835. ಗಾಜಿನ ಮನೆ (೧೯೯೯)



ಗಾಜಿನ ಮನೆ ಚಿತ್ರದ ಹಾಡುಗಳು
  1. ಗಾಜಿನ ಮನೆ ಇದು 
  2. ಬೇವು ಬೆಲ್ಲ ಹಂಚಿ ಕೊಂಡರೆ 
  3. ಶುಭ ಶುಭ ಶಕುನದ 
  4. ದುರ್ಗೆಯಂ ಕಾಲಿನ ಗೆಜ್ಜೆ 
  5. ಹುಡುಗ ಈ ಹುಡುಗ 
  6. ಬೆಳ್ಳಿ ಬಾಣ ಕಾಯೋಕೆ 
ಗಾಜಿನ ಮನೆ (೧೯೯೯) - ಗಾಜಿನ ಮನೆ ಇದು ಗಾಜಿನ ಮನೆ
ಸಂಗೀತ: ಗಂಧರ್ವ ಸಾಹಿತ್ಯ : ಸುಂದರ ಗಾಯನ : ಕೆ.ವಿ.ಜಯರಾಮ

ಗಾಜಿನ ಮನೆ ಇದು ಗಾಜಿನ ಮನೆ ಸ್ನೇಹ ಇಲ್ಲಿ ಹಾಲಿನ ಕೆನೆ 
ಬಂಧವು ಇಲ್ಲಿ ಬಾಳೆಯ ಗೋನೆ ಚದುರದ ರಾಗಿಯ ತೆನೆ
ಜಾಜಿಯಂತೆ ನಾಜೂಕಾದ ಹೂಜಿಯಂತೆ ಜೋಪಾನದ
ಗಾಜಿನ ಮನೆಯವರು ಯಾರಿಗೂ ಕಲ್ಲನೂಬೀಸಬಾರದು
ಗಾಜಿನ ಮನೆ ಇದು ಗಾಜಿನ ಮನೆ ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ ಚದುರದ ರಾಗಿಯ ತೆನೆ
ಚದುರದ ರಾಗಿಯ ತೆನೆ 

ಉಕ್ಕಿ ಬಿಟ್ರೆ ಮುರಿದೋಯ್ತದೆ ಸೂಜಿಯ ಕೊನೆ
ಸೂಜಿ ಮೊನೆಗೂ ಮಿಗಿಲಾಗಿದೆ ಈ ಗಾಜಿನ ಮನೆ
ರೇಶಿಮೆ ಹಂಗೆ ನವಿರಾದ ಗಾಜಿನ ಮನೆ
ಬೆಣ್ಣೆಯ ಹಂಗೆ ನುಣುಪಾದ ಗಾಜಿನ ಮನೆ
ಇದು ತಾಜ್ ಮಹಲ್ ಅಲ್ಲ ಕಣೋ ಗಾಜಿನ ಮನೆ
ಇದು ತಾಜ್ ಮಹಲ್ ಅಲ್ಲ ಕಣೋ ಗಾಜಿನ ಮನೆ
ಕಣ್ಣಿಗೆ ರೇಪ್ಪೇ ಕಾವಲು ಹಣ್ಣಿಗೆ ಸಿಪ್ಪೆ ಕಾವಲು 
ಕಣ್ಣಿಗೆ ರೇಪ್ಪೇ ಕಾವಲು ಹಣ್ಣಿಗೆ ಸಿಪ್ಪೆ ಕಾವಲು
ಈ ಗಾಜಿನ ಮನೆ ಯಾರು ಕಾವಲು
ಈ ತಾಳ್ಮೆಯ ಮನೆಗೆ ನೀನೆ ಕಾವಲು
ಗಾಜಿನ ಮನೆ ಇದು ಗಾಜಿನ ಮನೆ ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ ಚದುರದ ರಾಗಿಯ ತೆನೆ

