814. ಸಿ.ಬಿ.ಐ.ಶಂಕರ್ (೧೯೮೯)


ಸಿ.ಬಿ.ಐ ಶಂಕರ ಚಿತ್ರದ ಹಾಡುಗಳು 
  1. ಗೀತಾಂಜಲಿ…ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ
  2. ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ
  3. ಇದು ಮಾಯಾ ಬಜಾರು ಕುಣಿವಾಗ ಹುಷಾರು ...
  4. ಓಟ್ ಫಾರ್ ಓಟ್ ಫಾರ್ ಟೀನೇಜಿಗೆ
  5. ಏಕ್ ದೋ ತೀನ್ ಚಾರ್ ಒಂದು ಎರಡು ಮೂರೂ ನಾಲ್ಕು 

ಸಿ.ಬಿ.ಐ.ಶಂಕರ್ (೧೯೮೯)
ಸಾಹಿತ್ಯ, ಸಂಗೀತ: ಹಂಸಲೇಖ ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯ

ಗೀತಾಂಜಲೀ …ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ
ಪುಷ್ಪಾಂಜಲಿ…ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ
ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ
ಗೀತಾಂಜಲಿ…ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ

ನೀರಾಗಲೇನೆ ನಾ? ಮೈಯ ಮೇಲೆ ಜಾರಿ ಹೋಗಲು
ಗಾಜಾಗಲೇನೇ ನಾ? ನಿನ್ನ ಅಂದ ಚಂದ ತೋರಲು
ಮಂಜಾಗಲೇನೆ ನಾ? ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ? ನಿನ್ನ ಹೊತ್ತು ಕೊಂಡು ಹೋಗಲು|
ಕೇಳದೆ ದೇವಿ ವರವ ಕೊಡಳು  ಹೊಗಳದೆ ನಾರಿ ಮನಸು ಕೊಡಳು
ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ
(ಲಲ್ಲಲ್ಲಾ ಲಾಲ ಲಲ್ಲಲ್ಲ ಲಲ ಲಲ್ಲಲ್ಲ ಲಲ ಲಲ್ಲಲ್ಲ ಲಲ )

ಕೈಲಾಸ ಕೈಯಲ್ಲಿ ನೀನು ನನ್ನ ಸಂಗ ಇದ್ದರೆ (ಅಹ್ಹಹ್ಹಹ್ಹ)
ಆಕಾಶ ಜೇಬಲಿ ನಿನ್ನ ನಗು ಹೀಗೇ ಇದ್ದರೆ
ಕೋಲ್ಮಿಂಚು ಹೂಮಳೆ ನಿನ್ನ ಮಾತು ಕೇಳುತ್ತಿದ್ದರೆ
ಸೀನೀರೆ ಸಾಗರ ನಿನ್ನ ಭಾವ ಹೀಗೇ ಇದ್ದರೆ
ಓಡದೆ ನೀನು ಜಿಂಕೆಯಾದೆ ಹಾರದೆ ನಾನು ಹಕ್ಕಿಯಾದೆ
ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗಲ್ಲ
ಗೀತಾಂಜಲಿ…ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ(ಕ್ಕುಕ್ಕೂ ಕ್ಕುಕ್ಕೂ )
ಪುಷ್ಪಾಂಜಲಿ…ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ
--------------------------------------------------------------------------------------------------------------------------

ಸಿ.ಬಿ.ಐ.ಶಂಕರ್ (೧೯೮೯)
ಸಾಹಿತ್ಯ, ಸಂಗೀತ: ಹಂಸಲೇಖ  ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರ


ಹೆಣ್ಣು :  ಆಆಆ...
ಗಂಡು : ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ
           ಕವಿತೆಯೊಳಗೆ ಹೋಗಿ ರಾಗದೊಡನೆ ಬಂದೆ
           ಕಡಲ ನೋಡ ಹೋದೆ ಮಾಯದ ಕಲೆಗೆ ಬಲೆಯ ತಂದೆ
          ಬಲೆಯ ಬೀಸಿ ಕಾದು ಮೋಹದ ತರುಣಿಯೊಡನೆ ಬಂದೆ
          ಮಾತನಾಡಲು ಅವಳು ಮಾಯವಾದಳು 
         ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ
 
