858. ನನ್ನ ತಮ್ಮ (೧೯೭೦)



ನನ್ನ ತಮ್ಮ ಚಿತ್ರದ ಹಾಡುಗಳು 
  1. ಬಾ ಬಾ ಬಾರೆ ಒಡನಾಡಿ 
  2. ಇದು ಐನಾತಿ ಬೆಂಗಳೂರು ಸೇಬು 
  3. ಕೃಷ್ಣ ಕೃಷ್ಣ 
  4. ಆ ಮುರಳಿ 
  5. ಇದೇ ಹೊಸ ಹಾಡು 
  6. ನೀ ನಗಲು ಹಗಲಲಿ 
  7. ನೀನೇ ನೀನೆಂದು ಕಾದಿರುವೆ ನಾ 
  8. ಇದೇಗೊ ಮಧಿರೇ 
ನನ್ನ ತಮ್ಮ (೧೯೭೦)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ ಗಾಯನ : ಪಿ.ಬಿ.ಶ್ರೀನಿವಾಸ 

ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು ಆ ಆ ಆ...
ಹೃದಯಾಶೆ ಭಾಷೆ ಈ ಹಾಡು....
ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು ಆ ಆ ಆ...
ಹೃದಯಾಶೆ ಭಾಷೆ ಈ ಹಾಡು....

ಮನದೆ ನೆನೆದ ಮಾತುಗಳೆಲ್ಲ ಮಧುವಾಗಿ ಸವಿಯುವ ಹಾಡು ...
ಸವಿಯಾದ ಜೀವನವೆಲ್ಲ ಹಾಯಾದ ಒಲವಿನ ಹಾಡು....
ಮನದೆ ನೆನೆದ ಮಾತುಗಳೆಲ್ಲ ಮಧುವಾಗಿ ಸವಿಯುವ ಹಾಡು ...
ಸವಿಯಾದ ಜೀವನವೆಲ್ಲ ಹಾಯಾದ ಒಲವಿನ ಹಾಡು....
ಒಲವು ಚೆಲುವು ಒಂದಾದ್ದೆಲ್ಲಾ
ಎಂದೂ ಯಾರೂ ಮರೆಯದ ಹಾಡು....
ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು  ಆ ಆ ಆ...
ಹೃದಯಾಶೆ ಭಾಷೆ ಈ ಹಾಡು....

ಚಂದ್ರ ಕಾಂತಿ ಚಿಮ್ಮಿದ ಹಾಡು ಮೈ ಮರೆತು ನಗಿಸೋ ಹಾಡು
ಮುಂಬಾಳ್ವೆಯ ಮುನ್ನಡೆ ಹಾಡು ತಾಯಿ ದೇವಿ ಹರಸಿದ ಹಾಡು
ಆಆಆ....ಆಆಆ...
ಚಂದ್ರ ಕಾಂತಿ ಚಿಮ್ಮಿದ ಹಾಡು ಮೈ ಮರೆತು ನಗಿಸೋ ಹಾಡು
ಮುಂಬಾಳ್ವೆಯ ಮುನ್ನಡೆ ಹಾಡು  ತಾಯಿ ದೇವಿ ಹರಸಿದ ಹಾಡು
ಜನ್ಮ ಜನ್ಮದ ಪುಣ್ಯದ ಹಾಡು ಕನ್ನಡಾಂಬೆ ಕಲಿಸಿದ ಹಾಡು....
ಇದೇ ಹೊಸ ಹಾಡು ಹೃದಯ ಸಾಕ್ಷಿ ಹಾಡು
ಹೃದಯಾಶೆ ಭಾಷೆ ಈ ಹಾಡು ಆ ಆ ಆ...
ಹೃದಯಾಶೆ ಭಾಷೆ ಈ ಹಾಡು... 
ಆ.... ಆಹಾ ಆಹಾ ಹಾ......ಓ..ಒಹೋ ಹೋ ಹೋ....
ಆ.... ಆಹಾ ಆಹಾ ಹಾ......ಓ..ಒಹೋ ಹೋ ಹೋ....
-----------------------------------------------------------------------------------------------------------------------

