816. ಕುಂತಿ ಪುತ್ರ (೧೯೯೪)

ಕುಂತಿ ಪುತ್ರ ಚಲನಚಿತ್ರದ ಹಾಡುಗಳು 
  1. ಈ ಪ್ರೇಮ ಮರೆಯದ ಮನಸಿನ 
  2. ನಮ್ಮೂರ ಸಿರಿದೇವಿ 
  3. ಅಮ್ಮ ಎನ್ನಲು 
  4. ಪಪ್ಪಿಕೊಡೆ ಒಂದು 
  5. ಡಿಂಗ್ ಡಾಂಗ್ 
  6. ಈ ಪ್ರೇಮ ಮರೆಯದ ಮನಸಿನ (ದುಃಖ ) 
ಕುಂತಿ ಪುತ್ರ (೧೯೯೪) - ಈ ಪ್ರೇಮ ಮರೆಯದ ಮನಸಿನ ಸಂಗಮ
ಸಂಗೀತ : ವಿಜಯಾನಂದ, ಸಾಹಿತ್ಯ : ದೊಡ್ಡರಂಗೇಗೌಡ, ಮನೋಹರ, ಗಾಯನ : ಎಸ್ಪಿ.ಬಿ, ಚಿತ್ರಾ 

ಗಂಡು : ಈ ಪ್ರೇಮ ಮರೆಯದ ಮನಸಿನ ಸಂಗಮ
ಹೆಣ್ಣು : ಕಾವೇರಿ ಕಡಲನು ಬೆರೆಯುವ ಸಂಭ್ರಮ
ಗಂಡು : ಹಸಿರು ಗಿರಿಗಳೆಲ್ಲವೂ ಒಲವ ಗೀತೆ ಕೇಳಲಿ
ಹೆಣ್ಣು : ದಿನವೂ ಚೈತ್ರ ಮೇಳವೇ ನಗುವ ನಮ್ಮ ಬಾಳಲಿ
ಗಂಡು : ಗಗನ ಆಣೆ                         ಹೆಣ್ಣು : ಭುವನ ಆಣೆ
ಇಬ್ಬರು : ಬಿಡಿಸಲಾರದ ಅನುಬಂಧ
            ಈ ಪ್ರೇಮ ಮರೆಯದ ಮನಸಿನ ಸಂಗಮ ಈ ಪ್ರೇಮ ....

ಗಂಡು : ಪ್ರೇಮ ವೀಣೆ ಮೀಟಿದ ನಾದ ಗಂಗೆಯು ವೇದ ನಾದ ತುಂಬಿದ ಪ್ರೇಮ ದೈವವೂ  
ಹೆಣ್ಣು : ಗಾಳಿ ನೀರು ಭೂಮಿಯೇ ಸಾಕ್ಷಿ ಎನ್ನುವೆ ನೂರು ಜನ್ಮ ಬಂದರೂ ನಿನ್ನ ಸೇರುವೆ 
ಗಂಡು : ಅಂತರಂಗವೇ ತುಂಬಿ ಬಂದಿದೆ ನಿನ್ನ ಮಾತಿಗೆ ಶರಣು ಎಂದಿದೆ 
ಹೆಣ್ಣು : ಒಲವೇ ನೀನು ನಲಿವ ಜೇನು ಸುಖವ ಪಡೆವೆ ಬಾಳಲ್ಲಿ  
ಗಂಡು : ಈ ಪ್ರೇಮ ಮರೆಯದ ಮನಸಿನ ಸಂಗಮ ಈ ಪ್ರೇಮ ....

