828. ವೀರ ಪರಂಪರೆ (೨೦೧೦)


ವೀರ ಪರಂಪರೆ ಚಲನಚಿತ್ರದ ಹಾಡುಗಳು 
  1. ನನ್ನ ಮಣ್ಣಿದು... ನನ್ನ ಮಣ್ಣಿದು 
  2. ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು
  3. ತಂಗಾಳಿಯಲ್ಲಿ ತೇಲಿ ಹೋದೆ 
  4. ಎತ್ತತಲೂ ಮಾಯಾ 
  5. ಮೂಡಲ್ ಸೀಮೆ 
  6. ಅಂಬರದ 
ವೀರ ಪರಂಪರೆ (೨೦೧೦) - ನನ್ನ ಮಣ್ಣಿದು... ನನ್ನ ಮಣ್ಣಿದು 
ಸಂಗೀತ ಮತ್ತು ಸಾಹಿತ್ಯ :  ಎಸ.ನಾರಾಯಣ್,  ಗಾಯನ : ಶಂಕರ ಮಹಾದೇವನ್ 

ನನ್ನ ಮಣ್ಣಿದು... ನನ್ನ ಮಣ್ಣಿದು 
ನನ್ನ ಮಣ್ಣಿದು ಕನ್ನಡ ಮಣ್ಣು  ನನ್ನುಸಿರಲ್ಲಿ ಕಂಪಿಸೋ ಮಣ್ಣು 
ಧಮನಿ ಧಮನಿಯಲಿ ನರ್ತಿಸೋ ಮಣ್ಣು  
ವಿಶ್ವಮಾನವತೆ  ಸಾರಿದ ಮಣ್ಣು ಕನ್ನಡತೀ... ಈ ಪುಣ್ಯವತೀ...  
ನನ್ನ ಹಡೆದಾ  ಸೌ... ಭಾಗ್ಯವತೀ 
ನನ್ನ ಮಣ್ಣಿದು... ನನ್ನ ಮಣ್ಣಿದು 
ನನ್ನ ಮಣ್ಣಿದು ಕನ್ನಡ ಮಣ್ಣು  ನನ್ನುಸಿರಲ್ಲಿ ಕಂಪಿಸೋ ಮಣ್ಣು 
ಧಮನಿ ಧಮನಿಯಲಿ ನರ್ತಿಸೋ ಮಣ್ಣು  
ವಿಶ್ವಮಾನವತೆ  ಸಾರಿದ ಮಣ್ಣು ಕನ್ನಡತೀ... ಈ ಪುಣ್ಯವತೀ...  
ನನ್ನೆದೆಯ ಸೌ... ಭಾಗ್ಯವತೀ 

ಕನ್ನಡ ಕವಿಗಳ ಸಾಲುಗಳು ನಿನ್ನ ಕಣ್ಣಿಗೆ ಕಾಡಿಗೆಯೂ 
ಜ್ಞಾನ ಪೀಠದ ಗೌರವವು ತಾಯೆ ನಿನಗೆ ಸಿಂಧುರವೂ 
ಜಾನಪದ ಕಲೆಗಳ ಸಿಂಚನವೇ ಕನ್ನಡಾಂಬೆಯ ಕೈಬಳೆಯೂ 
ಮನು ಕುಲ ಮೆಚ್ಚುವ ನಾಟ್ಯಕಲೆ ಅವಳ ಕಾಲಗಳಿಗೆ ಅರ್ಪುಗೆಯೋ
ಮಲೆನಾಡ ಹಸಿರೆಸಿರಿ ನಿನ್ನ ಒಡಲಿಗೆ ಉಡುಗೆಗಳು   
ಶಿಲ್ಪಿಗಳ ಶಿಲ್ಪಕಲೆ ಮಾತೆ ನಿನಗೆ ಒಡವೆಗಳು 
ಕ್ಷಮಿಸುವಾ... ಮನುಜನೇ ಕನ್ನಡ ಮಣ್ಣಲಿ 
ಸ್ವರ್ಗವ ಕಾಣುವೇ ನನ್ನ ಈ... ಮಣ್ಣಲ್ಲಿ ... ಪುಣ್ಯದ ಮಣ್ಣಲ್ಲಿ ...  
ನನ್ನ ಮಣ್ಣಿದು... ನನ್ನ ಮಣ್ಣಿದು 