ಜೂಜಾಡಿ ಪಾಂಡವರು ರಾಜ್ಯವನು ಸೋತರು
ಜೂಜಾಡಿ ನಳರಾಜ ಬಳಲಿ ಬೆಂದು ಹೋದನು
ಜೂಜಾಡಿ ನೀನು ಗಾಜಿನ ಮನೆ ಹೊಡೆಯದಿರು
ಸೂಳೆ ಮನೆಗೆ ಹೋದವ ಏನಾದ ಎಂಥಾದ ಕಜ್ಜಿ ನಾಯಿಯಾದ
ಮರುದಿನವೇ ಕಪಿಯಾದ ಸೂಳೆಯ ಕಾಲಿಗೆ ಕೇರವಾದ
ಈ ಮಾತ ಮರೆಯಬೇಡವೋ
ಬೇರೆಯವರ ಮನೆಗೆ ಕಲ್ಲ ಎಸೆಯಬೀಡವೋ
ಗಾಜಿನ ಮನೆ ಇದು ಗಾಜಿನ ಮನೆ ಸ್ನೇಹ ಇಲ್ಲಿ ಹಾಲಿನ ಕೆನೆ
ಬಂಧವು ಇಲ್ಲಿ ಬಾಳೆಯ ಗೋನೆ ಚದುರದ ರಾಗಿಯ ತೆನೆ
ಚದುರದ ರಾಗಿಯ ತೆನೆ ಚದುರದ ರಾಗಿಯ ತೆನೆ
-----------------------------------------------------------------------------------------------------------------------

ಗಾಜಿನ ಮನೆ (೧೯೯೯) - ಬೇವು ಬೆಲ್ಲ ಹಂಚಿಕೊಂಡರೆ...
ಸಂಗೀತ: ಗಂಧರ್ವ ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ರಾಜೇಶ ಕೃಷ್ಣನ್  ಸೌಮ್ಯ ರಾವ್ 

ಹೇ ಹೇಯ್ಯ್ ಹ ಹ್ಹಾ
ಬೇವು ಬೆಲ್ಲ ಹಂಚಿಕೊಂಡರೆ...
ಬೇವು ಬೆಲ್ಲ ಹಂಚಿಕೊಂಡರೆ...
ಸಿಹಿ ಕಹಿ ಸೊಗಸಿನ ಯುಗಾದಿ ಹೆಣ್ಣೇ 
ಅದು ವರುಷಕೆ ಬರೋದು ಒಂದೇ ದಿನ ಕಣೋ 

ಮನಸು ಮನಸು ಮೆಚ್ಚಿಕೊಂಡರೆ...
ಮನಸು ಮನಸು ಮೆಚ್ಚಿಕೊಂಡರೆ...
ಸವಿ ಸವಿ ಕನಸಿರೋ ಪ್ರೇಮ ಕಣೋ ಇದು ಪ್ರೇಮ ಕಣೋ
ಹೂ ರಾಮ ರಸ ಕುಡಿದಾಗ ರಾಮ ನವಮಿನೋ
ಪ್ರೇಮ ರಸ ಸವಿ ಅಂತ ನನ್ನ ಮನವಿನೋ ನನ್ನ ಮನವಿನೋ
ಪ್ರೇಮರಸ ಸವಿದಾಗ ಪ್ರೇಮ ನವಮಿಯೋ
ಬೇವು ಬೆಲ್ಲ ಹಂಚಿಕೊಂಡರೆ...
ಬೇವು ಬೆಲ್ಲ ಹಂಚಿಕೊಂಡರೆ...
ಸಿಹಿ ಕಹಿ ಸೊಗಸಿನ ಯುಗಾದಿ ಹೆಣ್ಣೇ 
ಅದು ವರುಷಕೆ ಬರೋದು ಒಂದೇ ದಿನ ಕಣೋ 

