ಶರವೇಗದ ಸರದಾರ ಚಲನಚಿತ್ರದ ಹಾಡುಗಳು
- ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ
- ಯುಗ ಯುಗದ ಬೆಳಕಾಗಿ
- ಅತ್ತ ಇತ್ತ ಸುತ್ತ ಮುತ್ತ
- ಅನುರಾಗವೇ ಹೂವಾಗಿದೇ
- ಶರವೇಗದ ಸರದಾರ
ಶರವೇಗದ ಸರದಾರ (೧೯೮೯) - ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್ಪಿ.ಬಿ.
ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ ನಾಡನು ಕಟ್ಟಿದ ಕಥೆಯನ್ನ

ಒಂದಾನೊಂದು ಕಾಲದಲ್ಲಿ ಮಲೆನಾಡಿನ ಮಡಿಲಿನಲಿ ಅಂಗಡಿ ಊರಿತ್ತು ಊರಿಗೆ ಚೆಲುವಿನ ಕಳೆಯಿತ್ತು
ಬೆಟ್ಟ ಗುಡ್ಡ ಸಾಲಿನಲ್ಲಿ ಹಸಿರಾಗಿರುವ ಬೀಡಿನಲಿ ಬನಸಿರಿ ಮರೆದಿತ್ತು ಅಲ್ಲಿ ಶಾಂತಿ ನೆಲೆಸಿತ್ತು
ಪ್ರಕೃತಿಯೇ ಹೆಣ್ಣಾಗಿ, ಮನುಜಗೆ ಕಣ್ಣಾಗಿ, ಧರ್ಮವೇ ಮನೆಯಾಗಿ ಮೌನವೇ ಮಾತಾಗಿ,
ಅಕ್ಕರೆ ತುಂಬಿದ ಅಂಗಡಿ ಗ್ರಾಮದ ಆಶ್ರಮವೊಂದಿತ್ತು, ಅದರೊಳು ಗುರುಕುಲ ನಡೆದಿತ್ತು
ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ ನಾಡನು ಕಟ್ಟಿದ ಕಥೆಯನ್ನ
ವೃಕ್ಷರಾಶಿ ನೆರಳಿನಲಿ ಸುದತ್ತಾಚಾರ್ಯರ ಸನ್ನಿಧಿಯಲ್ಲಿ ಪ್ರವಚನ ಸಾಗಿತ್ತು, ಧರ್ಮದ ಪ್ರವಚನ ಸಾಗಿತ್ತು
ವಾಸಂತಿಕೆಯ ದೇಗುಲದಲ್ಲಿ ಶೃದ್ಧೆ ಭಕ್ತಿಯ ಸಂಗಮದಲ್ಲಿ ಪೂಜೆಯ ನಡೆದಿತ್ತು ಸಳನ ಪೂಜೆಯು ನಡೆದಿತ್ತು
ಒಮ್ಮೆಗೆ ಅಬ್ಬರದ ಸದ್ದೊಂದು ಕೇಳಿಸಲು ಅಲ್ಲಿದ್ದ ಜನರೆಲ್ಲಾ ಅಲ್ಲೋಲ ಕಲ್ಲೋಲ
ಹೊಂಬಿಸಿಲೇರುವ ಸುಂದರ ಸಮಯದಿ ಬಂದಿತು ಹುಲಿಯೊಂದು, ಗರ್ಜಿಸಿ ಗುಡುಗಿತು ಹುಲಿಯೊಂದು
ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ ನಾಡನು ಕಟ್ಟಿದ ಕಥೆಯನ್ನ
ಸುದತ್ತಾಚಾರ್ಯರು ಕಂಚಿನ ಕಂಠದಿ ಸಳನನು ಕೂಗಿ ಕರೆದರು ಆಗ
ಆಜ್ಞೆಯೂ ಮೊಳಗಿತ್ತು, ಗುರುಗಳ ಆಜ್ಞೆ ಮೊಳಗಿತ್ತು
ವೀರಾವೇಶದ ಶೌರ್ಯದಲ್ಲಿ ಶಿಷ್ಯನು ಸೆಣಸಿದ ರೋಷದಲಿ ಹುಲಿಯು ಕೆರಳಿತ್ತು ಹಸಿದಿಹ ಹುಲಿಯು ಕೆರಳಿತ್ತು..