ಹೆಣ್ಣು : ಹೂವಿನಲ್ಲಿ ಅವಿತೆ ಬಿಡಲಿಲ್ಲ ನಿನ್ನ ಕವಿತೆ
         ಸರಾಗವಾಗಿ ಹಾಡಿದೆ ಪರಾಗವಾಗಿ ಹಾರಿದೆ
        ಕಾವ್ಯವಾದೆ ನಾನು ಬಿಡಲಿಲ್ಲ ನನ್ನ ನೀನು
        ಸುನಾದವಾಗಿ ಕೂಗಿದೆ ಪ್ರಯೋಗ ಮಾಡಿ ಹಾಡಿದೆ
ಗಂಡು : ಕರೆದರೆ ಇಲ್ಲ ಎನ್ನದೆ ಬರುವ ಬೆರೆತರೆ ಮಾತೇ ಆಡದೆ ಇರುವ
          ಚೆಲುವ ಚಂದ್ರಿಕೆ ಕಾವ್ಯ ಕನ್ನಿಕೆ ಮಾತನಾಡಲು ಅವಳು ಮಾಯವಾದಳು
         ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ

ಹೆಣ್ಣು : ಮೋಡವಾಗಿ ಹೋದೆ ಬಿಸಿಲಾಗಿ ನೀನು ಬಂದೆ
          ಅದೇಕೆ ನೀರು ಮಾಡಿದೆ ನನ್ನೇಕೆ ಸ್ನಾನ ಮಾಡಿದೆ?
         ಅಲೆಗಳಾಗಿ ಹೋದೆ ನೀ ಬೆಳದಿಂಗಳಾಗಿ ಬಂದೆ
         ಅದೇನು ಮೋಡಿ ಮಾಡಿದೆ ನಾನೇಕೆ ಮೇಲೆ ಹಾರಿದೆ
ಗಂಡು : ಇಳಿದರೆ ಧಾರೆ ಆಗುವ ಹಿಮವೇ  ಸೆಳೆದರೆ ಪ್ರಣಯವಾಗುವ ಸುಮವೆ
           ಚೆಲುವ ಬಾಲಿಕೆ ಕವಿಯ ಕಾಣಿಕೆ ಮಾತನಾಡಲು ಅವಳು ಮಾಯವಾದಳು |
          ಕಾಡು ನೋಡ ಹೋದೆ ಕವಿತೆಯೊಡನೆ ಬಂದೆ
         ಬಲೆಯ ಬೀಸಿ ಕಾದು ಮೋಹದ ತರುಣಿಯೊಡನೆ ಬಂದೆ
         ಮಾತನಾಡಲು ಅವಳು...  
-------------------------------------------------------------------------------------------------------------------------

ಸಿ.ಬಿ.ಐ.ಶಂಕರ್ (೧೯೮೯)
ಸಾಹಿತ್ಯ, ಸಂಗೀತ: ಹಂಸಲೇಖ  ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರ


ಕೋರಸ್ : ಜುಜುಜೂ ಜುಜುಜೂ ಜುಜುಜೂ
ಗಂಡು : ಹೇಹೇಹೇಹ್ಹೇ ಹೇಹೇಹೇ ಓಹೋಹೊಹೋ..
            ಆಹ್ಹಾಹ್ಹಾಹ್ಹಾ... ಲಲ್ಲಲ್ಲಲ್ಲಾ ಲ್ಲಲ್ಲಲ್ಲಾ
          ಇದು ಮಾಯಾ ಬಜಾರು ಕುಣಿವಾಗ ಹುಷಾರು ...
ಕೋರಸ್ :  ಹುಷಾರ್ ... ಹುಷಾರ್ ... ಹುಷಾರ್ ... ಹುಷಾರ್
ಹೆಣ್ಣು : ಇದು ಚೋರ ಬಜಾರು ಬಾಯ್ ಬಿಟ್ರೇ ಪುಕಾರೂ
ಕೋರಸ್ :  ಹುಷಾರ್ ... ಹುಷಾರ್ ... ಹುಷಾರ್ ... ಹುಷಾರ್
ಗಂಡು : ನಾವಿಲ್ಲಿ ಸೇರೋ ವಿಚಾರ ಹೇಳದೆ
ಹೆಣ್ಣು : ಬಾ ಪ್ರೀತಿ ಮಾಡೂ ಪ್ರಚಾರ ಮಾಡದೆ
ಗಂಡು : ಉರಿ ಕಾರೋ ಊರಿದು   ಹೆಣ್ಣು : ಪ್ರೇಮ ಕಡಿವ ಕಾಡಿದು
ಇಬ್ಬರು : ಇದು ಮಾಯಾ ಬಜಾರು ಕುಣಿವಾಗ ಹುಷಾರು ...
ಕೋರಸ್ :  ಹುಷಾರ್ ... ಹುಷಾರ್ ... ಹುಷಾರ್ ... ಹುಷಾರ್

