815. ಧೀರ್ಘ ಸುಮಂಗಲಿ (೧೯೯೫)


ಧೀರ್ಘ ಸುಮಂಗಲಿ ಚಲನಚಿತ್ರದ ಹಾಡುಗಳು 
  1. ನಾನು ನಿನ್ನನು ಮೆಚ್ಚಿದೆ ಗೊತ್ತಾ
  2. ಚಂದ್ರ ಮಂಚಕೆ ಹೋಗೋಣ ಬರ್ತಿಯಾ
  3. ಭೂಮಿಗೆ ದೇವರು ಬರನು ಬರದೇ ಸುಮ್ಮನು ಇರನು
  4. ಕವಿಯ ಸಮಯ ಯಾವುದೋ ಓಓ ಓಓ ಓಓ
  5. ತವರೊಂದು ಚಿಂತೆ ಬಸಿರೊಂದು ಚಿಂತೆ
  6. ಬೈಲ ಬೈಲ ಹೇ ಮ್ಯೂಜಿಕ್ ಬೈಲ್ 
ಧೀರ್ಘ ಸುಮಂಗಲಿ (೧೯೯೫) - ನಾನು ನಿನ್ನನು ಮೆಚ್ಚಿದೆ ಗೊತ್ತಾ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯಕ ಮನೋ 

ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ
ದಯಮಾಡಿ ರುಜು ಮಾಡು ಕಣ್ಣಿನ ಕಣ್ಣಿನ ಕುಂಚದಿ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 

ನಾನತ್ತು ಒಂಟಿಯಾಗಿ ಇದ್ದೆ ನೀ ನನ್ನ ಒಂಟಿತನ ಕದ್ದೆ 
ನೂರಾರು ಆಸೆಗಳ ತಂದೆ ನಾ ನಂಬಿ ಪ್ರೀತಿಯಿಂದ ಬಂದೆ 
ಕೃಪೆ ಮಾಡಿ ಕರೆ ನೀಡು ಹೆಣ್ಣಿನ ಹೆಣ್ಣಿನ ಅಧರದಿ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ದಯಮಾಡಿ ರುಜು ಮಾಡು ಕಣ್ಣಿನ ಕಣ್ಣಿನ ಕುಂಚದಿ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ

ನೀನೊಂದು ಒಗ್ಗಟಿನ ಚಿತ್ರ ನಾ ನಿನ್ನ ಹೃದಯ ಮಿತ್ರ
ಪ್ರೀತಿಯ ಒಂದು ಪುಟ್ಟ ಹಾಡು ಹೇಳೋಕೆ ನೋಡು ನನ್ನ ಪಾಡು
ದಯಮಾಡಿ ವರ ನೀಡು ಹೆಣ್ಣಿನ ಹೆಣ್ಣಿನ ಹೃದಯದಿ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
ದಯಮಾಡಿ ರುಜು ಮಾಡು ಕಣ್ಣಿನ ಕಣ್ಣಿನ ಕುಂಚದಿ 
ನಾನು ನಿನ್ನನು ಮೆಚ್ಚಿದೆ ಗೊತ್ತಾ
ನನ್ನ ಅರ್ಜಿಯು ಮನಸಲ್ಲಿ ಬಿತ್ತಾ 
--------------------------------------------------------------------------------------------------------------------------

ಧೀರ್ಘ ಸುಮಂಗಲಿ (೧೯೯೫) - ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯಕ : ಎಸ್ಪಿ.ಬಿ., ಚಿತ್ರಾ 

ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಪ್ರೇಮ ಕುಂಚಕೆ ಹೆಜ್ಜೇನು ತರ್ತೀಯಾ
ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಪ್ರೇಮ ಕುಂಚಕೆ ಹೆಜ್ಜೇನು ತರ್ತೀಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ಟತಿಯಾ 
ಚುಕ್ಕಿ ಪುಷ್ಪವ ಜಡೆಗೆ ಇಡ್ತಿಯಾ 
ಎಲ್ಲ ಜನುಮದಲೂ ಜೊತೆಗೆ ಇರ್ತೀಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ

ಬಯಕೆಯ ಬಣ್ಣದ ಸೀರೇನಾ ಉಡತಿಯಾ
ಸರಸದ ಸಮಯದ ಗಡಿಯಾರ ಕಟ್ಟತಿಯಾ
ಚಂದ್ರನೂ ಹೋದರು ಸೂರ್ಯನು ಮರೆಯಾದರೂ
ನಿಲ್ಲಿಸಲಾಗದ ಮಧು ಯಾನವಿದು
ಆಳಾರಸವಾದರೂ ಬಹುಕಾಲವ ಕಾದರೂ
ಮಡಿಯಲಿ ಮಾಡುವ ಸುಖ ಧ್ಯಾನವಿದು
ಎಲ್ಲ ಜನುಮದಲೂ ಜೊತೆಗೆ ಇರ್ತೀಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ
ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಪ್ರೇಮ ಕುಂಚಕೆ ಹೆಜ್ಜೇನು ತರ್ತೀಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ಟತಿಯಾ 
ಚುಕ್ಕಿ ಪುಷ್ಪವ ಜಡೆಗೆ ಇಡ್ತಿಯಾ 
ಹೂ ಓಹೋಹೋ ಆಹಹಾ ಹಾ ಹಾಹಾ 

ಕನಸಿನ ಅರಮನೆ ನಾ ತರುವ ಉಡುಗೊರೆ
ಒಲವಿನ ಅಮೃತ ನಾನೆರೆವೇ ಕರೆದರೆ
ನೆನೆದರೆ ಗಾಯನ ಪ್ರೇಮದ ರಸಯಾನ
ಕರಗದ ಕಲ್ಪನ ಸಾಮ್ರಾಜ್ಯವಿದು
ಪ್ರೇಮದ ಭಾವನೆ ದೇವರ ಮಹಾ ಕಲ್ಪನೆ
ಅದರಲಿ ಅರಳಿದ ರಸಕಾವ್ಯವಿದು
ಎಲ್ಲ ಜನುಮದಲೂ ಜೊತೆಗೆ ಇರ್ತೀಯಾ
ನನ್ನ ದೀರ್ಘ ಸುಮಂಗಲಿ ಮಾಡ್ತಿಯಾ
ಚಂದ್ರ ಮಂಚಕೆ ಹೋಗೋಣ ಬರ್ತಿಯಾ
ಪ್ರೇಮ ಕುಂಚಕೆ ಹೆಜ್ಜೇನು ತರ್ತೀಯಾ
ಬೆಳ್ಳಿ ಮೋಡದ ರೆಕ್ಕೆನ ಕಟ್ಟತಿಯಾ 
ಚುಕ್ಕಿ ಪುಷ್ಪವ ಜಡೆಗೆ ಇಡ್ತಿಯಾ 
------------------------------------------------------------------------------------------------------------------------

ಧೀರ್ಘ ಸುಮಂಗಲಿ (೧೯೯೫) - ಭೂಮಿಗೆ ದೇವರು ಬರನು 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯಕ : ಎಸ್ಪಿ.ಬಿ.

ಭೂಮಿಗೆ ದೇವರು ಬರನು ಬರದೇ ಸುಮ್ಮನು ಇರನು
ಭೂಮಿಗೆ ದೇವರು ಬರನು ಬರದೇ ಸುಮ್ಮನು ಇರನು
ತನ್ನ ಬದಲು ಹೆಣ್ಣನ್ನು ಕಳಿಸಿದನಂತೆಯೇ 
ಅವಳ ತುಂಬಾ ಕರುಣೆಯ ತುಂಬಿದನಂತೆಯೇ
ಭೂಮಿಗೆ ದೇವರು ಬರನು ಬರದೇ ಸುಮ್ಮನು ಇರನು

