824. ಸಾಂಗ್ಲಿಯಾನ (೧೯೮೮)

ಸಾಂಗ್ಲಿಯಾನ ಚಲನಚಿತ್ರದ ಹಾಡುಗಳು 
  1. ಓ ಬಂದಳೋ ಬಂದಳೋ ಕಾಂಚನ ಕಾಂಚನಾ ಕಾಂಚನ
  2. ದೂರದ ಊರಿನಿಂದ ಹಾಡಲು ಬಂದ  ಗೆಳೆಯ... ಅರೆರೇ...
  3. ರಾಜ ನನ್ನ ರಾಜ ಓ ಚೆಲುವ ಚೆನ್ನೀಗ
  4. ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ 
ಸಾಂಗ್ಲಿಯಾನ (೧೯೮೮) - ಓ ಬಂದಳೋ ಬಂದಳೋ ಕಾಂಚನ ಕಾಂಚನಾ ಕಾಂಚನ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯಾನ: ಎಸ್ಪಿ.ಬಿ. ಮಂಜುಳಾ ಗುರುರಾಜ 

ಗಂಡು  : ಹೇ ಹೇ ಹೇ ಹೇ ಹೇ... ಓ ಓ ಓ ಓ ಓ ಓ...
             ಓ ಬಂದಳೋ ಬಂದಳೋ ಕಾಂಚನ ಕಾಂಚನಾ ಕಾಂಚನ
            ಹೇ ಜಂಬವೆ ಇವಳಿಗೆ ಲಾಂಛನ ಲಾಂಛನಾ ಲಾಂಛನ
            ಓ ಅಂದದ ಬೊಂಬೆ ನೀನು ಕೋಪದಲ್ಲಿ ಮಿಂಚುವ ರಾಣಿಜೇನು
            ಈ ಅಂದದ ಮೇಲೆ ನಾನು ರಾಗದಲಿ ಹಾಡುವೆ ಕೇಳು ನೀನು
            ಓ ಕಾಂಚನಾ ಹಾ ಹಾ ಹಾ ನಿನ್ನ ಮೇಲೆ ಒಂದು ಕವನ
            ಓ ಬಂದಳೋ ಬಂದಳೋ ಕಾಂಚನ ಕಾಂಚನಾ ಕಾಂಚನ
          ಹೇ ಜಂಬವೆ ಇವಳಿಗೆ ಲಾಂಛನ ಲಾಂಛನಾ ಲಾಂಛನ

ಗಂಡು : ಪುಂಡರ ಊರಲಿ ಚಿರತೆಯ ಹಾಗಿರು ನೀನು ಕಣ್ ಬಿಟ್ಟೊಡೆ ಭೂಕಂಪವೇ ಎಲ್ಲ ಕಡೆ
            ವೀರರ ಬೀಡಲಿ ವಿಜಯದ ಹಾಗಿರು ನೀನು ನಗುತಿದ್ದೊಡೆ ಆನಂದವೇ ಎಲ್ಲ ಕಡೆ
            ಹೆಣ್ಣೆಂದರೇ ಕಡೆ ಅನ್ನೋಕಾಲ ಬದಲಾಯಿತೇ ವೈಜಯಂತಿ ಮಾಲಾ
            ಇನ್ನು ನಿನಗೆ ನೀನೆ ರಕ್ಷೆ ಬಾಲೆ ನಾನು ಹೋಗಿ ಬರಲೇ
ಹೆಣ್ಣು : ಓ ಓ ಊರಿಗೆಲ್ಲ ಇವನೇ ಒಬ್ಬ ಶೂರ ಹೋಗಿ ಬಾರೋ ತರಲೆ
ಗಂಡು : ಓಯ್  ಬಂದಳೋ ಬಂದಳೋ ಕಾಂಚನ ಕಾಂಚನಾ ಕಾಂಚನ
            ಹೇ ಜಂಬವೆ ಇವಳಿಗೆ ಲಾಂಛನ ಲಾಂಛನಾ ಲಾಂಛನಾ...