ನನ್ನ ತಮ್ಮ (೧೯೭೦)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ ಗಾಯನ : ಎಲ್.ಆರ್.ಈಶ್ವರಿ  

ಇದು ಐನಾತಿ ಆಹಾ.. ಬೆಂಗಳೂರು ಸೇಬೂ 
ಇದು ಐನಾತಿ ಬೆಂಗಳೂರು ಸೇಬೂ 
ಹಿಡಿದು ನೋಡ್ರಿ ರೂಬು ರೂಬು 


ಇದು ಐನಾತಿ ಬೆಂಗಳೂರು ಸೇಬೂ 
ಹಿಡಿದು ನೋಡ್ರಿ ರೂಬು ರೂಬು 

ಬಣ್ಣದ ಕಾಶ್ಮೀರಿ ಅಲ್ಲ ಬಣ್ಣವಿಲ್ಲ ಸಿಮ್ಲಾ ಅಲ್ಲ 
ಬಣ್ಣದ ಕಾಶ್ಮೀರಿ ಅಲ್ಲ ಬಣ್ಣವಿಲ್ಲ ಸಿಮ್ಲಾ ಅಲ್ಲ
ಚೆಂದುಳ್ಳಿ ಚೆಲುವಿಯಂಥಾ ಪಸಂದವಾದ ಒಂದೇ ಜಾತಿ 
ಚೆಂದುಳ್ಳಿ ಚೆಲುವಿಯಂಥಾ ಪಸಂದವಾದ ಒಂದೇ ಜಾತಿ 
ಕಚ್ಚಿ ತಿಂದ್ರೆ ತಿಳಿತೈತಿ ಸ್ವಚ್ಛವಾದ ಹಣ್ಣಿನ ಜಾತಿ 
ಇದು ಐನಾತಿ ಬೆಂಗಳೂರು ಸೇಬೂ
ಇದು ಐನಾತಿ ಬೆಂಗಳೂರು ಸೇಬೂ
ಹಿಡಿದು ನೋಡ್ರಿ ರೂಬು ರೂಬು

ಕೊಂಕಣದ ಹೆಣ್ಣಿನ ಹಾಗೆ ಕುಂಕುಮ ಕೇಸರಿ ಬಣ್ಣ 
ಕೊಂಕಣದ ಹೆಣ್ಣಿನ ಹಾಗೆ ಕುಂಕುಮ ಕೇಸರಿ ಬಣ್ಣ 
ಜಿಂಕೆ ಮೈ ಮುಟ್ಟಿದ ಹಾಗೆ ನುಣ್ಣಗಿದೆ ನೋಡ್ರಿ ನೋಡ್ರಿ 
ಜಿಂಕೆ ಮೈ ಮುಟ್ಟಿದ ಹಾಗೆ ನುಣ್ಣಗಿದೆ ನೋಡ್ರಿ ನೋಡ್ರಿ 
ತಿಂದು ನೋಡಿ ಮಜಾ ಐತೆ ಚಂದ್ರ ಸೀಬೆ ಹಣ್ಣಿನ ಜಾತಿ 
ಇದು ಐನಾತಿ ಬೆಂಗಳೂರು ಸೇಬೂ
ಇದು ಐನಾತಿ ಬೆಂಗಳೂರು ಸೇಬೂ
ಹಿಡಿದು ನೋಡ್ರಿ ರೂಬು ರೂಬು
ಹಿಡಿದು ನೋಡ್ರಿ ರೂಬು ರೂಬು
-----------------------------------------------------------------------------------------------------------------------

ನನ್ನ ತಮ್ಮ (೧೯೭೦)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ ಗಾಯನ : ಎಲ್.ಆರ್.ಈಶ್ವರಿ 

