831. ಪ್ರೇಮಕ್ಕೆ ಸೈ (೨೦೦೧)

ಪ್ರೇಮಕ್ಕೆ ಸೈ ಚಿತ್ರದ ಹಾಡುಗಳು 
  1. ಸಂತೋಷ ಸಂಭ್ರಮವೇ ನಮ್ಮಿ ಸಂಗೀತ 
  2. ಅಂದಾ ನಿನ್ನ ಹೆಸರಾ ಆನಂದ ನಿನ್ನೂರಾ 
  3. ಪ್ರೇಮದ ಲೋಕದ ಕಿನ್ನರರೇ ಹೇಳೇ ಪ್ರೇಮಕ್ಕೆ ಸೈ 
  4. ಒಲವು ಶುರುವಾಯ್ತು ಒಲವೇ ಗುರುವಾಯ್ತು 
  5. ಮುಂಜಾನೆಯ ನಗುವಿಂದಲೇ 
  6. ಚಮಕು ಚಮಕು ಅಂತ ಕೈ ಕೈ ಹಿಡಿಯೋ 
  7. ಚಂಚಲ ಚಂಚಲ ಚಂಚಲ 
  8. ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ 
ಪ್ರೇಮಕ್ಕೆ ಸೈ (೨೦೦೧) - ಸಂತೋಷ ಸಂಭ್ರಮವೇ ನಮ್ಮೀ ಸಂಗೀತ
ಸಂಗೀತ : ಮಣಿಶರ್ಮಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್ಪಿಬಿ.

ಸಂತೋಷ ಸಂಭ್ರಮವೇ ನಮ್ಮೀ ಸಂಗೀತ
ಈ ಸಂಗೀತ ನಿನ್ನೆದೆಯಾ ತುಂಬಲಿ ಹಾಯಂತ
ನಗುವೇ ಸ್ವರ್ಗಾನಮ್ಮಾ ನಗುವೇ ಮಾರ್ಗಾನಮ್ಮಾ
ನಗುವೇ ಅಮ್ಮಾನಮ್ಮಾ ನಗುವೇ ಜನ್ಮಾನಮ್ಮಾ
ಓಹೊ ಓಹೊ ಓಹೊ ಓಹೊಹೊಹೋ
ಸಂತೋಷ ಸಂಭ್ರಮವೇ ನಮ್ಮೀ ಸಂಗೀತ
ಈ ಸಂಗೀತ ನಿನ್ನೆದೆಯಾ ತುಂಬಲಿ ಹಾಯಂತ
ನಗುವೇ ಸ್ವರ್ಗಾನಮ್ಮಾ ನಗುವೇ ಮಾರ್ಗಾನಮ್ಮಾ
ನಗುವೇ ಅಮ್ಮಾನಮ್ಮಾ ನಗುವೇ ಜನ್ಮಾನಮ್ಮಾ
ಓಹೊ ಓಹೊ ಓಹೊ ಓಹೊಹೊಹೋ

ನೆನ್ನೆಯ ನೆನಪುಗಳೇ ಕಣ್ ರೆಪ್ಪೆಯ ಮುಚ್ಚಿದರೆ
ನಾಳೆಯ ಕನಸುಗಳಾ ದಾರಿ ಕಾಣದಮ್ಮಾ
ಕಳೆಯಾ ವಿಷಯಗಳೇ ಪ್ರತಿ ನಿಮಿಷ ಹೆಚ್ಚಿದರೆ
ಹೊಸ ಗಾಳಿಗಳಲ್ಲಿ ಬೆಳಕು ಕಾಣದಮ್ಮಾ..
ಯಾವ ಕ್ಷಷ್ಟ ಬಂದರೇನು ಕಣ್ಣೀರಿನಿಂದ ಅದನು
ಕಾಲು ತೊಳೆದು ಕರೆಯಬಾರದು
ಹೂವು ತರ ಒಂದು ನಗುವಿದ್ದರಾಯಿತು
ಕಷ್ಟ ಒಂದು ಮಗುವಂಥದು
ಹುಣ್ಣಿಮೆ ಚಂದ್ರನ ತುಂಬಿದ ನಗುವೇ ಭೂಮಿಗೆ ಲಾಂದ್ರ ಕಣೆ
ಆ ಪ್ರೀತಿಯ ಬೆಳಕಿನ ಒಂದೇ ಕತ್ತಲು ವಿಲವಿಲ ಅಲ್ಲವೇನೆ..
ನಗುವೇ ಸ್ವರ್ಗಾನಮ್ಮಾ ನಗುವೇ ಮಾರ್ಗಾನಮ್ಮಾ
ನಗುವೇ ಅಮ್ಮಾನಮ್ಮಾ ನಗುವೇ ಜನ್ಮಾನಮ್ಮಾ
ಓಹೊ ಓಹೊ ಓಹೊ ಓಹೊಹೊಹೋ

