856. ಚಮಕ್ (೨೦೧೭)




ಚಮಕ್ ಚಲನಚಿತ್ರದ ಹಾಡುಗಳು 
  1. ಓ ಸಂಜೆಯ ಹೂವೆ ಬೆಳದಿಂಗಳಾಸೆ ಬಿಡು
  2. ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
  3. ಕೃಷ್ಟಪೂರ್ವ ದ್ವಾಪರ ಕಾಲಾ ಇದ್ದ ಒಬ್ಬ ಬೆಣ್ಣೆ ಚೋರಾ
  4. ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
  5. ಓ ಸಂಜೆಯ ಹೂವೆ ಬೆಳದಿಂಗಳಾಸೆ ಬಿಡು (ಧ್ವನಿ)
ಚಮಕ್ (೨೦೧೭) - ಓ ಸಂಜೆಯ ಹೂವೆ ಬೆಳದಿಂಗಳಾಸೆ ಬಿಡು
ಸಂಗೀತ : ಜೂಧ ಸಂಧಿ, ಸಾಹಿತ್ಯ : ವಿಶ್ವವಿಜಿತ, ಗಾಯನ : ಹರಿಚರಣ, ಪ್ರಿಯ ಹಿಮೇಶ್ 

ಓ ಸಂಜೆಯ ಹೂವೆ ಬೆಳದಿಂಗಳಾಸೆ ಬಿಡು
ನಾ ಹಚ್ಚಿದ ಹಣತೆ ನನ್ನುಸಿರೇ ಆರಿಸಿದೆ
ನಾ ಸಾಕಿದ ಮುನಿಸು ನನ್ನನ್ನೇ ಕೊಲ್ಲುತ್ತಿದೆ

ನಾ ತುಳಿದ ಪದಿಯೂ ವೈರುದ್ಯ ದಿಕ್ಕಲಿ ತಿರುಗಿವೆ
ಬಿರುಕು ..ಬಿರುಕಿದ ಶಿಲೆಗೂ ..
ಪೂಜೆಯ ಬಯಕೆಯು ಬಿರಿದಿದೆ
ಹನಿಯು ..ಮರದನಿಯು..ಕೊರಗುತಾ ಉದುರಿದೆ

ಹಚ್ಛೆಯದಾ ಹಣೆ ಬರಹಕೆ ಚುಚ್ಚಿದ ಶಾಯಿಯೂ ನಮ್ಮದೇ
ಒಲವ ಚಿತೆಯಾ ಹೊಗೆಯಲಿ ಘಮಿಸಿದೆ ಏಕಾಂತ
ಈ ಕಣ್ಣೀರ ಹನಿಗೆ ನನ್ನಿಂದಾ ಬೀಳ್ಕೊಡುಗೆ
ಈ ಎದೆಯ ಭಾರಾ ಆ ದುಃಖವಿನ್ನು ನಿರಂತರ
ನಾ ಹೊರಟ ತೀರಾ ಕಣ್ಣೀರ ನಿಲ್ದಾಣ
ಈ ಜೀವನ ಸಾರ  ಉಸಿರಾಟವೇ ದಾರುಣ
ಬರಹ ...ವಿಧಿ ಬರಹ.. ಏರು ಪೆರು ಬರೆದನು
ತರಹ..ತರ ತರಹ..
ದಿಕ್ಕಾಪಾಲು ಆದೆನು ಸಿಗದೆ ಹೋದರೆ ನೀನು
ಕಣ್ಣೊಳಗೆ ನೀರಾಗುವೆ ಬಚ್ಚಿಟ್ಟ ನನ್ನ ಕನಸಿಗೆ
ಕಪ್ಪು ಮಸಿಯಾ ಬಳಿಯುವೆ
------------------------------------------------------------------------------------------------------------------------

