825. ಮಂಡ್ಯದ ಗಂಡು (೧೯೯೪)

ಮಂಡ್ಯದ ಗಂಡು ಚಲನಚಿತ್ರದ ಹಾಡುಗಳು 
  1. ಮಂಡ್ಯದ ಗಂಡು ಮುತ್ತಿನ ಚಂಡು
  2. ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ 
  3. ಹೀರೊ ಬಂದನೂ ಕಥೆಯಲ್ಲಿ 
  4. ಬರೆದೆ ನಿನ್ನ ಹೆಸರೇನು ಹೃದಯದ ಮೇಲೆ 
  5. ಅಪ್ಪಾರಳ್ಳಿ ತಿಪ್ಪಾರಳ್ಳಿ ಎಲ್ಲಾ ಸುತ್ತಿ ಬಂದೇ ಮಂಡ್ಯದ ಮಾವ 

ಮಂಡ್ಯದ ಗಂಡು (೧೯೯೪) - ಮಂಡ್ಯದ ಗಂಡು ಮುತ್ತಿನ ಚಂಡು
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಆರ್.ಏನ್.ಜಯಗೋಪಾಲ ಗಾಯನ: ಎಸ್ಪಿ.ಬಿ. ಸಂಗೀತಕಟ್ಟಿ, ಕೋರಸ್ 

ಕೋರಸ್ : ಮಂಡ್ಯದ ಗಂಡು (ಮುತ್ತಿನ ಚಂಡು)
                ನೀ ನಮ್ಮೂರ ಬಂಧು (ನಿನ್ನ ಮರೆಯೋಲ್ಲ ಎಂದು)
ಗಂಡು : ಹೇ..ಹೇ..ಹೇ.... ಹೇ.ಹೇ..ಹೇ....ಹೇ.ಹೇ..ಹೇ....
          ಕಾವೇರಿ ನೀರನು ಕುಡಿದು ಕಬ್ಬಿನ ಹಾಲಲಿ ಬೆಳೆದು
          ಕಾವೇರಿ ನೀರನು ಕುಡಿದು ಕಬ್ಬಿನ ಹಾಲಲಿ ಬೆಳೆದು
          ಕನ್ನಡ ನುಡಿಯನು ನುಡಿದು ಈ ಮಣ್ಣಲಿ ಮುತ್ತನು ತೆಗೆವ ಗಂಡು.....
          ಈ ಮಂಡ್ಯದ ಗಂಡು  ಮಂಡ್ಯದ ಗಂಡು ಮಂಡ್ಯದ ಗಂಡು
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..
ಗಂಡು : ಮುತ್ತಿನ ಚಂಡು 
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..
ಗಂಡು : ನಾನ್ ನಿಮ್ಮೂರ ಬಂಧು
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..
ಗಂಡು : ನಿಮ್ಮ ಮರೆಯೋಲ್ಲ ಎಂದು
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..