ಆಸೆಯೂ ಹೆಚ್ಚಿದರೂ ನಿರಾಸೆಯ ಹಂಚಿದರೂ
ದಿನ ನಡೆಯೋ ಜೀವನ ಕ್ಷಣ ಕೂಡ ನಿಲ್ಲದಮ್ಮಾ
ಹೃದಯವೇ ತುಂಬಿರಲಿ ಹಸಿವಿನಿಂದ ಅಳುತಿರಲಿ
ಈ ಬದುಕಿನ ಏರಿಳಿತ ತನ್ನಿಷ್ಟಕ್ಕೆ ತಾನಮ್ಮಾ
ನಿನ್ನೆ ರಾತ್ರಿ ಕನಸನು ಇಂದು ರಾತ್ರಿ ನೆನೆದು ನಿದಿರೆಯ ಮರೀಬಹುದೇ
ಎಷ್ಟು ಒಳ್ಳೆ ಕನಸಿದ್ದರೇನಾಯ್ತು ಹೇಳು ಅಲ್ಲೇ ಇದ್ದು ಬಿಡಬಹುದೇ
ಕನಸುಗಳೆಂದು ಕನಸೇನಮ್ಮಾ ತಿಳಿಯೇ ಸೇಸಮ್ಮಾ
ಈ ತಲೆಯಾ ಭಾರವಾ ಕಾಲಲಿ ಹೊಸಕಿ ಹೃದಯವ ನಗಿಸಮ್ಮಾ
ನಿನ್ನ ಕಣ್ಣಂಚಲಿ ನಗೆಯೇ ಐಶ್ವರ್ಯವು
ದಿನವೂ ಹರಿದಾಡಲಿ ಜಗವೇ ಸೌಂದರ್ಯವು
ಓಹೊ ಓಹೊ ಓಹೊ ಓಹೊಹೊಹೋ
ಸಂತೋಷ ಸಂಭ್ರಮವೇ ನಮ್ಮ ಸಂಗೀತ
ಈ ಸಂಗೀತ ಸಾಗಲಿ ಹಾಯಂತ...
-------------------------------------------------------------------------------------------------------------------------

ಪ್ರೇಮಕ್ಕೆ ಸೈ (೨೦೦೧) - ಅಂದಾ ನಿನ್ನ ಹೆಸರಾ ಆನಂದ ನಿನ್ನೂರಾ
ಸಂಗೀತ : ಮಣಿಶರ್ಮಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಉದಿತನಾರಾಯಣ, ನೇಹಾ

ಗಂಡು : ಅಂದಾ ನಿನ್ನ ಹೆಸರಾ ಆನಂದ ನಿನ್ನೂರಾ
           ನೀಲಾದ್ರಿ ಗಿರಿಬಾಲೇ ಸಹ್ಯಾದ್ರಿ ಸಾಲೋಳೆ 
           ನಿನ್ನ ಪ್ರೇಮಿ ನಾನೇ ಓ..ಮೈನಾ 
           ಅಂದಾ ನಿನ್ನ ಹೆಸರಾ ಆನಂದ ನಿನ್ನೂರಾ 
           ಈ ನಮ್ಮಾ ಸಮ್ಮಿಲಿನಾ ತಂತಂದು ಸಂಚಲನಾ 

ಹೆಣ್ಣು : ಕಾಮನ ಕಥೆ ಕಲಿಸಿ ಕೊಟ್ಟೋನೇ 
          ಕಾಮನ ಕಥೆ ಕಲಿಸಿ ಕೊಟ್ಟೋನೇ ಪ್ರಾಯದ ಲೋಕಕ್ಕೆ 
ಗಂಡು : ಬೃಹ್ಮದೇವನು ಬೇಸ್ತು ಬಿದ್ದನು ನಿನ್ನ ಚೆಂದಕೆ 
ಹೆಣ್ಣು : ಅಚ್ಚು ಮೆಚ್ಚಿನಾ ಆಹ್ ಈ ಅಚ್ಚು ಬೆಲ್ಲ ಜಾರಿ ಬಿದ್ದಿತು ಪ್ರಿಯ ಪ್ರಿಯ 
ಗಂಡು : ಕಚ್ಚಿ ತಿನ್ನಲಾ ಒಹೋ ಇದೇನೂ ಗಲ್ಲ ನನ್ನದಾಯಿತು ಪ್ರಿಯೇ 
           ಒಲವೆನ್ನೋದೊಂದು ಮಧುರ ಕಲೆ 
           ಅಂದಾ ನಿನ್ನ ಹೆಸರಾ ಆನಂದ ನಿನ್ನೂರಾ 
          ನೀಲಾದ್ರಿ ಗಿರಿಬಾಲೇ ಸಹ್ಯಾದ್ರಿ ಸಾಲೋಳೆ 
          ನಿನ್ನ ಪ್ರೇಮಿ ನಾನೇ ಓ..ಮೈನಾ 

ಗಂಡು : ಪ್ರೀತಿ ಒಪ್ಪಿಗೆ ನೀಡು ಎನ್ನಲೇ 
            ಪ್ರೀತಿ ಒಪ್ಪಿಗೆ ನೀಡು ಎನ್ನಲೇ ಚುಂಬನ ಶಾಸ್ತ್ರನಾ 
ಹೆಣ್ಣು : ಮೈಯ ಮುಟ್ಟುತಾ ನೀನು ಬೀಸಿದೆ ಕಂಪನ ಅಸ್ತ್ರಾನ 
ಗಂಡು : ರೋಮ ರೋಮಕೂ ಸಖಿ ತಂದಿಟ್ಟೆಯಲ್ಲೇ 
           ಸುಖ ಹೀರುವ ಗುಣ ಗುಣ 
ಹೆಣ್ಣು : ಮುತ್ತ ಮುತ್ತಲೇ ಸುಖ ಮುತ್ತಿಗೆ ಇಟ್ಟು ಚಿಟ್ಟು ಆಗಿದೆ ಮನ 
         ಅನುಭಾವ ಏನೋ ಮೃದು ಮಧುರ 
ಗಂಡು : ಅಂದಾ ನಿನ್ನ ಹೆಸರಾ         ಹೆಣ್ಣು : ಆನಂದ ನಿನ್ನೂರಾ 
ಗಂಡು : ವಯಸು ಹದಿನಾರಾ          ಹೆಣ್ಣು : ಹೌದೌದೋ ರಣಧೀರ 
ಗಂಡು : ನೀನೊಂದು ಸ್ವರಮಾಲೆ     ಹೆಣ್ಣು : ಶೃಂಗಾರ ನಿನ ಶಾಲೇ 
ಗಂಡು : ನಿನ ಪ್ರೇಮಿ ನಾನೇ ಓ...ಮೈನಾ 
 -------------------------------------------------------------------------------------------------------------------------