ಗಂಡು  : ದೇಹ ದೂರಾವಾದರೇ ನೋವೇ ಈ ದಿನ ನೀನು ಇಲ್ಲವಾದರೆ ಸಾವೇ ಆ  ಕ್ಷಣ
ಹೆಣ್ಣು  : ಸಾವೇ ದೂರ ನಿಲ್ಲು ನೀ ಎಂದು ಕೂಗುವೆ ನಿನ್ನ ಜೀವದಲ್ಲಿ ನಾ ಸೇರಿ ಹೋಗುವೇ
ಗಂಡು : ಅರೆ ಘಳಿಗೆ ಅಗಲಿರೇನು ಕನಸಲ್ಲಿಯೂ ಕನಸಲ್ಲಿಯೂ ಕೈ ಬಿಡೆನು
ಹೆಣ್ಣು : ಮಧುರ ನಮ್ಮ ಸುಖದ ಗಾನ ಮರೆಯೇ ನಾನು ಬಾಳಲಿ
ಗಂಡು : ಈ ಪ್ರೇಮ ಮರೆಯದ ಮನಸಿನ ಸಂಗಮ
ಹೆಣ್ಣು : ಕಾವೇರಿ ಕಡಲನು ಬೆರೆಯುವ ಸಂಭ್ರಮ
ಗಂಡು : ಹಸಿರು ಗಿರಿಗಳೆಲ್ಲವೂ ಒಲವ ಗೀತೆ ಕೇಳಲಿ
ಹೆಣ್ಣು : ದಿನವೂ ಚೈತ್ರ ಮೇಳವೇ ನಗುವ ನಮ್ಮ ಬಾಳಲಿ
ಗಂಡು : ಗಗನ ಆಣೆ                    ಹೆಣ್ಣು :  ಭುವನ ಆಣೆ
ಇಬ್ಬರು :  ಬಿಡಿಸಲಾರದ ಅನುಬಂಧ
             ಈ ಪ್ರೇಮ ಮರೆಯದ ಮನಸಿನ ಸಂಗಮ ಈ ಪ್ರೇಮ ....
-------------------------------------------------------------------------------------------------------------------------

ಕುಂತಿ ಪುತ್ರ (೧೯೯೪) - ನಮ್ಮೂರ ಸಿರಿದೇವಿ ನಾಳೆ...ಮಾಂಗಲ್ಯ ಶಿರವೇರೋ ವೇಳೆ...
ಸಂಗೀತ : ವಿಜಯಾನಂದ, ಸಾಹಿತ್ಯ : ದೊಡ್ಡರಂಗೇಗೌಡ, ಮನೋಹರ, ಗಾಯನ : ಎಸ್ಪಿ.ಬಿ, ಚಿತ್ರಾ 

ಗಂಡು : ಅಹ ಹಾಹಾ ಹಾ ಅಹ ಹಾಹಾ ಹಾ ಅಹ ಹಾಹಾ ಹಾ ಅಹ ಹಾಹಾ ಹಾ
            ನಮ್ಮೂರ ಸಿರಿದೇವಿ ನಾಳೆ...ಮಾಂಗಲ್ಯ ಶಿರವೇರೋ ವೇಳೆ...
            ದೇವತೆಗಳೇ ನೋಡಿರಿ ಹರಸಿ ಅವಳ ಹಾಡಿರಿ ಸುಖದಿ ಬಾಳಲೆಂದು ನಗುತ ಬಾಳಲೆಂದು
            ಸುಖದಿ ಬಾಳಲೆಂದು ನಗುತ ಬಾಳಲೆಂದು

ಗಂಡು : ಯುಗ ಉರಳಿ ಯುಗವೇ ಬರಲಿ ನಾ ನಿನ್ನ ಜೊತೆ ಇರುವೆ
             ತಡೆ ನೂರು ಬರಲಿ ಚೆಲುವೆ ನೀ ನನ್ನ ಸತಿ ಎನುವೆ..
ಹೆಣ್ಣು :     ಜೇನಂಥ ಮಾತನು ನುಡಿದೆ ನಾನೇ ಸೌಭಾಗ್ಯವತಿ
              ನಿನ್ನಂಥ ಪತಿಯನು ಪಡೆವ ನಾನೆಂದು ಪುಣ್ಯವತೀ
ಗಂಡು : ಎಂದು ನಿಮ್ಮ ಬಾಳಿನಲ್ಲಿ ಇರಲಿ ಹೀಗೆ ಉಲ್ಲಾಸ
            ಹೃದಯ ತುಂಬಿ ಹಾಡುತಿರುವೆ ಬಯಸಿ ನಿಮ್ಮ ಸಂತೋಷ
            ಪತಿಯ ಅರಿತು ನಡೆಯೇ ಜಾಣೆ ನೀನೇ ಅವನ ಮೀಡಿಯೋ ವೀಣೆ
            ನಗುತ ಬಾಳು ನೀನು ಸುಖದಿ ಬಾಳು ನೀನು
            ನಗುತ ಬಾಳು ನೀನು ಸುಖದಿ ಬಾಳು ನೀನು