ಇದಿಗೊ ಮದಿರೆ ಇದಿಗೊ ಮದಿರೆ 
ನಾನು ನೀನು ಒಂದು 
ಮೋಹದ ಮದಿರೆ ನಮ್ಮ ಬಂಧು 
ಇದಿಗೊ ಮದಿರೆ ಇದಿಗೊ ಮದಿರೆ 

ಮದಿರೆ ಮನದಲ್ಲಿ ಏನೇನೋ ಆಸೆ ಇದೆ 
ಆಸೆಯಲ್ಲಾ ಅಮರವಾಗಿ 
ಬಾಳ್ವೆ ಹೊನ್ನಾಗಿ ಜೊನ್ನಾಗಿ ಜೇನಾಗಲಿ 
ಇದಿಗೊ ಮದಿರೆ ಇದಿಗೊ ಮದಿರೆ 

ಮದಿರೆ ಮಧುವಾಗಿ ಅನುರಾಗ ಸುಧೆಯಾಗಲಿ 
ಸುಧೆಯ ಸವಿದ ಹೃದಯದಲಿ 
ಪ್ರೇಮ ಕಳೆಯಾಗಿ ಅಲೆಯಾಗಿ ನೆಲೆಯಲಿ 
ಇದಿಗೊ ಮದಿರೆ ಇದಿಗೊ ಮದಿರೆ
-------------------------------------------------------------------------------------------------------------------------

ನನ್ನ ತಮ್ಮ (೧೯೭೦)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ ಗಾಯನ : ಪಿ.ಸುಶೀಲಾ 

ಕೃಷ್ಣಾ....  ಕೃಷ್ಣಾ...  ಕೃಷ್ಣಾ... 
ಆಶಾವಿತಾನೆ ಈ ಮೂಕವೀಣೆ ಕಾಪಾಡಲೆಂತೋ 
ನೀ ನೊಲ್ಲದೇ ನೀ ಒಲಿಯದೇ....    
ಆಶಾವಿತಾನೆ ಈ ಮೂಕವೀಣೆ ಕಾಪಾಡಲೆಂತೋ
ನೀ ನೊಲ್ಲದೇ ನೀ ಒಲಿಯದೇ....  

ಮನಸಾರ ಪಾಡುವ ಮಧುರಾಭಿಲಾಷೆ 
ಮನದೇನು ಮಾಯದ ಮಹಾ ನಿರಾಶೆ 
ಮನಸಾರ ಪಾಡುವ ಮಧುರಾಭಿಲಾಷೆ
ಮನದೇನು ಮಾಯದ ಮಹಾ ನಿರಾಶೆ
ಮನೆದೇವರಾಣೆ ಮನನೊಂದಿರುವೇ 
ಮನೆದೇವರಾಣೆ ಮನನೊಂದಿರುವೇ 
ಮಮತಾ ಮಯ ನೀ ಮನ ಕೊಡು ಸ್ವಾಮಿ 
ಆಶಾವಿತಾನೆ ಈ ಮೂಕವೀಣೆ ಕಾಪಾಡಲೆಂತೋ
ನೀ ನೊಲ್ಲದೇ ನೀ ಒಲಿಯದೇ....    

ಈ ರೀತಿ ವೇದನೇ ಈ ನೀತಿ ಶೋಧನೆ 
ಶೋಕಾನುರಾಗವೇ ಆರಾಧನೆ 
ಈ ರೀತಿ ವೇದನೇ ಈ ನೀತಿ ಶೋಧನೆ
ಶೋಕಾನುರಾಗವೇ ಆರಾಧನೆ
ಇನ್ನೇನು ಕಾಣಿಕೆ ತಂದಿಲ್ಲ ನಾನು
ಇನ್ನೇನು ಕಾಣಿಕೆ ತಂದಿಲ್ಲ ನಾನು 
ಕಣ್ಣೀರೇ ಪನ್ನೀರು ಅಭಿಷೇಕ ಸ್ವಾಮಿ 
ಆಶಾವಿತಾನೆ ಈ ಮೂಕವೀಣೆ ಕಾಪಾಡಲೆಂತೋ
ಈ ನೊಲ್ಲದೇ ನೀ ಒಲಿಯದೇ....    
ಕೃಷ್ಣಾ....  ಕೃಷ್ಣಾ...  ಕೃಷ್ಣಾ... 
--------------------------------------------------------------------------------------------------------------------------