ಕೋರಸ್ : ನಮ್ಮೂರ ಹೈದಂಗೇ ಕುಡಿಮೀಸೆ ಚೆಲುವಾಂಗೇ
                ಮುತೈದೆಯರೆಲ್ಲಾ ಮುತ್ತಿನಾರತೀ ಎತ್ತಿರೇ ..
                ನಾಯೀ ಕಣ್ಣೂ .. ನರಿ ಕಣ್ಣೂ .. ರಂಡೇ ಕಣ್ಣೂ .. ಮುಂಡೇ ಕಣ್ಣೂ ..
                ಯಾರ ಕಣ್ಣೂ ಬೀಳದಂಗೇ ದೃಷ್ಟಿ ಅನ್ನೂ ಎತ್ತಿರೇ ..
                ನಮ್ಮೂರ ಹೈದಂಗೇ... ಉಲುಲೂಲುಲೂ..   ಉಲುಲೂಲುಲೂ..
ಗಂಡು :  ಹರಿಯುವ ಕಾವೇರಿಯು ಭೂಮಿಗೆ ತಾ ಪ್ರಾಣವು
             ಬೆಳೆದಿಹ ಈ ಪೈರಿದು ರೈತರ ಸೌಭಾಗ್ಯವು
            ಕಬ್ಬಿನಲ್ಲಿ ಸಕ್ಕರೆ ನಮ್ಮ ನಿಮ್ಮ ಅಕ್ಕರೆ
            ಬಂದರೇನು ತೊಂದರೆ ನಾವು ಜೊತೆ ನಿಂತರೆ ಸೇರಿ ಹೋರಾಡುವಾ
ಹೆಣ್ಣು : ಆ.....ಆ...ಆ.....ಆ..ಆ.....ಆ......
ಗಂಡು : ಕನ್ನಡ ನಾಡೆಂದರೆ ಸ್ನೇಹದ ತವರೂರಿದು
           ಮಾತೆಯ ಕಾಪಾಡುವ ವೀರರ ತಾಯ್ನಾಡಿದು
           ಪ್ರೀತಿ ಇಲ್ಲಿ ಭಾಷೆಯು  ನೀತಿ ಇಲ್ಲಿ ದೈವವು
           ರೀತಿ ನೀತಿ ಮೀರಲುು ಕೈಯ್ಯ ಕಟ್ಟಿ ನಿಲ್ಲೆವು.. ಸೇರಿ ಹೋರಾಡುವಾ.. ...
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..
ಗಂಡು : ಈ ಮಂಡ್ಯದ ಗಂಡು  
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..
ಗಂಡು : ಮುತ್ತಿನ ಚಂಡು               ಕೋರಸ್ : ತೂತ್ತುತೂರು .. ತೂತ್ತುತೂರು .. 
ಗಂಡು : ನಾನ್ ನಿಮ್ಮೂರ ಬಂಧು   ಕೋರಸ್ : ತೂತ್ತುತೂರು .. ತೂತ್ತುತೂರು .. 
ಗಂಡು : ನಿಮ್ಮ ಮರೆಯೋಲ್ಲ ಎಂದು

ಹೆಣ್ಣು : ಹೂಮಾಲೆಯು ನಿನಗಾಗಿಯೇ.... ಈ ಬಾಲೆಯು ನಿನಗಾಗಿಯೆ
          ಬೆಡಗಿನ ಶೃಂಗಾರವು ಮಾವನೆ ನಿನಗಾಗಿಯೇ
           ಆಸೆ ಬರೋ ವಯಸು ಪ್ರೀತಿ ಇರೊ ಮನಸು
           ಕಣ್ಣತುಂಬ ಕನಸು ನಿನ್ನ ಜೊತೆ ಸೊಗಸು ಬಳಿಗೆ ನೀ ಬಾರೆಯಾ....
ಗಂಡು : ಅಂದದ ಅಪರಂಜಿಯೇ ಗಡಿಬಿಡಿ ಗೌರಮ್ಮನೇ
            ನಿನ್ನ ಪ್ರೀತಿಯ ಈ ಆಟಕೆ ಅವಸರ ಈಗೇತಕೆ
            ಮಾವನನ್ನು ಕಂಡು ನೀ ಕುಣಿಬೇಡ ಧಿಮ್ಮನೆ
            ಊರಿನೊರ ಮೆಚ್ಚುಗೆ ಬೇಕು ನಮಗೆ ಬೆಚ್ಚಗೆ ಚೆಲುವೆ ಬಿಡು ದಾರಿಯಾ.....
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..
ಗಂಡು : ಕಾವೇರಿ ನೀರನು ಕುಡಿದು ಕಬ್ಬಿನ ಹಾಲಲಿ ಬೆಳೆದು
            ಕನ್ನಡ ನುಡಿಯನು ನುಡಿದು  ಈ ಮಣ್ಣಲಿ ಮುತ್ತನು ತೆಗೆವ ಗಂಡು
            ಈ ಮಂಡ್ಯದ ಗಂಡು
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..
ಗಂಡು : ಮುತ್ತಿನ ಚಂಡು
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..
ಗಂಡು : ನಾನ್ ನಿಮ್ಮೂರ ಬಂಧು
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..
ಗಂಡು : ನಿಮ್ಮ ಮರೆಯೋಲ್ಲ ಎಂದು
ಕೋರಸ್ : ತೂತ್ತುತೂರು .. ತೂತ್ತುತೂರು ..  ತೂತ್ತುತೂರು ..  ತೂತ್ತುತೂರು ..  ಹೊಯ್..
---------------------------------------------------------------------------------------------------

ಮಂಡ್ಯದ ಗಂಡು (೧೯೯೪) - ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಆರ.ಏನ.ಜಯಗೋಪಾಲ ಗಾಯನ: ಎಸ್ಪಿ.ಬಿ. ಸೂರ್ಯತೇಜ, ಉಷಾಗಣೇಶ 

