829. ಕೋಟಿಗೊಬ್ಬ (೨೦೦೧)


ಕೋಟಿಗೊಬ್ಬ ಚಲನಚಿತ್ರದ ಹಾಡುಗಳು 
  1. ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
  2. ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈ ಬಳೆ ಕೊಡಿಸಿ 
  3. ಸಾಹಸ ಸಿಂಹ ಮೆಟ್ಟಿ ಬರುವ ಜೋರು ನೋಡು ದಿಟ್ಟ ವೀರ ಪಡೆಯ ನೋಡು 
  4. ತಿಂಗಳ ಬೆಳಕಿನ ಅಂಗಳದಲ್ಲಿ ಪ್ರೀತಿಯ ಸಂಚಾರ 
  5. ವರ್ಧನ ವಿಷ್ಣುವರ್ಧನಾ ಯಜಮಾನ ನಂಗೆ ವಿಷ್ಣುವರ್ಧನಾ
  6. ಅರೇ ಥೈ ಥೈ  ತಂದನಾ ಈ ಎಂಟರೊಳಗೇ ಉಂಟು ನಮ್ಮ ಜೀವನ 
ಕೋಟಿಗೊಬ್ಬ (೨೦೦೧) - ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಿ

ಕೋರಸ್ :  ಓಂ ಶ್ರೀ ನಂಜುಂಡೇಶ್ವವರಾಯ ನಮಃ   ಓಂ ಶ್ರೀ ನಂಜುಂಡೇಶ್ವವರಾಯ ನಮಃ
                ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ಗಂಡು :  ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ 
            ಅಹ್.. ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
            ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ  ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
ಕೋರಸ್ :  ಜಗಕೆ ಶಿವನು ಒಬ್ಬ ...  ಇವನು ಕೋಟಿಗೊಬ್ಬ 
ಗಂಡು : ಜಗಕೆ ಶಿವನು ಒಬ್ಬ .( ಓಯ್ ಓಯ್ ಓಯ್ )..  ನಿಮ್ಮಲ್ಲಿ ನಾನು ಒಬ್ಬ ( ಓಯ್ ಓಯ್ ಓಯ್ ).
            ಉಪ್ಪು ತಿಂದ ಮನೆಗೆ ನನ್ನ ವಂದನೆ, ಆದರೆ ತಪ್ಪು ಮಾಡಿದವಗೆ ಕೊಡುವೆ ದಂಡನೇ .ಏಏಏಏ  
           ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 

ಕೋರಸ್ : ಓಓಓಓ ಓಓಓಓ ಓಓಓಓ ಓಓಓಓ ಓಓಓಓ
ಗಂಡು : ಈ ಕಂಗಳು ಕಾಪಾಡೋ ರೆಪ್ಪೆಗಳು ನೀನೆ  ಈ ತೋಳಗಳಿಗೆ ಬಾಳ ಕೊಡುವ ರೆಕ್ಕೆಗಳು ನೀನೆ... 
            ನನ್ನೆದೆಯಾ ಗುಂಡಿಗೆಯ ಗಟ್ಟಿತನ ನೀನೇ ನಾನಾಡೋ ನುಡಿಗಳಲ್ಲಿ ದಿಟ್ಟತನ ನೀನೆ... 
ಕೋರಸ್ :  ಒಹ್..ಒಹ್...   ಒಹ್..ಒಹ್... ಒಹ್..ಒಹ್... ಆಅಅ 
ಗಂಡು : ಉಸಿರಾಡುವ ನನ್ನುಸಿರ ಏರಿಳಿತ ನೀನೆ  ಹಸುಗೂಸಿನ ಈ ಹೃದಯದ ಎದೆಬಡಿತ ನೀನೆ...
           ಆಆಆ ನೆನೆಯೋ ಪ್ರತಿ ಗುರಿಯನು ನಡೆಸೋನು ನೀನೆ.. ಈ ಜೀವದ ಜೊತೆ ಪ್ರತಿ ಹೆಜ್ಜೆ ನಡಿಯೋನು ನೀನೆ  
ಕೋರಸ್ :  ಓಂ ಶ್ರೀ ನಂಜುಂಡೇಶ್ವವರಾಯ ನಮಃ  ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ಗಂಡು :  ನೆನ್ನೆ ದುಡಿದರೆ ನಾಳೆ ನಿನ್ನದು, ನಿನ್ನೆ ಮರೆತರೆ ನೇರಳೆ ಸಿಕ್ಕದು
            ನನಗೂ ನಿನಗೂ ಅರಿಯೋ ರಕ್ತ ಒಂದೇ ಕಣಯ್ಯಾ
          ಇಲ್ಲಿ ನನಗೆ ನೀನೆ ನಿನಗೆ ನಾನೇ ಪ್ರಾಣಾ ಕಾಯೋ ಗೆಳೆಯಾ..
           ಅಹ್..ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ
ಕೋರಸ್ : ಹೇಯ್ ಹೇಯ್ ಹೇಯ್ ... ಹೇಯ್ ಹೇಯ್ ಹೇಯ್ ...
           