ಗಂಡು : ಬಾನಲ್ಲಿ ಮಿಂಚೋ ತಾರೆ ಬಳಿಯಲ್ಲಿ ನಿಂತಿಹಳೋ
           ಜೇನಲ್ಲಿ ಇರುವ ಸಾರ ನನಗಾಗಿ ತಂದಿಹಳೋ
ಹೆಣ್ಣು : ಶಶಿಯಂತೆ ಬೆಳಗೋ ಚೆಲುವಾ ನನಗಿಂದು  ಆಸರೆಯೋ
          ಸುಕುಮಾರ ಪೋರ ಇವನು ನಾನವನ ಕೈ ಸೆರೆಯೋ
ಗಂಡು : ಪ್ರೇಮ ಒಂದು ಚೈತ್ರದಂತೆ ಬಾಡಿ ಹೋಗೋ ಸುಮವಲ್ಲ
            ಹೃದಯ ಬಿರಿದು ಹೋದ ಮೇಲು ಅದಕೆ ಎಂದು ಸಾವಿಲ್ಲಾ
           ಎದೆಯ ಒಳಗೆ ನಗುವ ಹೂವೆ ನಿನಗೆ ಎಂದು ಆಗದು ನೋವೇ
           ನಗುತ ಬಾಳು ನೀನು ಸುಖದಿ ಬಾಳು ನೀನು
           ನಗುತ ಬಾಳು ನೀನು ಸುಖದಿ ಬಾಳು ನೀನು
           ನಮ್ಮೂರ ಸಿರಿದೇವಿ ನಾಳೆ...ಮಾಂಗಲ್ಯ ಶಿರವೇರೋ ವೇಳೆ...
           ದೇವತೆಗಳೇ ನೋಡಿರಿ ಹರಸಿ ಅವಳ ಹಾಡಿರಿ ಸುಖದಿ ಬಾಳಲೆಂದು ನಗುತ ಬಾಳಲೆಂದು
           ಸುಖದಿ ಬಾಳಲೆಂದು ನಗುತ ಬಾಳಲೆಂದು 
-------------------------------------------------------------------------------------------------------------------

ಕುಂತಿ ಪುತ್ರ (೧೯೯೪)
ಸಂಗೀತ : ವಿಜಯಾನಂದ, ಸಾಹಿತ್ಯ : ದೊಡ್ಡರಂಗೇಗೌಡ, ಮನೋಹರ, ಗಾಯನ : ಎಸ್ಪಿ.ಬಿ, 

ಅಮ್ಮಾ ಎನ್ನಲು ಕೋಟಿ ಪುಣ್ಯವೋ ಅವಳ ತ್ಯಾಗಕೆ ಸಾಟಿ ಇಲ್ಲವೋ
ಪ್ರೀತಿ ತುಂಬಿ ತಂದ ಅವಳಾಡೋ ಮಾತೆ ವೇದಗಳು
ದೈವಗಳಿಗೆಲ್ಲ ಮಿಗಿಲಾದ ದೈವವೇ ಅವಳು
ಅಮ್ಮಾ ಎನ್ನಲು ಕೋಟಿ ಪುಣ್ಯವೋ ಅವಳ ತ್ಯಾಗಕೆ ಸಾಟಿ ಇಲ್ಲವೋ

ಬ್ರಹ್ಮನೇ ಬರೆದಿರುವೆ ಏನು ನಿನ್ನ ಲೀಲೆ ಅರ್ಥವಿಲ್ಲದ ಬಾಳು ಏಕಯ್ಯ..
ನಿತ್ಯ ನಾ ಸುರಿಸಿರಿವೆ ಕಂಬನಿಯ ಧಾರೆ  ತಾಯ ಕಾಣದೇ ... ತಾಳಲಾರದೆ
ಹೆತ್ತವಳು ನಿನಗಿಲ್ಲವೇ  ವಾತ್ಸಲ್ಯದ ಅರಿವಿಲ್ಲವೇ ಮೂಕವೇದನೆ ಸಾಕು ಮಾಡಯ್ಯಾ..
ಅಮ್ಮಾ ಎನ್ನಲು ಕೋಟಿ ಪುಣ್ಯವೋ ಅವಳ ತ್ಯಾಗಕೆ ಸಾಟಿ ಇಲ್ಲವೋ