ಹೆಣ್ಣು : ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ ಆಸೇ ಸಿಂಗಾರಿ
          ಮಧುಚಂದ್ರಕೆ ಹೂವ ಮಂಚಕೆ ನೀನು ಬಾ ಹೊಸ ಧಗೆ ಇಂದು ಸುರು ಮಾಡೋಣ
ಗಂಡು : ನಾ ಪ್ರೇಮ ಪೂಜಾರಿ ದೇವಿ ಮೈದೋರಿ ಪ್ರೀತಿ ನೀ ತೋರಿ ಬಂದೆ ನಾ
            ಮುತ್ತಿನಾಟಕೆ ಮತ್ತು ಏರೋಕೆ ಕರೆದೆಯಾ ಸರಿ ಪ್ರಿಯೆ ಪೂಜೆ ಶುರು ಮಾಡೋಣ

ಗಂಡು : ನೀ ರಾತ್ರಿ ಸೊಂಪು ನೀ ಸುಧೆಯ ತಂಪಲಿ ನೀ ಒಡಲ ಕಂಪನ
            ನೀ ನಗಲು ಕಾವೇರಿ ಬಾಯಾರಿ ನಾ ನಿಂತೇನೂ ..
ಹೆಣ್ಣು : ಈ ವಿರಹ ಸಾಕಾಗಿ ನೀನಿರಲೂ ತಂಪಾಗಿ ಆ ಸುಖವು ಬೇಕು
          ನೀ ಕೊಡುವ ಪತ್ರಕ್ಕೆ ಕಂಪನ್ನು ತಂದೆನು
ಗಂಡು : ನೀನು ನನ್ನಲ್ಲಿ ನಾನು ನಿನ್ನಲ್ಲಿ ಹೀಗೆಯೇ ನಾವು ಪ್ರೀತಿ ಸುಖ ಕಾಣೋಣ
ಹೆಣ್ಣು : ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ ಆಸೇ ಸಿಂಗಾರಿ
          ಮಧುಚಂದ್ರಕೆ ಹೂವ ಮಂಚಕೆ ನೀನು ಬಾ ಹೊಸ ಧಗೆ ಇಂದು ಸುರು ಮಾಡೋಣ

ಹೆಣ್ಣು : ಈ ಹೃದಯ ತಾಳಕ್ಕೆ ಈ ಒಲವ ರಾಗಕ್ಕೆ ನೀ ಕರೆದ ನನ್ನಾಗ 
          ಪ್ರೇಮಿ ಹರೆಯ ಹೆಂಗಿತ್ತು ತೇಲಾಡು ಬಾ 
ಗಂಡು : ಈ ನನ್ನ ತೋಳಲ್ಲಿ ಹೂವು ಒಡಲು ನಿಂತಾಕೆ ಆ ಮಧು ಸ್ಪರ್ಶಕ್ಕೆ 
           ಮೈ ಈ ಮರೆತು ಗುಂಗಲ್ಲಿ ಎಲ್ಲೆಲ್ಲೋ ಹಾರಾಟ 
ಹೆಣ್ಣು : ಬಾಳು ಚೂರಾಯಿತು ಆಸೆ ನೂರಾಯಿತು ಶೃತಿಲಯ ಶ್ರುತಿ ಸೇರಿ ಹಾಡಾಯಿತು 
           ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ ಆಸೇ ಸಿಂಗಾರಿ
           ಮಧುಚಂದ್ರಕೆ ಹೂವ ಮಂಚಕೆ ನೀನು ಬಾ ಹೊಸ ಧಗೆ ಇಂದು ಸುರು ಮಾಡೋಣ
ಗಂಡು : ನಾ ಪ್ರೇಮ ಪೂಜಾರಿ ದೇವಿ ಮೈದೋರಿ ಪ್ರೀತಿ ನೀ ತೋರಿ ಬಂದೆ ನಾ
            ಮುತ್ತಿನಾಟಕೆ ಮತ್ತು ಏರೋಕೆ ಕರೆದೆಯಾ ಸರಿ ಪ್ರಿಯೆ ಪೂಜೆ ಶುರು ಮಾಡೋಣ
--------------------------------------------------------------------------------------------------