ಕೋರಸ್ :  ತಾರತ ತತ್ತರ ತರತ್ತ ತತ್ತರ ತಾರತರತರ ತಾರತ ತತ್ತರ ತರತ್ತ ತತ್ತರ 
ಗಂಡು :  ಅಮ್ಮ ಎಂಬ ನಿಜ ದೈವ ಇರುವಾಗ ಇಲ್ಲಿ ನೀ ಗುಡಿ ಗೋಪುರ ಗಿರಿ ಶಿಖರ ಅಲೆಯೋದ್ಯಾಕಲ್ಲಿ
            ಹೆತ್ತೊಳ ಕಾಲದಡಿಯೇ ಪ್ರತಿ ದೇವರು ಉಂಟು ಕೈ ಮುಗಿದು ತಲೆ ಬಾಗು ಸ್ವರ್ಗ ನಿನಗುಂಟೂ
ಕೋರಸ್ :   ಒಹ್...ಒಹ್... ಒಹ್..ಒಹ್..ಒಹ್..
ಗಂಡು : ನೀನೂ ಮುಖವಾಡ ಕಳಚಿಟ್ಟು ಬದುಕೋದೇ ಧರ್ಮ ಅಧಿಕಾರ ಧನ ಧಾಹವ ಮರಿಯೋದೆ ಧರ್ಮ
            ಹಣವಿದ್ದರೇ ನೀ ಕೊಂಚ ಹಂಚೋದೆ ಧರ್ಮಾ ನೀ ಮಗನಾದರೇ ನಿನ್ನ ತಾಯಿಯ ಕಾಯೋದೇ ಧರ್ಮಾ
ಕೋರಸ್ :  ಓಂ ಶ್ರೀ ನಂಜುಂಡೇಶ್ವವರಾಯ ನಮಃ  ಓಂ ಶ್ರೀ ನಂಜುಂಡೇಶ್ವವರಾಯ ನಮಃ 
ಗಂಡು : ತನಗೆಂದು ಬದುಕೋನು ತವರಿಗೆ ಹತ್ತಿರ.. ಪರರಿಗೆ ಬದುಕೋನು ದೇವರಿಗತ್ತೀರಾ.. 
            ನನ್ನ ಬದುಕಿಗೆಂದು ಬಂಧು ನೀನೆ ಕಣಯ್ಯಾ ಎಂದು ನನ್ನ ಜೀವ ಕಾಯ ದೈವ ನೀನೆ ನೀನೆ ಒಡೆಯಾ
            ಅಹ್... ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
            ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ  ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
            ಜಗಕೆ ಶಿವನು ಒಬ್ಬ (ಹೊಯ್ ಹೊಯ್ ಹೊಯ್ )  ನಿಮ್ಮಲ್ಲಿ ನಾನು ಒಬ್ಬ (ಹೊಯ್ ಹೊಯ್ ಹೊಯ್ )
           ತುತ್ತು ಅನ್ನ ಕೊಟ್ಟ ಕೈಗೆ ನಾನು ಕಂದನೂ  ಅತ್ತು ನೊಂದವರಿಗೆ ಕೈಯ ನೀಡೋ ಗೆಳೆಯನು...
           ಉಉಉಉ   ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ 
          ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯಾ  ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯಾ
----------------------------------------------------------------------------------------------------------------------

ಕೋಟಿಗೊಬ್ಬ (೨೦೦೧) - ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈ ಬಳೆ ಕೊಡಿಸಿ 
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಿ, ಚಿತ್ರಾ 

ಕೋರಸ್ : ಆಆಆ.. ಲಾಲಲಲಾ ... ರರರರಾ ... ಲಾಲಲಲಾ ... ರರರರಾ ... ಲಾಲಲಲಾ ... ರರರರಾ ...
ಗಂಡು : ಕಾವೇರಿಗೆ ಕಾಲುಂಗುರ ತೊಡಿಸಿ         ಕೋರಸ್ : ತತ್ತರೀರಾ ತತ್ತರೀರಾ
           ಕೊಡಚಾದ್ರಿಗೆ ಕೈ ಬಳೆ ಕೊಡಿಸಿ           ಕೋರಸ್ : ತತ್ತರೀರಾ ತತ್ತರೀರಾ 
ಗಂಡು : ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈ ಬಳೆಯ  ಕೊಡಿಸಿ           
           ಮಲೆನಾಡಿಗೆ ಮಲ್ಲೆಯನು ಮುಡಿಸಿ ಪ್ರೀತಿಸುವೆನು ಈ ಜೀವ ಬೆರೆಸಿ 
          ಓ ಕನ್ನಡದ ಹೆಣ್ಣೇ .... ನಿನಗೆ ಕೋಟಿ ನಮನ... 
          ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ 
         ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈ ಬಳೆಯ ಕೊಡಿಸಿ ಹೇ..... 

ಕೋರಸ್ : ತರರನಾನ್ ನಾನ್ ತರರನಾನ್ ನಾನ್  ತರರನಾನ್ ನಾನ್  ತರರನಾನ್ ನಾನ್ ನಾನ್ ನಾನ್ ನಾನ್
ಗಂಡು : ಜಾರೋ ಜಾರೋ ಜಾರೋ ಜೋಗದ ಜಡೆಯಲಿ ಜಾರಲೆ.....  
            ಚಿನ್ನಾ ನಿನ್ನ ಕಣ್ಣ ಕೊಡಗಿನ ಕೊಡೆಯಲಿ ಕೂಡಲೇ  
           ನೀನು ನಿಂತಾಗ ಬೇಲೂರಿನಾ ಬೊಂಬೆಯು ಮೆಲ್ಲ ನಡೆವಾಗ ಮೈ ನೆನೆದ ಆಗುಂಬೆಯು 
           ನಿನ್ನ ಬಣ್ಣಾನೆ ಬಾದಾಮಿ ಚಿತ್ರಾವಳಿ ನಿನ್ನ ಕಣ್ಣೋಟ ಕಣ್ಸೆಳೆಯೋ ಕರಾವಳಿ 
           ಪ್ರತಿ ಜನ್ಮ ಪ್ರೀತಿಗಾಗಿ ಹುಟ್ಟಿ ಬರುವೆ ನಿನ್ನವನಾಗಿ 
          ಪ್ರತಿ ಜನ್ಮ ಆಸರೆಯಾಗಿ ಹುಟ್ಟಿ ಬರುವೆ ಹಾಯಾಗಿ 
          ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ  ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ 
          ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈ ಬಳೆ ಕೊಡಿಸಿ.. ಹೇಹೇಹೇಹೇ ....  

