846. ಗಂಡುಗಲಿ ರಾಮ (೧೯೮೩)


ಗಂಡುಗಲಿ ರಾಮ ಚಿತ್ರದ ಹಾಡುಗಳು 
  1. ನನ್ನಾಣೆ ದೇವ ನಿನ್ನಾಣೆ 
  2. ಅಪ್ಪ ರಾಮಣ್ಣ ಮಗ ಭೀಮಣ್ಣ 
  3. ಅಮ್ಮಮ್ಮ ನಿನ್ನನ್ನೂ ಬಿಟ್ಟಿರಲಾರೆ 
  4. ನಾನೇ ನಾನೇ 
  5. ವೈಯ್ಯಾರಿ ನೀ ಹೀಗೇ 
ಗಂಡುಗಲಿ ರಾಮ (೧೯೮೩)
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯಾ ಗಾಯನ : ಎಸ್ಪಿಬಿ 

ನನ್ನಾಣೆ...  ದೇವ ನಿನ್ನಾಣೆ ಹೋರಾಟ..  ಇನ್ನೂ ನಮ್ಮಾಣೆ
ಬಂಡೆ ಬಿದ್ರೇ ಬಾಳೋ ಬೇರೇ ದಾರಿ ನಾ ಕಾಣೇ
ಹ್ಹಾ...  ನನ್ನಾಣೆ ದೇವ ನಿನ್ನಾಣೆ ದೇವ ನನ್ನಾಣೆ ದೇವ  ನಿನ್ನಾಣೆ
ನನ್ನಾಣೆ...  ದೇವ ನಿನ್ನಾಣೆ ಹೋರಾಟ..  ಇನ್ನೂ ನಮ್ಮಾಣೆ
ಬಂಡೆ ಬಿದ್ದೇ ಬಾಳೋ ಬೇರೇ ದಾರಿ ನಾ ಕಾಣೇ 
ದೇವ ನನ್ನಾಣೆ ದೇವ  ನಿನ್ನಾಣೆ ನನ್ನಾಣೆ ದೇವ ನಿನ್ನಾಣೆ

ರಾವಣಣ್ಣ ಸಾಯಸೋಕೆ ಶ್ರಿ ರಾಮ ನೀನಾದೇ 
ಕಂಸನ್ನ ಕೊಲ್ಲೊಕ್ಕೆ ಶ್ರೀ ಕೃಷ್ಣ ನೀನಾದೇ 
ರಾವಣಣ್ಣ ಸಾಯಸೋಕೆ ಶ್ರಿ ರಾಮ ನೀನಾದೇ 
ಕಂಸನ್ನ ಕೊಲ್ಲೊಕ್ಕೆ ಶ್ರೀ ಕೃಷ್ಣ ನೀನಾದೇ 
ಈ ಕಾಲದಾಗೆ ರಾವಣರನ್ನ ಕಂಸರನ್ನು ಮುಗಿಸೋಕೆ 
ಮತ್ತೊಮ್ಮೆ ನೀ ಹುಟ್ಟಿ ಬರಲಿಲ್ಲ ನೀ ಯಾಕೇ 
ನೀ ಮತ್ತೇ ಬರದಿದ್ದರೇ ನಿನ್ನ ಅವತಾರನ್ನ ನಾವೇ ಅಗ್ತೀವಿ 
ದೇವ ನನ್ನಾಣೆ ದೇವ  ನಿನ್ನಾಣೆ ನನ್ನಾಣೆ ದೇವ ನಿನ್ನಾಣೆ
ನನ್ನಾಣೆ...  ದೇವ ನಿನ್ನಾಣೆ ಹೋರಾಟ..  ಇನ್ನೂ ನಮ್ಮಾಣೆ
ಬಂಡೆ ಬಿದ್ರೇ ಬಾಳೋ ಬೇರೇ ದಾರಿ ನಾ ಕಾಣೇ
ನನ್ನಾಣೆ...  ದೇವ ನಿನ್ನಾಣೆ ಹೋರಾಟ..  ಇನ್ನೂ ನಮ್ಮಾಣೆ 