ಮಂಡ್ಯದ ಗಂಡು (೧೯೯೪) - ಹೀರೊ ಬಂದನೂ ಕಥೆಯಲ್ಲಿ
ಸಂಗೀತ: ಉಪೇಂದ್ರಕುಮಾರ, ಸಾಹಿತ್ಯ: ಆರ.ಏನ.ಜಯಗೋಪಾಲ ಗಾಯನ: ಎಸ್ಪಿ.ಬಿ. ಮಂಜುಳಾಗುರುರಾಜ

ಗಂಡು : ರೆಡಿ.. ಒನ್.. ಟೂ.. ಥ್ರೀ.. ಸ್ಟಾರ್ಟ್...
            ಹೀರೋ ಬಂದನು ಕಥೆಯಲ್ಲಿ ಚೆಲುವೆ ಬಂದಳು ಜೊತೆಯಲ್ಲಿ
ಹೆಣ್ಣು : ಹರೆಯ ಎನ್ನುವ ರಥದಲ್ಲಿ ರತಿಯು ನಿಂತಳು ನಗುತಲಿ
ಗಂಡು : ತಿಳಿ ನೀ ಇದು ಕನಸಲ್ಲ ನಿನಗೇ ನನ್ನ ಮನಸೆಲ್ಲಾ
            ತಿಳಿ ನೀ ಇದು ಕನಸಲ್ಲ ನಿನಗೇ ನನ್ನ ಮನಸೆಲ್ಲಾ   ಹೊಸ ಲೋಕಕ್ಕೆ ಹೋಗೋಣ ಬಾ..
            ಹೀರೋ ಬಂದನು ಕಥೆಯಲ್ಲಿ ಚೆಲುವೆ ಬಂದಳು ಜೊತೆಯಲ್ಲಿ

ಗಂಡು  : ಕೃಷ್ಣ ಕೊಳಲನೂದಿದಾಗ ರಾಧೇ ಸೋತು ಓಡಿದಾಗ ಪ್ರಣಯಾರಂಭವೂ
             ಅವನ ಅಂದ ನೋಡಿದಾಗ ಮೋಡಿಯಲ್ಲಿ ಸಿಕ್ಕಿದಾಗ ಹೃದಯ ಒಂದಾದವೂ
ಹೆಣ್ಣು :  ನಕ್ಕು ನೋಡಿದಾಗ ಕಣ್ಣು ಸನ್ನೆ ಮಾಡಿದಾಗ ಒಡಲಿನಲ್ಲೇ ಮಿಂಚು ಆಸೆ ಗರಿ ಬಿಚ್ಚಿದಾಗ
            ಬಾನಿನಲ್ಲಿ ಹಾರಿದಾಗ ಹಾರ್ಟ್ ಡವ ಡವವಾಯಿತು
ಗಂಡು : ಈ ಮನ್ಮಥನ ಬಾಣ ಹೂ ಬಾಣ ಬಿಟ್ಟಾಗ ನಿನ್ನಲ್ಲಿ ಆರಂಭ ಪ್ರೇಮದ ಕವನಾ
            ಹೀರೋ ಬಂದನು ಕಥೆಯಲ್ಲಿ ಚೆಲುವೆ ಬಂದಳು ಜೊತೆಯಲ್ಲಿ
ಹೆಣ್ಣು : ಹರೆಯ ಎನ್ನುವ ರಥದಲ್ಲಿ ರತಿಯು ನಿಂತಳು ನಗುತಲಿ