ಕೋರಸ್ : ಲಲಲಲ ಲ್ಲಲ್ಲಲಾ ಲಲಲಲ ಲ್ಲಲ್ಲಲಾ ಲಲಲಲ ಲ್ಲಲ್ಲಲಾ ಲಲಲಲ ಲ್ಲಲ್ಲಲಾ
ಗಂಡು : ನಿನ್ನ ಆಸೆ ಅನ್ನೋ ರಂಗನಾತಿಟ್ಟಿನಾ.. ಹಕ್ಕಿನಾ... ನಿನ್ನ ಅಂದ ಅನ್ನೋ ನಾಗರ ಹೊಳೆಯಲಿ ಅವಿತೆ ನಾ 
            ನಿನ್ನ ಸ್ಪರ್ಶಾನೇ ಸಹ್ಯಾದ್ರಿ ತಂಗಾಳಿಯೊ ನಿನ್ನ ನಗುವೆಲ್ಲಾ ನರ್ತಿಸುವಾ ಕಾರಂಜಿಯೋ 
            ನಿನ್ನ ಹೃದಯಾನೆ ಪ್ರತಿಧ್ವನಿಯೊ ಆ ಗುಮ್ಮಟ
ಹೆಣ್ಣು : ನಿನ್ನ ಮನಸೊಂದು ಕರುನಾಡಿನ ಭೂಪಟ 
ಗಂಡು : ಪ್ರತಿ ಜನ್ಮ ಪ್ರೀತಿಗಾಗಿ ಹುಟ್ಟಿ ಬರುವೆ ನಿನ್ನವನಾಗಿ ಪ್ರತಿ ಜನ್ಮ ಆಸರೆಗಾಗಿ ಹುಟ್ಟಿ ಬರುವೆ ಹಾಯಾಗಿ 
            ಓ ಕನ್ನಡದ ಹೆಣ್ಣೇ .... ನಿನಗೆ ಕೋಟಿ ನಮನ... 
           ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ 
           ಕಾವೇರಿಗೆ ಕಾಲುಂಗುರ ತೊಡಿಸಿ ಕೊಡಚಾದ್ರಿಗೆ ಕೈ ಬಳೆ ಕೊಡಿಸಿ 
           ಮಲೆನಾಡಿಗೆ ಮಲ್ಲೆಯನು ಮುಡಿಸಿ ಪ್ರೀತಿಸುವೆನು ಈ ಜೀವ ಬೆರೆಸಿ 
          ಓ ಕನ್ನಡದ ಹೆಣ್ಣೇ .... ನಿನಗೆ ಕೋಟಿ ನಮನ... 
          ನಮ್ಮ ಪ್ರೀತಿಗೆರಡೇ ಅಕ್ಷರ ಅದರಾಳ ಗೌರಿಶಂಕರ... ಅದರಾಳ ಗೌರಿಶಂಕರ  
-----------------------------------------------------------------------------------------------------------------------

ಕೋಟಿಗೊಬ್ಬ (೨೦೦೧) - ಸಾಹಸ ಸಿಂಹ ಮೆಟ್ಟಿ ಬರುವ ಜೋರು ನೋಡು ದಿಟ್ಟ 
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಿ, 

ಕೋರಸ್ :  ಸಾಹಸ ಸಿಂಹ ಸಾಹಸ ಸಿಂಹ ಸಾಹಸ ಸಿಂಹ ಸಾಹಸ ಸಿಂಹ
                 ಸಾಹಸ ಸಿಂಹ ಸಾಹಸ ಸಿಂಹ ಸಾಹಸ ಸಿಂಹ ಸಾಹಸ ಸಿಂಹ 
ಗಂಡು : ಹೇ.. ಸಾಹಸ ಸಿಂಹ ಸಾಹಸ ಸಿಂಹ ಮೆಟ್ಟಿ ಬರುವ ಜೋರು ನೋಡು ದಿಟ್ಟ ವೀರ ಪಡೆಯ ನೋಡು 
            ದಂಡು ದಾಳಿಯ ನಡುವೆ ಕೂಡಾ ಗಂಡು ಗಂಡುಗಲಿಯ ಬೀರುಸು ನೋಡು 
            ದಂಗೆ  ಎದ್ದು ದಂಗು ಬಡಿಸೋ ಬೆಂಕಿ ಚೆಂಡಿನಾಟ ನೋಡು 
            ರಕ್ತದಲ್ಲಿ ಬೆವರು ಸುರಿಸಿ ಕೋಟೆ ಕಟ್ಟೋ ದೊರೆಯ ನೋಡಯ್ಯಾ...ಆಹ್
           ಇವನಿದ್ದ ಕಡೆಯಲೆಲ್ಲಾ ಘೋರ ಸಿಂಹ ಘರ್ಜನೆ
           ಅದು ಯಾರು ಬಂದರು ಕೊನೆಯಾಗದು ಸಿಂಹ ಘರ್ಜನೆ

