859. ರಾವಣ ರಾಜ್ಯ (೧೯೮೭)

ರಾವಣ ರಾಜ್ಯ ಚಲನಚಿತ್ರದ ಹಾಡುಗಳು 
  1. ತಂದೆ ನೀ ನೀಡು ಬಾ ಶಕ್ತಿ ಮನಸಿಗೆ 
  2. ತಂದೆ ನೀ ನೀಡು ಬಾ ಶಕ್ತಿ ಮನಸಿಗೆ (ದುಃಖ )
  3. ಮೇಲಿನಿಂದ ಬರಲೀ ನಿನ್ನ ದೇವರೇ 
  4. ಕನಸಲ್ಲೆವೂ ನನಸಾಯಿತು 
  5.  ತಂದೆ ನೀ ನೀಡು ಬಾ ಶಕ್ತಿ ಮನಸಿಗೆ 
ರಾವಣ ರಾಜ್ಯ (೧೯೮೭) - ತಂದೆ ನೀ ನೀಡು ಬಾ ಶಕ್ತಿ ಮನಸಿಗೆ 
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಚಿತ್ರಾ, ಮಂಜುಳಾ ಗುರುರಾಜ 

ತಂದೆ ನೀ ನೀಡು ಬಾ ಶಕ್ತಿ ಮನಸಿಗೆ ಜ್ಯೋತಿ ನೀನಾಗು ಬಾ ಬಾಳಾ ಇರುಳಿಗೆ 
ನಮ್ಮ ಅಜ್ಞಾನ ನೀ ನೀಗೂ ಬಾ  ಬಾಳಾ ಹಾದಿಗೆ ಗುರಿ ತೋರು ಬಾ
ನಮ್ಮ ಅಜ್ಞಾನ ನೀ ನೀಗೂ ಬಾ ಬಾಳಾ ಹಾದಿಗೆ ಗುರಿ ತೋರು ಬಾ 

ಪಾಪ ಹೆಚ್ಚಾಗಿ ಮೆರೆದಾಡುವಾಗ ಭೂಮಿ ಆ ಭಾರ ಹೊರಲಾರದಾಗ 
ರೋಷ ಮೈಯಲ್ಲಿ ಹೊರ ಹೊಮ್ಮಿದಾಗ ದ್ವೇಷ ಸೇಡಾಗಿ ಕಿಡಿಕಾರಿದಾಗ 
ತಾಳ್ಮೆ ಮರೆಯಾಯಿತು ರಕ್ತ ಹೊಳೆಯಾಯಿತು 
ನಮ್ಮ ಬಾಳಲ್ಲಿ ಇರುಳೆಂಬ ತೆರೆ ಮೂಡಿತು 
ತಂದೆ ನೀ ನೀಡು ಬಾ ಶಕ್ತಿ ಮನಸಿಗೆ 
ಸಾರೆ ಜಹಾಂ ಸೆ ಅಚ್ಚಾ ಹಿಂದುಸ್ತಾನ ಹಮಾರ್ ಸಾರೆ ಜಹಾಂ ಸೆ ಅಚ್ಚಾ