ಹೆದ್ದಹೆದ್ದರಿ ನಡಗಿದ್ದರೇ ನಂಬಾಳೇ ನಮಗಿಲ್ಲಾ 
ಬದುಕಿದ್ದರೂ ಸತ್ತಂಗೆ ಬಾಳೋದು ಬಾಳಲ್ಲಾ 
ಹೆದ್ದಹೆದ್ದರಿ ನಡಗಿದ್ದರೇ ನಂಬಾಳೇ ನಮಗಿಲ್ಲಾ 
ಬದುಕಿದ್ದರೂ ಸತ್ತಂಗೆ ಬಾಳೋದು ಬಾಳಲ್ಲಾ 
ಪುಂಡಾಟ ಮಾಡೋರ ಗುಂಡಗೆನೇ ನಡಗೋಂಗೆ 
ಗುಂಡುಗನೂ ಎದೆ ಕೊಟ್ಟು ಗಂಡಸಾಗೆ ದುಡುಕೋಣ  
ಹಾವಿನ ಹಲ್ಲು ಚೇಳಿನ ಕೊಂಡಿ ಕಿತ್ತೇ ಕೀಳ್ತೀವಿ
ದೇವ ನನ್ನಾಣೆ ದೇವ ನಿನ್ನಾಣೆ ದೇವ ನನ್ನಾಣೆ ದೇವ ನಿನ್ನಾಣೆ
ನನ್ನಾಣೆ...  ದೇವ ನಿನ್ನಾಣೆ ಹೋರಾಟ..  ಇನ್ನೂ ನಮ್ಮಾಣೆ
ಬಂಡೆ ಬಿದ್ರೇ ಬಾಳೋ ಬೇರೇ ದಾರಿ ನಾ ಕಾಣೇ
ದೇವ ನನ್ನಾಣೆ ದೇವ ನಿನ್ನಾಣೆ ದೇವ ನನ್ನಾಣೆ ದೇವ ನಿನ್ನಾಣೆ
ನನ್ನಾಣೆ...  ದೇವ ನಿನ್ನಾಣೆ
-------------------------------------------------------------------------------------------------------------------------

ಗಂಡುಗಲಿ ರಾಮ (೧೯೮೩)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ್  ಗಾಯನ : ಎಸ್.ಜಾನಕೀ,  ಎಸ್ಪಿಬಿ 

ಹೆಣ್ಣು : ಅಪ್ಪ ರಾಮಣ್ಣ ಅಣ್ಣ ಭೀಮಣ್ಣ ಇವನು ಕಾಮಣ್ಣನ್ನು
          ಅಮ್ಮ ಸೀತಕ್ಕ ಅಕ್ಕ ಜಯಕ್ಕ ಇವನು ಹಳ್ಳಿ ಮುಕ್ಕನು
          ಹೇ.. ಬಿಟ್ಟು ಹೋಗೋಕೇ ಮನಸಿಲ್ಲ ಕಟ್ಟಿಕಳ್ಳೊಕೆ ತಾಳಿ ಇಲ್ಲ
ಕೋರಸ್ : ಬಿಟ್ಟು ಹೋಗೋಕೇ ಮನಸಿಲ್ಲ ಕಟ್ಟಿಕಳ್ಳೊಕೆ ತಾಳಿ ಇಲ್ಲ
       
