ್ಚಿ ಕಣ್ಣಿಂದು ಕಾಣದಲ್ಲಾ ಬೇವಾಯಿತು ಪ್ರೀತಿ ಬೆಲ್ಲ 
ಆ ಕಹಿಯ ಶಿವ ಮಾತ್ರ ಬಲ್ಲ 
ಓ.. ಚಂದಮಾಮ ಓ.. ಚಂದಮಾಮ ಬೆಳದಿಂಗಳ ಬೇಡಿದಾಗ
ಸುಡುವಂಥ ಬಿಸಿಲಾದೆಯಲ್ಲ ಒಡಲೆಲ್ಲಾ  ಭುಗಿಲಾಯಿತಲ್ಲ
--------------------------------------------------------------------------------------------------------------------------

ಜೋಡಿ ಹಕ್ಕಿ(1997) -  ಲೇ..ಲೇ..ಲೇ... ಹಾ... ಉಲೆಲೇ ಲೇಲೇಲೇ 
ಸಂಗೀತ: ವಿ ಮನೋಹರ್, ಚಿತ್ರಗೀತೆ: ವಿ ಮನೋಹರ. ಗಾಯನ: ಶಿವರಾಜಕುಮಾರ 

ಗಂಡು : ಲೇ..ಲೇ..ಲೇ... ಹಾ... ಉಲೆಲೇ  ಲೇಲೇಲೇ ಲೇ..ಲೇ..ಲೇ... ಹಾ... ಉಲೆಲೇ ಲೇಲೇಲೇ
           ಹಾಡು ಕೇಳಿ ಹಾಡು ಕಾಡು ಹಕ್ಕಿ ಹಾಡು ಹಾಡಲೆಂದು ಗೂಡು ಬಿಟ್ಟಿ ನಾಡು ಸೇರಿತು
           ಪಾಡು ನೋಡು ಪಾಡು ಕಾಡು ಹಕ್ಕಿ ಪಾಡು ನಾಡಿಗಿಂತ ಕಾಡೇ ವಾಸಿ ಎಂದು ತಿಳಿಯಿತು
ಕೋರಸ್ : ಪಬಪಪ...

ಗಂಡು : ಯಾವ ಬಟ್ಟೆ ಬರೇ ದೇಶ ಯಾಕೆ ಹೋಗೋ ಮೈಯ್ ಮ್ಯಾಲೆ 
           ಯಾವ ಅಂದ ಚೆಂದ ನಿಲ್ಲೋದಿಲ್ಲ ಹಾಳು ಬುದ್ಧಿಮ್ಯಾಲೆ 
           ಆಕಾರ ಬಣ್ಣವಷ್ಟೇ ನೀವೆಲ್ಲ ಕೇಳಿ ಮನಸನ್ನ ನೋಡಿರಣ್ಣ 
          ಈ ಮನಸನ್ನ ನೋಡಲೆಂದೂ ತೆರಿಬೇಕು ನಿಮ್ಮ ಹೃದಯದ ಒಳಗಣ್ಣು 
         ನೀ ಪರರ ಹಂಗಿಸಿದರೇ ನಿನ್ನಾ ನೋಡಿ ನಗುವೋರ ಸಾವಿರ (ಹೊಯ್ ಹೊಯ್ ಹೊಯ್)
        ನಿನ್ನ ಒಳಗೆ ಇಣಕಿ ಒಮ್ಮೆ ನೋಡು ನೋಡು ನೀನೇನಾ ದ್ಯಾವರಾ ಹೊಯ್ ಹೊಯ್ ಹೊಯ್ 
        ಲೇ..ಲೇ..ಲೇ... ಹಾ... ಉಲೆಲೇ ಲೇಲೇಲೇ ಲೇ..ಲೇ..ಲೇ... ಹಾ... ಉಲೆಲೇ ಲೇಲೇಲೇ
        ಹಾಡು ಕೇಳಿ ಹಾಡು ಕಾಡು ಹಕ್ಕಿ ಹಾಡು ಹಾಡಲೆಂದು ಗೂಡು ಬಿಟ್ಟಿ ನಾಡು ಸೇರಿತು
        ಪಾಡು ನೋಡು ಪಾಡು ಕಾಡು ಹಕ್ಕಿ ಪಾಡು ನಾಡಿಗಿಂತ ಕಾಡೇ ವಾಸಿ ಎಂದು ತಿಳಿಯಿತು