ಹೆಣ್ಣು : ಮಿಸ್ ಇಂಡಿಯಾ ಕ್ಯೂನ್ ನಾನು ಸೂಪರ್ ಸ್ಟಾರ್ ಕಿಂಗ್ ನೀನು ನಿನಗೆ ನಾ ಸೋತೇನೂ 
          ಬ್ರೇಕ್ ಶೇಕ್ ಮಾಡುತ್ತೀನಿ ರಾಕೇಂಡ್ ರೋಲ್ ಆಡುತ್ತೀನಿ ನಿನಗೆ ಸರಿ ಜೋಡಿ ನಾನು 
ಗಂಡು : ನನ್ನ ಕನಸಿನ ರಾಣಿ ನೀನು ಅಂದ ಚೆಂದ ಕಂಡು ನಾನು ಇಂದು ಕವಿಯಾದೆನು 
            ನಿನ್ನ ಲಕ್ಕು ಪಡೆಯೋಕ್ಕಿಂತ ಹುಟ್ಟಿ ಬಂದ ಗಂಡು ನೀನು ನಿನ್ನ ವಶವಾದೇನು 
ಹೆಣ್ಣು : ಈ ಸಮಯ ಬಲು ಚೆನ್ನ ಓ ಚಿನ್ನಾ ನನ್ನಲ್ಲಿ ಉಂಟಾಗೋ ಈ ಪ್ರೇಮ ಶುಭದ ಮಿಲನ 
ಗಂಡು : ಹೀರೋ ಬಂದನು ಕಥೆಯಲ್ಲಿ ಚೆಲುವೆ ಬಂದಳು ಜೊತೆಯಲ್ಲಿ
ಹೆಣ್ಣು : ಹರೆಯ ಎನ್ನುವ ರಥದಲ್ಲಿ ರತಿಯು ನಿಂತಳು ನಗುತಲಿ
ಗಂಡು : ತಿಳಿ ನೀ ಇದು ಕನಸಲ್ಲ ನಿನಗೇ ನನ್ನ ಮನಸೆಲ್ಲಾ
            ತಿಳಿ ನೀ ಇದು ಕನಸಲ್ಲ ನಿನಗೇ ನನ್ನ ಮನಸೆಲ್ಲಾ   ಹೊಸ ಲೋಕಕ್ಕೆ ಹೋಗೋಣ ಬಾ..
            ಹೀರೋ ಬಂದನು ಕಥೆಯಲ್ಲಿ ಚೆಲುವೆ ಬಂದಳು ಜೊತೆಯಲ್ಲಿ
---------------------------------------------------------------------------------------------------

ಮಂಡ್ಯದ ಗಂಡು (೧೯೯೪) - ಬರೆದೆ ನಿನ್ನ ಹೆಸರೇನು ಹೃದಯದ ಮೇಲೆ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್ಪಿ.ಬಿ. ಮಂಜುಳಾಗುರುರಾಜ 

ಹೆಣ್ಣು : ಬರೆದೆ ನಿನ್ನ ಹೆಸರನು ಹೃದಯದ ಮೇಲೆ ನನ್ನ ಮೈಯ್ಯ ತುಂಬಾ ಏಕೋ ವಿರಹದ ಜ್ವಾಲೇ
          ಹೂವಂಥ ಮೈಯ್ಯನಿತ್ತು ಈ ಹೊತ್ತು ಕೈಕೊಟ್ಟು ಈ ಬೇವರ ಹನಿ ಮುತ್ತು ನೀ ಒತ್ತು ಮುತ್ತಿಟ್ಟು
          ಈ ತೋಳಿನಲಿ ಆಡು ಉಯ್ಯಾಲೇ .. ಓಯ್.. ಓಯ್.. ಓಯ್..
ಗಂಡು : ಬರೆದೆ ನಿನ್ನ ಹೆಸರನು ಹೃದಯದ ಮೇಲೆ ನನ್ನ ಮೈಯ್ಯ ತುಂಬಾ ಏಕೋ ವಿರಹದ ಜ್ವಾಲೇ
          ಹೂವಂಥ ಮೈಯ್ಯನಿಟ್ಟು ಈ ಹೊತ್ತು ಕೈಕೊಟ್ಟು ಈ ಬೇವರ ಹನಿ ಮುತ್ತು ನೀ ಒತ್ತು ಮುತ್ತಿಟ್ಟು
          ಈ ತೋಳಿನಲಿ ಆಡು ಉಯ್ಯಾಲೇ .. ಓಯ್.. ಓಯ್.. ಓಯ್..
ಹೆಣ್ಣು : ಬರೆದೆ ನಿನ್ನ ಹೆಸರನು ಹೃದಯದ ಮೇಲೆ

