850. ಪಯಣಿಗ (೧೯೭೮)

ಪಯಣಿಗ ಚಲನಚಿತ್ರದ ಹಾಡುಗಳು 
  1. ಮುಂದೆ ಮುಂದೆ ಬಾಳ ಬಂಡಿ 
  2. ಪ್ರತಿ ಹಗಲಲಿ 
ಪಯಣಿಗ (೧೯೭೮) - ಮುಂದೆ ಮುಂದೆ ಬಾಳ ಬಂಡಿ 
ಸಂಗೀತ : ಪ್ರೇಮಚಂದ ಫ್ರಾನ್ಸಿಸ್ , ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ 

ಹೇ... ಹೇಹೇಹೇಹೇಹೇ .. ಓ..ಓಓಓಓಓಓಓ ಹ್ಹಹ್ಹಾ.. ಆಆಆಅ 
ಮುಂದೆ ಮುಂದೆ ಬಾಳ ಬಂಡಿ ಸಾಗಿದೆ ಹಿಂದೆ ಹಿಂದೆ ತಂದ ಗಾಳಿ ಓಡಿದೆ 
ಲೋಕವೆಲ್ಲ ಇಂದೂ ನನ್ನದಾಗಿದೇ .. ಶೋಕವೆಲ್ಲ ನನ್ನ ಬಿಟ್ಟೂ ಸಾಗಿದೇ 
ಮುಗಿಲಂತೆ ಮಲೆನಾಡಿನ.. ಮನವೆನ್ನ ತೇಲಾಡಿದೇ 
ಎಂದೆಂದೂ ವಯಸ್ಸಾಗದ..  ಗಿರಿಸಾಲು ಹಸಿರಾಗಿದೇ .. 
ಮುಂದೆ ಮುಂದೆ ಬಾಳ ಬಂಡಿ ಸಾಗಿದೆ ಹಿಂದೆ ಹಿಂದೆ ತಂದ ಗಾಳಿ ಓಡಿದೆ 

ಈ ದುಂಬಿ ಆ ದುಂಬಿ ವೈಭೋಗವ ಏನೆಂದೀ ಈ ಸೃಷ್ಟಿ ಸೌಂದರ್ಯವ 
ಬಗೆಬಗೆಯ ಸಾಕಾರವ ಪಡಿವಾರ ರವಿಗಿಲ್ಲಿ ಹೊಸ ಸಂಭ್ರಮ 
ವಿಶ್ವಕ್ಕೆ ವಿಖ್ಯಾತ ಸೂರ್ಯಾಸ್ತಮಾ ಹಗಲೋಡೆವೇ ರಾತ್ರಿಯ ಪ್ರಿಯ ಸಂಗಮ 
ನೋಡುವಂತ ಘಾಟವಿಂದು ತೀರದೇ ನಿಂತೇ ನಾನು ಕಂಗಳೆರಡೂ ಸಾಲದೇ 
 
ಕಡಿದಾದ ಹೊಂಗಾತ್ರೀ ಮೇಲೇರಿದೇ ಮಲಗಿರಿಯ ತೊಟ್ಟಿಲಲಿ ತೂಗಾಡಿದೇ ... 
ಮಲೆನಾಡ ಮೈದಿಲಿಗೇ ಮುಖ ದರ್ಪಣ ನೆಲದಲ್ಲಿ ಜನಸಂಧಿ ಈ ಸ್ಪರ್ಷಣ 
ವನದೇವಿ ನಗುವೆಲ್ಲ ಮುತ್ತಾಗಲು ವನಶಬ್ದೆ ಜಲಪಾತ ತಾ ಸಾಗಲೂ 
ಸುತ್ತಮುತ್ತ ಮುತ್ತು ಮಣಿ ಹಾರಿದೇ .. ಸ್ವರ್ಗದಂತ ನೋಟವನ್ನೇ ತೋರಿದೆ 
ಮುಂದೆ ಮುಂದೆ ಬಾಳ ಬಂಡಿ ಸಾಗಿದೆ ಹಿಂದೆ ಹಿಂದೆ ತಂದ ಗಾಳಿ ಓಡಿದೆ 
ಲೋಕವೆಲ್ಲ ಇಂದೂ ನನ್ನದಾಗಿದೇ .. ಶೋಕವೆಲ್ಲ ನನ್ನ ಬಿಟ್ಟೂ ಸಾಗಿದೇ 
ಮುಗಿಲಂತೆ ಮಲೆನಾಡಿನ ಮನವೆನ್ನ ತೇಲಾಡಿದೇ 
ಎಂದೆಂದೂ ವಯಸ್ಸಾಗದ ಗಿರಿಸಾಲು ಹಸಿರಾಗಿದೇ .. 
ಮುಂದೆ ಮುಂದೆ ಬಾಳ ಬಂಡಿ ಸಾಗಿದೆ ಹಿಂದೆ ಹಿಂದೆ ತಂದ ಗಾಳಿ ಓಡಿದೆ 
------------------------------------------------------------------------------------------