ಗಂಡು : ಬಾ ಬಯಲಿಗೆ ಪ್ರಿಯನಾ ಬಗಲಿಗೆ ನೀ ಬರೆದರೆ ಹಿಡಿ ಹೂ ಕೊರಳಿಗೆ 
ಹೆಣ್ಣು :  ಆ ಚಿತ್ತದಲ್ಲಿ ಅರಳಿ ಬುಡದಲಿ  ಬಾ ಚೆನ್ನಿಗನೇ ಬೆರೆವಾ ಮಬ್ಬಿನಲಿ 
ಗಂಡು :  ಚೆಲುವೇ ಮಲ್ಲೆ ದಿಂಡು ತಂದಾ ಗಂಡು ಬಯಸುವ ಬಿಸಿ ಬಯಕೆಯ ನೋಡು
ಹೆಣ್ಣು: ಚೆಲುವಾ ಅಂದಾ ಕಂಡು ಹಿಂದೆ ದಂಡು ಬರುತಿಹ ಮೆರವಣಿಗೆಯ  ನೋಡು
ಗಂಡು : ಇದು ಪೋಲಿ ಬಜಾರು ಕಣ್ಬಿಟ್ಟರೆ ಢಮಾರು
ಹೆಣ್ಣು : ಉರಿ ಕಾರೋ ಊರಿದು ಪ್ರೇಮ ಕಡಿವ ಕಾಡಿದು
ಕೋರಸ್ :  ಹುಷಾರ್ ... ಹುಷಾರ್ ... ಹುಷಾರ್ ... ಹುಷಾರ್
ಇಬ್ಬರು : ಇದು ಮಾಯಾ ಬಜಾರು ಕುಣಿವಾಗ ಹುಷಾರು ...
ಕೋರಸ್ :  ಹುಷಾರ್ ..(ಹೌದಾ ). ಹುಷಾರ್ (ಹ್ಹೋ ಹ್ಹೋ )... ಹುಷಾರ್ ... ಹುಷಾರ್
               ಕ್ಕೂಕ್ಕೂ...   ಕ್ಕೂಕ್ಕೂ...   ಕ್ಕೂಕ್ಕೂ...   ಕ್ಕೂಕ್ಕೂ... 

ಹೆಣ್ಣು : ಈ ಎದೆಯಲಿ ಏಕೋ ನಡುಕವು ಆ ಭಯದಲೇ ಒಳಗೆ ದುಗಡವು
ಗಂಡು : ಬಾ ಮುಚ್ಚಿಡುವೆ ನನ್ನಾ ರೆಪ್ಪೆಯಲಿ ಬಾ ಬಚ್ಚಿಡುವೆ ಕಣ್ಣ ಚಿಪ್ಪಿನಲ್ಲಿ
ಹೆಣ್ಣು : ಚೆಲುವಾ ಆಸೆ ಮುಂದೆ ಭಯ ಹಿಂದೆ ಸೇರಲು ತೋಳಲಾಟವು ನೋಡು
ಗಂಡು : ಚೆಲುವೆ ಪ್ರೀತಿ ಮುಂದೆ ಊರೇ ಹಿಂದೆ ಜನಗಳ ಪರದಾಟವು ನೋಡು
ಹೆಣ್ಣು : ಇದು ಗಾಂಧಿ ಬಜಾರು ಇಲ್ಲಿ ಖಾದಿ ಕರಾರು
ಗಂಡು : ಉರಿ ಕಾರೋ ಉರಿದು ಪ್ರೇಮ ಕಡಿವ ಕಾಡಿದು
ಕೋರಸ್ :  ಹುಷಾರ್ ... ಹುಷಾರ್ ... ಹುಷಾರ್ ... ಹುಷಾರ್
ಗಂಡು : ಇದು ಮಾಯಾ ಬಜಾರು ಕುಣಿವಾಗ ಹುಷಾರು ...
ಕೋರಸ್ :  ಹುಷಾರ್ ... ಹುಷಾರ್ ... ಹುಷಾರ್ ... ಹುಷಾರ್
ಹೆಣ್ಣು : ಇದು ಚೋರ ಬಜಾರು ಬಾಯ್ ಬಿಟ್ರೇ ಪುಕಾರೂ
ಕೋರಸ್ :  ಹುಷಾರ್ ... ಹುಷಾರ್ ... ಹುಷಾರ್ ... ಹುಷಾರ್
ಗಂಡು : ನಾವಿಲ್ಲಿ ಸೇರೋ ವಿಚಾರ ಹೇಳದೆ
ಹೆಣ್ಣು : ಬಾ ಪ್ರೀತಿ ಮಾಡೂ ಪ್ರಚಾರ ಮಾಡದೆ
ಗಂಡು : ಉರಿ ಕಾರೋ ಊರಿದು   ಹೆಣ್ಣು : ಪ್ರೇಮ ಕಡಿವ ಕಾಡಿದು
ಕೋರಸ್ :  ಹುಷಾರ್  (ಹುಷಾರ್) . ಹುಷಾರ್  (ಹುಷಾರ್) ಹುಷಾರ್ ಹುಷಾರ್
-----------------------------------------------------------------------------------------------------------------------