ಹೋ... ಸುಂದರ ಅರಣ್ಯ ಧಾಮಗಳು ಕನ್ನಡಾಂಬೆಯ ಕೇಶಗಳು 
ನೇಗಿಲಯೋಗಿಯ ಬೆಳೆಯೆಲ್ಲಾ ಅವಳ ಮುಡಿಗೆ ಕುಸುಮಗಳು 
ಹರಿಯುವ ನದಿಯ ನೀರೆಲ್ಲಾ ಅವಳ ಎದೆಯಾ ಅಮೃತವು 
ಧುಮುಕುವ ಜೋಗದ ಸಿರಿಯಲ್ಲಿ ತುಂಬಿದೆ ನಗೆಯ ನರ್ತನವೂ 
ಈ ನಾಡ ಶ್ರೀಗಂಧ ... ಕನ್ನಡಾಂಬೆಯ ಮಾಂಗಲ್ಯಾ 
ಕೋಲಾರ ಕೈವಾರ ... ಓಲೆ ಜುಮುಕಿ ಮೂಗುತಿಯೂ 
ಗೆದ್ದರೆ ಬದುಕು ನೀ ... ನನ್ನ ಈ ಮಣ್ಣಲ್ಲಿ 
ಮಡಿದರೂ ಹೆಮ್ಮೆಯೇ .. ಕನ್ನಡ ಮಣ್ಣಲ್ಲಿ... ಧರ್ಮದ  ತೌರಲ್ಲಿ.. 

ಕನ್ನಡ ಮಣ್ಣನು ರಕ್ಷಿಸಲು ನೆತ್ತರವನ್ನೇ ಹರಿಸಿದರು 
ಈ ಕನ್ನಡ ತಾಯಿಯ ಮಡಿಲಲ್ಲಿ ವೀರ ಮರಣವ ಹೊಂದಿದರು 
ನೆಲಜಲ ರಕ್ಷಣೆ ಕಾಯಕವೇ ಹಗಲಿರುಳೆನ್ನದೇ ಶ್ರಮಿಸಿದರು 
ಲಾಠಿ ಬೂಟಿನ ಓದೇ ತಿಂದು ಶತೃಗಳ ಎದೆಯ ಮೆಟ್ಟಿದರು 
ಉಪವಾಸ ಸೆರೆವಾಸ ಎದೆಗುಂದದೆ ಮುನ್ನುಗ್ಗಿದರೂ 
ಅವಮಾನ ಅದೇ ಬಹುಮಾನ ಎಂದರು ಕನ್ನಡ ಸಿಂಹಗಳು 
ಅಳಿದರೂ ಕನ್ನಡ ... ಉಳಿದರೂ ಕನ್ನಡ 
ಎದೆಯನೇ ಸೀಳು ನೀ ಹರಿವುದು ಕನ್ನಡ ... ಬೋರ್ಗರೆವುದು ಕನ್ನಡ 
ನನ್ನ ಮಣ್ಣಿದು... ನನ್ನ ಮಣ್ಣಿದು 
ನನ್ನ ಮಣ್ಣಿದು ಕನ್ನಡ ಮಣ್ಣು  ನನ್ನುಸಿರಲ್ಲಿ ಕಂಪಿಸೋ ಮಣ್ಣು 
ಧಮನಿ ಧಮನಿಯಲಿ ನರ್ತಿಸೋ ಮಣ್ಣು  
ವಿಶ್ವಮಾನವತೆ  ಸಾರಿದ ಮಣ್ಣು ಕನ್ನಡತೀ... ಈ ಪುಣ್ಯವತೀ...  
ನನ್ನ ಹಡೆದಾ  ಸೌ... ಭಾಗ್ಯವತೀ 
ನನ್ನ ಮಣ್ಣಿದು... ನನ್ನ ಮಣ್ಣಿದು 

---------------------------------------------------------------------------

ವೀರ ಪರಂಪರೆ (೨೦೧೦) - ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು
ಸಂಗೀತ ಮತ್ತು ಸಾಹಿತ್ಯ :  ಎಸ.ನಾರಾಯಣ್,  ಗಾಯನ : ಸುಜ್ಜನ್ನೇ ಡಿಮಿಲ್ಲೋ, ಆಕಾಶ ತಳಪತ್ರ  

ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು
ನನಗೇ ಯಾಕೋ ಇಷ್ಟ ಇವನು
ಕುಂತರು ನಿಂತರು ಇಷ್ಟ ಇವನು
ಅದು ಯಾಕೋ ತುಂಬಾ ಇಷ್ಟ ಇವನು .....
ಅರೆಅರೆ ಅರೆಅರೆ ಇಷ್ಟ ಇವಳು
ನನಗು ತುಂಬಾ ಇಷ್ಟ ಇವಳು
ಕುಂತರು ನಿಂತರು ಇಷ್ಟ ಇವಳು
ಅದು ಯಾಕೋ ತುಂಬಾ ಇಷ್ಟ ಇವಳು ...