ಗಂಡು : ಮದುವೆಯ ಮನೆಯಲಿ ವಧುವು ನೀನಾಗಿರು
           ಹಾಳು ವರದಕ್ಷಿಣೆ ಬೇಕೆಂದರೆ ಹುಲಿಯಾಗಿರು
           ಬಡವರ ನಾಡಲಿ ನಗುವ ತಾಯಾಗಿರು
          ಯಾರು ಏನೆಂದರೂ ಮಿತಿಮೀರದೇ ಎರಡೇ ಹೆರು
          ಇಪ್ಪತ್ತನೇ ಶತಮಾನದಲ್ಲಿ  ನಾನೊಬ್ಬನೇ ಸರದಾರನಿಲ್ಲಿ
          ಹೆಣ್ಣು ಮನೆಯ ಕಣ್ಣು ಎಂದು ತಿಳಿದ  ರೌಡಿ ರಾಮ ನಾನು ಹಾ ಹಾ
ಹೆಣ್ಣು : ಅಯ್ಯೋ ರಾಮ ರಾಮ ಕೃಷ್ಣ ಪ್ರಭುವೇ ಮೊದಲು ತೊಲಗು ನೀನು
ಗಂಡು : ಅರೆ ಬಂದಳೋ ಬಂದಳೋ ಕಾಂಚನ ಕಾಂಚನಾ ಕಾಂಚನ
           ಹೇ ಜಂಬವೆ ಇವಳಿಗೆ ಲಾಂಛನ ಲಾಂಛನಾ ಲಾಂಛನ
           ಓ ಅಂದದ ಬೊಂಬೆ ನೀನು ಕೋಪದಲ್ಲಿ ಮಿಂಚುವ ರಾಣಿಜೇನು
           ಈ ಅಂದದ ಮೇಲೆ ನಾನು ರಾಗದಲಿ ಹಾಡುವೆ ಕೇಳು ನೀನು
           ಓ ಕಾಂಚನಾ ಹಾ ಹಾ ಹಾ ನಿನ್ನ ಮೇಲೆ ಒಂದು ಕವನ
--------------------------------------------------------------------------------------------------------------------------

ಸಾಂಗ್ಲಿಯಾನ (೧೯೮೮) - ದೂರದ ಊರಿನಿಂದ ಹಾಡಲು ಬಂದ  ಗೆಳೆಯ... ಅರೆರೇ...
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯಾನ: ಎಸ್ಪಿ.ಬಿ. ಮಂಜುಳಾ ಗುರುರಾಜ