ಪತಿಯ ಪಾದ ತೊಳೆಯೋದು ಭೀಮನ ಅಮವಾಸೆ
ಹೃದಯ ಮೀಸಲಿರಿಸೋದು ನನ್ನ ಮನದಾಸೆ
ಶ್ಯಾಮನ ಪೂಜೆ ಮಾಡುವಾಗ ಗೋಕುಲಾಷ್ಟಮಿ
ಪ್ರೇಮದ ಪೂಜೆ ಮಾಡುವಾಗ ದಿನವೂ ಪೌರ್ಣಿಮಿ
ಮೋದಕದಲ್ಲಿ ಹಹ್ಹ ಮೋದಕದಲ್ಲಿ ಮಾಡೋದು ಶ್ರೀ ಗಣಪನ ಹಬ್ಬ
ಮನದ ಕದವ ತೆರೆಯೋದು ಪ್ರಾಣಾಯಣಪ್ಪ
ಹೂ ಹತ್ತು ದಿನ ಸಡಗರದ ದಸರಾ ಅಂತೇ
ಮುತ್ತು ಕೊಟ್ರೆ ಸರಸದ ಸದರ ಅಂತೇ
ಹಾಂ.. ಬಣ್ಣ ದೀಪ ಹಚ್ಚಿದಾಗ ದೀಪಾವಳಿ
ಕಣ್ಣ ದೀಪ ಹಚ್ಚಿ ನೋಡು ಪ್ರೇಮಾವಳಿ
ಹುತ್ತಕ್ಕೆ ಬೊಟ್ಟನಿಟ್ಟರೆ ನಾಗಪಂಚಮಿ
ಚಿತ್ತಕ್ಕೆ ಮುತ್ತನ್ನಿಟ್ಟರೆ ಯೋಗ ಪಂಚಮಿ
ಬೇವು ಬೆಲ್ಲ ಹಂಚಿಕೊಂಡರೆ...
ಬೇವು ಬೆಲ್ಲ ಹಂಚಿಕೊಂಡರೆ...
ಸಿಹಿ ಕಹಿ ಸೊಗಸಿನ ಯುಗಾದಿ ಹೆಣ್ಣೇ 
ಅದು ವರುಷಕೆ ಬರೋದು ಒಂದೇ ದಿನ ಕಣೋ 

ದವಸ ಧಾನ್ಯ ಪೂಜಿಸೋದು ಸುಗ್ಗಿ ಸಂಕ್ರಾತಿ
ಕಣ್ಣು ಕಣ್ಣು ಕೂಡಿದಾಗ ಇಲ್ಲ ವಿಶ್ರಾಂತಿ
ಸೂರ್ಯ ರಥದಿ ಬರುವಾಗ ರಥ ಸಪ್ತಮಿ
ಪ್ರೇಮ ಗಂಗೆ ನಾನು ನಿನಗೆ ಸಮರ್ಪಯಾಮಿ
ಹಾಅನ್.. ಕಾಮಣ್ಣನು ಹಾನ್ ಹಾನ್ ಕಾಮಣ್ಣನೂ ದಹಿಸೋದು ಭೋಗಿ ಹಬ್ಬ
ಪ್ರೇಮಕ್ಕಾಗಿ ಜಪಿಸೋನು ಯೋಗಿನಪ್ಪಾ
ಶಿವ ಧ್ಯಾನ ಮಾಡೋ ರಾತ್ರಿ ಶಿವರಾತ್ರಿನೋ
ನಿನ್ನ ಧ್ಯಾನ ಮಾಡೋದೇನೆ ದಿನ ರಾತ್ರಿನೋ
ಮೇಲುಕೋಟೆ ವೈರ ಮುಡಿಯ ನಾರಾಯಣ
ಪ್ರೇಮಿಗೆ ಪ್ರೇಮವನೆ ಪಾರಾಯಣ
ಹೇಳಿ ಕೇಳಿ ಮಾಡೋದಲ್ಲಾ ಹೋಳಿಯ ಹಬ್ಬ
ತಾಳಿ ತಾಳಿ ಮಾಡೋದೇನೆ ಪ್ರೇಮನಪ್ಪ
ಬೇವು ಬೆಲ್ಲ ಹಂಚಿಕೊಂಡರೆ...
ಬೇವು ಬೆಲ್ಲ ಹಂಚಿಕೊಂಡರೆ...
ಸಿಹಿ ಕಹಿ ಸೊಗಸಿನ ಯುಗಾದಿ ಹೆಣ್ಣೇ
ಅದು ವರುಷಕೆ ಬರೋದು ಒಂದೇ ದಿನ ಕಣೋ
-------------------------------------------------------------------------------------------------------------------------