ಹೊಯ್... ಸಳ ಹೊಯ್... ಸಳ ಹೊಯ್... ಸಳ ಹೊಯ್... ಸಳ ಹೊಯ್... ಸಳ ಹೊಯ್... ಸಳ
ಆಗ ಸಳ ಒರಟಾಗಿ, ಗಂಡುಗಲಿ ತಾನಾಗಿ, ಧೈರ್ಯದಿ ಹೋರಾಡಿ, ಗೆದ್ದನು ಮುಂದಾಗಿ
ಊರಿನ ವೀರನ ಮೆಚ್ಚುತಾ ಜನತೆ ಸಳನನು ಹರಿಸಿತ್ತು ಕೆಚ್ಚದೆ ಸಳನನು ಹರಿಸಿತ್ತು
ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ ನಾಡನು ಕಟ್ಟಿದ ಕಥೆಯನ್ನ
ಹುಲಿಯನು ಕೊಂದ ವೀರನನ್ನು, ಗುರುಗಳು ಆಗ ಹರಿಸಿರಲು
ಕಟ್ಟಿದ ಸಳನು ರಾಜ್ಯವನ್ನು ಅನುಪಮ ಹೊಯ್ಸಳ ರಾಜ್ಯವನ್ನು
ಹುಲಿಯನು ಕೊಲ್ಲುವ ಲಾಂಛನ ಹಿಡಿದು ಗದ್ದುಗೆ ಏರಿ ಆಳ್ವಿಕೆ ಮೆರೆದು
ಚರಿತ್ರೆ ಮೊದಲಾಯ್ತು, ಹೊಯ್ಸಳ ಚರಿತ್ರೆ ಮೊದಲಾಯ್ತು
ಸಾಹಿತ್ಯ ತೇರಾಗಿ, ಶಿಲ್ಪಕಲೆ ನೂರಾಗಿ, ಸಂಗೀತ ಹೊನಲಾಗಿ, ಸಂಸ್ಕೃತಿ ತೌರಾಗಿ
ವೈಭವ ಸಾರುವ ಹೊಯ್ಸಳ ವಂಶ ನಾಡನು ಬೆಳಗಿತ್ತು, ಕನ್ನಡ ನಾಡನು ಬೆಳಗಿತ್ತು
ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ ನಾಡನು ಕಟ್ಟಿದ ಕಥೆಯನ್ನ
ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ ನಾ ಹೇಳೋ ಕಥೆಯನ್ನ
ಹೆಮ್ಮೆಯ ಪಡೆದ ಹೊಯ್ಸಳ ವಂಶ ಹುಟ್ಟಿದ ಕಥೆಯನ್ನ ನಾಡನು ಕಟ್ಟಿದ ಕಥೆಯನ್ನ
-------------------------------------------------------------------------------------------------------------------------
ಶರವೇಗದ ಸರದಾರ (೧೯೮೯) - ಯುಗ ಯುಗದ ಬೆಳಕಾಗಿ
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್ಪಿ.ಬಿ.