ಪ್ರೇಮಕ್ಕೆ ಸೈ (೨೦೦೧) - ಪ್ರೇಮದ ಲೋಕದ ಕಿನ್ನರರೇ ಹೇಳಿ
ಸಂಗೀತ : ಮಣಿಶರ್ಮಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಕೃಷ್ಣಕುಮಾರ

ಪ್ರೇಮದ ಲೋಕದ ಕಿನ್ನರರೇ ಹೇಳಿ ಪ್ರೇಮಕ್ಕೆ ಸೈ 
ಹೃದಯದ ದೋಚುವ ಸೋದರರೇ ಹಾಡಿ ಪ್ರಾಯಕ್ಕೆ ಸೈ 
ಕಾಲಕ್ಕೆ ತಕ್ಕ ಹಾಗೇ ಕನಸುಗಳು ಬದಲಾಯ್ತು 
ಅಂತಸ್ತಿಗೆ ತಕ್ಕ ಹಾಗೇ ಅನುರಾಗವು ಬದಲಾಯ್ತು 
ಮನಸನು ಗುರುತಿಸಿ ಪ್ರೀತಿ ಮಾಡೋ ಯಾವತ್ತು ಸೈ ಸೈ 
ಓಓಓಓ .. ಇದು ಟ್ವೆಂಟಿ ಫಸ್ಟ್ ಸೆಂಚುರಿ ಓಓಓಓ .. ಅಯ್ಯೋ ಹುಡುಗಿರಾ ರಾಬರಿ 
ಪ್ರೇಮದ ಲೋಕದ ಕಿನ್ನರರೇ ಹೇಳಿ ಪ್ರೇಮಕ್ಕೆ ಸೈ 
ಹೃದಯದ ದೋಚುವ ಸೋದರರೇ ಹಾಡಿ ಪ್ರಾಯಕ್ಕೆ ಸೈ 

 ಓಓಓಓಓಓಓ  ಓಓಓಓಓಓಓ  ಓಓಓಓಓಓಓ
ಇಂಗ್ಲಿಷ್ ಶೋಕಿಗಳೂ ಇದ್ದರೇ ನೀನೇ ಕಿಂಗೂ 
ಕಾರ್ ಬಾರು ಸೆಲ್ಯೂ ಲಾರು ಕಂಡರೇ ಡಿಂಗುಡಾಂಗೂ 
ನೋಟಿಗೆ ನೋಟು ಪ್ರಿಂಟ್ ಹಾಕು ಲಗ್ನಪತ್ರಿಕೆಯ ಪ್ರಿಂಟು 
ಯಾರಿಗೆ ತಾನೇ ಬೇಕಯ್ಯ ಬೃಹ್ಮ ಹಾಕಿದ ಗಂಟು 
ಓಓಓಓಓ ಇದು ಮಾಯಾ ಲೋಕವೋ ಓಓಓಓಓ ಇಲ್ಲಿ ಪ್ರೀತಿಯೇ ಮಾಯವೋ
ಓಓಓಓಓ ಇದು ಭೃಮೆಯಾ ಲೋಕವೋ ಓಓಓಓಓ ನಿನ ಬುದ್ದಿಯು  ಭದ್ರವೋ 
ಪ್ರೇಮದ ಲೋಕದ ಕಿನ್ನರರೇ ಹೇಳಿ ಪ್ರೇಮಕ್ಕೆ ಸೈ 
ಹೃದಯದ ದೋಚುವ ಸೋದರರೇ ಹಾಡಿ ಪ್ರಾಯಕ್ಕೆ ಸೈ 

 ಓಓಓಓಓಓಓ  ಓಓಓಓಓಓಓ  ಓಓಓಓಓಓಓ 
ಗ್ರಿಟಿಂಗೂ ಮೀಟಿಂಗೂಗಳು ಪ್ರೀತಿಯ ಬೆಳೆಸೋದಿಲ್ಲ 
ಡ್ರೆಸ್ ಗಳು ಅಡ್ರೆಸ್ಸ್ ಗಳು ನಂಬಿಕೆ ಉಳಿಸೋದಿಲ್ಲಾ 
ಹೃದಯದ ಮೇಲೆ ಹೃದಯಾನ ಬೆಸುಗೆ ಹಾಕುವುದೇ ಪ್ರೀತಿ 
ಭಾವನೆಗಳಿಗೆ ತಲೆಬಾಗಿ ಬದುಕು ಬರೆಯುವುದೇ ಪ್ರೀತಿ 
ಓಓಓಓಓ ಗುರಿ ಮುಟ್ಟೋ ಮನಸಿಡು ಓಓಓಓಓ ಕೈಗೆ ಸಿಗುವಾ ಕನಸಿಡು 
ಓಓಓಓಓ ಆಂತರ್ಯ ತೆರೆದಿಡು ಓಓಓಓಓ ಸೌಂದರ್ಯ ಸವಿದಿಡು 
ಪ್ರೇಮದ ಲೋಕದ ಕಿನ್ನರರೇ ಹೇಳಿ ಪ್ರೇಮಕ್ಕೆ ಸೈ 
ಹೃದಯದ ದೋಚುವ ಸೋದರರೇ ಹಾಡಿ ಪ್ರಾಯಕ್ಕೆ ಸೈ 
ಕಾಲಕ್ಕೆ ತಕ್ಕ ಹಾಗೇ ಕನಸುಗಳು ಬದಲಾಯ್ತು 
ಅಂತಸ್ತಿಗೆ ತಕ್ಕ ಹಾಗೇ ಅನುರಾಗವು ಬದಲಾಯ್ತು 
ಮನಸನು ಗುರುತಿಸಿ ಪ್ರೀತಿ ಮಾಡೋ ಯಾವತ್ತು ಸೈ ಸೈ 
ಓಓಓಓ .. ಇದು ಟ್ವೆಂಟಿ ಫಸ್ಟ್ ಸೆಂಚುರಿ ಓಓಓಓ .. ಅಯ್ಯೋ ಹುಡುಗಿರಾ ರಾಬರಿ 
ಓಓಓಓಓ ಬರಿ ಪುರಾಣ ಬಿಡುಮರಿ ಓಓಓಓಓ ಹುಡುಗೀರೂ ಚುರಮುರಿ 
-------------------------------------------------------------------------------------------------------------------------