ಕೋರಸ್ : ಉಲೆಲೇ ಉಲೆಲೇ ಉಲೆಲೇ ಉಲೆಲೇ ಉಲೆಲೇ 
ಗಂಡು : ಯಾರ ಹಣೆ ಬರಹ ಯಾರೀ ಇಲ್ಲಿ ಓದಿದವನಿಲ್ಲ 
            ಎಲ್ಲ ಬಲ್ಲವರು ಅಂದ್ಕೊಂಡೋರಿ ಏನೂ ಆಗಲಿಲ್ಲ 
            ಜೋಗಿ ಜೋಗಪ್ಪ ಕೂಡ ಮುಂದೊಮ್ಮೆ ದೇಶ ಅಳೋನು ಆದಾನು 
           ಮಾದೇವ ವರ ಕೊಜಲು ಹಾಡೇಳೋ ಹೈದ ಲೋಕಾವ ಕುಣಿಸ್ಯಾನು (ಹೊಯ್ ಹೊಯ್ ಹೊಯ್)
          ಶರಣು ಶರಣು ಶಿವ ಹೇಳೋ ವರೆಗೂ ಕುಣಿಯೋ ಕಾಯಕ ಹೇಹೇಹೇಹೇ ... 
         ನಾ ನಿಮ್ಮವ ನನ್ನಾ ಹರಸಿ ಬೆಳಸಿ ನಾ ನಿಮ್ಮ ಸೇವಕ 
        ಲೇ..ಲೇ..ಲೇ... ಹಾ... ಉಲೆಲೇ ಲೇಲೇಲೇ ಲೇ..ಲೇ..ಲೇ... ಹಾ... ಉಲೆಲೇ ಲೇಲೇಲೇ
ಹಾಡು ಕೇಳಿ ಹಾಡು ಕಾಡು ಹಕ್ಕಿ ಹಾಡು ಹಾಡಲೆಂದು ಗೂಡು ಬಿಟ್ಟಿ ನಾಡು ಸೇರಿತು
ಪಾಡು ನೋಡು ಪಾಡು ಕಾಡು ಹಕ್ಕಿ ಪಾಡು ನಾಡಿಗಿಂತ ಕಾಡೇ ವಾಸಿ ಎಂದು ತಿಳಿಯಿತು
(ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್)
--------------------------------------------------------------------------------------------------------------------------

ಜೋಡಿ ಹಕ್ಕಿ(1997) -  ನಮನ ನಮನ ಸಿರಿದೇವಿಗೆ 
ಸಂಗೀತ: ವಿ ಮನೋಹರ್, ಚಿತ್ರಗೀತೆ: ವಿ ಮನೋಹರ. ಗಾಯನ: ಶಂಕರ ಶಾನಭಾಗ, ಚಿತ್ರಾ  

ಹೆಣ್ಣು : ಆಆಆ... ಆಆಆ....
ಗಂಡು : ನಮನ ನಮನ ಸಿರಿದೇವಿಗೆ ಬದುಕನ್ನು ಬರೆದಂಥ ವರದೇವಿಗೆ
           ಶಿಲೆಯನ್ನೂ ಕಡೆದು ಕಲೆಯಾಗಿಸಿ ನೆಲೆ ನೀಡಿದ ಈ ವಾಗ್ದೇವಿಗೇ
           ನಮನ ನಮನ ಸಿರಿದೇವಿಗೆ ಬದುಕನ್ನು ಬರೆದಂಥ ವರದೇವಿಗೆ
           ಶಿಲೆಯನ್ನೂ ಕಡೆದು ಕಲೆಯಾಗಿಸಿ ನೆಲೆ ನೀಡಿದ ಈ ವಾಗ್ದೇವಿಗೇ

ಹೆಣ್ಣು : ಆಆಆ... ಆಆಆ.... ಆಆಆ....
ಗಂಡು : ಎಲ್ಲೋ ಮೂಲೆಯಲ್ಲಿ ಇದ್ದ ಕಲ್ಲು ನಾನು ನನ್ನ ತಿದ್ದಿ ತಿದ್ದಿ ಕಡೆದೇ
           ಒಂದು ಆಸರೆಯ ಸೂರು ನೀಡುತಲಿ ನನ್ನ ಹಾರೈಸುತ ನಲಿದೆ
           ಗುರುವಿನ ಥರ ಗೆಳತಿಯ ತರಹ ಬಂದೇ ನೀ ಯಾವ ಬಂಧುವೋ ನೀ
          ಜನುಮದ ಋಣ ಮಮತೆಯ ಋಣ ಭಾರವ ಹೇಗೆ ತೀರಿಸಲಿ
ಹೆಣ್ಣು : ನಮನ ನಮನ ಕಲೆಗಾರಗೆ ಕಲೆಗಾಗಿ ಮುಡಿಪಾದ ಈ ಜೀವಿಗೇ
          ಆ ದೇವ ಕೂಡ ತಲೆದೂಗುತ ಒಲಿದಾಯ್ತು ಇಂಥ ಮಹನಿಯಗೆ

ಹೆಣ್ಣು : ಆಆಆ... ಆಆಆ.... ಆಆಆ....
           ಆ ಶಿವನು ಹರಸಲಿ ಈ ಜಗದಿ ಕಲ್ಲರುಳುವುದೂ 
          ನೀ ಪಡೆದ ವರವಿದು ಈ ಕಲೆಯ ರೂಪವದೂ 
          ನಿನದೇ ಕಲೆಯು ನಿನದೇ ಬೆಲೆಯು ನನ್ನದೇನಿದೆ
          ಮಧುರ ಬದುಕು ಸಿಗಲಿ ಎನುತ ಹಾರೈಸುವೇ
ಗಂಡು : ನಮನ ನಮನ ಸಿರಿದೇವಿಗೆ ಬದುಕನ್ನು ಬರೆದಂಥ ವರದೇವಿಗೆ
            ಶಿಲೆಯನ್ನೂ ಕಡೆದು ಕಲೆಯಾಗಿಸಿ ನೆಲೆ ನೀಡಿದ ಈ ವಾಗ್ದೇವಿಗೇ
ಹೆಣ್ಣು : ಆಆಆ... ಆಆಆ.... ಆಆಆ....
--------------------------------------------------------------------------------------------------------------------------

No comments:

Post a Comment