ಯುಗ ಯುಗದ ಬೆಳಕಾಗಿ ಈ ಜಗಕೆ ಬಂದವನೇ (ಆಆಆಆ)
ಕತ್ತಲೆಯ ಬಸಿದವನೇ ಬಗೆ ಬಗೆದೂ ನಿಂತವನೇ (ಆಆಆಆ)
ದುಷ್ಟರರೇ ಮೆರೆವಾಗ ಸಂಹಾರ ಮಾಡಿದವನೇ ಶಕ್ತಿ ಕೋಡೋ .. ಓಓಓಓಓ ನೀನೂ ನನ್ನ ಮೈಯೊಳಗೇ
ಯುಗ ಯುಗದ ಬೆಳಕಾಗಿ ಈ ಜಗಕೆ ಬಂದವನೇ (ಆಆಆಆ)
ಕತ್ತಲೆಯ ಬಸಿದವನೇ ಬಗೆ ಬಗೆದೂ ನಿಂತವನೇ (ಆಆಆಆ)
(ಆಆಆಆ ಆಆಆಆ ಆಆಆ ಆಆಆಆಆ ತಕಧಿಮ್ ತಕಧಿಮ್ ತಕಿಟತ )
ಪ್ರೀತಿ ಸ್ನೇಹ ಮರೆಮಾಚಿದವರೂ ತೀರ ಸ್ವಾರ್ಥ ಭಿತ್ತೀ ಬೆಳೆವಾಗ
(ತಕಿಟ ಧೀರನ ತಕಿಟ ಧೀರನ ತಕಜನು ಧೀಮ್ ತಕಿಟ ಧೀಮ್ ತಕಜನುತಾಂ )
ಕರುಣೆ ಮಮತೆ ಇರದಂತ ಜನರೂ ಹೊಟ್ಟೆಕಿಚ್ಚೂ ಹಚ್ಚಿ ಕುಣಿವಾಗ
ನೀನೇಕೆ ಶಿಲೆಯಾದೇ .. ನೀನೇಕೆ ಶಿಲೆಯಾದೇ ..
ಮೋಸದ ಮಂದಿಯ ವೇಷವ ಕಳಚಲು (ತಕಿಟ ಧೀರನ್ ತಕಿಟ ಧೀರನ್ ತಕಧಿಮಿ)
ಖೂಳರ ದೇಹವ ಸೀಳುತ ಇರಿಯಲೂ (ಧೀಮ್ ತಕಿಟ ಧಿಮ ತಕಜನುತಾಂ )
ಸರಿಸರಿಗಮಗಮ ಪದಪದ ಶಕ್ತಿ ಕೊಡೋ ... ಓಓಓಓಓ ಏನೋ ನನ್ನ ಮೈಯೋಳಗೇ .. (ಆಆಆಆ)
ಯುಗ ಯುಗದ ಬೆಳಕಾಗಿ ಈ ಜಗಕೆ ಬಂದವನೇ (ಆಆಆಆ)
ಕತ್ತಲೆಯ ಬಸಿದವನೇ ಬಗೆ ಬಗೆದೂ ನಿಂತವನೇ (ಆಆಆಆ)
(ಆಆಆಆ ಆಆಆಆ ಆಆಆಆ )
ಪಪಪಪ ದದ ಪಪಪಪ ಪಪಪಪ ದದ ಪಪಪಪ
ಹೆತ್ತತಾಯಿ ಮತಿ ಭ್ರಮಣೆಯಲ್ಲಿ ಅರಿಹುಚ್ಚಿನಲ್ಲಿ ನಗುವಾಗ
(ತಕಿಟ ಧೀರನ ತಕಿಟ ಧೀರನ ತಕಜನು ಧೀಮ್ ತಕಿಟ ಧೀಮ್ ತಕಜನುತಾಂ )
ದುಷ್ಟ ಶಕ್ತಿ ಅತೀ ಯುಕ್ತಿಯಲ್ಲಿ ಒಳಸಂಚೂ ಮಾಡಿ ಸಿಡಿವಾಗ
ಹೀಗೇಕೇ .. ಮೂಕಾದೇ.. ಹೀಗೇಕೇ .. ಮೂಕಾದೇ..
ದ್ವೇಷದ ಜ್ವಾಲೆಯ ನಾಶವ ಮಾಡಲೂ (ತಕಿಟ ಧೀರನ ತಕಿಟ ಧೀರನ ತಕಧೀಮೀ )
ಭೀಷಣ ಭಂಡರ ಬಾವಿಗೇ ಹಾಕಲೂ (ಧೀಮ್ ತಕಿಟ ಧೀಮಿ ತಕಜನುತಾಂ)
ತನುಮನಕೆ ಧೈರ್ಯ ಕೋಡೋ ಗಡಗಡಕೆ ಶೌರ್ಯ ಕೋಡೋ (ಆಆಆಆ)
ಜೀವಜೀವದಲೀ ಭಾವಭಾವದಲೀ ಬಾಳದಾರಿಯಲೀ ಹೆಜ್ಜೇ ಹೆಜ್ಜೆಯಲೀ
ಜೀವಜೀವದಲೀ ಭಾವಭಾವದಲೀ ಬಾಳದಾರಿಯಲೀ ಹೆಜ್ಜೇ ಹೆಜ್ಜೆಯಲೀ
ಚಿನ್ನಧಿಕಾರದೇ ಮಂಚದೇ ಅಳುಕದೇ ಗೋಮುಖ ವ್ಯಾಘ್ರರ ಧ್ವಂಸಕೇ ಶಕ್ತಿ ಕೋಡೋ ..