ಗೈದ ತಪ್ಪೆಲ್ಲಾ  ಅರಿವಾಯಿತೀಗ ನಿನ್ನ ಕ್ಷಮೆಗಾಗಿ ಮನ ಬೇಡಿತಿಗ 
ನಮ್ಮ ಕಣ್ಣೀರು ಬರೆದಂತ ಪಾಠ ಪರರ ಬಾಳಲ್ಲಿ ಬೆಳಕಾಗಿ ಇರಲಿ 
ನಿನ್ನೇ ಕಹಿಯೆಲ್ಲವೂ ಇಂದು ಮರೆಯಾಗಲಿ ಇನ್ನೂ ಅನ್ಯಾಯ ಜಗದಲ್ಲಿ ಕೊನೆಯಾಗಲಿ 
ತಂದೆ ನೀ ನೀಡು ಬಾ ಶಕ್ತಿ ಮನಸಿಗೆ ಜ್ಯೋತಿ ನೀನಾಗು ಬಾ ಬಾಳಾ ಇರುಳಿಗೆ
ನಮ್ಮ ಅಜ್ಞಾನ ನೀ ನೀಗೂ ಬಾ ಬಾಳಾ ಹಾದಿಗೆ ಗುರಿ ತೋರು ಬಾ
ನಮ್ಮ ಅಜ್ಞಾನ ನೀ ನೀಗೂ ಬಾ ಬಾಳಾ ಹಾದಿಗೆ ಗುರಿ ತೋರು ಬಾ 
ತಂದೆ ನೀ ನೀಡು ಬಾ ಶಕ್ತಿ......
--------------------------------------------------------------------------------------------------------------------------

ರಾವಣ ರಾಜ್ಯ (೧೯೮೭) - ತಂದೆ ನೀ ನೀಡು ಬಾ ಶಕ್ತಿ ಮನಸಿಗೆ (ದುಃಖ )
ಸಂಗೀತ : ವಿಜಯಾನಂದ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಚಿತ್ರಾ, ಮಂಜುಳಾ ಗುರುರಾಜ 

..... ... ... ... ... ...
ತಂದೆ ನೀ ನೀಡು ಬಾ ...ಶಕ್ತಿ ಮನಸ್ಸಿಗೆ...
ಜ್ಯೋತಿ ನೀನಾಗು ಬಾ...ಬಾಳ ಇರುಳಿಗೇ.
ನಮ್ಮ ಅಜ್ಞಾನ ನೀ ನೀಗು ಬಾ...ಬಾಳ ಹಾದೀಗೆ ಗುರಿ ತೋರು ಬಾ...
ನಮ್ಮ ಅಜ್ಞಾನ ನೀ ನೀಗು ಬಾ... ಬಾಳ ಹಾದೀಗೆ ಗುರಿ ತೋರು ಬಾ...
ತಂದೆ ನೀ ನೀಡು ಬಾ ... ಶಕ್ತಿ ಮನಸ್ಸಿಗೆ...

ಇಂದು ಮನುಷ್ಯತ್ವ ಮರೆಯಾಯಿತಲ್ಲಾ...
ಇಲ್ಲಿ ದಯೆಧರ್ಮ ಕಿಂಚಿತ್ತೂ ಇಲ್ಲ.
ನ್ಯಾಯ ಪರದೇಶಿ ತಾನಾಯಿತಲ್ಲಾ...
ಶೀಲ ಕ್ರೌರ್ಯಕ್ಕೆ ಬಲಿಯಾಯಿತಲ್ಲಾ.
ಜೀವ ಸಾಕಾಗಿದೆ ಸಾವು ಬೇಕಾಗಿದೆ
ದೇವ ನಿನಗಿಂದು ನಮ್ಮ ಮೊರೆ ಕೇಳದೇ.
ಜೀವ ಸಾಕಾಗಿದೆ ಸಾವು ಬೇಕಾಗಿದೆ
ದೇವ ನಿನಗಿಂದು ನಮ್ಮ ಮೊರೆ ಕೇಳದೇ.
ತಂದೆ ನೀ ನೀಡು ಬಾ ...ಶಕ್ತಿ ಮನಸ್ಸಿಗೆ...
--------------------------------------------------------------------------------------------------------------------------

ರಾವಣ ರಾಜ್ಯ (೧೯೮೭) - ಮೇಲಿನಿಂದ ಬರಲೀ ನಿನ್ನ ದೇವರೇ
ಸಂಗೀತ: ವಿಜಯಾನಂದ ಸಾಹಿತ್ಯ:ಆರ್.ಏನ್.ಜಯಗೋಪಾಲ್ ಗಾಯನ:ರಾಜಕುಮಾರ ಭಾರತಿ, ರಮೇಶ, ಕೃಷ್ಣ, ಮನು 