ಇದ್ದರೂ ಕಣ್ಣೆದುರು ಕಾಣಿಸದೆ ತಾಯಿ ನಿನ್ನ ಕರುಳ ಜೀವ ನಾನ್ನಮ್ಮ
ಒಮ್ಮೆ ನೀ ಬಾಯ್ತೆರೆದು ಕಂದ ಎಂದು ಕೂಗು ದೂರವಾಗಲಿ ಪಾಪವೆಲ್ಲವು
ಲೋಕವೆಲ್ಲಾ ನಾ ಸಾರುವೆ ನನ್ನ ಸಿರಿ ನೀನೆನ್ನುವೆ ಸಾವಿನಲ್ಲೂ ನಾ ನಗುವೇ..
ಅಮ್ಮಾ ಎನ್ನಲು ಕೋಟಿ ಪುಣ್ಯವೋ ಅವಳ ತ್ಯಾಗಕೆ ಸಾಟಿ ಇಲ್ಲವೋ
ಪ್ರೀತಿ ತುಂಬಿ ತಂದ ಅವಳಾಡೋ ಮಾತೆ ವೇದಗಳು
ದೈವಗಳಿಗೆಲ್ಲ ಮಿಗಿಲಾದ ದೈವವೇ ಅವಳು
ಅಮ್ಮಾ ಎನ್ನಲು ಕೋಟಿ ಪುಣ್ಯವೋ ಅವಳ ತ್ಯಾಗಕೆ ಸಾಟಿ ಇಲ್ಲವೋ
-------------------------------------------------------------------------------------------------------------

ಕುಂತಿ ಪುತ್ರ (೧೯೯೪) - ಪಪ್ಪೀ ಕೊಡೆ ಒಂದು ಪಪ್ಪೀ ಕೊಡೆ  ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ
ಸಂಗೀತ : ವಿಜಯಾನಂದ, ಸಾಹಿತ್ಯ : ಎಸ.ನಾರಾಯಣ, ಮನೋಹರ, ಗಾಯನ : ಎಸ್ಪಿ.ಬಿ,

ಪಪ್ಪಿಯೇ.... ಪಪ್ಪೀ.. ಪಪ್ಪೀ.. ಪಪ್ಪೀ.. ಪಪ್ಪೀ..
ಪಪ್ಪೀ ಕೊಡೆ ಒಂದು ಪಪ್ಪೀ ಕೊಡೆ  ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ
ಪಪ್ಪೀ ಕೊಡೆ ಒಂದು ಪಪ್ಪೀ ಕೊಡೆ  ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ
ಈ ಪ್ರೀತಿಸೂ ಪ್ರೇಮಿಯ ಕಾಡದಿರು ನೀ ಪ್ರಾರ್ಥನೆ ಕೇಳದೆ ಹೋಗದಿರು 
ನಾಯೀಮಣಿ ಸಾರೀ ನಾರಿ ಮಣಿ ವೈಯಾರಿ ಮಣಿ 
ಪಪ್ಪೀ ಕೊಡೆ ಒಂದು ಪಪ್ಪೀ ಕೊಡೆ  ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ 