ಓಓಓಓಓಓಓ ಓಓಓಓಓಓಓ ಆಆಆಆಅ ಆಆಆ ಓಓಓಓ ಹೇಹೇಹೇಹೇಹೇ
ಯುಗ ಯುಗದ ಬೆಳಕಾಗಿ ಈ ಜಗಕೆ ಬಂದವನೇ (ಆಆಆಆ)
ಕತ್ತಲೆಯ ಬಸಿದವನೇ ಬಗೆ ಬಗೆದೂ ನಿಂತವನೇ (ಆಆಆಆ)
ದುರ್ಜನರೇ ಮೆರೆವಾಗ ಸಂಹಾರ ಮಾಡಿದವನೇ ಶಕ್ತಿ ಕೋಡೋ .. ಓಓಓಓಓ ನೀನೂ ನನ್ನ ಮೈಯೊಳಗೇ
(ಆಆಆಆ) (ಆಆಆಆ) (ಆಆಆಆ) (ಆಆಆಆ) (ಆಆಆಆ) (ಆಆಆಆ)
-------------------------------------------------------------------------------------------------------------
ಶರವೇಗದ ಸರದಾರ (೧೯೮೯) - ಅತ್ತ ಇತ್ತ ಸುತ್ತ ಮುತ್ತ
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್ಪಿ.ಬಿ. ಚಿತ್ರಾ
ಹೆಣ್ಣು : ಅತ್ತ ಇತ್ತ ಸುತ್ತ ಮುತ್ತ ನೆತ್ತಿಯ ಮೇಲೆ ತೂಗುವ ಕತ್ತಿ ತೂಗುತ್ತಿವೇ .. ತೂಗುತ್ತಿವೇ ..
ಕಾಣದ ಜಾಲ ಹಾಕಿದ ಗಾಳ ಎಚ್ಚರವಾಗೋ.. ಎಚ್ಚರವಾಗೋ..
ಕೋರಸ್ : ಜಾಲ.. ಜಾಲ.. ಜಾಲಜಾಲ.. ಜಾಲ ಜಾಲ.. ಜಾಲ....
ಗಂಡು : ಅತ್ತ ಇತ್ತ ಸುತ್ತ ಮುತ್ತ ಕಣ್ಣಿನ ಮೇಲೆ ಕಣ್ಣನ ನಿಟ್ಟೂ ಕಾಯುತ್ತಿರುವೇ .. ಕಾಯುತ್ತಿರುವೇ ..
ಯಾರೇ ಬರಲೀ ಏನೇ ಬರಲೀ ಮುಂದೇ ನಡೆವೇ.. ಮುಂದೇ ನಡೆವೇ
ಕೋರಸ್ : ಜಾಲ.. ಜಾಲ.. ಜಾಲಜಾಲ.. ಜಾಲ ಜಾಲ.. ಜಾಲ....
ಗಂಡು : ಎಲ್ಲೀ ...
ಗಂಡು : ಬಲ್ಲೇ ಬಲ್ಲೇ ಎಲ್ಲಾ ಬಲ್ಲೇ ಉಕ್ಕಿನ ಕೋಟೆ ಒಡೆಯಲೂ ಬಲ್ಲೇ ..