ಹೆಣ್ಣು : ಜೂಜುಜುಜುಜೂಜು ಲಾಲಾಲಾಲಲ್ಲಲ್ಲಾ ...
ಗಂಡು : ಛೀ  ಛೀ  ಛೀಛೀಛೀ  ಚಾಚಾಚಾಚ ಚಾಚಾ ಯ್ಯಾಯ್ಯಯ್ಯಾ ...
ಹೆಣ್ಣು : ಹೇಯ್ ... ಅಹ್ಹಹ್ಹಹ್ಹಹ್ಹಾ... ಲಾಲಾಲಾಲಲ್ಲಲ್ಲಾ ...
ಗಂಡು : ಅಹ್ಹಹ್ಹಹ್ಹಹ್ಹಾ... ರೂರುರೂರುರೂ ....
ಕೋರಸ್ : ರಾ.. ರುಕ್ ರುಕ್ ರುಕಜಂ  ರಾ.. ರುಕ್ ರುಕ್  ಜಂ   ರಾ.. ರುಕ್ ರುಕ್  ಜಂ
ಹೆಣ್ಣು : ದೂರದ ಊರಿನಿಂದ ಹಾಡಲು ಬಂದ  ಗೆಳೆಯ... ..
          ಅರೆರೇ. ರಾಗವ ಮರೆತು ನೋಡುತ ನಿಂತ ಹೊಸ ಗೆಳತಿಯಾ
          ಹೇ... ದೂರದ ಊರಿನಿಂದ ಹಾಡಲು ಬಂದ  ಗೆಳೆಯ... (ಪಾಪಪ್ಪಪ್ಪಾ...)..ಹ್ಹಹ್ಹಹ್ಹ
          ಅರೆರೇ ... ರಾಗವ ಮರೆತು ನೋಡುತ ನಿಂತ ಹೊಸ ಗೆಳತಿಯಾ
ಗಂಡು : ನಾರೀಮಣಿ ಓ ಚಿಂತಾಮಣಿ ಓ ಭಾಮಾಮಣಿ
           ನೋಡೊದಕಿದೇನು ಬೇಲೂರಿದಲ್ಲ ಕೇಳೇ ಗಿಣಿ ಅರರೇ ಬರೆ ಬರೆ ಕ್ಯಾಬರೆ
ಹೆಣ್ಣು : ಹೋ .. ದೂರದ ಊರಿನಿಂದ ಹಾಡಲು ಬಂದ  ಗೆಳೆಯ... (ಪಾಪಪ್ಪಪ್ಪಾ...)..ಹ್ಹಹ್ಹಹ್ಹ
          ಅರೆರೇ. ರಾಗವ ಮರೆತು ನೋಡುತ ನಿಂತ ಹೊಸ ಗೆಳತಿಯಾ

ಹೆಣ್ಣು : ಕುಣಿವಾ ಮಯೂರವೋ  ನನ್ನ ಸೊಗಸೇ  ಸಪೂರವೋ  
          ನಡೆಯುವಾಗ ನುಡಿಯುವಾಗ ಕಾಣದೇ... ಹೇಯ್ ... 
          ಸುಖಾದಾ ಸರೋವರ ಈ ವಯಸೇ ಮನೋಹರ 
          ಮದನರಾಗ ಮನದ ವೇಗ ಕೇಳದೇ ... ಹಾ! 
ಗಂಡು : ಅಂಗೈಯಲ್ಲೆನೆ ಆಕಾಶ ತೋರೋ ಆಟ ಇದು 
           ಅರಗಿನ ತೋಳೆ ವ್ಯವಹಾರದಂತೇ ಖೋಟಾ ಇದು 
           ಅರರೆ ಬರೆ ಬರೆ ಕ್ಯಾಬರೆ
ಹೆಣ್ಣು : ಹೋ .. ದೂರದ ಊರಿನಿಂದ ಹಾಡಲು ಬಂದ  ಗೆಳೆಯ... (ಪಾಪಪ್ಪಪ್ಪಾ...)..ಹ್ಹಹ್ಹಹ್ಹ
          ಅರೆರೇ. ರಾಗವ ಮರೆತು ನೋಡುತ ನಿಂತ ಹೊಸ ಗೆಳತಿಯಾ

