ಕಾಡು ಕುದುರೆ ಚಿತ್ರದ ಹಾಡುಗಳು
ಗಾಯಕರು : ಎಸ್.ಪಿ.ಬಿ., ಶಿವಮೊಗ್ಗ ಸುಬ್ಬಣ್ಣ, ಪಿ.ಸುಶೀಲಾ, ಜಯಶ್ರೀ, ಕಲ್ಪನ ಶಿರೂರ,
ಶ್ರೀಮತಿ.ಗುರುಬಸಮ್ಮ ಬುರುಬುರಿ, ಮಲ್ಲಮ್ಮ ಹಾಗರಗಿ, ಶ್ರೀಮತಿ ಶಿರೂರ
ಕಾಡು ಕುದುರೆ (೧೯೭೯)
ಗಾಯಕರು : ಎಸ್.ಪಿ.ಬಿ., ಶಿವಮೊಗ್ಗ ಸುಬ್ಬಣ್ಣ, ಪಿ.ಸುಶೀಲಾ, ಜಯಶ್ರೀ, ಕಲ್ಪನ ಶಿರೂರ,
ಶ್ರೀಮತಿ.ಗುರುಬಸಮ್ಮ ಬುರುಬುರಿ, ಮಲ್ಲಮ್ಮ ಹಾಗರಗಿ, ಶ್ರೀಮತಿ ಶಿರೂರ
- ಕಾಡು ಕಾಡು ಎಂದರೇ ಕಾಡೇನ ಬಣ್ಣಿಸಲೇ
- ಇವ್ ಯಾವ್ ಊರಿನ ಮಾವ್
- ಕಾಡು ಕುದುರೆ ಓಡಿ ಬಂದಿತ್ತ
ಕಾಡು ಕುದುರೆ (೧೯೭೯)
ಸಂಗೀತ : ಚಂದ್ರಶೇಖರ ಕಂಬಾರ, ಸಾಹಿತ್ಯ : ಬೆಂಗ್ಳೂರಿ ಗಾಯನ : ಎಸ್.ಪಿ.ಬಿ
ಕಾಡು ಕಾಡೆಂದರೇ....
ಕಾಡು ಕಾಡೆಂದರೇ ಕಾಡೇನ ಬಣ್ಣಿಸಲೇ
ಕಾಡಿನ ಒಳಗೆನೇ ತಿಳಿಲಾರೇ ಶಿವನೇ
ಹೊರಗಿನ ಪರಿ ನಂಬಲಾರೆ ಶಿವನೇ
ಹೊರಗಿನ ಪರಿ ನಂಬಲಾರೆ
ನೋಡೋ ಕಂಗಳ ಸೀಳಿ ಬಿಳೋ ಬಣ್ಣಗಳಂಟು
ಹರಿಯುವ ಭಾವನ್ನ ಕೊರೆಯುವ ಹಸಿರುಂಟು
ಹೂವುಂಟು ಮುಳ್ಳಿನ ಮ್ಯಾಲೇ ಶಿವನೇ
ಹೂವುಂಟು ಮುಳ್ಳಿನ ಮ್ಯಾಲೇ
ಓಡುವ ಮರಕಂಟಿ ಹಾಡುವ ನೋವುಂಟು
ಮಾತಾಡೋ ಗವಿಗಳು ಹಲವಾರು ಶಿವನೇ
ನಡೆಯುವ ಬ್ಯಾಟ್ಟಗಳು ನೂರಾರಯ್ಯಾ
ನಡೆಯುವ ಬ್ಯಾಟ್ಟಗಳು ನೂರಾರು
ಗುಟ್ಟು ಹೇಳೆನಂತ ಗುಟ್ಟಾಗಿ ಕರೆಯುವುದು
ತೋರುವ ದಾರಿಯ ಕಣ್ಣೆದುರೇ ಮುಚ್ಚುವರು
ಏನಂತ ಹೇಳಲಯ್ಯಾ ಕಾಡಿನ ಪರಿಯ
ಏನಂತ ಹೇಳಲಯ್ಯಾ
ಬಲ್ಲ ಬಲ್ಲವರನ್ನ ಹುಲ್ಲಿಗೂ ಸಮ ಮಾಡಿ
ಕಲ್ಲಿಗೂ ಕಡೆಮಾಡಿ ನಗತಾದಯ್ಯಾ
ಕಾಡೇನ ಬಣ್ಣಿಸಲ್ಲಯ್ಯ ಶಿವನೇ
ಕಾಡು ಕಾಡೆಂದರೇ....