ಧೀರ್ ತಕಧೀನ್ ಧೀನ್ ತಕಧಿನ್
ಕಣ್ಣ್ ಗಾಳಲಿದೆ ಬರಿ ರೆಡ್ ಸಿಗ್ನಲ್ ಮನಸೊಳಗಡೆ ಇದೆ ಗ್ರೀನ್ ಸಿಗ್ನಲ್ 
ನಿನ್ನ ಹಿಂದೆ ನಾ ಬಾಡಿ ಯಾ ಗಾರ್ಡು ತೆಗೆಯಮ್ಮ ನೀ ನೋ ಎಂಟ್ರಿ ಬೋರ್ಡ್ 
ರಾಂಗ್ ಸೈಡು  ಬಂದರೆ ಒನ್ ವೇಲಿ ಆಕ್ಸಿಡೆಂಟ್ 
ಟೂ ವೇಲಿ ಇಬ್ಬರು ಬಂದಾಗ ಸೆಕ್ಸಿಡೆಂಟ್ 
ಜಗ  ಜಗಿಸುವ ಈ ಮೈ ಕಾಂತಿ ಏಳು ಬಣ್ಣಗಳ ರಂಗ ಬಸಂತಿ 
ಯಾವ ಮೈ ಸೋಪ್ ಮಾಡಿತು ಕ್ರಾಂತಿ ನಿನ್ನ ಮುಂದೆ ನನ್ನ ಪ್ರೇಮ ವಿನಂತಿ 
ಹಿತವಾದ ಶವರು ಬಾತು ನಿನಗಾಗಿ ಫ್ಲವರು ಬಾತು 
ಕಿತನಿ ಹಸೀ ಏ ಬಾತ್ ಮಿಲನಾ ಹೈ ಆಜ್ ರಾತ್
ಹೇ.. ಕೊಡು ನನಗೆಪ್ರೇಮದ ಭಿಕ್ಷೆ ಏತಕೆ ನನಗೆ ಈ ಶಿಕ್ಷೆ
ಪ್ರತಿ ದಿವಸ ಪ್ರೇಮ ಪರೀಕ್ಷೆ ಫೇಲ್ ಆದರೆ ಲೈಫೇ  ಜಿಗುಪ್ಸೆ
ಪಪ್ಪೀ ಕೊಡೆ ಒಂದು ಪಪ್ಪೀ ಕೊಡೆ  ಈ ಲಿಪ್ಪಿಗೆ ನೀ ಬಿಗಿದಪ್ಪಿ ಕೊಡೆ 
ಆಆಆ.... 

ಭಲೇ ಭಲೇ ಭಲೇ ಭಲೇ ಭಲೇ ಭಲೇ ಭಲೇ ಭಲೇ ಭಲೇ ಭಲೇ
ನೀರೊಳಗೆ ನೀ ಈಜುತಲ್ಲಿದ್ದರೆ ಮೀನುಗಳಿಗೆ ಬಲು ಕನ್ಫ್ಯೂಸ್
ಈ ಡ್ರೆಸಲಿ ನಿನ್ನನು ಕಂಡು ಬರ್ನ್ ಆಯಿತು ನನ್ನೆದೆ ಫ್ಯೂಸು
ಸ್ವಿಮ್ಮಿಂಗು ಪೂಲಿಗೆ ಬಂದಾಯತು ಲಕ್ಕಿ ಚಾನ್ಸ್ ಅಯ್ಯೋ
ನೀ ನನ್ನ ಪಾಲಿಗೆ ಸಿಕ್ಕಂತಾ ಲಕ್ಕಿ ಚಾಯ್ಸ್ ಹೊಯ್
ಚಳಿ ಚಳಿಯಲಿ ಕುಣಿಯುವೆ ನಡುಗಿ ಮೈ ಬಿಸಿ ಬಿಸಿ ಮಾಡಲೇ ಹುಡುಗಿ
ಹೊಳೆಯುವಾ ಜಲ ಕನ್ಯೆಯು ನೀನು ಹದಿ ಹರೆಯಕೆ ಪುಟಿಯುವ ಮೀನು
ಅಹಹಾ ಏನಿದು ಆಹಾ ಮೈ ಫ್ರೂಟು ಸಾಲದು ಅರೆರೇ ಈ ಸ್ಕೆಚ್ಚು ಯಾರದು ಈ ಬ್ಯೂಟಿ ಸೋಲಿದು
ಹೇ ಈ ಜ್ಯೂಸಿ ಫಿಗರ್ ಇರುವಾಗ ಕಂಜೂಸಿ ಆಗದಿರು
ಕೊಲಮಿಂಚಿನ ಬಾಡಿ ಲೈನು ಸನ್ಯಾಸಿನಿ ಆಗದಿರು
ಹೇಹೇ  ನಾಕ್ ಧೀನ್ ನಾಕ್ ಧೀನ್ ಹ ಹ ಹ
ಪಪ್ಪೀ ಕೊಡೆ ಪಪ್ಪೀ ಕೊಡೆ  ಈ ಲಿಪ್ಪಿಗೆ ಕೊಡೆ
ಪಪ್ಪೀ ಪಪ್ಪೀ ಲಿಪ್ಪಿಗೆ ಕೊಡೆ ಪಪ್ಪೀ ಪಪ್ಪೀ ಲಿಪ್ಪಿಗೆ ಕೊಡೆ
ಒಯ್ಲೇ ಒಯ್ಲೇ ಒಯ್ಲೇ ಒಯ್ಲೇ ಒಯ್ಲೇ ಒಯ್ಲೇ ಒಯ್ಲೇ ಒಯ್ಲೇ ಒಯ್ಲೇ
--------------------------------------------------------------------------------------------------------------------------