ಕೋರಸ್ : ಜುಜುಜೂ .. ಪಪ್ಪಪ್ಪಪ್ಪ .. ಜುಜುಜೂ .. ಪಪ್ಪಪ್ಪಪ್ಪ ..
ಗಂಡು : ಅಸಲಿ ಆಗಿದ್ದರೆ ನಿನ ಬದುಕೇ ಬಂಗಾರವು ನೂರು ಕಾಲ ಯಾವ ದೈವ ನಡೆಯದೂ ... ಹೂಂ
            ನಕಲಿ ನೀನಾದರೆ ಬರಿ ಕಾಗೆ ಬಂಗಾರವು ಮೂರು  ಕಾಲ ಮೋಸ ಜಾಲ ನಡೆಯದು ಹೂಂ
            ಕಣ್ಣೆದುರಲ್ಲೇನೇ ತೀರ್ಮಾನವಾಗೋ ವಿಷಯ ಇದು ಹ್ಹ.. ಹ್ಹ... ಹ್ಹ...
            ನೀನೆ ಕೂಡಿಟ್ಟು ತಿನ್ನೋ ಕಾರ್ಕೋಟಕ ವಿಷಯವೋ ಇದು ಹ್ಹಾ.. ಅರರೆ ಬರೆ ಬರೆ ಕ್ಯಾಬರೆ
ಹೆಣ್ಣು : ಹೋ .. ದೂರದ ಊರಿನಿಂದ ಹಾಡಲು ಬಂದ  ಗೆಳೆಯ... (ಪಾಪಪ್ಪಪ್ಪಾ...)..ಹ್ಹಹ್ಹಹ್ಹ
          ಅರೆರೇ. ರಾಗವ ಮರೆತು ನೋಡುತ ನಿಂತ ಹೊಸ ಗೆಳತಿಯಾ
ಗಂಡು : ದೂರದ ಊರಿನಿಂದ ಹಾಡಲು ಬಂದ  ಗೆಳೆಯ... (ಪಾಪಪ್ಪಪ್ಪಾ...)..ಹ್ಹಹ್ಹಹ್ಹ
          ಅರೆರೇ. ಹಾಡಲೂ ಮರೆತು ನೋಡುತ ನಿಂತ ಹೊಸ ಗೆಳತಿಯಾ

ನಾರೀಮಣಿ ಓ ಚಿಂತಾಮಣಿ ಭಾಮಾಮಣಿ
ನೋಡೊದಕಿದೇನು ಬೇರೂರಿದಲ್ಲ ಕೇಳೇ ಗಿಣಿ
ಅರರೆ ಬರೆ ಬರೆ ಕ್ಯಾಬರೆ
ದೂರದ ಊರಿನಿಂದ ಹಾಡಲು ಬಂದ  ಗೆಳೆಯ... ಅರೆರೇ...
----------------------------------------------------------------------------------------------------------------------

ಸಾಂಗ್ಲಿಯಾನ (೧೯೮೮) - ರಾಜ ನನ್ನ ರಾಜ ಓ ಚೆಲುವ ಚೆನ್ನೀಗ
ಸಂಗೀತ : ಹಂಸಲೇಖ ಸಾಹಿತ್ಯ : ವಿ.ಮನೋಹರ, ಗಾಯಾನ: ಮಂಜುಳಾ ಗುರುರಾಜ

ಹೆಣ್ಣು :  ಆಂ ... ಆ .. ಆಹಾ...
           ರಾಜ ನನ್ನ ರಾಜ ಓ ಚೆಲುವ ಚೆನ್ನೀಗ... ಧೀರ ನನ್ನ ಶೂರ.. ಇದೇನೂ ಸೋಜಿಗ
           ಉರಿವಾ ಬಿಸಿಲಲ್ಲೂ ತಂಪೂ ತಂದೇನೇ ಸುಡುವ ಮನದಲ್ಲೂ ಸುಖವ ತಂದೇನೇ
           ರಾಜ ನನ್ನ ರಾಜ ಓ ಚೆಲುವ ಚೆನ್ನೀಗ... ಧೀರ ನನ್ನ ಶೂರ.. ಇದೇನೂ ಸೋಜಿಗ