ಗಾಜಿನ ಮನೆ (೧೯೯೯) - ಶುಭ ಶುಭ ಶಕುನದ ಹೊಸ ಅರಗಿಳಿಗಳೇ ಹೇಳಿ ಶಕುನಾನ
ಸಂಗೀತ: ಗಂಧರ್ವ ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ಶಶಿಕಲಾ, ಬಿ.ಆರ್.ಛಾಯಾ 

ಶುಭ ಶುಭ ಶಕುನದ ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು ಬೀರುತಿರೋ ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ
ಅಹಃ ಬೆಳಗಿನ ತಾರೆಗಳು ನಕ್ಕು ಬಿಟ್ಟು ನೋಡಿ ನಮ್ಮ ಈ ಪ್ರೀತಿಯ
ಒಹೋ ಹಕ್ಕಿಗಳು ಬಳಿ ಬಂದು ಹಾಡಿದವು ಈಗ ಸ್ನೇಹ ಗೀತೆಯ
ಕೋಗಿಲೆ ಹಾ.. ಅನ್ನ ದನಿ ಇರದಿರುವಂತ ಬದುಕಲಿ ಕುಹೂಕುಹೂ
ಹಾಡು ತಂದಾನ ಬೇಡ ಸುಮ್ಮನಾ
ಹಾಡು ತಂದಾನ ಬೇಡ ಸುಮ್ಮನಾ
ಶುಭ ಶುಭ ಶಕುನದ ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು ಬೀರುತಿರೋ ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ

ಮರಿಯನು ಕಾಯುವ ಮೈನಾ ಮರದ
ಮರೆಯ ತಾ ಸೇರಿದೆ ಗುಟುಕನು ನೀಡಿದೆ
ನನ್ನನ್ನು ಕಾಯುವ ನೀನು ಮಗಳ ಕರೆವ
ತಾಯಂತಿಹೆ ಮಮತೆಯ ನೀಡಿದೆ
ನಿನ್ನಾ ಈ ಸ್ನೇಹದಿಂದ ಚಿಂತೆ ಮರೆತೆನೆ
ನಿಮ್ಮೆಲ್ಲರ ಪ್ರೀತಿಯಿಂದ ಲೋಕ ಮರೆತೆನೇ
ನಾನೆಂದಿಗೂ ತಾಯಲ್ಲವೇ ನಾ ನಿನ್ನ ಗೆಳತಿನಮ್ಮಾ
ಶುಭ ಶುಭ ಶಕುನದ ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು ಬೀರುತಿರೋ ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ

ಹಕ್ಕಿಯ ಬಳಗ ಬೆರೆತು ಪ್ರೀತಿ
ಹಂಚಿ ಬಾಳುತಿವೆ ಚಿಲಿಪಿಲಿ ಹಾಡಿವೆ
ಸೋದರಿಯಂತಿರು ನೀನು ನಮಗೆ ನಮ ಮನೆಗೆ
ದೀಪನಕ್ಕಾ ಬೆಳಕನು ನೀಡಕ್ಕಾ
ನಿನ್ನ ಒಲುಮೆಗಿಂದು ಸೋತು ಹೋದೆನೇ
ನಿಮ್ಮೆಲ್ಲರ ಪ್ರೀತಿಯಿಂದ ಬಾಳೇ ಬೆಳಕೇನೇ
ನಾನೆಂದಿಗೂ ಅಕ್ಕ ಅಲ್ಲ ನಾ ನಿನ್ನ ಜೊತೆಗಾತಿಯೇ
ಶುಭ ಶುಭ ಶಕುನದ ಹೊಸ ಅರಗಿಳಿಗಳೇ ಹೇಳಿ ಶಕುನಾನ
ತಂಪು ಕಂಪು ಬೀರುತಿರೋ ಸೂಜಿ ಜಾಜಿ ಮಲ್ಲಿಗೆಗಳೇ ಕೇಳಿ ಕವನಾನ
ಅಹಃ ಬೆಳಗಿನ ತಾರೆಗಳು ನಕ್ಕು ಬಿಟ್ಟು ನೋಡಿ ನಮ್ಮ ಈ ಪ್ರೀತಿಯ
ಒಹೋ ಹಕ್ಕಿಗಳು ಬಳಿ ಬಂದು ಹಾಡಿದವು ಈಗ ಸ್ನೇಹ ಗೀತೆಯ
ಕೋಗಿಲೆ ಹಾ.. ಅನ್ನ ದನಿ ಇರದಿರುವಂತ ಬದುಕಲಿ ಕುಹೂಕುಹೂ
ಹಾಡು ತಂದಾನ ಬೇಡ ಸುಮ್ಮನಾ
-------------------------------------------------------------------------------------------------------------------------

ಗಾಜಿನ ಮನೆ (೧೯೯೯) - ದುರ್ಗೆಯ ಕಾಲಿನ ಗೆಜ್ಜೆ ಹೊಸ ತರ ಸ್ವರ ತಂತು
ಸಂಗೀತ: ಗಂಧರ್ವ ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ಬಿ.ಆರ್.ಛಾಯಾ 

ದುರ್ಗೆಯ ಕಾಲಿನ ಗೆಜ್ಜೆ ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು ಕಿಲ ಕಿಲ ನಗೆ ತಂತು
ದುರ್ಗೆಯ ಕಾಲಿನ ಗೆಜ್ಜೆ ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು ಕಿಲ ಕಿಲ ನಗೆ ತಂತು

ಧರೆಗಿಳಿದರೇ ದುರ್ಗಾ ಮನೆಯಂಗಳ ಸ್ವರ್ಗ
ನೂರಾರು ವರ ಕೊಡುವ ತಾಯೆ
ಹರಸುತತ ನಮ್ಮನು ಕಾಯೇ
ಮನೆಯ ಬೆಳಗೋ ದುರ್ಗಾ ಮಾತೆ
ದುರ್ಗೆಯ ಕಾಲಿನ ಗೆಜ್ಜೆ ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು ಕಿಲ ಕಿಲ ನಗೆ ತಂತು

ಘಲ್ ಘಲ್ ಎನಿಸೋ ಬಳೆಗಳ ನಾದ ಅಂಗಳ ತುಂಬಿದೆ
ತಾಯಿಯೇ ನಿನ್ನಯ ಕೊರಳಲಿ ತುಳಸಿಯ ಮಾಲೆಯಿದೆ
ಅರಿಷಣ ಕುಂಕುಮ ಹಣೆಗೆ ಸುಮಂಗಳ ರಾಶಿ ಮುಡಿಗೆ
ಹೋಸಬಾಳ ನನಗಿಂದು ನೀಡಿ ಓಂಕಾರಿ ಜಯವನು ನೀಡಿ
ಮನದಿ ನೆಲೆಸೋ ದೇವಿ ದುರ್ಗಂಬಿಕೆ
ದುರ್ಗೆಯ ಕಾಲಿನ ಗೆಜ್ಜೆ ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು ಕಿಲ ಕಿಲ ನಗೆ ತಂತು