ಹೆಣ್ಣು : ಬೆಡ್ದು ರೂಮಿನಲ್ಲಿ ನೀ ಬಿಳಿಯ ಕಾಡತ ನಿಂತರೇ ಪೈಪು ಲೈಫು ಎಲ್ಲಾ ಟ್ರ್ಯಾಜಿಡಿ
ಗಂಡು : ಪ್ರೀತಿ ಎನ್ನೋ ಆಟವ ಆಡೋದಕ್ಕೆ ನಾಳೆ ನೀ ನೋಡಿ ನನ್ನ ಕಾಮಿಡಿ
ಹೆಣ್ಣು : ತಂಪು ಗಾಳಿ ಬೀಸಿದೆ ರಾತ್ರಿ ಜಾರಿ ಹೋಗಿದೆ
ಗಂಡು : ಒಂದು ರಾತ್ರಿ ಸಾಲದು ನನ್ನ ಪ್ರೀತಿ ಆಟಕೆ
ಹೆಣ್ಣು : ರಂಗಿನ ಈ ಆಟ ಮೈಯ್ಯಲ್ಲಿ ಏನೋ ಜೂಮ್..   ಜೂಮ್..   ಜೂಮ್..
ಗಂಡು : ಬರೆದೆ ನಿನ್ನ ಹೆಸರನು ಹೃದಯದ ಮೇಲೆ

ಗಂಡು : ನನ್ನ ಬೆರಳು ಮೀಟಿದೆ ನಿನ್ನ ಸಣ್ಣ ಸೊಂಟಕೆ ಪ್ರೀತಿ ಗಾನತಾನ ಪಲ್ಲವಿ 
ಹೆಣ್ಣು : ಉಕ್ಕಿನಂತ ಕೈಯಲಿ ಸಿಕ್ಕಿತೆನ್ನ ಸೊಂಟವು ಬಿಕ್ಕಿ ಮುಕ್ಕಿ ಸೊಕ್ಕಿ ಹೋಗಿದೆ 
ಗಂಡು : ಕಾಳಿದಾಸ ಬಂದರೆ ನಮ್ಮ ಪ್ರೇಮ ಕಂಡರೇ 
ಹೆಣ್ಣು : ಬೇರೆ ಕಾವ್ಯ ಬರೆಯುವ ನಮ್ಮ ನೋಡಿ ಈ ದಿನ 
ಗಂಡು : ಕಾವ್ಯವು ಕವಿತೆಯೋ ಪ್ರೇಮವೇ ಕೇಳು ಜೂಮ್..   ಜೂಮ್..   ಜೂಮ್..   
ಹೆಣ್ಣು : ಬರೆದೆ ನಿನ್ನ ಹೆಸರನು ಹೃದಯದ ಮೇಲೆ ನನ್ನ ಮೈಯ್ಯ ತುಂಬಾ ಏಕೋ ವಿರಹದ ಜ್ವಾಲೇ
          ಹೂವಂಥ ಮೈಯ್ಯನಿತ್ತು ಈ ಹೊತ್ತು ಕೈಕೊಟ್ಟು ಈ ಬೇವರ ಹನಿ ಮುತ್ತು ನೀ ಒತ್ತು ಮುತ್ತಿಟ್ಟು
          ಈ ತೋಳಿನಲಿ ಆಡು ಉಯ್ಯಾಲೇ .. ಓಯ್.. ಓಯ್.. ಓಯ್..
ಗಂಡು : ಬರೆದೆ ನಿನ್ನ ಹೆಸರನು ಹೃದಯದ ಮೇಲೆ ನನ್ನ ಮೈಯ್ಯ ತುಂಬಾ ಏಕೋ ವಿರಹದ ಜ್ವಾಲೇ
          ಹೂವಂಥ ಮೈಯ್ಯನಿಟ್ಟು ಈ ಹೊತ್ತು ಕೈಕೊಟ್ಟು ಈ ಬೇವರ ಹನಿ ಮುತ್ತು ನೀ ಒತ್ತು ಮುತ್ತಿಟ್ಟು
          ಈ ತೋಳಿನಲಿ ಆಡು ಉಯ್ಯಾಲೇ .. ಓಯ್.. ಓಯ್.. ಓಯ್..
ಹೆಣ್ಣು : ಬರೆದೆ ನಿನ್ನ ಹೆಸರನು ಹೃದಯದ ಮೇಲೆ
---------------------------------------------------------------------------------------------------

ಮಂಡ್ಯದ ಗಂಡು (೧೯೯೪) - ಅಪ್ಪಾರಳ್ಳಿ ತಿಪ್ಪಾರಳ್ಳಿ ಎಲ್ಲಾ ಸುತ್ತಿ ಬಂದೇ ಮಂಡ್ಯದ ಮಾವ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ ಗಾಯನ : ಎಸ್ಪಿ.ಬಿ. ಸಂಗೀತಕಟ್ಟಿ,