ಕುಂತಿ ಪುತ್ರ (೧೯೯೪) - ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ ಬಣ್ಣ ಬಣ್ಣದಾಸೆ ಹೆಚ್ಚಿದೆ
ಸಂಗೀತ : ವಿಜಯಾನಂದ, ಸಾಹಿತ್ಯ : ಎಸ.ನಾರಾಯಣ, ಮನೋಹರ, ಗಾಯನ : ಮಂಜುಳ ಗುರುರಾಜ, ಎಸ್.ಪಿ.ಬಿ.  

ಡಿಂಗ ಡಾಂಗ ಡಿಂಗ ಡಾಂಗ ಡಿಂಗ   ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಹಾಂ ಡಿಂಗ ಡಾಂಗ ಡಿಂಗ ಡಾಂಗ   ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ ಬಣ್ಣ ಬಣ್ಣದಾಸೆ ಹೆಚ್ಚಿದೆ
ಹಾಂ... ನಿನ್ನಲ್ಲು ಕಾಡಲು ಮುತ್ತು ಕೊಟ್ಟು ಕೂಡಲು ಕಿತ್ತು ತಿನ್ನೋ ಪ್ರಾಯ ಉಕ್ಕಿದೆ...
ಕಣ್ಣು ಕಣ್ಣು ಕೂಡಿ ಕರೆಯಲು ನನ್ನ ಬಾಳ ಮೋಹ ತಬ್ಬಿದೆ
ಅಚ್ಚು ಮೆಚ್ಚು ಸ್ನೇಹ ಸೆಳೆಯಲು ಮೈಯ್ಯ ತುಂಬಾ ದಾಹ ಹಬ್ಬಿದೆ
ಮೆಲ್ಲಗೆ ಮೆಲ್ಲಗೆ ಬಯಕೆ ಬೆಂಕಿ ಹೊತ್ತಿ ಮುತ್ತಿ
ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ ಬಣ್ಣ ಬಣ್ಣದಾಸೆ ಹೆಚ್ಚಿದೆ

ಉಕ್ಕುವಾ ಹರೆಯದ ಬೆಚ್ಚನೆ ಅಪ್ಪುಗೆ ಒಪ್ಪಿಕೊಳ್ಳು ತೋಳ ಬಯಸಿದೆ
ನಿನ್ನಯ ಒಲವಿನ ಕೆನ್ನೆಯ ಕಚ್ಚಲು ಪ್ರೀತಿ ಹುಚ್ಚು ಎಲ್ಲೇ ಮೀರಿದೆ..
ಸುತ್ತ ಮುತ್ತ ನೀ ನೋಡು ಜೋಡಿ ಹಕ್ಕಿಯಾ ಅಕ್ಕ ಪಕ್ಕ ನೀ ಕಣ್ಣು ಹೂವು ದುಂಬಿಯ
ಸುತ್ತ ಮುತ್ತ ನೀ ನೋಡು ಜೋಡಿ ಹಕ್ಕಿಯಾ ಅಕ್ಕ ಪಕ್ಕ ನೀ ಕಣ್ಣು ಹೂವು ದುಂಬಿಯ
ಭಾವನೆ ತುಳುಕುವಾ ಕಾಮನೆ ಕೆಣಕುವ  ಮೆಚ್ಚಿನ ಮನ್ಮಥ ಅಂಗ ಸಂಗ ಸವಿ ಬಾರೋ 
ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ ಬಣ್ಣ ಬಣ್ಣದಾಸೆ ಹೆಚ್ಚಿದೆ
ಹಾಂ... ನಿನ್ನಲ್ಲು ಕಾಡಲು ಮುತ್ತು ಕೊಟ್ಟು ಕೂಡಲು ಕಿತ್ತು ತಿನ್ನೋ ಪ್ರಾಯ ಉಕ್ಕಿದೆ...