ನನ್ನ ತಮ್ಮ (೧೯೭೦)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ ಗಾಯನ : ಪಿ.ಸುಶೀಲಾ, ಪಿ.ಬಿ.ಶ್ರೀನಿವಾಸ

ಗಂಡು : ನೀ ನಗಲು ಹಗಲಲ್ಲಿ ಮೂಡೋದು ಹೊಸ ಬೆಳ್ಳಿ
            ನೀ ಬರಲು ಇರುಳಲ್ಲಿ ಮೂಡುವನ ಚಂದ್ರಮ
            ಮಧುರ ಸಂಭ್ರಮ....ಮಧುರ ಸಂಭ್ರಮ....  

ಹೆಣ್ಣು : ನೀ ನಗಲು ಹಗಲಲ್ಲಿ ಮೂಡೋದು ಹೊಸ ಬೆಳ್ಳಿ  
           ನೀ ಬರಲು ಇರುಳಲ್ಲಿ ಮೂಡುವನ ಚಂದ್ರಮ 
          ಮಧುರ ಸಂಭ್ರಮ....ಮಧುರ ಸಂಭ್ರಮ....  

ಗಂಡು : ಬಳ್ಳಿ ಮೈ ಹೂವಿನಲ್ಲಿ ಅಂದ ಚಂದ ದಂತ ತಂದ
           ಬಳ್ಳಿ ಮೈ ಹೂವಿನಲ್ಲಿ ಅಂದ ಚಂದ ದಂತ ತಂದ
           ಜೋಡಿಯಲ್ಲ ನಿನ್ನಿಂದ ನಿನ್ನ ಚೆಲುವಿನಿಂದ 
ಹೆಣ್ಣು : ನೀ ನಗಲು ಹಗಲಲ್ಲಿ ಮೂಡೋದು ಹೊಸ ಬೆಳ್ಳಿ
           ನೀ ಬರಲು ಇರುಳಲ್ಲಿ ಮೂಡುವನ ಚಂದ್ರಮ
          ಮಧುರ ಸಂಭ್ರಮ....ಮಧುರ ಸಂಭ್ರಮ....  

ಹೆಣ್ಣು : ಮೇಘನಾದ ಮೋಡದಲ್ಲಿ ಏನೋ ನವ್ಯ ಭಾವ ತಂದ
          ಮೇಘನಾದ ಮೋಡದಲ್ಲಿ ಏನೋ ನವ್ಯ ಭಾವ ತಂದ
          ತುಂಬು ಗಾನ ನಿಲ್ಲು ನಿಂದ ನಿನ್ನ ಒಲವಿನಿಂದ



ಗಂಡು : ನೀ ನಗಲು ಹಗಲಲ್ಲಿ ಮೂಡೋದು ಹೊಸ ಬೆಳ್ಳಿ  
           ನೀ ಬರಲು ಇರುಳಲ್ಲಿ ಮೂಡುವನ ಚಂದ್ರಮ 
          ಮಧುರ ಸಂಭ್ರಮ....ಮಧುರ ಸಂಭ್ರಮ....  

