817. ತಾಯಿ ಕೊಟ್ಟ ಸೀರೆ (೧೯೯೭)

ತಾಯಿ ಕೊಟ್ಟ ಸೀರೆ ಚಿತ್ರದ ಹಾಡುಗಳು
  1. ತಾಯಿ ಕೊಟ್ಟ ಸೀರೆ 
  2. ಕೋಗಿಲೆ ಕೋಗಿಲೆ 
  3. ಅರರೆ ಈ ಪ್ರೀತಿಯ 
  4. ಮಲ್ಲಿ ಮಲ್ಲಿ ಮಲ್ಲಿಗೆ 
  5. ಒಹೋ ಗಿಳಿಗಳೇ 
  6. ಸುವ್ವಿ ಸುವ್ವಿ ಸುವ್ವಾಲೆ 
ತಾಯಿ ಕೊಟ್ಟ ಸೀರೆ (೧೯೯೭) - ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೇ 
ಸಂಗೀತ : ಕೆ.ಕಲ್ಯಾಣ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ.ಜಾನಕಿ

 ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೇ ಮುದುಡಿ ಹೋದ ಕರುಳ ಬಳ್ಳಿಗೇ 
ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೇ ಮುದುಡಿ ಹೋದ ಕರುಳ ಬಳ್ಳಿಗೇ 
ಆಸರೇ ಇಲ್ಲದ ತಬ್ಬಲಿ ಮಗುವ ಬಿಸಿಯುಸಿರಿಗೇ ಹಾಲೇರೇವ 
ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೇ ಮುದುಡಿ ಹೋದ ಕರುಳ ಬಳ್ಳಿಗೇ 

ಪಾಪವೆಂಬ ಬುತ್ತಿ ಹೊತ್ತ ಹೆಣ್ಣೂ ಭೂಮಿಯಲ್ಲಿ ಜನ್ಮ ಪಡೆದಳು 
ಮದುವೇ ಎಂಬ ಸಂತೆಯಲ್ಲಿ ಅವಳೂ ಆಡೋ ಕೈಗೇ ಪಗಡೆಯಾದಳು 
ಪತಿ ಎನ್ನುವ ವ್ಯಾಪಾರಿಯೂ ಉರುಳ ಹಾಕಿದ ಈ ಕೊರಳಿಗೇ 
ಕಣ್ಣೀರ ಸುಳಿಯಲಿ ನಾನೂ ನಗುವಿನ ನೆಪದಲಿ ಅಳುತಿದೆ ಬದುಕೂ 
 ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೇ ಮುದುಡಿ ಹೋದ ಕರುಳ ಬಳ್ಳಿಗೇ 

ಹುಟ್ಟೋವಾಗ ತವರಿಗಿವಳೂ ದೀಪ ಬೆಳಗೋ ಮನೆಗೇ ಅಳುವೇ ಇವಳ ಶಾಪ 
ನೆರಳೂ ಕೂಡ ದೂರ ಮಾಡಿತ್ತಮ್ಮಾ ಹಣದ ಮುಂದೆ ತಲೆಯ ಬಾಗಿತಮ್ಮಾ 
ತಾಳಿ ಎನ್ನುವಾ ಗಾಣದಲ್ಲಿಯೂ ಬಂಧಿಯಾದಳು ಸಂಸಾರ ಸೆರೆಮನೆಯಾಯ್ತೆ   
ಅರಗಿನ ಮನೆಯಲೀ ಕರಗಿದೆ ಬದುಕೂ 
ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೇ ಮುದುಡಿ ಹೋದ ಕರುಳ ಬಳ್ಳಿಗೇ 
ಆಸರೇ ಇಲ್ಲದ ತಬ್ಬಲಿ ಮಗುವ ಬಿಸಿಯುಸಿರಿಗೇ ಹಾಲೇರೇವ 
------------------------------------------------------------------------------------------------

ತಾಯಿ ಕೊಟ್ಟ ಸೀರೆ (೧೯೯೭) - ತಾಯಿ ಕೊಟ್ಟ ಸೀರೆ ಮಗಳ ಮಡಿಲಿಗೇ 
ಸಂಗೀತ : ಕೆ.ಕಲ್ಯಾಣ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್.ಪಿ.ಬಿ. ಮಂಜುಳ ಗುರುರಾಜ 