ಹೆಣ್ಣು : ಹ್ಹ.. ಹ್ಹಾ... ಹೂಂ ..
          ಸ್ವರ್ಗದ ಸುಖದಲಿ ತೇಲುವಾ ಹುಚ್ಚಿಗೆ ನನ್ನ ದೇಹ ದಿನವೂ ಕಾದಿದೆ
          ಮಲ್ಲಿಗೆ ಮಂಚದ ಪ್ರೇಮದ ಕಿಚ್ಚಿಗೆ ನನ್ನ ಪ್ರಾಣ ಬಿಡದೆ ತುಡಿದಿದೆ .. ಅಹ್ಹಹ್ಹಹ್
          ಅತ್ತ ಇತ್ತ ನೀನು ನೋಡು ಕಡಲು ನದಿಗಳೇ ಅಲ್ಲಿ ಇಲ್ಲಿ ಎಲ್ಲೆಲೋ ಪ್ರೇಮ ಲೀಲೆಯೇ
         ಅತ್ತ ಇತ್ತ ನೀನು ನೋಡು ಕಡಲು ನದಿಗಳೇ ಅಲ್ಲಿ ಇಲ್ಲಿ ಎಲ್ಲೆಲೋ ಪ್ರೇಮ ಲೀಲೆಯೇ
         ಭಾವನೆ ತುಳುಕುವ ಕಾಮನೆ ಕೆಣಕುವಾ ಮೆಚ್ಚಿನಾ ಮನ್ಮಥ ಅಂಗ ಸಂಗ ಸವಿ ಬಾರೋ 
ಗಂಡು : ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ ಬಣ್ಣ ಬಣ್ಣದಾಸೆ ಹೆಚ್ಚಿದೆ
            ಹಾಂ... ನಿನ್ನಲ್ಲು ಕಾಡಲು ಮುತ್ತು ಕೊಟ್ಟು ಕೂಡಲು ಕಿತ್ತು ತಿನ್ನೋ ಪ್ರಾಯ ಉಕ್ಕಿದೆ...
            ಕಣ್ಣು ಕಣ್ಣು ಕೂಡಿ ಕರೆಯಲು ನನ್ನ ಬಾಳ ಮೋಹ ತಬ್ಬಿದೆ
            ಅಚ್ಚು ಮೆಚ್ಚು ಸ್ನೇಹ ಸೆಳೆಯಲು ಮೈಯ್ಯ ತುಂಬಾ ದಾಹ ಹಬ್ಬಿದೆ
            ಮೆಲ್ಲಗೆ ಮೆಲ್ಲಗೆ ಬಯಕೆ ಬೆಂಕಿ ಹೊತ್ತಿ ಮುತ್ತಿ  
           ನಿನ್ನನು ನೋಡಲು ಮತ್ತೆ ಮತ್ತೆ ನನ್ನಲಿ ಬಣ್ಣ ಬಣ್ಣದಾಸೆ ಹೆಚ್ಚಿದೆ ಹೇಹೇಹೇಹೇಹೇ .. ಹ್ಹಾ 
           ಹಾಂ ಡಿಂಗ ಡಾಂಗ ಡಿಂಗ ಡಾಂಗ   ಡಿಂಗ ಡಾಂಗ ಡಿಂಗ ಡಾಂಗ ಡಿಂಗ
ಇಬ್ಬರು : ಹಾಂ ಡಿಂಗ ಡಾಂಗ ಡಿಂಗ ಡಾಂಗ   ಡಿಂಗ ಡಾಂಗ ಡಿಂಗ ಡಾಂಗ ಡಿಂಗ
           ಹಾಂ ಡಿಂಗ ಡಾಂಗ ಡಿಂಗ ಡಾಂಗ   ಡಿಂಗ ಡಾಂಗ ಡಿಂಗ ಡಾಂಗ ಡಿಂಗ
           ಹಾಂ ಡಿಂಗ ಡಾಂಗ ಡಿಂಗ ಡಾಂಗ   ಡಿಂಗ ಡಾಂಗ ಡಿಂಗ ಡಾಂಗ ಡಿಂಗ
--------------------------------------------------------------------------------------------------------------------------