ಗಂಡು : ಆನಂದ ನಾವೆ ಯಾನ
ಹೆಣ್ಣು : ಸಂಗೀತ ಸುಧೆಯಾನೇ ಮೌನ
ಗಂಡು : ಬಾಳೆಲ್ಲಾ ಗಂಧರ್ವ ಗಾನ
ಹೆಣ್ಣು : ಶೃಂಗಾರ ರಸ ಚೆಲ್ಲಿ ಜಾಣ
ಇಬ್ಬರು : ಇನ್ನಿಲ್ಲಾ ನಮ್ಮಿಸಮಾನ ಒಂದೊಂದು ಕ್ಷಣವೂ ಸುಮಾನಾ
             ಆಆಆ...ಓಓಓ... ಆಆಆ... ಓಓಓಓ... ಉಂ..ಉಂ ....
-------------------------------------------------------------------------------------------------------------------------

ನನ್ನ ತಮ್ಮ (೧೯೭೦)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ ಗಾಯನ : ಎಲ್.ಆರ್.ಈಶ್ವರಿ, ಪಿ.ಬಿ.ಶ್ರೀನಿವಾಸ
  
ಗಂಡು : ಬಾ ಬಾ ಬಾರೇ ಒಡನಾಡಿ (ಎಸ್ ಡಾರ್ಲಿಂಗ್ )
           ಮೈ ಲವ್ ಮೈ ಕಿಸ್ ಮೀ ಒಲಾಡಿ (ವಿಥ್ ಪ್ಲೆಷರ್ )
           ಸಾವಿರ ಕಣ್ಣಲಿ ತೇಲಾಡೋ ಬಾನಾಡಿ ಹೊಯ್
ಹೆಣ್ಣು : ಬಾ ಬಾ ಬಾರೋ ಬಲಶಾಲಿ (ಓ.. ಲವ್ಲೀ )
          ಆಯ್ ಲವ್ ಲವ್ ಯು ಟು ಕಸ್ತೂರಿ (ಹೇ..ಎಸ್ ಬ್ಯೂಟಿ)
          ಹೆಣ್ಣಿನ ಕಣ್ಣಲಿ ಹೂವಾಗು  ಕಾಪಾಡಿ ಹೋ..    
          ಬಾ ಬಾ ಬಾರೋ ಬಲಶಾಲಿ 

ಹೆಣ್ಣು : ಮಜಾ ಮೋಜಿನಲಿ ಓಲಾಡಿ ಸದಾ ಜೀವನದಿ ಒಡಗೂಡಿ  
          ಮಜಾ ಮೋಜಿನಲಿ ಓಲಾಡಿ ಸದಾ ಜೀವನದಿ ಒಡಗೂಡಿ
         ಬಾಳೋಣ ಬದುಕೋಣ ಬದುಕೇ ಮೋಜಿನ ಓ ಜಾಣ 
          ಬಾ ಬಾ ಬಾರೋ ಬಲಶಾಲಿ (ಓ.. ಲವ್ಲೀ )
          ಆಯ್ ಲವ್ ಲವ್ ಯು  ಕಸ್ತೂರಿ (ಹೇ..ಎಸ್ ಬ್ಯೂಟಿ)
          ಹೆಣ್ಣಿನ ಕಣ್ಣಲಿ ಹೂವಾಗು  ಕಾಮಾರಿ ಹೋ..    
          ಬಾ ಬಾ ಬಾರೋ ಬಲಶಾಲಿ 