ಪ್ರೇಮಕ್ಕೆ ಸೈ (೨೦೦೧) - ಒಲವೇ ಶುರುವಾಯ್ತು ಒಲವೇ ಗುರುವಾಯ್ತು
ಸಂಗೀತ : ಮಣಿಶರ್ಮಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಹರಿಹರನ್,  ಚಿತ್ರಾ 

ಗಂಡು : ಒಲವೇ ಶುರುವಾಯ್ತು ಒಲವೇ ಗುರುವಾಯ್ತು ಒಲುಮೆ ಗುರಿಯಾಯ್ತು .. ಓ ಓ ಓ...
ಹೆಣ್ಣು : ಒಲುಮೆ ವರವಾಯ್ತು ಹಲವು ತರವಾಯ್ತು ನಲಿವೂ ಸ್ಥಿರವಾಯ್ತು ಓಓ...
ಗಂಡು : ಒಲವೇ ಶುರುವಾಯ್ತು ಒಲವೇ ಗುರುವಾಯ್ತು ಒಲುಮೆ ಗುರಿಯಾಯ್ತು .. ಓ ಓ ಓ...

ಗಂಡು : ಕಣ್ಣಿನ ಕೋಟೆಯ ದಾಟಿ ಒಳ ಬಂತು ಪ್ರೇಮವೂ
           ಹೃದಯದ ಗದ್ದುಗೆಯಲ್ಲಿ ಪಟ್ಟಾಭಿಷೇಕವೂ
ಹೆಣ್ಣು : ಮನಸಿನ ಅಂತಃಪುರವ ಆಕ್ರಮಿಸಿ ಪ್ರೇಮವೂ
          ಕನಸಿನ ಸಭೆಗಳ ಮೇಲೆ ಸರ್ವಾಧಿಕಾರವೂ
ಗಂಡು : ಆದ ನಿತ್ಯ ನಡೆಸೋ ರಾಣಿಗೆ ಪ್ರತಿ ನಿತ್ಯ ಬಳಿಗೆ ಬರುವೇ ನಾ
ಹೆಣ್ಣು : ದಾಂಪತ್ಯ ಕಲಿಸೋ ರಾಜನೇ ದಿನ ನಿತ್ಯ ದೂರವಿರುವೇ ನಾ

ಹೆಣ್ಣು :  ಮಚ್ಚೆ ಕಣ್ಣಿನ ಇನಿಯ ಓ ಪ್ರೇಮದ ನೇಕಾರ
          ಪ್ರೇಮಕೆ ರೂಪವ ನೀಡೋ ಓ ಭಾರಿ ಕಲೆಗಾರ
ಗಂಡು : ಮೆಚ್ಚುಗೆ ಮಾತುಗಳೆಕೇ  ಬಾ ಸುಮ್ಮನೇ ಪ್ರಿತಿಸೂ
            ಪ್ರೇಮ ಎಂದರೇ ಧ್ಯಾನ ಬಾ ಮೌನದೇ ಧ್ಯಾನಿಸೂ
ಹೆಣ್ಣು : ಕಣ್ಣಲ್ಲಿ ತುಂಬಿದೆ ಮುಖ ದೂರದಲಿ ಇರುವುದೇ ಸುಖ
ಗಂಡು : ಧರೆಗಿಳಿದ ಸ್ವಪ್ನ ಸುಂದರಿ ಬಳಿ ಬಾರೇ ನನ್ನ ಶಾಯರೀ.......
ಗಂಡು : ಒಲವೇ ಶುರುವಾಯ್ತು ಒಲವೇ ಗುರುವಾಯ್ತು ಒಲುಮೆ ಗುರಿಯಾಯ್ತು .. ಓ ಓ ಓ...
ಹೆಣ್ಣು : ಒಲುಮೆ ವರವಾಯ್ತು (ತರರ ) ಹಲವು ತರವಾಯ್ತು (ತರರ ) ನಲಿವೂ ಸ್ಥಿರವಾಯ್ತು ಓಓ...
          ತುರುರೂರು (ತುರುರೂರು) ತುರುರೂರು (ತುರುರೂರು ) ತುರುರೂರು
 -------------------------------------------------------------------------------------------------------------------------

ಪ್ರೇಮಕ್ಕೆ ಸೈ (೨೦೦೧) - ಮುಂಜಾನೆಯು ನಗುವಿಂದಲೇ
ಸಂಗೀತ : ಮಣಿಶರ್ಮಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ. 