ಚಮಕ್ (೨೦೧೭) - ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
ಸಂಗೀತ : ಜೂಧ ಸಂಧಿ, ಸಾಹಿತ್ಯ : ಅರ್ಜುನ್ ಲೂಯಿಸ್ ಗಾಯನ : ಅಭಿನಂದನ್ ಮಹಿಶಾಲೆ,  ಸುಪ್ರಿಯಾ ಲೋಹಿತ್ 

ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
ಒಲವಿನ ಗಡಿಯಲಿ ನನ ಪಾಳಿ ಪ್ರೀತಿ ಚಟಾ
ಕಚಗುಳಿ ಇಡುತಿದೆ ಸಿಹಿ ಗಾಳಿ ಮನಸಿದು ಹೂದೋಟ
ಜನಿಸಿದೆ ಕನಸಲಿ ಕಿರುಚಾಳಿ ಪ್ರೀತಿ ಹಟಾ
ಕಂಗಳ ಈ ಸಂಜೆಗೆ ಒಲಿದಿದೆ ನಾಚಿಕೆ
ಮುಡಿದಿದೆ ಸಂಪಿಗೆ ಅರೆ ಅರೆ ಏನಿದು ಹೊಸ ದಾಳಿ
ನೀ ನನ್ನ ಒಲವು ನೀ ನನ್ನ ಗೆಲುವು
ನೀ ನನ್ನ ಅಲೆಯು ನೀ ನನ್ನ ಕಡಲು
ಅರೆ ಅರೆ ಏನಿದು ಹೊಸ ದಾಳಿ
ಎದೆಯಲಿ ಕಾದಾಟ ನುಸುಳಿದೆ ಒಲವಿನ ಗಡಿ ರೇಖೆ ಯಾಕಿ ಥರಾ
ನೀ ನನ್ನ ಒಲವು ನೀ ನನ್ನ ಗೆಲುವು 
ನೀ ನನ್ನ ಅಲೆಯು ನೀ ನನ್ನ ಕಡಲು
ಲಜ್ಜೆಯ ಭಾಷೆ ಗೆಜ್ಜೆಯ ಹಾಡು ಕರಗತ ಈಗ ನೀ
ಕವಿ ನಿನ್ನಿಂದ ಸಂಕೋಚ ಅತಿಯಾಗಿದೆ
ಹೂವಿನ ವಂಶ ಬಳ್ಳಿಯ ಅಂಶ
ನಡೆನಾಡಿ ನೀನು ನಾ ಮರೆತೆನು ಈ ದಾರಿ
ಅರೆ ಅರೆ ಏನಿದು ಹೊಸ ದಾಳಿ ಎದೆಯಲಿ ಕಾದಾಟ
ಒಲವಿನ ಗಡಿಯಲಿ ನನ ಪಾಳಿ ಪ್ರೀತಿ ಚಟಾ
ಕಚಗುಳಿ ಇಡುತಿದೆ ಸಿಹಿ ಗಾಳಿ
ಮನಸಿದು ಹೂದೋಟ
ಜನಿಸಿದೆ ಕನಸಲಿ ಕಿರುಚಾಳಿ
ನಿನ್ನೆಯಾ ಚಂದವು ಒಂಥರಾ ಸೆಳೆತವು
ಬೆಳೆದಿದೆ ಸಂಘವು
ಅರೆ ಅರೆ ಏನಿದು ಹೊಸ ದಾಳಿ
ನೀ ನನ್ನ ಒಲವು ಒಲವು
ನೀ ನನ್ನ ಗೆಲುವು ಗೆಲುವು
ನೀ ನನ್ನ ಅಲೆಯು ಅಲೆಯು
ನೀ ನನ್ನ ಕಡಲು ಕಡಲು
--------------------------------------------------------------------------------------------------------------------------

ಚಮಕ್ (೨೦೧೭) - ಕೃಷ್ಟಪೂರ್ವ ದ್ವಾಪರ ಕಾಲಾ ಇದ್ದ ಒಬ್ಬ ಬೆಣ್ಣೆ ಚೋರಾ
ಸಂಗೀತ : ಜೂಧ ಸಂಧಿ, ಸಾಹಿತ್ಯ :ವಿಶ್ವ ವಿಜೇತ  ಗಾಯನ : ಸಂಜಿತಾ ಹೆಗಡೆ, ದೀಕ್ಷಿತಾ ರಾಮಕೃಷ್ಣನ್   