ಗಂಡು: ಸದಾ ಮೋದಗಳ ಸಂಪನ್ನೆ (ಓ..) ಮಹಾ ರಸಿಕರತಿ  ಈ ಹೆಣ್ಣೇ   
           ಸದಾ ಮೋದಗಳ ಸಂಪನ್ನೆ (ಓ..) ಮಹಾ ರಸಿಕರತಿ  ಈ ಹೆಣ್ಣೇ   
           ಮರುಳಾದೆ  ಮನಸೋತೆ ನೀನೇ ಕಾಮನ ಹೂಮಾಲೆ 
           ಬಾ ಬಾ ಬಾರೇ ಒಡನಾಡಿ (ಎಸ್ ಡಾರ್ಲಿಂಗ್ )
           ಮೈ ಲವ್ ಮೈ ಕಿಸ್ ಮೀ ಒಲಾಡಿ (ವಿಥ್ ಪ್ಲೆಷರ್ )
           ಸಾವಿರ ಕಣ್ಣಲಿ ತೇಲಾಡೋ ಬಾನಾಡಿ ಹೊಯ್
ಹೆಣ್ಣು : ಬಾ ಬಾ ಬಾರೋ ಬಲಶಾಲಿ (ಓ.. ಲವ್ಲೀ )
          ಆಯ್ ಲವ್ ಲವ್ ಯು  ಕಸ್ತೂರಿ (ಹೇ..ಎಸ್ ಬ್ಯೂಟಿ)
          ಹೆಣ್ಣಿನ ಕಣ್ಣಲಿ ಹೂವಾಗು  ಕಾಮಾರಿ ಹೋ..    
          ಬಾ ಬಾ ಬಾರೋ ಬಲಶಾಲಿ
--------------------------------------------------------------------------------------------------------------------------
     
ನನ್ನ ತಮ್ಮ (೧೯೭೦)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ ಗಾಯನ : ಪಿ.ಸುಶೀಲಾ 

ಆ... ಮುರಳಿ ರಾಗರಸಧಾರೆ ಆನಂದ ಲೀಲೆ ರಾಧೇ  


ಆ... ಮುರಳಿ ರಾಗರಸಧಾರೆ ಆನಂದ ಲೀಲೆ ರಾಧೇ  


ಆ... ಮುರಳಿ ರಾಗದರಸಧಾರೆ 

ಮಧುಮಯ ಮಿಲನದ ವೇಳೆ ಹೃದಯದಾ ಉಯ್ಯಾಲೆ ಲೀಲೆ  
ಮಧುಮಯ ಮಿಲನದ ವೇಳೆ ಹೃದಯದಾ ಉಯ್ಯಾಲೆ ಲೀಲೆ  
ಪ್ರಣಯದ ಸದಾ ಸುಖಲೋಲೆ
ಪ್ರಣಯದ ಸದಾ ಸುಖಲೋಲೆ ರಾಧೇಶ್ಯಾಮನ ಹಾದಿ ಕಾದಳೆ
ರಾಧೇಶ್ಯಾಮನ ಹಾದಿ ಕಾದಳೆ  ರಾಗ ಹೂವು ತಾನದಳೆ
ಆ... ಮುರಳಿ ರಾಗರಸಧಾರೆ ಆನಂದ ಲೀಲೆ ರಾಧೇ  



ಆ... ಮುರಳಿ ರಾಗದರಸಧಾರೆ 

ನಗುತಿಹ ನವಸುಮ ಮಾಲೆ ಹಿಡಿದಿದೆ ಮಯೂರಿ  ಬಾಲೇ
ನಗುತಿಹ ನವಸುಮ ಮಾಲೆ ಹಿಡಿದಿದೆ ಮಯೂರಿ  ಬಾಲೇ
ವಿರಹದ ಇದೇ ಶುಭ ವೇಳೆ ಆಆಆ... ಆಆಆ... ಆಆಆ... 
ವಿರಹದ ಇದೇ ಶುಭ ವೇಳೆ  ರಾಜಿ ಮೋಹದಿ ಶೋಕ ಈಗಲೇ
ರಾಜಿ ಮೋಹದಿ ಶೋಕ ಈಗಲೇ ವೇಣುಗಾನ ಬಂತೇ ಭಲೇ
ಆ... ಮುರಳಿ ರಾಗರಸಧಾರೆ ಆನಂದ ಲೀಲೆ ರಾಧೇ  
ಆ... ಮುರಳಿ ರಾಗದರಸಧಾರೆ
ಆ... ಮುರಳಿ ರಾಗರಸಧಾರೆ ಆನಂದ ಲೀಲೆ ರಾಧೇ  
ಆ... ಮುರಳಿ ರಾಗ.. ಆ... ಮುರಳಿ ರಾಗ.. ಆ... ಮುರಳಿ ರಾಗ..
ಆ... ಮುರಳಿ ರಾಗದರಸಧಾರೆ 
--------------------------------------------------------------------------------------------------------------------------