ಚಂದನದ ಮೈಯ ತಿಳಿ ಹತ್ತಿಕೊಳಲು ಚೆಲುವೆ ಅಪ್ಪಣೆ ಕೊಡು
ಮುತ್ತಿನಂತ ಹುಡುಗ ಮುದ್ದು ಮಾಡಿಕೊಳ್ಳಲು ಅಪ್ಪಣೆ ಬೇಡ ಬಿಡು
ನಡುವಿನ ನೆರಿಗೆಯ ತೋಟದಲಿ ನಾಟಿಯ ಮಾಡಲು ಜಾಗ ಕೊಡು
ತೋಟದ ಒಡೆಯ ನೀ ತಾನೇ ಅಯ್ಯೋ ಎಲ್ಲ ಬಾಚಿ ಬಿಡು ...
ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು
ನನಗೇ ಯಾಕೋ ಇಷ್ಟ ಇವನು
ಕುಂತರು ನಿಂತರು ಇಷ್ಟ ಇವನು
ಅದು ಯಾಕೋ ತುಂಬಾ ಇಷ್ಟ ಇವನು.. .
ಅರೆಅರೆ ಅರೆಅರೆ ಇಷ್ಟ ಇವಳು
ನನಗು ತುಂಬಾ ಇಷ್ಟ ಇವಳು
ಕುಂತರು ನಿಂತರು ಇಷ್ಟ ಇವಳು
ಅದು ಯಾಕೋ ತುಂಬಾ ಇಷ್ಟ ಇವಳು...

ಅಕ್ಕರೆಯ ಪಾಟದಿ ಅಂಜೂರವ ಅಪ್ಪಿಕೋ ಆಹಾ ಎಂತ ಸುಖ ಎನ್ನಲೇ
ಸಕ್ಕರೆಯ ಪಾಠ ನಿನ್ನಯೀ ತುಟಿಗಳು ಸೇರಿ ಮೋಸ ಮಾಡಲೇ
ಹಗಲೋ ಇರುಳೋ ಹೇಳಿ ಬಿಡು ಈ ವ್ರತವನ್ನು ಮುಗಿಸಿ ಬಿಡು ..
ಸ್ವಾಮಿಯ ಪೂಜೆಗೆ ಸಮಯ ಕೊಡು ನಡೆಯಲಿ ಇರುವೆನು ಬಂದು ಬಿಡು
ಅಯ್ಯಯ್ಯೋ ಅಯ್ಯಯೋ ಇಷ್ಟ ಇವನು ..
ನನಗೇ ಯಾಕೋ ಇಷ್ಟ ಇವನು ..
ಕುಂತರು ನಿಂತರು ಇಷ್ಟ ಇವನು ...
ಅದು ಯಾಕೋ ತುಂಬಾ ಇಷ್ಟ ಇವನು .....
ಅರೆಅರೆ ಅರೆಅರೆ ಇಷ್ಟ ಇವಳು
ನನಗು ತುಂಬಾ ಇಷ್ಟ ಇವಳು
ಕುಂತರು ನಿಂತರು ಇಷ್ಟ ಇವಳು
ಅದು ಯಾಕೋ ತುಂಬಾ ಇಷ್ಟ ಇವಳು ...
----------------------------------------------------------------------------------

ವೀರ ಪರಂಪರೆ (೨೦೧೦) - ತಂಗಾಳಿಯಲ್ಲಿ ತೇಲಿ ಹೋದೆ
ಸಂಗೀತ ಮತ್ತು ಸಾಹಿತ್ಯ : ಎಸ.ನಾರಾಯಣ್, ಗಾಯನ : ಕಾರ್ತಿಕ ಶ್ರೇಯಾ ಘೋಷಾಲ್