ಸಿ.ಬಿ.ಐ.ಶಂಕರ್ (೧೯೮೯)
ಸಾಹಿತ್ಯ, ಸಂಗೀತ: ಹಂಸಲೇಖ  ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರ


ಗಂಡು : ಹ್ಹೀ ಯ್ಯಾ ಯ್ಯಾ ಓಟ್ ಫಾರ್ ಓಟ್ ಫಾರ್ ಓಟ್ ಫಾರ್ ಓಟ್ ಫಾರ್ ಟೀನೇಜಿಗೆ
ಹೆಣ್ಣು : ಓಟ್ ಫಾರ್ ಓಟ್ ಫಾರ್ ಓಟ್ ಫಾರ್ ಓಟ್ ಫಾರ್ ಟೀನೇಜಿಗೆ
ಗಂಡು : ಕಾಲ ಕಳೆದ ರಾಜರೆಲ್ಲರೂ             
ಇಬ್ಬರು : ಕಳುವಾಗಿ ಹೋದರು
ಗಂಡು : ತಾಳ ಹಿಡಿದು ಕುಣಿಸೋ ಹುಡುಗರು
ಇಬ್ಬರು : ಅಳೋಕೆ ಬಂದರು
ಹೆಣ್ಣು : ಓಟ್ ಫಾರ್ ಓಟ್ ಫಾರ್
ಗಂಡು :  ಫಾರ್ ಓಟ್ ಫಾರ್ ಓಟ್  ಫಾರ್
ಇಬ್ಬರು :  ಟೀನೇಜಿಗೆ

ಗಂಡು : ಗೊಡ್ಡುಗಳಿಲ್ಲ ಕಾರ್ಡುಗಳಿಲ್ಲ ಅಕ್ಕಿ ಇದ್ದರೆ ಬೆಳೆ ಇಲ್ಲ ಎನ್ನುತ್ತಾರಲ್ಲ
            ಈ ಹುಡುಗರು ಅರೇ ಹಂಗಲಂಗಲ್ಲ ಕೇಳಿದ್ದನು ಇಲ್ಲ ಅನ್ನಲ್ಲ
ಹೆಣ್ಣು : ಕೇಡಿಗಳಲ್ಲ ಮುದುಕರು ಅಲ್ಲ ಮೇಜಿನ ಮೇಲೆ ನಿದ್ದೆಯ ಮಾಡೋ ಮಂತ್ರಿಗಳಂತಲ್ಲ
            ಎಷ್ಟು ಕೇಳದ ಈ ಬಡ್ಡಿ ಹೈದರು ಲಂಚ ಮುಟ್ಟದ ಹುಡುಗರು
ಗಂಡು : ಗೆಲುವೇ ನಮ್ಮ ಈ ಬಾವುಟ ಜನರೇ ಅದರ ಸ್ಥಂಬ
ಹೆಣ್ಣು : ಚಕಕ್ ಚಚ್ಚ್  ಚಕಕ್ ಚಚ್ಚ್  ಚಕಕ್ ಚಚ್ಚ್  ಚಕಕ್ ಚಚ್ಚ್
ಗಂಡು : ಚಕಕ್ ಚಚ್ಚ್  ಚಕಕ್ ಚಚ್ಚ್  ಚಕಕ್ ಚಚ್ಚ್  ಚಕಕ್ ಚಚ್ಚ್  ಹೇ ಹೇ
            ಫಾರ್ ಓಟ್ ಫಾರ್ ಓಟ್  ಫಾರ್
ಹೆಣ್ಣು : ಓಟ್ ಫಾರ್ ಓಟ್ ಫಾರ್
ಇಬ್ಬರು :  ಟೀನೇಜಿಗೆ.. ಹೇ..