ಪಯಣಿಗ (೧೯೭೮) - ಪ್ರತಿ ಹಗಲಲಿ
ಸಂಗೀತ : ಪ್ರೇಮಚಂದ ಫ್ರಾನ್ಸಿಸ್ , ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ

ಪ್ರತಿ ಹಗಲಲಿ ಸೂರ್ಯನು ಯಾತ್ರಿಕನೂ ... ಪ್ರತಿ ರಾತ್ರಿಗೇ ಚಂದ್ರನು ಯಾತ್ರಿಕನೂ..
ಈ ಇಬ್ಬರ ಜೊತೆಗೂ ನಡೆವೇ ನಾ... ಈ ಲೋಕದಿ ಸಾಗುವ ಪಯಣಿಗನು 
ಪ್ರತಿ ಹಗಲಲಿ ಸೂರ್ಯನು ಯಾತ್ರಿಕನೂ ... 

ಎಂಟು ಗೇಣಿನ ಶೋಧಕಿಲ್ಲಿ.. ನೂರು ಬಗೆಯ ವೇದನೇ ... 
ನಾಲ್ಕು ದಿನದ ಬಾಳಿನಲಿ ನೂರೆಂಟು ಬಗೆಯ ಜೋಡಣೆ 
ಯಾರು ಇಲ್ಲಿ ಯಾರಿಗೋ... ಸೋಕಿ ತಿಳಿಯದೇ ... ನಾ... 
ಪ್ರತಿ ರಾತ್ರಿಗೇ ಚಂದ್ರನು ಯಾತ್ರಿಕನೂ..  ಪ್ರತಿ ಹಗಲಲಿ ಸೂರ್ಯನು ಯಾತ್ರಿಕನೂ ... 
ಈ ಇಬ್ಬರ ಜೊತೆಗೂ ನಡೆವೇ ನಾ... ಈ ಲೋಕದಿ ಸಾಗುವ ಪಯಣಿಗನು 
ಪ್ರತಿ ರಾತ್ರಿಗೇ ಚಂದ್ರನು ಯಾತ್ರಿಕನೂ.. 
 
ಅಂದು ಜಗದ ತೊಟ್ಟಿಲಲ್ಲಿ ಕಂದನಾಗಿ ಆಡಿದೇ 
ಇಂದು ಜಗದ ಬಾಷೆಯಲ್ಲಿ ಬಾಳಿನಾಸೆ ನಂದಿದೇ .. 
ಜಗದಿ ಪ್ರೀತಿಯೂ ಇಲ್ಲವೇ.. ಎಂದು ಹೇಳುವೇ ನಾ... 
ಪ್ರತಿ ರಾತ್ರಿಗೇ ಚಂದ್ರನು ಯಾತ್ರಿಕನೂ..  ಪ್ರತಿ ಹಗಲಲಿ ಸೂರ್ಯನು ಯಾತ್ರಿಕನೂ ... 
ಈ ಇಬ್ಬರ ಜೊತೆಗೂ ನಡೆವೇ ನಾ... ಈ ಲೋಕದಿ ಸಾಗುವ ಪಯಣಿಗನು 
ಪ್ರತಿ ರಾತ್ರಿಗೇ ಚಂದ್ರನು ಯಾತ್ರಿಕನೂ.. 
------------------------------------------------------------------------------------------

No comments:

Post a Comment