ತನನ ನಾ ನಾ ತಾನಾನಂ ತನ ನಮ 
ಕೋಗಿಲೇ ಕೋಗಿಲೇ ಹಾಂ... ಚೈತ್ರ ನಿನ್ನ ಬಾಳಿಗೇ 
ಕೇಳೇಲೀ  ಕೇಳೇಲೀ ಕೇಳೇ ಕೋಗಿಲೇ 
ಕುಹೂ ಕುಹೂಗಳ ನಡುವೇ ನಿನ್ನ ಮನೆಯ ಹುಡುಕುತಲಿರುವೇ 
ಪ್ರೇಮದೂರಿನೋಲೇ ನನಗೆ ದಾರಿ ಹೇಳೆಲೇ   
ಕೋಗಿಲೇ ಕೋಗಿಲೇ ಕೂ... ಚೈತ್ರ ನಿನ್ನ ಬಾಳಿಗೇ 
ಹೇಳೇಲೀ  ಹೇಳೇಲೀ ಹೇಳೇ ಕೋಗಿಲೇ.. ಕೂ ಕೂಕ್ಕೂ...    

ನಾ ಚಿಗುರೇಲೇ ಹಿಂದಿರುವೇ ನಾ ಋತುಗಳ ಮುಂದಿರುವೇ 
ನಾ ಬಯಸೋ ಎದೇ ತುಂಬಾ ನಲಿವೇ 
ಬಾ ಬಾಗಿಲ ತೆರೆದಿಡುವೇ ನೀ ನಡೆದಲ್ಲೇ ಹೂ ಹಾಸುವೇ 
ಈ ನಿನ್ನ ಕವಿ ಮನಸ ಬಲ್ಲೇನೂ ಓ ಅಭಿಮಾನೀ 
ನಿನ್ನ ಹೇಗೆ ಕಾಣಲಿ ಓ ಚಿಲಿಪಿಲಿ ರಾಣೀ 
ಸರಸರ ನಡೆಯಲೇ ಅವಸರ ಕರೆಯಲೇ 
ಮುಜುಗುರ ಮರೆಯಲೇ ಹೊಸ ಸ್ವರ ಬರೆಯಲೇ 
ಕೋಗಿಲೇ ಕೋಗಿಲೇ ಕೂ... ಚೈತ್ರ ನಿನ್ನ ಬಾಳಿಗೇ 
ಹೇಳೇಲೀ  ಹೇಳೇಲೀ ಹೇಳೇ ಕೋಗಿಲೇ.. ಕೂ ಕೂಕ್ಕೂ...    

ಬಾ ಕನಸಿನ ಕಣ್ಣವಳೇ ಬಾ ಮಾದಕ ಧನಿಯವಳೇ 
ಕೇಳಿರದ ಹೊಸ ಕವನ ಹೇಳೇ 
ನಾ ಕಿನ್ನರ ಕುಲದವಳೋ ನನ್ನ ಹೆಸರೇ ಬಿಸಿ ಕವನ ಕೇಳೋ 
ನೀ ತಾನೇ ಎಳೇ ಮನಸ ಗೆಲ್ಲುವ ಗೂಡಾಚಾರೀ 
ನಾ ನಿನ್ನ ಒಳಮನಸ ಗಿಲ್ಲುವ ಚೋರಿ 
ಚಿಲಿಪಿಲಿ ಸುರಿಸಲೇ ಕಚಗುಳಿ ತರಿಸಲೇ 
ನಲೀ ನಲೀ ನಲಿಸಲೇ ಗಲಿಬಿಲಿ ಮರೆಸಲೇ 
ಕೋಗಿಲೇ ಕೋಗಿಲೇ ಹಾಂ... ಚೈತ್ರ ನಿನ್ನ ಬಾಳಿಗೇ 
ಕೇಳೇಲೀ  ಕೇಳೇಲೀ ಕೇಳೇ ಕೋಗಿಲೇ 
ಕುಹೂ ಕುಹೂಗಳ ನಡುವೇ ನಿನ್ನ ಮನೆಯ ಹುಡುಕುತಲಿರುವೇ 
ಪ್ರೇಮದೂರಿನೋಲೇ ನನಗೆ ದಾರಿ ಹೇಳೆಲೇ.. ಹೂಂಹೂಂಹೂಂಹೂಂ    

------------------------------------------------------------------------------------------------