ಕುಂತಿ ಪುತ್ರ (೧೯೯೪) - ಈ ಪ್ರೇಮ ಮರೆಯದ ಮನಸಿನ ಸಂಗಮ
ಸಂಗೀತ : ವಿಜಯಾನಂದ, ಸಾಹಿತ್ಯ : ದೊಡ್ಡರಂಗೇಗೌಡ, ಮನೋಹರ, ಗಾಯನ : ಎಸ್ಪಿ.ಬಿ, ಚಿತ್ರಾ 

ಗಂಡು : ಈ ಪ್ರೇಮ...  ಮರೆಯದ ಮನಸಿನ ಸಂಗಮ  ಹಸಿರು ಗಿರಿಗಳೆಲ್ಲವೂ ಒಲವ ಗೀತೆ ಕೇಳಲಿ
            ದಿನವೂ ಚೈತ್ರ ಮೇಳವೇ ಅಂದು ನಿನ್ನ ಬಾಳಲಿ
            ಗಗನ ಆಣೆ ಭುವನ ಆಣೆ ಬಿಡಿಸಲಾರದ ಅನುಬಂಧ
            ಈ ಪ್ರೇಮ ಮರೆಯದ ಮನಸಿನ ಸಂಗಮ ಈ ಪ್ರೇಮ ....

ಗಂಡು : ಪ್ರೇಮ ವೀಣೆ ಮೀಟಿದ ನಾದ ಗಂಗೆಯೋ ವೇದ ನಾದ ತುಂಬಿದ ಪ್ರೇಮ ದೈವವೋ   
           ಜೋಡಿ ಆಗಿ ಹಾಡಿದ ರಾಗ ಕೇಳದೇ ನೂರು ಬಾಷೇ ನೀಡಿದ ಮಾತು ಬಾರದೇ
           ಅಂತರಂಗವೇ ಮುಕವಾಗಿದೇ  ನಿನ್ನ ಪ್ರೀತಿಯ ಕಾಣದಾಗಿದೇ 
           ಒಲವೇ ನನ್ನ ಒಡಲ ನುಂಗಿ ನಗುವಾ ಆಸೇ ಏತಕೆ 
          ಈ ಪ್ರೇಮ ಮರೆಯದ ಮನಸಿನ ಸಂಗಮ ಈ ಪ್ರೇಮ ....

ಕೋರಸ್ : ಆಆಆಅ... ಆಆಆಅ...
ಗಂಡು  : ದೇಹ ದೂರಾವಾದರೇ ನೋವೇ ಆ ದಿನ ನೀನು ಇಲ್ಲವಾದರೆ ಸಾವೇ ಆ  ಕ್ಷಣ
            ಗಾಳಿ ನೀರು ಭೂಮಿಯೇ ಶೋಕವಾಗಿದೇ ಮೌನವಾದ ನಿನ್ನನ್ನೂ ನೋಡಲಾಗಿದೇ
            ನೆನಪುಗಳೇ ಮರುಕಳಿಸೂ ನೀ ಒಲವ ಜೊತೇ ಬೆರೆಸೂ  
            ಮಧುರ ನಿನ್ನ ಸುಖದ ಗಾನ ಮರೆಳಿ ಹಾಡೂ ನೀನಿಂದೂ
ಹೆಣ್ಣು : ಈ ಪ್ರೇಮ ಮರೆಯದ ಮನಸಿನ ಸಂಗಮ  ಕಾವೇರಿ ಕಡಲನು ಬೆರೆಯುವ ಸಂಭ್ರಮ
          ಹಸಿರು ಗಿರಿಗಳೆಲ್ಲವೂ ಒಲವ ಗೀತೆ ಕೇಳಲಿ ದಿನವೂ ಚೈತ್ರ ಮೇಳವೇ ನಗುವ ನಮ್ಮ ಬಾಳಲಿ
          ಗಗನ ಆಣೆ ಭುವನ ಆಣೆ ಬಿಡಿಸಲಾರದ ಅನುಬಂಧ ಈ ಪ್ರೇಮ .... (ಸ್ಟಾಪ್ ಇಟ್ )
-------------------------------------------------------------------------------------------------------------------------

No comments:

Post a Comment