ಸಾಗರದಾಳ ಈಜಲೂ ಬಲ್ಲೇ .. ಇಂದ್ರ ಧನಸ್ಸೂ ಮುರಿಯಲೂ ಬಲ್ಲೇ .. ಧೈರ್ಯದಿಂದ ಗೆಲ್ಲಬಲ್ಲೇ
ಕೋರಸ್ : ಜಾಲ.. ಜಾಲ.. ಜಾಲಜಾಲ.. ಜಾಲ ಜಾಲ.. ಜಾಲ....
ಗಂಡು : ಎಲ್ಲೀ ... ಹ್ಹಾ..
ಹೆಣ್ಣು : ಅತ್ತ ಇತ್ತ ಸುತ್ತ ಮುತ್ತ ನೆತ್ತಿಯ ಮೇಲೆ ತೂಗುವ ಕತ್ತಿ ತೂಗುತ್ತಿವೇ .. ತೂಗುತ್ತಿವೇ ..
ಕಾಣದ ಜಾಲ ಹಾಕಿದ ಗಾಳ ಎಚ್ಚರವಾಗೋ.. ಎಚ್ಚರವಾಗೋ..
ಕೋರಸ್ : ಜಾಲ.. ಜಾಲ.. ಜಾಲಜಾಲ.. ಜಾಲ ಜಾಲ.. ಜಾಲ....
ಗಂಡು : ಬಲ್ಲೇ ಬಲ್ಲೇ ಎಲ್ಲಾ ಬಲ್ಲೇ ಬೆಂಕಿಯ ಬೆಟ್ಟ ಏರಿ ಹೋಗಿ ಹಾವಿನ ಹೆಡೆಯಾ ಮೆಟ್ಟಿ ನಿಂತೂ
ಸಾವಿನ ದವಡೆ ದಾಟಿ ಬಂದೂ ಶೌರ್ಯದಿಂದ ಗೆಲ್ಲಬಲ್ಲೇ ..
ಕೋರಸ್ : ಜಾಲ.. ಜಾಲ.. ಜಾಲಜಾಲ.. ಜಾಲ ಜಾಲ.. ಜಾಲ....
ಗಂಡು : ಎಲ್ಲೀ ...
ಹೆಣ್ಣು : ಅತ್ತ ಇತ್ತ ಸುತ್ತ ಮುತ್ತ ನೆತ್ತಿಯ ಮೇಲೆ ತೂಗುವ ಕತ್ತಿ ತೂಗುತ್ತಿವೇ .. ತೂಗುತ್ತಿವೇ ..
ಕಾಣದ ಜಾಲ ಹಾಕಿದ ಗಾಳ ಎಚ್ಚರವಾಗೋ.. ಎಚ್ಚರವಾಗೋ..
ಕೋರಸ್ : ಜಾಲ.. ಜಾಲ.. ಜಾಲಜಾಲ.. ಜಾಲ ಜಾಲ.. ಜಾಲ....
-------------------------------------------------------------------------------------------------------------
ಶರವೇಗದ ಸರದಾರ (೧೯೮೯) - ಅನುರಾಗವೇ ಹೂವಾಗಿದೇ
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್ಪಿ.ಬಿ. ಕೆ.ಎಸ್.ಚಿತ್ರಾ
ಗಂಡು : ಅನುರಾಗವೇ ಹೂವಾಗಿದೇ ಮನದಾಸೆಯೇ ಮಾತಾಡಿದೇ
ಹೆಣ್ಣು : ಅನುರಾಗವೇ ಹೂವಾಗಿದೇ ಮನದಾಸೆಯೇ ಮಾತಾಡಿದೇ
ಗಂಡು : ಈ ಬಾಳೆಲ್ಲವೂ ಬಂಗಾರದ ಹೊಳೆಯಾಗಿದೆ
ಸಂಗಾತಿಯಾ ಸ್ನೇಹ ಪ್ರೀತಿ ಕಂಡೂ
ಹೆಣ್ಣು : ಹೊಸ ಲೋಕ ನೋಡಿದೇ .. ಹೊಸ ಗೀತೆ ಹಾಡಿದೇ
ಅನುರಾಗವೇ ಹೂವಾಗಿದೇ ಮನದಾಸೆಯೇ ಮಾತಾಡಿದೇ
ಗಂಡು : ನಿನ್ನಂದ ಚೆಂದ ಕಣ್ಣ ತುಂಬೀ ನಾನಿಂದೂ ಶೃಂಗಾರ ಬೆಳ್ಳಕ್ಕಿ ಕಂಡೇ .. ಹೋಯ್
ಹೆಣ್ಣು : ನಾ ನಿನ್ನ ಪ್ರೇಮಿ ಹಕ್ಕಿಯಾಗಿ ನಿನ್ನಲ್ಲಿ ರೋಮಾಂಚ ಪಲ್ಲಕ್ಕಿ ಕಂಡೇ ..