ಗಂಡು : ಹೇ.. ಸಾಹಸ ಸಿಂಹ ಸಾಹಸ ಸಿಂಹ ಜಯದ ದಳಪತಿಯ ನೋಡು
            ಮುಂಬೈ ಅಧಿಪತಿಯ ನೋಡು ಗುಡ್ಡದಷ್ಟು ದುಡ್ಡು ನೋಡು ಲೆಕ್ಕ ಸಿಗದ ಹಡಗು ನೋಡು
            ಮುಗಿಲ ಮುಟ್ಟೋ ಕಟ್ಟಡವೆಲ್ಲಾ ಮುಗಿ ಬೀಳುವ ಪರಿಯ ನೋಡು
            ಗರಿಗರಿಯ ನೋಟಿನೊಳಗೂ ಸಿಂಹದ ಗುರುತು ಇವನೇ ನೋಡಯ್ಯಾ
           ಇವನೆದೆಯಾ ರೋಮ ರೋಮವೆಲ್ಲಾ ಸಿಡಿಲ ಕಿಡಿಗಳು
           ಇವನ ಎಲ್ಲ ಗುರಿಯು ಈಡೇರಿಸಲು ಎರಡೇ ಕ್ಷಣಗಳು...  ಓಓಓಓಓಓಓ ...

ಕೋರಸ್ : ಅಅಅಅಅಅಅಅಅಅಅಅ ಅಅಅಅಅಅಅಅ ಅಅಅಅಅಅ
ಗಂಡು : ನಂಜುಂಡನಿವನು ಪಾಡು ನೋಡು ನಂಜು ಕುಡಿದು ನಗುವ ನೋಡು
            ಎಳೆಯ ಮಗುವ ಮನಸು ನೋಡು
            ಉಕ್ಕಿ ಸುರಿವ ರಕ್ತದಲ್ಲೂ ಉಕ್ಕಿ ಹರಿವ ಒಲುಮೆ ನೋಡು
           ಚಿಂದಿ ಚಿಂದಿ ಹರಿದರನೂ ಗಾಂಧಿ ಎಂಥ ಸಹನೆ ನೋಡು
           ತನ್ನವರಿಗೆ ತನ್ನ ತನವ ಹೊಂದುಕೊಂಡ ಧೈವ ನೋಡಯಾ
           ಈ ಕತ್ತಿ ಮೇಲೆ ನಡೆವ ಬದುಕ ತಂದವನ ಯಾರಯ್ಯಾ
           ಇವನ ನೆತ್ತಿ ಮೇಲೆ ಬರೆದ ಬರಹ ಅಳಿಸಿರೋರು ಯಾರಯ್ಯಾ ... ಆಆಆಹ್ಹಹ್ಹ ಅ...

ಕೋರಸ್ :  ಹೇ.. ಸಾಹಸ ಸಿಂಹ ಸಾಹಸ ಸಿಂಹ ಸಾಹಸ ಸಿಂಹ ಸಾಹಸ ಸಿಂಹ
ಗಂಡು : ಸ್ನೇಹ ಜೀವಿ ಸ್ನೇಹ ಜೀವಿ ಸ್ನೇಹ ಸ್ನೇಹಕೆಂದು ಸೋಲುತ್ತಾನೆ
            ಸ್ನೇಹದಿಂದ ಗೆಲ್ಲುತ್ತಾನೆ ಪ್ರೀತಿಗೆ ನೀರ ಆಗುತ್ತಾನೆ ಪ್ರೀತಿಗೆ ತಲೆ ಬಗ್ಗುತ್ತಾನೆ
            ಕೊಟ್ಟ ಮಾತು ಉಳಿಸಲೆಂದು ಪೆಟ್ಟು ತಿಂದು ಬದುಕುತ್ತಾನೆ
            ನೀನೆ ಜೀವ ಎಂದರೆ ಸಾಕು ಜೀವ ಕೊಟ್ಟು ಕಾಯುತ್ತಾನಯ್ಯಾ
            ಇವನ ಮೇಲ ನೋಟದಲಿ ಕಾಣೋ ಸಿಂಹ ಘರ್ಜನೆ
            ಆಹ್ಹ್ ... ಕಾಮಧೇನು ಕರೆಯ ಹಾಗೆ ಸ್ನೇಹ ಪ್ರಾರ್ಥನೆ ಆಆಆಅಅಅ
-------------------------------------------------------------------------------------------------------------------------

ಕೋಟಿಗೊಬ್ಬ (೨೦೦೧) - ವರ್ಧನ ವಿಷ್ಣುವರ್ಧನಾ ಯಜಮಾನ ನಂಗೆ ವಿಷ್ಣುವರ್ಧನಾ
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಿ, ಚಿತ್ರಾ 

ಹೆಣ್ಣು : ವರ್ಧನ ವಿಷ್ಣುವರ್ಧನಾ ಯಜಮಾನ ನಂಗೆ ವಿಷ್ಣುವರ್ಧನಾ
          ವರ್ಧನ ವಿಷ್ಣುವರ್ಧನಾ... ನಂಗೆ ಕೋಟಿಗೊಬ್ಬ ವಿಷ್ಣುವರ್ಧನಾ
          ಕಣ್ಣಲೇ ಹುಡುಗಿ ಎದೆಗೆ ಬುಗುರಿ ಬಿಟ್ಟ ಈ ಕರ್ಣ
          ಮುಟ್ಟದೇ ನನ್ನ ಒಳಗೆ ಇಳಿದು ಬಿಟ್ಟ ಈ ಮದನ
         ನಡೆಯುವ ಭಂಗಿ ನೋಡಿ ಪುಂಗಿ ಕಂಡ ಹಾವದೇನ
ಹೆಣ್ಣು : ಭಾರತೀ.. ವಾ ವಾ ವಾ ವಾ ವ ಭಾರತಿ ಮುದ್ದು ಭಾರತಿ
          ಯಜಮಾನಂತಿ ನಂಗೆ ನೀನೇ ಭಾರತಿ