ತಾಯಿ ಕೊಟ್ಟ ಸೀರೆ (೧೯೯೭) - ಅರೆರೇ ಈ ಪ್ರಿತಿಯ ಸಂಚಾರ 
ಸಂಗೀತ : ಕೆ.ಕಲ್ಯಾಣ ಸಾಹಿತ್ಯ : ಎಸ.ನಾರಾಯಣ ಗಾಯನ : ರಾಜೇಶ . ಮಂಜುಳ ಗುರುರಾಜ 

ತಾಂ ನಾ ನಾನ್ ತನನ ನಾ ತನ ನ ತಾನ್ ಓಓಓಓಓಓಓ  
ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ 
ಅರರೇ ಈ ಪ್ರೀತಿಯ ಸಂಚಾರ ಬದುಕೆಲ್ಲಾ ಬಣ್ಣದ ಚಿತ್ತಾರ 
ಮೆಚ್ಚಾಯಿತೋ ಕನಸೂ ಹಂಚಾಯಿತು ಮಿಂಚೋಣ ಬಾ ಗೆಳೆಯಾ 
ತಾಂ ನಾ ನಾನ್ ತನನ ನಾ ತನ ನ
ಅರರೇ ಈ ಪ್ರೀತಿಯ ಸಂಚಾರ ಬದುಕೆಲ್ಲಾ ಬಣ್ಣದ ಚಿತ್ತಾರ 

ತಂದಾನ ತಾನ ನಾನ ಹಾಡೋ ವಯಸ್ಸೂ 
ಸಲ್ಲಾಪ ಸಾಲುಗೇನಾ ಬೇಡೋ ವಯಸ್ಸೂ 
ಮಾತೆಲ್ಲಾ ಬಲ್ಲೇ ಮುತ್ತೊಂದ ಕೊಳ್ಳೆ ಓ.. ವಯಸ್ಸೇ ಈ ನಿಯಮ ಸರೀ ಏನೂ 
ಅತ್ತ ಇತ್ತ ಸುತ್ತ ಮುತ್ತ ಮುತ್ತೂ ಕೊಳ್ಳೋ ಕನಸ 
ಹೊತ್ತೂ ಜಾರೀ ಕೊಳ್ಳೋ ಮುಂಚೇ ಮಾಡುತೀನಿ ನನಸ ಬಾ.. ಆಆಆ 
ಅರರೇ ಈ ಪ್ರೀತಿಯ ಸಂಚಾರ ಬದುಕೆಲ್ಲಾ ಬಣ್ಣದ ಚಿತ್ತಾರ.. ಹೂಂ  
ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ 

ನಮಗೊಂದು ಹೊಸದೊಂದೂ ಕಾಗುಣಿತ ಕಳಿಸೋದೇ ಈ ಪ್ರೀತಿ ಕಣ್ಣ್ ಮಿಡಿತ 
ಚಿತ್ತನ ತಂದೂ ಆ ಚಿತ್ತಾರ ಕಂಡೇ  ಕೊಡಲೇನೆ ಬಿಸಿ ಬಿಸಿಯ ಬಹುಮಾನ 
ಕೊಂಚ ಕೊಂಚ ಮಾತಿನಲೂ ಏನಿದೆಂತ ಸರಸ 
ಹಚ್ಚಿಕೊಂಡೂ ಕುಂತ ಮೇಲೆ ನೀನಲ್ಲವೇ ಅರಸ ಬಾ.. ಆ ಆ ಆ.. ಬಾ 
ಅರರೇ ಈ ಪ್ರೀತಿಯ ಸಂಚಾರ ಬದುಕೆಲ್ಲಾ ಬಣ್ಣದ ಚಿತ್ತಾರ.. ಹೂಂ  
ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ ಚುಮ್ 
ಮೆಚ್ಚಾಯಿತೋ ಕನಸೂ ಹಂಚಾಯಿತು ಮಿಂಚೋಣ ಬಾ ಗೆಳೆಯಾ 
ತಾಂ ನಾ ನಾನ್ ತನನ ನಾ ತನ ನ
ಅರರೇ ಈ ಪ್ರೀತಿಯ ಸಂಚಾರ 
ತಾಂ ನಾ ನಾನ್ ತನನ ನಾ ತನ ನ
ಬದುಕೆಲ್ಲಾ ಬಣ್ಣದ ಚಿತ್ತಾರ.. ಹೂಂ  
ತಾಂ ನಾ ನಾನ್ ತನನ ನಾ ತನ ನ
------------------------------------------------------------------------------------------------