ಕೋರಸ್ : ಹೂರ್ ... ಹೇಯ್ ... ಲಲ್ಲಲಲಾ... ಲಲ್ಲಲಲಾ ಲಲ್ಲಲಲಾ 
ರಾಜ : ಮೇಲಿನಿಂದ ಬರಲೀ ನಿನ್ನ ದೇವರೇ     ಮನು : ಪ್ರಶ್ನೆ ಮೇಲೆ ಪ್ರಶ್ನೆ ಕೇಳುವೇ  
ಕೃಷ್ಣ : ಮೇಲಿನಿಂದ ಬರಲೀ ನಿನ್ನ ದೇವರೇ      ರಮೇಶ : ಪ್ರಶ್ನೆ ಮೇಲೆ ಪ್ರಶ್ನೆ ಕೇಳುವೇ  
ರಾಜ : ನಾನೆಂದೂ ಹೆದರೇನು                     ಮನು : ನಾನೆಂದೂ ಬೆದರೇನು 
ಎಲ್ಲರು : ಬಿಡಲಾರೇ ಅವನ ನ್ಯಾಯವನ್ನೂ ಹೇಳದೇ 
ಕೃಷ್ಣ : ನಾನೆಂದೂ ಹೆದರೇನು                      ರಮೇಶ : ನಾನೆಂದೂ ಬೆದರೇನು 
ಎಲ್ಲರು : ಬಿಡಲಾರೇ ಅವನ ನ್ಯಾಯವನ್ನೂ ಹೇಳದೇ 
             ಮೇಲಿನಿಂದ ಬರಲೀ ನಿನ್ನ ದೇವರೇ ... ಬರಲೀ ... ಬರಲೀ ... ಹೇ.. ಹೇ ... ಹೇ.. ಹೇಯ್ ... 

ರಾಜ : ಹಣವೂ ಇರುವ ಜನಕೇ ಗುಣವನ್ನೂ ನೀಡರೇ... 
ಮನು : ಗುಣವೂ ಇರುವ ಜನಕೇ ಹಣವನ್ನೂ ನೀಡದೇ ....
ಕೃಷ್ಣ : ಸ್ವಾರ್ಥವನ್ನೂ ತಂದೂ ಮನದಲ್ಲಿ ತುಂಬಿದೆ...
ರಮೇಶ : ಮೇಲೆ ನೂರೂ ಆಸೇ ನೀ ಮಾಯೆ ಸೇರಿದೇ ... 
ರಾಜ : ನೂರು ಜಾತಿ ನೂರು ಬಾಷೆ ಏಕೇ ಮಾಡಿದೇ
ಮನು : ನಮ್ಮ ಜಗಳದಲ್ಲಿ ಏನೋ ಲಾಭ ನೋಡಿದೇ ..
ಎಲ್ಲರು : ಸುಖ ಶಾಂತಿ ಇರದಂತೇ ನೀನೇಕೆ ಮಾಡಿ ಹಾಡಿದೇ.. ಹೇಯ್
            ಮೇಲಿನಿಂದ ಬರಲೀ ನಿನ್ನ ದೇವರೇ ... ಬರಲೀ ... ಬರಲೀ ... ಹೇ.. ಹೇ ... ಹೇ.. ಹೇಯ್ ... 