ಗಂಡು : ಯೌವ್ವನದ..
ಹೆಣ್ಣು : ಸಿರಿಯ ಸುಖದ ಸಿಹಿಯ ಕವಿದೂ
ಗಂಡು : ಆವೇಶ ಏನೋ ಸಂತೋಷ
ಹೆಣ್ಣು : ಆವೇಶ ಏನೋ ಸಂತೋಷ
ಗಂಡು : ಅನುರಾಗವೇ ಹೂವಾಗಿದೇ ಮನದಾಸೆಯೇ ಮಾತಾಡಿದೇ
ಹೆಣ್ಣು : ಅನುರಾಗವೇ ಹೂವಾಗಿದೇ ಮನದಾಸೆಯೇ ಮಾತಾಡಿದೇ
ಹೆಣ್ಣು : ಕಡಲನ್ನೂ ನದಿಯೂ ಕೂಡುವಂತೇ ನಾನಿನ್ನ ಬೆರೆತಾಗ ಆನಂದ ಕಂಡೇ ..
ಗಂಡು: ಹೂವನ್ನೂ ದುಂಬಿ ಸೇರುವಂತೇ .. ನೀನನ್ನ ಒಲಿದಾಗ ಸಂಬಂಧ ಕಂಡೇ ..
ಹೆಣ್ಣು : ಮೈತುಂಬಿದಾ...
ಗಂಡು : ಚೆಲುವ ಗೆಲುವಾ ಒಲವ ಪಡೆದೂ
ಹೆಣ್ಣು : ಉಲ್ಲಾಸ ಏನೋ ಉತ್ಸಾಹ
ಗಂಡು :ಉಲ್ಲಾಸ ಏನೋ ಉತ್ಸಾಹ
ಗಂಡು : ಅನುರಾಗವೇ ಹೂವಾಗಿದೇ ಮನದಾಸೆಯೇ ಮಾತಾಡಿದೇ
ಹೆಣ್ಣು : ಈ ಬಾಳೆಲ್ಲವೂ ಬಂಗಾರದ ಹೊಳೆಯಾಗಿದೆ
ಸಂಗಾತಿಯಾ ಸ್ನೇಹ ಪ್ರೀತಿ ಕಂಡೂ
ಗಂಡು : ಹೊಸ ಲೋಕ ನೋಡಿದೇ ..
ಹೆಣ್ಣು : ಹೊಸ ಗೀತೆ ಹಾಡಿದೇ ಹೊಸ ಲೋಕ ನೋಡಿದೇ
ಗಂಡು : ಹೊಸ ಗೀತೆ ಹಾಡಿದೇ
------------------------------------------------------------------------------------------------------------
ಶರವೇಗದ ಸರದಾರ (೧೯೮೯) - ಶರವೇಗದ ಸರದಾರ
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್ಪಿ.ಬಿ. ಕೋರಸ್
ಕೋರಸ್ : ಶರವೇಗ ಸರದಾರ (ಶರವೇಗ ಸರದಾರ ) ಶರವೇಗ ಸರದಾರ ಸರದಾರ
ಗಂಡು : ಕೋಟೆ ಕಟ್ಟಿ ಮೆರೆದಾ ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ ಈ ದುಷ್ಟಕೂಟ ಮೆಟ್ಟಿ ನಡೆವೇ
ಬೆಂಕೀ ಮಳೆ ಬೀಳಲೀ ಸಿಡಿಲೇ ಕಡಲಾಗಲೀ ಗೆಲ್ಲುವಾ ಶೌರ್ಯ ನನಗಿದೇ
ನನ್ನಾ ಇರಿದವರಾ ಕನ್ನ ಕೊರೆದವರಾ.. ಬೇಟೆ ಆಡುವೇ..