ತಾಯಿ ಕೊಟ್ಟ ಸೀರೆ (೧೯೯೭) - ಅರೇ ಮಳ್ಳಿ ಮಳ್ಳಿ ಮಳ್ಳಿ 
ಸಂಗೀತ : ಕೆ.ಕಲ್ಯಾಣ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 

ಅರೇ ಮಲ್ಲಿ ಮಲ್ಲಿ ಮಲ್ಲಿ ಮಲ್ಲಿಗೇ ಏಳು ಸುತ್ತಿನ ದುಂಡು ಮಲ್ಲಿಗೆ
ಮಲ್ಲಿ ಮಲ್ಲಿ ಮಲ್ಲಿ ಮಲ್ಲಿಗೇ ಕೆನ್ನೇ ಚೆಂದೂರ ಚೆಂಡು ಮಲ್ಲಿಗೆ
ಕಣ್ಣೂ ಗುಲಗಂಜಿ ಸೂಜಿ ಮಲ್ಲಿಗೆ ಮನಸ್ಸೂ ಅಪರಂಜಿ ಜಾಜಿ ಮಲ್ಲಿಗೆ 
ಇಲ್ಲೇ ದಸರಾನ ತೋರಿಸ್ತಿಯೇ ಮೈಸೂರ ಮಲ್ಲಿಗೆ 
ಮಲ್ಲಿ ಮಲ್ಲಿ ಮಲ್ಲಿ ಮಲ್ಲಿಗೇ ಏಳು ಸುತ್ತಿನ ದುಂಡು ಮಲ್ಲಿಗೆ
ಮಲ್ಲಿ ಮಲ್ಲಿ ಮಲ್ಲಿ ಮಲ್ಲಿಗೇ ಕೆನ್ನೇ ಚೆಂದೂರ ಚೆಂಡು ಮಲ್ಲಿಗೆ
ಚೂಮ್ ಚಕ್ಕ ಚ ಚ ಚ ಚೂಮ್ ಚಕ್ಕ ಚ ಚ ಚ ಚೂಮ್ ಚೂಮ 

ಹಚ್ಚ ಹಸುರಿನ ಗಿಡದಲ್ಲಿ ಮೊಸರನ್ನೂ ಚೆಲ್ಲಿ ನನ್ನ ಹೆಸರನ್ನೂ ಬರೆದೆ 
ನನ್ನ ಮೈಯ್ಯ ತುಂಬಾ ನಿನ್ನ ಪ್ರೀತಿ ಗಂಧ ಹಚ್ಚಿಕೊಂಡು 
ಘಮ್ ಘಮ್ ಅಂತಾ ಮೆರೆದೆ 
ಮಲ್ಲಿಗೆ ನಿಂತರೇ ಮಲ್ಲಾರ ಮಲ್ಲಿಗೇ ಹೋಯ್ ಮಲ್ಲಿಗೆ ಕುಂತರೇ ಚಿತ್ತಾರ ಮಲ್ಲಿಗೆ 
ಚಿನ್ನ ನಾನು ಅಂಜು ಮಲ್ಲಿಗೆಯು ಅಲ್ಲ ಕಣೋ ನಿನ್ನ ಕರಗಿಸೋ ಮಜು ಮಲ್ಲಿಗೆ 
ಇನ್ನೂ ನೀನು ಮುಗಿಲಿನ ಮಲ್ಲಿಗೆಯು ಅಲ್ಲ ಕಣೇ ನನ್ನ ಹೆಗಲಿನ ಮಲ್ಲಿಗೆ 
ಗುಲು ಗುಲು ಕೋಲ್ ಗುಲು ಗುಲು ಕೋಲ್ ಮಲ್ಲಿ ಮಲ್ಲಿಗೆ 
ಮಲ್ಲಿ ಮಲ್ಲಿ ಮಲ್ಲಿ ಮಲ್ಲಿಗೇ ಏಳು ಸುತ್ತಿನ ದುಂಡು ಮಲ್ಲಿಗೆ
ಮಲ್ಲಿ ಮಲ್ಲಿ ಮಲ್ಲಿ ಮಲ್ಲಿಗೇ ಕೆನ್ನೇ ಚೆಂದೂರ ಚೆಂಡು ಮಲ್ಲಿಗೆ