ಹೆಣ್ಣು : ಮಳೆಯ ಛಳಿಯ ಭಯವೇ ಇಲ್ಲಾ.. ನೀನು ನನ್ನ ಸನಿಹ ಇದ್ದರೇ....
          ಗೆಳೆಯ ಜಗಕೇ ಹೆದರೋದಿಲ್ಲಾ ನೀನು ನನ್ನ ಒಪ್ಪಿಕೊಂಡರೇ
          ಕುಡಿ ಮೀಸೆ ಹಮ್ಮಿರ.. ಕೊಡು ಬಾರೋ ಪರಿಹಾರ
          ಬಳಿ ನೀನು ಬಂದಾಗ ಹೆಸರಾದ ಸಂಚಾರ ಸನ್ಯಾಸಿಯಂತೇ ಇದೇನು ಚಿಂತೇ
          ಸನ್ಯಾಸಿಯಂತೇ ಒಹೋ ಇದೇನು ಚಿಂತೇ ಕೊನೆಗೂ ನನಗೂ ಸೋತೇ
           ರಾಜ ನನ್ನ ರಾಜ ಓ ಚೆಲುವ ಚೆನ್ನೀಗ... ಧೀರ ನನ್ನ ಶೂರ.. ಇದೇನೂ ಸೋಜಿಗ

ಹೆಣ್ಣು : ಬಳುಕಿ ಬಳುಕಿ ನಡುವೂ ಬಳಲಿ ಬೇಡುತಿಹುದು  ನಿನ್ನ ಆಸರೇ
          ಎದೆಯಾ ತಿದಿಯೋ ಉಸಿರಾ ಬಿಸಿಯೋ ತಣಿಸೋ ಬಾರೋ ಬೇಗ ಓ ದೊರೆ
          ಇರಬೇಡ ಫಲತೋರೋ ನನ್ನ ಜಾಣ ಬಳಿ ಬಾರಾ
          ಸೊಗಸಾದ ಉಪಚಾರ ನೀನಗಾಗಿ ಇದೇ ಬಾರಾ
          ಒಂದೊಂದೇ ಮುತ್ತು ಆ ಮುತ್ತಲ್ಲಿ ಮತ್ತೂ ...
          ಒಂದೊಂದೇ ಮುತ್ತು ಆ ಮುತ್ತಲ್ಲಿ ಮತ್ತೂ  ಕೊನೆಗೂ ನನಗೂ ಸೋತೇ
          ರಾಜ ನನ್ನ ರಾಜ ಓ ಚೆಲುವ ಚೆನ್ನೀಗ... ಧೀರ ನನ್ನ ಶೂರ.. ಇದೇನೂ ಸೋಜಿಗ
          ಉರಿವಾ ಬಿಸಿಲಲ್ಲೂ ತಂಪೂ ತಂದೇನೇ ಸುಡುವ ಮನದಲ್ಲೂ ಸುಖವ ತಂದೇನೇ
          ರಾಜ ನನ್ನ ರಾಜ ಓ ಚೆಲುವ ಚೆನ್ನೀಗ... ಧೀರ ನನ್ನ ಶೂರ.. ಇದೇನೂ ಸೋಜಿಗ
----------------------------------------------------------------------------------------------------------------------

ಸಾಂಗ್ಲಿಯಾನ (೧೯೮೮) - ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ
ಸಂಗೀತ : ಹಂಸಲೇಖ ಸಾಹಿತ್ಯ : ದೊಡ್ಡರಂಗೇಗೌಡ, ಗಾಯಾನ: ಮಂಜುಳಾ ಗುರುರಾಜ, ಬಿ.ಆರ್.ಛಾಯ, ಎಸ್.ಪಿ.ಬಿ. 

ಮಗು : ಅಮ್ಮಾ... ಅಮ್ಮ ಅಮ್ಮ .. ಅಮ್ಮಾ... ಆ... ಆ... ಆ... ಆ... ಆ... ಅಮ್ಮಾ
          ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ ನೀ ನನ್ನ ಬಿಟ್ಟೂ ಎಲ್ಲಿ ಹೋದೇ
          ನಿನ್ನ ಮುಖ ಕಾಣದೇ ತುಂಬಾ ಭಯವಾಗಿದೇ ಬಾ.... ಆಆಆ..
          ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ ನೀ ನನ್ನ ಬಿಟ್ಟೂ ಎಲ್ಲಿ ಹೋದೇ
          ನಿನ್ನ ಮುಖ ಕಾಣದೇ ತುಂಬಾ ಭಯವಾಗಿದೇ ಬಾ.... ಆಆಆ..
          ಕಣ್ಣಾ ಮುಚ್ಚೇ ಆಟವಿದು ಸಾಕಾಯ್ತು ಬಾ ... ಬಾ..
          ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ ನೀ ನನ್ನ ಬಿಟ್ಟೂ ಎಲ್ಲಿ ಹೋದೇ