ಕಾಡು ಕಾಡೆಂದರೇ ಕಾಡೇನ ಬಣ್ಣಿಸಲೇ
ಕಾಡಿನ ಒಳಗೆನೇ ತಿಳಿಲಾರೇ ಶಿವನೇ
ಹೊರಗಿನ ಪರಿ ನಂಬಲಾರೆ ಶಿವನೇ
ಹೊರಗಿನ ಪರಿ ನಂಬಲಾರೆ
--------------------------------------------------------------------------------------------------------------------------
ಸಂಗೀತ ಮತ್ತು ಸಾಹಿತ್ಯ : ಚಂದ್ರಶೇಖರ ಕಂಬಾರ, ಗಾಯನ : ಪಿ.ಸುಶೀಲಾ
ಇವ್ ಯಾವ್ ಊರಿನ ಮಾವ್ ಈ ಚೆಲುವಾ
ಇವ್ ಯಾವ್ ಊರಿನ ಮಾವ್ ಈ ಚೆಲುವಾ
ನೋಡೇ ಯವ್ವಾ.. ಹುಡುಗನ
ಹುಬ್ಬಿನ ಕುಡಿ ಹಾರಿಸುವಾ ತನ್ನತಾನ್ ನಿತ್ಯಾಗ ನಗುವಾ
ಇವ್ ಯಾವ್ ಊರಿನ ಮಾವ್ ಈ ಚೆಲುವಾ
ನೋಡೇ ಯವ್ವಾ.. ಹುಡುಗನ
ನೋಡೇ ಯವ್ವಾ.. ಹುಡುಗನಹುಬ್ಬಿನ ಕುಡಿ ಹಾರಿಸುವಾ ತನ್ನತಾನ್ ನಿತ್ಯಾಗ ನಗುವಾ
ಕಣ್ಣಿನ ಚೂರಿಯಲಿರಿವಾ ಮರೆಮಾಡಿದರಳಲಿ ಕರೆವಾ
ಏನ್ ಗಂಭೀರ ಎಂಥ ಸುಂದರ
ಏನ್ ಗಂಭೀರ ಎಂಥ ಸುಂದರ
ಏನ್ ಗಂಭೀರ ಎಂಥ ಸುಂದರ
ಏನ್ ಗಂಭೀರ ಎಂಥ ಸುಂದರ
ಇವ್ ಯಾವ್ ಊರಿನ ಮಾವ್ ಈ ಚೆಲುವಾ
ನೋಡೇ ಯವ್ವಾ.. ಹುಡುಗನ
ನೋಡೇ ಯವ್ವಾ.. ಹುಡುಗನ
ಹಧ್ಯಾನ ಹಾರುವ ಕುದರೀ ಹಾರ್ರ್ಯಾನ ಹಿತ್ತಲ ಬೇಲಿ
ಇವನ್ ಮ್ಯಾಲೇ ಕುಂತಾವ್ ಪಿರತಿ
ಹಗಲು ರಾತ್ರಿ ನನಗ್ ಇವನ ಭ್ರಾಂತಿ
ಇವನ ಬಿಗರೇನಾ ಕುದುರಿ ಚದುರೇನಾ
ಇವನ ಬಿಗರೇನಾ ಕುದುರಿ ಚದುರೇನಾ
ಇವ್ ಯಾವ್ ಊರಿನ ಮಾವ್ ಈ ಚೆಲುವಾ
ನೋಡೇ ಯವ್ವಾ.. ಹುಡುಗನ
ಇವ್ ಯಾವ್ ಊರಿನ ಮಾವ್ ಈ ಚೆಲುವಾ
ನೋಡೇ ಯವ್ವಾ.. ಹುಡುಗನ