ಕೋರಸ್ :ತಾನನ್ನನ ತಾನನ್ನನ ತಾನನ್ನನ ತಾನನ್ನನ
ಹೆಣ್ಣು : ಕಾಲ ಬದಲಾಗಿ ಹೋಯ್ತು ಹಳ್ಳಿ ಊರಾಗಿ ಹೋಯ್ತು
          ನಿನ್ನ ಬುದ್ದಿಯು ಏಕೆ ಜೇಡಿ ಮಣ್ಣಾಗಿ ಹೋಯ್ತು (ಹೊಯ್)
ಕೋರಸ್ : ಲಾಲಾಲ ಲಾಲಾಲ ಲಾಲಾಲ ಲಾಲಾಲ ಲಾಲಾಲ
ಹೆಣ್ಣು : ರಾಮನು ನೀನೇನಲ್ಲ (ಹ್ಹ ) ಸೇತುವೇ ಕಟ್ಟೋದಿಲ್ಲಾ
          ಹೋಗೆ ಸ್ನೇಹ ನಿನಗೇಕೆ ಬದುಕೇ ಬೇರೆ ದಂಡಕ್ಕೇ (ಹೊಯ್)
          ಹೇ.. ಬಿಟ್ಟು ಹೋಗೋಕೇ ಮನಸಿಲ್ಲ ಕಟ್ಟಿಕಳ್ಳೊಕೆ ತಾಳಿ ಇಲ್ಲ
ಕೋರಸ್ : ಬಿಟ್ಟು ಹೋಗೋಕೇ ಮನಸಿಲ್ಲ ಕಟ್ಟಿಕಳ್ಳೊಕೆ ತಾಳಿ ಇಲ್ಲ
ಗಂಡು : ಹೊಯ್.. ತಕದ್ದಿನ ಧಿನ ಧಿನ ತಕದ್ದಿನ ಧಿನ ಧಿನ ತಕದ್ದಿನ ಧಿನ ಧಿನ
            ತಕದ್ದಿನ ಧಿನ ಧಿನ ತಕದ್ದಿನ ಧಿನ ಧಿನ ತಕದ್ದಿನ ಧಿನ ಧಿನ ಹ್ಹಾ
            ಅಮ್ಮ ಸಣ್ಣಮ್ಮ ಅಕ್ಕ ಸುಬ್ಬಮ್ಮ ಇವಳು ಮಾರಮ್ಮನೂ (ಹೇಯ್)
            ಮುಖವು ಹೆಣ್ಣಂತೆ ಉಡುಪು ಗಂಡಂತೇ ಇವಳು ಮಂಗಮ್ಮಳು (ಹ್ಹಾಹ್ಯಾ )
            ಬಿಟ್ಟು ಹೋದೋನು ಬದುಕೋನು ಕಟ್ಟಿಕೊಳ್ಳೋನೇ ಸಾಯೋನು (ಹೇ..)
            ಬಿಟ್ಟು ಹೋದೋನು ಬದುಕೋನು ಕಟ್ಟಿಕೊಳ್ಳೋನೇ ಸಾಯೋನು

ಕೋರಸ್ :ತಾನನ್ನನ ತಾನನ್ನನ ತಾನನ್ನನ ತಾನನ್ನನ
ಗಂಡು : ಕಾಲ ಬದಲಾದರೇನೂ ಹಳ್ಳಿ ಊರಾದರೇನೋ 
           ರೈತ ಕೈಕಟ್ಟಿದಾಗ ನೀನು ತಿನ್ನಬೇಕು ಮಣ್ಣು 
ಕೋರಸ್ : ಲಾಲಾಲ ಲಾಲಾಲ ಲಾಲಾಲ(ಹ್ಹಾ ) ಲಾಲಾಲ(ಹ್ಹಾ ) ಲಾಲಾಲ (ಹ್ಹಾ )
ಗಂಡು : ಗಂಡಸು ನೀನೇನಲ್ಲಾ ಮೀಸೆಯೂ ನಿನಗೇನಿಲ್ಲಾ
            ಬುದ್ದಿ ಹೇಳೋ ಮೂತಿ ನೋಡು ಹೋಗೆ ಹೋಗು ಮುಂದಕ್ಕೇ
            ಬಿಟ್ಟು ಹೋದೋನು ಬದುಕೋನು ಕಟ್ಟಿಕೊಳ್ಳೋನೇ ಸಾಯೋನು (ಹೇ..)
            ಬಿಟ್ಟು ಹೋದೋನು ಬದುಕೋನು ಕಟ್ಟಿಕೊಳ್ಳೋನೇ ಸಾಯೋನು
ಹೆಣ್ಣು : ತನಕನಕಡಿ ತಕಡಿನಕಡಿ   ತನಕನಕಡಿ ತಕಡಿನಕಡಿ   ತನಕನಕಡಿ ತಕಡಿನಕಡಿ
          ತನಕನಕಡಿ ತಕಡಿನಕಡಿ   ಡೂರರರ್ 
           ಅಪ್ಪ ರಾಮಣ್ಣ ಅಣ್ಣ ಭೀಮಣ್ಣ ಇವನು ಕಾಮಣ್ಣನ್ನು
ಗಂಡು : ಕೂರ್ ಕೂರೆ..   ಮುಖವು ಹೆಣ್ಣಂತೆ ಉಡುಪು ಗಂಡಂತೇ ಇವಳು ಮಂಗಮ್ಮನು (ಹೇ..ಹೇ  )
ಹೆಣ್ಣು :  ಹೇ.. ಬಿಟ್ಟು ಹೋಗೋಕೇ ಮನಸಿಲ್ಲ ಕಟ್ಟಿಕಳ್ಳೊಕೆ ತಾಳಿ ಇಲ್ಲ
ಗಂಡು : ಬಿಟ್ಟು ಹೋದೋನು ಬದುಕೋನು ಕಟ್ಟಿಕೊಳ್ಳೋನೇ ಸಾಯೋನು
ಇಬ್ಬರು : ಹೇ.. ಹ್ಹಾ ಹ್ಹಾ ಹ್ಹಾ ಹ್ಹ  ಹೇ ಹೇ ಹೇ    ಹ್ಹಹ್ಹಹ್ಹಾ ಹ್ಹೀಹ್ಹೀಹ್ಹೀ
--------------------------------------------------------------------------------------------------------------------------