ಮುಂಜಾನೆಯು ನಗುವಿಂದಲೇ ಮುಸ್ಸಂಜೆಯು ನಗುವಿಂದಲೇ
ಚಿರ ಯೌವ್ವನ ನಗುವಿಂದಲೇ ಸವಿ ಜೀವನ ನಗುವಿಂದಲೇ

ರೂರುರು ರೂರುರು ರೂರುರು ರೂರುರು
ಪ್ರತಿ ಸ್ಪರ್ಶವು ಪ್ರತಿ ಹರ್ಷವೂ ಪ್ರತಿಯೊಬ್ಬರ ನಗುವಿಂದಲೇ
ಪ್ರತಿ ಕಲ್ಪನೇ ಪ್ರತಿ ಯೋಚನೆ ಪ್ರತಿ ಮನಸಿನ ನಗುವಿಂದಲೇ

ರೂರುರು ರೂರುರು ರೂರುರು ರೂರುರು
ಪ್ರತಿ ಹಗಲು ಅರಳಲಿ ಪ್ರತಿ ನಗುವಿನಿಂದ
ಪ್ರತಿ ದಿನವೂ ಉರಳಲಿ ಪ್ರತಿ ನಗುವಿನಿಂದ
ಪ್ರತಿ ಇರುಳೂ ತೆರಳಲಿ ಪ್ರತಿ ನಗುವಿನಿಂದ ಯಾ...ಅಹ್ಹಹ್
 ಪ್ರತಿ ನಗುವಿನಿಂದ ... ಪ್ರತಿ ನಗುವಿನಿಂದ ...
-------------------------------------------------------------------------------------------------------------------------

ಪ್ರೇಮಕ್ಕೆ ಸೈ (೨೦೦೧) - ಚಮ್ಮಕು ಚಮ್ಮಕು ಅಂತ
ಸಂಗೀತ : ಮಣಿಶರ್ಮಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಎಸ್.ಪಿ.ಬಿ.  ಮಹಾಲಕ್ಷ್ಮಿ 

ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
ಗಂಡು : ಚಮಕ್ಕೂ ಚಮಕ್ಕೂ  ಅಂತ ಕೈ ಕೈ ಹಿಡಿಯೋ ಮೊದಲ ಪ್ರೇಮಕೇ ಸೈ ಸೈ
ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
ಗಂಡು :  ಚಮಕ್ಕೂ ಚಮಕ್ಕೂ  ಅಂತ ಕೈ ಕೈ ಹಿಡಿಯೋ ಮೊದಲ ಪ್ರೇಮಕೇ  ಸೈ ಸೈ
ಹೆಣ್ಣು :  ಝಣಕ್ಕೂ ಝಣಕ್ಕೂ ಅಂತ ಡಿಂಡಿಮ ಬಡಿಯೋ ಯುಗಳ ಪ್ರೇಮಕೇ ಸೈ ಸೈ
ಗಂಡು : ನನಗೂ ನಿನಗೂ ಮುತ್ತುಗಳಾ ಅರ್ಚನೆ
ಹೆಣ್ಣು :  ನಡುವೆ ನಡುವೆ ಅಪ್ಪುಗೆಯಾ ಸೋಬಾನೆ
ಗಂಡು : ಮೈದೂರಿ  ನಮಗೆ ಮೈಸೂರ ಅರಮನೆ
ಹೆಣ್ಣು :  ಮನಸೇ ಅಲ್ಲಿ ಆ ಒಡೆಯರ ಹಸೆಮಣೆ
ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
ಗಂಡು :   ಚಮಕ್ಕೂ ಚಮಕ್ಕೂ  ಅಂತ ಕೈ ಕೈ ಹಿಡಿಯೋ ಮೊದಲ ಪ್ರೇಮಕೇ  ಸೈ ಸೈ
ಹೆಣ್ಣು :  ಝಣಕ್ಕೂ ಝಣಕ್ಕೂ ಅಂತ ಡಿಂಡಿಮ ಬಡಿಯೋ ಯುಗಳ ಪ್ರೇಮಕೇ ಸೈ ಸೈ

ಗಂಡು : ಹುಡುಗಿ ನೋಡು ಬಲು ಸಿಂಪಲ್ಲೂ ಅಂದವೋ ಮೀರಾಕಲ್ಲು 
            ಹೆಚ್ಚು ಕಡಿಮೆ ಇವಳು ಸಿಂಡ್ರೆಲಾ ...... 
ಹೆಣ್ಣು : ಹುಡುಗ ನನ್ನದೆಯ ಟೆಂಪಲೂ ಹೃದಯವದು ಸ್ಯಾಂಡಲ್ಲು 
           ಜಗಕೆ ಇವನ ಲವ್ವೆ ಫಾರ್ಮುಲಾ 
ಗಂಡು : ನೋಬೆಲ್ಲಾಗಲೀ ಆಸ್ಕರಾಗಲಿ ಇವಳ ಮುಂದೆ ಎಷ್ಟು 
ಹೆಣ್ಣು : ಅಪ್ಪ ತಡಿಯಲಿ ಅಮ್ಮ ತಡಿಯಲಿ ಪ್ರೀತಿಯೊಂದೇ ನಮ್ಮ ಎವರೆಷ್ಟು 
ಗಂಡು : ಬರೆಯೋ ಹಾಗೇ ಬದುಕೋದೇ ಲಕ್ಷಣ 
ಹೆಣ್ಣು : ಬದುಕೋ ಹಾಗೇ ಪ್ರೀತಿಸುವುದೇ ನಮ್ಮ ಲಕ್ಷಣ 
ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
ಗಂಡು :   ಚಮಕ್ಕೂ ಚಮಕ್ಕೂ  ಅಂತ ಕೈ ಕೈ ಹಿಡಿಯೋ ಮೊದಲ ಪ್ರೇಮಕೇ  ಸೈ ಸೈ