ಮಗು : ದೇವರಿಲ್ಲವೇನೂ ಇದ್ದರೇ ಕಣ್ಣು ಕಾಣದೇನು ಪಡೆವಾ ಕಣ್ಣು ಕೊಡುವಾ ನಮಗೇ ಕಲ್ಲು ಮುಳ್ಳೂ
           ಹುಡುಕೀ ತಾರೇ ನನ್ನ ಪ್ರೀತಿಯ ಮುದ್ದು ಅಮ್ಮನ್ನನ್ನಾ .. ಕೊಡುವೇ ಈಗ ನಿನಗೇ ನನ್ನ ಎರಡೂ ಕಣ್ಣ..
ಗಂಡು :  ಕಾಣದ ದೇವನೂ ಕಾಯಲೂ ಮರೆಯನೂ ನಂಬು ಮಗುವೇ ಅವನನ್ನೂ ಹೋರಾಡಲೂ ...
            ಭಯವನೂ ಬಿಡೂ ನನ್ನ ಮಗುವೇ ನಾನೂ ಎಂದೂ ನಿನ್ನ ಹಿಂದೇ ಇರುವೇ  
            ಚಿಂತೆಯನ್ನೂ ಮಾಡದೇ ದಾರಿ ತಪ್ಪಿ ಹೋಗದೇ ಬಾ...

ಹೆಣ್ಣು : ಅಹ್ಹ.. ಅಹ್ಹ .. ಹ್ಹಾ... (ಹ್ಹ ಹ್ಹ ಹ್ಹ) ಅಹ್ಹ ಅಹ್ಹ ಹ್ಹ ಹ್ಹ (ಅಮ್ಮಾ.. ಹ್ಹಹ್ಹಹ್ಹಹ್ಹ ) ಅವಿನಾಶ.. ಅಮ್ಮ ಆಅ ..
ಮಗು :  ಬೇಡ ನನಗೇ ಏನೂ ಅಮ್ಮ ಬೇಕೂ ನನಗೇ ನೀನೂ ನಿನ್ನಾ ಮಡಿಲಾ ಇರುವೇ ಮೇಲೆ ಎಂದೂ ನಾನೂ ..
ಹೆಣ್ಣು : ನನ್ನ ಕಣ್ಣು ನೀನೂ ಕಣ್ಣ ಕಾಯೋ ರೆಪ್ಪೆ ನಾನೂ ನನ್ನಾ ಒಲವೇ ನನ್ನ ಬಲವೇ ಎಲ್ಲಾ ನೀನೂ
          ನೋವಿನಾ ಜಗದಲೀ ನಕ್ಕರೇ ನಲಿವಿದೇ ನಂಬು ಕಂದಾ ಅವನನ್ನೂ ಹೋರಾಡಲೂ ...
          ಭಯವನೂ ಬಿಡೂ ನನ್ನ ಮಗುವೇ ನಾನೂ ಎಂದೂ ನಿನ್ನ ಹಿಂದೇ ಇರುವೇ  
          ಚಿಂತೆಯನ್ನೂ ಮಾಡದೇ ದಾರಿ ತಪ್ಪಿ ಹೋಗದೇ ಬಾ...
ಮಗು : ಪ್ರೀತಿಯಿಂದ ಪಪ್ಪೀ ಕೊಟ್ಟ ಮಮ್ಮಿ .. ಲಲಲ್ಲಾ ಲಲ್ಲಲ್ಲಾ
----------------------------------------------------------------------------------------------------------------------

No comments:

Post a Comment