ಸಾವಿರ ಕರಗಳ ರುದ್ರಿ ಭಕ್ತರ ಪೊರೆಯುವಳು
ಪುಂಡರ ಮರ್ಧಿಸೊ ಕಾಳಿ ದುರುಳರ ದಹಿಸುವಳು
ಕಣ್ಣಲ್ಲಿ ಕೆಂಡದ ರಾಶಿ ರುಂಡದ ಮಾಲೆಯ ಧರಿಸಿ
ಕುಡುಕರ ನೆತ್ತರು ಕುಡಿಯೋ ಕೆಟ್ಟೋರ ಕಂಡರೆ ಸಿಡಿಯೋ
ಪ್ರಾಶಕ್ತಿ ಜಯದುರ್ಗೆ ಮಾತೆ
ದುರ್ಗೆಯ ಕಾಲಿನ ಗೆಜ್ಜೆ ಹೊಸ ತರ ಸ್ವರ ತಂತು
ಗಾಜಿನ ಮನೆಗೆ ಇಂದು ಕಿಲ ಕಿಲ ನಗೆ ತಂತು
--------------------------------------------------------------------------------------------------------------------------

ಗಾಜಿನ ಮನೆ (೧೯೯೯) - ಹುಡುಗ ಈ ಹುಡುಗ ಕಣ್ಣ್ ಹೊಡೀತಾನೆ ನನ್ನ ಚಿನ್ನ ಅಂತಾನೆ
ಸಂಗೀತ: ಗಂಧರ್ವ ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ರಾಜೇಶ್ ಕೃಷ್ಣನ, ಸೌಮ್ಯ ರಾವ್ 

ಹುಡುಗ ಈ ಹುಡುಗ ಕಣ್ಣ್ ಹೊಡೀತಾನೆ ನನ್ನ ಚಿನ್ನ ಅಂತಾನೆ
ಲೆವೆಲ್ ಗೆ ಪಂಚು ಮಾಡುತಾನೇ ಬಿಟ್ರೇ ಗುನ್ನ ಹಾಕುತಾನೇ
ಕಳ್ಳಿ ಈ ಮಳ್ಳಿಯು ಡೇಟು ಕೊಡುತಾಳೆ ನನ್ನ ಥೇಟರಿಗೆ ಕರೀತಾಳೆ
ಮಮ್ಮಿನ ಮೀಟು ಮಾಡಿಸ್ತಾಳೆ ಡ್ಯಾಡಿ ನಾ ಜೊತೆ ಕೂರಿಸ್ತಾಳೆ
ಚಕ್ ಚಕ್ ಚಕ್ ಚಕ್ ಚಳ್ಳೆಗೆಯಾ
ಪಂಚ್ ಪಂಚ್ ಪಂಚ್ ಪಂಚ್ ಪಂಚಿಂಗಾ..

ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ  ಹೆಣ್ಣೇ
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ  ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತಿನವ್ವೋ
ಸೋಲೂರ ಕೇರಿ ಇಂದ ಜಾರಿ ಬಿದ್ದ ಸೋಲಿ ಗಂಡೇ
ಸೋಲೂರ ಕೇರಿ ಇಂದ ಜಾರಿ ಬಿದ್ದ ಸೋಲಿ ಗಂಡೇ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ಲವೋ
ಹೊಂಬಾಳೆ ತೋಟದಾಗೆ ನಾ ನಿನ್ನ ಹಿಡಿತೀನಿ
ಬಿರುಗಾಳಿ ಹಂಗೆ ನಾನು ಸಿಗದೇನೇ ಓಡುತಿನಿ
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ  ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತಿನವ್ವೋ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ಲವೋ 