ಗಂಡು : ನಕ್ಕುನಕ್ಕು ನಾದಿನಿಯ ನಡು ಉಳುಕಿತು ಗುಡು ಗುಡುಗಿತು
ಏನೇ ಅದರ ಗುಟ್ಟು ತಿಳಿಸೇ ಮನಸು ಕೊಟ್ಟು.. ಆಹಾ (ಆಹಾ) ಆಹಾ 
ಹೆಣ್ಣು : ಓ.. ಬಿಡು ಬಿಡು ಬಿಡುವಿಲ್ಲನಂಗೆ ಬೇಕಿಲ್ಲನಂಗೆ 
          ಆದರೂ ನಿಂಗೆ ಹೇಳ್ತಿನೊಂದು ಗುಟ್ಟು ಮೊದಲು ಬಾಜಿ ಕಟ್ಟು 
ಗಂಡು : ಪ್ರೀತಿಗೆ ಯಾಕೆ ಬೇಕು ಬಾಜಿ.. ಆಹಾ ರಾಜಿನಾ ಮಾಡ್ಕೊಳಾಣ ರಾಜೀ..
ಹೆಣ್ಣು : ಓ… ತುಂಟಾಟ ಇದ್ದರೆ ತಾನೆ ಯೌವನ
         ವರ್ಧನ ವಿಷ್ಣುವರ್ಧನಾ.. (ಒಯ್ ಒಯ್..)  ಯಜಮಾನ ನಂಗೆ ವಿಷ್ಣುವರ್ಧನಾ.ಆ ಆ.(. ಥ್ಯಾಂಕ್ಯೂ )

ಕೋರಸ್ : ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ..
ಹೆಣ್ಣು : ವ್ಹಾರೆ.. ವ್ಹಾರೆ ಮಾವ ನಿನ್ನ ಮಾತು ಮೆಚ್ಚಿಕೊಂಡು ಬುತ್ತಿ ಕಟ್ಟಿಕೊಂಡು 
         ಊರಾ ಹೊರಗೆ ಹೊಂಟೆ ಆದ್ರೂ  ನಿನದು ತಂಟೆ 
ಗಂಡು :ಹೊಯ್ ಹೊಯ್ ಹೇ.. ಹೊಯ್ ಹೊಯ್ ಹೇ ಮಳ್ಳಿ ಮೊರೆ ತಿವಿದು 
           ಊರು ಸುತ್ತಿ ಬಾರೆ ಹತ್ತಿ ಜಾರಿ ಬೀಳ್ತಾ ಇದ್ದೆ  ಅದಕೆ ಹಿಡಿಯಾಕ್ ಹೊಂಟೆ 
ಹೆಣ್ಣು : ಮಾತಲ್ಲಿ ಕುಣಿಸಿಬಿಟ್ಟ ಪ್ರಾಯ (ಆಹ್ ಅಹ್ ಆಹ್ )  ಮುಟ್ಟಿದ ಕೂಡಲೇ ಮನಸು ಮಾಯಾ 
ಗಂಡು : ಓಯ್ ಮುದ್ದಾಟ ಇದ್ರೆತಾನೇ ಸಂತತಿ  
            ಭಾರತಿ ಮುದ್ದು ಭಾರತಿ (ಹೊಯ್ ಹೊಯ್ ) ಯಜಮಾನಂತಿ ನಂಗೆ ನೀನೇ ಭಾರತಿ
ಹೆಣ್ಣು : ಹೂಂಆಅ  .. ವರ್ಧನ ವಿಷ್ಣುವರ್ಧನಾ... ನಂಗೆ ಕೋಟಿಗೊಬ್ಬ ವಿಷ್ಣುವರ್ಧನಾ
ಗಂಡು : ಹೇಯ್.. ಎದೆಯಲಿ ಜಳಕು ಹೊಡಿತು ಝಳಕು  ಹೊಡಿತು ಯಾಕೆ ಅಂತ (ಅಹ್ಹಾ) 
            ಕಣ್ಣು ಕುಕ್ಕಿತಪ್ಪ ನಿನ್ನ ವಯ್ಯಾರದ ಶರವಾತಿ (ಹೇ) ಆಗಲೇ ಅಂದುಕೊಂಡೆ ನಾನು ನೀನೆ ಸತಿಪತಿ
            ಟಟೊಡಂವ್ ಟಟೊಟೊಡಂವ್ ಟಟೊಡಂವ್ ಟಟೊಟೊಡಂವ್ (ಅಹ್ಹಹ್ಹಹ್ಹ ) ಹೊಯ್ ಹೊಯ್ ಹೊಯ್
            ಟಟೊಡಂವ್ ಟಟೊಟೊಡಂವ್ ಟಟೊಡಂವ್ ಟಟೊಟೊಡಂವ್ (ಅಹ್ಹಹ್ಹಹ್ಹ ) ಹೊಯ್ ಹೊಯ್ ಹೊಯ್
--------------------------------------------------------------------------------------------------------------------------

ಕೋಟಿಗೊಬ್ಬ (೨೦೦೧) - ತಿಂಗಳ ಬೆಳಕಿನ ಅಂಗಳದಲ್ಲಿ ಪ್ರೀತಿಯ ಸಂಚಾರ
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಿ, ಚಿತ್ರಾ 