ಕೃಷ್ಟಪೂರ್ವ ದ್ವಾಪರ ಕಾಲಾ ಇದ್ದ ಒಬ್ಬ ಬೆಣ್ಣೆ ಚೋರಾ
ಕೃಷ್ಟಶಕ ಈ ಕಲಿಗಾಲ ಇಲ್ಲೂ ಒಬ್ಬ ಮುದ್ದು ಪೂರಾ
ಮಿಂಚು ನೋಟಗಾರ ಪಂಚು ಮಾತುಗಾರ
ಸಂಚು ಮೋಡಿಗಾರ ಶೂರಾ ಸುಕುಮಾರ ಗೋಲ್ಡನ್ ಸ್ಟಾರು 
ಸಾಗರದಂಚಿನ ಬಿಸಿ ಮರಳ ಮುಟ್ಟೋಣಾ
ಎತ್ತರ ಶಿಖರವ ಏರಿ ತುತ್ತುದಿಯ ತಟ್ಟೋನಾ
ಒಂದೆಡೆ ಎಲ್ಲಿಯೂ ನಿಲ್ಲದೆ ಈ ಜಗವ ತಿರಿಗೋಣಾ
ಈ ಖುಷಿಯ ವೇಳೆ ಸಿಗೋದಿಲ್ಲ ನಾಳೆ
ಬೇಯಿಸು ನಿನ್ನ ಬೆಳೆ ಹಂಗೆ ಜಮಾಯಿಸು
ತಪ್ಪು ಮಾಡೋ ವಯಸ್ಸು ಬಿಟ್ಟ ಪದವ ತುಂಬಿಸು
ನಶೆ ಹಂಗೆ ಏರಿಸು ಚಿಂದಿ ಉಡಾಯಿಸು
ಕುಶ್ ಕುಶ್ ಇವ ಜಾದೂಗಾರ ಕುಶ್ ಕುಶ್ ಇವ ಮೋಜುಗಾರ
ಕುಶ್ ಕುಶ್ ಇವ ಹಾಡುಗಾರ  ಕುಶ್ ಕುಶ್ ಇವ ಚಿತ್ತ ಚೋರಾ
ಕುಶ್ ಕುಶ್ ಇವ ಜೋಕುಗಾರಾ ಕುಶ್ ಕುಶ್ ಇವ ಛಲಗಾರಾ

ಇವಳನೆ ನೋಡಲು ಸೂರ್ಯ ಬರುವಾ
ಇವಳಿಗಾಗಿಯೇ ಚಂದ್ರ ಕಾಯುವಾ
ಇವಳೇ ಸುತ್ತಲೆಂದು ತುಳುಸಿ ಕಾದಿದೆ
ಇವಳೇ ಬಿಡಿಸಲೆಂದು ರಂಗೋಲಿ ಬಯಸಿದೆ
ಮೂಗ ತುಂಬ ಲಜ್ಜೆ  ಕಟ್ಟು ತಾಳೆ ಗೆಜ್ಜೆ
ತಾಳ ತಕ್ಕ ಹೆಜ್ಜೆ ನಾಟ್ಯ ಮಯೂರಿ
ಕಳ್ಳ ನೋಟ ಚಂದ ಮಗು ಮಕರಂದ
ಧರೆಗಿಳಿದು ಬಂದ ಕನ್ಯಾ ಕುಮಾರಿ
ತುಸು ತಂಟೆಕೋರಾ ಪ್ರೀತಿ ತೋಟಗಾರಾ
ಹಂಚೋ ಸಾಹುಕಾರಾ ನಮ್ಮ ಸಾಲಗಾರ ಗೋಲ್ಡನ್ ಸ್ಟಾರು
ಕುಶ್ ಕುಶ್ ಇವ ಜಾದೂಗಾರ ಕುಶ್ ಕುಶ್ ಇವ ಮೋಜುಗಾರ
ಕುಶ್ ಕುಶ್ ಇವ ಹಾಡುಗಾರ  ಕುಶ್ ಕುಶ್ ಇವ ಚಿತ್ತ ಚೋರಾ 
ಕುಶ್ ಕುಶ್ ಇವ ಜೋಕುಗಾರಾ ಕುಶ್ ಕುಶ್ ಇವ ಛಲಗಾರ
-----------------------------------------------------------------------------------------------------------