ದೇವರ ಆಣತಿ ಮರೆತಳು ಈ ಕುಲನಾರಿ
ಕರುಣೆಯ ಜೊತೆ ಪ್ರೀತಿಯ ಎರೆದಳು
ವನವಾಸ ಉಪವಾಸ ಸಹಿಸಲು ಕಲಿತಳು
ಪತಿಯನ್ನು ಮಗುವಾಗಿ ಸಲುಹಲು ಅರಿತಳು
ಈ ಮಣ್ಣಿನ ಹಸುಗಣ್ಣಿನ ಈ ಹೆಣ್ಣಿನ ಹಿರಿಮೆಗೆ ಬ್ರಹ್ಮ ಮೂಕನು
ಭೂಮಿಗೆ ದೇವರು ಬರನು ಬರದೇ ಸುಮ್ಮನು ಇರನು
ತನ್ನ ಬದಲು ಹೆಣ್ಣನ್ನು ಕಳಿಸಿದನಂತೆಯೇ 
ಅವಳ ತುಂಬಾ ಕರುಣೆಯ ತುಂಬಿದನಂತೆಯೇ
ಭೂಮಿಗೆ ದೇವರು ಬರನು ಬರದೇ ಸುಮ್ಮನು ಇರನು

ಕ್ಷಮಯಾ ಧರಿತ್ರಿ   ಭೋಜೇಸು ಮಾತಾ 
ರೂಪೇಶು ಲಕ್ಷ್ಮಿ  ಸಲಹೆಶು ಮಂತ್ರಿ
ಅಳುವಿನ ಅರ್ಥವ ಅರಿತಿದೆ ಈ ಸ್ತ್ರೀ ಕುಲವು
ಅಳುವಿತ್ತನು ಹೆಣ್ಣಿಗೆ ಅಳೆಯಲು
ಅಳುವಾಗ ಆಲಿಸೋದು ದೇವರ ಸೂತ್ರವ
ಅಳಿವಾಗ ಉಳಿಸೋದು ಹೆಣ್ಣಿನ ಪಾತ್ರವೋ
ಈ ಉಳಿಸುವ ಸ್ತ್ರಿ ಮಹಿಮೆಗೆ ಜಗ ಆಲಿಸುವ ಈಶ್ವರನು ಕಲ್ಲಾದನು
ಭೂಮಿಗೆ ದೇವರು ಬರನು ಬರದೇ ಸುಮ್ಮನು ಇರನು
ತನ್ನ ಬದಲು ಹೆಣ್ಣನ್ನು ಕಳಿಸಿದನಂತೆಯೇ 
ಅವಳ ತುಂಬಾ ಕರುಣೆಯ ತುಂಬಿದನಂತೆಯೇ
ಭೂಮಿಗೆ ದೇವರು ಬರನು ಬರದೇ ಸುಮ್ಮನು ಇರನು
-------------------------------------------------------------------------------------------------------------------------

ಧೀರ್ಘ ಸುಮಂಗಲಿ (೧೯೯೫) - ಕವಿಯ ಸಮಯ ಯಾವುದೋ ಓಓ ಓಓ ಓಓ

ಸಂಗೀತ : ಸಾಹಿತ್ಯ : ಹಂಸಲೇಖ, ಗಾಯಕ : ಎಸ್ಪಿ.ಬಿ. ಎಸ್. ಜಾನಕೀ 

ಹೇಯ್ಯ್ ಹೆಯ್ಯ್ ಹೆಯ್ಯ್
ಕವಿಯ ಸಮಯ ಯಾವುದೋ ಓಓ ಓಓ ಓಓ
ರತಿಯ ಹೃದಯ ಯಾರದೊ ಓಓ ಓಓ ಓಓ
ವಾತ್ಸಾಯನ ಬಾ  ಬರೆದುಕೊ
ಶೃಂಗಾರದ ಸಾಲೆಳೆದುಕೊ
ಕವಿಯ ಸಮಯ ಯಾವುದೋ ಓಓ ಓಓ ಓಓ
ರತಿಯ ಹೃದಯ ಯಾರದೊ ಓಓ ಓಓ ಓಓ
ಧೂಮ್ ಧೂಮ್ ಧೂಮ್ ಧುಮಧುಮ್ 