ಹೆಣ್ಣು : ಕಳ್ಳರು ಅಲ್ಲ ಸುಳ್ಳರು ಅಲ್ಲ ಕಂಡವರಿಂದ ಕಂಡದ್ದೆಲ್ಲ ಕಸಿಯೋರು ಇವರಲ್ಲ 
          ಮಾತು ಕೊಟ್ಟರೆ ಬೆಟ್ಟಾನೆ ತರತಾರೆ ಆಣೆಗಾಗಿ ಪ್ರಾಣ ಕೊಡತಾರೆ.. 
ಗಂಡು : ಧೋರಣೆ ಇಲ್ಲ ಧಾರಣೆ ಇಲ್ಲ ಹೋಮು ಡ್ಯಾಮು ಕಟ್ಟೋದಕ್ಕೆ ಒಗ್ಗರಣೆ ಇಲ್ಲ 
            ಈಗಿನ ಹುಡುಗರು ನಾವಂಗ ಹಂಗಲ್ಲ ಹಂಗಲ್ಲ ಬ್ರಹ್ಮ ಬಂದ್ರು ಕೆಲಸ ನಿಲ್ಸೋಲ್ಲ 
ಹೆಣ್ಣು : ಗೆಲುವೇ ನಮ್ಮ ಈ ಬಾವುಟ ಜನರೇ ಅದರ ಸ್ಥಂಬ
ಗಂಡು : ಚಕಕ್ ಚಚ್ಚ್  ಚಕಕ್ ಚಚ್ಚ್  ಚಕಕ್ ಚಚ್ಚ್  ಚಕಕ್ ಚಚ್ಚ್  ಹೇ ಹೇ
ಹೆಣ್ಣು : ಚಕಕ್ ಚಚ್ಚ್  ಚಕಕ್ ಚಚ್ಚ್  ಚಕಕ್ ಚಚ್ಚ್  ಚಕಕ್ ಚಚ್ಚ್  ಹೇಹೇಹೇಹೇ
          ಓಟ್ ಫಾರ್ ಓಟ್ ಫಾರ್  ಫಾರ್ ಓಟ್ ಫಾರ್ ಓಟ್  ಫಾರ್  ಟೀನೇಜಿಗೆ
ಗಂಡು : ತಾಳ ಹಿಡಿದು ಕುಣಿಸೋ ಹುಡುಗರು
ಇಬ್ಬರು : ಅಳೋಕೆ ಬಂದರು
ಹೆಣ್ಣು : ಓಟ್ ಫಾರ್ ಓಟ್ ಫಾರ್
ಗಂಡು : ಫಾರ್ ಓಟ್ ಫಾರ್ ಓಟ್  ಫಾರ್
ಇಬ್ಬರು :  ಟೀನೇಜಿಗೆ.. ಹೇ..
-------------------------------------------------------------------------------------------------------------------------

ಸಿ.ಬಿ.ಐ.ಶಂಕರ್ (೧೯೮೯)
ಸಾಹಿತ್ಯ, ಸಂಗೀತ: ಹಂಸಲೇಖ ಗಾಯಕರು: ಲತಾ ಹಂಸಲೇಖ 


ಏಕ್ ದೋ ತೀನ್ ಚಾರ್ ಒಂದು ಎರಡೂ ಮೂರೂ ನಾಲ್ಕೂ 
ಏಕ್ ದೋ ತೀನ್ ಚಾರ್ ಒಂದು ಎರಡೂ ಮೂರೂ ನಾಲ್ಕೂ 
ನೀನು ತೇಜಾಬು ನಾನು ಶರಾಬು 
ನೀನು ತೇಜಾಬು ನಾನು ಶರಾಬು 
ನಾನು ಕುಣಿಯಲೇ ಬಾರದೆಂದು ಇದ್ದೇನೂ
ತೇಜಾಬು ಬಂದ ಮೇಲೆ ಮತ್ತೇ ಬಂದೆನೋ 
ಹಾಯ್ ಬಾಬಾ ಹಾಯ್ ಬಾಬಾ ಹಾಯ್ ಬಾಬಾ 
ಏಕ್ ದೋ ತೀನ್ ಚಾರ್ ಒಂದು ಎರಡೂ ಮೂರೂ ನಾಲ್ಕೂ 

ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾಂಗ್ ಡಿಂಗ್ ಡಾ.. 
ತಾಳ ಬಿದ್ದರೇ ಕೈ ಕಾಲು ನಿಲ್ಲದೂ ಸಂಗೀತವಿದ್ದರೇ ಮೈ ಮಾತು ಕೇಳದು 
ಹೋದ ತಿಂಗಳು ನಾ ಹಾಡುತ್ತಿದ್ದರೇ ಹಿಡಿದುಕೊಂಡರು ನಾ ಕುಣಿಯುತ್ತಿದ್ದರೇ 
ಕೇಸು ಇದ್ದರೂ ನಾ ಬೇಡವೆಂದರೇ ಕೋರ್ಟಿಗೇ ಒಯ್ದರೂ ನಾ ಸುಮ್ಮನಾಗದೇ 
ಗಂಡನಿಲ್ಲದೇ ದಂಡ ಕಟ್ಟಿದೆ ಇಷ್ಟವಿಲ್ಲದೇ ಗೆಜ್ಜೆ ಬಿಚ್ಚಿದೇ ಕುಣಿವಾಸೆ ಬಾರದಂತಿದೇ ಹೊಯ್   
ನಾನು ಕುಣಿಯಲೇ ಬಾರದೆಂದು ಇದ್ದೇನೂ ತೇಜಾಬು ಬಂದ ಮೇಲೆ ಮತ್ತೇ ಬಂದೆನೋ 
ಹಾಯ್ ಬಾಬಾ ಹಾಯ್ ಬಾಬಾ ಹಾಯ್ ಬಾಬಾ 
ಏಕ್ ದೋ ತೀನ್ ಚಾರ್ ಒಂದು ಎರಡೂ ಮೂರೂ ನಾಲ್ಕೂ 

ಸೆರೆಯ ಹಿಡಿಯುವೇ ಈ ನನ್ನ ಕಣ್ಣಲ್ಲೀ ಬೇಡಿ ತೋಡಿಸುವೇ ಈ ನನ್ನ ಕಾಲಲೀ 
ಯಾರೂ ಇಲ್ಲವೋ ನನ್ನನ್ನೂ ಕೇಳಲೂ ದಾರಿಯಿಲ್ಲವೋ ಹಿಂದಿಂದವಾಗಲೋ  
ಸಾಕ್ಷಿಯಿಲ್ಲವೋ ಕಾಪಾಡಿಕೊಳ್ಳಲೂ ಲಾಯರ್ ಇಲ್ಲವೋ ಜಾಮೀನೂ ನೀಡಲೂ 
ನನ್ನ ಹೃದಯದ ಶೆಲಿಗೇ ಹಾಕುವೇ ನನ್ನ ಪ್ರೇಮದ ಜೈಲಿಗೇ ಹಾಕುವೇ 
ಸ್ವರ್ಗ ಸುಖದ ಸ್ವೇಚ್ಛೇ ನೀಡುವೇ... ಹೊಯ್  
ನಾನು ಕುಣಿಯಲೇ ಬಾರದೆಂದು ಇದ್ದೇನೂ ತೇಜಾಬು ಬಂದ ಮೇಲೆ ಮತ್ತೇ ಬಂದೆನೋ 
ಹಾಯ್ ಬಾಬಾ ಹಾಯ್ ಬಾಬಾ ಹಾಯ್ ಬಾಬಾ 
ಏಕ್ ದೋ ತೀನ್ ಚಾರ್ ಒಂದು ಎರಡೂ ಮೂರೂ ನಾಲ್ಕೂ 
ಏಕ್ ದೋ ತೀನ್ ಚಾರ್ ಒಂದು ಎರಡೂ ಮೂರೂ ನಾಲ್ಕೂ 
-------------------------------------------------------------------------------------------------------------------------

No comments:

Post a Comment