ಗಂಡುಗಲಿ ರಾಮ (೧೯೮೩)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿಬಿ, ವಾಣಿಜಯರಾಂ   

ಗಂಡು : ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೇ ಅಬ್ಬಬ್ಬ ಸುಮ್ಮನೇ ಇರಲಾರೇ
            ಏನೇನೋ ಆಸೆಯ ನಾ ತಾಳಲಾರೆ ಪೊರೈಸು ತನಕ ಬಿಡಲಾರೇ
            ಸವಿಯಾದ ಮಾತಿಂದ ಕೋಡು ಬೇಗ ಆನಂದ
            ಸವಿಯಾದ ಮಾತಿಂದ ಕೋಡು ಬೇಗ ಆನಂದ
ಹೆಣ್ಣು : ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೇ ಅಬ್ಬಬ್ಬ ಸುಮ್ಮನೇ ಇರಲಾರೇ
            ಏನೇನೋ ಆಸೆ ನಾ ತಾಳಲಾರೆ ಪೊರೈಸು ತನಕ ಬಿಡಲಾರೇ
            ಸವಿಯಾದ ಮಾತಿಂದ ಕೋಡು ಬೇಗ ಆನಂದ
            ಸವಿಯಾದ ಮಾತಿಂದ ಕೋಡು ಬೇಗ ಆನಂದ  

ಗಂಡು : ಎಲ್ಲ ಮಾತು ಕಣ್ಣೇ ಹೇಳುವಾಗ ಬೇರೆ ಮಾತು ಆಡುವಾಸೆ ಏಕೇ
            ಅರೇ.. ಯಾರು ಇಲ್ಲಿ ಎನ್ನುವಾಗ ಬೇಡಾ ಅನ್ನೋ ಆಟ ಇನ್ನೂ ಯಾಕೇ ಹ್ಹಾಂ...
ಹೆಣ್ಣು : ತೋಳಿಂದ ನನ್ನ (ಆಂ ) ಮೈಯನ್ನು ಬಳಸು (ಅಹ್ಹಹ್ಹಹ್ಹಾ)
           ಕೆನ್ನೆಯ ಮೇಲೆ ಕೆನ್ನೆಯ ಇರಿಸೂ ಆಆಆ...
           ಕೆನ್ನೆಯ ಮೇಲೆ ಕೆನ್ನೆಯ ಇರಿಸೂ
ಗಂಡು : ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೇ ಅಬ್ಬಬ್ಬ ಸುಮ್ಮನೇ ಇರಲಾರೇ
            ಏನೇನೋ ಆಸೆ ನಾ ತಾಳಲಾರೆ ಪೊರೈಸು ತನಕ ಬಿಡಲಾರೇ
ಹೆಣ್ಣು : ಸವಿಯಾದ ಮಾತಿಂದ (ಹ್ಹಹ್ಹಹ್ಹಾ) ಕೋಡು ಬೇಗ ಆನಂದ  (ಅರೆರೆರೆರೇ )
            ಸವಿಯಾದ ಮಾತಿಂದ ಕೋಡು ಬೇಗ ಆನಂದ  