ಜಗದ ಪ್ರಾಣ ದೇವನಿವನು ಮದನನು ತಿಳಿದಿಕೋ
ಕಾಮ ಪೂಜಾ ಲೋಲನಿವನು ಮದನನು ಬರೆದುಕೊ
ಅನುರಾಗ ಹೊಳೆಯ ಹೂದೋಣಿ ಇವನು
ಸುಖವಾಗಿ ಮುಳುಗಿ ಬರಬಲ್ಲ ಇವನು
ರಸಿಕನು ಸುಖದ ಜನಕನು
ಕವಿಯ ಸಮಯ ಯಾವುದೋ ಓಓ ಓಓ ಓಓ
ರತಿಯ ಹೃದಯ ಯಾರದೊ ಓಓ ಓಓ ಓಓ
ವಾತ್ಸಾಯನ ಬಾ  ಬರೆದುಕೊ
ಶೃಂಗಾರದ ಸಾಲೆಳೆದುಕೊ 
ಕವಿಯ ಸಮಯ ಯಾವುದೋ ಓಓ ಓಓ ಓಓ
ರತಿಯ ಹೃದಯ ಯಾರದೊ ಓಓ ಓಓ ಓಓ

ನಯನ ಬಾನಿನಾಳದೊಳಗೆ ಮಿಂಚಿದೆ ಬರೆದುಕೊ
ಅಧರ ಜೇನ ತೀರದೊಳಗೆ ಅಲೆ ಇದೆ ಬರೆದುಕೊ
ಶೃಂಗಾರ ಶೀಲ ಮೆರೆಯುವುದ ನೋಡ
ಸಂಗೀತ ಕಾಲ ಮರೆಸುವುದ ನೋಡ
ಕವಿತೆಯು ಪ್ರೇಮ ಚರಿತೆಯು
ಕವಿಯ ಸಮಯ ಯಾವುದೋ ಓಓ ಓಓ ಓಓ
ರತಿಯ ಹೃದಯ ಯಾರದೊ ಓಓ ಓಓ ಓಓ
ವಾತ್ಸಾಯನ ಬಾ ಬರೆದುಕೊ
ಶೃಂಗಾರದ ಸಾಲೆಳೆದುಕೊ
--------------------------------------------------------------------------------------------------------------------------

ಧೀರ್ಘ ಸುಮಂಗಲಿ (೧೯೯೫) - ತವರೊಂದು ಚಿಂತೆ..
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯಕ : ಎಸ್ಪಿ.ಬಿ. 

ತವರೊಂದು ಚಿಂತೆ..
ತವರೊಂದು ಚಿಂತೆ ಬಸಿರೊಂದು ಚಿಂತೆ
ತವರೊಂದು ಚಿಂತೆ ಬಸಿರೊಂದು ಚಿಂತೆ
ಸೂರಿಲ್ಲದ ಹೆಣ್ಣಿಗೆ ನೂರು ಚಿಂತೆ
ಹೆಣ್ಣಿಗೆ ಗಂಡನದೇ ಮೇರು ಚಿಂತೆ
ತವರೊಂದು ಚಿಂತೆ ಬಸಿರೊಂದು ಚಿಂತೆ
ತವರೊಂದು ಚಿಂತೆ ಬಸಿರೊಂದು ಚಿಂತೆ  
ಸೂರಿಲ್ಲದ ಹೆಣ್ಣಿಗೆ ನೂರು ಚಿಂತೆ
ಹೆಣ್ಣಿಗೆ ಗಂಡನದೇ ಮೇರು ಚಿಂತೆ 