ನೀ ಬೆಳ್ಳಿ ಬೆಳ್ಳಿ ರವಿಕೆ ತೊಟ್ಟು ಪಚ್ಚೆಗಳ ದಾವಣಿ ಉಟ್ಟು 
ಹಾಡಿಕೊಳ್ಳೋ ರಾಗ ಮಲ್ಲಿಗೆ ನಿನ್ನ ಎಲ್ಲ ಕಲೆಗಿಂತ ಪ್ರೇಮ 
ಕಲೆಯೊಂದೇ ಮಿಗಿಲಂತ ತೋಡಿಕೊಳ್ಳ ಮೋಹ ಮಲ್ಲಿಗೆ 
ಮಲ್ಲಿಗೆ ನಕ್ಕರೆ ಮುತ್ತೂರ ಮಲ್ಲಿಗೆ ಮಲ್ಲಿಗೆ ಸಿಕ್ಕರೆ ಅಂಬೂರ ಮಲ್ಲಿಗೆ 
ಎಂದೋ ನೀನು ಇರುಳಿನ ಮಲ್ಲಿಗೆಯು ಅಲ್ಲ ಕಣೇ ನನ್ನ ಕೊರಳಿನ ಮಲ್ಲಿಗೆ 
ನಾನು ಏನೇ ನನ್ನ ಹೋಲೋ ಸಾಲು ಮಲ್ಲೆ ಅಲ್ಲ ಕಣೋ ಎದೇ ತುಂಬಾ ಹಾಲು ಮಲ್ಲಿಗೆ  
ಗುಲು ಗುಲು ಕೋಲ್ ಗುಲು ಗುಲು ಕೋಲ್ ಮಲ್ಲಿ ಮಲ್ಲಿಗೆ 
ಮಲ್ಲಿ ಮಲ್ಲಿ ಮಲ್ಲಿ ಮಲ್ಲಿಗೇ ಏಳು ಸುತ್ತಿನ ದುಂಡು ಮಲ್ಲಿಗೆ
ಮಲ್ಲಿ ಮಲ್ಲಿ ಮಲ್ಲಿ ಮಲ್ಲಿಗೇ ಕೆನ್ನೇ ಚೆಂದೂರ ಚೆಂಡು ಮಲ್ಲಿಗೆ
ಕಣ್ಣೂ ಗುಲಗಂಜಿ ಸೂಜಿ ಮಲ್ಲಿಗೆ ಮನಸ್ಸೂ ಅಪರಂಜಿ ಜಾಜಿ ಮಲ್ಲಿಗೆ 
ಇಲ್ಲೇ ದಸರಾನ ತೋರಿಸ್ತಿಯೇ ಮೈಸೂರ ಮಲ್ಲಿಗೆ 
ಮಲ್ಲಿ ಮಲ್ಲಿ ಮಲ್ಲಿ ಮಲ್ಲಿಗೇ ಏಳು ಸುತ್ತಿನ ದುಂಡು ಮಲ್ಲಿಗೆ
ಮಲ್ಲಿ ಮಲ್ಲಿ ಮಲ್ಲಿ ಮಲ್ಲಿಗೇ ಕೆನ್ನೇ ಚೆಂದೂರ ಚೆಂಡು ಮಲ್ಲಿಗೆ
ಚೂಮ್ ಚಕ್ಕ ಚ ಚ ಚ ಚೂಮ್ ಚಕ್ಕ ಚ ಚ ಚ ಚೂಮ್ ಚೂಮ 
-----------------------------------------------------------------------------------------------

ತಾಯಿ ಕೊಟ್ಟ ಸೀರೆ (೧೯೯೭) - ಓ ಗಿಳಿಗಳೇ ಕೇಳಿ ನಾ ಚಿಲಿಪಿಲಿ 
ಸಂಗೀತ : ಕೆ.ಕಲ್ಯಾಣ ಸಾಹಿತ್ಯ : ಎಸ.ನಾರಾಯಣ ಗಾಯನ : ಎಸ್.ಪಿ.ಬಿ, 

ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ 
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ 
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ 
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ 
ಚಿನ್ನ ಚಿಲಿಪಿಲಿ ನಾದ ಹೂ ಮನಸಿನ ವೇದ ಈ ಚೆಲುವೆಯ ಸ್ಫೂರ್ತಿಗೇ ಅನುವಾದ 
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ 
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ 