ಹೆಣ್ಣು : ಮೈಯ್ಯ ಭಾರ ನಾನು ತಾಳಲಾರೆ ಒಂದು ಹೆಜ್ಜೆ ದೂರ ಹೋಗಲಾರೇ.. ಹ್ಹಾಂ..   
          ಏಕೋ ಏನೋ ಒಂಟಿ ನಿಲ್ಲಲ್ಲಾರೇ ಇನ್ನೂ ಮುಂದೇ ಏನೂ ಹೇಳಲಾರೇ 
ಗಂಡು : ನಿನ್ನಂತೇ ನಾನು (ಹೂಂ ) ನನ್ನಂತೇ ನೀನು (ಒಹೋ)
            ಇನ್ನಾಯ್ತು ನನ್ನ ಬಾಳೆಲ್ಲ ಜೇನು ಆಹ್ಹಾಹಾ          
            ಇನ್ನಾಯ್ತು ನನ್ನ ಬಾಳೆಲ್ಲ ಜೇನು 
ಹೆಣ್ಣು : ಅಮ್ಮಮ್ಮ ನಿನ್ನನ್ನು ಬಿಟ್ಟಿರಲಾರೇ (ಅಹ್ಹಹ್ ) ಅಬ್ಬಬ್ಬ ಸುಮ್ಮನೇ ಇರಲಾರೇ (ಅಹ್ಹಹ್ )
            ಏನೇನೋ ಆಸೆ ನಾ ತಾಳಲಾರೆ  (ಅಹ್ಹಹ್ ) ಪೊರೈಸು ತನಕ ಬಿಡಲಾರೇ
ಗಂಡು : ಸವಿಯಾದ ಮಾತಿಂದ ಕೋಡು ಬೇಗ ಆನಂದ
            ಸವಿಯಾದ ಮಾತಿಂದ ಕೋಡು ಬೇಗ ಆನಂದ  
ಇಬ್ಬರೂ : ಲಲಲಾ ಲ್ಲಲ್ಲಾ ಲಲಲಾ ಲ್ಲಲ್ಲಾ ಲಲಲಾ ಲ್ಲಲ್ಲಾ ಲಲಲಾ ಲ್ಲಲ್ಲಾ
--------------------------------------------------------------------------------------------------------------------------

ಗಂಡುಗಲಿ ರಾಮ (೧೯೮೩)
ಸಂಗೀತ : ಸತ್ಯಂ ಸಾಹಿತ್ಯ :ಶ್ಯಾಮಸುಂದರ್ ಕುಲಕರ್ಣಿ ಗಾಯನ : ಎಸ್ಪಿಬಿ 

ಕೋರಸ್ : ಜೂ ಜೂಜೂಜೂ ಜೂ ಜೂಜೂಜೂ ಜೂಜೂ
ಗಂಡು :ನಾನೇ (ಅಆಆ ಅಆಆ ) ನಾ... ನೇ (ಅಆಆ ಅಆಆ )
           ಆಟದಲ್ಲಿ ಸೋಲದಂತ ಧೀರ ನಾನು
           ನೋಟದಲ್ಲಿ ಗೆಲ್ಲುವಂತ ವೀರ ನಾನು
           ಬೇಟೆ ಆಡಿ ಕೊಲ್ಲುವಂಥ ಶೂರ ನಾನು ನಾನಾರೂ ಬಲ್ಲೇ ಏನೂ
           ನಾನೇ (ಅಆಆ ಅಆಆ ) ನಾ... ನೇ...  (ಅಆಆ ಅಆಆ )
           