ತಂಗಾಳಿಯಲ್ಲಿ ತೇಲಿ ಹೋದೆ ನಾನೂ  ಈ ದಿನ 
ಸಹರಾ ಭೂಮಿಯಲ್ಲಿ ಒಂದೂ ಹೂವ ಕಂಡೇ ನಾ 
ಮನಗಳ ಮೌನದ ಹಬ್ಬವಿದೂ ಹೃದಯದ ಕನಸಿನ ಸುಗ್ಗಿಯಿದೂ 
ಮನೋಹರ ಈ ಭಾವನೇ ಹೇಳಲಾಗದು ತಾಳಲಾಗದು 
ತಂಗಾಳಿಯಲ್ಲಿ ತೇಲಿ ಹೋದೆ ನಾನೂ  ಈ ದಿನ 
ಸಹರಾ ಭೂಮಿಯಲ್ಲಿ ಒಂದೂ ಹೂವ ಕಂಡೇ ನಾ 
 
ಹೆಣ್ಣು : ವಿನೂತನ ವಿನೋದದ ವಿಚಾರ ಒಂದು ಮೂಡಿ 
          ಸಮ್ಮೋಹದ ಸಲ್ಲಾಪ ಸೋಪಾನವನ್ನೂ ಮಾಡಿ
         ಕಚಗುಳಿ ಇಡುತ್ತಿದೇ ಆಸೆಗಳೂ ಹರೆಯದ ಹಸಿವಿನ ತುಮುಲಗಳೂ 
         ಸಂಕೋಚದ ಸಂವೇದನೇ ಹೇಳಲಾಗದು ತಾಳಲಾಗದೂ 
ತಂಗಾಳಿಯಲ್ಲಿ ತೇಲಿ ಹೋದೆ ನಾನೂ  ಈ ದಿನ 
ಸಹರಾ ಭೂಮಿಯಲ್ಲಿ ಒಂದೂ ಹೂವ ಕಂಡೇ ನಾ 
    
ಗಂಡು : ಮುಂಜಾನೆಯ ಮುಗ್ಗಳ್ಳಿಯ ಸಿಕ್ಕಂತೆಯಾದೇ ನಾನೂ 
            ವಸಂತದ ವಯ್ಯಾರದ ಇಂಪಾದ ಗಾಳಿ ನೀನೂ 
            ಪ್ರಣಯದ ಮಂಪರೂ ಕಣಕಣವೂ ಸರಸರ ತುಂತುರೂ ಕ್ಷಣಕ್ಷಣವೂ 
            ಈ ಅಂತರ ಮನೋಹರ ಹೇಳಲಾಗದೂ ತಾಳಲಾಗದೂ 
ತಂಗಾಳಿಯಲ್ಲಿ ತೇಲಿ ಹೋದೆ ನಾನೂ  ಈ ದಿನ 
ಸಹರಾ ಭೂಮಿಯಲ್ಲಿ ಒಂದೂ ಹೂವ ಕಂಡೇ ನಾ 
--------------------------------------------------------------------------

ವೀರ ಪರಂಪರೆ (೨೦೧೦) - ಎತ್ತತ್ತಲೋ ಮಾಯಾ 
ಸಂಗೀತ ಮತ್ತು ಸಾಹಿತ್ಯ :  ಎಸ.ನಾರಾಯಣ್,  ಗಾಯನ : ಶಂಕರ ಮಹಾದೇವನ್ 


---------------------------------------------------------------------------

ವೀರ ಪರಂಪರೆ (೨೦೧೦) - ಮೂಡಲ್ ಸೀಮೆ 
ಸಂಗೀತ ಮತ್ತು ಸಾಹಿತ್ಯ :  ಎಸ.ನಾರಾಯಣ್,  ಗಾಯನ : ವಿಜಯ ಪ್ರಕಾಶ, ಅನುರಾಧ ಭಟ್ಟ 


---------------------------------------------------------------------------

ವೀರ ಪರಂಪರೆ (೨೦೧೦) - ಅಂಬರದ 
ಸಂಗೀತ ಮತ್ತು ಸಾಹಿತ್ಯ :  ಎಸ.ನಾರಾಯಣ್,  ಗಾಯನ : ಮಿಲ್ಲಿ ನಯ್ಯರ್ 


---------------------------------------------------------------------------

No comments:

Post a Comment