ಈ ಚೆಲುವೆ ಹೊಸ ಕಾಮನಬಿಲ್ಲೂ ಈ ನಗುವೇ ಕವಿ ಕಾವ್ಯಾವ ಸಾಲೂ 
ಮಂಜು ಮುಚ್ಚಲೂ ಮನಸಲಿ ಪಂಜು ಹಚ್ಚೋಳು  
ಸುರಿಯುವ ಬೆಳು ಬೆಳದಿಂಗಳ ಕುಡಿಯುವ ಪೋರಿ  
ನುಡಿಯದೆ ಮನಸಿನ ಪದಗಳ ನುಡಿಸುವ ಚೋರಿ 
ತನ ನಂ ತನ್ ತನ್ ನಂ ಇವಳ ಹೆಸರೇ ತನ ನಂ 
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ 
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ 
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ 
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ 

ಈ ಚೆಲುವೆ ಹೊಸ ಚಿತ್ತಾರದ ಗೆಳತೀ ಈ ಚೆಲುವೆ ನಿತ್ಯ ಹುಣ್ಣಿಮೆ ಸವತಿ 
ಕಾದು ಕುಂತಳೋ ಎದೆಯಲ್ಲಿ ಹಾದು ಹೋದಳು 
ಈ ಧರೇ ಮೇಲಿನ ಹಸಿರಿನ ಔತಣ ಧಾರೇ 
ರಸಿಕನ ಮನಸಿನ ತೆರೆ ಮರೆ ಕನಸಿನ ತಾರೇ  
ತನ ನಂ ತನ್ ತನ್ ನಂ ಇವಳ ಸ್ಪರ್ಶವೇ ತನ ನಂ 
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ 
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ 
ಒಹೋ ಗಿಳಿಗಳೇ ಗಿಳಿಗಳೇ ಗಿಳಿಗಳೇ ಕೇಳಿ 
ನಾ ಚಿಲಿಪಿಲಿ ಚೆಲುವೆಯ ಮುಂದೆ ಸೋತಿರುವೇ 
ಚಿನ್ನ ಚಿಲಿಪಿಲಿ ನಾದ ಹೂ ಮನಸಿನ ವೇದ ಈ ಚೆಲುವೆಯ ಸ್ಫೂರ್ತಿಗೇ ಅನುವಾದ 
------------------------------------------------------------------------------------------------

ತಾಯಿ ಕೊಟ್ಟ ಸೀರೆ (೧೯೯೭) - ಸಂಪಿಗೇ ಸಂಪಿಗೇ 
ಸಂಗೀತ : ಕೆ.ಕಲ್ಯಾಣ ಸಾಹಿತ್ಯ : ಎಸ.ನಾರಾಯಣ ಗಾಯನ : ಎಲ್.ಏನ್.ಶಾಸ್ತ್ರೀ 

ಸುವ್ವಿ ಸುವ್ವಿ ಸುವ್ವಾಲೇ ಸುವ್ವಿ ಸುವ್ವಾಲೇ 
ಸುವ್ವಿ ಸುವ್ವಿ ಸುವ್ವಾಲೇ ಸುವ್ವಿ ಸುವ್ವಾಲೇ 
ಹೇಯ್ ಸುವ್ವಿ ಸುವ್ವಿ ಸುವ್ವಾಲೇ ಸುವ್ವಿ ಸುವ್ವಾಲೇ ಸುವ್ವಾಲೇ ಸುವ್ವಾಲೇ ಸುವ್ವಾಲೇ 
ಓ ಹೂ ಓ ಹೂ ಓ ಹೂ ಓ ಹೂ ಓ ಹೂ 

ಸಂಪಿಗೇ ಸಂಪಿಗೇ ಸಂಪಿಗೇ ಸಕ್ಕರೇ ತುಂಬಿದ ಬಿಂದಿಗೇ 
ಈ ಹೊಂಗೆಯ ತೇರು ನಮ್ಮ ಗಿರಿಜೆಗೇ ಸೂರು 
ಈ ಮಣ್ಣಿನ ಹಸಿರೇ ಇವಳಂದಕೆ ತೌರು ಮಿಂಚಿ ಮಿನುಗೋ ಇವಳೇ ಹುಣ್ಣಿಮೆ 
ಸಂಪಿಗೇ ಸಂಪಿಗೇ ಸಂಪಿಗೇ ಸಕ್ಕರೇ ತುಂಬಿದ ಬಿಂದಿಗೇ 
ಸುವ್ವಿ ಸುವ್ವಿ ಸುವ್ವಾಲೇ ಸುವ್ವಿ ಸುವ್ವಾಲೇ 
ಲಾ ಲ ಲಾ ಲಾಲಾಲಾಲಾಲಾ ಲಾ ಲ ಲಾ ಲಾಲಾಲಾಲಾಲಾ   