ಬಿರುಗಾಳಿ ನೀ ಆದ್ರೆ ಗಿರಿಯಾಗಿ ತಡೀತೀನಿ
ಗಿರಿಯಾಗಿ ನೀ ತಡೆದರೆ ಮುಗಿಲಾಗಿ ಹೋಗುತಿನಿ
ಹೂ ಮುಗಿಲಾಗಿ ನೀ ಹೋದ್ರೆ ರವಿಯಾಗಿ ಸುಡುತಿನಿ
ರವಿಯಾಗಿ ನೀ ಸುಟ್ಟರೆ ಮಳೆಯಾಗಿ ಕರಗತಿನೋ
ಮಳೆಯಾಗಿ ನೀನು ಭೂಮಿಗೆ ಸುರಿದಾಗ ಹೊಳೆಯಾಗಿ ಹಿಡಿತೀನಿ
ಹೊಳೆಯಾಗಿ ನೀನು ನನ್ನನ್ನು ಹಿಡಿದಾಗ ಮೀನಾಗಿ ಹೋಗುತಿನಿ
ನೀನೊಂದು ಮೀನು ಆದ್ರೆ ಬಲೆಯಾಗಿ ಹಿಡಿತೀನಿ
ಬಲೆಯಾಗಿ ನೀನು ಎಳೆದ್ರೆ ಜಾರಕೊಂಡು ಹಾರುತಿನಿ
ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ  ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತಿನವ್ವೋ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ಲವೋ 
ಯೂ ನಾಟಿ ಬಾಯ್ ಯೂ ಪ್ರೆಟಿ ಗರ್ಲ್ 
ಯೂ ನಾಟಿ ಬಾಯ್ ಯೂ ಪ್ರೆಟಿ ಗರ್ಲ್ 
ಯೂ ನಾಟಿ ಬಾಯ್ ಕರೆಂಗೆ ಪ್ರೆಟಿ ಗರ್ಲ್ 

ಬೇಟೆಯಾಡೋ ಹ್ಯಾಂಡ್ಸಮ್ ಬಾಯ್ಸ್
ಚೂಟಿಯಾದ ಸ್ವೀಟಿ ಗರ್ಲ್ಸ್
ಚಲ್ಲು ಚಲ್ಲು ಸಿಲ್ಲಿ ಬಾಯ್ಸ್
ಪೋಸು ಕೊಡೊ ಚಿಲ್ಲಿ ಗರ್ಲ್ಸ್
ಆವೋ ಹೈಹೈ ಓಕೆ ಹವಾಯ್  ಹವಾಯ್
ಅಚ್ಛಾ ಟಾ ಟಾ  ದೇಖೊ ಏ ಬಾತ್ ಛೇ ಕಚ್ಚಾ ಕಚ್ಚಾ

ನೀನೊಂದು ಮಿಂಚು ಹುಳವೇ ನಿನ್ನ ಹೊಂಚಹಾಕಿ ಹಿಡಿತೀನಿ
ಹೊಂಚು ಹಾಕಿ ಹಿಡಿಯೋಕೆ ಬಂದ್ರೆ ಮಿಂಚಾಗಿ ಹೋಗುತಿನಿ
ಮಿಂಚಿನ ತಡೆಯಾಗಿ ನಾ ನಿನ್ನ ಹಿಡಿತೀನಿ
ನೀ ನನ್ನ ಹಿಡಿದೇ ಅನಕೊ ನೀರಾಗಿ ಹರಿತೀನಿ
ನೀ ನೀರು ಆದ್ರೆ ಜೋಗದ ಗುಂಡಿಯಾಗೆ ನಾನಿಂತು ಕಾಯುತಿನಿ
ನೀರಿನ ರೂಪ ಕಳಚ ಹಾಕಿತಿನಿ ನೀರ್ ಹಕ್ಕಿ ಆಗುತೀನಿ
ನೀರ್ ಹಕ್ಕಿ ತಿನೋಕೆ ನಾನು ಬೇಟೆಗಾರ ಆಗುತೀನಿ
ಮಾಯದ ಜಿಂಕೆ ಆಗಿ ಮಾಯನೇ ಆಗುತೀನಿ
ಅರ್ರೆಯ್ ಮೂಡಣ ನಾಡಿನಿಂದ ಮೂಡಿ ಬಂದ ಮೋಡಿ  ಹೆಣ್ಣೇ
ಮೂಗುದಾರ ನಾನು ನಿಂಗೆ ಹಾಕುತಿನವ್ವೋ
ಮೂಗುದಾರ ಹಾಕೋದಕ್ಕೆ ಬಸವಿ ನಾನಲ್ಲವೋ 
ಹೆಣ್ಣುಗಂಡು ಎಂದಿಗೀನು ಸಮವೇನೇ ಕಾಣವ್ವಾ
ನಂಗೂ ನಿಂಗು ಸವಾಲೇಕೆ ಬಾಜಿನೇ ಬ್ಯಾಡ ಚೆಲ್ವಾ
ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಾಲಾ 
--------------------------------------------------------------------------------------------------------------------------