ರಾಜ : ಓದಬೇಕು ಎನ್ನಲೂ ಹಣ ಬೇಕೂ ಎನುವರೂ..
ಮನು : ಕೆಲಸ ಬೇಕೂ ಎನ್ನಲೂ ಹಣ ಎಲ್ಲೀ ಬಿಡುವರೂ
ಕೃಷ್ಣ :ಹಣವೂ ಇಲ್ಲದೇನೇ ಇಲ್ಲೇನೂ ನಡೆಯದೂ
ರಮೇಶ :ನ್ಯಾಯ ನೀತಿ ಎಲ್ಲ ಸುಡುಗಾಡೂ ಸೇರಿತೂ
ರಾಜ : ಉರಿವಾ ಜ್ವಾಲೇ ಆಗುವೇ
ಮನು : ರೋಷದಲ್ಲಿ ದ್ವೇಷವೆಂದೂ ಬೂದಿಯಾದರೇ
ಎಲ್ಲರು : ಓ.. ದೇವಾ ಹೇಳಯ್ಯಾ ಏನೂ ಮಾಡುವೇ ...
            ಓ.. ದೇವಾ ಹೇಳಯ್ಯಾ ಏನೂ ಮಾಡುವೇ ...
ರಾಜ : ಮೇಲಿನಿಂದ ಬರಲೀ ನಿನ್ನ ದೇವರೇ     ಮನು : ಪ್ರಶ್ನೆ ಮೇಲೆ ಪ್ರಶ್ನೆಯನ್ನು  ಕೇಳುವೇ  
ಕೃಷ್ಣ : ಮೇಲಿನಿಂದ ಬರಲೀ ನಿನ್ನ ದೇವರೇ      ರಮೇಶ : ಪ್ರಶ್ನೆ ಮೇಲೆ ಪ್ರಶ್ನೆಯನ್ನು  ಕೇಳುವೇ  
ರಾಜ : ನಾನೆಂದೂ ಹೆದರೇನು                     ಮನು : ನಾನೆಂದೂ ಬೆದರೇನು 
ಎಲ್ಲರು : ಬಿಡಲಾರೇ ಅವನ ನ್ಯಾಯವನ್ನೂ ಹೇಳದೇ 
ಕೃಷ್ಣ : ನಾನೆಂದೂ ಹೆದರೇನು                      ರಮೇಶ : ನಾನೆಂದೂ ಬೆದರೇನು 
ಎಲ್ಲರು : ಬಿಡಲಾರೇ ಅವನ ನ್ಯಾಯವನ್ನೂ ಹೇಳದೇ 
             ಮೇಲಿನಿಂದ ಬರಲೀ ನಿನ್ನ ದೇವರೇ ... ಬರಲೀ ... ಬರಲೀ ... ಹೇ.. ಹೇ ... ಹೇ.. ಹೇಯ್ ... 
--------------------------------------------------------------------------------------------------------------------------

ರಾವಣ ರಾಜ್ಯ (೧೯೮೭) - ತಂದೆ ನೀ ನೀಡು ಬಾ ಶಕ್ತಿ ಮನಸಿಗೆ 
ಸಂಗೀತ: ವಿಜಯಾನಂದ ಸಾಹಿತ್ಯ: ಆರ್.ಏನ್.ಜಯಗೋಪಾಲ, ಗಾಯನ:ರಾಜಕುಮಾರಭಾರತಿ, ಕೃಷ್ಣ, ಚಂದ್ರಶೇಖರ 

ಎಲ್ಲರು : ತಂದೆ ನೀ ನೀಡು ಬಾ ಶಕ್ತಿ ಮನಸಿಗೆ ಜ್ಯೋತಿ ನೀನಾಗು ಬಾ ಬಾಳಾ ಇರುಳಿಗೆ 
            ನಮ್ಮ ಅಜ್ಞಾನ ನೀ ನೀಗೂ ಬಾ  ಬಾಳಾ ಹಾದಿಗೆ ಗುರಿ ತೋರು ಬಾ
            ನಮ್ಮ ಅಜ್ಞಾನ ನೀ ನೀಗೂ ಬಾ ಬಾಳಾ ಹಾದಿಗೆ ಗುರಿ ತೋರು ಬಾ 