ನನ್ನ ತಮ್ಮ (೧೯೭೦)


ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲ್ ಪ್ರಭಾಕರಶಾಸ್ತ್ರಿ ಗಾಯನ : ಪಿ.ಸುಶೀಲಾ 

ನೆನೆ ನೆನೆದು ಕಾದಿರುವೆ ನಾ ಸ್ವಾಮಿ ನೆನೆ ನೆನೆದು ಕಾದಿರುವೆ ನಾ 
ಲತೆಯಿಂದ ಮಾತಾಡಿ ಒಡನಾಡಿ ಕಾಡಿ ಮೆತ್ತಗೆ ನೀನೇ ಬರಲಾರೆಯಾ... 
ನೆನೆ ನೆನೆದು ಕಾದಿರುವೆ ನಾ

ಮೊದಲ ನೋಟದ ಕಣ್ಣಾ ಮೋಹದ ಆ ಚಂದಾ 
ಮನದ ಕನ್ನಡಿ ತುಂಬಾ ತುಂಬಿದೆ ಆನಂದ 
ಮೊದಲ ನೋಟದ ಕಣ್ಣಾ ಮೋಹದ ಆ ಚಂದಾ
ಮನದ ಕನ್ನಡಿ ತುಂಬಾ ತುಂಬಿದೆ  ಆನಂದ
ಮಮತೆಗೆ  ಮೊದಲಾದ ಸರಸಾಡುಗಾರ 
ಮಮತೆಗೆ  ಮೊದಲಾದ ಸರಸಾಡುಗಾರ 
ಮರೆಯದೇ ಮರೆಮಾಚದೇ ನನ್ನ ಮೈ ತುಂಬಿದೇ...  
ನೆನೆ ನೆನೆದು ಕಾದಿರುವೆ ನಾ

ಮನ ಮನ ಒಂದಾಗೋ ಮಧುಚಂದ್ರ ಯಾತ್ರೆಯ 
ಮೈಮನ ಹೂವಾಗೋ ರಸಪೂಜೆಗೆ ನಾ  
ಮನ ಮನ ಒಂದಾಗೋ ಮಧುಚಂದ್ರ ಯಾತ್ರೆಯ
ಮೈಮನ ಹೂವಾಗೋ ರಸಪೂಜೆಗೆ ನಾ 
ಒಲಿದೆ ಒಲ್ಲನದೇ ಓಲೈಸಿದೆ ನಾ..  ಆಆಆ.. .. .ಆಆಆ... ಆಆಆ... 
ಒಲಿದೆ ಒಲ್ಲನದೇ ಓಲೈಸಿದೆ ನಾ 
ಮನೆ ಸೇವೆಯೆನ್ನದೇ  ಮರೆತೆನೇ ನಾ.. ಮೈ ಮರೆತೆನೇ ನಾ..    
ನೆನೆ ನೆನೆದು ಕಾದಿರುವೆ ನಾ  ಲತೆಯಿಂದ ಮಾತಾಡಿ ಒಡನಾಡಿ ಕಾಡಿ
ಮೆತ್ತಗೆ ನೀನೇ ಬರಲಾರೆಯಾ... ನೆನೆ ನೆನೆದು ಕಾದಿರುವೆ
ನೆನೆ ನೆನೆದು ಕಾದಿರುವೆ, ನೆನೆ ನೆನೆದು ಕಾದಿರುವೆ
ನೆನೆ ನೆನೆದು ಕಾದಿರುವೆ ನಾ 
-------------------------------------------------------------------------------------------------------------------------















ada 

No comments:

Post a Comment