ನೋಡೇ ಯವ್ವಾ.. ಹುಡುಗನ
ನೋಡೇ ಯವ್ವಾ.. ಹುಡುಗನ
--------------------------------------------------------------------------------------------------------------------------
ಕಾಡು ಕುದುರೆ (೧೯೭೯)
ಸಂಗೀತ ಮತ್ತು ಸಾಹಿತ್ಯ : ಚಂದ್ರಶೇಖರ ಕಂಬಾರ, ಗಾಯನ : ಶಿವಮೊಗ್ಗ ಸುಬ್ಬಣ್ಣ ಕಲ್ಪನಾ ಶಿರೂರ
(ಕೋರಸ್ : ಜಯಶ್ರೀ, ಶ್ರೀಮತಿ.ಗುರುಬಸಮ್ಮ ಬುರುಬುರಿ, ಮಲ್ಲಮ್ಮ ಹಾಗರಗಿ, ಶ್ರೀಮತಿ ಶಿರೂರ )
ಗಂಡು : ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....
ಕೋರಸ್: ಕಾಡು ಕುದುರೆ ಓಡಿ ಬಂದಿತ್ತಾ... ಆಆಆಅ....
ಗಂಡು : ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....
ಕೋರಸ್: ಕಾಡು ಕುದುರೆ ಓಡಿ ಬಂದಿತ್ತಾ... ಆಆಆಅ....
ಆಹ್ಹಾ.. ಭಲೇ... ಭಲೇ.ಭಲೇ.ಭಲೇ.
ಗಂಡು : ಊರಿನಾಚೆ ದೂರದಾರಿ ಸುರುವಾಗೊ ಜಾಗದಲ್ಲಿ
ಕೋರಸ್: ಊರಿನಾಚೆ ದೂರದಾರಿ ಸುರುವಾಗೊ ಜಾಗದಲ್ಲಿ
ಗಂಡು : ಮೂಡಬೆಟ್ಟ ಸೂರ್ಯ ಹುಟ್ಟಿ ಹೆಸರಿನ ಗುಟ್ಟ ವಾಡೆವಲ್ಲಿ
ಕೋರಸ್: ಮೂಡಬೆಟ್ಟ ಸೂರ್ಯ ಹುಟ್ಟಿ ಹೆಸರಿನ ಗುಟ್ಟ ವಾಡೆವಲ್ಲಿ
ಗಂಡು : ಮುಗಿವೇ ಇಲ್ಲದ ಮುಗಿಲಿನಿಂದ ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಛಂಗನೆ ನೆಗೆದಿತ್ತ.......
ಕೋರಸ್: ಕಾಡು ಕುದುರೆ ಓಡಿ ಬಂದಿತ್ತಾ… ....
ಹೇಹೇ... ಹಿಡಿ ಮತ್ತೇ... ಹೇಹೇ...