ಕೋರಸ್ : ತೂರೂರುರು ತೂರೂರುರು  ತೂರೂರುರು
ಗಂಡು : ಎಲ್ಲರ ಬಿಟ್ಟು ಒಬ್ಬರ ಸ್ವತ್ತು ಅಲ್ಲವೇ ಪ್ರೀತಿಯು
            ಒಬ್ಬಳ ಬೇರೇಯೇ ಒಬ್ಬಳ ತೊರೆಯೇ ಎಲ್ಲಿದೆ ನೀತಿಯೂ
            ಆಕೆಯೂ ಬರಲಿ ಈಕೆಯೂ ಇರಲಿ ಏತಕೆ ಗೊಂದಲ
            ಯಾರಿಗೂ ದ್ರೋಹ ಮಾಡದೇ ಸ್ನೇಹ ನೀಡುವ ಹಂಬಲ
            ಈ ನಂಬಿ ಬಂದ ಹೆಣ್ಣಿಗೆಲ್ಲಾ ಪ್ರೇಮವೆಂಬ.. ಹ್ಹಾ..
            ಈ ನಂಬಿ ಬಂದ ಹೆಣ್ಣಿಗೆಲ್ಲಾ ಪ್ರೇಮವೆಂಬ ಹಣ್ಣು ಹಂಚಿ ಬಾಳೋ ಆಸೆಯೂ
            ಹೇ..ಹೇ..ಹೇ.. ನಾನೇ (ಅಆಆ ಅಆಆ ) ನಾ... ನೇ (ಅಆಆ ಅಆಆ )
           ಆಟದಲ್ಲಿ ಸೋಲದಂತ ಧೀರ ನಾನು
           ನೋಟದಲ್ಲಿ ಗೆಲ್ಲುವಂತ ವೀರ ನಾನು
           ಬೇಟೆ ಆಡಿ ಕೊಲ್ಲುವಂಥ ಶೂರ ನಾನು ನಾನಾರೂ ಬಲ್ಲೇ ಏನೂ
           ನಾನೇ (ಅಆಆ ಅಆಆ ) ನಾ... ನೇ...  (ಅಆಆ ಅಆಆ )

ಗಂಡು : ಕಳ್ಳರ ಹಿಂಡು ಮೆಲ್ಲಗೆ ಕಂಡು ಇಲ್ಲಿಗೆ ಬಂದೇ ನಾ.. ಹ್ಹಾ..
           ಮುಳ್ಳಲೇ ಮುಳ್ಳು ತೆಗೆಯುತಾ ಗೆಲ್ಲೂ ಆಗಲೇ ಜೀವನ
           ಮೋಸಕೆ ಮೋಸ ರೋಷಕೆ ರೋಷ ಬಾಳಿನ ಧೇಯವೂ
           ದುಷ್ಟರ ಹಿಡಿವೇ ನೆತ್ತರೂ ಕುಡಿವೇ ತುಂಬಿದೆ ದಾಹವೂ
           ಈ ಲಜ್ಜೆ ಬಿಟ್ಟು ಹೆಜ್ಜೆ ಇಟ್ಟ ಕೇಡಿಗಳ.. ಹ್ಹಾ..
           ಈ ಲಜ್ಜೆ ಬಿಟ್ಟು ಹೆಜ್ಜೆ ಇಟ್ಟ ಕೇಡಿಗಳ ಕೂಡಿಹಾಕಿ ಬಗ್ಗು ಬಡಿಯುವೇ
            ಹೇ..ಹೇ..ಹೇ.. ನಾನೇ (ಅಆಆ ಅಆಆ ) ನಾ... ನೇ (ಅಆಆ ಅಆಆ )
           ಆಟದಲ್ಲಿ ಸೋಲದಂತ ಧೀರ ನಾನು
           ನೋಟದಲ್ಲಿ ಗೆಲ್ಲುವಂತ ವೀರ ನಾನು
           ಬೇಟೆ ಆಡಿ ಕೊಲ್ಲುವಂಥ ಶೂರ ನಾನೇ ಗಂಡುಗಲೀ...
--------------------------------------------------------------------------------------------------------------------------

ಗಂಡುಗಲಿ ರಾಮ (೧೯೮೩)
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಿಷ್ಣುವರ್ಧನ್, ವಾಣಿಜಯರಾಂ  