ಚಮಕ್ (೨೦೧೭) - ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
ಸಂಗೀತ : ಜೂಧ ಸಂಧಿ, ಸಾಹಿತ್ಯ :ವಿಶ್ವ ವಿಜೇತ  ಗಾಯನ : ಚೇತನ್ ನಾಯಕ, ಇಶಾ ಸುಚ್ಚಿ  

ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ
ಕಟ್ಕೊಂಡ್ ಮೇಲೆ ಏನ್ ಮಾಡೋಣ ಕೊಡ್ತಾ ಇರು ಚಮಕ್ಕು
ಕಣ್ಣ ಮುಚ್ಚೆ ಕಾಡೆ ಗೂಡೆ ಪೊಗರಿನ ಮೂಟೆ ನಮ್ಮ ಚಿಟ್ಟೆ
ದಾರ ಕಟ್ಟಿ ಹಾರಲು ಬಿಟ್ಟು ಕೊಡ್ತಾ ಇರು ಚಮಕ್ಕು
(ಚಮಕ್ಕು ಚಮಕ್ಕು ಚಮಕ್ಕು)
ಗೇರ್ಗೇರ್ ಮಂಗನ ಇವ್ಳ್ ಸೊಕ್ಕ ಮುರ್ಯಣ 
ಮೂಲ್ಮೂಲೆ ಆಟನ ಆಡ್ತಿನಿ ನೋಡಣ್ಣ
ಒಂದು ಎರಡು ಇವ್ಳ್ ಮೇಕ್ ಅಪ್ ಹರಡು
ಮೂರು ನಾಲ್ಕು ಇವ್ಳ್ ಎತ್ತಿ ಬಿಸಾಕೋ
ಕಾಗೆ ಪುಕ್ಕ ಗುಬ್ಬಿ ಪುಕ್ಕ ಹೆಕ್ಕಿ ಹಾರು ನೀ ಹಾರು ನೀ
ಕೆಸ್ತುರ್ ರಸ್ತೇಲ್ ಪ್ರಸ್ತೂರ್ ಪಿಸ್ತೂಲ್  ಡೇಟ ಯಿಗೆ ಸಾಯು ನೀ, ಸಾಯು ನೀ
ರತ್ತೋ ರತ್ತೋ ರಾಯನ ಮಗನೆ ನೀನು ಈಗ ಲಾಸರ್ 
ಬಿತ್ತೋ ಬಿತ್ತೋ ಭೀಮ ಗೆಳೆಯನೆ ನಾನೆ ನಿನ್ನಹಂಟರ್ 
ಅಪ್ಪರ್ ರೋಲರ್ ಲೋವರ್ ರಪ್ ರೋಲರ್ ಎಳೆದು ತಳ್ಳುವೆ ತಳ್ಳುವೆ
ಕಚ್ಚ ಪಾಪಡ್ ಪಕ್ಕಾ ಪಾಪಡ್ ಮಾಡಿ ಮಾಡಿ ತಿನ್ನುವೆ
ಹೇ, ರಿಂಗ್ ಎ ರಿಂಗ್ ಏ ರೋಜ ಸಾಕು ಢಿಂಚಕ್ ಪೂಜ
ಹಂಪ್ಟಿ ಡಂಟೀ ನಾಯ್ಕಿ ಒದೆ ತಿನ್ನೋದ್ ಯಾಕ್ಹಂಗ್ಕೆಣಿಕಿ
ಅವಲಕ್ಕಿ ಬುವಲಕ್ಕಿ ಕಾಂಚನ ಮಿಣ ಮಿಣ 
ಕಟ್ಕೊಂಡ್ ಮೇಲೆ ಏನ್ ಮಾಡೋಣ ಕೊಡ್ತಾ ಇರು ಚಮಕ್ಕು 
ಕಣ್ಣ ಮುಚ್ಚೆ ಕಾಡೆ ಗೂಡೆ ಪೊಗರಿನ ಮೂಟೆ ನಮ್ಮ ಚಿಟ್ಟೆ
ದಾರ ಕಟ್ಟಿ ಹಾರಲು ಬಿಟ್ಟು ಕೊಡ್ತಾ ಇರು ಚಮಕ್ಕು
(ಚಮಕ್ಕು ಚಮಕ್ಕು ಚಮಕ್ಕು ಚಮಕ್ಕು ಚಮಕ್ಕು ಚಮಕ್ಕು ಚಮಕ್ಕು)
-------------------------------------------------------------------------------------------------------------------------