ಗಂಡು : ಮೈಯಾ ಬೆಂಕಿ ಮಿರುಗತಿತ್ತ ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಕೋರಸ್: ಮೈಯಾ ಬೆಂಕಿ ಮಿರುಗತಿತ್ತ ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಗಂಡು : ಹೊತ್ತಿ ಉರಿಯೊ ಕೇಶರಾಶಿ ಕತ್ತಿನಾಗ ಕುಣೀತಿತ್ತ
ಕೋರಸ್: ಹೊತ್ತಿ ಉರಿಯೊ ಕೇಶರಾಶಿ ಕತ್ತಿನಾಗ ಕುಣೀತಿತ್ತ
ಗಂಡು : ಧೂಮಕೇತು
ಕೋರಸ್: ಹಿಂಬಾಲಿತ್ತ
ಗಂಡು : ಹೌಹಾರಿತ್ತ
ಕೋರಸ್: ಹರಿದಾಡಿತ್ತ
ಗಂಡು : ಹೈಹೈ ಅಂತ ಹಾರಿಬಂದಿತ್ತ
ಕೋರಸ್: ಕಾಡು ಕುದುರೆ ಓಡಿ ಬಂದಿತ್ತಾ…
ಗಂಡು : ಹೇಹೇ... ಹ್ಹಹಾ .. ಭಲೇ ಭಲೇ ಭಲೇ ಭಲೇ
ಕಣ್ಣಿನಾಗ ಸಣ್ಣ ಖಡ್ಗ ಆಸುಪಾಸು ಝಳಪಿಸಿತ್ತ
ಕೋರಸ್: ಕಣ್ಣಿನಾಗ ಸಣ್ಣ ಖಡ್ಗ ಆಸುಪಾಸು ಝಳಪಿಸಿತ್ತ
ಗಂಡು : ಬೆನ್ನ ಹುರಿ ಬಿಗಿದಿತ್ತಣ್ಣ ಸೊಂಟದ ಬುಗುರಿ ತಿರಗತಿತ್ತು
ಕೋರಸ್: ಬೆನ್ನ ಹುರಿ ಬಿಗಿದಿತ್ತಣ್ಣ ಸೊಂಟದ ಬುಗುರಿ ತಿರಗತಿತ್ತು
ಗಂಡು : ಬಿಗಿದ ಕಾಂಡ
ಕೋರಸ್: ಬಿಲ್ಲಿನಿಂದ
ಗಂಡು : ಬಿಟ್ಟ ಬಾಣ
ಕೋರಸ್: ಧಾಂಗ ಚಿಮ್ಮಿ
ಗಂಡು : ಹದ್ದ ಮೀರಿ ಹಾರಿ ಬಂದಿತ್ತ
ಕೋರಸ್: ಕಾಡು ಕುದುರೆ ಓಡಿ ಬಂದಿತ್ತಾ…
ಹೆಣ್ಣು : ನೆಲ ಒದ್ದು ಗುದ್ದ ತೋಡಿ ಗುದ್ದಿನ ಬದ್ದಿ ಒದ್ದಿಯಾಗಿ
ಕೋರಸ್: ನೆಲ ಒದ್ದು ಗುದ್ದ ತೋಡಿ ಗುದ್ದಿನ ಬದ್ದಿ ಒದ್ದಿಯಾಗಿ
ಹೆಣ್ಣು : ಒರತಿ ನೀರು ಭರ್ತಿಯಾಗಿ ಹರಿಯೋಹಾಂಗ ಹೆಜ್ಜೀ ಹಾಕಿ
ಕೋರಸ್: ಒರತಿ ನೀರು ಭರ್ತಿಯಾಗಿ ಹರಿಯೋಹಾಂಗ ಹೆಜ್ಜೀ ಹಾಕಿ
ಹೆಣ್ಣು : ಹತ್ತಿದವರ
ಕೋರಸ್: ಎತ್ತಿಕೊಂಡು
ಹೆಣ್ಣು : ಏಳಕೊಳ್ಳ
ಕೋರಸ್: ತಿಳ್ಳೀ ಹಾಡಿ
ಹೆಣ್ಣು : ಕಳ್ಳೆ ಮಳ್ಳೆ
ಕೋರಸ್: ಆಡಿಸಿ ಕೆಡವಿತ್ತ
ಕಾಡು ಕುದುರೆ ಓಡಿ ಬಂದಿತ್ತಾ... ಆಆಆಅ....
ಗಂಡು : ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....
ಕೋರಸ್: ಕಾಡು ಕುದುರೆ ಓಡಿ ಬಂದಿತ್ತಾ... ಆಆಆಅ....
----------------------------------------------------------------------------------------------------------------------

No comments:
Post a Comment