ನಿಲ್ಲದೆ ಓಡೋ ನೀರಂತೆ ಹೆಣ್ಣಿನ ಬಾಳಂತೆ
ಬೆಳೆಸುತ ಬೆಳಗುತ ನಡೆವಳು
ಬಾಲ್ಯವು ಒಂದೇ ಅವಳ ಸುಖದ ಜೀವನ
ಯೌವ್ವನದಿಂದ ಮೊದಲು ಅವಳ ರೋಧನ
ಒಂದರ ಮೇಲೆ ಒಂದು ಚಿಂತೆ ಹೊರೆಗಳು
ಮುಳುಗೋ ವರೆಗೂ ಬಿಡದು ಬಾಳ ಸುಳಿಗಳು
ಬದುಕು ಪ್ರೇಮಾಂಜಲಿ ಹೃದಯದಾಸೆ ಧೀರ್ಘಸುಮಂಗಲಿ
ತವರೊಂದು ಚಿಂತೆ ಬಸಿರೊಂದು ಚಿಂತೆ  
ತವರೊಂದು ಚಿಂತೆ ಬಸಿರೊಂದು ಚಿಂತೆ  
ಸೂರಿಲ್ಲದ ಹೆಣ್ಣಿಗೆ ನೂರು ಚಿಂತೆ
ಹೆಣ್ಣಿಗೆ ಗಂಡನದೇ ಮೇರು ಚಿಂತೆ 


ಬಾಳಿನ ಹೊಗೆಯ ಬಂಡಿ ಜೊತೆ ಸಾವಿರ ಕೊಂಡಿಗಳು
ಯಾರಿಗೋ ಯಾರನೋ ಬೆಸೆವುದು
ತಿರುವಿನ ಮೇಲೆ ತಿರುವು ಇರುವ ಬಾಳಲಿ
ಯಾರಿಗೋ ಯಾರೋ ಅಳಲು ನಗಲು ಜೊತೆಯಲಿ
ಹಳಿಯು ತಪ್ಪಿದ ಒಂಟಿ ಹೆಣ್ಣ ಕಥೆಯಲಿ
ಪ್ರೀತಿಯ ಭರವಸೆ ಒಂದೇ ಉಸಿರು ಎದೆಯಲಿ
ಬದುಕು ಪ್ರೇಮಾಂಜಲಿ ಹೃದಯದಾಸೆ ಧೀರ್ಘ ಸುಮಂಗಲಿ
ತವರೊಂದು ಚಿಂತೆ ಬಸಿರೊಂದು ಚಿಂತೆ  
ತವರೊಂದು ಚಿಂತೆ ಬಸಿರೊಂದು ಚಿಂತೆ  
ಸೂರಿಲ್ಲದ ಹೆಣ್ಣಿಗೆ ನೂರು ಚಿಂತೆ
ಹೆಣ್ಣಿಗೆ ಗಂಡನದೇ ಮೇರು ಚಿಂತೆ
---------------------------------------------------------------------------------------------------------

ಧೀರ್ಘ ಸುಮಂಗಲಿ (೧೯೯೫) - ಬೈಲ್ ಬೈಲ್ ಹೇ  ಮ್ಯೂಜಿಕ್ ಬೈಲ್
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯಕ : ಎಸ್.ಜಾನಕೀ  