ಕೋಟೆ ಕಟ್ಟಿ ಮೆರೆದಾ ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ ಈ ದುಷ್ಟಕೂಟ ಮೆಟ್ಟಿ ನಡೆವೇ
ಎಲ್ಲರು : ಶರವೇಗದ ಸರದಾರ.. ಶರವೇಗದ ಸರದಾರ.. ಪೆಡಂಭೂದ ಶೂರ ದಿಗಂದಿದ ಧೀರ
ಗಂಡು : ಅಕ್ಕರೆಯ ತಾಯೀ ಸಂಪ್ರೀತಿ ತಂದೆ ವಾತ್ಸಲ್ಯ ಕೂಗಿ
ಓಡೋಡಿ ಬಂದೇ ಹೋರಾಟ ಕಂಡೇ ನೋವಲ್ಲಿ ಸಾಗೀರಿ
ಸಂಗಾತಿ ಸ್ನೇಹ ಕರೆದೂ.. ಎಂಕಾಂಗಿಯಾಗಿ ಉಳಿದೂ ವಿಷವನ್ನೇ ನುಂಗಿ ನಗುವೇ..
ಕೋಟೆ ಕಟ್ಟಿ ಮೆರೆದಾ ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ ಈ ದುಷ್ಟಕೂಟ ಮೆಟ್ಟಿ ನಡೆವೇ
ಗಂಡು : ಹೂವಂತ ಪ್ರೇಮೀ ಹಾವಾಗಿ ಕಂಡೂ ನಂಬಿಕೆ ಒಡೆದು
ಹೊರಗಡೆ ನಗುವಾ ಒಳಗಡೆ ಸುಡುವಾ ಮನುಜರಾ ಸೆಳೆದು
ಸಂಬಂಧ ಸೆಲೆಯಾ ಹುಡುಕೀ.. ರೌಡಿಯ ನೆಲೆಯಾ ತದೂಕಿ ವಿಷವ್ಯೂಹ ಬಗೆದೂ ಮೇರೆವೇ
ಕೋಟೆ ಕಟ್ಟಿ ಮೆರೆದಾ ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ ಈ ದುಷ್ಟಕೂಟ ಮೆಟ್ಟಿ ನಡೆವೇ
ಬೆಂಕೀ ಮಳೆ ಬೀಳಲೀ ಸಿಡಿಲೇ ಕಡಲಾಗಲೀ ಗೆಲ್ಲುವಾ ಶೌರ್ಯ ನನಗಿದೇ
ನನ್ನಾ ಇರಿದವರಾ ಕನ್ನ ಕೊರೆದವರಾ.. ಬೇಟೆ ಆಡುವೇ..
------------------------------------------------------------------------------------------------------------
ಶರವೇಗದ ಸರದಾರ (೧೯೮೯) - ಆಸೆಯೂ ಕಾಡಿದೆ
ಸಂಗೀತ : ಸಂಗೀತ ರಾಜ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಅನುರಾಧ
ಆ.. ಆಸೆಯೂ ಕಾಡಿದೆ ಆ.. . ಕಾಮನೇ ಕೂಗಿದೇ
ಋತುರಾಜ ಬಂದು ಕಂಪೂ ತಾರೋ ಬಳಿ ಬಾರೋ ಹೊಸ ಸ್ನೇಹತೋರೋ ಪ್ರೀಯಾ ..
ಆ.. ಆಸೆಯೂ ಕಾಡಿದೆ ಆ.. . ಕಾಮನೇ ಕೂಗಿದೇ
ಕಣ್ಣಿನಲೀ ಸ್ವಾಗತ ಮೃದು ಕಣ್ಣೂ ಹೋ ಹುಣ್ಣಿಮೆಯಾ ಕಾಡಿದ ಕೃಪಾಕರದೂ
ಈ
No comments:
Post a Comment