ಎಲ್ಲರು : ಪಾಪ ಹೆಚ್ಚಾಗಿ ಮೆರೆದಾಡುವಾಗ ಭೂಮಿ ಆ ಭಾರ ಹೊರಲಾರದಾಗ 
            ರೋಷ ಮೈಯಲ್ಲಿ ಹೊರ ಹೊಮ್ಮಿದಾಗ ದ್ವೇಷ ಸೇಡಾಗಿ ಕಿಡಿಕಾರಿದಾಗ 
            ತಾಳ್ಮೆ ಮರೆಯಾಯಿತು ರಕ್ತ ಹೊಳೆಯಾಯಿತು ನಮ್ಮ ಬಾಳಲ್ಲಿ ಇರುಳೆಂಬ ತೆರೆ ಮೂಡಿತು 
            ತಂದೆ ನೀ ನೀಡು ಬಾ ಶಕ್ತಿ ಮನಸಿಗೆ 

ಕೋರಸ್ : ಆಆಆಅ ಆಆಆಅ ಆಆಆಅ ಆಆಆಅ ಆಆಆಅ ಆಆಆಅ ಆಆಆಅ
ಎಲ್ಲರು : ಗೈದ ತಪ್ಪೆಲ್ಲಾ  ಅರಿವಾಯಿತೀಗ ನಿನ್ನ ಕ್ಷಮೆಗಾಗಿ ಮನ ಬೇಡಿತಿಗ 
           ನಮ್ಮ ಕಣ್ಣೀರು ಬರೆದಂತ ಪಾಠ ಪರರ ಬಾಳಲ್ಲಿ ಬೆಳಕಾಗಿ ಇರಲಿ 
           ನಿನ್ನೇ ಕಹಿಯೆಲ್ಲವೂ ಇಂದು ಮರೆಯಾಗಲಿ ಇನ್ನೂ ಅನ್ಯಾಯ ಜಗದಲ್ಲಿ ಕೊನೆಯಾಗಲಿ 
           ತಂದೆ ನೀ ನೀಡು ಬಾ ಶಕ್ತಿ ಮನಸಿಗೆ ಜ್ಯೋತಿ ನೀನಾಗು ಬಾ ಬಾಳಾ ಇರುಳಿಗೆ
           ನಮ್ಮ ಅಜ್ಞಾನ ನೀ ನೀಗೂ ಬಾ ಬಾಳಾ ಹಾದಿಗೆ ಗುರಿ ತೋರು ಬಾ
           ನಮ್ಮ ಅಜ್ಞಾನ ನೀ ನೀಗೂ ಬಾ ಬಾಳಾ ಹಾದಿಗೆ ಗುರಿ ತೋರು ಬಾ 
           ತಂದೆ ನೀ ನೀಡು ಬಾ ಶಕ್ತಿ......
--------------------------------------------------------------------------------------------------------------------------

ರಾವಣ ರಾಜ್ಯ (೧೯೮೭) - ಕನಸೆಲ್ಲವೂ ನನಸಾಯಿತು  ಶ್ರಮದಿಂದ ದುಡಿದಾಗ ಅರಿವಾಯಿತು
ಸಂಗೀತ: ವಿಜಯಾನಂದ ಸಾಹಿತ್ಯ:ಆರ್.ಏನ್.ಜಯಗೋಪಾಲ್ ಗಾಯನ:ರಾಜಕುಮಾರ ಭಾರತಿ, ರಮೇಶ, ಕೃಷ್ಣ, ಮನು 