ಯಾವೋನಪ್ಪಾ ರೂಪ ಕೊಟ್ಟೋನೂ ಕಣ್ಣ ಮ್ಯಾಗೇ ದೀಪ ಇಟ್ಟೋನೂ 
ನಾಚಿಕೇನ ಬಚ್ಚಿಕೊಟ್ಟ ರೂಪವಂತೇ ಪ್ರಾಯ ಬಂದು ಅಪ್ಪಿಕೊಂಡ ಅಂದವಂತೆ ಯವ್ವಿ ಯವ್ವಿ 
ಅರೆರೇ ಬಾಯಿ ಬಿಟ್ಟಾಗ ಮುತ್ತು ಮಿಂಚ್ಯಾವೇ ನೀ ನಕ್ಕಾಗ ಬೆಳ್ಳಿ ಮೂಡ್ಯಾವೇ 
ಬಾಳೇ ತೆಂಗೆಲ್ಲಾ ಸುವ್ವಾಲಿ ಹಾಡ್ಯಾವೇ ಊರ ತುಂಬೆಲ್ಲಾ ರಂಗೋಲಿ ಚೆಲ್ಲ್ಯಾವೇ 
ಅರಿಶಿನ ಮೈಯ್ಯಿನ ಅಂಗದೊಳೇ ತಾವರೇ ನಾಚುವ ಬಣ್ಣದೋಳೆ 
ಸಂಪಿಗೇ ಸಂಪಿಗೇ ಸಂಪಿಗೇ ಸಕ್ಕರೇ ತುಂಬಿದ ಬಿಂದಿಗೇ 
ಈ ಹೊಂಗೆಯ ತೇರು ನಮ್ಮ ಗಿರಿಜೆಗೇ ಸೂರು 
ಈ ಮಣ್ಣಿನ ಹಸಿರೇ ಇವಳಂದಕೆ ತೌರು ಮಿಂಚಿ ಮಿನುಗೋ ಇವಳೇ ಹುಣ್ಣಿಮೆ 
ಜೂಮ್ಮಜೂಮ್ಮಜೂಮ್ಮ ಚಕ್  ಚ ಜೂಮ್ಮಜೂಮ್ಮಜೂಮ್ಮ ಚಕ್  ಚ 
 
ಗಂಧವ ತೇದು ಕೆನ್ನೆಗೇ ನೀರ್ ಹಾಕುವ ಬನ್ನಿರೇ 
ಆರತೀ ಮಾಡಿ ದೃಷ್ಟಿಯ ತೀಡಿ ಈ ಕೂಸನ್ನೂ ತನ್ನಿರೇ  
ಹಸರು ಬಳೆಯ ತೊಡಿಸಿರೇ ಮೊಗ್ಗಿನ ದಿಂಡ ಮೂಡಿಸಿರೇ 
ಝರಿಯ ಲಂಗವ ಉಡಿಸಿರೇ ಸಿರಿಯ ಸುರಿದು ಹರಿಸಿರೇ 
ಜೇನಿನ ಔತಣ ಗಿರಿಜೇಗೆಲ್ಲಾ ಹೊಸತನ 
ಸಂಪಿಗೇ ಸಂಪಿಗೇ ಸಂಪಿಗೇ ಸಕ್ಕರೇ ತುಂಬಿದ ಬಿಂದಿಗೇ 
ಈ ಹೊಂಗೆಯ ತೇರು ನಮ್ಮ ಗಿರಿಜೆಗೇ ಸೂರು 
ಈ ಮಣ್ಣಿನ ಹಸಿರೇ ಇವಳಂದಕೆ ತೌರು ಮಿಂಚಿ ಮಿನುಗೋ ಇವಳೇ ಹುಣ್ಣಿಮೆ 
------------------------------------------------------------------------------------------------

No comments:

Post a Comment