ಹೆಣ್ಣು :  ಝಣಕ್ಕೂ ಝಣಕ್ಕೂ ಅಂತ ಡಿಂಡಿಮ ಬಡಿಯೋ ಯುಗಳ ಪ್ರೇಮಕೇ ಸೈ ಸೈ

ಹೆಣ್ಣು : ಚೆಲುವ ನಿನ್ನೆದೆಯ ಪ್ರತಿ ಕನಸು ನಯಾಗರದ ಸಿಹಿ ಫಾಲ್ಸು 
          ಮಾಯಾ ಪ್ರೇಮಲೋಕ ನಮಗಿದು 
ಗಂಡು : ಚೆಲುವೇ ಪ್ರೀತಿಯ ರೂಪು ಪ್ರತಿ ಸಂಜೆಯ ಯುರೋಪೂ 
           ಯುಗಳ ಗೀತೆಗಳಿಗೆ ಯುಗವಿದೂ 
ಹೆಣ್ಣು : ವಯಸು ಎನ್ನುವ ಚೈನಾ ಗೇಟನೂ ದಾಟಿ ನಿಂತಿತು  ಅಂದ 
ಗಂಡು : ಹೃದಯ ಹೃದಯಕೆ ಹೌರಾ ಬ್ರಿಡ್ಜ್ಯನೂ ಕಟ್ಟಿ ಕುಂತಿದೆ ಆನಂದ 
ಹೆಣ್ಣು : ಜಗವೇ ... ಜಗವೇ ... ಪ್ರೇಮಿಗಳಾ ಆಸ್ತಿಯೂ 
ಗಂಡು : ಪ್ರೀತಿಸೋ ಮನಸೇ ನಮ್ಮ ಕನ್ನಡ ಕವಿಗಳ ಸ್ಫೂರ್ತಿಯೂ 
ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
ಗಂಡು :   ಚಮಕ್ಕೂ ಚಮಕ್ಕೂ  ಅಂತ ಕೈ ಕೈ ಹಿಡಿಯೋ ಮೊದಲ ಪ್ರೇಮಕೇ  ಸೈ ಸೈ
ಹೆಣ್ಣು :  ಝಣಕ್ಕೂ ಝಣಕ್ಕೂ ಅಂತ ಡಿಂಡಿಮ ಬಡಿಯೋ ಯುಗಳ ಪ್ರೇಮಕೇ ಸೈ ಸೈ
ಗಂಡು : ನನಗೂ ನಿನಗೂ ಮುತ್ತುಗಳಾ ಅರ್ಚನೆ
ಹೆಣ್ಣು :  ನಡುವೆ ನಡುವೆ ಅಪ್ಪುಗೆಯಾ ಸೋಬಾನೆ
ಗಂಡು : ಮೈದೂರಿ  ನಮಗೆ ಮೈಸೂರ ಅರಮನೆ
ಹೆಣ್ಣು :  ಮನಸೇ ಅಲ್ಲಿ ಆ ಒಡೆಯರ ಹಸೆಮಣೆ
ಕೋರಸ್ : ಝಣಕ್ಕೂ ಝಣಕ್ಕೂ ತನ್ ಝಣಕ್ಕೂ ಝಣಕ್ಕೂ ತನ್
               ಝಣಕ್ಕೂ ಝಣಕ್ಕೂ ತನ್   ಝಣಕ್ಕೂ ಝಣಕ್ಕೂ ತನ್
-------------------------------------------------------------------------------------------------------------------------

ಪ್ರೇಮಕ್ಕೆ ಸೈ (೨೦೦೧) - ಚಂಚಲ ಚಂಚಲ ಚಂಚಲ 
ಸಂಗೀತ : ಮಣಿಶರ್ಮಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ಕೆ.ಮುರುಳೀಧರ, ನಂದಿತಾ 

ಗಂಡು : ಚಂಚಲ ಚಂಚಲ ಚಂಚಲ ನಿನ್ನ ಚಕ್ಕುಲಿ ಮನಸು ಚಂಚಲ
            ನಿನ್ನ ರವಿಕೆ ಅಂಚಲೇ ರತ್ನನ್ ಪದವಿದೆ
            ಝರಿ ನೆರಿಗೆ ಅಂಚಲಿ ಜೋಗದ ಜೋರಿದೇ
ಹೆಣ್ಣು : ಚಂಚಲ ಚಂಚಲ ಚಂಚಲ ನಿನ್ನ ಚೋರಿ ಚಲುವು ಚಂಚಲ
          ಹುರಿ ಮೀಸೆ ಅಂಚಲಿ ಚುಚ್ಚುವ ಮಿಂಚಿದೆ
          ಆ ಮಿಂಚಿನ ಒಳಗೆ ಸಾವಿರ ಸಂಚಿದೆ
ಗಂಡು : ರೆಪ್ಪೆಯೊಳಗೇ ಚಪ್ಪಾಳೆ     ಹೆಣ್ಣು : ಎದೆಯ ಒಳಗೇ ತಿಪ್ಪಾಲೇ
ಗಂಡು : ಕನಸಾ ಚುಕ್ಕಿ ಚುಕ್ಕಿಲೇ      ಹೆಣ್ಣು : ರೆಕ್ಕೆ ಬಿಚ್ಚಿ ರಂಗೋಲೆ... ಓಓಓಓಓ
ಗಂಡು : ಚಂಚಲ ಚಂಚಲ ಚಂಚಲ ನಿನ್ನ ಚಕ್ಕುಲಿ ಮನಸು ಚಂಚಲ
            ನಿನ್ನ ರವಿಕೆ ಅಂಚಲೇ ರತ್ನನ್ ಪದವಿದೆ
ಹೆಣ್ಣು :  ಹುರಿ ಮೀಸೆ ಅಂಚಲಿ ಚುಚ್ಚುವ ಮಿಂಚಿದೆ