ಗಂಡು : ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದ ಪ್ರೀತಿಯ ಸಂಚಾರ
            ದೇವರೇ ಬಂದರೂ ನಾಚಲೇಬೇಕು ಸ್ವರ್ಗವಿ ನಮ್ಮಿ ಸಂಸಾರ 
ಕೋರಸ್ : ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್  ಕೋಯಿಲ್ 
                ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್  ಕೋಯಿಲ್
ಹೆಣ್ಣು : ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದ ಪ್ರೀತಿಯ ಸಂಚಾರ
            ದೇವರೇ ಬಂದರೂ ನಾಚಲೇಬೇಕು ಸ್ವರ್ಗವಿ ನಮ್ಮಿ ಸಂಸಾರ
ಗಂಡು : ನಮ್ಮೊಳಗೇ                ಹೆಣ್ಣು : ನಮ್ಮ ಎದೆಯೊಳಗೇ 
ಗಂಡು : ನಮ್ಮೊಳಗೇ  ನಮ್ಮ ಎದೆಯೊಳಗೇ ಅಹ್ ಸಾವಿರ ಕನಸು ಇದೇ 
ಹೆಣ್ಣು : ಕನಸೊಳಗೇ ಪ್ರತಿ ಮನಸೊಳಗೇ ಅಹ್ ನಿರ್ಮಲ ಪ್ರೇಮವಿದೇ 
ಇಬ್ಬರು : ಅಣ್ಣ ನಮ್ಮ ಅಣ್ಣನೀವನು ನಮ್ಮ ದೇವನೂ 
             ಕೋಟಿ ಜನ್ಮ ಬಂದರೂನು ಕೋಟಿಗೊಬ್ಬನೂ 
ಗಂಡು : ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದ ಪ್ರೀತಿಯ ಸಂಚಾರ
            ದೇವರೇ ಬಂದರೂ ನಾಚಲೇಬೇಕು ಸ್ವರ್ಗವಿ ನಮ್ಮಿ ಸಂಸಾರ 
ಕೋರಸ್ : ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್  ಕೋಯಿಲ್ 
                ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್  ಕೋಯಿಲ್ 
               ಲಲಾಲ  ಲಲಲ  ಲಲಾಲ  ಲಲಲ  ಲಲಾಲ  ಲಲಾಲ  ಲಲಾಲ  ಲಲಾಲ  
               ಲಲಾಲ  ಲಲಾಲ  ಲಲಾಲ  ಲಲಾಲ  ಲಲಾಲ  ಲಲಾಲ  ಲಲಾಲ  ಲಲಾಲ  
               ಚಕ ಚಕ ಚಕ ಚಕ ಚಿಕಚಾಕ್ ಚಕ ಚಕ ಚಕ ಚಕ ಚಿಕಚಾಕ್ ಚಕ ಚಕ ಚಕ ಚಕ ಚಿಕಚಾಕ್ 

ಹೆಣ್ಣು : ಮಾತಿಗೇ ನಡೆಯೋ ರಾಮನ ನಿಯಮ ಆದರೂ ಕೃಷ್ಣನ ಪ್ರೇಮ
ಗಂಡು : ಆಆಆ... ಕಾಣದ ನೋವೂ ಕಾಲಡಿ ಇದ್ದರೂ ಬುದ್ಧನ ಮನಸೋ ನಮ್ಮ
ಹೆಣ್ಣು : ನನ್ನ ಅಣ್ಣನ ಕೈಯ್ಯ್ ತೂತ್ತು ನಮ್ಮ ಅಮ್ಮನ ಕೈಯ್ಯ್ ತೂತ್ತು
          ನಾವೂ ಮಕ್ಕಳ ಮನಸೋರು ಅದು ಅಣ್ಣನಿಗೇ ಗೊತ್ತೂ
ಗಂಡು : ಇಲ್ಲಿ ಪ್ರೀತಿಯ ಸಿಹಿ ಮುತ್ತೂ ಇಲ್ಲಿ ಪ್ರೀತಿಯೇ ನಮ್ಮ ಸ್ವತ್ತೂ
            ಇಲ್ಲಿ ಅಕ್ಕರೆಯ ಹಾಡೇ ಕುಬೇರನ ಸಂಪತ್ತು
ಹೆಣ್ಣು : ರೆಪ್ಪೆಗಳಾ ಕಾವಲಲಿ ಕಣ್ಗಳಿಗೆ ಬೆಳಕು
ಗಂಡು : ಅಣ್ಣನ ಈ ಕಾವಲಲಿ ನಮಗಳಿಗೆ ಬದುಕು
ಇಬ್ಬರು : ಅಣ್ಣ ನಮ್ಮ ಅಣ್ಣನೀವನು ನಮ್ಮ ದೇವನೂ 
             ಕೋಟಿ ಜನ್ಮ ಬಂದರೂನು ಬೇರೆ ಆಗನೂ 
ಹೆಣ್ಣು : ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದ ಪ್ರೀತಿಯ ಸಂಚಾರ 
            ದೇವರೇ ಬಂದರೂ ನಾಚಲೇಬೇಕು ಸ್ವರ್ಗವಿ ನಮ್ಮಿ ಸಂಸಾರ 
ಕೋರಸ್ : ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್  ಕೋಯಿಲ್ 
                ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್  ಕೋಯಿಲ್ 