ಗಾಜಿನ ಮನೆ (೧೯೯೯) - ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ಸಂಗೀತ: ಗಂಧರ್ವ ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ರಾಜೇಶ್ ಕೃಷ್ಣನ, ಮಂಜುಳಾ ಗುರುರಾಜ್ 

ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ
ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ
ಬೆಳ್ಳಿ ಬಾನ್ ಕಾಯೋಕೆ 

ಹೇಯ್ಯ್ ಚೆಲುವೇ ಹಗಲಿರುಳು ನಗು ನಗುತಾ
ಚಕ್ಕಂದ ಆಡೋದೇ  ಚಟುವಟಿಕೆ
ಹೇಯ್ಯ್ ಚೆಲುವಾ ಅಗಲಿರದೆ ಬೆಸೆದಿರುವಾ
ಚೆಲ್ಲಾಟವೇ ನಮ್ಮ ನಡವಳಿಕೆ
ಗಿರಿಗಳ ಹೂವಂಚಲಿ ನೇಸರ ಮಲಗೋ ವೇಳೆ
ಬರುವೆಯಾ ಓ ತಾರೆಯೇ ಚಂದಿರ ನಾನಾಗಲೇ
ಮುತ್ತಿಗೆ ಹಾಕಿ ಮುತ್ತಿಡುವೆ ಓ ರಾಣಿ
ಮತ್ತನು ನೀಡು ಆಗಿದೆ ತನು ದೋಣಿ
ಹೊಸದಾಗಿ ಈ ಸುದಿನ
ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ .. ಆ...ಆ...
ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ
ಬೆಳ್ಳಿ ಬಾನ್ ಕಾಯೋಕೆ 

ಈ ಘಳಿಗೆ ಸುಖ ಮಿಲನ ಕೊಡುತ್ತಿರುವ
ಉನ್ಮಾದದ ಆಮೋದ ಮಿತಿ ಮೀರಿದೆ
ಈ ಸಿರಿಗೆ ಪ್ರತಿ ನಿಮಿಷ ಹೊಸ ಹರುಷ
ಉತ್ಸಾಹದ ಆ ನಾದ ಶೃತಿ ಸೇರಿದೆ
ಲೋಕವೇ ಬೇಕಾಗವುದು ಸನಿಹವು ಸಾಕಾಗದು
ಕಾಲವೇ ಗೊತ್ತಾಗದು ತನುಗಳು ದಣಿವಾಗದು
ಮಲ್ಲಿಗೆ ನಾನು ಮೆಲ್ಲಗೆ ಮನ ಸೋತೆ
ನೇರಳೆ ನೀನು ಕೋಗಿಲೆ ನಾನಾದೆ
ಸಾಕಾಗದು ಈ ಸರಸ
ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ .. ಆ...ಆ...
ಬೆಳ್ಳಿ ಬಾನ  ಕಾಯೋಕೆ ಹಗಲೆಲ್ಲ ಕಾವಲು ಹಕ್ಕಿ
ನಿನ್ನ ಸೇರಲು ನಾನು ಕಾರಂಜಿಯಾದೆ ಉಕ್ಕಿ
ಬೆಳ್ಳಿ ಬಾನ್ ಕಾಯೋಕೆ 
----------------------------------------------------------------------------------------------------------------------

No comments:

Post a Comment