ಗಂಡು : ಮುಂಜಾನೇಲಿ ಸೂರ್ಯನ ಚಳಿ ಆಗಿತ್ತು
          ಇಡೀ ರಾತ್ರೀಲಿ ಇಂಥಾ ಕಂಬಳಿ ಬೇಕಿತ್ತು
          ಹೊದಿಸೋಕೆ ನಾನ್ ಕೊಟ್ಟೇ ಊರೇ ನಕ್ಕಿತು
          ನಾನೇ ಆ ಸೂರ್ಯ ಕಾಂತಿ ಯಾರಿಗೇ ಗೊತ್ತಿತ್ತು
ಹೆಣ್ಣು : ಕವಿರಾಯ ಕವಿರಾಯ ಕಿವಿ ಹಿಂಡ್ತಿಯಾ
          ಆ ಸೂರ್ಯನ ಚಳಿ ನಾನೇ ಅಲ್ಲವೆನಯ್ಯಾ
ಗಂಡು : ಮಹಾರಾಯ್ತಿ ಸಾಕು ನಿಲ್ಲಿಸೇ ನಿನ್ನ ಪಂಚಾಯ್ತಿ
            ಪಂಚೆಗೂ ನೀನ್ ಸೀರೆಗೂ ಒಂದೇ ಅಂಚು ಗೆಳತೀ ಹೋ ....
ಹೆಣ್ಣು : ಚಂಚಲ ಚಂಚಲ ಚಂಚಲ ನಿನ್ನ ಚೋರಿ ಚಲುವು ಚಂಚಲ
          ಹುರಿ ಮೀಸೆ ಅಂಚಲಿ ಚುಚ್ಚುವ ಮಿಂಚಿದೆ
ಗಂಡು : ಆ.. ನಿನ್ನ ರವಿಕೆ ಅಂಚಲೇ ರತ್ನನ್ ಪದವಿದೆ 

ಹೆಣ್ಣು : ಮುಸ್ಸಂಜೆಯಲಿ ಚಂದ್ರಂಗ್ ಬಾಯಾರಿ ಹೋಗಿತ್ತು 
          ನೀ ಕುಡಿದಿಟ್ಟ ಒಸಿ ಮಜ್ಜಿಗೆ ಬೇಕಿತ್ತು 
          ಕುಡಿಸೋಕೆ ನಾನ್ ಹೋದ್ರೇ ಲೋಕವೇ ನಕ್ಕಿತು 
          ನಾನೇ ಆ ಚಂದ್ರ ಮಂಚ ಯಾರಿಗೇ ಗೊತ್ತಿತು   
ಗಂಡು : ರತಿರಾಣಿ ರತಿರಾಣಿ ಕಥೆ ಕಟ್ತಿಯಾ 
           ಆ ಚಂದ್ರನ ಹಸಿವೂ ನಾನೇ ಮರೆತು ಹೋದೆಯಾ 
ಹೆಣ್ಣು : ಮಹರಾಯ ಸಾಕ್ ಕಣಯ್ಯಾ ಕೈ ನೀಡಯ್ಯಾ 
          ನೀನ್ ಉಸಿರಾ ಏರಿಳಿದ್ದ ನಾನೇನಯ್ಯ 
ಗಂಡು : ಚಂಚಲ ಚಂಚಲ ಚಂಚಲ ನಿನ್ನ ಚಕ್ಕುಲಿ ಮನಸು ಚಂಚಲ
            ನಿನ್ನ ರವಿಕೆ ಅಂಚಲೇ ರತ್ನನ್ ಪದವಿದೆ
            ಝರಿ ನೆರಿಗೆ ಅಂಚಲಿ ಜೋಗದ ಜೋರಿದೇ
ಹೆಣ್ಣು : ಚಂಚಲ ಚಂಚಲ ಚಂಚಲ ನಿನ್ನ ಚೋರಿ ಚಲುವು ಚಂಚಲ
          ಹುರಿ ಮೀಸೆ ಅಂಚಲಿ ಚುಚ್ಚುವ ಮಿಂಚಿದೆ
          ಆ ಮಿಂಚಿನ ಒಳಗೆ ಸಾವಿರ ಸಂಚಿದೆ
ಗಂಡು : ರೆಪ್ಪೆಯೊಳಗೇ ಚಪ್ಪಾಳೆ     ಹೆಣ್ಣು : ಎದೆಯ ಒಳಗೇ ತಿಪ್ಪಾಲೇ
ಗಂಡು : ಕನಸಾ ಚುಕ್ಕಿ ಚುಕ್ಕಿಲೇ ಹೋಯ್     ಹೆಣ್ಣು : ರೆಕ್ಕೆ ಬಿಚ್ಚಿ ರಂಗೋಲೆ... ಓಯ್ ಓಯ್ ಓಯ್
-------------------------------------------------------------------------------------------------------------------------

ಪ್ರೇಮಕ್ಕೆ ಸೈ (೨೦೦೧) - ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ 
ಸಂಗೀತ : ಮಣಿಶರ್ಮಾ ಸಾಹಿತ್ಯ : ಕೆ.ಕಲ್ಯಾಣ ಗಾಯನ : ರಾಜೇಶ್ 

ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ ಯಾಕಯ್ಯ ತಾತನ ಕಾಲದ ಕಿಂದರಿ
ಕಾಲದ ಸ್ಪೀಡ್ ಗೇ ಬಾ ಮರಿ ಚೇಂಜ್ ಆಯ್ತು ರೋಮಾನ್ಸು ಅನ್ನೋ ರಾಬರಿ
ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ ಯಾಕಯ್ಯ ತಾತನ ಕಾಲದ ಕಿಂದರಿ
ಕಾಲದ ಸ್ಪೀಡ್ ಗೇ ಬಾ ಮರಿ ಚೇಂಜ್ ಆಯ್ತು ರೋಮಾನ್ಸು ಅನ್ನೋ ರಾಬರಿ
ಕಾರು ಬಾರು ಸೆಲ್ಯೂ ಲಾರು ಕಂಡಮೇಲೆ ನೀನ್ ಯಾರು ಗೀರು ಅನ್ನುತ್ತಾಳೋ
ಟಿಸ್ಸು ಪುಸ್ಸು ಇಂಗ್ಲೀಷು ಇದ್ರೆ ಸಾಕು ಕಿಸ್ಸು ಕೊಟ್ಟು ಬೀಳುತ್ತಾಳೋ
ಈ ನಮ್ಮ ಪ್ರೀತಿ ಪ್ರೇಮ  ಅಯ್ ಲವ್ ಯೂ ನಲ್ಲಿ  ಇಲ್ಲಮ್ಮ
ಹೃದಯಗಳ ಭಾವನೆ ಎಂದೂ ಗ್ರೀಟಿಂಗ್ ಕಾರ್ಡಲ್ ಇಲ್ಲಮ್ಮ....
ಜೂಜು ಜೂಜು ಜೂಜು ಜೂಜು ಜೂಜು ಜೂಜು ಜೂಜು
ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ ಯಾಕಯ್ಯ ತಾತನ ಕಾಲದ ಕಿಂದರಿ
ಕಾಲದ ಸ್ಪೀಡ್ ಗೇ ಬಾ ಮರಿ ಚೇಂಜ್ ಆಯ್ತು ರೋಮಾನ್ಸು ಅನ್ನೋ ರಾಬರಿ

ಮಾರ್ನಿಂಗ್ ಷೋ ಇವಿನಿಂಗ್ ಷೋ ದಿವಸಕ್ಕೊಮ್ಮೆ ನೀ ತೋರಿಸು 
ವೀಕ್ ಒಳಗೇ ಬಿಳ್ತಾರೇ ಅದೇ ಹುಡುಗೀರ್ ವೀಕನೆಸೂ 
ರೀಲ್ ಬಿಟ್ಟೂ ರಿಯಲ್ ಅಂತಾ ಹೀರೊ ತರಹ ಮಾತಾಡ್ಸು 
ತಕ್ಷಣವೇ ಸ್ಟಾರ್ಟು ಕಣೋ ಪ್ರೀತಿ ಬಿಸಿನೆಸ್ಸು 
ಕಾಗದ ಸೆಂಟಿಗೇ ಅಂಟಿಕೊಂಡ ಕೂಡಲೇ ಮಲ್ಲೆಯಾ ಹೂವೂ ಆಗದು 
ಎಂ.ಜಿ.ರೋಡು ಕೆ.ಜಿ.ರೋಡು ಬುದ್ಧಿಮೆತ್ತಿಕೊಂಡು ಸೆಂಟಿಮೆಂಟಲಾಗಬಾರದು 
ಜೂಜು ಜೂಜು ಜೂಜು ಜೂಜು ಜೂಜು ಜೂಜು ಜೂಜು
ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ ಯಾಕಯ್ಯ ತಾತನ ಕಾಲದ ಕಿಂದರಿ
ಕಾಲದ ಸ್ಪೀಡ್ ಗೇ ಬಾ ಮರಿ ಚೇಂಜ್ ಆಯ್ತು ರೋಮಾನ್ಸು ಅನ್ನೋ ರಾಬರಿ

ಪರ್ಸುಗಳೂ ತುಂಬಿದ್ರೆ ಪರ್ಸನಲ್ಲಾಗೆ ಸಿಕ್ತಾರೇ
ಪರ್ಸನಾಲ್ಟಿ ಡಲ್ ಇದ್ರೂ ದಿಲ್ಲು ಕೊಡ್ತಾರೇ 
ವಿರಹಗಳು ವಿರಸಗಳು ಎಲ್ಲಾ ದುಡ್ಡಿನ ಹಂಗಾಮ 
ಮುಂದುವರೆಯೋ ಈ ಏಜಲ್ಲಿ ಬೇಕಾ ಈ ಕರ್ಮಾ 
ಲವ್ವಿಗೂ ಲೈಫಿಗೂ ಕೂಗುವಷ್ಟೇ ಅಂತಾರಾ ಆಗದು ಒಂದು ಸೇರದೂ     
ಪ್ರಾಣವಾ ಹಿಂಡುವಾ ಅಮರ ಪ್ರೇಮ ಕಥೆಗಳು ಮತ್ತೇ ಮತ್ತೇ ಹೆಚ್ಚಿಸಬಾರದು 
ಜೂಜು ಜೂಜು ಜೂಜು ಜೂಜು ಜೂಜು ಜೂಜು ಜೂಜು
ಸೆಂಚುರಿ ಟ್ವೆಂಟಿ ಫಸ್ಟ್ ಸೆಂಚುರಿ ಯಾಕಯ್ಯ ತಾತನ ಕಾಲದ ಕಿಂದರಿ
ಕಾಲದ ಸ್ಪೀಡ್ ಗೇ ಬಾ ಮರಿ ಚೇಂಜ್ ಆಯ್ತು ರೋಮಾನ್ಸು ಅನ್ನೋ ರಾಬರಿ
-------------------------------------------------------------------------------------------------------------------------

No comments:

Post a Comment