ಗಂಡು : ಯೋಧನ ಹಿರಿಮೇ ರೈತನ ತಾಳ್ಮೆ ಎಲ್ಲವು ಇವನೊಳಗುಂಟು
ಹೆಣ್ಣು : ಓಓಓ ... ಭೂಮಿಯ ಸಹನೆ ಬಾನಿನ ಕರುಣೆ ಅಣ್ಣನ ನೆರಳಲಿ ಉಂಟೂ
ಗಂಡು : ಇದು ತುಂಬಿದ ಸಂಸಾರ ಇಲ್ಲಿ ಪ್ರೀತಿಯ ಅಧಿಕಾರ
           ಹಸು ಕಂದನ ಅಳುವಂತೆ ಪ್ರತಿಯೊಬ್ಬನ ಮಮಕಾರ
ಹೆಣ್ಣು : ಇದು ಕಾಲದ ಗಡಿಯಾರ ತಿರುಗೋಣ ಮನಸಾರ
          ಶತಕೋಟಿ ಜನಗಳಲಿ ನಮದೊಂದೇ ಸಂಸಾರ
ಗಂಡು : ಆ ಬ್ರಹ್ಮನ ಕೈಯಲ್ಲಿದೆ  ಜಗದಾ ಲೆಕ್ಕಗಳೂ
ಹೆಣ್ಣು : ಈ ಅಣ್ಣನ ಕೈಯಲ್ಲಿದೆ ನಮ್ಮ ಸುಖ ದುಃಖಗಳೂ
ಇಬ್ಬರು : ಅಣ್ಣ ನಮ್ಮ ಅಣ್ಣನೀವನು ನಮ್ಮ ದೇವನೂ 
             ಕೋಟಿ ಜನ್ಮ ಬಂದರೂನು ಬೇರೆ ಆಗನೂ 
ಗಂಡು  : ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದ ಪ್ರೀತಿಯ ಸಂಚಾರ 
ಹೆಣ್ಣು :  ದೇವರೇ ಬಂದರೂ ನಾಚಲೇಬೇಕು ಸ್ವರ್ಗವಿ ನಮ್ಮಿ ಸಂಸಾರ 
ಗಂಡು : ನಮ್ಮೊಳಗೇ                ಹೆಣ್ಣು : ನಮ್ಮ ಎದೆಯೊಳಗೇ 
ಗಂಡು : ನಮ್ಮೊಳಗೇ  ನಮ್ಮ ಎದೆಯೊಳಗೇ ಅಹ್ ಸಾವಿರ ಕನಸು ಇದೇ 
ಹೆಣ್ಣು : ಕನಸೊಳಗೇ ಪ್ರತಿ ಮನಸೊಳಗೇ ಅಹ್ ನಿರ್ಮಲ ಪ್ರೇಮವಿದೇ 
ಇಬ್ಬರು : ಅಣ್ಣ ನಮ್ಮ ಅಣ್ಣನೀವನು ನಮ್ಮ ದೇವನೂ 
             ಕೋಟಿ ಜನ್ಮ ಬಂದರೂನು ಕೋಟಿಗೊಬ್ಬನೂ 
ಕೋರಸ್ : ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್  ಕೋಯಿಲ್ 
                ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್ ಕೊಯಿಲಲ ಕೋಯಿಲ್  ಕೋಯಿಲ್ 
--------------------------------------------------------------------------------------------------------------------------

ಕೋಟಿಗೊಬ್ಬ (೨೦೦೧) - ಅರೇ .. ಥೈ ಥೈ  ತಂದನಾ ಈ ಎಂಟರೊಳಗೇ ಉಂಟು ನಮ್ಮ ಜೀವನ
ಸಂಗೀತ : ದೇವಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿ.ಬಿ


ಗಂಡು : ಏಕ್ ಹೀ ಚಾಂದ್ ಹೈ ರಾತ್ ಕೇ ಲಿಯೇ 
ಹೆಣ್ಣು : ಒಬ್ಬನೇ ಚಂದಿರ ರಾತ್ರಿಯ ವೇಳೆಗೇ 
ಗಂಡು : ಏಕ್ ಹೀ ಸೂರಜ್ ಹೈ ದೀನ್ ಕೇ ಲಿಯೇ 
ಹೆಣ್ಣು : ಒಬ್ಬನೇ ಸೂರ್ಯನು ಬೆಳಗುವ ನಾಳೆಗೇ 
ಗಂಡು : ಏಕ್ ಹೀ ಸಾಮ್ರಾಟ್ ಹೈ ಇಸ್ ಜಗ ಕೇ ಲಿಯೇ 
ಹೆಣ್ಣು : ಒಬ್ಬನೇ ದೊರೆಯು ಲೋಕಕೆಲ್ಲ  ... ಒಬ್ಬನೇ ದೊರೆಯು ಲೋಕಕೆಲ್ಲ  ... 
          ಒಬ್ಬನೇ ದೊರೆಯು ಲೋಕಕೆಲ್ಲ  
ಕೋರಸ್ : ರೇರೇ ರೇರೇ ರೇರೇ ರೇರೇ ರೇರೇ ರೇರೇ ರೇರೇ ರೇರೇ 
ಗಂಡು : ಅರೇ ಥೈ ಥೈ ತಂದನಾ ... ಈ ಎಂಟರೊಳಗೇ ಉಂಟೂ ನಮ್ಮ ಜೀವನ 
            ಅರೇ ಥೈ ಥೈ ತಂದನಾ ... ಈ ಎಂಟರೊಳಗೇ ಬೆಳಗಬೇಕು ಜೀವನ 
            ಎಂಟರ ಈ ನಂಟಿನಲ್ಲೇ ಜೀವನ..  ಎಂಟರ ಈ ಒಗಟಿನಲ್ಲೇ ಜೀವನ 
            ಒಮ್ಮೆ ಮನಸು ಕೊಟ್ಟು ಬಾಳಗುಟ್ಟು ಕೇಳಣ್ಣ  
            ಅರೇ ಥೈಥೈ  ಥೈ ತಂದನಾ ... ಈ ಎಂಟರೊಳಗೇ ಉಂಟೂ ನಮ್ಮ ಜೀವನ 
            ಅರೇ ಥೈಥೈ  ಥೈ ತಂದನಾ ... ಈ ಎಂಟರೊಳಗೇ ಬೆಳಗಬೇಕು ಜೀವನ 