ಗಂಡು : ವೈಯ್ಯಾರಿ ನೀ ಹೀಗೇ ಬಳುಕಿ ನಡೆಯುವಾಗ
           ಬಂಗಾರಿ ನೀ ಹೀಗೇ ಥಳುಕು ತೋರಿದಾಗ
ಹೆಣ್ಣು : ಓ.. ಬಿಡು ನನ್ನಾ ಹಾಯ್ ಬಿಡು ಚೆನ್ನಾ
ಗಂಡು : ಬಿಡಲಾರೇ ನಾ ನಿನ್ನ ಚಿನ್ನ
           ವೈಯ್ಯಾರಿ ನೀ ಹೀಗೇ ಬಳುಕಿ ನಡೆಯುವಾಗ
           ಬಂಗಾರಿ ನೀ ಹೀಗೇ ಥಳುಕು ತೋರಿದಾಗ  ಹ್ಹಾಂ... (ಆಆಂ )

ಗಂಡು : ಬಣ್ಣದ ಚಿಟ್ಟೆಯ ಹಾಗೇ ನೀ ಹಾರುವುದೇಕೆ ಹೀಗೇ
           ರೆಕ್ಕೆಯ ಹಿಡಿದು ಆಡೋದು ನಾ ಬಲ್ಲೇ
          ಸಂಜೆಯ ತಾವರೆ ಹಾಗೇ ನೀ ನಾಚುವೇ ಏಕೆ ಹೀಗೆ
          ದುಂಬಿಯ ಸರಸ ಆಡೋದು ನಾ ಬಲ್ಲೇ
ಹೆಣ್ಣು : ಅಂಥಾ ಹೆಣ್ಣು (ಆ) ನಾನಲ್ಲವೋ         
          ಅಂಥಾ ಹೆಣ್ಣು (ಆ) ನಾನಲ್ಲವೋ         
ಗಂಡು : ಹೇ.. ನಾ  ಬಲ್ಲೇ ಬಾ ನನ್ನ ಚಿನ್ನ
          ಹ್ಹಾಂ.ಹ್ಹಾಂ... (ಆಆಂ ) ವೈಯ್ಯಾರಿ ನೀ ಹೀಗೇ ಬಳುಕಿ ನಡೆಯುವಾಗ
          ಬಂಗಾರಿ ನೀ ಹೀಗೇ ಥಳುಕು ತೋರಿದಾಗ
ಹೆಣ್ಣು : ಓ.. ಬಿಡು ನನ್ನಾ (ಆ) ಹಾಯ್ ಬಿಡು ಚೆನ್ನಾ
ಗಂಡು : ಬಿಡಲಾರೇ ನಾ ನಿನ್ನ ಚಿನ್ನ
           ವೈಯ್ಯಾರಿ ನೀ ಹೀಗೇ ಬಳುಕಿ ನಡೆಯುವಾಗ
           ಬಂಗಾರಿ ನೀ ಹೀಗೇ ಥಳುಕು ತೋರಿದಾಗ  ಹ್ಹಾಂ...

ಹೆಣ್ಣು : ಅಂದವ ತುಂಬಿದ ಗಂಡು ಘಮ್ಮೆನ್ನುವ ಹೂವಿನ ಚೆಂಡೂ
          ಆಡಲು ನಾನೇ ಇಲ್ಲಿಗೇ ನಾ ಬಂದೇ (ಆಹ್ಹಾ..ಆಹ್ಹಾ )
          ಅಮೃತ (ಹ್ಹಹ್ಹ) ಕುಡಿಸಿ ಈಗ ನಾ ಸ್ವರ್ಗವ ತೋರಿ ಬೇಗ  
          ಸಂತಸ ತುಂಬುವೇ ನನ್ನಾಣೆ ನಾ ಇಲ್ಲೇ
ಗಂಡು : ಹೇ.. ನಿನ್ನಾಟವ (ಹ್ಹಆ ) ನಾ ಬಲ್ಲೇನೂ (ಹೂಂ )
            ನಿನ್ನಾಟವ ನಾ ಬಲ್ಲೇನೂ
ಹೆಣ್ಣು : ಈ ಮಾತು ಇನ್ನೇಕೆ ಬಾರೋ
ಗಂಡು : ಹ್ಹಾಂ.ಹ್ಹಾಂ... (ಆಆಂ ) ಹ್ಹಾಂ.ಹ್ಹಾಂ. ಹ್ಹಾಂ.ಹ್ಹಾಂ... (ಆಆಂ ) ಹ್ಹಾಂ.ಹ್ಹಾಂ.
--------------------------------------------------------------------------------------------------------------------------

No comments:

Post a Comment