ಹೆಣ್ಣು : ಅಪ್ಪಾರಳ್ಳಿ ತಿಪ್ಪಾರಳ್ಳಿ ಎಲ್ಲಾ ಸುತ್ತಿ ಬಂದೆ ಮಂಡ್ಯದ ಮಾವ
          ತಾಳಿ ಕಟ್ಟಿ ಬೋರೋ ಅಂತ ನಿನ್ನ ಕೇಳೋ ಬಂದೆ ಮುದ್ದಿನ ಮಾವ
          ಓಓಓ .. ಓಹೋಹೊಹೋ.. ಲಲಲಲಲ್ಲಲಲಾಲಾ  ಲಲಲಲಲ್ಲಲಲಾ
ಗಂಡು : ಏರಿಯ ಮೇಲೆ ನಿಂಗೆ ಕಾದು ಕಾದು ಸೋತೆ ನಾನು
            ನಿಂಗಾಗೇ ತಂದ ಮಲ್ಲೆ ಬಾಡಿ ಹೋಯಿತು ನೋಡು ನೀನು
            ಬಾಯಾರಿ ನಿಂತ ನನ್ನ ದಾಹ  ತೀರು ಬಾರೇ ಮಾವನ ಮಗಳೇ
            ಅಪ್ಪಾರಳ್ಳಿ ತಿಪ್ಪಾರಳ್ಳಿ ಯಾಕೆ ಸುತ್ತಿ ಬಂದೇ ಅತ್ತೆಯ ಮಗಳೇ
ಹೆಣ್ಣು : ತಾಳಿ ಕಟ್ಟಿ ಬೋರೋ ಅಂತ ನಿನ್ನ ಕೇಳೋ ಬಂದೆ ಮುದ್ದಿನ ಮಾವ
          ಓಓಓ .. ಓಹೋಹೊಹೋ.. ಲಲಲಲಲ್ಲಲಲಾಲಾ  ಲಲಲಲಲ್ಲಲಲಾ 

ಹೆಣ್ಣು : ಓ ತೊಟ್ಟ ಮೂಗುತಿ ಓ ಮುತ್ತು ಕೊಟ್ಟಾಗಲೇ ಯಾಕೇ ಬಂದು ತಡಮಾಡದೇ ಅಪ್ಪಿಕೊಂಡಾಗ
          ನೀ ನನ್ನ ಒಡ್ಯಾಣವೂ ಚುಚ್ಚಿ ನಿಗಿಂದು ನೋವಾಯಿತೇ
ಗಂಡು : ಚುಚ್ಚಿದ ನೋವು ಕಚ್ಚಿದ ಮಾವು ಹೆಚ್ಚಿನ ರುಚಿಯು
            ಮೆಚ್ಚಿದ ಹೆಣ್ಣೇ ಹೀಗೇನೆ ಅಪ್ಪಿಕೊಂಡು ಕಾಲವೆಲ್ಲ ಬಾಳಬೇಕು
ಹೆಣ್ಣು : ಆಗಾಗ ಹೊಟ್ಟೆಗೆ ಸ್ವಲ್ಪ ಊಟ ತಿಂಡಿ ಮಾಡಬೇಕು
ಗಂಡು : ಆಗಲಿ ಒಪ್ಪಿಕೊಂಡು ಅಪ್ಪಿಕೊಳ್ಳು ಬಾರೇ ಮಾವನ ಮಗಳೇ
ಹೆಣ್ಣು : ಅಪ್ಪಾರಳ್ಳಿ ತಿಪ್ಪಾರಳ್ಳಿ ಎಲ್ಲಾ ಸುತ್ತಿ ಬಂದೆ ಮಂಡ್ಯದ ಮಾವ
ಗಂಡು : ಅಪ್ಪಾರಳ್ಳಿ ತಿಪ್ಪಾರಳ್ಳಿ ಯಾಕೆ ಸುತ್ತಿ ಬಂದೇ ಅತ್ತೆಯ ಮಗಳೇ
ಹೆಣ್ಣು : ತಾಳಿ ಕಟ್ಟಿ ಬೋರೋ ಅಂತ ನಿನ್ನ ಕೇಳೋ ಬಂದೆ ಮುದ್ದಿನ ಮಾವ
          ಓಓಓ .. ಓಹೋಹೊಹೋ.. ಲಲಲಲಲ್ಲಲಲಾಲಾ  ಲಲಲಲಲ್ಲಲಲಾ 