ಗಂಡು : ಮೊದಲ ಎಂಟು ಹುಡುಗಾಟದ ಮೋಡಿ ಅಲ್ಲ 
            ಎರಡನೆಯ ಎಂಟು ವಿದ್ಯೆ ಕಲಿಯೂ ಗರಡಿ ಅಲ್ಲ..  ಹೇಹೇಹೇಹೇ ... 
            ಮೊದಲ ಎಂಟು ಹುಡುಗಾಟದ ಮೋಡಿ ಅಲ್ಲ 
           ಎರಡನೆಯ ಎಂಟು ವಿದ್ಯೆ ಕಲಿಯೇ ಗರಡಿ ಅಲ್ಲ 
           ಮೂರನೆಯ ಎಂಟು ಮದುವೇ ಎಂಬ ಜೋಡಿಯಲ್ಲ 
           ಅರೇ ನಾಲ್ಕನೇ ಎಂಟು ಮಗುವ ಹೆರಲು ಮುನ್ನಡಿಯಲ್ಲ 
          ಎಂಟು ಎಂಟರಂತೆ ಬದುಕು ಬಿಡಿಸಿಕೋ 
          ಎಂಟು ಎಂಟರಂತೆ ಬದುಕು ಬಿಡಿಸಿಕೋ 
          ನೀನ್ಯಾವ ಎಂಟರಲ್ಲಿ ಇರುವೇ ತಿಳಿದಿಕೋ 
          ಅರೇ ಥೈ ಥೈ ತಂದನಾ ... ಈ ಎಂಟರೊಳಗೇ ಉಂಟು ನಮ್ಮ ಜೀವನ 
          ಅಹ್ ಆಆಆ ಥೈ ಥೈ ತಂದನಾ ... ಈ ಎಂಟರೊಳಗೇ ಬೆಳಗಬೇಕು ಜೀವನ 

ಕೋರಸ್ : ರೇರೇ ರೇರೇ ರೇರೇ ರೇರೇ ರೇರೇ ರೇರೇ ರೇರೇ ರೇರೇ 
                ರೇರೇ ರೇರೇ ರೇರೇ ರೇರೇ ರೇರೇ ರೇರೇ ರೇರೇ ರೇರೇ 
ಗಂಡು : ಐದನೇ ಎಂಟು ಐಶ್ವರ್ಯದ ಸಂಗಮವಲ್ಲ 
           ಆರನೇ ಎಂಟು ವಿಶ್ವ ಸುತ್ತೋ ಸಂಭ್ರಮವಲ್ಲ ... 
           ಆಹಾ ಆಹಾ ಒಹೋ ಒಹೋ ಹೇಹೇಹೇಹೇ 
           ಐದನೇ ಎಂಟು ಐಶ್ವರ್ಯದ ಸಂಗಮವಲ್ಲ 
          ಆರನೇ ಎಂಟು ವಿಶ್ವ ಸುತ್ತೋ ಸಂಭ್ರಮವಲ್ಲ 
         ಏಳನೇ ಎಂಟು ವಿಶ್ರಾಂತಿಯ ಆಗಮವಲ್ಲ 
         ಆ ಎಂಟನೆಯ ಎಂಟು ನೆಮ್ಮದಿಯ ನಿರ್ಗಮವಲ್ಲ 
         ಎಂಟು ಎಂಟರಂತೆ ಬದುಕು ಬರೆದುಕೋ 
         ಹೇ..ಎಂಟು ಎಂಟರಂತೆ ಬದುಕು ಬರೆದುಕೋ 
         ನೀನ್ಯಾವ ಎಂಟರಲ್ಲಿ ಇರುವೇ ತಿಳಿದಿಕೋ 
         ಅರೇ ಥೈ ಥೈ ತಂದನಾ ... ಈ ಎಂಟರೊಳಗೇ ಉಂಟು ನಮ್ಮ ಜೀವನ 
         ಅಹ್ ಆಆಆ ಥೈ ಥೈ ತಂದನಾ ... ಈ ಎಂಟರೊಳಗೇ ಬೆಳಗಬೇಕು ಜೀವನ 
         ಎಂಟರ ಈ ನಂಟಿನಲ್ಲೇ ಜೀವನ..  ಎಂಟರ ಈ ಒಗಟಿನಲ್ಲೇ ಜೀವನ 
         ಒಮ್ಮೆ ಮನಸು ಕೊಟ್ಟು ಬಾಳಗುಟ್ಟು ಕೇಳಣ್ಣ  
ಕೋರಸ್ :  ಅರೇ ಥೈಥೈ  ಥೈ ತಂದನಾ ... ಈ ಎಂಟರೊಳಗೇ ಉಂಟೂ ನಮ್ಮ ಜೀವನ 
                 ಅರೇ ಥೈಥೈ  ಥೈ ತಂದನಾ ... ಈ ಎಂಟರೊಳಗೇ ಬೆಳಗಬೇಕು ಜೀವನ 
--------------------------------------------------------------------------------------------------------------------------

No comments:

Post a Comment