ರಾಜ : ಕನಸೆಲ್ಲವೂ ನನಸಾಯಿತು   ರಮೇಶ : ಶ್ರಮದಿಂದ ದುಡಿದಾಗ ಅರಿವಾಯಿತು
ಕೃಷ್ಣ : ಕನಸೆಲ್ಲವೂ ನನಸಾಯಿತು   ಮನು: ಶ್ರಮದಿಂದ ದುಡಿದಾಗ ಅರಿವಾಯಿತು
ರಾಜ : ಸೋಲೂ ಎಂಬುವುದಿಲ್ಲಾ    ರಮೇಶ : ಗೆಲುವೂ ಎಂಬುದೂ ಇಲ್ಲಾ
ಎಲ್ಲರೂ : ಬಾಳಲ್ಲಿ ನಮಗಿಂದೂ ಚಿಂತೇ ಎಂಬುದಿಲ್ಲಾ ..
              ಕನಸೆಲ್ಲವೂ ನನಸಾಯಿತು  ಶ್ರಮದಿಂದ ದುಡಿದಾಗ ಅರಿವಾಯಿತು

ರಾಜ : ಆಕ್ರೋಶ ನಮಗಿಲ್ಲ ಯಾರಲ್ಲಿಯೂ...
ರಮೇಶ : ಹೊಡೆದಾಟ ಬೇಕಿಲ್ಲಾ ಕನಸಲ್ಲಿಯೂ
ಕೃಷ್ಣ : ಹೊಸ ದಾರಿ ನಾವೀಗ ಕಂಡಾಗಿದೇ ...
ಮನು : ಹೊಸ ರೀತಿ ಬಾಳೋಕೆ ನಮಗಾಗಿದೇ
ಎಲ್ಲರು : ಸುಖ ಶಾಂತಿ ಆಸೇ ನಮದಾಗಿದೆ ನಿಜವಾದ ಪ್ರೇಮಾ ಎದೆ ತುಂಬಿದೆ
            ಮನ ಬಾನಾಡಿಯಂತಾಗಿ ಹಾರಾಡಿದೇ...
ರಾಜ : ಕನಸೆಲ್ಲವೂ ನನಸಾಯಿತು   ರಮೇಶ : ಶ್ರಮದಿಂದ ದುಡಿದಾಗ ಅರಿವಾಯಿತು

ರಾಜ : ನಮಗೊಂದು ಬಾಳಲ್ಲಿ ಗುರಿ ತೋರಿದೇ
ಮನು : ಬದುಕೆಂದರೇನೆಂದೂ ನಿಜ ಹೇಳಿದೇ
ರಮೇಶ : ಇರುಳಲ್ಲಿ ಬೆಳಕನ್ನೂ ನೀ ತುಂಬಿದೇ
ಕೃಷ್ಣ : ಒಡಹುಟ್ಟಿದವಳಂತೇ ಹಾರೈಸಿದೇ
ಎಲ್ಲರೂ : ಈ ಪ್ರೇಮಗೆಂದೂ ಶಿರ ಬಾಗಲೀ ನಿನ್ನ ಬಾಳು ತಂಗಿ ಸಿರಿಯಾಗಲೀ
              ಈ ನಗುವೆಂದೂ ಬಾಳಲ್ಲಿ ಹೂವಾಗಲೀ
              ಕನಸೆಲ್ಲವೂ ನನಸಾಯಿತು ಶ್ರಮದಿಂದ ದುಡಿದಾಗ ಅರಿವಾಯಿತು
              ಕನಸೆಲ್ಲವೂ ನನಸಾಯಿತು ಶ್ರಮದಿಂದ ದುಡಿದಾಗ ಅರಿವಾಯಿತು
             ಸೋಲೂ ಎಂಬುವುದಿಲ್ಲಾ ಗೆಲುವೂ ಎಂಬುದೂ ಇಲ್ಲಾ
             ಬಾಳಲ್ಲಿ ನಮಗಿಂದೂ ಚಿಂತೇ ಎಂಬುದಿಲ್ಲಾ ..
             ಕನಸೆಲ್ಲವೂ ನನಸಾಯಿತು  ಶ್ರಮದಿಂದ ದುಡಿದಾಗ ಅರಿವಾಯಿತು
--------------------------------------------------------------------------------------------------------------------------

No comments:

Post a Comment