ಓ.. ಬೈಲ್ ಬೈಲ್ ಹೋ .. ಬೈಲ್ ಬೈಲ್   ಬೈಲ್ ಬೈಲ್ ಬೈಲ್ ಬೈಲ್ ಹೇ.. ಮ್ಯೂಜಿಕ್ ಬೈಲ್
ಗುಂಪಿನಲ್ಲಿ ಹಾಡೋದು ಗುಂಗಿಗಾಗಿ ಇಂಪಿನಲ್ಲಿ ಕುಣಿಯೋದು ಮತ್ತಿಗಾಗಿ
ಹೋ .. ಬೈಲ್ ಬೈಲ್ ಹಂಗು ಬೈಲ್ ಹಿಂಗೂ ಬೈಲ್ ಸ್ಟೈಲಾಗಿ ಇಲ್ಲ ಬೈಲ್
ಓ.. ಬೈಲ್ ಬೈಲ್ ಹೋ .. ಬೈಲ್ ಬೈಲ್   ಬೈಲ್ ಬೈಲ್ ಬೈಲ್ ಬೈಲ್ ಹೇ.. ಮ್ಯೂಜಿಕ್ ಬೈಲ್

ಊರು ಊರು ದೇಶ ದೇಶ ಒಂದಾಗೋದಿಲ್ಲೆ ಮ್ಯೂಜಿ ಮ್ಯೂಜಿಕನಿಂದ 
ಭಾಷೆ ಬಿಟ್ಟು ಭಾವ ಕೊಟ್ಟು ನಲಿದಾಡೋದಿಲ್ಲೇ ಮ್ಯೂಜಿ ಮ್ಯೂಜಿಕನಿಂದ 
ಎಷ್ಟೋ ವರ್ಷ ಕುಂತ್ರೆ ಶಾಂತಿ ಸಿಗೋದಂತೆ 
ಮ್ಯೂಜಿಕನಿಂದ ಒಂದೇ ನಿಮಿಷ ಸ್ವರ್ಗ ಸಿಕ್ಕುತ್ತಂತೇ ಕೇಳು  
ಓ.. ಬೈಲ್ ಬೈಲ್ ಹೋ .. ಬೈಲ್ ಬೈಲ್   ಬೈಲ್ ಬೈಲ್ ಬೈಲ್ ಬೈಲ್ ಹೇ.. ಮ್ಯೂಜಿಕ್ ಬೈಲ್

ನೂರ ಎಂಟ ಸೆಂಟಿಮೆಂಟ್ ಅಂಟಿಕೊಂಡ ಬಾಳು ತುಂಬ ಗೋಳು 
ಮದ್ವೆ ನಂಟು ಕೌಗಿನ್ಮೆಂಟು ಸಂಸಾರದ ಸಾರ ತುಂಬಾ ಖಾರ
ಲೈಫಿನಲ್ಲಿ ಪ್ರಾಯ ಬಹಳ ಕಡಿಮೆನಂತೆ
ಮ್ಯೂಜಿಕ ಇಲ್ದೇ ಹೋದ್ರೆ ನಮ್ಮ ಲೈಫೇ ಬ್ರಾಯನಂತೆ ಕೇಳು
ಓ.. ಬೈಲ್ ಬೈಲ್ ಹೋ .. ಬೈಲ್ ಬೈಲ್   ಬೈಲ್ ಬೈಲ್ ಬೈಲ್ ಬೈಲ್ ಹೇ.. ಮ್ಯೂಜಿಕ್ ಬೈಲ್
ಗುಂಪಿನಲ್ಲಿ ಹಾಡೋದು ಗುಂಗಿಗಾಗಿ ಇಂಪಿನಲ್ಲಿ ಕುಣಿಯೋದು ಮತ್ತಿಗಾಗಿ
ಹೋ .. ಬೈಲ್ ಬೈಲ್ ಹಂಗು ಬೈಲ್ ಹಿಂಗೂ ಬೈಲ್ ಸ್ಟೈಲಾಗಿ ಇಲ್ಲ ಬೈಲ್
ಓ.. ಬೈಲ್ ಬೈಲ್ ಹೋ .. ಬೈಲ್ ಬೈಲ್   ಬೈಲ್ ಬೈಲ್ ಬೈಲ್ ಬೈಲ್ ಹೇ.. ಮ್ಯೂಜಿಕ್ ಬೈಲ್
--------------------------------------------------------------------------------------------------------

No comments:

Post a Comment