ಚಮಕ್ (೨೦೧೭) - ಓ ಸಂಜೆಯ ಹೂವೆ ಬೆಳದಿಂಗಳಾಸೆ ಬಿಡು
ಸಂಗೀತ : ಜೂಧ ಸಂಧಿ, ಸಾಹಿತ್ಯ :ವಿಶ್ವ ವಿಜೇತ  ಗಾಯನ : ನಾರಾಯಣ ಶರ್ಮ, ಸ್ಪರ್ಷ  

ಓ ಸಂಜೆಯ ಹೂವೆ ಬೆಳದಿಂಗಳಾಸೆ ಬಿಡು
ನಾ ಹಚ್ಚಿದ ಹಣತೆ ನನ್ನುಸಿರೆ ಆರಿಸಿದೆ
ನಾ ಸಾಕಿದ ಮುನಿಸು ನನ್ನನ್ನೇ ಆಳುತಿದೆ
ನಾವ್ ತುಳಿದ ಪದಿಯು ವೈರುಧ್ಯ ದಿಕ್ಕಲಿ ತಿರುಗಿವೆ
ಬಿರುಕು ಬಿರುಕಿದ ಶಿಲೆಗೂ ಪೂಜೆಯ ಬಯಕೆಯು ಬಿರಿದಿದೆ
ಹನಿಯು ಮರೆದನಿಯು ಕೊರಗುತ ಉದುರಿದೆ
ಹಚ್ಚೆಯಾದ ಹಣೆ ಬರಹಕೆ ಚುಚ್ಚಿದ ಶಾಹಿಯು ನಮ್ಮದೆ
ಒಲವ ಚಿತೆಯ ಹೊಗೆಯಲಿಘಮಿಸಿದೆ ಎಕಾಂತ
ಈ ಕಣ್ಣಿರ ಹನಿಗೆ ನನ್ನಿಂದ ಬೀಳ್ಕೊಡುಗೆ
ಈ ಎದೆಯ ಭಾರ ಆ ದುಃಖವಿನ್ನು ನಿರಂತರ
ನಾ ಹೊರಟ ತೀರ ಕಣ್ಣೀರ ನಿಲ್ದಾಣ
ನಾ ಬೇಡಿದ ವರವ ಕೈಯ್ಯಾರೆ ನಾನೇ ಕೊಂದೆನು
ಬರಹ ವಿಧಿ ಬರಹ ಏರು ಪೇರು ಬರೆದನು
ತರಹ ತರ ತರಹ ದಿಕ್ಕಾಪಾಲು ಆದೆನು
ಸಿಗದೆ ಹೋದರೆ ನೀನು ಕಣ್ಣೊಳಗೆ ನೀರಾಗುವೆ
ಬಿತ್ತ ನನ್ನ ಕನಸಿಗೆ ಕಪ್ಪು ಮಸಿಯ ಬಳಿಯುವೆ
------------------------------------------------------------------------------------------------------------------------

No comments:

Post a Comment