ಹೆಣ್ಣು : ನಿನ್ನೆ ಬಳೆಗಾರನು ಕೈಯ್ಯಿಗೇ ಬಳೆ ಹಾಕಲು ನಿನ್ನ ನೆನಪಾಗಿ ನಾ ಬಂದೆ
ಗಂಡು : ಒಹೋ.. ಓ ನಿನ್ನ ತೌರೂರಿಗೇ ಮುದ್ದು ಮುಖ ನೋಡಲು ನಿನ್ನ ಬಳೆಗಾರ ನಾನಾದೇನೂ
ಹೆಣ್ಣು : ಕೈ ಹಿಡಿದಾಗ ಮೈಯ್ಯಲ್ಲಿ ನಿಮಿರು ಹೇಳಿತು ಎದೆಯು ನಿನ್ನಯ ಹೆಸರು
ಗಂಡು : ನಾ ಕೊಟ್ಟ ಬಳೆಗಳು ಪ್ರೀತಿ ರಾಗ ಹಾಡಿದವು ಘಲ್ ಘಲ್ ನಾದದಲ್ಲಿ ನನ್ನ ಮಾತು ಕೇಳಿದನು
ಹೆಣ್ಣು : ನಾ ನಿನ್ನ ಬಳೆಯನು ಮುಟ್ಟಿಸುವೇ ಎಂದು ಮಂಡ್ಯದ ಮಾವ
ಗಂಡು : ಅಪ್ಪಾರಳ್ಳಿ ತಿಪ್ಪಾರಳ್ಳಿ ಯಾಕೆ ಸುತ್ತಿ ಬಂದೇ ಅತ್ತೆಯ ಮಗಳೇ
ಹೆಣ್ಣು : ತಾಳಿ ಕಟ್ಟಿ ಬೋರೋ ಅಂತ ನಿನ್ನ ಕೇಳೋ ಬಂದೆ ಮುದ್ದಿನ ಮಾವ
          ಓಓಓ .. ಓಹೋಹೊಹೋ.. ಲಲಲಲಲ್ಲಲಲಾಲಾ  ಲಲಲಲಲ್ಲಲಲಾ 

ಹೆಣ್ಣು : ಕಬ್ಬು ರಸ ತುಂಬಿದೆ ಉಬ್ಬಿ ನಲುಗಾಡಿದೆ ಕಚ್ಚಿ ಕುಡಿ ನೀನು ರಸ ಎಂದಿದೆ ಆಹಾ
ಗಂಡು : ಕೊಂಚ ಬಿಸಿ ತಾಕಲು ಜೋರು ಅಂತಾಯಿತು ರಸ ಹೆಚ್ಚಾಗಿ ಮೆಚ್ಚಾಯಿತು
ಹೆಣ್ಣು : ಮಂಡ್ಯದ ಅಂಟು ಬಲು ಸಿಹಿ ಉಂಟು ಅಂಟಿನ ನಂಟು ಬಿಡಿಸಿದ ಗಂಟು
ಗಂಡು : ನಿಂಗಾಗೇ ಹುಟ್ಟಿ ಬಂದೆ ಗಂಡು ನಾನು ಮಾವನ ಮಗಳೇ
            ನಿನ್ನಲೇ ಸೇರಿ ಹೋಯಿತು ನನ್ನ ಜೀವ ಮಲ್ಲಿಗೆ ಹರಳೇ
ಹೆಣ್ಣು : ನಿನ್ನಾಣೆ ತಾಳೆ ನಾನು ಅಗಲಿಕೆ ನೋವಾ ಮಂಡ್ಯದ ಮಾವ
ಗಂಡು : ಅಪ್ಪಾರಳ್ಳಿ ತಿಪ್ಪಾರಳ್ಳಿ ಯಾಕೆ ಸುತ್ತಿ ಬಂದೇ ಅತ್ತೆಯ ಮಗಳೇ
ಹೆಣ್ಣು : ತಾಳಿ ಕಟ್ಟಿ ಬೋರೋ ಅಂತ ನಿನ್ನ ಕೇಳೋ ಬಂದೆ ಮುದ್ದಿನ ಮಾವ
          ಓಓಓ .. ಓಹೋಹೊಹೋ.. ಲಲಲಲಲ್ಲಲಲಾಲಾ  ಲಲಲಲಲ್ಲಲಲಾ 
---------------------------------------------------------------------------------------------------

No comments:

Post a Comment